ಮಂಗಳವಾರ, ಜೂನ್ 27, 2017

ರಾಜ್ಯ ಚಲನಚಿತ್ರ ಪ್ರಶಸ್ತಿ-2016 ಸಾಲಿನದು

ಅಮರಾವತಿ' ಅತ್ಯುತ್ತಮ ಚಿತ್ರ, ಅಚ್ಯುತ್ ಕುಮಾರ್, ಶೃತಿ ಹರಿಹರನ್ ಅತ್ಯುತ್ತಮ ನಟ-ನಟಿ

ಬೆಂಗಳೂರು: 2016ನೇ ಸಾಲಿನ ರಾಜ್ಯ ಚಲನಚಿತ್ರ ಪ್ರಶಸ್ತಿ ಮಂಗಳವಾರ ಪ್ರಕಟವಾಗಿದ್ದು, ಕನ್ನಡದ ಅಮರಾವತಿ ಪ್ರಥಮ ಅತ್ಯುತ್ತಮ ಚಿತ್ರ, ರೈಲ್ವೆ ಚಿಲ್ಡ್ರನ್ ಎರಡನೇ ಅತ್ಯುತ್ತಮ ಚಿತ್ರ, ಅಂತರ್ಜಲ 3ನೇ ಅತ್ಯುತ್ತಮ ಚಿತ್ರ ಪ್ರಶಸ್ತಿಗೆ ಭಾಜನವಾಗಿದೆ.

ಇಂದು ಬೆಂಗಳೂರಿನಲ್ಲಿ ನಡೆದ ಸುದ್ದಿಗೋಷ್ಠಿಯಲ್ಲಿ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ರಾಜ್ಯ ಚಲನಚಿತ್ರ ಪ್ರಶಸ್ತಿ ಪ್ರಕಟಿಸಿದ್ದು, ಡಾ.ರಾಜ್ ಕುಮಾರ್ ಅವರ ಜನ್ಮ ದಿನವಾದ ಏಪ್ರಿಲ್ 24ರಂದು ಪ್ರಶಸ್ತಿ ಪ್ರದಾನ ಸಮಾರಂಭ ನಡೆಯಲಿದೆ. ಅಚ್ಯುತ್ ಕುಮಾರ್ ಅವರು ಅಮರಾವತಿ ಚಿತ್ರದಲ್ಲಿನ ಅಭಿನಯಕ್ಕಾಗಿ ಅತ್ಯುತ್ತಮ ನಟ ಪ್ರಶಸ್ತಿ ಹಾಗೂ ಶ್ರುತಿ ಹರಿಹರನ್ ಅವರು ಬ್ಯೂಟಿಫುಲ್ ಮನಸುಗಳು ಚಿತ್ರದಲ್ಲಿನ ಅಭಿನಯಕ್ಕಾಗಿ ಅತ್ಯುತ್ತಮ ನಟಿ ಪ್ರಶಸ್ತಿ ಪಡೆದಿದ್ದಾರೆ.

ಆಯ್ಕೆ ಪ್ರಶಸ್ತಿಗೆ 124 ಚಿತ್ರಗಳು ಬಂದಿದ್ದವು, ಎಲ್ಲಾ ಚಿತ್ರಗಳನ್ನು ವೀಕ್ಷಿಸಿ ಪ್ರಶಸ್ತಿಗೆ ಆಯ್ಕೆ ಮಾಡಲಾಗಿದೆ ಎಂದು ಆಯ್ಕೆ ಸಮಿತಿ ಅಧ್ಯಕ್ಷೆ ಕವಿತಾ ಲಂಕೇಶ್ ಅವರು ತಿಳಿಸಿದ್ದಾರೆ.

ರಾಜ್ಯ ಚಲನಚಿತ್ರ ಪ್ರಶಸ್ತಿ ಪಟ್ಟಿ

ಅಮರಾವತಿ ಪ್ರಥಮ ಅತ್ಯುತ್ತಮ ಚಿತ್ರ

ರೈಲ್ವೆ ಚಿಲ್ಡ್ರನ್ ದ್ವಿತೀಯ ಅತ್ಯುತ್ತಮ ಚಿತ್ರ

ಅಂತರ್ಜಲ ಮೂರನೇ ಅತ್ಯುತ್ತಮ ಚಿತ್ರ

ಕಿರಿಕ್ ಪಾರ್ಟಿ ಅತ್ಯುತ್ತಮ ಮನರಂಜನಾ ಚಿತ್ರ

ರಾಮಾ ರಾಮಾರೇ ಮೊದಲ ನಿರ್ದೇಶನದ ಅತ್ಯುತ್ತಮ ಚಿತ್ರ

ಮೂಡಲ ಸೀಮೆಯಲಿ ಅತ್ಯುತ್ತಮ ಸಾಮಾಜಿಕ ಚಿತ್ರ

ತುಳು ಚಿತ್ರ ಮುದಿಪು ಅತ್ಯುತ್ತಮ ಪ್ರಾದೇಶಿಕ  ಚಿತ್ರ

ಜೀರ್ ಜಿಂಬೆ ಅತ್ಯುತ್ತಮ ಮಕ್ಕಳ ಚಿತ್ರ

ನಂದಿತಾ ಯಾದವ್ ಅತ್ಯುತ್ತಮ ಕಥೆ(ರಾಜು ಎದೆಗೆ ಬಿದ್ದ ಅಕ್ಷರ)

ನವೀನ್ ಡಿ ಪಡೀಲ್ ಅತ್ಯುತ್ತಮ ಪೋಷಕ ನಟ(ಕುಡ್ಲ ಕೆಫೆ)

ಅಕ್ಷತಾ ಪಾಂಡವಪುರ ಅತ್ಯುತ್ತಮ ಪೋಷಕ ನಟಿ(ಪಲ್ಲಟ)

ಬಿಎಂ ಗಿರಿರಾಜು ಅತ್ಯುತ್ತಮ ಸಂಭಾಷಣೆ(ಅಮರಾವತಿ)

ಅರವಿಂದ ಶಾಸ್ತ್ರಿ ಅತ್ಯುತ್ತಮ ಚಿತ್ರಕಥೆ(ಕಹಿ)

ಎಂಆರ್ ಚರಣ್ ರಾಜ್ ಅತ್ಯುತ್ತಮ ಸಂಗೀತ ನಿರ್ದೇಶನ

ಸಿ.ರವಿಚಂದ್ರನ್ ಅತ್ಯುತ್ತಮ ಸಂಕಲನ

ರೈಲ್ವೆ ಚಿಲ್ಡ್ರನ್ ನಟನೆಗಾಗಿ ಮನೋಹರ್ ಗೆ ಪ್ರಶಸ್ತಿ

ವಿಜಯ್ ಪ್ರಕಾಶ್ ಅತ್ಯುತ್ತಮ ಹಿನ್ನೆಲೆ ಗಾಯಕ

ಸಂಗೀತಾ ರವೀಂದ್ರನಾಥ್ ಅತ್ಯುತ್ತಮ ಹಿನ್ನೆಲೆ ಗಾಯಕಿ(ಜಲ್ಸಾ)

ವಸ್ತ್ರಾಲಂಕಾರ ವಿಭಾಗದಲ್ಲಿ ಚಿನ್ಮಯ್ ಗೆ ಪ್ರಶಸ್ತಿ

ಕಾರ್ತಿಕ್ ಸರಗೂರು ಅತ್ಯುತ್ತಮ ಗೀತ ರಚನೆ

ಸೋಮವಾರ, ಜೂನ್ 26, 2017

ಕಾಂಗ್ರೆಸ್ ನೀತಿ ಹಾಡಿ ಹೊಗಳಿದ ನೀತಿ ಆಯೋಗ

ಕಾಂಗ್ರೆಸ್ ನೀತಿ ಹಾಡಿ ಹೊಗಳಿದ ನೀತಿ ಆಯೋಗ !

ಹೊಸದಿಲ್ಲಿ, ಜೂ.25: ಕೇಂದ್ರದ ಆಡಳಿತಾರೂಢ ಬಿಜೆಪಿಯ ಗುರಿ, ಕಾಂಗ್ರೆಸ್ ಮುಕ್ತ ಭಾರತ. ಆದರೆ ದೇಶದ ಅತ್ಯುನ್ನತ ಚಿಂತಕರ ಕೂಟ ಎನಿಸಿಕೊಂಡಿರುವ ನೀತಿ ಆಯೋಗದ ಅಭಿಪ್ರಾಯ ಮಾತ್ರ ಇದಕ್ಕೆ ತದ್ವಿರುದ್ಧ.

ನೀತಿ ಆಯೋಗ ಸಿದ್ಧಪಡಿಸಿದ ಸರ್ಕಾರಿ ವರದಿಯಲ್ಲಿ 1991ರಲ್ಲಿ ಪಿ.ವಿ.ನರಸಿಂಹರಾವ್ ಸರಕಾರ ಕೈಗೊಂಡ ಆರ್ಥಿಕ ಸುಧಾರಣೆಗಳನ್ನು ಹಾಡಿ ಹೊಗಳಲಾಗಿದೆ. ಇಷ್ಟು ಸಾಲದೆಂಬಂತೆ ಮನಮೋಹನ್ ಸಿಂಗ್ ಸರಕಾರ ಜಾರಿಗೆ ತಂದ ಗ್ರಾಮೀಣ ಉದ್ಯೋಗ ಖಾತ್ರಿ ಯೋಜನೆ ಕೂಡಾ ದೇಶದ ಅಭಿವೃದ್ಧಿ ಸೂಚ್ಯಂಕ ಸುಧಾರಿಸಲು ಗಣನೀಯ ಕೊಡುಗೆ ನೀಡಿದೆ ಎಂದು ಬಣ್ಣಿಸಿದೆ.

ಸುಸ್ಥಿರ ಅಭಿವೃದ್ಧಿ ಗುರಿ (ಎಸ್ಡಿಜಿ) ಸಾಧನೆಯ ನಿಟ್ಟಿನಲ್ಲಿ ಅವಲೋಕಿಸುವ ಸ್ವಯಂಪ್ರೇರಿತ ರಾಷ್ಟ್ರೀಯ ಪರಿಶೀಲನಾ ವರದಿಯಲ್ಲಿ ಈ ಅಭಿಪ್ರಾಯ ವ್ಯಕ್ತಪಡಿಸಲಾಗಿದೆ. ಈ ವರದಿ ಮುಂದಿನ ತಿಂಗಳು ನ್ಯೂಯಾರ್ಕ್ನಲ್ಲಿ ನಡೆಯುವ ವಿಶ್ವಸಂಸ್ಥೆಯ ಅತ್ಯುನ್ನತ ರಾಜಕೀಯ ವೇದಿಕೆಯಲ್ಲಿ ಎಸ್ಡಿಜಿ ಚರ್ಚೆಗೆ ಬರಲಿದ್ದು, ಈ ಹಿನ್ನೆಲೆಯಲ್ಲಿ ಭಾರತ ಈ ಪರಿಶೀಲನಾ ವರದಿ ಸಿದ್ಧಪಡಿಸಿದೆ.

"ಭಾರತದ ಕ್ಷಿಪ್ರ ಪ್ರಗತಿಗೆ 1991ರಲ್ಲಿ ಆರಂಭಿಸಿದ ಆರ್ಥಿಕ ಸುಧಾರಣೆಗಳು ಕಾರಣ. ಇದು ಬಡತನ ಕಡಿಮೆ ಮಾಡುವಲ್ಲಿ ಮಹತ್ವದ ಪಾತ್ರ ವಹಿಸಿದೆ. ಸುಧಾರಣೋತ್ತರ ಭಾರತದಲ್ಲಿ ರಾಷ್ಟ್ರಮಟ್ಟ ಹಾಗೂ ರಾಜ್ಯಗಳಲ್ಲಿ ಕೂಡಾ ಎಲ್ಲ ಆರ್ಥಿಕ, ಸಾಮಾಜಿಕ ಹಾಗೂ ಧಾರ್ಮಿಕ ಗುಂಪುಗಳಲ್ಲಿಕೂಡಾ ಬಡತನ ಕಡಿಮೆಯಾಗಿದೆ. 1993-94ರಿಂದ 2003-04ರವರೆಗೆ ಶೇಕಡ 6.2ರಷ್ಟು ಹಾಗೂ 2004-05ರಿಂದ 2011-12ವರೆಗೆ ಶೇಕಡ 8.3 ಹೀಗೆ ಸುಸ್ಥಿರ ಪ್ರಗತಿ, ಲಾಭದಾಯಕ ಉದ್ಯೋಗ ಸೃಷ್ಟಿಗೆ ಮತ್ತು ವೇತನ ಹೆಚ್ಚಳಕ್ಕೆ ಕಾರಣವಾಗಿದೆ" ಎಂದು ನೀತಿ ಆಯೋಗದ ಉಪಾಧ್ಯಕ್ಷ ಅರವಿಂದ ಪನಗಾರಿಯಾ ಸಿದ್ಧಪಡಿಸಿದ ಈ ವರದಿಯಲ್ಲಿ ಬಣ್ಣಿಸಲಾಗಿದೆ.

ಪ್ರಸ್ತುತ ಸರಕಾರದ ಪ್ರಧಾನಮಂತ್ರಿ ಜನಧನ್ ಯೋಜನೆ, ಕ್ಲೀನ್ ಇಂಡಿಯಾ ಮತ್ತಿತರ ಯೋಜನೆಗಳನ್ನು ಕೂಡಾ ವರದಿಯಲ್ಲಿ ಶ್ಲಾಘಿಸಲಾಗಿದೆ.

ಭಾರತ - ಪೋರ್ಚುಗಲ್ 11 ಒಪ್ಪಂದಗಳಿಗೆ ಸಹಿ

ಭಾರತ - ಪೋರ್ಚುಗಲ್ 11 ಒಪ್ಪಂದಗಳಿಗೆ ಸಹಿ

ಲಿಸ್ಟನ್ : ಪ್ರಧಾನಿ ಮೋದಿ ಅವರ ಮೂರು ದೇಶಗಳ ಪ್ರವಾಸದಲ್ಲಿ ನಿನ್ನೆ ಸಂಜೆ ತಮ್ಮ ಪ್ರವಾಸದ ಪ್ರಥಮ ದೇಶವಾದ ಪೋರ್ಚುಗಲ್ ಗೆ ತಲುಪಿದರು.

ಪ್ರಧಾನಿ ಮೋದಿ ಅವರನ್ನು ಪೋರ್ಚುಗಲ್ ವಿದೇಶಾಂಗ ಸಚಿವ ಅಗಸ್ಟೋ ಸ್ಯಾಂಟೊಸ್ ಸಿಲ್ವಾ ಸ್ವಾಗತಿಸಿದರು. ಬಳಿಕ ನಾಯಕರೂ ನೆಸೆಸಿಡೇಡ್ಸ್ ಅರಮನೆಯಲ್ಲಿ ಪೋರ್ಚುಗಲ್ ಪ್ರಧಾನಿ ಆಂಟೊನಿಯೋ ಕೋಸ್ಟಾ ಅವರನ್ನು ಮೋದಿ ಭೇಟಿಯಾದರು. ಈ ವೇಳೆ ಮೋದಿ ಅವರನ್ನು ಭರಮಾಡಿಕೊಂಡ ಆಂಟೊನಿಯಾ ಕೋಸ್ಟಾ, ಉಭಯ ದೇಶಗಳ ಸಂಬಂಧ ವೃದ್ಧಿಗೆ ಇದು ಅದ್ಭುತ ಅವಕಾಶ ಎಂದು ಬಣ್ಣಿಸಿದರು.

ವಿಜ್ಞಾನ ಮತ್ತು ತಂತ್ರಜ್ಞಾನ ಕ್ಷೇತ್ರದಲ್ಲಿ ಸಂಶೋಧನೆಗಾಗಿ 28.8 ಕೋಟಿ ರೂ.
ಮೌಲ್ಯದ ನಿಧಿ ಸ್ಥಾಪನೆ ಸೇರಿದಂತೆ ಒಟ್ಟು 11 ಒಪ್ಪಂದಗಳಿಗೆ ಭಾರತ ಮತ್ತು ಪೋರ್ಚುಗಲ್ ಶನಿವಾರ ಸಹಿ ಹಾಕಿವೆ. ಬಾಹ್ಯಾಕಾಶ ಸಹಕಾರ, ನ್ಯಾನೋ ತಂತ್ರಜ್ಞಾನ, ಸಾಂಸ್ಕೃತಿಕ ಸಂಬಂಧ ವೃದ್ಧಿ, ಯುವಜನ ಮತ್ತು ಕ್ರೀಡಾಭಿವೃದ್ಧಿ, ಉನ್ನತ ಶಿಕ್ಷಣ ಸೇರಿದಂತೆ ಹಲವು ಕ್ಷೇತ್ರಗಳಿಗೆ ಸಂಬಂಧಿಸಿದ ಒಪ್ಪಂದಗಳು ಇವಾಗಿವೆ.

ಪೋರ್ಚುಗಲ್-ಇಂಡಿಯಾ ಬ್ಯುಸಿನೆಸ್ ಹಬ್ ಸ್ಥಾಪನೆ ಮತ್ತು ಪೋರ್ಚುಗಲ್ ನಲ್ಲಿ ಇಂಡಿಯನ್ ಚೇಂಬರ್ ಆಫ್ ಕಾಮರ್ಸ್ ಸ್ಥಾಪನೆಗೂ ನಿರ್ಧರಿಸಲಾಗಿದೆ. ಲಿಸ್ಟನ್ ವಿಶ್ವವಿದ್ಯಾಲಯದಲ್ಲಿ ಭಾರತೀಯ ಅಧ್ಯಯನದ ವಿಭಾಗವನ್ನು ಸ್ಥಾಪಿಸಲು ಮತ್ತು ಹಿಂದಿ ಪೋರ್ಚುಗೀಸ್ ಶಬ್ದಕೋಶ ಅಭಿವೃದ್ಧಿಪಡಿಸಲು ಉಭಯ ದೇಶಗಳು ಸಮ್ಮತಿಸಿವೆ ಎಂದು ಮೋದಿ ಪ್ರಕಟಿಸಿದರು.

ಗುರುವಾರ, ಜೂನ್ 22, 2017

Importance of Modi-Merkel meet in the changing global scene

Importance of Modi-Merkel meet in the changing global scene

Archives

TOPIC: General Studies 2

Bilateral, regional and global groupings and agreements involving India and/or affecting India's interestsEffect of policies and politics of developed and developing countries on India's interests


PM of India recently signed eight major agreements with German Chancellor. India is looking at outcome oriented momentum at India-Germany ties and quantum jump especially in economic ties. German Chancellor has long cultivated relations with India and stresses that Germany and EU must compete with new emerging economic giants. She has also said that Germany cannot completely depend on traditional allies like USA and Britain in age of new US president and Brexit.

Importance of India and Germany today

The people of both nations have displayed that desires of both governments is to develop ‘middle power cooperation’.It is a time when USA is becoming unpredictable and China more assertive, and hence a lot of other countries in middle are thinking of stepping up into gaps created.Germany is the most powerful and wealthiest of the EU nations and India being dominant player in South Asia and Indian Ocean region are looking to work with each other more intently.Germany needs to look elsewhere apart from traditional allies. It has also mentioned that china insisted Germany to endorse OBOR initially and then later on disagree with certain agreements.

Trade and investment-

India and Germany are a win-win proposition for both countries by coming together in several of initiatives taken by GoI like Make in India, Skill India, Smart cities, infrastructure, Digital India etc. where Germany has great competence.There have been problems between two nations regarding bilateral trade and investment negotiations which started in 2007. At that time, it was thought to conclude negotiations in two years. But they are still on. Thus, there is a need to conclude these agreements as soon as possible considering the fact that both the nations now need each other to develop themselves.Bilateral investment treaties have also been cancelled by India and new draft submitted by India is not found acceptable by EU. Hence, these critical aspects of trade relations between two nations need an energetic boost.However, now India has initiated reforms with GST, bankruptcy code, is also a largest recipient of FDI and its fast growing nature economy. This will help developed countries to look at India as an attractive investment destination.At present, 1600 German companies are working in India and 60 joint ventures with India. 25 working groups are operational. With their interactions and deliberations, there is a lot of potential in future.The investment opportunities are also high in India. The German MSMEs had traditionally five radius mile concept which they have not looked beyond. This can provided fillip to develop the relationship.Also, uncertainty about America can be motivation for Germany.

Security

France, UK, Germany have suffered from terrorist attacks and India has been a victim of terrorism.Thus, there is a need for two countries to cooperate and collaborate to deal with the menace of terrorism.

Strategic partnership

As Germany gets disillusioned with Trump’s America, it is looking around for partners. India has also been looking around for development and sustainable partners since a while and is closely related to Japan, Australia etc.Thus, it is an opportunity where middle powers can get together.India and Germany have been on same wavelength, whether it is about Indian Ocean region, South China Sea, in terms of freedom of avigation, importance of award by UNCLOS.A strategic relations doesn’t exist for now between both countries. Take for example Japan. Japan has now made a committed official decision across its parties andgovernment to try and build up India as an economy and as an Asian power for strategic reasons. It is for them about balancing china and other issues. They are investing millions of dollars to build infrastructure, develop projects with India in third countries,Japanese companies have come here even if not making a profit.Germany in many ways is similar to Japan- WWII legacy, has a pacifist constitution, generally being reluctant to play global role. Thus, Germany can also follow the footsteps of Japan or walk on similar lines.With Germany, Indian government is hoping to transform the relation. Germany is sceptical about India somewhere as India is a reluctant free trader. Due to large population and need to create jobs, many times India has taken two steps forward and one step backward. This is thereason why RCEP has not yet borne fruit. The concept of proving jobs, getting up the manufacturing ladder from 17-18% to 25% etc. is finding a difficult terrain in India. If the markets will be opened, then Make in India project will suffer the most.Thus, there are all these issues to deal with. China is more attractive as far as Europe is concerned. Germany was never really interested in India and India had own problems in region. Now, going forward, India has an opportunity to develop a partnership with Germany. TheOBOR initiative has been termed as ‘new colonial enterprise’ as it is sino-centric road arrangement. It means that all belts and all roads lead to china.

Climate change

With US withdrawing from it, India and China are looked as future strong partners to uphold the paris agreement.India has ambitious programmes in renewable energy. In this area, India and Germany have a bright future.German companies are looking forward to India’s large market with USA and China’s stand on globalisation.

Germany in India

The paradox of indo-German relationship has been, despite hardly any political problems, the trade remains modest at 17 billion USD whereas with China it is 10times.This limits the degree of interest which Germany has on the trade and economic front.The Germans are keen to have government to government defence procurement agreement like with France. But with India there are certain challenges-The Germans have been reticent in transfer of technologyOffset clauseThe German export control regime which has statutory restrictions about transfer of weaponry to conflict prone areas.

Civil nuclear cooperation

Nuclear safety is an area where both countries can have equal cooperation with each other.

Conclusion

The relevance and importance of Germany has grown in the eyes of India considering the state of EU today.

German chancellor has bright prospect in winning the election. Indian PM has tried to give a nudge to India-EU FTA but it is still not moved forward. But there are positive hopes in the direction as Germany and India are both in favour of globalisation and keeping trade open.

Indo-German development is more of an incremental type of progress than transformative.  In the era of unspecified times, all the major players are simultaneously engaging all major players. Each relationship is going to have its own dynamism and momentum. With Germany, it is important to maintain slow and steady consolidation and keep on emphasising that India is a strong opportunity.

ಸೋಮವಾರ, ಜೂನ್ 12, 2017

ಕರ್ನಾಟಕ ಸರ್ಕಾರದ ಯೋಜನೆಗಳ ಇಸ್ವಿ

ಕರ್ನಾಟಕ ಸರ್ಕಾರದ ಯೋಜನೆಗಳು...
* ರೈತ ಮಿತ್ರ ಯೊಜನೆ - 2000-01
* ಭೂಚೇತನ ಯೋಜನೆ - 2009-10
* ಸುವರ್ಣ ಭೂಮಿ ಯೋಜನೆ - 2008-09
* ಸಾವಯವ ಭಾಗ್ಯ - 2013-14
* ಕ್ಷೃಷಿ ಭಾಗ್ಯ - 2014
* ಅಮೃತ ಭೂಮಿ ಯೋಜನೆ - 2013-14
* ರೈತ ಸಂಜೀವಿನಿ ಯೋಜನೆ - 2011-12
* ಕ್ಷೀರ ಭಾಗ್ಯ ಯೋಜನೆ - 2013
* ಯಶಸ್ವಿವಿನಿ ಯೋಜನೆ - 2003
* ಅನ್ನ ಭಾಗ್ಯ ಯೋಜನೆ - 2013
* ಸಂಧ್ಯಾ ಸುರಕ್ಷಾ ಯೋಜನೆ - 2007
* ಆದರ್ಶ ವಿವಾಹ ಯೋಜನೆ - 2010
* ಆಮ್ ಆದ್ಮಿ ಭೀಮಾ ಯೋಜನೆ - 2008
* ಜನಶ್ರೀ ಯೋಜನೆ - 2013
* ಅಂಬೆಡ್ಕರ್ ವಸತಿ ಯೋಜನೆ - 1991-92
* ಭಾಗ್ಯ ಲಕ್ಷ್ಮೀ ಯೋಜನೆ - 2008
* ಜನನಿ ಸುರಕ್ಷಾ ಯೋಜನೆ - 2010
* ಮಡಿಲು ಯೋಜನೆ - 2007
* ತಾಯಿ ಭಾಗ್ಯ ಯೋಜನೆ - 2014
* ಜ್ಯೋತಿ ಸಂಜೀವಿನಿ ಯೋಜನೆ - 2012
* ಶಾದಿ ಭಾಗ್ಯ - 2013
* ಭೂ ಒಡೆತನ ಯೋಜನೆ - 2009
* ಗಂಗಾ ಕಲ್ಯಾಣ ಯೋಜನೆ - 1996-97
* ಆರೋಗ್ಯ ವೇ ಭಾಗ್ಯ ಯೋಜನೆ-2013-14
* ವಿಕಲಾಂಗ ಪಿಂಚಣಿ ಯೋಜನೆ - 2007

ಭಾನುವಾರ, ಜೂನ್ 11, 2017

ಸಣ್ಣ ಕಥೆಗಳು (ಜಿ,ಎಚ್,ನಾಯಕ್ ರವರು)

🍀ಸಣ್ಣ ಕಥೆಗಳು 🍀
✍ಜಿ.ಎಚ್.ನಾಯಕ್ ಲೇಖಕರು✍

🔴ನಾನು ಕೊಂದ ಹುಡುಗಿ🔴
🔹ಲೇಖಕರ ಹೆಸರು➖ಅಜ್ಜಂಪುರ ಸೀತಾರಾಮ.
🔹ಕಾವ್ಯನಾಮ➖ಆನಂದ.
🔹ಜನನ➖ಶಿವಮೊಗ್ಗ ಜಿಲ್ಲೆ ಸೊರಬ ತಾಲ್ಲೂಕಿನ ಆನವಟ್ಟಿ. ಅಜ್ಜಂಪುರ ಇವರ ಪೂರ್ವಿಕರ ಊರು.
🔹ಕಾಲ➖ಅಗಸ್ಟ್, ೨೨.೧೯೬೩.

🌺ಪ್ರಮುಖ ಪಾತ್ರಗಳು🌺
✍ಲೇಖಕರು.
✍ಲಕ್ಷ್ಮೀ➖ಲೇಖಕರ ಹೆಂಡತಿ.
✍ಕರಿಯಪ್ಪ➖ನಾಗವಳ್ಳಿಯ ಗಣ್ಯ ವ್ಯಕ್ತಿ.
✍ಚೆನ್ನಿ(ಚೆನ್ನಮ್ಮ)ಬಸವಿ ಆತ್ಮಹತ್ಯ ಮಾಡಿಕೊಂಡವಳು.
✍ಕಥೆ ಚರ್ಚಿತವಾಗಿರುವುದು ಬಸವಿ ಪದ್ದತಿ ಬಗ್ಗೆ.
✍ಇಲ್ಲಿ ಕರಿಯಪ್ಪನ ಮಗಳನ್ನು ಬಸವಿ ಬಿಡಲಾಗಿತ್ತು ಅದು ಮರಡಿ ದೇವರಿಗೆ. ಕೊನೆಗೆ ಬಾವಿಗೆ ಬಿದ್ದು ಚೆನ್ನಿ ಸಾಯುತ್ತಾಳೆ.

🔵ಯಾರೂ ಅರಿಯದ ವೀರ🔵
🍀ಲೇಖಕರು➖ಕುಪ್ಪಳ್ಳಿ ವೆಂಕಟಪ್ಪ ಪುಟ್ಟಪ್ಪ.
🔹ಕಾವ್ಯನಾಮ➖ಕುವೆಂಪು.
🔹ಜನನ➖ಶಿವಮೊಗ್ಗ ಜಿಲ್ಲೆ ತೀರ್ಥಹಳ್ಳಿ ಸಮೀಪ ಕುಪ್ಪಳ್ಳಿ.
🔹ಕಾಲ➖ಡಿಸೆಂಬರ,೨೯-೧೯೦೪.

🌺ಪಾತ್ರಗಳು🌺
✍ಸುಬ್ಬಣ್ಣಗೌಡ➖ಮನೆಯ ಯಜಮಾನ.
✍ನಾಗಮ್ಮ➖ಸುಬ್ಬಣ್ಣಗೌಡರ ಹೆಂಡತಿ.
✍ತಿಮ್ಮು➖ಸುಬ್ಬಣ್ಣಗೌಡರ ಮಗ.
✍ಸೀತೆ➖ಸುಬ್ಬಣ್ಣಗೌಡರ ಮಗಳು.
✍ಲಿಂಗ➖ಗೌಡರ ಮನೆಯ ಆಳು.ಜೈಲಿಗೆ ಹೋಗಿ ಬಂದವ.
✍ನಾಗ➖ಲಿಂಗನ ಮಗ.
✍ಸೋಮಕ್ಕ➖ಮನೆ ಕೆಲಸದವಳು.
✍ರಾಮೇಗೌಡ ಮತ್ತು ಸಿದ್ದೇಗೌಡ ➖ನುಗ್ಗೇನಹಳ್ಳಿಯವರು.
✍ರಂಗೇನಾಯ್ಕ ಮತ್ತು ಶೇಷನಾಯ್ಕ➖ಮಾವಿನ ಹಳ್ಳಿಯವರು ಲಿಂಗ ಜೈಲಿಗೆ ಹೋಗಲು ಕಾರಣರಾದವರು.

🔵ಧರ್ಮಕೊಂಡದ ಕತೆ🔵
🍀ಲೇಖಕರು➖ಕೂದವಳ್ಳಿ ಅಶ್ವತ್ಥ ನಾರಾಯಣರಾವ್.
🍀ಕಾವ್ಯನಾಮ➖ಅಶ್ವತ್ಥ.
🍀ಜನನ➖ಚಿಕ್ಕಮಗಳೂರು ಜಿಲ್ಲೆ ಕೂದವಳ್ಳಿ ಗ್ರಾಮ.
🍀ಕಾಲ➖ಜೂನ್, ೧೬-೧೯೧೨.

🔴ಪಾತ್ರಗಳು🔴
✍ಸೂರಪ್ಪ➖ಧರ್ಮಕೊಂಡದ ಶಾನುಭೋಗ.
✍ದೇವಮ್ಮ➖ಸೂರಪ್ಪನ ಹೆಂಡತಿ,ಅಪಹರಣಕ್ಕೊಳಗಾದವಳು.
✍ಗಂಗಮ್ಮ➖ಸೂರಪ್ಪನ ತಾಯಿ.
✍ಗುಂಡಮ್ಮ➖ಸೂರಪ್ಪನ ಅಕ್ಕ, ಮಡಿ ಸಂಪ್ರದಾಯಸ್ಥಳು.
✍ಚಂದು➖ಸೂರಪ್ಪ-ದೇವಮ್ಮ ದಂಪತಿಗಳ ಮಗ.
✍ಕಾಳಪ್ಪಶಾಸ್ತ್ರೀ➖ಜೋಯಿಸರು.
✍ಕಂದಾರಿಗಳು➖ದೇವಮ್ಮನ ಅಪಹರಣ ಮಾಡಿದ ಮುಸಲ್ಮಾನರು.

🍀ತಿರುಳು➖ಧರ್ಮದ ಜೀವಂತ ಸಮಾಧಿ ಮಾಡಿರುವುಭೂಮಿ

🔴ನಾಲ್ಕು ಮೊಳ ಭೂಮಿ🔴
🍀ಲೇಖಕರು➖ಎಂ,ಸುಬ್ರಹ್ಮಣ್ಯ ರಾಜ,ಅರಸು.
🍀ಕಾವ್ಯನಾಮ➖ಚದುರಂಗ.
🍀ಜನನ➖ಮೈಸೂರು ಜಿಲ್ಲೆ ಹುಣಸೂರು ತಾಲ್ಲೂಕು,ಕಲ್ಲಹಳ್ಳಿ.
🍀ಕಾಲ➖ಜನವರಿ,೧-೧೯೧೬.

🌺ಪಾತ್ರಗಳು🌺
✍ಲೇಖಕರು➖ಲಾಯರ್.
✍ಲಲಿತ➖ಲೇಖಕರ ಹೆಂಡತಿ.
✍ಕಾಳಿಂಗಯ್ಯ➖ದೇವಪ್ಪನ ಜಮೀನು ಕಬಳಿಸಿದವನು.
✍ದೇವಪ್ಪ➖ಕಾಳಿಂಗಯ್ಯನಿಂದ ಮೋಸ ಹೋದ ರೈತ.
✍ಸಂಜೀವ➖ಲಲಿತಳ ಸೋದರ ಮಾವ.
🌺ತಿರುಳು🌺
ದುರ್ಬಲರ ಮೇಲೆ ಉಳ್ಳವರು ಮಾಡುವ ದಬ್ಬಾಳಿಕೆ.

🔴ಅಜ್ಞಾತವಾಸಿ🔴

🍀ಲೇಖಕರು➖ಬಸವರಾಜ ಕಟ್ಟಿಮನಿ.
🍀ಜನನ➖ಬೆಳಗಾವಿ ಜಿಲ್ಲೆ ಗೋಕಾಕ.
🍀ಕಾಲ➖ಅಕ್ಟೋಬರ, ೫,೧೯೧೯.

🌹ಪಾತ್ರಗಳು🌹
✍ಚನ್ನಬಸಪ್ಪ➖ಸ್ವಾತಂತ್ರ್ಯ ಹೋರಾಟಗಾರ,
✍ನಾಗಮ್ಮ➖ಚನ್ನಬಸಪ್ಪನ ಹೆಂಡತಿ,ಬಂಧಿತಳಾಗಿ ಹಿಂಸೆ ಸಾವು.
✍ದಪೇದಾರ➖ನಾಗಮ್ಮಳ ಮೇಲೆ ಅತ್ಯಾಚಾರ ಮಾಡಿದವನು.
✍ಕರಿಯಪ್ಪ➖ಚನ್ನಬಸಪ್ಪನ ಮನೆಯ ಪಕ್ಕದಲ್ಲಿ ಇರುವವ  ನಾಗಮ್ಮಳ ಅಪಹರಣದ ಸುದ್ದಿ ಹೇಳಿದವ.

🔴೦-೦=೦🔴
🍀ಲೇಖಕರು➖ತಳುಕಿನ ರಾಮಸ್ವಾಮಯ್ಯ ಸುಬ್ಬರಾವ್.
🍀ಕಾವ್ಯನಾಮ➖ತ‌.ರಾ.ಸು.
🍀ಜನನ➖ಚಿತ್ರದುರ್ಗ ಜಿಲ್ಲೆ ಚಳ್ಳಕೆರೆ ತಾಲ್ಲೂಕು ತಳಕು.
🍀ಕಾಲ➖ಏಪ್ರೀಲ್,೪,೧೯೨೦.

🔴ಕೊನೆಯ ಗಿರಾಕಿ🔴
🍀ಲೇಖಕಕೆ✍
ಕುಳಕುಂದ ಶಿವರಾಯರು.
🍀ಕಾವ್ಯನಾಮ➖ನಿರಂಜನ.
🍀ಜನನ➖ದಕ್ಷಿಣ ಕನ್ನಡ ಜಿಲ್ಲೆ ಕುಳಕುಂದ .
🍀ಕಾಲ➖ಜೂನ,೧೫-೧೯೨೪.

🌺ಪಾತ್ರಗಳು🌺
✍ಕಾಣಿ➖ಮೂಕಿ.ಕಥಾನಾಯಕಿ.
✍ಪ್ರಿಯಕರ➖ಮೊಂಡು ಕೈ ಹುಡುಗ.
✍ದಾಂಡಿಗ.
✍ಅಪರಿಚಿತ.
✍ಗಿಡುಗ➖ಕೊನೆಯ ಗಿರಾಕಿ.

🌹ತಿರುಳು➖
ಹೆಣ್ಣಿನ ಶೋಷಣೆ ಸದಾ ನಡೆಯುತ್ತಿರುವುದು.

🔜ಮುಂದುವರೆಯುವುದು.

ಭಾನುವಾರ, ಜೂನ್ 4, 2017

ವಿಶ್ವಸಂಸ್ಥೆಯ ವಿಭಾಗಗಳು

*WMO : ವಿಶ್ವ ಹವಾಮಾನ ಸಂಸ್ಥೆ*✍
*ವಿಸ್ತೃತ ರೂಪ: (World Meteorological Organization)*
*ಕೇಂದ್ರ ಕಾರ್ಯಾಲಯ : ಜಿನೀವಾ, ಸ್ವಿಜರ್ಲ್ಯಾಂಡ್ (Geneva, Switzerland)*
*ಪ್ರಸ್ತುತ ಮುಖ್ಯಸ್ಥರು: ಅಲೆಕ್ಸಾಂಡರ್ ಬೆಡ್*
*🌓WIPO : ವಿಶ್ವ ಬೌದ್ಧಿಕ ಆಸ್ತಿ ಸಂಸ್ಥೆ*✍
*ವಿಸ್ತೃತ ರೂಪ—: World Intellectual Property Organization*
*ಕೇಂದ್ರ ಕಾರ್ಯಾಲಯ:— ಜಿನೀವಾ, ಸ್ವಿಜರ್ಲ್ಯಾಂಡ್ (Geneva, Switzerland)*
*ಪ್ರಸ್ತುತ ಮುಖ್ಯಸ್ಥರು:— ಫ್ರಾನ್ಸಿಸ್ ಗರ್ರಿ (Francis Gurry)*
*ಸ್ಥಾಪನೆಗೊಂಡಿದ್ದು : 1974 ರಲ್ಲಿ.*
*🌓 WHO : ವಿಶ್ವ ಆರೋಗ್ಯ ಸಂಸ್ಥೆ*✍
*ವಿಸ್ತೃತ ರೂಪ:— World Health Organization*
*ಕೇಂದ್ರ ಕಾರ್ಯಾಲಯ:— ಜಿನೀವಾ, ಸ್ವಿಜರ್ಲ್ಯಾಂಡ್ (Geneva, Switzerland)*
*ಪ್ರಸ್ತುತ ಮುಖ್ಯಸ್ಥರು:— ಮಾರ್ಗರೇಟ್ ಚಾನ್ (Margaret Chan)*
*ಸ್ಥಾಪನೆಗೊಂಡಿದ್ದು :— 1948 ರಲ್ಲಿ.*
*🌓WFP:— ವಿಶ್ವ ಆಹಾರ ಕಾರ್ಯಕ್ರಮ.*✍
*ವಿಸ್ತೃತ ರೂಪ:— World Food Programme*
*ಕೇಂದ್ರ ಕಾರ್ಯಾಲಯ:— ಇಟಲಿಯ ರೋಮ್ (Rome, Italy)*
*ಪ್ರಸ್ತುತ ಮುಖ್ಯಸ್ಥರು:— ಜೋಸೆಟ್ ಷೀರನ್ (Josette Sheeran)*
*ಸ್ಥಾಪನೆಗೊಂಡಿದ್ದು :— 1963 ರಲ್ಲಿ.*
*🌓WB : ವಿಶ್ವ ಬ್ಯಾಂಕ್*
*ವಿಸ್ತೃತ ರೂಪ:— World Bank*✍
*ಕೇಂದ್ರ ಕಾರ್ಯಾಲಯ:— ವಾಷಿಂಗ್ಟನ್, ಡಿ. ಸಿ (Washington, D.C, USA)*
*ಪ್ರಸ್ತುತ ಮುಖ್ಯಸ್ಥರು:— ರಾಬರ್ಟ್ ಬಿ. ಝೋಲ್ಲಿಕ್ (Robert B. Zoellick)*
*ಸ್ಥಾಪನೆಗೊಂಡಿದ್ದು :— 1945 ರಲ್ಲಿ.*
*🌓 UPU : ವಿಶ್ವ ಅಂಚೆ ಸಂಘ.*✍
*ವಿಸ್ತೃತ ರೂಪ:— Universal Postal Union*
*ಕೇಂದ್ರ ಕಾರ್ಯಾಲಯ:— ಬರ್ನೆ, ಸ್ವಿಜರ್ಲ್ಯಾಂಡ್.(Berne, Switzerland)*
*ಪ್ರಸ್ತುತ ಮುಖ್ಯಸ್ಥರು:— ಎಡ್ವರ್ಡ್ ದಯನ್*
*ಸ್ಥಾಪನೆಗೊಂಡಿದ್ದು :— 1947 ರಲ್ಲಿ.*
*🌓UNIDO :— ವಿಶ್ವಸಂಸ್ಥೆಯ ಕೈಗಾರಿಕಾ ಅಭಿವೃದ್ಧಿ ಸಂಸ್ಥೆ.*✍
*ವಿಸ್ತೃತ ರೂಪ:— United Nations Industrial Development Organization.*
*ಕೇಂದ್ರ ಕಾರ್ಯಾಲಯ:— ಆಸ್ಟ್ರಿಯಾದ ವಿಯೆನ್ನಾ (Vienna, Austria)*
*ಪ್ರಸ್ತುತ ಮುಖ್ಯಸ್ಥರು:— ಕಂಡೆಹ್ ಯುಮ್ ಕೆಲ್ಲಾ (Kandeh Yumkella)*
*ಸ್ಥಾಪನೆಗೊಂಡಿದ್ದು :— 1967 ರಲ್ಲಿ.*
*🌓UNESCO : ವಿಶ್ವಸಂಸ್ಥೆಯ ಶೈಕ್ಷಣಿಕ, ವೈಜ್ಞಾನಿಕ ಮತ್ತು ಸಾಂಸ್ಕೃತಿಕ ಸಂಸ್ಥೆ*✍
*ವಿಸ್ತೃತ ರೂಪ:— United Nations Educational, Scientific and Cultural Organization*
*ಕೇಂದ್ರ ಕಾರ್ಯಾಲಯ:— ಪ್ಯಾರಿಸ್, ಫ್ರಾನ್ಸ್ (Paris, France)*
*ಪ್ರಸ್ತುತ ಮುಖ್ಯಸ್ಥರು:— ಐರಿನಾ ಬೊಕೊವ (Irina Bokova)*
*ಸ್ಥಾಪನೆಗೊಂಡಿದ್ದು :— 1946*
*☀️ITU : ಅಂತರ್ರಾಷ್ಟ್ರೀಯ ದೂರಸಂಪರ್ಕ ಸಂಘ.*
*ವಿಸ್ತೃತ ರೂಪ:— International Telecommunication Union.*
*ಕೇಂದ್ರ ಕಾರ್ಯಾಲಯ:— ಜಿನೀವಾ, ಸ್ವಿಜರ್ಲ್ಯಾಂಡ್ (Geneva, Switzerland)*
*ಪ್ರಸ್ತುತ ಮುಖ್ಯಸ್ಥರು:— ಹಮದೌನ್ ಟೌರೆ (Hamadoun Touré)*
*ಸ್ಥಾಪನೆಗೊಂಡಿದ್ದು :— 1947 ರಲ್ಲಿ*
*🌓IMF :— ಅಂತರರಾಷ್ಟ್ರೀಯ ಹಣಕಾಸು ನಿಧಿ*
*ವಿಸ್ತೃತ ರೂಪ:— International Monetary Fund.*
*ಕೇಂದ್ರ ಕಾರ್ಯಾಲಯ:— ವಾಷಿಂಗ್ಟನ್, ಡಿ. ಸಿ (Washington, D.C, USA)*
*ಪ್ರಸ್ತುತ ಮುಖ್ಯಸ್ಥರು:- ಡೊಮಿನಿಕ್ ಸ್ಟ್ರಾಸ್ ಕಾಹ್ನ್ (Dominique Strauss-Kahn)*
*ಸ್ಥಾಪನೆಗೊಂಡಿದ್ದು :— 1945 ರಲ್ಲಿ*
*🌓IMO :— ಅಂತರರಾಷ್ಟ್ರೀಯ ಸಾಗರೋತ್ತರ ಸಂಘ.*
*ವಿಸ್ತೃತ ರೂಪ:— International Maritime Organization*
*ಕೇಂದ್ರ ಕಾರ್ಯಾಲಯ—: ಲಂಡನ್, ಯುನೈಟೆಡ್ ಕಿಂಗ್ಡಮ್ (London, United Kingdom)*
*ಪ್ರಸ್ತುತ ಮುಖ್ಯಸ್ಥರು:— ಇಪ್ತಿಮಿಯೋಸ್ ಇ. ಮಿಟ್ರೊಪೊಲಸ್ (Efthimios E. Mitropoulos)*
*ಸ್ಥಾಪನೆಗೊಂಡಿದ್ದು :— 1948*
*🌓 ILO :— ಅಂತಾರಾಷ್ಟ್ರೀಯ ಕಾರ್ಮಿಕ ಸಂಘಟನೆ.*
*ವಿಸ್ತೃತ ರೂಪ:— International Labour Organization*
*ಕೇಂದ್ರ ಕಾರ್ಯಾಲಯ:— ಜಿನೀವಾ, ಸ್ವಿಜರ್ಲ್ಯಾಂಡ್ (Geneva, Switzerland)*
*ಪ್ರಸ್ತುತ ಮುಖ್ಯಸ್ಥರು:— ಜುವಾನ್ ಸೊಮಾವಿಯಾ (Juan Somavía)*
*ಸ್ಥಾಪನೆಗೊಂಡಿದ್ದು :— 1946*
*🌓 IFAD :— ಅಂತಾರಾಷ್ಟ್ರೀಯ ಕೃಷಿ ಅಭಿವೃದ್ಧಿ ನಿಧಿ.*
*ವಿಸ್ತೃತ ರೂಪ:— International Fund for Agricultural Development*
*ಕೇಂದ್ರ ಕಾರ್ಯಾಲಯ:— ರೋಮ್ ನ ಇಟಲಿ (Rome, Italy)*
*ಪ್ರಸ್ತುತ ಮುಖ್ಯಸ್ಥರು:— ಕನಯೊ ಎಫ್. ವಾಂಝ್ (Kanayo F. Nwanze)*
*ಸ್ಥಾಪನೆಗೊಂಡಿದ್ದು :— 1977*
*🌓 IAEA :— ಅಂತಾರಾಷ್ಟ್ರೀಯ ಅಣುಶಕ್ತಿ ಆಯೋಗ.*
*ವಿಸ್ತೃತ ರೂಪ:— International Atomic Energy Agency*
*ಕೇಂದ್ರ ಕಾರ್ಯಾಲಯ:— ಆಸ್ಟ್ರಿಯಾದ ವಿಯೆನ್ನಾ (Vienna, Austria)*
*ಪ್ರಸ್ತುತ ಮುಖ್ಯಸ್ಥರು:— ಮೊಹಮದ್ ಎಲ್ಬರಾಡೇ (Mohamed ElBaradei)*
*ಸ್ಥಾಪನೆಗೊಂಡಿದ್ದು :— 1957 ರಲ್ಲ*
*🌓FAO :— ಆಹಾರ ಮತ್ತು ಕೃಷಿ ಸಂಸ್ಥೆ*
*ವಿಸ್ತೃತ ರೂಪ :— Food and Agriculture Organization.*
*ಕೇಂದ್ರ ಕಾರ್ಯಾಲಯ:— ರೋಮ್ ನ ಇಟಲಿ (Rome, Italy)*
*ಪ್ರಸ್ತುತ ಮುಖ್ಯಸ್ಥರು:— ಜಾಕ್ಯೂಸ್ ಡಿಯೋಫ್ (Jacques Diouf)*
*ಸ್ಥಾಪನೆಗೊಂಡಿದ್ದು :— 1945 ರಲ್ಲಿ*

ಬುಧವಾರ, ಮೇ 31, 2017

ಬಹಮನಿ, ಕಲಚೂರಿ, ವಿಜಯನಗರದ ಸಾಮ್ರಾಜ್ಯಗಳ ಮಾಹಿತಿ


ಬಹಮನಿ ಸಾಮ್ರಾಜ್ಯ

1. ಬಹಮನಿ ಸಾಮ್ರಾಜ್ಯ ಕಾಲ - ಕ್ರಿ.ಶ.1347 – 1527
2. ಕರ್ನಾಟಕದಲ್ಲಿ ಸ್ಥಾಪಿತವಾದ ಮೊದಲ ಮುಸ್ಲಿಂ ಸಾಮ್ರಾಜ್ಯ - ಬಹಮನಿ ಸಾಮ್ರಾಜ್ಯ
3. ಸ್ಥಾಪಕ - ಅಲ್ಲಾವುದ್ದೀನ್ ಹಸನ್ ಗಂಗೂ ಮತ್ತೊಂದು ಹೆಸರು - ಜಾಫರ್ ಖಾನ್
4. ಬಹಮನಿ ಸಾಮ್ರಾಜ್ಯ ಸ್ಥಾಪನೆ - 1347 ಆಗಸ್ಟ್ 3
5. ಬಹಮನಿ ಸಾಮ್ರಾಜ್ಯ ಆರಂಭದ ರಾಜಧಾನಿ - ಗುಲ್ಬರ್ಗ
6. ಗುಲ್ಬರ್ಗದ ಪ್ರಾಚೀನ ಹೆಸರು - ಅಹ್ ಸಾನಾಬಾದ್
7. ನಂತರದ ರಾಜಧಾನಿ - ಬೀದರ್
8. ಸ್ಮಾರಕ ತಯಾರಿಸಲು ಬಳಸಿದ ಶಿಲ್ಪಿಗಳು - ಪರ್ಶಿಯಾದವರು
ಆಧಾರಗಳು
9. ತಾರಿಕ್ - ಏ - ಪೆರಿಸ್ತಾ - ಫೆರಿಸ್ತಾ
10. ಬಹರಾಮ್ - ಇ - ಮಾಸಿರ್ - ತಬತಬ
11. ಫುತ್ - ಉಸ್ - ಸಲಾತಿನ್ - ಇಸಾಮಿ
12. ತಬಕಾತ್ - ಇ - ಅತ್ತರಿ - ನಿಜಾಮುದ್ದೀನ್ ತಬಾಕಾತ್
13. ತಾಜ್ - ಕೀಸರ್ - ಉಲ್ ಮುಲ್ಕ್ - ಪೀರೋಜ್
14. ಮಾನಿಜರ್ - ಉಲ್ - ಇನ್ಪಾ - ಮಹಮ್ಮದ್ ಗವಾನ್
15. ನಿಕೆಟಿನ್ - ( ರಷ್ಯಾದ ಪ್ರವಾಸಿ ) ಬರವಣಿಗೆಗಳು

ರಾಜಕೀಯ ಇತಿಹಾಸ
16. ಅಲ್ಲಾವುದ್ದಿನ್ ಹಸನ್ ಗಂಗೂ ಬಹಮನ್ ಷಾ ( 1347 – 1358 ) ಬಹಮನಿ ವಂಶದ ಸ್ಥಾಪಕ .
17. ಎರಡನೇ ಅಲೆಗ್ಸಾಂಡರ್ ಎಂದು ನಾಣ್ಯ ಟಂಕಿಸಿದವನು - ಅಲ್ಲಾವುದ್ದಿನ್ ಹಸನ್ ಗಂಗೂ ಬಹಮನ್ ಷಾ
18. ಅಲ್ಲಾವುದ್ದಿನ್ ಹಸನ್ ಗಂಗೂ ಬಹಮನ್ ಷಾ ಈತನ ಆಸ್ಥಾನ ಕವಿ - ಇಸಾಮಿ
19. ಒಂದನೇ ಮಹಮ್ಮದ್ ಷಾ ( 1358 – 1375 ) ಈತ ಹಸನ್ ಗಂಗೂನ ಮಗ
20. ಒಂದನೇ ಮಹಮ್ಮದ್ ಷಾ ಈತ ಗುಲ್ಬರ್ಗದಲ್ಲಿ ಅತಿದೊಡ್ಡ “ ಜೂಮ್ಮ ಮಸೀದಿ ” ಯನ್ನು ನಿರ್ಮೀಸಿದ
21. ಒಂದನೇ ಮಹಮ್ಮದ್ ಷಾ ಈತನ ಆಸ್ಥಾನ ಕವಿಗಳು - ಜೈನುದ್ದೀನ್ ಪೌಲತಾಬಾದಿ ಹಾಗೂ ನಿಜಾಮುದ್ದೀನ್ ಬರಾನಿ
22. ಎರಡನೇ ಮಹಮ್ಮದ ಷಾ - ( 1377 – 1397 ) ಈತ ಅರಿಸ್ಟಾಟಲ್ ಎಂಬ ನಾಮದ್ಯೇಯಕ್ಕೆ ಪಾತ್ರನಾದನು
23. ಎರಡನೇ ಮಹಮ್ಮದ ಷಾ ಈತನ ಆಸ್ಥಾನದ ಕವಿ - ಹಫೀಜ್
24. ಫೀರೋಜ್ ಷಾ ( 1397 – 1422 ) ಬಹಮನಿ ಸುಲ್ತಾನದಲ್ಲೆ ಅತ್ಯಂತ ಶ್ರೇಷ್ಠ ಸುಲ್ತಾನ್
25. ಫೀರೋಜ್ ಷಾ ಪರ್ತಾ ಎಂಬುವವಳನ್ನ ಮೋಹಸಿ ವಿವಾಹವಾದನು
26. ಫೀರೋಜ್ ಷಾ ಹಸನ್ ಗಿಲಾನಿ ಈತನ ಆಸ್ಥಾನದ ಶ್ರೇಷ್ಠ ಕವಿ
27. ಫೀರೋಜ್ ಷಾ ಈತನ ಮುಖಂಡತ್ವದಲ್ಲಿ ದೌಲತಾ ಬಾದಿನಲ್ಲಿ ಒಂದು ಖಗೋಳ ವೀಕ್ಷಾಣಾಲಯಾವನ್ನ ತೆರೆಯಲಾಯಿತು
28. ಫೀರೋಜ್ ಷಾ ಈತ ಷಾನು - ಗುಲ್ಬರ್ಗದಲ್ಲಿ ಒಂದು ಸುಂದರ ಜುಮ್ಮಾ ಮಸೀದಿ ಯನ್ನು ನಿರ್ಮೀಸಿದನು
29. ಫೀರೋಜ್ ಷಾ ಈತ ಭೀಮಾ ನದಿಯ ದಂಡೆಯ ಮೇಲೆ ತನ್ನ ಹೆಸರಿನಲ್ಲಿ ಫೀರೋಜ್ ಬಾದ್ ನಗರವನ್ನು ನಿರ್ಮಿಸಿದನು
30. 1 ನೇ ಅಹಮದ್ ಷಾ - ( 1422 – 1436 ) 14422 ರಲ್ಲಿ ರಾಜಧಾನಿಯನ್ನು ಗುಲ್ಬರ್ಗದಿಂದ ಬೀದರ್ ಗೆ ಬದಲಾಯಿಸಿದನು
31. 1 ನೇ ಅಹಮದ್ ಷಾ ಈತನನ್ನ ಜನರು ವಾಲಿ ಎಂದು ಕರೆಯುತ್ತದ್ದರು
32. 1 ನೇ ಅಹಮದ್ ಷಾ ಇವನ ಆಸ್ಥಾನದಲ್ಲಿ ಪರ್ಶಿಯನ್ ಕವಿ - ಅಜರಿ
33. ಈತನ ಕೃತಿ - ಬಹಮನ್ ನಾಮ
34. 2 ನೇ ಅಲ್ಲಾವುದ್ದೀನ್ ಅಹಮ್ಮದ್ ಷಾ ( 1436 1458 ) ಈತ ಬೀದರ್ ನಲ್ಲಿ ಒಂದು ವೈದ್ಯಲಾಯವನ್ನು ಸ್ಥಾಪಿಸಿದ
35. 2 ನೇ ಅಲ್ಲಾವುದ್ದೀನ್ ಅಹಮ್ಮದ್ ಷಾ ಈತ ಜಲೀಂ ( ದಬ್ಬಾಳಿಕೆ ರಾಜ ) ಎಂದೇ ಹೆಸರಾಗಿದ್ದ .
36. ಮಹಮ್ಮದ್ ಗವಾನ್ ( 1411 – 1481 ) 1411 ರಲ್ಲಿ ಪರ್ಶಿಯಾದ “ ಗವಾನ್ ” ( ಗಿಲಾನ್ ಗ್ರಾಮ ) ದಲ್ಲಿ ಜನಿಸಿದನು.
37. ಮಹಮ್ಮದ್ ಗವಾನ್ ಈತನ ಬಿರುದು - ಖ್ವಾಜಾ - ಇ - ಜಹಾನ್
38. ಮಹಮ್ಮದ್ ಗವಾನ್ ಈತ ಒರಿಸ್ಸಾದ ದಂಗೆಯನ್ನು ಅಡಗಿಸಿ ಅಲ್ಲಿನ ಹಿಂದೂ ದೇವಾಲಯವನ್ನು ದ್ವಂಸ ಮಾಡಿ “ ಘಾಜಿ ” ಎಂಬ ಬಿರುದನ್ನ ಪಡೆದುಕೊಂಡನು
39. ಮಹಮ್ಮದ್ ಗವಾನ್ ಈತನ ಮತ್ತೊಂದು ಬಿರುದು - ಲಷ್ಕರೆ
40. ಮಹಮ್ಮದ್ ಗವಾನ್ ಈತ ಬೀದರ್ ನಲ್ಲಿ 1472 ರಲ್ಲಿ “ ಗವಾನ್ ಮದರಸಾ ” ಎಂಬ ಕಾಲೇಜನ್ನ ನಿರ್ಮಿಸಿದನು
41. ಮಹಮ್ಮದ್ ಗವಾನ್ ಈತ ರಿಯಾಜ್ - ಉನ್ - ಇನ್ಫಾ , ಮಾನುಜರುಲ್ ಇನ್ಫಾ ಮತ್ತು ದಿವಾನ್ - ಇ- ಲಷ್ಕರ್ ಎಂಬ ಕೃತಿಯನ್ನು ರಚಿಸಿದನು
42. ಏಪ್ರಿಲ್ 15 . 1481 ರಲ್ಲಿ ಗವಾನನಿಗೆ ಗಲ್ಲು ಶಿಕ್ಷೆಯಾಯಿತು

ಬಹಮನಿ ಸುಲ್ತಾನರ ಕೊಡುಗೆಗಳು
43. ಕೇಂದ್ರದಲ್ಲಿ ಸುಲ್ತಾನನೇ ಸರ್ವೋಚ್ಚ ಅಧಿಕಾರಿ -
44. ಸುಲ್ತಾನನ್ನ “ ಭೂಮಿಯ ಮೇಲಿನ ದೇವರ ಅಧಿಕಾರಿ ’ ಎಂದು ನಂಬಲಾಗಿತ್ತು .

ಮಂತ್ರಿ ಮಂಡಲ
45. ವಕೀಲ್ - ಉಸ್ - ಸುಲ್ತಾನ್ - ಪ್ರಧಾನ ಮಂತ್ರಿ
46. ಅಮೀರ್ - ಇ- ಜುಮ್ಲಾ - ಅರ್ಥ ಸಚಿವ
47. ವಜೀರ್ - ಇ- ಅಶ್ರಫ್ - ವಿದೇಶಾಂಗ ಮಂತ್ರಿ
48. ಅಮೀರ್ - ಉಲ್ - ಉಮ್ರಾ - ಮಹಾದಂಡ ನಾಯಕ
49. ವಜೀರ್ - ಇ - ಕುಲ್ - - ಪೇಶ್ವೆ ಮಂತ್ರಿ
50. ಖಾಜಿ - ನ್ಯಾಯಾಧೀಶ
51. ಸದರ್ ಇ - ಜಹಾನ್ - ನ್ಯಾಯಾಡಳಿತ ಮಂತ್ರಿ
52. ನಜೀರ್ - ಮುಖ್ಯ ಲೆಕ್ಕಾಧಿಕಾರಿ
53. ಕೊತ್ವಾಲ - ನರ ರಕ್ಷಕ
54. ಪ್ರಾಂತ್ಯದ ಹೆಸರು - ತರಫ್
55. ಸರಕಾರ - ಜಿಲ್ಲೆ
56. ರಗಣ - ತಾಲ್ಲೂಕ್
57. ಅನಿಫ್ - ಜಿಲ್ಲೆಯ ಅಧಿಕಾರಿ
58. ದೇಸಾಯಿ - ಪರಗಣಗಳ ಅಧಿಕಾರಿ
59. ಮುಕ್ಕಣಗೌಡ - ಗ್ರಾಮದ ಅಧಿಕಾರಿ
60. ಮಕ್ ದಾಬ್ - ಶಿಕ್ಷಣ ಕೇಂದ್ರ
61. ಫಿಕಾರ್ ನಾಮಾ ಕೃತಿಯ ಕರ್ತೃ - ಬಂದೇ ನವಾಜ್
62. 1 ನೇ ಮಹಮ್ಮದ್ ಷಾ ನಿರ್ಮಿಸಿದ ಜುಮ್ಮಾ ಮಸೀದಿಯ ಶಿಲ್ಪಿ - ರಫಿ ಕ್ಷಾಜಿನ್

Extra Tips
63. ಇವರ ಕಾಲದ ಶೈಲಿಯನ್ನು “ ಸಾರ್ಸನಿಕ್ ಶೈಲಿ ” ಎಂದು ಕರೆಯಲಾಗಿದೆ
64. ಗುಲ್ಬರ್ಗದ ಕೋಟೆಯನ್ನು ಮೊದಲೇ ಅಲ್ಲಾವುದ್ದೀನನ ಕಾಲದಲ್ಲಿಲ ನಿರ್ಮಿಸಲಾಯಿತು
65. ಗುಲ್ಬರ್ಗಾದ ಸಮಾಧಿಗಳಲ್ಲಿ ಪ್ರಸಿದ್ದವಾದುದು - ಬಂದೇ ನವಾಜ್ ದರ್ಗಾ
66. ಮಹಮ್ಮದ್ ಗವಾನ್ ನು 1472 ರಲ್ಲಿ ನಿರ್ಮಿಸಿದ ಮದ್ರಸಾ ಕಾಲೇಜು ಭಾರತೀಯ ಮತ್ತು ಸರ್ಸಾನಿಕ್ ಶೈಲಿಯ ಸಂಗಮವಾಗಿದೆ
67. ಮಹಮ್ಮದ್ ಗವಾನ್ ನ ಕಾಲದಲ್ಲಿ ಆರಂಭಿಸಿಲಾದ ಮಿಶ್ರ ಲೋಹದ ಕಲೆ - ಬೀದರಿ ಕಲೆ
68. ಬೀದರಿ ಕಲೆಯಲ್ಲಿ ಅನುಸರಿಸಲಾದ ಬೆಳ್ಳಿಯ ರೇಖೆಗಳನ್ನು - ಟೆಹ್ನಿಷಾನ್ ಎಂದು ಕರೆಯುವರು
69. ಬೀದರಿ ಕಲೆಯಲ್ಲಿ ಉಬ್ಬಾದ ರೇಖೆಗಳನ್ನು - ಜರ್ನಿಪಾನ್ ಎಂದು ಕರೆಯುವರು
70. ಅಮೀರ್ ಉಲ್ ಉಮ್ರಾ - ಕೇಂದ್ರ ಸೇನಾಪತಿ
71. ಲಷ್ಕರ್ ಸೇನಾ ವಸತಿ ಪ್ರದೇಶಗಳನ್ನ ನೋಡುತ್ತಿದವನು
72. ತೋಶಕ್ ಖಾನ್ - ಶಸ್ತ್ರಾಸ್ತ್ರ ಮತ್ತು ಸಮವಸ್ತ್ರ ಕಛೇರಿ
73. ಫಿಕಾರ್ ಘರ್ - ಸುಲ್ತಾನನ ಬೇಟೆ ಸಲಕರಣಿ ಒದಗಿಸುವ

ಕಛೇರಿ
74. ಮೀರ್ ಭಕ್ಷಿ ಮತ್ತು ಸದ್ರುಷಾ ಶರೀಫ್

- ಅರಬ್ಬಿ ಭಾಷೆಯ ಪಂಡಿತರು
75. ಅಲಿಮುದ್ದೀನ್ ಮತ್ತು ಹಕೀಂ ನಾಸಿರುದ್ದೀನ್ - ಹೆಸರಾಂತ ಆಸ್ಥಾನ ವೈದ್ಯರು
76. ಇಬ್ರಾಹಿಂ ನಾಮ ಕೃತಿಯ ಕ್ರತೃ - ಅಬ್ದುಲ್
77. ಹಸನ್ ಗಂಗು ಗುಲ್ಬರ್ಗಕ್ಕೆ ಇಟ್ಟ ಹೆಸರು - ಹಸನ್ ಬಾದ್
78. ದಕ್ಷಿಣ ಭಾರತದಲ್ಲಿ ಮೊದಲು ಸಂಘಟಿತ ಆಡಳಿತ ಸ್ಥಾಪಿಸಿದ ಮುಸ್ಲಿಂ - ಮಹಮ್ಮದ್ ಬಿನ್ ತುಘಲಕ್
79. ಹಸನ್ ಗಂಗು - ಪರ್ಶಿಯಾದವನು
80. ಹಸನ್ ಗಂಗು - ಮಹಮ್ಮದ್ ಬಿನ್ ತುಘಲಕ್ ನ ಅಮೀರನಾಗಿದ್ದ
81. ಮಹಮ್ಮದ್ ಗವಾನ್ ನ ತಂದೆಯ ಹೆಸರು - ಜಲಾಲುದ್ದೀನ್ ಮಹಮ್ಮದ್
82. ಬಹಮನಿ ಸುಲ್ತಾನರ ಪ್ರಮುಖ ವಾಸ್ತುಶಿಲ್ಪ ಕೇಂದ್ರಗಳು - ಬೀದರ್ ಮತ್ತು ಗುಲ್ಬರ್ಗ
83. ಮಹಮ್ಮದ್ ಗವಾನ್ ನ ಮೊದಲ ಹೆಸರು - ಮಹಮ್ಮದ್ ಉದಿನ್ - ಅಹಮ್ಮದ್
84. ಬಹಮನಿ ರಾಜ್ಯದ ಕೊನೆಯ ಸುಲ್ತಾನ - ಕಲೀಮುಲ್ಲ
85. ಬಹಮನಿ ರಾಜ್ಯದಿಂದ ಹೊರಗೆ ಬಂದ ಮೊದಲ ಷಾಹಿ ರಾಜ್ಯ - ಬಿರಾರ್
86. ಬಹಮನಿ ರಾಜ್ಯದಿಂದ ಹೊರಗೆ ಬಂದ ಎರಡನೇ ಷಾಹಿ ರಾಜ್ಯ - ಬಿಜಾಪುರ
87. ಬಹಮನಿ ಸುಲ್ತಾನ ಆಡಳಿತ ಭಾಷೆ - ಪರ್ಶಿಯನ್

ಕಲಚೂರಿಗಳು

1. ಇವರ ಮೂಲ ಪುರುಷ - ಬಿಜ್ಜಳ
2. ಇವನ ಆಸ್ಥಾನದ ಮಂತ್ರಿ - ಬಸವಣ್ಣ
3. ಬಸವಣ್ಣ ನವರನ್ನ ಶಾಸನಗಳಲ್ಲಿ “ ಮಹೇಶ್ವರ ” ಎಂದು ಕರೆಯಲಾಗಿದೆ
4. ಇವರು ಮೂಲತಃ ಬುಂದೇಲ್ ಖಂಡದವರು
5. ಬಿಜ್ಜಳನ ಬಿರುದುಗಳು - ತ್ರಿಭುವನ ಮಲ್ಲ , ಭುಜ ಬಲ ಚಕ್ರವರ್ತಿ , ಕಲಚೂರಿ ಚಕ್ರವರ್ತಿ
6. ಸೋಮೇಶ್ವರ - ಬಿಜ್ಜಳನ ಮೊದಲ ಮಗ
7. ಈತನ ಇನ್ನೋಂದು ಹೆಸರು - ಸೋಮದೇವ
8. ಸೋಮೇಶ್ವರನ ಬಿರುದು - ರಾಯಮುರಾರಿ
9. ಕಲಚೂರಿ ಪದ ಮೂಲತಃ ಬುಂದೇಲ್ ಖಂಡದ “ ಕಲಿಂಜರ್ ” ದಿಂದ ಬಂದಿದೆ
10. ಕಲಚೂರಿಗಳ ಮೂಲ ರಾಜಧಾನಿ - ಕಲಿಂಜರಿ ಪುರ
11. ಕಲಚೂರಿ ಸಾಮ್ರಾಜ್ಯದ ಸ್ಥಾಪಕ - ಎರಡನೇ ಬಿಜ್ಜಳ
12. ಕಲಚೂರಿಗಳ ಲಾಂಛನ - ನಂದಿ ( ವೃಷಭ )
13. ಬಸವೇಶ್ವರರ ಜನ್ಮ ಸ್ಥಳ - ಬಾಗೇವಾಡಿ ಅಥವಾ ಬಸವನ ಬಾಗೇವಾಡಿ
14. ಬಸವೇಶ್ವರರು ಪುನರುತ್ಥಾನಗೊಳಿಸಿದ ಮತ - ವೀರಶೈವ ಧರ್ಮ
15. ಬಸವಣ್ಣನ ಅಂಕಿತ - ಕೂಡಲ ಸಂಗಮದೇವ
16. ಕಲ್ಯಾಣ ಇರುವ ಜಿಲ್ಲೆ - ಇಂದಿನ ಬಿಜಾಪುರ
17. ಬಸವೇಶ್ವರರು ಪ್ರಚುರ ಪಡಿಸಿದ ತತ್ವ - ಶಕ್ತಿ ವಿಶಿಷ್ಟಾದ್ವೈತ
18. ಬಸವಣ್ಣನ ತಂದೆ ತಾಯಿ - ಮಾದರಸ ಮತ್ತು ಮಾದಲಾಂಬಿಕೆ
19. ಅನುಭವ ಮಂಟಪದ ಸ್ಥಾಪಕರು - ಬಸವಣ್ಣ
20. ಕಲ್ಯಾಣಿ ಕಲಚೂರ್ಯರ ವಂಶ - ಹೈಹಯ ವಂಶ , ಇವರು ಮೂಲತಃ ಇತ್ತರ ಭಾರತದವರು
21. ಕಲಚೂರ್ಯರ ಆರಂಭದ ರಾಜಧಾನಿ - ಮಂಗಳವಾಡ
22. ಬಿಜ್ಜಳನ ಸೇನಾ ದಂಡ ನಾಯಕ - ಕಸಪಯ್ಯ
23. ಬಿಜ್ಜಳನನ್ನ ಕೊಂದವರು - ಜಗದೇವದಣ್ಣಾಯಕ ಬೊಮ್ಮರಸ ಮತ್ತು ಮಲ್ಲಿದೇವ
24. ಕಲಚೂರಿಗಳ ಕೊನೆಯ ಅರಸ - ಸಿಂಘಣ

ಕನಕದಾಸರು
Published By : upscgk.com

ಕನಕದಾಸರು 1. ಕನಕದಾಸರು ಹುಟ್ಟಿದ್ದು - ದಾರವಾಡ ಜಿಲ್ಲೆಯ ಬಾಡಾದಲ್ಲಿ
2. ಮಾತಾ ಪಿತೃಗಳು - ಬಚ್ಚಮ ಮತ್ತು ಬೀರಪ್ಪ
3. ಇವರ ಅಂಕಿತ - ಕಾಗಿನೆಲೆ ಆದಿಕೇಶವ
4. ಪ್ರಸಿದ್ದ ಕೃತಿ - ರಾಮ ದ್ಯಾನ ಚರಿತೆ
5. ಸಂಗೀತ ಸಾರಂ ಕೃತಿಯ ಕರ್ತೃ - ವಿದ್ಯಾರಣ್ಯರು
6. ಭಾರತ ಇತಿಹಾಸದಲ್ಲಿ ಕವಯಿತ್ರಿಯೊಬ್ಬಳು ಬರೆದ ಪ್ರಪ್ರಥಮ ಸಂಸ್ಕೃತ ಇತಿಹಾಸ ಕೃತಿ - ಮಥುರಾ ವಿಜಯಂ
7. ವೀರ ಕಂಪಣ್ಣರಾಯ ಚರಿತ ಬರೆದವರು - ಗಂಗಾದೇವಿ
8. ವಿಶ್ವದಲ್ಲಿಯೇ ಅತ್ಯಂತ ದೊಡ್ಡದಾದ ನಂದಿ - ಲೇಪಾಕ್ಷಿಯ ಏಕಶೀಲೆಯ ನಂದಿ
9. ಲೇಪಾಕ್ಷಿಯ ವೀರಭದ್ರ ದೇವಾಲಯದ ಕರ್ತೃ - ವಿರೂಪಣ್ಣ
10. ವಿರೂಪಣ್ಣ ಈತ ಕೃಷ್ಣದೇವರಾಯನ - ಕೋಶಾಧಿಕಾರಿ
11. ಮಹಾಮಂಡಳೇಶ್ವರ - ಪ್ರಾಂತ್ಯಾಧಿಕಾರಿ
12. ಒಡೆಹ ಅಥವಾ ನಾಯಕ - ಇವರ ಬಿರುದು
13. ವೇದಾ ಪ್ರಕಾಶ ಕೃತಿಯ ಕರ್ತೃ - ಸಾಯಣ್ಣ

ಕಲ್ಯಾಣಿ ಚಾಲುಕ್ಯರು

ಇವರು ರಾಷ್ಟ್ರಕೂಟರ ಆಳ್ವಿಕೆಯನ್ನು ಕೊಣೆಗಾಣಿಸಿ ಪ್ರವರ್ಧಮಾನಕ್ಕೆ ಬಂದರು
ಇವರನ್ನು ಪಶ್ಚಿಮದ ಚಾಲುಕ್ಯರೆಂದು ಕರೆಯುವರು
ಇವರ ಪ್ರಾರಂಭದ ರಾಜಧಾನಿ - ಏತಗಿರಿ ಅಥವಾ ಪೊಟ್ಟಳಕೆರೆ ಹಾಗೂ ಮಹಾರಾಷ್ಟ್ರದ ಮಾನ್ಯಖೇಟ
ಇವರ ಲಾಂಛನ - ವರಾಹ
ರಾಷ್ಟ್ರಕೂಟರ ಸಾಮಂತರಾಗಿದ್ದ ಎರನೇ ತೈಲಪ - ಈ ಮನೆತನದ ಮೂಲ ಪುರುಷ
ತೈಲಪ ಎರಡನೇ ಕರ್ಕನನ್ನ ಸೋಲಿಸಿ ಈ ರಜ್ಯಾಕ್ಕೆ ತಳಹದಿ ಹಾಕಿದನು

ಆಧಾರಗಳು
ರನ್ನನ ಅಜಿತನಾಥಪುರಾಣ ಮತ್ತು ಗದಾಯುದ್ಧ
ಮೂರನೇ ಸೋಮೇಶ್ವರನ - ಮಾನಸೋಲ್ಲಾಸ
ಬಿಲ್ಹಣನ - ವಿಕ್ರಮಾಂಕದೇವ ಚರಿತಾ
ವಿಜ್ಞಾನೇಶ್ವರನ - ಮಿತಾಕ್ಷರ

ರಾಜಕೀಯ ಇತಿಹಾಸ
ಎರಡನೇ ತೈಲಪ
ಕಲ್ಯಾಣಿ ಚಾಲುಕ್ಯರ ಸ್ಥಾಪಕ ದೊರೆ
ಮಾನ್ಯಖೇಟ ಈತನ ರಾಜಧಾನಿ
ಕ್ರಿ.ಶ.997 ರಲ್ಲಿ ಮರಣ ಹೊಂದಿದ

ಆರನೇ ವಿಕ್ರಮಾಧಿತ್ಯ
ಕಲ್ಯಾಣಿ ಚಾಲುಕ್ಯರ ಅತ್ಯಂತ ಪ್ರಸಿದ್ದ ದೊರೆ
ಈತ 09/03/1076 ರಲ್ಲಿ “ ಚಾಲುಕ್ಯ ವಿಕ್ರಮ ಶಕೆ ” ಎಂಬ ಹೊಸ ಶಕೆಯನ್ನ ಸ್ಥಾಪಿಸಿದ
ಈತನಿಗೆ ಭವನೈಕ್ಯಮಲ್ಲ ಮತ್ತು ಪೆರ್ಮಾಚಿದೇವ ಎಂಬ ಬಿರುದಿತ್ತು
ಈತನ ದಂಡ ನಾಯಕನ ಹೆಸರು - ಅಚ್ಚುಗಿ
ಕರ್ನಾಟಕ ಸರಸ್ವತಿ ಎಂದು ಪ್ರಸಿದ್ದರಾದವರು - ಚಂದ್ರಲಾದೇವಿ
ಬಳ್ಳಿಗಾಂವೆ ಈತನ ಕಾಲದ ಪ್ರಸಿದ್ದ ವಿಧ್ಯಾ ಕೇಂದ್ರ
ಈತ “ವಿಕ್ರಮ ಪುರ ” ಎಂಬ ನಗರವನ್ನು ನಿರ್ಮಿಸಿದ ನು
“ದೇವಾಲಯಗಳ ಚಕ್ರವರ್ತಿ ” ಎಂದು ಕರೆಯಲಾಗಿರುವ ದೇವಾಲಯ “ ಇಟಗಿಯ ಮಹಾದೇವಾ ದೇವಾಲಯ ” .
“ ಇಟಗಿಯ ಮಹಾದೇವಾ ದೇವಾಲಯ ” ಇದರ ನಿರ್ಮಾತೃ ಈತನ ದಂಡ ನಾಯಕ - ಮಹಾದೇವಾ ( ದಂಡಾದೀಶ )
ಈತ ಕ್ರಿ.ಶ.1026 ರಲ್ಲಿ ಮರಣ ಹೊಂದಿದನು

ಮೂರನೇ ಸೋಮೇಶ್ವರ :-
6 ನೇ ವಿಕ್ರಮಾಧಿತ್ಯನ ನಂತರ ಅಧಿಕಾರಕ್ಕೆ ಬಂದನು
ಮಾನಸೋಲ್ಲಾಸ ಮತ್ತು ವಿಕ್ರಮಾಭ್ಯುದಯ ಈತನ ಕೃತಿಗಳು
ಮಾನಸೋಲ್ಲಾಸದ ಇನ್ನೊಂದು ಹೆಸರು - “ಅಭಿಲಾಷಿತಾರ್ಥ ಚಿಂತಾಮಣಿ ”
“ಅಭಿಲಾಷಿತಾರ್ಥ ಚಿಂತಾಮಣಿ ” ಇದರ ಪ್ರತಿಯನ್ನು ಮೂರು ಭಾಗಗಳಾಗಿ ಪ್ರಕಟಿಸಿದ ಸಂಸ್ಥೆಯ ಹೆಸರು “ ಬರೋಡದ ಗಾಯಕವಾಡ್ ಓರಿಯಂಟಲ್ ಸಂಸ್ಥೆ ”
ಈತನ ಬಿರುದ - “ಸರ್ವಜ್ಞ ಚಕ್ರವರ್ತಿ ”
ಈತನ ಇತರೆ ಬಿರುದುಗಳು - ಭೂಲೋಕಮಲ್ಲ , ತ್ರಿಭುವನ ಮಲ್ಲ
ಕಲ್ಯಾಣಿ ಚಾಲುಕ್ಯರ ಆಡಳಿತ
ಮಂತ್ರಿಗಳ ವಿಧಗಳು - “ ಪ್ರಧಾನ ” ಮತ್ತು “ ಮಹಾಪ್ರಧಾನ ”
ಪ್ರಧಾನ ಮಂತ್ರಿಗೆ ಇರುತ್ತಿದ್ದ ಬಿರುದುಗಳು “ ಚೂಡಾಮಣಿ ” ಮತ್ತು “ ಅಮಾತ್ಯ ಕೇಸರಿ ”
ಸ್ಥಳೀಯ ಆಡಳಿತ ವರ್ಗಗಳು - ಗ್ರಾಮ ಮಹತ್ತರು ಮತ್ತು ರಾಷ್ಠ್ರ ಮಹತ್ತರರು
ಆಡಳಿತದ ಕೊನೆಯ ಘಟಕ - ಗ್ರಾಮ
ಗ್ರಾಮದ ಹಿರಿಯ ಬ್ರಾಹ್ಮಣರನ್ನು “ ಮಹಾಜನ ” ಎಂದು ಕರೆಯುತ್ತಿದ್ದರು .
ವೈಶ್ಯರನ್ನು - ನಬರ ಎಂದು ಕರೆಯುತ್ತಿದ್ದರು
ಇವರ ಆಡಳಿತದಲ್ಲಿದ್ದ ಭೂಕಂದಾಯ ಲೆಕ್ಕವಿಡುತ್ತಿದ್ದ ಮುಖ್ಯಸ್ಥನ ಹೆಸರು - ಕಡಿತವರ್ಗಡೆ
ಸೈನ್ಯದ ಪ್ರಮುಖ ಕೇಂದ್ರ ಕೋಟೆಗಳು
ಕೊಲ್ಲಾಪುರದ ಮಹಾಲಕ್ಷ್ಮಿ ದೇವಾಲಯ - ಶಕ್ತಿ ಪೂಜೆಯ ಕೇಂದ್ರವಾಗಿತ್ತು
ರನ್ನನಿಗೆ ಆಶ್ರಯ ನೀಡಿದವರು - ಸತ್ಯಶ್ರಾಯ ಹಾಗೂ 2 ನೇ ತೈಲಪ
ಇವರ ಕಾಲದಲ್ಲಿದ್ದ ಸುಪ್ರಸಿದ್ದ ಜೈನ ಭಕ್ತೆ - ಅತ್ತಿಮಬ್ಬೆ
ಅತ್ತಿಮಬ್ಬೆಗೆ ಇದ್ದ ಬಿರುದು - ದಾನ ಚಿಂತಾಮಣಿ
ಬಳ್ಳಿಗಾಂವೆ , ಕೋಳಿವಾಡ ಮತ್ತು ಡಂಬಳ - ಮಹಾಯಾನ ಬೌಧ್ಧರ ಕೇಂದ್ರ

ಸಾಹಿತ್ಯ ( ಕನ್ನಡ )
ರನ್ನ - ಗದಾಯುದ್ಧ ಮತ್ತು ಅಜಿತನಾಥಪುರಾಣ ( ಕವಿಚಕ್ರವರ್ತಿ ಬಿರುದು )
ಎರಡನೇ ಚಾವುಂಡರಾಯ - ಲೋಕೋಪಕಾರ
ನಾಗವರ್ಮ - ಕರ್ನಾಟಕ ಕದಂಬರಿ ಮತ್ತು ಛಂದೋಬದಿ
ಚಂದ್ರರಾಜ - ಮದನ ತಿಲಕ
ಶ್ರೀಧರಚಾರ್ಯ - ಜಾತಕ ತಿಲಕ
ಕೀರ್ತಿವರ್ಮ - ಗೋವೈದ್ಯ
ಶಾಂತಿನಾಥ - ಸುಕುಮಾರ ಚರಿತ್ರೆ
ಮಾದವರ್ಮಾಚಾರ್ಯ - ಚಂದ್ರ ಚೂಡ ಮಣಿ
ನಯನ ಸೇನ - ಧರ್ಮಾಮೃತ
ದುರ್ಗಸಿಂಹ - ಪಂಚತಂತ್ರ
ಸಂಸ್ಕೃತ ಸಾಹಿತ್ಯ
ಜಗದೇಕ ಮಲ್ಲನ ಆಸ್ಥಾನ ಕವಿ - ವಾದಿರಾಜ
6 ನೇ ವಿಕ್ರಮಾಧಿತ್ಯನ ಅಶ್ರಿತ ಕವಿ - ಬಿಲ್ಹಣ
ವಾದಿರಾಜ - ಯಶೋಧರ ಚರಿತೆ ಮತ್ತು ಪಾರ್ಶ್ವನಾಥ ಚರಿತೆ
ಬಿಲ್ಹಣ - ವಿಕ್ರಮಾಂಕ ದೇವಚರಿತ
ವಿಜ್ಞಾನೇಶ್ವರ - ಮಿತಾಕ್ಷರ ಸಂಹಿತೆ
ಮೂರನೇ ಸೋಮೇಶ್ವರ - ಮಾನಸೋಲ್ಲಾಸ
ಜಗದೇಕ ಮಲ್ಲನ - ಸಂಗೀತ ಚೂಡಾಮಣಿ

Extra Tips
ಕಲ್ಯಾಣಿ ಚಾಲುಕ್ಯರ ರಾಜಧಾನಿ - ಬೀದರ್ ಜಿಲ್ಲೆಯ ಕಲ್ಯಾಣ
ಸತ್ಯಾಶ್ರಯನನ್ನು ಮಹಾಭಾರತದ ಭೀಮನಿಗೆ ಹೋಲಿಸಿದ ಕವಿ - ರನ್ನ
ಕನ್ನೇಗಾಲ ಕದನ ಸಂಭವಿಸಿದ್ದು - 6ನೇ ವಿಕ್ರಮಾಧಿತ್ಯ / ವಿಷ್ಣುವರ್ಧನ
ನೃತ್ಯವಿಧ್ಯಾದರಿ ಎಂಬ ಬಿರುದನ್ನು ಹೊಂದಿದ್ದವಳು - ಚಂದ್ರಲಾದೇವಿ
ಕನ್ನಡದ ಮೊದಲ ಪಶುವೈಧ್ಯ ಕೃತಿ - ಗೋವೈದ್ಯ ( ಕೀರ್ತಿವರ್ಮ )
ಕನ್ನಡದ ಮೊದಲ ಜೋತಿಷ್ಯ ಶಾಸ್ತ್ರ - ಜಾತಕ ತಿಲಕ ( ಶ್ರೀಧರಚಾರ್ಯ )
3 ನೇ ಸೋಮೇಶ್ವರ ನ ಬಿರುದು - ಭೂಲೋಕಮಲ್ಲ , ಸರ್ವಜ್ಞ ಚಕ್ರವರ್ತಿ ಹಾಗೂ ಸರ್ವಜ್ಞ ಭೂಪ
ಅಭಿನವ ಪಂಪ ಎಂದು ಖ್ಯಾತಿವೆತ್ತವರು - ನಾಗಚಂದ್ರಕವಿ
ಕನ್ನಡದ ಪ್ರಪ್ರಥಮ ಕವಯಿತ್ರಿ - ಕಂತಿ
ಅರಿಕೇಸರಿಯ ಆಸ್ಥಾನದ ಕವಿ - ಪಂಪ
ಸಾಹಸ ಭೀಮ ವಿಜಯ - ರನ್ನ
ಆದಿ ಕವಿ ಪಂಪ - ವಿಕ್ರಮಾರ್ಜುನ ವಿಜಯ ಹಾಗೂ ಆದಿಪುರಾಣ
ಪಂಪ ರಾಮಯಾಣ ಎಂದು ಖ್ಯಾತವಾದ ಕೃತಿ - ನಾಗ ಚಂದ್ರ ಕವಿಯ - ರಾಮಚರಿತಪುರಾಣ
ಎರಡನೇ ತೈಲಪನ ಬಿರುದು - ತ್ರೈಲೋಕ ಮಲ್ಲ
ಎರಡನೇ ತೈಲಪನ ದಂಡ ನಾಯಕ - ಬರ್ಫೆ
6ನೇ ವಿಕ್ರಮಾಧಿತ್ಯನ ದಂಡನಾಯಕ - ದಂಡಾದೀಶ
ಕನ್ನಡ ಮೊದಲ ಕಾಮಸಾಸ್ತ್ರ ಗ್ರಂಥ - ಮದನ ತಿಲಕ (ಚಂದ್ರರಾಜ )
ರನ್ನನಿಗೆ “ಕವಿಚಕ್ರವರ್ತಿ ” ಎಂಬ ಬಿರುದು ನೀಡಿದವರು - 2 ನೇ ತೈಲಪ
ಕಲ್ಯಾಣಿ ಚಾಲುಕ್ಯರ ಕೊನೆಯ ದೊರೆ - 3 ನೇ ತೈಲಪ
ಕಲ್ಯಾಣಿ ಚಾಲುಕ್ಯರ ಆಳ್ವಿಕೆಯನ್ನು ಕೊನೆಗಾಣಿಸಿದವರು - ಕಲಚೂರಿ ಬಿಜ್ಜಳ
ಕಲ್ಯಾಣಿ ಚಾಲುಕ್ಯರ ರಾಜಧಾನಿ - ಬಿದರ್ ಜಿಲ್ಲೆಯ ಬಸವನ ಕಲ್ಯಾಣ
6 ನೇ ವಿಕ್ರಮಾಧಿತ್ಯನ ತಂದೆ ತಾಯಿ - 1 ನೇ ಸೋಮೇಶ್ವರ ಹಾಗೂ ಬಾಚಲಾ ದೇವಿ

ರಾಷ್ಟ್ರಕೂಟರು

ರಾಷ್ಟ್ರಕೂಟರು ಕ್ರಿ.ಶ. 757 ರಲ್ಲಿ ಬಾದಾಮಿ ಚಾಲುಕ್ಯರನ್ನು ಕೊನೆಗಾಣಿಸಿ ಪ್ರವರ್ಧಮಾನಕ್ಕೆ ಬಂದರು
ರಾಷ್ಟ್ರಕೂಟ ಎಂಬ ಪದದ ಅರ್ಥ - ಪ್ರಾದೇಶಿಕ ವಿಭಜನೆಗಳಾದ ರಾಷ್ಟ್ರದ ಮುಖ್ಯಸ್ಥ ರು ಅಥವಾ ರಾಷ್ಟ್ರ ಎಂದರೆ ಪ್ರಾಂತ್ಯ ಹಾಗೂ ಕೂಟ ಎಂದರೆ - ನಾಯಕ ಎಂದರ್ಥ
ರಾಷ್ಟ್ರಕೂಟ ಮನೆತನ ಸ್ಥಾಪಕ - ದಂತಿದುರ್ಗ
ಇವರ ರಾಜಧಾನಿ - ಮಾನ್ಯಖೇಟ
ಮಾನ್ಯಖೇಟ ಪ್ರಸ್ತುತ - ಗುಲ್ಬರ್ಗ ಜಿಲ್ಲೆಯಲ್ಲಿದೆ
ಇವರ ರಾಜ್ಯ ಲಾಂಛನ - ಗರುಡ
ಇವರು ರಾಜ್ಯಬಾರ ಮಾಡಿದ್ದು - 8 ನೇ ಶತಮಾನದಿಂದ 10 ನೇ ಶತಮಾನದವರೆಗೆ

ಆಧಾರಗಳು
ದಂತಿದುರ್ಗನ - ಸಮನ್ ಗಡ್ ಹಾಗೂ ಎಲ್ಲೋರದ ಗುಹಾ ಶಾಸನ
ಒಂದನೇ ಕೃಷ್ಣನ - ಭಾಂಡ್ಕ ಮತ್ತು ತಾಳೇಗಾಂ ಶಾಸನ
ಧೃವನ - ಜೆಟ್ಟಾಯಿ ಶಾಸನ
ಅಮೋಘವರ್ಷನ - ಸಂಜಾನ್ ತಾಮ್ರ ಶಾಸನ ಹಾಗೂ ಕವಿ ರಾಜ ಮಾರ್ಗ
ಪೊನ್ನನ - ಶಾಂತಿ ಪುರಾಣ
ದಂತಿದುರ್ಗನ - ಪಂಚತಂತ್ರ
ತ್ರಿವಿಕ್ರಮನ - ನಳಚಂಪು
ಪಂಪನ - ವಿಕ್ರಾಮಾರ್ಜುನ ವಿಜಯಂ
ಬಿಲ್ಹಣನ - ವಿಕ್ರಮಾಂಕ ದೇವಚರಿತ
ಸುಲೇಮಾನ್ ನ - ಬರವಣಿಗೆಗಳು ಹಾಗೂ ಅಲ್ ಮಸೂದಿ
ಇಬಾನ್ ಹಾನಲ್ ಮತ್ತು ಇಸ್ತಾಬ್ರಿಯವರ ಬರವಣಿಗೆಗಳು

ರಾಷ್ಟ್ರಕೂಟರ ಮೂಲಗಳು
ರಟ್ಟ ರಾಷ್ಟ್ರಕೂಟರ ರಾಥೋಡ್ ಮೊದಲಾದವರ ಪದಗಳಲ್ಲಿ ಕಂಡು ಬರುವ ಸಾಮ್ಯದ ಆಧಾರದ ಮೇಲೆ ರಾಷ್ಟ್ರ ಕೂಟರು ರಜಪೂತರ ಮೂಲದವರೆಂದು ಡಾ//.Pleet ರವರ ಆಭಿಪ್ರಾಯ
ಉತ್ತರಾರ್ಧದ ಕೆಲವು ಶಾಸನಗಳ ಪ್ರಕಾರ ರಾಷ್ಟ್ರಕೂಟರು ಯಮವಂಶದವರು
ಖೇಡ ಮತ್ತು ಮುಲ್ತಾನ್ ತಾಮ್ರ ಶಾಸನದ ಪ್ರಕಾರ ಿವರ ಮೂಲ ನೆಲೆ ಬಿರಾರ್ ನ ಎಲಚಿಪುರ
ಬರ್ನೆಲ್ ಮತ್ತು H .Krishna Shastri ರವರ ಪ್ರಕಾರ ಇವರು ಆಂದ್ರ ರೆಡ್ಡಿ ಜನಾಂಗದವರು
S.D.C.V ವೈದ್ಯರ ಪ್ರಕಾರ - ಇವರು ಮಹಾರಾಷ್ಟ್ರದವರು
ಡಾ//.G.R.Bhoodarkar ರಪ್ರಕಾರ ತುಂಗ ವಂಶದವರು ಹಾಗೂ ತುಂಗ ಮತ್ತ ರಟ್ಟ ಈ ವಂಶದ ಮೂಲ ಪುರುಷರೆಂದು ಕೆಲವು ಶಾಸನ ತಿಳಿಸಿದ .
ಅಲ್ತೇಕರ್ ರ ಪ್ರಕಾರ - ರಾಷ್ಟ್ರ ಕೂಟರು ಬಾದಾಮಿ ಚಾಲುಕ್ಯರ ಸಾಮಂತರಾಗಿದ್ದು ಇಂದಿನ ಗುಲ್ಬರ್ಗ ಜಿಲ್ಲೆಯ ಮಾನ್ಯಖೇಟ ಎಂಬಲ್ಲಿ ಒಂದು ಚಿಕ್ಕ ಸಂಸ್ಥಾನವನ್ನು ಆಳುತ್ತಿದ್ದರು ಕನ್ನಡಿಗರು

ರಾಷ್ಟ್ರಕೂಟರ ರಾಜಕೀಯ ಇತಿಹಾಸ
ಕ್ರಿ.ಶ.757 ರಲ್ಲಿ ಬಾದಾಮಿ ಚಾಲುಕ್ಯರ ಕೊನೆಯ ಅರಸ 2 ನೇ ಕೀರ್ತಿವರ್ಮನನ್ನು ಸೋಲಿಸಿ ದಂತಿದುರ್ಗ ಈ ಸಾಮ್ರಾಜ್ಯಕ್ಕೆ ಅಡಿಪಾಯ ಹಾಕಿದ
ದಂತಿದುರ್ಗ - ಈ ಸಾಮ್ರಾಜ್ಯದ ಮೂಲ ಪುರುಷ
ದಂತಿದುರ್ಗನ ರಾದಧಾನಿ - ಎಲ್ಲೋರಾ
ಈತನ ನಂತರ ಈತನ ಚಿಕ್ಕಪ್ಪ - ಒಂದನೇ ಕೃಷ್ಣ ಅಧಿಕಾರಕ್ಕೆ ಬಂದನು
1 ನೇ ಕೃಷ್ಣ - ಶಿವನ ಆರಾಧಕನಾಗಿದ್ದ .
ಇತಿಹಾಸಕ್ಕೆ 1 ನೇ ಕೃಷ್ಣ ಕೊಡುಗೆ - ಎಲ್ಲೋರದ ಕೈಲೈಸನಾಥ ದೇವಾಲಯ
ಎಲ್ಲೋರದ ಕೈಲೈಸನಾಥ ದೇವಾಲಯಕ್ಕೆ - ಕನ್ನಕೇಶ್ವರ ಎಂಬ ಹೆಸರಿತ್ತು
1ನೇ ಕೃಷ್ಣ ನಂತರ - ಇಮ್ಮಡಿ ಗೋವಿಂದ ಪಟ್ಟಕ್ಕೆ ಬಂದ
ಇಮ್ಮಡಿ ಗೋವಿಂದನ ನಂತರ - ಧೃವನು ಪಟ್ಟಕ್ಕೆ ಬಂದನು

ಧೃವ
ಈತ ಮೊದಲು ಗಂಗರ ವಿರುದ್ದ ಹೋರಾಡಿ ಅವರ ಗಂಗವಾಡಿ ತನ್ನದಾಗಿಸಿದ
ನಂತರ ಕಂಚಿಯ ಪಲ್ಲವ ನಂದಿವರ್ಮನೊಡನೆ ಹೋರಾಡಿ
ನಂತರ ವೆಂಗಿ ಚಾಲುಕ್ಯ ಅರಸ 4 ನೇ ವಿಷ್ಣುವರ್ಧನನೊಡನೆ ಕಾದಾಟ ನಡೆಸಿದ
ಈತನ ಪತ್ನಿ - ಶೀಲಾಮಹಾದೇವಿ ವೆಂಗಿ ಚಾಲುಕ್ಯ ಮನೆತನದವಳು
ಉತ್ತರ ಭಾರತದ ಪ್ರಭುತ್ವಕ್ಕಾಗಿ ನಡೆದ ತ್ರಿರಾಜ ಕದನದಲ್ಲಿ ಸೇರ್ಪಡೆಯಾದ ಮೊದಲು ರಾಷ್ಟ್ರಕೂಟ ದೊರೆ - ಧೃವ
ಧೃವನ ನಂತರ ಈತನ ಮಗ - ಮೂರನೇ ಗೋವಿಂದನ ಅಧಿಕಾರಕ್ಕೆ ಬಂದ

ಮೂರನೇ ಗೋವಿಂದ
ಸ್ತಂಭನ ದಂಗೆಯನ್ನು ಹತ್ತಿಕ್ಕಿದ
ಕಂಚಿಯ ಪಲ್ಲವರೊಡನೆ ಧಾಳಿ ನಡೆಸಿದ
ವೆಂಗಿಯ ವಿರುದ್ದ ದಾಳಿ ನಡೆಸಿದ
ಬಂಗಾಳದ ಧರ್ಮಪಾಲನನ್ನು ಸೋಲಿಸಿದ
ಸಂಯುಕ್ತ ಕೂಟದ ವಿರುದ್ದ ಹೋರಾಟ ನಡೆಸಿದ
ಮೂರನೇ ಗೋವಿಂದ - ವಾದಿಕ ಮತಾವಲಂಬಿಯಾಗಿದ್ದನು
ಲಿಂಗಾನು ಶಾಸನ ಗ್ರಂಥದ ಕರ್ತೃ - ವಾಮನ
ವಾಮನನು ಮೂರನೇ ಗೋವಿಂದನ ಆಸ್ಥಾನವನ್ನು “ಜಗತ್ತುಂಗ ಸಭಾ ” ಎಂದು ಕರೆದಿದ್ದಾನೆ
ಮೂರನೇ ಗೋವಿಂದನ ಬಿರುದುಗಳು - ಜಗತ್ತುಂಗ , ಕೀರ್ತಿನಾರಾಯಣ . ತ್ರಿಭುವನ ಮಲ್ಲ , ಶ್ರೀವಲ್ಲಭ

ಅಮೋಘವರ್ಷ ನೃಪತುಂಗ
ಈತ ರಾಷ್ಟ್ರಕೂಟರ ಅತ್ಯಂತ ಪ್ರಸಿದ್ದ ದೊರೆ

ಆಧಾರಗಳು
ಸಂಜಾನ್ ತಾಮ್ರ ಶಾಸನ
ನೀಲಗುಂದ ತಾಮ್ರ ಶಾಸನ
ಸಿರೂರು ತಾಮ್ರಪಟ ಶಾಸನ
ಕವಿರಾಜ ಮಾರ್ಗ
ಬೆಗುಮ್ರ ತಾಮ್ರಪಟ ಶಾಸನ
ಸುಲೇಮಾನ್ ನ ಬರವಮಿಗೆಗಳು

ಅಮೋಘವರ್ಷನು ಎದುರಿಸಿದ ಸಮಸ್ಸೆಗಳು
ವೆಂಗಿಯ ವಿಜಾಯಧಿತ್ಯನು ರಾಷ್ಟ್ರಕೂಟರ ವಿರುದ್ದ ಸಂಚನ್ನು ನಡೆಸಿದನು
ಗಂಗರು ಮತ್ತ ಪಲ್ಲವರು ಹಿಂದಿನ ಹಗೆಯನ್ನು ಮುಂದುವರಿಸಿದರು
ಗೂರ್ಜರು ಪ್ರತಿಹಾರರು ಗಡಿಯನ್ನು ಆಕ್ರಮಿಸಿದರು
ಸಾಮಂತ ಜೆಟ್ಟಿ ಈತನ ವಿರುದ್ದ ದಂಗೆ ಎದ್ದನು
ಈತನ ನೆಚ್ಚಿನ ದಂಡ ನಾಯಕ - ಬಂಕೇಶ
ಈತ ತನ್ನ ಮಗಳಾದ - ಚಂದ್ರೋಲಬ್ಬೆಯನ್ನು ಗಂಗರ ಬೂತುಗನಿಗೆ ಕೊಟ್ಟು ವಿವಾಹ ಮಾಡಿದನು
ಇವನು ಕ್ರಿ.ಶ.800 ರಲ್ಲಿ - ವಿಂಗವಳ್ಳಿಯ ಯುದ್ಧದಲ್ಲಿ ವಿಜಯಾಧಿತ್ಯನನ್ನು ಸಂಪೂರ್ಣವಾಗಿ ಸೋಲಿಸಿದನು
ಅಮೋಘವರ್ಷನ ಬಿರುದುಗಳು - ನೀತಿ ನಿರಂತರ , ನೃಪತುಂಗ .ಅತಿಶಯದವಳ , ಲಕ್ಷ್ಮೀವಲ್ಲಭ , ಕೀರ್ತಿ ನಾರಾಯಣ ಇತ್ಯಾದಿ ...
ಅಮೋಘವರ್ಷನ ನಿಜವಾದ ಹೆಸರು - ಧೇಯಶರ್ಮ ಅಥವಾ ಶರ್ವ
ಅಮೋಘವರ್ಷನ ಆಸ್ಥಾನಕ್ಕೆ ಭೇಟಿನೀಡಿದ ಅರಬ್ ಯಾತ್ರಿಕ - ಸುಲೇಮಾನ್
ಅಮೋಘವರ್ಷನ ಅದಿಕಾರವಧಿಯಲ್ಲಿ ಬರಗಾಲ ಬಂದಿದದ್ದರಿಂದ - ಕೊಲ್ಲಾಪುರದ ಮಹಾಲಕ್ಷ್ಮೀಗೆ ತನ್ನ ಎಡಗೈ ಬೆರಳನ್ನು ಕತ್ತರಿಸಿ ಸಮರ್ಪಿಸಿದ ( ಸಂಜಾನ್ ದತ್ತಿ ಶಾಸನ )
ಕರ್ನಾಟಕದ ಅಶೋಕ - ಅಮೋಘವರ್ಷ ನೃಪತುಂಗ
ನೃಪತುಂಗನ ಕನ್ನಡ ಕೃತಿ - ಕವಿರಾಜಮಾರ್ಗ
ಅಮೋಘವರ್ಷನೃಪತುಂಗನ ಸಂಸ್ಕೃತ ಕೃತಿ - ಪ್ರಶ್ನೋತ್ತರ ಮಾಲಿಕ
ಅಮೋಗವರ್ಷನ ಗುರುಗಳು - ಜಿನಸೇನಾಚಾರ್ಯ
ಜಿನಸೇನಾಚಾರ್ಯನ ಕೃತಿಗಳು - ಆದಿಪುರಣ , ಪಾಶ್ಟಾಭ್ಯುದಯ , ಜಯದಳ
ಮಾನ್ಯಖೇಟ ಪ್ರಸ್ತುತ - ಹೈದರ್ ಬಾದ್ ಕರ್ನಾಟಕದಲ್ಲಿದೆ
ಬಂಕಾಪುರ ನಗರದ ನಿರ್ಮಾತೃ - ಅಮೋಘವರ್ಷನೃಪತುಂಗ ( ತನ್ನ ದಂಡನಾಯಕ ಬಂಕೇಶನ ಜ್ಞಾಪಕಾರ್ಥವಾಗಿ ಕಟ್ಟಿಸಿದ )
ನೃಪತುಂಗ - ಕ್ರಿ.ಶ.878 ರಲ್ಲಿ ಮರಣ ಹೊಂದಿದ
ಅಮೋಘವರ್ಷನ ನಂತರ ಈತನ ಮಗ - ಎರಡನೇ ಕೃಷ್ಣ ಅಧಿಕಾರಕ್ಕೆ ಬಂದನು
ರಾಷ್ಟ್ರಕೂಟರ ಕೊನೆಯ ಅರಸ - ಎರಡನೇ ಕರ್ಕ

ರಾಷ್ಟ್ರಕೂಟರ ಆಡಳಿತ
ರಾಜ - ಆಡಳಿತದ ಕೇಂದ್ರ ಬಿಂದು
ತುಂಗ ವರ್ಷ , ್ಕಾಲವರ್ಷ , ಶುಭತುಂಗ , ಜಗತ್ತುಂಗ

- ರಾಜರ ಬಿರುದುಗಳು
ರಾಜತ್ವ - ವಂಶ ಪಾರಂಪರ್ಯ

ವಾಗಿತ್ತು
ಮಂತ್ರಿಮಂಡಲ - ರಾಜನಿಗೆ ಆಡಳಿತದಲ್ಲಿ ಸಲಹೆ ನೀಡಲು ಅಸ್ತಿತ್ವದಲ್ಲಿತ್ತು
ಮಂತ್ರಿ ಮಂಡಲದ ಮುಖ್ಯಸ್ಥ - ಪ್ರಧಾನ ಮಂತ್ರಿ
ಮಹಾಸಂಧಿ ವಿಗ್ರಹಿ - ವಿದೇಶಾಂದ ವ್ಯಾವಹಾರಗಳ ಮಂತ್ರಿ
ಅಮಾತ್ಯ - ಕಂದಾಯ ಮಂತ್ರಿ
ಭಂಡಾರಿಕ - ಹಣಕಾಸು ವ್ಯವಾಹಾರಳ ಮಂತ್ರಿ
ಸೇನೆಯ ಮುಖ್ಯ ಕಛೇರಿ - ರಾಜಧಾನಿಯಲ್ಲಿತ್ತು
ಆದಾಯದ ಮೂಲ - ಭೂಕಂದಾಯ
ಉದ್ರಂಗ , ಉಪರಿತ ,ಬಾಗಕರ - ಪ್ರಮುಖ ಕಂದಾಯಗಳು
ಸಾಮಂತರು - ಕಪ್ಪ ಕಾಣಿಕೆ ಕೋಡಬೆಕಾಗಿತ್ತು
ಪ್ತಾಂತ್ಯಾಡಳಿತ - ಪ್ರಾಂತ್ಯ , ಭುಕ್ತಿ , ವಿಷಯ ಹಾಗೂ ಗ್ರಾಮ
ಪ್ರಾಂತ್ಯಗಳನ್ನು - ರಾಷ್ಟ್ರ ಅಥವಾ ಮಂಡಲ ಎಂದು ಕರೆಯಲಾಗುತ್ತಿತ್ತು
ರಾಷ್ಟ್ರಪತಿ - ಪ್ರಾಂತ್ಯದ ಆಡಳಿತದ ಮುಖ್ಯಸ್ಥ
ವಿಷಯಗಳು - ಪ್ರಾಂತ್ಯಗಳನ್ನು ವಿಷಯಗಳಾಗಿ ವಿಭಗಿಸಲ್ಪಟ್ಟತ್ತು
ವಿಷಯದ ಮುಖ್ಯಸ್ಥ - ವಿಷಯಪತಿ
ಭುಕ್ತಿ - ವಿಷಯಗಳನ್ನು ಭುಕ್ತಿಗಳಾಗಿ ವಿಭಾಗಿಸಲಾಗಿತ್ತು
ಬೋಗಪತಿ - ಭುಕ್ತಿಯ ಮುಖ್ಯಸ್ಥ
ಪಟ್ಟಣದ ಆಡಳಿತ - ಪಟ್ಟಣ ಶೆಟ್ಟಿಗಳು ನೋಡಿಕೊಳ್ಳುತ್ತಿದ್ದರು
ಗ್ರಾಮ - ಆಡಳಿತದ ಕೊನೆಯ ಘಟಕ
ಗ್ರಾಮಪತಿ ಅಥವಾ ಪ್ರಭುಗಾವುಂಡ - ಗ್ರಾಮದ ಮುಖ್ಯಸ್ಥ
ಮಹಜನರು - ಗ್ರಾಮ ಸಭೆಯ ಸದಸ್ಯರು

ರಾಷ್ಟ್ರಕೂಟರ ಸಾಮಾಜಿಕ ಜೀವನ
ಸಮಾಜದಲ್ಲಿ ಪಿತೃ ಪ್ರಧಾನ ಕುಟುಂಬ ಅಶ್ತಿತ್ವದಲ್ಲಿತ್ತು
ಕೀಳ್ಗುಂಟೆ ಮತ್ತು ವೇಳಾವಳಿ - ಸೇವಕರು , ಸೈನಿಕರು ,ಸ್ತ್ರೀಯರು ತಮ್ಮ ಮಾನ ಹಾಗೂ ಘನತೆಯ ಹಾಗೂ ಗ್ರಾಮದ ರಕ್ಷಣಿಗಾಗಿ ಮಾಡುತ್ತಿದ್ದ ಬಲಿದಾನ

ರಾಷ್ಟ್ರಕೂಟರ ಆರ್ಥಿಕ ಜೀವನ
ನೇಗಿಲು ವ್ಯವಸಾಯದ ಪ್ರಮುಖ ಉಪಕರಣವಾಗಿದ್ದು ಇದನ್ನು “ಮೇಟಿ” ಎಂದು ಕರೆಯುತ್ತಿದ್ದರು .
ಕೃಷಿ -ಆರ್ಥಿಕ ಜೀವನದ ಬೆನ್ನೇಲುಬಾಗಿತ್ತು .
ಭೂಮಿಯ ವಿಭಾಗಗಳು - ತರಿ , ಖುಷ್ಕಿ
ಆದಾಯದ ಮೂಲ - ಭೂಕಂದಾಯವಾಗಿತ್ತು
ಕಂದಾಯ ವಸೂಲಿ - ಉತ್ತನ್ನದ 1/6 ಭಾಗ
ಪ್ರಮುಖ ವಾಣಿಜ್ಯ ಬೆಳೆ - ಹತ್ತಿಯಾಗಿತ್ತು
ಕೈಗಾರಿಕಾ ಕೇಂದ್ರ - ಗುಜರಾತ್ , ಬಿಹಾರ್ ಹಾಗೂ ತೆಲಂಗಾಣದಲ್ಲಿತ್ತು
ಮಾನ್ಯಖೇಟ - ಆಭರಣದ ಮಾರುಕಟ್ಟೆಯಾಗಿತ್ತು
ವ್ಯಾಪಾರ ಸಂಪರ್ಕ - ಅರಬ್ ರಾಷ್ಟ್ರದೊಂದಿಗೆ
ವಿದೇಶಿ ವ್ಯಾಪಾರ ಕೇಂದ್ರಗಳು - ಕಲ್ಯಾಣ , ಸೋಪಾರ , ಬ್ರೋಚ್. ತೊರಾಣ , ಥಾಣ
ವ್ಯಾಪಾರಿ ವೃತ್ತಿ ಸಂಘ ಹೊಂದಿದ್ದವರು - ವೀರಬಣಜಿಗರು
ಲಕ್ಷ್ಮೇಶ್ವರ - ನೆಯ್ಗೆಕಾರರ ನೆಯ್ಗೆ ಸಂಘ ಹೊಂದಿತ್ತು
ನಾಣ್ಯಗಳು - ದ್ರಮ್ಮ , ಸುವರ್ಣ , ಗದ್ಯಾಣ , ಕಳಂಜು ಹಾಗೂ ಕಾಸು

ರಾಷ್ಟ್ರಕೂಟರ ಸಾಂಸ್ಕೃತಿಕ ಕೊಡುಗೆಗಳು

ಬಂಕಾಪುರ - ರಾಷ್ಟ್ರಕೂಟರ ಪ್ರಸಿದ್ದ ಜೈನಮತದ ಕೇಂದ್ರವಾಗಿತ್ತು
ರಾಷ್ಟ್ರಕೂಟರು - ಸಂಸ್ಕೃತ ಹಾಗೂ ಕನ್ನಡ ಭಾಷೆಯಲ್ಲಿ ಶಿಕ್ಷಣ ನೀಡುತ್ತಿದ್ದರು
ಬಿಜಾಪುರ ಜಿಲ್ಲೆಯ “ಸಾಲೋಟಗಿ ” - ಇವರ ಕಾಲದ ಪ್ರಸಿದ್ದ ವಿದ್ಯಾಕೇಂದ್ರ

ಇವರ ಕಾಲದಲ್ಲಿ ರಚನೆಯಾದ ಸಾಹಿತ್ಯ ಕೃತಿಗಳು
ತ್ರಿವಿಕ್ರಮ - ನಳಚಂಪು
ಹಲಾಯುಧ - ಕವಿರಹಸ್ಯ
ಅಕಲಂಕ - ಅಷ್ಟಸಹಸ್ರಿ
ಅಮೋಘವರ್ಷ - ಪ್ರಶ್ನೋತ್ತರ ಮಾಲಿಕೆ ( ಸಂಸ್ಕೃತ ) ಹಾಗೂ ಕವಿರಾಜಮಾರ್ಗ
ಜಿನಸೇನ - ಆದಿಪುರಾಣ , ಪಾರ್ಶ್ವಭುದಯ ಹಾಗೂ ಜಯದವಳ
ಮಹಾವೀರಾಚಾರ್ಯ - ಗಣಿತ ಸಾರ ಸಂಗ್ರಹ ( ಗಮಿತ ಗ್ರಂಥ )
ಕನ್ನಡದ ಮೊಟ್ಟ ಮೊದಲ ಉಪಲಬ್ದ ಗ್ರಂಥ - ಕವಿರಾಜಮಾರ್ಗ
ಕನ್ನಡದ ಆದಿಕವಿ - ಪಂಪ
ಪಂಪ ಅರಿಕೇಸರಿಯ ಆಸ್ಥಾನ ಕವಿ
ಪಂಪನ ಕೃತಿಗಳು - ವಿಕ್ರಮಾರ್ಜುನ ವಿಜಯ ಹಾಗೂ ಆದಿಪುರಾಣ
ಪೊನ್ನ - ಮೂರನೇ ಕೃಷ್ಣನ ಆಸ್ಥಾನದ ಕವಿ
ಕವಿಚಕ್ರವರ್ತಿ - ಪೊನ್ನನ ಬಿರುದು
ಪೊನ್ನನ ಕೃತಿಗಳು - ಶಾಂತಿಪುರಾಣ , ಭುವನೈಕ್ಯ ರಾಮಭ್ಯುದಯ ಮತ್ತು ಜಿನಾಕ್ಷರ ಮಾಲೆ ( ಎಲ್ಲವೂ ಕನ್ನಡ ಕೃತಿಗಳು )
ಮೂರನೇ ಕೃಷ್ಣ ಪೊನ್ನನಿಗೆ ನೀಡಿದ ಬಿರುದು - ಉಭಯಕವಿ

ಕಲೆ ಮತ್ತು ವಾಸ್ತು ಶಿಲ್ಪ
ಒಂದನೇ ಕೃಷ್ಣ ನಿರ್ಮಿಸಿದ - ಎಲ್ಲೋರಾದ ಕೈಲಾಸನಾಥ ದೇವಾಲಯ ಇವರ ಕಾಲದ ಪ್ರಮುಖ ದೇವಾಲಯ
ಎಲ್ಲೋರಾದ ಕೈಲಾಸ ದೇವಾಲಯದ ಶಿಲ್ಪಿ - ವಿಶ್ವಕರ್ಮ
ಈ ದೇವಾಲಯ ಪ್ರಸ್ತುತ - ಮಹಾರಾಷ್ಟ್ರದ ಔರಂಗಬಾದ್ ಜಿಲ್ಲೆಯಲ್ಲಿದೆ
ಎಲ್ಲೋರಾದ 30 ನೇ ಗುಹೆಯನ್ನು - ಛೋಟಾ ಕೈಲಾಸ ಎಂದು ಕರೆಯಲಾಗಿದೆ
ಎಲಿಫೆಂಟಾ ದೇವಾಲಯ - ಬಾಂಬೆಯ ಬಳಿಯಿದೆ
ಎಲಿಫೇಂಟಾದ ಮೊದಲ ಹೆಸರು - ಗೊರವಪುರಿ ಅಥವಾ ಗೋವಕಪುರಿ
ಈ ದೇವಾಲಯವನ್ನು “ ಎಲಿಫೇಂಟಾ ” ಎಂದ ಕರೆದವರು - ಪೋರ್ಚುಗೀಸರು
ರಾಷ್ಠ್ರಕೂಟರ ಕಾಲವನ್ನು - “ಕಾನೂಜ್ ಸಾಮ್ರಾಜ್ಯ ಕಾಲ ” ಎಂದು ಕರೆಯಲಾಗಿದೆ

Extra Tips
ರಾಷ್ಟ್ರಕೂಟರ ರಾಜ್ಯ ಲಾಂಛನ - ಗರುಡ
ದಂತಿದುರ್ಗನ ತಂದೆಯ ಹೆಸರು - ಇಂದ್ರ
ದಂತಿದುರ್ಗನ ಬಿರುದುಗಳು - ಮಹಾರಾಜಾಧಿ ಪರಮೇಶ್ವರ , ಪೃಥ್ವಿವಲ್ಲಭ
ಒಂದನೇ ಕೃಷ್ಣನ ಬಿರುದುಗಳು - ಶುಭತುಂಗ , ಅಕಾಲವರ್ಷ
ಎರಡನೇ ಗೋವಿಂದನ ಬಿರುದುಗಳು - ಜಗತ್ತುಂಗ , ಪ್ರಭೂತವರ್ಷ ಹಾಗೂ ಪ್ರತಾಪವ ಲೋಕ
ಧೃವನ ಬಿರಿದುಗಳು - ಧಾರವರ್ಷ , ಕಲಿವಲ್ಲಭ ಹಾಗೂ ಶ್ರೀವಲ್ಲಭ
ಮೂರನೇ ಗೋವಿಂದನ ಬಿರುದುಗಳು - ನರೇಂದ್ರ , ಜಗತ್ತುಂಗ , ಪ್ರಭೂತವರ್ಷ ಹಾಗೂ ಜನವಲ್ಲಭ
ರಾಷ್ಟ್ರಕೂಟರ ಶಾಂತಿಪ್ರೀಯ ಅರಸ - ಅಮೋಘವರ್ಷನೃಪತುಂಗ
“ಶಬ್ದಾನು ಶಾಸನ ” ಎಂಬ ಸಂಸ್ಕೃತ ವ್ಯಾಕರಣ ಗ್ರಂಥದ ಕರ್ತೃ - ಶಾಕ್ತಾಯನ
ನೃಪತುಂಗನ ಆಸ್ಥಾನ ಕವಿ - ಶ್ರೀವಿಜಯ
ಮಾನ್ಯಖೇಟ ಎಂಬ ಹೊಸ ರಾಜಧಾನಿಯ ನಿರ್ಮಾತೃ - ಅಮೋಘವರ್ಷ ನೃಪತುಂಗ
ಕಂಚಿಕೊಂಡ ಎಂಬ ಬಿರುದು ಧರಿಸಿದ್ದ ರಾಜ - 3 ನೇ ಕೃಷ್ಣ
ಕನ್ನಡದ ಮೊದಲ ಗಧ್ಯ ಕೃತಿ - ವಡ್ಡರಾಧನೆ
ವಡ್ಡರಾಧನೆಯ ಕರ್ತೃ - ಶಿವಕೋಟಾಚಾರ್ಯ
ಪ್ರಾಚೀನ ಕರ್ನಾಟಕದ ಎಲ್ಲೆಯನ್ನು ತಿಳಿಸುವ ಕನ್ನಡ ಕೃತಿ - ಕವಿರಾಜಮಾರ್ಗ
ಒಂದನೇ ಕೃಷ್ಣನ ಮತ್ತೊಂದು ಹೆಸರು - ಕನ್ನರಸ ಬಿಲ್ಲಹ
ನೃಪತುಂಗನ ಆಸ್ಥಾನಕ್ಕೆ ಬಂದಿದ್ದ ಅರಬ್ ಪ್ರವಾಸಿಗ - ಸುಲೇಮಾನ್
ಕನ್ನಡದ ಅತೀ ಪ್ರಾಚೀನ ಗ್ರಂಥ - ಕವಿರಾಜಮಾರ್ಗ
ಉಭಯ ಕವಿ ಚಕ್ರವರ್ತಿ ಬಿರುದುಳ್ಳ ಕವಿ - ಪೊನ್ನ
ರಾಷ್ಟ್ರಕೂಟರ ಕೊನೆಯ ಅರಸ - 2ನೇ ಕರ್ಕ
ಗಣಿತ ಸಾರಸಂಗ್ರಹದ ಕರ್ತೃ - ಮಹಾವೀರಾಚಾರ್ಯರು
ಕನ್ನಡದ ಮೊದಲ ುಪಲಬ್ದ ಕೃತಿ - ಕವಿರಾಜಮಾರ್ಗ
ಚಾಲುಕ್ಯರ ನಂತರ ಅಧಿಕಾರಕ್ಕೆ ಬಂದವರು - ರಾಷ್ಠ್ರಕೂಟರು

ವಿಜಯ ನಗರ ಸಾಮ್ರಾಜ್ಯ

ಸಂಗಮ ವಂಶ
1. 1 ನೇ ಹರಿಹರ - 1336 – 1356
2. 1 ನೇ ಬುಕ್ಕ - 1356 – 1377
3. 2ನೇ ಹರಿಹರ - 1377 – 1404
4. 1 ನೇ ವಿರುಪಾಕ್ಷಾ - 1404 – 1405
5. 2ನೇ ಬುಕ್ಕ - 1405 – 1406
6. 1 ನೇ ದೇವರಾಯ - 1406 – 1422
7. ರಾಮಚಂದ್ರ - 1422 – 1422
8. ವೀರ ವಿಜಯ - 1422 – 1424
9. 2 ನೇ ದೇವರಾಯ ( ಫ್ರೌಢ ದೇವರಾಯ ) – 1424 – 1446
10. ಮಲ್ಲಿಕಾರ್ಜುನ - 1466 – 1465
11. 2 ನೇ ವಿರೂಪಾಕ್ಷ - 1465 1485
12. ಫ್ರೌಢದೇವರಾಯ - 1485

ಸಾಳ್ವ ವಂಶ
13. ಸಾಳುವ ನರಸಿಂಹ - 1485 – 1491
14. ತಿಮ್ಮ ಭೂಪ - 1491
15. 2 ನೇ ನರಸಿಂಹ - 1491 – 1503

ತುಳುವ ವಂಶ
16. ವೀರ ನರಸಿಂಹ - 1503 – 1505
17. 2 ನೇ ನರಸಿಂಹ - 1050 – 1509
18. ಕೃಷ್ಮದೇವರಾಯ - 1509 – 1529
19. ಅಚ್ಚುತ ರಾಯ - 1529 – 1542
20. 1 ನೇ ವೆಂಕಟರಾಯ - 1542
21. ಸದಾಶಿವರಾಯ - 1542 – 1570

ಸಂಗಮ ವಂಶ
22. ತಿರುಮಲ ರಾಯ -
23. 1 ನೇ ವೆಂಕಟರಾಯ
24. ಶ್ರೀರಂಗರಾಯ
25. 2 ನೇ ವೆಂಕಟಾದ್ರಿ
26. 2 ನೇ ಶ್ರೀರಂಗ
27. ರಾಮದೇವ ( ಮಂತ್ರಿ ವಿಚ್ಚಮ ನಾಯಕ )
28. 3 ನೇ ವೆಂಕಟ ರಾಯ
29. 3 ನೇ ರಂಗರಾಯ ( ಸಾಮ್ರಾಜ್ಯ ರಹಿತ )

ವಿಜಯನಗರಕ್ಕೆ ಬೇಟಿ ನೀಡಿದ ಪ್ರವಾಸಿಗರ ಪಟ್ಟಿ
30. ನಿಕಲೋ ಕೊಂತಿ ಿಟಲಿ ದೇಶ 1420 ರಲ್ಲಿ 1ನೇ ದೇವರಾಯ ಅರಸನ ಕಾಲದಲ್ಲಿ ಬೇಟಿ ನೀಡಿದ
31. ಅಬ್ದುಲ್ ರಜಾಕ್ ಪರ್ಶಿಯಾ ದೇಶ 1443 ರಲ್ಲಿ 2 ನೇ ದೇವರಾಯ ್ರಸನ ಕಾಲದಲ್ಲಿ ಬೇಟಿಯಾದ
32. ನಿಕೆಟಿನ್ ರಷ್ಯದ ಪ್ರವಾಸಿ 1470 ರಲ್ಲಿ ವಿರೂಪಾಕ್ಷ ಅರಸನ ಕಾಲದಲ್ಲಿ ಬೇಟಿ ನೀಡಿದ
33. ಬಾರ್ಬೋಸ ಪೋರ್ಚುಗಲ್ ದೇಶದವ 1514 – 1516 ರಲ್ಲಿ ಕೃಷ್ಣದೇವರಾಯನ ಕಾಲದಲ್ಲಿ ಬೇಟಿ ನೀಡಿದ
34. ಡೋಮಿಂಗೋ ಪಯಾಸ್ ಪೋರ್ಚುಗಲ್ ದೇಶದವ 1520 ರಲ್ಲಿ ಕೃಷ್ಣದೇವರಾಯನ ಕಾಲದಲ್ಲಿ ಬೇಟಿ ನೀಡಿದ
35. ನ್ಯೂನಿಜ್ ಪೋರ್ಚುಗಲ್ ದೇಶದವ 1535 ರಲ್ಲಿ ಅಚ್ಚುತ ರಾಯನ ಕಾಲದಲ್ಲಿ ಬೇಟಿಯಾದ

ವಿಜಯನಗರ ಸಾಮ್ರಾಜ್ಯದ ಹುಟ್ಟಿಗೆ ಕಾರಣವಾದ ಅಂಶ
36. ಹೆದಲಿಯ ಸ್ಲಾನ ಅಲ್ಲಾವುದ್ದೀನ್ ಖಿಲ್ಜಿ ದಕ್ಷಿಣ ಭಾರತದ ರಾಜಕೀಯ ಸಮತೋಲನಕ್ಕೆ ಭಂಗವುಂಟುಮಾಡಿದ್ದು
37. ಕ್ರಿ.ಶ. 1296 ದೆಹಲಿಯ ಸುಲ್ತಾನನಾಗಿ ಅಧಿಕಾರ ಮಹಿಸಿಕೊಂಡ ಮಹಮ್ಮದ್ ಬಿನ್ ತುಘಲಕ್ ದಕ್ಷಿಣ ಭಾರತವನ್ನು ನೇರ ಆಳ್ವಿಕೆಗೆ ಒಳಪಡಿಸಿದ್ದು
38. ಸ್ಥಿರವಾದ ಆಡಳಿತ ಕೊಡುವಲ್ಲಿ ತುಘಲಕ್ ವಿಫಲವಾಗಿದ್ದು
39. ದಕ್ಷಿಣ ಭಾರತದ ಜನತೆಯಲ್ಲಿ ಅಭದ್ರತೆ ವಾತಾವರಣ ಉಂಟಾಗಿದ್ದು .

ರಾಜಕೀಯ ಇತಿಹಾಸ
ವಿಜಯ ನಗರವನ್ನಾಳಿದ ವಂಶಗಳು
40. ಸಂಗಮ ವಂಶ 1336 – 1485 - ರಾಜಧಾನಿ ಹಂಪಿ
41. ಸಾಳುವ ವಂಶ 1485 – 1505 ರಾಜಧಾನಿ ಹಂಪಿ
42. ತುಳುವ ವಂಶ 1505 – 1570 ರಾಜಧಾನಿ ಹಂಪಿ , ಪೆನುಗೊಂಡ
43. ಅರವೀಡು ವಂಶ 1570 – 1646 - ರಾಜಧಾನಿ ಪೆನುಗೊಂಡ ,ವೆಲ್ಲೂರು ಹಾಗೂ ಚಂದ್ರಗಿರಿ
44. ವಿಜಯನಗರ ಸಾಮ್ರಾಜ್ಯಕ್ಕೆ ತಳಹದಿಯನ್ನು ಹಾಕಿದವರು - ಸಂಗಮನ ಮಕ್ಕಳಾದ - ಹರಿಹರ ಮತ್ತು ಬುಕ್ಕರು
45. ವಿಜಯನಗರ ಸಾಮ್ರಾಜ್ಯ ಅಸ್ತಿತ್ವಕ್ಕೆ ಬಂದಿದ್ದು - ಕ್ರಿ.ಶ.1336
46. ಬಹಮನಿ ಸಾಮ್ರಾಜ್ಯ ಅಸ್ತತ್ವಕ್ಕೆ ಬಂದಿದ್ದು - ಕ್ರಿ.ಶ - 1347 ರಲ್ಲಿ
47. ವಿಜಯನಗರ ಅರಸುರುಗಳಲ್ಲಿ ಅತ್ಯಂತ ಸಮರ್ಥನಾದ ಅರಸ - ಕೃಷ್ಮದೇವರಾಯ
48. ಕೃಷ್ಮದೇವರಾಯನ ನಿಷ್ಠಾವಂತ ಪ್ರಧಾನಿ - ತಿಮ್ಮರಸ
49. “ ಯವನ ರಾಜ್ಯ ಪ್ರತಿಷ್ಠಾನ ಚಾರ್ಯ ’ ಎಂಬ ಬಿರುದನ್ನು ಕೃಷ್ಣದೇವರಾಯ ಪಡೆದನು
50. ಕೃಷ್ಣದೇವರಾಯನ ವಿರುದ್ದ ಜಿಹಾದ್ ಯುದ್ದವನ್ನು ಸಾರಿದವನು - ಬೀದರ್ ನ ಬಹಮನಿ ಸುಲ್ತಾನ ಮಹಮ್ಮದ್ ಷಾ ಹಾಗೂ ಬಿಜಾಪುರದ ಸುಲ್ತಾನನಾದ .ಯೂಸುಫ್ ಆದಿಲ್ ಷಾ
51. ಈ ಧರ್ಮಯುದ್ದ ನಡೆದ ಪ್ರದೇಶ - ಕೋವಿಲ್ ಕೊಂಡ
52. ವಿಜಯನಗರ ಕೃಷ್ಣದೇವರಾಯನ ವಿರುದ್ದ ಹೋರಾಡಿದ ಉಮ್ಮತ್ತೂರಿನ ಪಾಳೆಗಾರ - ಗಂಗರಾಜ
53. ಗಂಗರಾಜನಿಂದ ವಶಪಡಿಸಿಕೊಂಡ ಪ್ರದೇಶ - ಶ್ರೀರಂಗ ಪಟ್ಟಣ್ಣ ಹಾಗೂ ಶಿವನ ಸಮುದ್ರ
54. ಕೃಷ್ಣದೇವರಾಯನನ್ನ ಎದುರಿಸಿದ ಒರಿಸ್ಸಾದ ದೊರೆ - ಪ್ರತಾಪರುದ್ರ
55. ಪೊರ್ಚುಗೀಸರೊಡನೆ ಉತ್ತಮವಾಗಿ ಸಂಬಂಧ ಹೊಂದಿದ್ದ ವಿಜಯನಗರದ ದೊರೆ - ಕೃಷ್ಣದೇವರಾಯ
56. ಕೃಷ್ಣದೇವರಾಯ ಸಾವನ್ನು ಕಂಡುಕೊಂಡಿದ್ದು - ಕ್ರಿ.ಶ.1529 ರಲ್ಲಿ
57. ತುಂಗಭದ್ರೆ ನದಿಗೆ ಅಡ್ಡಲಾಗಿ ಅಣಿಕಟ್ಟನ್ನು ನಿರ್ಮಿಸಿದ ವಿಜಯನಗರ ್ರಸ - ಕೃಷ್ಣದೇವರಾಯ
58. ಕೃಷ್ಣದೇವರಾಯ ತೋಡಿಸಿದ ಕಾಲುವೆ - ಕೊಡಗಲ್ ಹಾಗೂ ಬಸವಣ್ಣ ಕಾಲುವೆ
59. ಅಮುಕ್ತ ಮೌಲ್ಯದ ಕೃತಿಯ ಕರ್ತೃ - ಕೃಷ್ಣದೇವರಾಯ
60. ಅಮುಕ್ತ ಮೌಲ್ಯದ ಕತಿಯು - ತೆಲುಗು ಭಾಷೆಯಲ್ಲಿದೆ
61. ಅಮುಕ್ತ ಮೌಲ್ಯದ ಇನ್ನೋಂದು ಹೆಸರು - ವಿಷ್ಣುಚಿತ್ತಿಯಮು
62. ಕೃಷ್ಣದೇವರಾಯ ಆಸ್ಥಾನದಲ್ಲಿದ ಕವಿಗಳಿಗೆ - ಅಷ್ಟದಿಗ್ಗಜರು ಎಂದು ಕರೆಯವುರು
63. ಮನುಚರಿತಮು ಕೃತಿಯ ಕರ್ತೃ - ಅಲ್ಲಸಾನಿ ಪೆದ್ದಣ್ಣ
64. ಆಂದ್ರಾಕವಿತಾ ಪಿತಾಮಹಾ - ಎಂಬ ಬಿರುದನ್ನು ಹೊಂದಿದ್ದ ಕವಿ - ಅಲ್ಲಾಸಾನಿ ಪೆದ್ದಣ್ಣ
65. ನಂದಿ ತಿಮ್ಮಣ್ಮ ನ ಕೃತಿ - ಪಾರಿಜಾತಹರಣಮು
66. ಕೃಷ್ಣದೇವರಾಯ ಕಟ್ಟಿಸಿದ ದೇವಾಲಯ - ಹಜಾರ ರಾಮಸ್ವಾಮಿ ಹಾಗೂ ವಿಠಲ ಸ್ವಾಮಿ ದೇವಲಾಯ
67. ಮಹಾನವಮಿ ದಿಬ್ಬ ಅಥವಾ ಸಿಂಹಾಸನ ವೇದಿಕೆ ್ಥಾವ ವಿಜಯಲಯ ನಿರ್ಮಿಸಿದವರು - ಕೃಷ್ಣದೇವರಾಯ
68. ತನ್ನ ತಾಯಿ ನಾಗಲೆಯ ಸ್ಮರಮಾರ್ಥವಾಗಿ ನಿರ್ಮಿಸಿದ ನಗರ - ನಾಗಲಾಪುರ
69. ಕೃಷ್ಣದೇವರಾಯ ನಂತರ ಅಧಿಕಾರಕ್ಕೆ ಬಂದವರು - ಅಚ್ಚುತರಾಯ
70. ಅಚ್ಚುತನ ವಿರೋಧಿ - ಅಳಿಯ ರಾಮರಾಯ

ಅಳಿಯ ರಾಮರಾಯ
71. ಈತನ ಮಂತ್ರಿ - ತಿರುಮಲ
72. ಈತನ ಸೇನಾಧಿಕಾರಿ - ವೆಂಕಟಾದ್ರಿ
73. ತಾಳಿಕೋಟೆ ಯುದ್ದ ಗತಿಸಿದ ವರ್ಷ - ಕ್ರಿ.ಶ 1565 ರಲ್ಲಿ
74. ಯುದ್ದ ನಡೆದಿದ್ದು - ಷಾಹಿ ಮನೆತನ ಹಾಗೂ ವಿಜಯನಗರಕ್ಕೆ
75. ತಾಳಿಕೋಟೆ ಯುದ್ದದಲ್ಲಿ ವಿಜಯ ನಗರದ ಮನೆತನ ಸೋಲಲು ಕಾರಣ ಪ್ರಮುಖ ಕಾರಣ - ಸೈನಿಕ ಕಾರಣ
76. ತಾಳಿಕೋಟೆ ಯುದ್ದದ ನಂತರ ತಿರುಮಲನು ಪಲಾಯನ ಮಾಡಿದ್ದು - ಚಂದ್ರಗಿರಿಗೆ
77. “ A forgotten Empire ” ಅಥವಾ “ ಮರೆತು ಹೋದ ಸಾಮ್ರಾಜ್ಯ ” ಕೃತಿಯ ಕರ್ತೃ - Robert Seevel
78. ಹಂಪಿಯಲ್ಲಿ ಹುಲಿ ಹಾಗೂ ಇತರ ಕಾಡು ಪ್ರಾಣಿಗಳು ವಾಸಿಸುತ್ತಿದ್ದವು ಎಂಬ ಹೇಳಿಕೆ

ಯನ್ನು ನೀಡಿದವರು - ಿಟಲಿಯ ಪ್ರವಾಸಿ ಫೆಡ್ರಿಕ್
79.

ತುಳುವ ವಂಶದ ಆಳ್ವಿಕೆ ಅಂತ್ಯವಾಗಿದ್ದು - ಕ್ರಿ.ಶ. 1570 ರಲ್ಲಿ ಸದಾಶಿವ ರಾಯನನ್ನ ಕೊಲೆ ಮಾಡುವುದರೊಂದಿಗೆ ಅಂತ್ಯ ಕಂಡಿತು
80. ಹಂಪೆಯು ಈ ನದಿಯ ದಂಡೆಯ ಮೇಲಿದೆ - ತುಂಗಾ ಭದ್ರ
81. ವಿಜಯ ನಗರ ಸಾಮ್ರಾಜ್ಯದ ರಾಜಧಾನಿ - ಹಂಪೆ
82. ಈ ರಾಜ್ಯದ ರಾಜ ಲಾಂಛನ - ವರಾಹ
83. ಹರಿಹರ ಹಾಗೂ ಬುಕ್ಕರು ತಂದೆ ಈ ರಾಜನ ಆಸ್ಥಾನದಲ್ಲಿದ್ದರು - ಕಂಪಲಯರಾಜ ್ಥವಾ ಕಂಪಿಲರಾಯ
84. ಕುಮಾರ ರಾಮನ ಕೃತಿಯ ಕರ್ತೃ - ನಂಜುಂಡ

ಸಂಗಮ ವಂಶ
85. ಸಂಗಮ ವಂಶದ ಮೊದಲ ದೊರೆ - ಹರಿಹರ
86. ಇವನ ರಾಜಧಾನಿ - ಆನೆಗೊಂದಿ
87. ಹರಿಹರನ ಬಿರುದುದಗಳು - ಪೂರ್ವ ಪಶ್ಚಿಮ ಸಮುದ್ರಾದೇಶ್ವರ , ಭಾಷೆಗೆ ತಪ್ಪದ ರಾಯರ ಗಂಡ ರಾಜ ಪರಮೇಶ್ವರ , ಅರಿರಾಯ ವಿಭಾಡ , ಹಾಗೂ ವೇದಾಮಾರ್ಗ ಸ್ಥಾಪನ ಚಾರ್ಯ
88. ಮಥುರಾ ವಿಜಯಂ ಅಥವಾ ಕಂಪಣರಾಯ ವಿಜಯಂ ಕೃತಿಯ ಕ್ರತೃ - ಬುಕ್ಕರಾಯನ ಪತ್ನಿ - ಗಂಗಾಂಬಿಕೆ
89. ವೇದಾಮಾರ್ಗ ಪ್ರವರ್ತಕ ಎಂಬ ಬಿರುದನ್ನು ಹೊಂದಿದ್ದ ದೊರೆ - 1 ನೇ ಬುಕ್ಕರಾಯ
90. ಕರ್ನಾಟಕ ವಿದ್ಯಾ ವಿಲಾಸ ಬಿರುದಿನ ಕರ್ತೃ - 2 ನೇ ಹರಿಹರ
91. 1 ನೇ ದೇವರಾಯನ ಆಸ್ಥಾನಕ್ಕೆ ಾಗಮಿಸಿದ್ದ ವಿದೇಶಿ ಯಾತ್ರಿಕ - ನಿಕೋಲೋ ಕೊಂತಿ
92. 2 ನೇ ದೇವರಾಯನ ಮತ್ತೊಂದು ಬಿರುದು - ಗಜಬೇಂಟೆಕಾರ
93. ಈತನ ಆಸ್ಥಾನಕ್ಕೆ ಪರ್ಶಿಯಾದ ರಾಯಭಾರಿ - ಅಬ್ದುಲ್ ರಜಾಕ್
94. ಈತನ ಆಸ್ಥಾನ ಕವಿ - ಕುಮಾರ ವ್ಯಾಸ

ಸಾಳುವ ವಂಶ
95. ಈ ಸಂತತಿಯ ಸ್ಥಾಪಕ - ಸಾಳುವ ನರಸಿಂಹ

ತುಳುವ ವಂಶ
96. ತುಳುವ ವಂಶವನ್ನು ಆರಂಬಿಸಿದವರು - ವೀರನರಸಿಂಹ
97. ಕೃಷ್ಣದೇವರಾಯನ ಕಾಲವನ್ನು ದಕ್ಷಿಣ ಭಾರತದ ಸಾಂಸ್ಕೃತಿಕ ಸಮ್ಮಿಲನ ಕಾಲ ಎಂದು ಕರೆಯಲಾಗಿದೆ
98. ಕೃಷ್ಣದೇವರಾಯನ ಪ್ರಧಾನ ಮಂತ್ರಿ - ಸಾಳ್ವ ತಿಮ್ಮರಸ
99. ದಕ್ಷಿಣ ಸಮುದ್ರಾಪತಿ ಎಂದು ಬಿರುದು ಹೊಂದಿದವರು - ಕೃಷ್ಣದೇವರಾಯನ
100. ಕೃಷ್ಣದೇವರಾಯನ ದಕ್ಷಿಣ ಸಮುದ್ರಾಪತಿ ಎಂಬ ಬಿರುದನ್ನ ಶ್ರೀಲಂಕಾದ ವೀರಬಾಹುವನ್ನ ಸೋಲಿಸಿ ಪಡೆದನು

ಪ್ರಮುಖ ಕೃತಿಗಳು
101. ಅಮುಕ್ತಮೌಲ್ಯದ ( ತೆಲುಗು ) ಜಾಂಬವತಿ ಕಲ್ಯಾಣ ( ಸಂಸ್ಕೃತ ) - ಇದರ ಕರ್ತೃ - ಕೃಷ್ಣದೇವರಾಯನ
102. ಕರ್ನಾಟಕ ಕೃಷ್ಣರಾಯ ಭಾರತ ಕಥಾ ಮಂಜರಿಯ ಕರ್ತೃ - ತಿಮ್ಮಣ್ಣ ಕವಿ
ಅರವೀಡು ಸಂತತಿ
103. ಈ ಸಂತತಿಯ ಆರಂಬಿಕ ದೊರೆ - ತಿರುಮಲ
104. ರಾಜಧಾನಿ - ಪೆನುಗೊಂಡ
105. ವಿಜಯನಗರ ಕೊನೆಯ ಅರಸ - 3 ನೇ ಶ್ರೀರಂಗರಾಯ
106. ವಿಜಯನಗರ ಸಾಮ್ರಾಜ್ಯ ಪತನಗೊಂಡಿದ್ದು - 1681 ರಲ್ಲಿ

Extra tips
107. ಹಕ್ಕ ಬುಕ್ಕರು - ಓರಂಗಲ್ಲಿನ ಪ್ರತಾಪರುದ್ರನ ಆಸ್ಥಾನದಲ್ಲಿದ್ದರು
108. ವಿದ್ಯಾರಣ್ಯರ ಮೊದಲ ಹೆಸರು - ಮಾಧವ ( ಸಾಮ್ರಾಜ್ಯ ಸ್ಥಾಪಿಸಲು ಮಾರ್ಗದರ್ಶಕರು 1386 ಕಲ್ಲಿ ಕಾಲವಾದರು )
109. ಹರಿಹರ - ಹೊಯ್ಸಳರ ಮಾಂಡಲಿಕ
110. ಬಹಮನಿ ಸಾಮ್ರಾಜ್ಯದ ಸ್ಥಾಪಕ - ಅಲ್ಲಾವುದ್ದಿನ್ ಹಸನ್ ಬಹಮನ್ ಷಾ
111. ತಾಳಿಕೋಟೆ ಕದನದ ಇನ್ನೋಂದು ಹೆಸರು - ರಕ್ಕಸತಂಗಡಿ 1565 ಜನವರಿ 23
112. ವಿಜಯನಗರ ರಾಜಧಾನಿಯ ಈಗಿನ ಹೆಸರು - ಹಂಪೆ
113. ಗದುಗಿನ ನಾರಾಯಣಪ್ಪ ಎಂದು ಕುಮಾರವ್ಯಾಸನನ್ನ ಕರೆಯಲಾಗಿದೆ
114. ವಿಜಯನಗರ ಸಾಮ್ರಾಜ್ಯಕ್ಕೆ ಬಂದಿದ್ದು ಪೋರ್ಚುಗೀಸ್ ರಾಯಭಾರಿ - ಅಲ್ಬುಕರ್ಕ್
115. “ ಹಿಂದೂ ರಾಯ ಸುತ್ತಾಣ ” ಎಂಬುದು ವಿಜಯ ನಗರ ಅರಸರ ವಿಶಿಷ್ಟ ಬಿರುದು .
116. ಈ ರಾಜವಂಶದ ಕುಲದೇವರು - ಶ್ರೀವಿರೂಪಾಕ್ಷ
117. ದಕ್ಷಿಮ ಬಾರತವನ್ನಾಳಿತ ಅರಸರಲ್ಲಿಯೂ ಶ್ರೇಷ್ಠ ಅರಸ - ಕೃಷ್ಣದೇವರಾಯ .
118. ಕೃಷ್ಣದೇವರಾಯನಿಗೆ “ ಕನ್ನಡ ರಾಜ್ಯ ರಮಾರಮಣ ” ಎಂಬ ಬಿರುದಿತ್ತು
119. ವಿಜಯ ನಗರದ ಪ್ರಾಚೀನ ರಾಜಧಾನಿ - ಆನೆಗೊಂಡಿ
120. ವಿಜಯನಗರ ಎಂಬ ಹೆಸರಿನಲ್ಲಿ ಹೊಸ ರಾಜಧಾನಿಯನ್ನು ನಿರ್ಮಿಸಿದ ಕೀರ್ತಿ - ಬುಕ್ಕರಾಯನಿಗೆ ಸಲ್ಲುತ್ತದೆ .
121. ವಿಜಯನಗರ ದೇವಾಲಯಗಳಲ್ಲರುವ ಹೆಬ್ಬಾಗಿಲಿನ ಎತ್ತರವಾದ ಗೋಪುರಗಳನ್ನು - ರಾಯಗೋಪುರ ಎಂದು ಕರೆಯುವರು .
122. ಖುರಾನಿನ ಪ್ರತಿಗಳನ್ನು ತನ್ನ ಆಸ್ಥಾನದ ಎತ್ತರವಾದ ಪೀಠದ ಮೇಲೆ ಇರಿಸಿದ್ದ ಅರಸ - 2ನೇ ದೇವರಾಯ
123. ಹಕ್ಕಬುಕ್ಕರಿಗೆ ಸಾಮ್ರಾಜ್ಯ ಸ್ಥಾಪನೆಗೆ ಅಶೀರ್ವದಿಸಿದ ಗುರುಗಳ ಹೆಸರು - ಕಾಶೀ ವಿಲಾಪ ಕ್ರಿಯಾ ಶಕ್ತಿ ಯತಿಗಳು
124. ವಿಜಯನಗರ ಪ್ರಸ್ತುತ - ಬಳ್ಳಾರಿ ಜಿಲ್ಲೆಯಲ್ಲಿದೆ
125. 2 ನೇ ದೇವರಾಯನ ದಂಡ ನಾಯಕ - ಲಕ್ಕಣ ದಂಡೇಶ
126. ಲಕ್ಕಣ ದಂಡೇಶನ ಕೃತಿ - ಶಿತತ್ವ ಚಿಂತಾಮಣಿ
127. ಕರ್ನಾಟಕ ಭಾರತಿ ಕಥಾಮಂಜರಿಯ ಕರ್ತೃ - ಕುಮಾರವ್ಯಾಸ
128. ಕೃಷ್ಣದೇವರಾಯನ ಮಾತ ಪಿತೃಗಳು - ನರಸನಾಯಕ ಹಾಗೂ ನಾಗಲಾಂಬಿಕೆ
129. ತುಳುವ ವಂಶದ ಕೊನೆಯ ಅರಸ - ಸದಾಶಿವರಾಯ
130. ಅರವೀಡು ಸಂತತಿಯ ಕೊನೆಯ ಅರಸ - 3 ನೇ ಶ್ರೀರಂಗ

ವಿಜಯ ನಗರದ ಆಡಳಿತ
131. ವಿಜಯನಗರದ ಪ್ರಾಂತ್ಯಧಿಕಾರಿಗಳಿಗೆ ಇದ್ದ ಪದನಾಮ - ನಾಯಕರ್
132. ಗ್ರಾಮ ಸಭೆಯ ಆಡಳಿತ - ಆಯಗಾರರು
133. ವಿಜಯನಗರ ಅರಸರು ದೇವಾಲಯಗಳ ನಿರ್ಮಾಣಕ್ಕೆ ಹೆಚ್ಚಾಗಿ “ ಬೆಮಚುಕಲ್ಲು ” ಬಳಸಿದ್ದಾರೆ
134. ವಿಜಯನಗರ ಸಾಮ್ರಾಜ್ಯದಲ್ಲಿ ವಿವಿಧ ಇಲಾಖೆಯ ಮುಖ್ಯಸ್ಥನನ್ನು - ಸಂಪ್ರತಿ ಎಂದು ಕರೆಯುತ್ತಿದ್ದರು
135. ವಿಜಯ ನಗರ ಸಾಮ್ರಾಜ್ಯದ ನಾಣ್ಯಗಳು - ಹೊನ್ನು , ಪಗೋಡ , ಗದ್ಯಾಣ , ಹಗ , ವೀಸ , ಕಾಸು, ಮತ್ತು ಜೀತಲ್
136. ದಸರಾ - ಇವರ ರಾಷ್ಟೀಯ ಹಬ್ಬಲಾಗಿತ್ತು
137. ವಿಜಯನಗರ ಅರಸರ ಸಾಹಿತ್ಯಕ ಪ್ರಗತಿಯನ್ನು - “ classical Age ” ಎಂದು ಕರೆಯುವರು
138. ಜೈಮಿನಿ ಭಾರತ ಕೃತಿಯ ಕರ್ತೃ - ಲಕ್ಷ್ಮೀಶ
139. ತೊರವೆ ರಾಮಾಯಣದ ಕರ್ತೃ - ನರಹರಿ
140. ಮೊಹಿನಿ ತರಂಗಿನಿ ಯ ಕರ್ತೃ - ಕನಕದಾಸ
141. ಶೈವರ ಅಜಂತಾ - ಎಂದು ಕರೆಯಲ್ಪಡುವ ದೇವಾಲಯ - ಲೇಪಾಕ್ಷಿ
142. ಕರ್ನಾಟಕ ಸಂಗೀತದ ಪಿತಾಮಹಾ - ಪುರಂದರದಾಸರು
143. ವಿಜಯನಗರದ ಪ್ರಾಂತಿಯ ಆಡಳಿತದ ವಿಬಾಗಗಳು - ಮಂಡಲ ಮತ್ತು ಅಮರ ನಾಯಕ
144. ಮಹಾನಾಡು ಪ್ರಭು - ಜಿಲ್ಲಾಧಿಕಾರಿ
145. ಪಟ್ಟಣದ ಮುಖ್ಯಸ್ಥ - ಪಟ್ಟಣ ಸ್ವಾಮಿ
146. ಆಯಗಾರರು - ಗ್ರಾಮದ ಸೇವಕ
147. ಗ್ರಾಮದ ಮುಖಂಡ - ಗೌಡ ಅಥಾವ ರೆಡ್ಡಿ
148. ತಳಾರಿ - ಪೊಲೀಸ್ ಕಾರ್ಯವನ್ನು ನಿರ್ವಹಿಸುತ್ತಿದ್ದ ವ್ಯಕ್ತಿ
149. ಅಗ್ರಹಾರದ ಆಡಳಿತವನ್ನು ನೋಡಿಕೊಳ್ಳುವವರು - ಮಹಾಜನ ಸಭೆ
150. ರಾಯರೇಖಾ ಪದ್ದತಿ - ಭೂಮಿಯನ್ನ ಅಳತೆ ಮಾಡುವ ಪದ್ದತಿ
151.

ಕ್ರಿಸ್ತ ಪುರಾಣ ಕೃತಿಯ ಕರ್ತೃ - ಥಾಮಸ್ ಸ್ಟೀಫನ್

152. ಪುರಂದರ ದಾಸರು ಹುಟ್ಟಿದ್ದು - ಮಹಾರಾಷ್ಟ್ರದ ಪುರಂದರ ಗಡದಲ್ಲಿ 1484 ರಲ್ಲಿ ಜನಿಸಿದರು
153. ಪುರಂದರ ದಾಸರ ತಂದೆ ವರದಪ್ಪ ನಾಯಕ ತಾಯಿ - ಸರಸ್ವತಿ ಬಾಯಿ ಅಥಾವ ಲಕ್ಷ್ಮೀ ಬಾಯಿ
154. ಪುರಂದರ ದಾಸರು ಇವರ ಮೊದಲ ಹೆಸರು - ಶ್ರೀನಿವಾಸ ನಾಯಕ ಅಥಾವ ಕೃಷ್ಣಪ್ಪ ನಾಯಕ
155. ಪುರಂದರ ದಾಸರು ಇವರಿಗೆ ಪುರಂದರ ಎಂದು ಎಂದು ನಾಮಕರಣ ಮಾಡಿದವರು - ವ್ಯಾಸರಾಯರು
156. ಈಸ ಬೇಕು ಇದ್ದು ಜಯಿಸ ಬೇಕು - ಈ ಹೇಳಿಕೆಯನ್ನ ನೀಡಿದವರು - ಪುರಂದರ ದಾಸರು
157. ಪುರಂದರ ದಾಸರು ಅಂಕಿತ - ಪುರಂದರ ವಿಠಲ