ಭಾನುವಾರ, ಫೆಬ್ರವರಿ 14, 2021

ಹರ್ಭಜನ್ ದಾಖಲೆ ಮುರಿದ ಅಶ್ವಿನ್, ಮುಂದಿನ ಟಾರ್ಗೆಟ್ ಅನಿಲ್ ಕುಂಬ್ಳೆ!

ಹರ್ಭಜನ್ ದಾಖಲೆ ಮುರಿದ ಅಶ್ವಿನ್, ಮುಂದಿನ ಟಾರ್ಗೆಟ್ ಅನಿಲ್ ಕುಂಬ್ಳೆ!

ಚೆನ್ನೈ: ಅನುಭವಿ ಆಫ್‌ ಸ್ಪಿನ್ನರ್‌ ರವಿಚಂದ್ರನ್‌ ಅಶ್ವಿನ್‌ ಅಮೋಘ ಲಯದಲ್ಲಿದ್ದು, ಭಾರತೀಯ ಪಿಚ್‌ಗಳಲ್ಲಿ ಅತಿ ಹೆಚ್ಚು ವಿಕೆಟ್‌ ಪಡೆದ ಬೌಲರ್‌ಗಳ ಪಟ್ಟಿಯಲ್ಲಿ ಟರ್ಬನೇಟರ್‌ ಹರ್ಭಜನ್‌ ಸಿಂಗ್‌ ಅವರಿಗೆ ಸಡ್ಡು ಹೊಡೆದು ಎರಡನೇ ಅತ್ಯಂತ ಯಶಸ್ವಿ ಬೌಲರ್‌ ಎನಿಸಿಕೊಂಡಿದ್ದಾರೆ. 

ಇಲ್ಲಿನ ಎಂ.ಎ ಚಿದಂಬರಂ ಕ್ರೀಡಾಂಗಣದಲ್ಲಿ ನಡೆಯುತ್ತಿರುವ ನಾಲ್ಕು ಪಂದ್ಯಗಳ ಸರಣಿಯ ಎರಡನೇ ಟೆಸ್ಟ್‌ನ ಮೊದಲ ಇನಿಂಗ್ಸ್‌ನಲ್ಲಿ ಆರ್‌ ಅಶ್ವಿನ್‌ 23.5 ಓವರ್‌ಗಳನ್ನು ಎಸೆದು 43ಕ್ಕೆ 5 ವಿಕೆಟ್‌ ಪಡೆದರು. ಇದು ಇನಿಂಗ್ಸ್‌ ಒಂದರಲ್ಲಿ ಅಶ್ವಿನ್‌ ಐದು ವಿಕೆಟ್‌ ಪಡೆದ ಸಾಧನೆ ಮಾಡಿರುವುದು 29ನೇ ಬಾರಿ ಆಗಿದೆ. 

ಇದೇ ವೇಳೆ ಅಶ್ವಿನ್‌ ಭಾರತೀಯ ಪಿಚ್‌ಗಳಲ್ಲಿ ಅತಿ ಹೆಚ್ಚು ವಿಕೆಟ್‌ ಪಡೆದ ಬೌಲರ್‌ಗಳ ಪಟ್ಟಿಯಲ್ಲಿ ಹರ್ಭಜನ್ ಸಿಂಗ್‌ ಅವರ ದಾಖಲೆಯನ್ನು ಮುರಿದಿದ್ದಾರೆ. ಇಂಗ್ಲೆಂಡ್‌ ತಂಡದ ಆಲ್‌ರೌಂಡರ್‌ ಬೆನ್‌ ಸ್ಟೋಕ್ಸ್‌ ಅವರನ್ನು ಕ್ಲೀನ್‌ ಬೌಲ್ಡ್‌ ಮಾಡುವ ಮೂಲಕ ಅಶ್ವಿನ್‌ ಭಾರತೀಯ ಪಿಚ್‌ಗಳಲ್ಲಿ ಒಟ್ಟು 266* ವಿಕೆಟ್‌ಗಳನ್ನು ಪಡೆದ ಸಾಧನೆ ಮಾಡಿ ಬಜ್ಜಿಗೆ ಸಡ್ಡು ಹೊಡೆದರು. 

ಆಸೀಸ್‌ ವಿರುದ್ಧದ ಟಿ20 ಸರಣಿಗೆ 13 ಆಟಗಾರರ ಬಲಿಷ್ಠ ತಂಡ ಪ್ರಕಟಿಸಿದ ಕಿವೀಸ್! 

ಈ ಪಟ್ಟಿಯಲ್ಲಿ 265 ವಿಕೆಟ್‌ಗಳನ್ನು ಪಡೆದಿರುವ ಹರ್ಭಜನ್ ಸಿಂಗ್‌ ಈಗ ಮೂರನೇ ಸ್ಥಾನಕ್ಕೆ ಜಾರಿದ್ದಾರೆ. ಅಶ್ವಿನ್ ದ್ವಿತೀಯ ಸ್ಥಾನಕ್ಕೇರಿದ್ದು, ಮಾಜಿ ದಿಗ್ಗಜ ಬೌಲರ್‌ ಲೆಗ್ ಸ್ಪಿನ್ನರ್‌ ಹರ್ಭಜನ್‌ ಸಿಂಗ್‌ 24.88ರ ಸರಾಸರಿಯಲ್ಲಿ 350 ವಿಕೆಟ್‌ಗಳನ್ನು ಪಡೆದ ಸಾಧನೆ ಮಾಡಿದ್ದಾರೆ. 

ಟೆಸ್ಟ್ ಕ್ರಿಕೆಟ್‌ನಲ್ಲಿ ಭಾರತದ ಪರ ಅತಿ ಹೆಚ್ಚು ವಿಕೆಟ್‌ಗಳನ್ನು ಪಡೆದ ದಾಖಲೆಯೂ ಅನಿಲ್ ಕುಂಬ್ಳೆ ಅವರ ಹೆಸರಲ್ಲಿದೆ. ಈ ಪಟ್ಟಿಯಲ್ಲಿ ಜಂಬೋ ಖ್ಯಾತಿಯ ಭಾರತ ತಂಡದ ಮಾಜಿ ನಾಯಕ ಕುಂಬ್ಳೆ 619 ವಿಕೆಟ್‌ಗಳನ್ನು ಪಡೆದು ಅಗ್ರಸ್ಥಾನದಲ್ಲಿದ್ದಾರೆ. ಮಾಜಿ ಆಲ್‌ರೌಂಡರ್‌ ಕಪಿಲ್‌ ದೇವ್‌ 434 ವಿಕೆಟ್‌ಗಳೊಂದಿಗೆ ಎರಡನೇ ಸ್ಥಾನದಲ್ಲಿದ್ದಾರೆ. 

ಅಶ್ವಿನ್ ಸ್ಪಿನ್‌ ಮೋಡಿ, ದ್ವಿತೀಯ ಟೆಸ್ಟ್‌ನಲ್ಲಿ ಟೀಮ್‌ ಇಂಡಿಯಾಗೆ ಬೃಹತ್ ಮುನ್ನಡೆ! 

ಹರ್ಭಜನ್ ಸಿಂಗ್‌ ಮೂರನೇ ಸ್ಥಾನದಲ್ಲಿದ್ದು 417 ವಿಕೆಟ್‌ಗಳನ್ನು ಪಡೆದಿದ್ದಾರೆ. ಅಶ್ವಿನ್‌ ಈ ಪಟ್ಟಿಯಲ್ಲಿ ನಾಲ್ಕನೇ ಸ್ಥಾನದಲ್ಲಿದ್ದು 391* ವಿಕೆಟ್‌ಗಳನ್ನು ಪಡೆದಿದ್ದಾರೆ. ಇಂಗ್ಲೆಂಡ್‌ ವಿರುದ್ಧದ ಟೆಸ್ಟ್‌ ಸರಣಿಯಲ್ಲಿ ಅಶ್ವಿನ್ 400 ವಿಕೆಟ್‌ಗಳ ಗಡಿ ದಾಟುವ ಸಾಧ್ಯತೆ ದಟ್ಟವಾಗಿದೆ

ಕಾಮೆಂಟ್‌ಗಳಿಲ್ಲ:

ಕಾಮೆಂಟ್‌‌ ಪೋಸ್ಟ್‌ ಮಾಡಿ