ಶುಕ್ರವಾರ, ಮಾರ್ಚ್ 31, 2017

ಕರ್ನಾಟಕ ಫೋಲಿಸ್ ಆಡಳಿತ ಸುಧಾರಣೆ

ಠಾಣೆಗಳಲ್ಲಿ ನಾಳೆಯಿಂದ ಹೊಸ ಗಸ್ತು ವ್ಯವಸ್ಥೆ ಜಾರಿ
31 Mar, 2017
ಪ್ರಜಾವಾಣಿ ವಾರ್ತೆ

ಬೆಂಗಳೂರು: ರಾಜ್ಯದಲ್ಲಿ ಜನ ಸ್ನೇಹಿಯಾದ ಹೊಸ ಗಸ್ತುವ್ಯವಸ್ಥೆ ಜಾರಿಗೊಳಿಸಿ ಪೊಲೀಸ್‌ ಮಹಾನಿರ್ದೇಶಕರು  ಆದೇಶ ಹೊರಡಿಸಿದ್ದಾರೆ.

ಹೊಸ ವ್ಯವಸ್ಥೆ ಏಪ್ರಿಲ್‌ 1ರಿಂದ  ರಾಜ್ಯದಾದ್ಯಂತ ಜಾರಿಗೆ ಬರಲಿದೆ. ಇದರಲ್ಲಿ ನಾಗರಿಕರನ್ನು  ಸದಸ್ಯರಾಗಿ ಸೇರಿಸಿಕೊಳ್ಳಲು ಅವಕಾಶವಿದೆ.

‘ಪೊಲೀಸರು ಜನಸ್ನೇಹಿಯಾಗಬೇಕು ಮತ್ತು ಪೊಲೀಸ್‌ ವ್ಯವಸ್ಥೆ ಸಮುದಾಯದ  ಜೊತೆ ಮುನ್ನಡೆಯಬೇಕು ಎಂಬ ಉದ್ದೇಶದಿಂದ ಹೊಸ ವ್ಯವಸ್ಥೆ ಜಾರಿ ಮಾಡಲಾಗಿದೆ’ ಎಂದು ಆದೇಶದಲ್ಲಿ ತಿಳಿಸಲಾಗಿದೆ.

ಪ್ರತಿ ಪೊಲೀಸ್‌ ಠಾಣೆಯಲ್ಲಿರುವ ಕಾನ್‌ಸ್ಟೆಬಲ್‌ಗಳು ಮತ್ತು ಹೆಡ್‌ಕಾನ್‌ಸ್ಟೆಬಲ್‌ಗಳ  ಒಟ್ಟು ಸಂಖ್ಯೆಗೆ ಸರಿಸಮಾನವಾಗಿ ಪೊಲೀಸ್‌ ಠಾಣೆ ವ್ಯಾಪ್ತಿ ವಿಂಗಡಿಸಿ, ಪ್ರತಿ ಪ್ರದೇಶವನ್ನು ಗಸ್ತು (ಬೀಟ್‌) ಎಂದು ಪರಿಗಣಿಸಲಾಗುತ್ತದೆ.

ಆಯಾ ಠಾಣೆಯ ಪ್ರತಿ ಕಾನ್‌ಸ್ಟೆಬಲ್‌ ಮತ್ತು ಹೆಡ್‌ ಕಾನ್‌ಸ್ಟೆಬಲ್‌ಗಳಿಗೆ ನಿಗದಿಪಡಿಸಿದ ಗಸ್ತಿನ ಸಂಪೂರ್ಣ ಹೊಣೆಗಾರಿಕೆ ನೀಡಲಾಗುತ್ತದೆ.

ಗಸ್ತಿನಲ್ಲಿ ಬರುವ ಗ್ರಾಮಗಳು ಮತ್ತು ಪ್ರದೇಶಗಳಲ್ಲಿ ಎಲ್ಲ ಧರ್ಮ, ಜಾತಿ, ವಯೋಮಾನಕ್ಕೆ  ಸೇರಿದ ಅಗತ್ಯವಿರುವಷ್ಟು ಸಂಖ್ಯೆಯಲ್ಲಿ ಸ್ತ್ರೀ ಅಥವಾ ಪುರುಷರನ್ನು ‘ನಾಗರಿಕ ಸದಸ್ಯ’ರನ್ನಾಗಿ ನೇಮಕ ಮಾಡಿಕೊಳ್ಳಬಹುದು. ಗಸ್ತು ಸಿಬ್ಬಂದಿ ಈ ಸದಸ್ಯರೊಂದಿಗೆ ನಿರಂತರ  ಸಂಪರ್ಕದಲ್ಲಿದ್ದು, ಸಂಬಂಧಿಸಿದ ಗಸ್ತು ಪ್ರದೇಶಗಳ ಆಗುಹೋಗುಗಳ ಬಗ್ಗೆ  ಮಾಹಿತಿ ಪಡೆಯಬಹುದು.

ಸಾರ್ವಜನಿಕರು ಮತ್ತು ಪೊಲೀಸರ ನಡುವೆ ಬಾಂಧವ್ಯ ಮೂಡಿಸುವ ಮತ್ತು ಪೊಲೀಸರ ಸಬಲೀಕರಣಕ್ಕೆ ಹೊಸ ವ್ಯವಸ್ಥೆ ಕಾರಣವಾಗಲಿದೆ ಎಂದು ಆದೇಶ ತಿಳಿಸಿದೆ.

**

ಗಸ್ತು ಪ್ರದೇಶವೇ ಸಣ್ಣ  ಘಟಕ

ಕರ್ನಾಟಕ ರಾಜ್ಯ ಪೊಲೀಸ್‌ ಇಲಾಖೆಯಲ್ಲಿ ಗಸ್ತು (ಬೀಟ್‌) ಪ್ರದೇಶವೇ ಅತ್ಯಂತ ಸಣ್ಣ  ಘಟಕವಾಗಲಿದೆ.ಆಯಾ ಗಸ್ತಿನ ಕಾನ್‌ಸ್ಟೆಬಲ್‌ ಅಥವಾ  ಹೆಡ್‌ ಕಾನ್‌ಸ್ಟೆಬಲ್‌ಗಳು ಗಸ್ತಿನ  ಪೊಲೀಸ್‌ ಪ್ರಮುಖರಾಗಿ ಕಾರ್ಯ ನಿರ್ವಹಿಸುತ್ತಾರೆ.

ಪ್ರತಿ ಠಾಣೆಯಲ್ಲಿ ಲಭ್ಯವಿರುವ ಹೆಡ್‌ ಕಾನ್‌ಸ್ಟೆಬಲ್‌ ಮತ್ತು ಪೊಲೀಸ್‌ ಕಾನ್‌ಸ್ಟೆಬಲ್‌ಗಳ ಸಂಖ್ಯೆಗೆ ಅನುಗುಣವಾಗಿ ಗಸ್ತು(ಬೀಟ್‌) ಸಂಖ್ಯೆಗಳನ್ನು ನಿಗದಿಪಡಿಸಲಾಗು ವುದು. ಪ್ರತಿ ಗಸ್ತಿಗೆ ಒಬ್ಬ ಹೆಡ್‌ ಕಾನ್‌ ಸ್ಟೆಬಲ್‌  ಮತ್ತು ಪೊಲೀಸ್‌ ಕಾನ್‌ಸ್ಟೆಬಲ್‌  ನಿಗಪಡಿಸಲಾಗುವುದು.

ಹೆಡ್‌ ಕಾನ್‌ಸ್ಟೆಬಲ್‌ ಮತ್ತು ಪೊಲೀಸ್‌ ಕಾನ್‌ಸ್ಟೆಬಲ್‌ ಬೀಟ್‌ ಕಾರ್ಯದೊಂದಿಗೆ, ದೂರು ಅರ್ಜಿಗಳ ವಿಚಾರಣೆ, ಗುಪ್ತ ಮಾಹಿತಿ ಸಂಗ್ರಹ, ಬರಹಗಾರರ ಕೆಲಸ, ನ್ಯಾಯಾಲಯದ ಕಾರ್ಯ, ಅಪರಾಧ ತನಿಖೆಯನ್ನು ನಿರ್ವಹಿಸಬೇಕು.

72 ವರ್ಷಗಳಲ್ಲೆ ಅಧಿಕ ಉಷ್ಣಾಂಶ - ದೇಹಲಿ

ನವದೆಹಲಿ: ಬೇಸಿಗೆ ಮುಕ್ತಾಯಕ್ಕೆ ಎರಡು ತಿಂಗಳು ಬಾಕಿ ಇರುವಾಗಲೇ ದೇಶದ ಬಹುಭಾಗದ ಜನರು ಸೂರ್ಯನ ಪ್ರಖರತೆಗೆ ತತ್ತರಿಸುತ್ತಿದ್ದಾರೆ. ಉತ್ತರ ಕರ್ನಾಟಕ ಭಾಗದಲ್ಲಿ ತಾಪಮಾನ 40 ಡಿಗ್ರಿ ಸೆಲ್ಸಿಯಸ್ ದಾಟಿದ್ದರಿಂದ ನೀರಿಗಾಗಿ ತತ್ವಾರ ಉಂಟಾಗಿದ್ದರೆ, ಮತ್ತೊಂದೆಡೆ ಉತ್ತರ ಪ್ರದೇಶ, ಮಧ್ಯಪ್ರದೇಶ ಸಹಿತ ಸುಮಾರು ಒಂಭತ್ತು ರಾಜ್ಯಗಳು ಕಾದ ಕೆಂಡದಂತಾಗಿವೆ. ಮುಂದಿನ ಎರಡು ತಿಂಗಳಲ್ಲಿ ಉಷ್ಣಾಂಶ ಮತ್ತಷ್ಟು ಏರಿಕೆಯಾಗಲಿದೆ ಎಂದು ಹವಾಮಾನ ಇಲಾಖೆ ಎಚ್ಚರಿಕೆ ನೀಡಿರುವುದು ಜನರಲ್ಲಿ ಆತಂಕ ಸೃಷ್ಟಿಸಿದೆ.

ವಾಡಿಕೆಗಿಂತ 9 ಡಿಗ್ರಿ ಹೆಚ್ಚು!: ಪ್ರಸಕ್ತ ವರ್ಷದ ಮುಂಗಾರು ಮಳೆ ವಾಡಿಕೆಗಿಂತ ಕಡಿಮೆ ಇರಲಿದೆ ಎಂಬ ಹವಾಮಾನ ವರದಿ ನಿರಾಸೆ ಮೂಡಿಸಿರುವ ಬೆನ್ನಲ್ಲೇ, ದೇಶಾದ್ಯಂತ ಏರಿಕೆಯಾಗುತ್ತಿರುವ ತಾಪಮಾನ ಜನರನ್ನು ಕಂಗೆಡಿಸಿದೆ. ಪ್ರತಿವರ್ಷ ಮಾರ್ಚ್ ತಿಂಗಳ ಕೊನೆಗೆ ಇರುತ್ತಿದ್ದ ತಾಪಮಾನ ಹಾಗೂ ಈಗಿನ ತಾಪಮಾನಕ್ಕೆ ಭಾರಿ ವ್ಯತ್ಯಾಸ ಕಂಡುಬರುತ್ತಿದೆ. ವಾಡಿಕೆ ತಾಪಮಾನಕ್ಕಿಂತ 5ರಿಂದ 9 ಡಿಗ್ರಿ ಸೆಲ್ಸಿಯಸ್​ನಷ್ಟು ಹೆಚ್ಚು ಉಷ್ಣಾಂಶ ದಾಖಲಾಗುತ್ತಿದೆ. ರಾಜಸ್ಥಾನದ ಬಮೇರ್​ನಲ್ಲಿ 43.4, ವಾರ್ಧಾ, ನಾಗಪುರ, ಚಂದ್ರಾಪುರದಲ್ಲಿ 43, ಹರಿಯಾಣದ ನರ್ನೌಲ್​ನಲ್ಲಿ 42 ಡಿಗ್ರಿ ಸೆಲ್ಸಿಯಸ್ ದಾಖಲಾಗಿದೆ.

72 ವರ್ಷಗಳಲ್ಲೇ ಗರಿಷ್ಠ

ದೇಶದ ರಾಜಧಾನಿ ದೆಹಲಿಯಲ್ಲಿ ಗರಿಷ್ಠ ತಾಪಮಾನ 38.2 ಡಿಗ್ರಿ ದಾಖಲಾಗುವ ಮೂಲಕ 72 ವರ್ಷಗಳಲ್ಲೇ ಮಾರ್ಚ್ ತಾಪಮಾನ ದಾಖಲೆ ಬರೆದಿದೆ. 1945ರ ಮಾರ್ಚ್​ನಲ್ಲಿ 38.2 ಡಿಗ್ರಿ ಸೆಲ್ಸಿಯಸ್ ದಾಖಲಾಗಿತ್ತು. ಇದು ವಾಡಿಕೆಗಿಂತ 6 ಡಿಗ್ರಿ ಸೆಲ್ಸಿಯಸ್ ಅಧಿಕವಾಗಿದೆ. ದೇಶದ ಮಧ್ಯ ಹಾಗೂ ಪೂರ್ವ ಪ್ರದೇಶಗಳಲ್ಲಿ ಬಿಸಿಗಾಳಿ ಬೀಸುವ ಲಕ್ಷಣಗಳು ಕಂಡು ಬರುತ್ತಿವೆ. ಗುಜರಾತ್, ಆಂಧ್ರಪ್ರದೇಶದ ರಾಯಲಸೀಮಾ ಪ್ರದೇಶದಲ್ಲಿ ತಾಪಮಾನ 40 ಡಿಗ್ರಿ ಸೆಲ್ಸಿಯಸ್ ದಾಟಿದೆ.

ರಾಜ್ಯದ ಒಳನಾಡಿನಲ್ಲೂ 40 ಡಿಗ್ರಿ ಸೆಲ್ಸಿಯಸ್

ಬೆಂಗಳೂರು: ರಾಜ್ಯದ ಕರಾವಳಿ ಹೊರತುಪಡಿಸಿ ಒಳನಾಡಿನ ಜಿಲ್ಲೆಗಳಲ್ಲಿ ತಾಪಮಾನ 40 ಡಿಗ್ರಿ ಸೆಲ್ಸಿಯಸ್ ದಾಟುವ ಸಾಧ್ಯತೆಯಿದೆ ಎಂದು ಹವಾಮಾನ ಇಲಾಖೆ ಹೇಳಿದೆ. ತಾಪಮಾನ ಹೆಚ್ಚಳದ ಕಾರಣ ಕರಾವಳಿ ಹಾಗೂ ದಕ್ಷಿಣ ಒಳನಾಡಿನ ಕೆಲ ಭಾಗಗಳಲ್ಲಿ ಏ. 4ರವರೆಗೆ ಗುಡುಗು ಸಹಿತ ಸಾಧಾರಣ ಮಳೆ ಮುನ್ಸೂಚನೆ ನೀಡಲಾಗಿದೆ.

ಬಳ್ಳಾರಿಯಲ್ಲಿ 42 ಡಿಗ್ರಿ: ಗುರುವಾರ ಬಳ್ಳಾರಿಯಲ್ಲಿ ಗರಿಷ್ಠ ತಾಪಮಾನ 42 ಡಿಗ್ರಿ ಸೆ. ಗೆ ಏರಿಕೆಯಾಗಿ ಮಾರ್ಚ್ ತಿಂಗಳ ಸಾರ್ವಕಾಲಿಕ ಗರಿಷ್ಠ ತಾಪಮಾನ ದಾಖಲಾಗುವ ಮುನ್ಸೂಚನೆ ಕೊಟ್ಟಿದೆ. 1996 ಮಾ. 30ರಂದು ಗರಿಷ್ಠ ತಾಪಮಾನ 43 ಡಿಗ್ರಿ ಸೆ. ದಾಖಲಾಗಿತ್ತು. ವಿಜಯಪುರದಲ್ಲಿ 40 ಹಾಗೂ ಕಲಬುರ್ಗಿ ಗರಿಷ್ಠ ತಾಪಮಾನ 41.1 ಡಿಗ್ರಿ ಸೆ. ದಾಖಲಾಗಿದೆ. ಗುರುವಾರ ರಾಜ್ಯದ ದಕ್ಷಿಣ ಒಳನಾಡಿನ ಬಹುತೇಕ ಜಿಲ್ಲೆಗಳಲ್ಲಿ ಗರಿಷ್ಠ ತಾಪಮಾನ ಸಾಮಾನ್ಯಕ್ಕಿಂತ 1.6 ರಿಂದ 3 ಡಿಗ್ರಿ ಸೆ. ಹೆಚ್ಚು ದಾಖಲಾಗಿದೆ.

ಬೆ.8ರಿಂದಲೇ ಕಚೇರಿ

ಬಿಸಿಲಿನ ತೀವ್ರತೆ ಅಧಿಕವಾಗಿರುವ ಉತ್ತರ ಕರ್ನಾಟಕದ ಹಲವು ಭಾಗಗಳಲ್ಲಿ ಸರ್ಕಾರಿ ಕಚೇರಿಯ ಕೆಲಸದ ಅವಧಿ ಬದಲಿಸಿ ಸರ್ಕಾರ ಆದೇಶ ಹೊರಡಿಸಿದೆ. ಕಲಬುರಗಿ ವಿಭಾಗದ ಬೀದರ್, ಕಲಬುರಗಿ, ಯಾದಗಿರಿ, ರಾಯಚೂರು, ಕೊಪ್ಪಳ ಮತ್ತು ಬಳ್ಳಾರಿ, ಬೆಳಗಾವಿ ವಿಭಾಗದ ವಿಜಯಪುರ, ಬಾಗಲಕೋಟೆ ಜಿಲ್ಲೆಗಳ ಕಚೇರಿಗಳು ಮುಂದಿನ ಎರಡು ತಿಂಗಳು ಬೆಳಗ್ಗೆ 8ರಿಂದ ಮಧ್ಯಾಹ್ನ 1.30ರವರೆಗೆ ಕಾರ್ಯನಿರ್ವಹಿಸಲಿವೆ. ಏ. 1ರಿಂದ ಈ ವೇಳಾಪಟ್ಟಿ ಜಾರಿಗೆ ಬರಲಿದೆ.

ಹಣಕಾಸು ಮಸೂದೆಗೆ ಸಮ್ಮತಿ

ಹಣಕಾಸು ಮಸೂದೆಗೆ ಸಮ್ಮತಿ
31 Mar, 2017
ಪ್ರಜಾವಾಣಿ ವಾರ್ತೆ

ನವದೆಹಲಿ: ರಾಜ್ಯಸಭೆ ಸೂಚಿಸಿದ ಐದು ತಿದ್ದುಪಡಿಗಳನ್ನು ತಿರಸ್ಕರಿಸಿರುವ ಲೋಕಸಭೆ, ಮೂಲ ರೂಪದಲ್ಲೇ ‘ಹಣಕಾಸು ಮಸೂದೆ–2017’ ಅನ್ನು ಗುರುವಾರ ಅಂಗೀಕರಿಸಿದೆ.

ಮಸೂದೆಗೆ ಸಮ್ಮತಿ ದೊರಕುವುದರೊಂದಿಗೆ 2017–18ನೇ ಸಾಲಿನ ಬಜೆಟ್‌ಗೆ ಸಂಬಂಧಿಸಿ ಪ್ರಕ್ರಿಯೆಗಳು ಪೂರ್ಣಗೊಂಡಂತಾಗಿದೆ.

ಹಣಕಾಸು ವರ್ಷ (ಏಪ್ರಿಲ್‌ 1) ಆರಂಭಗೊಳ್ಳುವುದಕ್ಕಿಂತಲೂ ಮೊದಲು ಬಜೆಟ್‌ ಅಂಗೀಕಾರಗೊಂಡಿರುವುದು ಭಾರತದ ಇತಿಹಾಸದಲ್ಲಿ ಇದೇ ಮೊದಲು. ಏಪ್ರಿಲ್‌ 1ರಿಂದ ಮಸೂದೆ ಅನುಷ್ಠಾನಕ್ಕೆ ಬರಲಿದ್ದು, ಅದಕ್ಕೂ ಮೊದಲು ಸರ್ಕಾರ ರಾಷ್ಟ್ರಪತಿ ಅನುಮತಿ ಪಡೆಯಬೇಕಾಗಿದೆ.

ಮಸೂದೆಗೆ ಐದು ತಿದ್ದುಪಡಿಗಳನ್ನು ತರಲು ರಾಜ್ಯಸಭೆ ಬುಧವಾರ ಸಲಹೆ ನೀಡಿತ್ತು. ಮೂರು ತಿದ್ದುಪಡಿಗಳನ್ನು ಕಾಂಗ್ರೆಸ್‌ ಸೂಚಿಸಿದ್ದರೆ, ಇನ್ನೆರಡನ್ನು ಸಿಪಿಎಂ ಮಂಡಿಸಿತ್ತು.

ಆದಾಯ ತೆರಿಗೆಗೆ ಸಂಬಂಧಿಸಿದ ಪ್ರಕರಣಗಳಲ್ಲಿ ಶೋಧ ಕಾರ್ಯಾಚರಣೆ ನಡೆಸಲು ಆದೇಶ ಹೊರಡಿಸುವ ಅಧಿಕಾರವನ್ನು ಆದಾಯ ತೆರಿಗೆ ಇಲಾಖೆಯ ಸಹಾಯಕ ಆಯುಕ್ತರಿಗೆ ನೀಡಲಾಗಿದೆ. ಹಿಂದೆ ಆಯುಕ್ತರಿಗೆ ಮಾತ್ರ ಈ ಅಧಿಕಾರ ಇತ್ತು.

ಇದಕ್ಕೆ ಆಕ್ಷೇಪ ವ್ಯಕ್ತಪಡಿಸಿದ್ದ ಕಾಂಗ್ರೆಸ್‌, ಕಿರಿಯ ಅಧಿಕಾರಿಗಳಿಗೆ ಅಂತಹ ಅಧಿಕಾರ ಇರಬಾರದು ಎಂದು ತಿದ್ದುಪಡಿಗೆ ಸೂಚಿಸಿತ್ತು.

**

ರಾಜ್ಯಸಭೆ ಸೂಚಿಸಿದ ತಿದ್ದುಪಡಿಗಳು...

* ಶೋಧ ಕಾರ್ಯಾಚರಣೆ  ನಡೆಸಲು ಆದೇಶ ಹೊರಡಿಸುವ ಅಧಿಕಾರವನ್ನು ಆದಾಯ ತೆರಿಗೆ ಇಲಾಖೆಯ ಸಹಾಯಕ ಆಯುಕ್ತರಿಗೆ ನೀಡುವ ನಿಯಮ ರದ್ದು ಮಾಡಬೇಕು

* ದಾಳಿ ಅಥವಾ ಶೋಧ ಕಾರ್ಯ ಯಾಕೆ ನಡೆಸಲಾಗುತ್ತಿದೆ ಎಂಬ ಕಾರಣವನ್ನು ದಾಳಿಗೊಳಗಾದ ವ್ಯಕ್ತಿ ಅಥವಾ ಮೇಲ್ಮನವಿ ಪ್ರಾಧಿಕಾರಕ್ಕೆ ಬಹಿರಂಗಪಡಿಸದಿರುವ ಅಧಿಕಾರವನ್ನು ತೆರಿಗೆ ಅಧಿಕಾರಿಗಳಿಗೆ ನೀಡುವುದಕ್ಕಾಗಿ ಐಟಿ ಕಾಯ್ದೆಗೆ ತಿದ್ದುಪಡಿ ತರುವ 3 ನಿಯಮಗಳು ಬೇಡ

* ಕಂಪೆನಿಗಳು ನಡೆಸುವ ಸೇವಾ ಸಂಸ್ಥೆಗಳನ್ನು ನಿಯಂತ್ರಿಸುವ ನಿಯಮಗಳನ್ನು ಇನ್ನಷ್ಟು ಬಲಪಡಿಸುವ ಪ್ರಸ್ತಾವನೆ ಅನಗತ್ಯ

* ಉದ್ಯಮ ಸಂಸ್ಥೆಗಳು ರಾಜಕೀಯ ಪಕ್ಷಗಳಿಗೆ ನೀಡುವ ದೇಣಿಗೆಗೆ ನಿಗದಿಪಡಿಸಿರುವ ಮಿತಿತೆಗೆದುಹಾಕುವ ನಿಯಮ ಸರಿಯಲ್ಲ

ತ್ರಿವಳಿ ತಲಾಖ್ ಸಂವಿಧಾನ ಪೀಠಕ್ಕೆ

ತ್ರಿವಳಿ ತಲಾಖ್ ಸಂವಿಧಾನ ಪೀಠಕ್ಕೆ
31 Mar, 2017
ಪ್ರಜಾವಾಣಿ ವಾರ್ತೆ

ನವದೆಹಲಿ: ಮುಸ್ಲಿಂ ಸಮುದಾಯದಲ್ಲಿ ಚಾಲ್ತಿಯಲ್ಲಿ ಇರುವ ತ್ರಿವಳಿ ತಲಾಖ್, ನಿಖಾ ಹಲಾಲಾ ಮತ್ತು ಬಹುಪತ್ನಿತ್ವದ ಕಾನೂನು ಸಿಂಧುತ್ವವನ್ನು ಪರಿಶೀಲಿಸುವ ವಿಚಾರವನ್ನು ಸುಪ್ರೀಂ ಕೋರ್ಟ್ ಐವರು ನ್ಯಾಯಮೂರ್ತಿಗಳ ಸಾಂವಿಧಾನಿಕ ಪೀಠಕ್ಕೆ ವಹಿಸಿದೆ.

ಮುಸ್ಲಿಂ ವೈಯಕ್ತಿಕ ಕಾನೂನಿನ ಪ್ರಕಾರ ಮೂರು ಬಾರಿ ತಲಾಖ್ ಹೇಳುವ ಮೂಲಕ ಪತ್ನಿಗೆ ವಿಚ್ಛೇದನ ನೀಡಲು ಅವಕಾಶವಿದೆ.

ಅದೇ ರೀತಿ ಮುಸ್ಲಿಂ ಮಹಿಳೆಯು ವಿಚ್ಛೇದಿತ ಪುರುಷನ ಜತೆ ಮರು ವಿವಾಹ ಮಾಡಿಕೊಳ್ಳಲು ನಿಬಂಧನೆ ಇದೆ. ಈ ಪದ್ಧತಿಯನ್ನು ಅನೇಕ ಮುಸ್ಲಿಂ ಮಹಿಳೆಯರು ಪ್ರಶ್ನಿಸಿದ್ದು, ಕೇಂದ್ರ ಸರ್ಕಾರ ಸಹ ಮಹಿಳೆಯರನ್ನು ಬೆಂಬಲಿಸಿದೆ. ನ್ಯಾಯಾಲಯಕ್ಕೆ ಬೇಸಿಗೆ ರಜವಿದ್ದರೂ ಸಾಂವಿಧಾನಿಕ ಪೀಠವು ಮೇ 11ರಂದು ಪ್ರಥಮ ವಿಚಾರ ಣೆಯನ್ನು ನಡೆಸಲಿದೆ. ಬೇಸಿಗೆ ರಜೆಯಲ್ಲಿ ವಾದ ಮಂಡಿಸಲು ವೈಯಕ್ತಿಕ ಕಾರಣಗಳಿಗಾಗಿ ಸಾಧ್ಯವಾಗುವುದಿಲ್ಲ ಎಂಬ ಅಟಾರ್ನಿ ಜನರಲ್ ಮುಕುಲ್ ರೋಹಟಗಿ, ಹಿರಿಯ ವಕೀಲರಾದ ಕಪಿಲ್ ಸಿಬಲ್ ಮತ್ತಿತರರ ಮನವಿಯನ್ನು ಮುಖ್ಯ ನ್ಯಾಯಮೂರ್ತಿ ಜೆ. ಎಸ್. ಖೇಹರ್ ಮತ್ತು ನ್ಯಾಯಮೂರ್ತಿ ಡಿ. ವೈ. ಚಂದ್ರಚೂಡ್‌ ಅವರಿದ್ದ ಪೀಠವು ತಿರಸ್ಕರಿಸಿತು.

‘ಬೇಸಿಗೆ ರಜೆಯಲ್ಲಿ ನ್ಯಾಯಾಲಯ ಕಲಾಪ ನಡೆಸುವುದಕ್ಕೆ ನಿರ್ಬಂಧವೇನೂ ಇಲ್ಲ. ಇಂತಹ ಸಂದರ್ಭಗಳಲ್ಲಿ ನಾವೂ ರಜೆ ಅನುಭವಿಸುವ ಅವಕಾಶದಿಂದ ವಂಚಿತರಾಗುತ್ತೇವೆ’ ಎಂದು ನ್ಯಾಯಪೀಠವು ಹೇಳಿತು.

ಕಿಮ್ ಜಾಂಗ್ ನಮ್ ಮೃತದೇಹ ಹಸ್ತಾಂತರಕ್ಕೆ ಒಪ್ಪಿಗೆ

ಕಿಮ್ ಜಾಂಗ್‌ ನಮ್ ಮೃತದೇಹ ಹಸ್ತಾಂತರಕ್ಕೆ ಒಪ್ಪಿಗೆ

ಕ್ವಾಲಾಲಂಪುರ: ಇಲ್ಲಿನ ವಿಮಾನ ನಿಲ್ದಾಣದಲ್ಲಿ ಹತ್ಯೆಯಾದ ಕಿಮ್ ಜಾಂಗ್‌ ನಮ್ ಅವರ ಮೃತದೇಹವನ್ನು ಉತ್ತರ ಕೊರಿಯಾಕ್ಕೆ ಹಸ್ತಾಂತರಿಸಲು ಮಲೇಷ್ಯಾ ಒಪ್ಪಿಕೊಂಡಿದೆ.

‘ಕಿಮ್ ಜಾಂಗ್‌ ನಮ್ ಅವರ ಕುಟುಂಬ ಸದಸ್ಯರು ಮೃತದೇಹವನ್ನು ಹಸ್ತಾಂತರಿಸುವಂತೆ ಪತ್ರ ಬರೆದಿದ್ದರು. ಮರಣೋತ್ತರ ಪರೀಕ್ಷೆ ಪೂರ್ಣಗೊಂಡ ಬಳಿಕ ತನಿಖಾಧಿಕಾರಿ ಮೃತದೇಹ ಹಸ್ತಾಂತರಕ್ಕೆ ಒಪ್ಪಿಗೆ ನೀಡಿದ್ದಾರೆ’ ಎಂದು ಮಲೇಷ್ಯಾದ ಪ್ರಧಾನಿ ನಜೀಬ್‌ ರಜಾಕ್‌ ಅವರು ತಿಳಿಸಿದರು.

‘ದೇಶ ತೊರೆಯದಂತೆ ನಿರ್ಬಂಧಕ್ಕೆ ಒಳಗಾಗಿದ್ದ ಮಲೇಷ್ಯಾದ ಒಂಬತ್ತು ಪ್ರಜೆಗಳನ್ನು ಬಿಡುಗಡೆ ಮಾಡಲು ಉತ್ತರ ಕೊರಿಯಾ ಒಪ್ಪಿಕೊಂಡಿದೆ. ಮಲೇಷ್ಯಾದಲ್ಲಿರುವ ಉತ್ತರ ಕೊರಿಯಾ ಪ್ರಜೆಗಳಿಗೂ ಸ್ವದೇಶಕ್ಕೆ  ತೆರಳಲು ಅವಕಾಶ ನೀಡಲಾಗುವುದು’ ಎಂದು ಅವರು ಹೇಳಿದರು.

ತಮಿಳುನಾಡು ತಂಡಕ್ಕೆ ದೇವಧರ್ ಟ್ರೋಫಿ

ತಮಿಳುನಾಡು ತಂಡಕ್ಕೆ ದೇವಧರ್ ಟ್ರೋಫಿ

ವಿಶಾಖಪಟ್ಟಣ: ಅನುಭವಿ ಬ್ಯಾಟ್ಸ್‌ಮನ್‌ ದಿನೇಶ್‌ ಕಾರ್ತಿಕ್ (126) ಅವರ ಶತಕದ ಬಲದಿಂದ ತಮಿಳು ನಾಡು ತಂಡ ಇಂಡಿಯಾ ರೆಡ್‌ ವಿರುದ್ಧದ ಫೈನಲ್ ಪಂದ್ಯದಲ್ಲಿ ಬುಧವಾರ ಗೆಲುವು ಪಡೆದು ದೇವಧರ್ ಟ್ರೋಫಿಯನ್ನು ಎತ್ತಿಹಿಡಿದಿದೆ.

ವೈ.ಎಸ್.ರಾಜಶೇಖರ ರೆಡ್ಡಿ ಕ್ರೀಡಾಂಗಣದಲ್ಲಿ ನಡೆದ ಪಂದ್ಯದಲ್ಲಿ ಟಾಸ್ ಗೆದ್ದು ಮೊದಲು ಬ್ಯಾಟ್ ಮಾಡಿದ ತಮಿಳುನಾಡು 50 ಓವರ್‌ಗಳಲ್ಲಿ 9 ವಿಕೆಟ್‌ ನಷ್ಟಕ್ಕೆ 303 ರನ್ ಕಲೆಹಾಕಿತು.

ಸವಾಲಿನ ಮೊತ್ತ ಬೆನ್ನಟ್ಟಿದ ಇಂಡಿಯಾ ರೆಡ್ ತಂಡ 46.1 ಓವರ್‌ಗಳಲ್ಲಿ 261 ರನ್‌ ಗಳಿಸುವಷ್ಟರಲ್ಲಿ ಎಲ್ಲಾ ವಿಕೆಟ್ ಕಳೆದುಕೊಂಡಿತು.

ವಿಫಲ: ಹಿಂದಿನ ಪಂದ್ಯಗಳಲ್ಲಿ ತಂಡದ ಗೆಲುವಿಗೆ ಕಾರಣರಾಗಿದ್ದ ಶಿಖರ್ ಧವನ್(45) ಹಾಗೂ ಕರ್ನಾಟಕದ ಮನೀಷ್ ಪಾಂಡೆ (32) ಉತ್ತಮ ಇನಿಂಗ್ಸ್ ಕಟ್ಟುವಲ್ಲಿ ವಿಫಲರಾದರು.

ಹರ್‌ಪ್ರೀತ್‌ ಸಿಂಗ್ (36) ಹಾಗೂ ಗುರುಕೀರತ್ ಸಿಂಗ್‌ (64) 72 ರನ್‌ಗಳ ಉತ್ತಮ ಜತೆಯಾಟ ನೀಡಿದರು.

ಗುರುಕೀರತ್ 85 ಎಸೆತಗಳಲ್ಲಿ 7 ಬೌಂಡರಿಗಳ ಸಹಿತ 64 ರನ್ ಕಲೆಹಾಕಿದರು. ತಮಿಳುನಾಡು ತಂಡದ ರಾಹಿಲ್ ಷಾ 40 ರನ್‌ಗಳಿಗೆ ಮೂರು ವಿಕೆಟ್ ಕಬಳಿಸಿ ಮಿಂಚಿದರು.

ಕಾರ್ತಿಕ್ ಅಮೋಘ ಇನಿಂಗ್ಸ್: ಮೊದಲು ಬ್ಯಾಟ್ ಮಾಡಿದ ತಮಿಳು ನಾಡು ತಂಡಕ್ಕೆ ಉತ್ತಮ ಆರಂಭ ದೊರೆಯಲಿಲ್ಲ. ಈ ತಂಡದ ಕೌಶಿಕ್ ಗಾಂಧಿ (16), ಗಂಗಾ ಶ್ರೀಧರ್ ರಾಜು (13) ಬೇಗನೆ ಔಟಾದರು. ಮುರುಗನ್ ಅಶ್ವಿನ್ (0) ಖಾತೆ ತೆರೆಯದೇ ಔಟಾದರು. 11ನೇ ಓವರ್‌ನಲ್ಲಿ 39 ರನ್‌ಗಳಿಗೆ ತಮಿಳುನಾಡು 3 ವಿಕೆಟ್ ಕಳೆದುಕೊಂಡು ಸಂಕಷ್ಟದಲ್ಲಿತ್ತು.

ಬಳಿಕ ನಾಲ್ಕನೇ ವಿಕೆಟ್‌ನಲ್ಲಿ ನಾರಾಯಣ್ ಜಗದೀಶನ್ (55) ಹಾಗೂ ದಿನೇಶ್ ಕಾರ್ತಿಕ್ (126) 136 ರನ್‌ಗಳ ಅಮೋಘ ಜತೆಯಾಟ ನೀಡಿ ದರು. ಅಲ್ಲದೇ ನಿರ್ಣಾಯಕ ಪಂದ್ಯದಲ್ಲಿ ಬೃಹತ್ ಮೊತ್ತ ಕಲೆ ಹಾಕುವಲ್ಲಿ ನೆರವಾದರು. ಇದರಿಂದಾಗಿ ತಮಿಳು ನಾಡು 300ರನ್‌ಗಳ ಗಡಿ ದಾಟಿತು.

ಕಾರ್ತಿಕ್ 91 ಎಸೆತಗಳಲ್ಲಿ 14 ಬೌಂಡರಿ ಹಾಗೂ ಒಂದು ಸಿಕ್ಸರ್‌ಗಳಿಂದ  ಕ್ರೀಡಾಂಗಣದಲ್ಲಿ ಮಿಂಚು ಹರಿಸಿದರು. ರೆಡ್ ತಂಡದ ಬೌಲರ್‌ ಧವಳ್ ಕುಲಕರ್ಣಿ 39 ರನ್‌ಗಳಿಗೆ 5 ವಿಕೆಟ್ ಪಡೆದರು.

ಸಂಕ್ಷಿಪ್ತ ಸ್ಕೋರು:

ತಮಿಳುನಾಡು: 50 ಓವರ್‌ಗಳಲ್ಲಿ 9 ವಿಕೆಟ್‌ಗೆ 303 (ನಾರಾಯಣ್ ಜಗದೀಶನ್‌ 55, ದಿನೇಶ್ ಕಾರ್ತಿಕ್ 126; ಧವಳ್ ಕುಲಕರ್ಣಿ 39ಕ್ಕೆ5).

ಇಂಡಿಯಾ ರೆಡ್‌: 46.1 ಓವರ್‌ಗಳಲ್ಲಿ 261 ( ಶಿಖರ್ ಧವನ್‌ 45, ಹರ್‌ಪ್ರೀತ್ ಸಿಂಗ್‌ 36, ಗುರುಕೀರತ್ ಸಿಂಗ್ ಮಾನ್ 64; ರಾಹಿಲ್ ಷಾ 40ಕ್ಕೆ3, ರವಿಶ್ರೀನಿವಾಸನ್ ಸಾಯಿ ಕಿಶೋರ್‌ 41ಕ್ಕೆ2). ಫಲಿತಾಂಶ: ತಮಿಳುನಾಡು ತಂಡಕ್ಕೆ 42 ರನ್‌ಗಳ ಜಯ. ಪಂದ್ಯಶ್ರೇಷ್ಠ: ದಿನೇಶ್ ಕಾರ್ತಿಕ್‌.

ಒಲಿಂಪಿಕ್ಸ್ ಗೆ ಕ್ರಿಕೇಟ್ ಸೇರ್ಪಡೆ

ಒಲಿಂಪಿಕ್ಸ್‌ಗೆ ಕ್ರಿಕೆಟ್ ಸೇರ್ಪಡೆ: ಬಿಡ್‌ ಸಲ್ಲಿಸಲಿರುವ ಐಸಿಸಿ

ಲಂಡನ್: ಟ್ವೆಂಟಿ–20 ಕ್ರಿಕೆಟ್‌ ಮಾದರಿಯನ್ನು 2024ರ ಒಲಿಂಪಿಕ್ಸ್‌ನಲ್ಲಿ ಸೇರ್ಪಡೆ ಮಾಡಲು ಅಂತರರಾಷ್ಟ್ರೀಯ ಕ್ರಿಕೆಟ್ ಕೌನ್ಸಿಲ್  ಬಿಡ್ ಸಲ್ಲಿಸಲಿದೆ ಎಂದು ಮುಖ್ಯ ಕಾರ್ಯನಿರ್ವಾಹಕ ಅಧಿ ಕಾರಿ ಡೇವ್ ರಿಚರ್ಡ್ಸನ್‌ ತಿಳಿಸಿದ್ದಾರೆ.

‘ಈ ಕುರಿತು ಐಸಿಸಿಯು ಜೂನ್‌ನಲ್ಲಿ ನಡೆಯಲಿರುವ ಸಭೆಯಲ್ಲಿ ನಿರ್ಣಯ ಕೈಗೊಳ್ಳಲಿದೆ. ಬಹಳಷ್ಟು ಸದಸ್ಯ ರಾಷ್ಟ್ರಗಳು ಈ ಬೇಡಿಕೆಯನ್ನು ಬೆಂಬಲಿಸುತ್ತಿವೆ’ ಎಂದು ಡೇವ್ ತಿಳಿಸಿದ್ದಾರೆ.

‘ಕ್ರಿಕೆಟ್ ವಿಶ್ವದೆಲ್ಲೆಡೆ ಬೆಳೆಸಲು  ಒಲಿಂಪಿಕ್ಸ್‌ನಲ್ಲಿ ಪಾಲ್ಗೊ ಳ್ಳುವುದು ಅಗತ್ಯವಾಗಿದೆ. ಟ್ವೆಂಟಿ–20 ಮಾದರಿಯು ಒಲಿಂಪಿಕ್ಸ್‌ ಕೂಟಕ್ಕೆ ಪೂರಕವಾಗಿದೆ. ಆದ್ದರಿಂದ ನಮ್ಮ ಮನವಿಗೆ ಸಕಾರಾತ್ಮಕ ಸ್ಪಂದನೆ ಸಿಗಲಿದೆ’ ಎಂದು ಸ್ಟೋರ್ಟ್ಸ್‌ ಪ್ರೊ ವಿಚಾರ ಸಂಕಿರಣ ದಲ್ಲಿ ಅವರು ಭರವಸೆ ವ್ಯಕ್ತಪಡಿಸಿದರು.

"ಕಿರಿಕ್ ಪಾರ್ಟಿ" "ಯು-ಟರ್ನ್" ಗೆ ಐಫಾ ಅವಾರ್ಡ್

'ಕಿರಿಕ್ ಪಾರ್ಟಿ', 'ಯು -ಟರ್ನ್'ಗೆ ಐಫಾ ಅವಾರ್ಡ್

ಹೈದರಾಬಾದ್: ಹೈದರಾಬಾದ್ ನಲ್ಲಿ ನಡೆದ ವರ್ಣರಂಜಿತ ಸಮಾರಂಭದಲ್ಲಿ ‘ಐಫಾ ಉತ್ಸವಂ -2017’ ಅವಾರ್ಡ್ ಗಳನ್ನು ನೀಡಲಾಗಿದೆ.

ಜೂನಿಯರ್ ಎನ್.ಟಿ.ಆರ್. ಅಭಿನಯದ ತೆಲುಗು ಚಿತ್ರ ‘ಜನತಾಗ್ಯಾರೇಜ್’, ರಕ್ಷಿತ್ ಶೆಟ್ಟಿ ಅಭಿನಯದ ‘ಕಿರಿಕ್ ಪಾರ್ಟಿ’, ಪವನ್ ಕುಮಾರ್ ನಿರ್ದೇಶನದ ‘ಯು –ಟರ್ನ್’ ಕನ್ನಡ ಚಿತ್ರಗಳು ಪ್ರಶಸ್ತಿ ಪಡೆದುಕೊಂಡಿವೆ.

‘ಜನತಾ ಗ್ಯಾರೇಜ್’ ಬೆಸ್ಟ್ ಸಿನಿಮಾ, ಅತ್ಯುತ್ತಮ ನಟ(NTR), ಅತ್ಯುತ್ತಮ ನಿರ್ದೇಶಕ(ಕೊರಟಾಲ ಶಿವ), ಅತ್ಯುತ್ತಮ ಸಂಗೀತ ನಿರ್ದೇಶಕ(ದೇವಿ ಶ್ರೀ ಪ್ರಸಾದ್) ಪ್ರಶಸ್ತಿ ಸೇರಿದಂತೆ 6 ಪ್ರಶಸ್ತಿಗಳನ್ನು ಬಾಚಿಕೊಂಡಿದೆ.

‘ಕಿರಿಕ್ ಪಾರ್ಟಿ’ಗೆ ಅತ್ಯುತ್ತಮ ನಟ(ರಕ್ಷಿತ್ ಶೆಟ್ಟಿ), ಅತ್ಯುತ್ತಮ ಸಂಗೀತ ನಿರ್ದೇಶಕ(ಅಜನೀಶ್ ಲೋಕನಾಥ್), ಹಿನ್ನಲೆ ಗಾಯಕ(ವಿಜಯ್ ಪ್ರಕಾಶ್), ಸಾಹಿತ್ಯ ಮೊದಲಾದ ಪ್ರಶಸ್ತಿಗಳು ಬಂದಿವೆ.

ಪವನ್ ಕುಮಾರ್ ‘ಯು ಟರ್ನ್’ ಚಿತ್ರಕ್ಕಾಗಿ ಅತ್ಯುತ್ತಮ ಕತೆ, ಅತ್ಯುತ್ತಮ ನಿರ್ದೇಶನ ಪ್ರಶಸ್ತಿಯನ್ನು ಗಳಿಸಿದ್ದಾರೆ.

ನಟ, ನಿರ್ಮಾಪಕ ದ್ವಾರಕೀಶ್ ಅವರಿಗೆ ಜೀವಮಾನ ಸಾಧನೆ ಪ್ರಶಸ್ತಿ ನೀಡಲಾಗಿದೆ. ‘ಕಿಲ್ಲಿಂಗ್ ವೀರಪ್ಪನ್’ ಚಿತ್ರಕ್ಕಾಗಿ ಪಾರೂಲ್ ಯಾದವ್, ‘ಗೋಧಿ ಬಣ್ಣ ಸಾಧಾರಣ ಮೈಕಟ್ಟು’ ಚಿತ್ರದ ಬೆಸ್ಟ್ ವಿಲನ್ ರೋಲ್ ಗಾಗಿ ವಸಿಷ್ಠ ಎನ್. ಸಿಂಹ ಪ್ರಶಸ್ತಿ ಗಳಿಸಿದ್ದಾರೆ

ಕರ್ನಾಟಕದ 6 ನಗರಗಳಲ್ಲಿ ಉಡಾನ್

ರಾಜ್ಯದ 6 ನಗರಗಳಲ್ಲಿ ಉಡಾನ್‌?

ಹೊಸದಿಲ್ಲಿ: ಬೆಂಗಳೂರು, ಬೆಂಗಳೂರು ಎಚ್‌ಎಎಲ್‌, ಬೀದರ್‌, ಹುಬ್ಬಳ್ಳಿ, ಮೈಸೂರು ಮತ್ತು ಬಳ್ಳಾರಿಯ ವಿದ್ಯಾನಗರಗಳಲ್ಲಿನ್ನು 'ಉಡಾನ್‌' ಹವಾ ಆರಂಭವಾಗುವ ಎಲ್ಲ ಸಾಧ್ಯತೆಗಳೂ ಗೋಚರಿಸಿವೆ. ಕೇಂದ್ರ ಸರಕಾರದ ಪ್ರಾದೇಶಿಕ ಸಂಪರ್ಕ ಯೋಜನೆಯಾದ ಉಡಾನ್‌ (ಉಡೇ ದೇಶ್‌ ಕಾ ಆಮ್‌ ನಾಗರಿಕ್‌)ನಡಿ 70 ಏರ್‌ಪೋರ್ಟ್‌ಗಳನ್ನು ಸಂಪರ್ಕಿಸುವಂತೆ 128 ಮಾರ್ಗಗಳಲ್ಲಿ ವಿಮಾನ ಸಂಚಾರಕ್ಕೆ ಅವಕಾಶ ಕಲ್ಪಿಸುವ ನಿಟ್ಟಿನಲ್ಲಿ ಹೆಜ್ಜೆಯಿಡಲಾಗಿದೆ. ಅದರಂತೆ, ಏರ್‌ ಡೆಕ್ಕನ್‌, ಸ್ಪೈಸ್‌ ಜೆಟ್‌ ಸೇರಿದಂತೆ 5 ವಿಮಾನಯಾನ ಕಂಪನಿಗಳು ಬಿಡ್‌ ಗೆದ್ದಿದ್ದು, ಕರ್ನಾಟಕ, ಮಧ್ಯಪ್ರದೇಶ, ಉತ್ತರಪ್ರದೇಶ, ತಮಿಳುನಾಡು ಸೇರಿ 20 ರಾಜ್ಯಗಳು ಹಾಗೂ ಕೇಂದ್ರಾಡಳಿತ ಪ್ರದೇಶಗಳಲ್ಲಿ ಸೇವೆ ಆರಂಭವಾಗಲಿದೆ.

ಉಡಾನ್‌ ಯೋಜನೆಯನ್ವಯ ಒಂದು ಗಂಟೆಯ ಪ್ರಯಾಣಕ್ಕೆ 2,500 ರೂ.ಗಳ ಮಿತಿ ಹೇರಲಾಗಿದೆ.
ಒಡಿಶಾ ಏವಿಯೇಷನ್‌ ಸಂಸ್ಥೆಯು ಅತಿಹೆಚ್ಚು ಅಂದರೆ 50 ಮಾರ್ಗಗಳನ್ನು ತನ್ನದಾಗಿಸಿಕೊಂಡರೆ, ಏರ್‌ಡೆಕ್ಕನ್‌ಗೆ 34, ಟರ್ಬೋ ಮೇಘಾ ಏರ್‌ವೇಸ್‌ಗೆ 18, ಏರ್‌ಇಂಡಿಯಾದ ಅಂಗಸಂಸ್ಥೆ ಏರ್‌ಲೈನ್‌ ಅಲೈಡ್‌ ಸರ್ವಿಸಸ್‌ಗೆ 15 ಹಾಗೂ  ಸ್ಪೈಸ್‌ಜೆಟ್‌ಗೆ 11 ಮಾರ್ಗಗಳು ಸಿಕ್ಕಿವೆ. ಮೊದಲ ಉಡಾನ್‌ ವಿಮಾನವು ಎಪ್ರಿಲ್‌ನಲ್ಲಿ ಹಾರಾಟ ನಡೆಸಲಿದೆ ಎಂದು ವಿಮಾನಯಾನ ಕಾರ್ಯದರ್ಶಿ ಆರ್‌.ಎನ್‌. ಚೌಬೆ ತಿಳಿಸಿದ್ದಾರೆ.

ಗುರುವಾರ, ಮಾರ್ಚ್ 30, 2017

Regulatory Bodies in india, Heads

*🕖🕖Regulatory Bodies in India, Heads,🕖🕖*
.
*✌✌✌Headquarters and Sectors✌✌✌*
.
.
👉1. RBI – Reserve Bank of India
Sector: Banking & Finance, Monetary Policy
Head: Governor – Urjit Patel
Headquarters: Mumbai
Established on: 1st April 1935
.
👉2. SEBI – Securities and Exchange Board of India
Sector: Securities (Stock) & Capital Market
Head: Chairman – Ajay Tyagi
Headquarters: Mumbai
Established on: 12th April 1988
.
👉3. IRDAI – Insurance Regulatory and Development Authority
Sector: Insurance
Head: Chairman – T.S. Vijayan
Headquarters: Hyderabad
Established on: 1999
.
👉4. PFRDA – Pension Fund Regulatory & Development Authority
Sector: Pension
Head: Chairman – Hemant Contractor
Headquarters: New Delhi
Established on: 23rd August 2003
.
👉5. NABARD – National Bank for Agriculture and Rural Development
Sector: Financing Rural Development
Head: Chairman – Harsh Bhanwala
Headquarters: Mumbai
Established on: 12th July 1982
.
👉6. SIDBI – Small Industries Development Bank of India
Sector: Financing Micro, Small and Medium-Scale Enterprises
Head: Chairman – Kshatrapati Shiaji
Headquarters: Lucknow
Established on: 2nd April 1990
.
👉7. NHB – National Housing Bank
Sector: Financing Housing
Head: MD & CEO – Sriram Kalyanaraman
Headquarters: New Delhi
Established on: 9th July 1988
.
👉8. TRAI – Telecom Regulatory Authority of India
Sector: Telecommunication & Tariffs
Head: Chairman – Ram Sewak Sharma
Headquarters: New Delhi
Established on: 20th February 1997
.
👉9. CBFC – Central Board of Film Certification
Sector: Film/TV Certification & Censorship
Head: Chairman – Pahlaj Nihalani
Headquarters: Mumbai
Established on: 1952
.
👉10. FIPB – Foreign Investment Promotion Board
Sector: Foreign Direct Investment
Head: Chairman (Secretary, Dept. of Economic Affairs, GoI) – Shaktikanta Das
Headquarters: New Delhi
.
👉11. FSDC – Financial Stability and Development Council
Sector: Financial Sector Development
Head: Chairman (Finance Minister, GoI) – Arun Jaitley
Headquarters: New Delhi
Established on: 2010
.
👉12. FSSAI – Food Safety and Standards Authority of India
Sector: Food
Head: Chairman – Ashish Bahuguna
Headquarters: New Delhi
Established on: August 2011
.
👉13. BIS – Bureau of Indian Standards
Sector: Standards & Certification
Head: Director General – Alka Panda
Headquarters: New Delhi
Established on: 23rd December 1986
.
👉14. ASCI – Advertising Standards Council of India
Sector: Advertising
Head: Chairman – Narendra Ambwani
Headquarters: Mumbai
Established on: 1985
.
👉15. BCCI – Board of Control for Cricket in India
Sector: Cricket
Head: President – Vinod Rai, Secretary – Anurag Thakur
Headquarters: Mumbai
Established on: December 1928

ಆಜೀವ ನಿರ್ಬಂಧಕ್ಕೆ ಚುನಾವಣಾ ಆಯೋಗ ಬೆಂಬಲ

ಆಜೀವ ನಿರ್ಬಂಧಕ್ಕೆ ಆಯೋಗ ಬೆಂಬಲ

ನವದೆಹಲಿ: ಕ್ರಿಮಿನಲ್ ಅಪರಾಧ ಎಸಗಿ, ಶಿಕ್ಷೆಗೆ ಗುರಿಯಾಗುವ ವ್ಯಕ್ತಿ ಚುನಾವಣೆಯಲ್ಲಿ ಸ್ಪರ್ಧಿಸದಂತೆ ಜೀವನ ಪರ್ಯಂತ ನಿರ್ಬಂಧ ವಿಧಿಸಬೇಕು ಎಂಬ ಬೇಡಿಕೆಗೆ ಕೇಂದ್ರ ಚುನಾವಣಾ ಆಯೋಗ ಬೆಂಬಲ ವ್ಯಕ್ತಪಡಿಸಿದೆ.
  ಕ್ರಿಮಿನಲ್ ಪ್ರಕರಣಗಳಲ್ಲಿ ಶಿಕ್ಷೆಗೆ ಗುರಿಯಾಗುವ ವ್ಯಕ್ತಿ, ಶಿಕ್ಷೆಯ ಅವಧಿ ಪೂರೈಸಿದ ನಂತರ ಆರು ವರ್ಷಗಳವರೆಗೆ ಚುನಾವಣೆಗೆ ಸ್ಪರ್ಧಿಸದಂತೆ ನಿರ್ಬಂಧಿಸುವ ಕಾನೂನು ಈಗ ಜಾರಿಯಲ್ಲಿದೆ.
  ಬಿಜೆಪಿ ಮುಖಂಡ ಹಾಗೂ ವಕೀಲ ಅಶ್ವಿನಿ ಕುಮಾರ್ ಉಪಾಧ್ಯಾಯ ಅವರು ಸುಪ್ರೀಂ ಕೋರ್ಟ್‌ಗೆ ಸಲ್ಲಿಸಿರುವ ಸಾರ್ವಜನಿಕ ಹಿತಾಸಕ್ತಿ ಅರ್ಜಿಗೆ ಪ್ರತಿಯಾಗಿ ಆಯೋಗ ಪ್ರಮಾಣಪತ್ರ ಸಲ್ಲಿಸಿದೆ.
  ಚುನಾವಣೆಗಳು ಮುಕ್ತ ಮತ್ತು ನ್ಯಾಯಸಮ್ಮತವಾಗಿ ನಡೆಯಬೇಕು, ಚುನಾವಣಾ ಸುಧಾರಣೆಗಳು ಬೇಕು ಎಂಬ ಬಗ್ಗೆ ಆಯೋಗ ಸ್ಪಂದನಾಶೀಲವಾಗಿದೆ ಎಂದು ಪ್ರಮಾಣಪತ್ರದಲ್ಲಿ ಹೇಳಲಾಗಿದೆ.
  ಮುಕ್ತ ಹಾಗೂ ನ್ಯಾಯಸಮ್ಮತ ಚುನಾವಣೆ ನಡೆಸುವ ವಿಚಾರವಾಗಿ ಆಯೋಗವು ವಿಸ್ತೃತ ಪ್ರಸ್ತಾವನೆ ಸಲ್ಲಿಸಿದೆ. ರಾಜಕೀಯವನ್ನು ಕ್ರಿಮಿನಲ್ ಅಪರಾಧಿಗಳಿಂದ ಮುಕ್ತವಾಗಿಸುವುದು, ಮತದಾನಕ್ಕೆ 48 ಗಂಟೆಗಳ ಮೊದಲು ಚುನಾವಣಾ ಜಾಹೀರಾತು ನಿರ್ಬಂಧಿಸುವುದು ಹಾಗೂ ‘ಕಾಸಿಗಾಗಿ ಸುದ್ದಿ’ ನಿಷೇಧಿಸುವುದು ಇದರಲ್ಲಿ ಸೇರಿದೆ ಎಂದು ಆಯೋಗ ವಿವರಣೆ ನೀಡಿದೆ.   ‘ನಮ್ಮ ಬಹುತೇಕ ಶಿಫಾರಸುಗಳನ್ನು ಕಾನೂನು ಆಯೋಗವು ತನ್ನ 244 ಹಾಗೂ 255ನೇ ವರದಿಗಳಲ್ಲಿ ಒಪ್ಪಿಕೊಂಡಿದೆ. ಬಹುತೇಕ ಸುಧಾರಣಾ ಕ್ರಮಗಳನ್ನು ಕೇಂದ್ರ ಸರ್ಕಾರ ಪರಿಶೀಲಿಸುತ್ತಿದೆ’ ಎಂದು ಸುಪ್ರೀಂ ಕೋರ್ಟ್‌ಗೆ ಆಯೋಗ ತಿಳಿಸಿದೆ.   ಕ್ರಿಮಿನಲ್ ಅಪರಾಧ ಪ್ರಕರಣಗಳಲ್ಲಿ ಶಿಕ್ಷೆಗೆ ಗುರಿಯಾದವರಿಗೆ ಚುನಾವಣೆಗಳಲ್ಲಿ ಸ್ಪರ್ಧಿಸಲು ಎಂದಿಗೂ ಅವಕಾಶ ನೀಡಬಾರದು ಎಂದು ಉಪಾಧ್ಯಾಯ ಸಲ್ಲಿಸಿರುವ ಮನವಿಗೆ ವಿರೋಧ ಇಲ್ಲ. ಅರ್ಜಿದಾರರ ಆಶಯಕ್ಕೆ ಬೆಂಬಲ ಇದೆ ಎಂದು ಆಯೋಗ ಪ್ರಮಾಣಪತ್ರದಲ್ಲಿ ಹೇಳಿದೆ.   ** ಚುನಾವಣಾ ಸುಧಾರಣೆ ಸುತ್ತ
- ಚುನಾವಣೆಯಲ್ಲಿ ಸ್ಪರ್ಧಿಸಲು ಗರಿಷ್ಠ ವಯೋಮಿತಿ, ಕನಿಷ್ಠ ವಿದ್ಯಾರ್ಹತೆ ನಿಗದಿ ಮಾಡಬೇಕು ಎಂಬ ಬಗ್ಗೆ ಶಾಸಕಾಂಗವೇ ತೀರ್ಮಾನಿಸಬೇಕು: ಆಯೋಗ
- ವಯೋಮಿತಿ, ವಿದ್ಯಾರ್ಹತೆಯ ನಿಯಮ ಜಾರಿಗೆ ತರಲು ಸಂವಿಧಾನಕ್ಕೆ ತಿದ್ದುಪಡಿ ತರಬೇಕು ಎಂದು ಆಯೋಗ ಹೇಳಿದೆ.
- ಕ್ರಿಮಿನಲ್ ಅಪರಾಧಿಗೆ ನ್ಯಾಯಾಂಗ ಹಾಗೂ ಕಾರ್ಯಾಂಗದಲ್ಲಿ ಕರ್ತವ್ಯ ನಿರ್ವಹಿಸಲು ಅವಕಾಶ ಇಲ್ಲ. ಆದರೆ ಈ ನಿಯಮವನ್ನು ಶಾಸಕಾಂಗದಲ್ಲಿ ವಿಭಿನ್ನ ರೀತಿಯಲ್ಲಿ ಅನ್ವಯಿಸಲಾಗಿದೆ ಎಂಬುದು ಅರ್ಜಿದಾರರ ಅಳಲು.
- ಶಿಕ್ಷೆಗೆ ಗುರಿಯಾದ ವ್ಯಕ್ತಿ ಕೂಡ, ಆರು ವರ್ಷಗಳ ನಂತರ ಚುನಾವಣೆ ಸ್ಪರ್ಧಿಸಬಹುದು, ಶಾಸಕ ಅಥವಾ ಸಚಿವ ಆಗಬಹುದು. ಇದು ಸರಿಯಲ್ಲ ಎಂದು ಅರ್ಜಿಯಲ್ಲಿ ಹೇಳಲಾಗಿದೆ.

ಐಸಿಸಿ ಮುಖ್ಯ ವಿತ್ತಾಧಿಕಾರಿಯಾಗಿ ಅಂಕುರ್ ಖನ್ನಾ

ಐಸಿಸಿ ಮುಖ್ಯ ವಿತ್ತಾಧಿಕಾರಿಯಾಗಿ ಅಂಕುರ್‌ ಖನ್ನಾ ನೇಮಕ

ನವದೆಹಲಿ: ಅಂತಾರಾಷ್ಟ್ರೀಯ ಕ್ರಿಕೆಟ್‌ ಸಂಸ್ಥೆಯ(ಐಸಿಸಿ) ಮುಖ್ಯ ವಿತ್ತಾಧಿಕಾರಿಯಾಗಿ (ಸಿಎಫ್ಒ) ಭಾರತದ ಅಂಕುರ್‌ ಖನ್ನಾ ನೇಮಕವಾಗಿದ್ದಾರೆ.

ಅಂಕುರ್‌ ಖನ್ನಾ ಇದಕ್ಕೂ ಮುನ್ನ ಏರ್‌ ಏಷ್ಯಾ ಇಂಡಿಯಾದ ಸಿಎಫ್ಒ ಆಗಿ ಕಾರ್ಯನಿರ್ವಹಿಸಿದ್ದಾರೆ. ಇದೇ ಮಾರ್ಚ್‌ನಲ್ಲಿ ಅವಧಿ ಮುಗಿಯಲಿದ್ದು, ಇನ್ನು ಮುಂದೆ ಐಸಿಸಿಯಲ್ಲಿ ಕಾರ್ಯನಿರ್ವಹಿಸಲಿದ್ದಾರೆ. ಈ ಬಗ್ಗೆ ಐಸಿಸಿ ಮುಖ್ಯ ಕಾರ್ಯದರ್ಶಿ ಡೇವಿಡ್‌ ರಿಚಡ್ಸìನ್‌ ಮಾಹಿತಿ ನೀಡಿದ್ದಾರೆ. ಅಂಕುರ್‌ ಖನ್ನಾ ಕೂಡ ಮಾತನಾಡಿದ್ದು, ಐಸಿಸಿಯಲ್ಲಿ ಕೆಲಸ ಮಾಡಲು ಉತ್ಸುಕನಾಗಿದ್ದೇನೆ ಎಂದು ತಿಳಿಸಿದ್ದಾರೆ.

ವಿಜಯ್ ಹಜಾರೆ : 5ನೆ ಬಾರಿಗೆ ತಮಿಳುನಾಡು

ವಿಜಯ್‌ ಹಜಾರೆ: ಬಂಗಾಲಕ್ಕೆ ಸೋಲು; 5ನೇ ಬಾರಿಗೆ ತಮಿಳುನಾಡು ಚಾಂಪಿಯನ್‌

ಹೊಸದಿಲ್ಲಿ: ದಿನೇಶ್‌ ಕಾರ್ತಿಕ್‌ ಬಾರಿಸಿದ ಶತಕ ಮತ್ತು ಬೌಲರ್‌ಗಳ ಬಿಗು ದಾಳಿಯ ನೆರವಿನಿಂದ ತಮಿಳುನಾಡು ತಂಡ ವಿಜಯ್‌ ಹಜಾರೆ ಟ್ರೋಫಿಯಲ್ಲಿ ಚಾಂಪಿಯನ್‌ ಆಗಿ ಹೊರಹೊಮ್ಮಿದೆ. ಬಲಿಷ್ಠ ಬಂಗಾಲ ತಂಡವನ್ನು 37 ರನ್‌ಗಳಿಂದ ಬಗ್ಗುಬಡಿದ ತಮಿಳುನಾಡು ಕೂಟದ ಇತಿಹಾಸದಲ್ಲಿ 5ನೇ ಬಾರಿಗೆ ಚಾಂಪಿಯನ್‌ ಪ್ರಶಸ್ತಿ ಪಡೆಯಿತು.

ಹೊಸದಿಲ್ಲಿಯ ಫಿರೋಜ್‌ ಷಾ ಕೋಟ್ಲ ಮೈದಾನದಲ್ಲಿ ನಡೆದ ಪಂದ್ಯದಲ್ಲಿ ಮೊದಲು ಬ್ಯಾಟಿಂಗ್‌ ಮಾಡಿದ ತಮಿಳುನಾಡು ದಿನೇಶ್‌ ಕಾರ್ತಿಕ್‌ ಅವರ ಸಾಹಸದ ಶತಕದಿಂದಾಗಿ 217 ರನ್‌ ಗಳಿಸಿ ಆಲೌಟ್‌ ಆಗಿತ್ತು. ಸ್ಪರ್ಧಾತ್ಮಕ ಮೊತ್ತವನ್ನು ಬೆನ್ನುಹತ್ತಿದ್ದ ಬಂಗಾಲ ಆರಂಭದಲ್ಲಿಯೇ ಎಡವಿತು. 4 ರನ್‌ ಗಳಿಸಿದಾಗ ಅಭಿಮನ್ಯು ಈಶ್ವರನ್‌ ಮತ್ತು ಅಗ್ನಿವ್‌ ಪಾನ್‌ ವಿಕೆಟ್‌ ಕಳೆದುಕೊಂಡ ಬಂಗಾಲ ಸಂಕಷ್ಟಕ್ಕೆ ಬಿತ್ತು.
ಹೀಗೆ ಬ್ಯಾಟ್ಸ್‌ಮನ್‌ಗಳು ಒಬ್ಬರ ಹಿಂದೆ ಒಬ್ಬರಂತೆ ಪೆವಿಲಿಯನ್‌ ಸೇರಿದ್ದು ಬಂಗಾಲಕ್ಕೆ ಮುಳುವಾಯಿತು. ಮಧ್ಯಮ ಕ್ರಮಾಂಕದಲ್ಲಿ ಸುದೀಪ್‌ ಚಟರ್ಜಿ (58), ಮನೋಜ್‌ ತಿವಾರಿ (32) ತಂಡವನ್ನು ಆಧರಿಸುವ ಪ್ರಯತ್ನ ನಡೆಸಿದರು. ಆದರೆ ಇತರ ಆಟಗಾರರ ಬ್ಯಾಟಿಂಗ್‌ ವೈಫ‌ಲ್ಯ ತಂಡದ ಸೋಲಿಗೆ ಕಾರಣವಾಯಿತು. 45.5 ಓವರ್‌ಗಳಲ್ಲಿ ಎಲ್ಲ ವಿಕೆಟ್‌ ಕಳೆದುಕೊಂಡು ಸೋಲಪ್ಪಿಕೊಂಡಿತು.

ತಮಿಳುನಾಡು ಪರ ಅಶ್ವಿ‌ನ್‌ ಕ್ರಿಸ್ಟ್‌, ಎಂ.ಮೊಹಮ್ಮದ್‌, ರಹಿಲ್‌ ಶಾ ತಲಾ 2 ವಿಕೆಟ್‌ ಪಡೆದು ಬಂಗಾಲದ ಕುಸಿತಕ್ಕೆ ಕಾರಣರಾದರು.

ತಮಿಳುನಾಡಿಗೆ ಕಾರ್ತಿಕ್‌ ಆಸರೆ
ಇದಕ್ಕೂ ಮುನ್ನ ಬ್ಯಾಟಿಂಗ್‌ ಮಾಡಿದ ತಮಿಳುನಾಡಿಗೆ ವಿಕೆಟ್‌ ಕೀಪರ್‌ ದಿನೇಶ್‌ ಕಾರ್ತಿಕ್‌ ಆಸರೆಯಾದರು. ತಂಡದ ಮೊತ್ತ 44 ಆಗುವಷ್ಟರಲ್ಲಿ ಗಂಗ ಶ್ರೀಧರ್‌, ಕೌಶಿರ್‌ ಗಾಂಧಿ, ಬಾಬ ಅಪರಾಜಿತ್‌, ವಿಜಯ್‌ ಶಂಕರ್‌ ವಿಕೆಟ್‌ ಕಳೆದುಕೊಂಡ ತಮಿಳುನಾಡು ಶೋಚನೀಯ ಸ್ಥಿತಿಗೆ ತಲುಪಿತ್ತು. ಆದರೆ ದಿನೇಶ್‌ ಕಾರ್ತಿಕ್‌ ದಿಟ್ಟ ಬ್ಯಾಟಿಂಗ್‌ ಪ್ರದರ್ಶಿಸಿ ತಂಡವನ್ನು ಪಾರು ಮಾಡಿದರು. 120 ಎಸೆತ ಎದುರಿಸಿದ ಕಾರ್ತಿಕ್‌ 14 ಬೌಂಡರಿ ಸೇರಿದಂತೆ 112 ರನ್‌ ಬಾರಿಸಿ ಮಿಂಚಿದರು. ಅಂತಿಮವಾಗಿ ಹಿಟ್‌ವಿಕೆಟ್‌ ಆಗಿ ಪೆವಿಲಿಯನ್‌ ಸೇರಿಕೊಂಡರು. 5ನೇ ವಿಕೆಟ್‌ಗೆ ಕಾರ್ತಿಕ್‌ ಮತ್ತು ಬಾಬಾ ಇಂದ್ರಜಿತ್‌(32) 85 ರನ್‌ ಜತೆಯಾಟ ನೀಡಿದರು. ಇದು ತಂಡಕ್ಕೆ ಚೇತರಿಸಿಕೊಳ್ಳಲು ನೆರವಾಯಿತು. ಉಳಿದಂತೆ ವಾಷಿಂಗ್ಟನ್‌ ಸುಂದರ್‌ (22) ಅಲ್ಪ ಕಾಣಿಕೆ ನೀಡಿದರು.

ಅನುಭವಿ ಬೌಲರ್‌ಗಳಾದ ಮೊಹಮ್ಮದ್‌ ಶಮಿ 4 ವಿಕೆಟ್‌ ಪಡೆದರೆ,  ಅಶೋಕ್‌ ದಿಂಡ 3 ವಿಕೆಟ್‌ ಪಡೆದರು.
ತಮಿಳುನಾಡು ವಿಜಯ್‌ ಹಜಾರೆ ಟ್ರೋಫಿಯನ್ನು ಐದನೇ ಬಾರಿ ಗೆದ್ದ ಸಾಧನೆ ಮಾಡಿದೆ. ಈ ಹಿಂದೆ 2002ಧಿಧಿ-03, 2004-05, 2008-09 ಮತ್ತು 2009-10ರಲ್ಲಿ ತಮಿಳುನಾಡು ಈ ಪ್ರಶಸ್ತಿ ಜಯಿಸಿತ್ತು.

ಸಂಕ್ಷಿಪ್ತ ಸ್ಕೋರ್‌:
ತಮಿಳುನಾಡು 47.2 ಓವರ್‌ಗಳಲ್ಲಿ 217 (ದಿನೇಶ್‌ ಕಾರ್ತಿಕ್‌ 112, ಬಾಬಾ ಇಂದ್ರಜಿತ್‌ 32, ವಾಷಿಂಗ್ಟನ್‌ ಸುಂದರ್‌ 22, ಮೊಹಮ್ಮದ್‌ ಶಮಿ 26ಕ್ಕೆ 4, ಅಶೋಕ್‌ ದಿಂಡ 36ಕ್ಕೆ 3), ಬಂಗಾಲ 45.5 ಓವರ್‌ಗಳಲ್ಲಿ 180 (ಶ್ರೀವಸ್ತ ಗೋಸ್ವಾಮಿ 23, ಸುದೀಪ್‌ ಚಟರ್ಜಿ 58, ಮನೋಜ್‌ ತಿವಾರಿ 32, ಅನುಸ್ತುಪ್‌ ಮಜುಂದಾರ್‌ 24, ಆಮಿರ್‌ ಘಾನಿ 24, ಅಶ್ವಿ‌ನ್‌ ಕ್ರಿಸ್ಟ್‌ 23ಕ್ಕೆ 2, ಮೊಹಮ್ಮದ್‌ 30ಕ್ಕೆ 2, ರಹಿಲ್‌ ಶಾ 38ಕ್ಕೆ 2). ಪಂದ್ಯಶ್ರೇಷ್ಠ: ದಿನೇಶ್‌ ಕಾರ್ತಿಕ್‌