ಸೋಮವಾರ, ಡಿಸೆಂಬರ್ 24, 2018

ಕಾರ್ಮಿಕರ ದಿನಾಚರಣೆ

ಕಾರ್ಮಿಕರ ದಿನಾಚರಣೆ


ಮೇ 1


ಮುಂಬೈನಲ್ಲಿ ಕಾರ್ಮಿಕ ದಿನಾಚರಣೆಯಂದು ನಡೆದ ಸಭೆ


ವಿಶ್ವದ ಬಹುತೇಕ ರಾಷ್ಟ್ರಗಳಲ್ಲಿ ಕಾರ್ಮಿಕ ಸಂಘಗಳು ಮತ್ತು ಸಮಾಜವಾದಿ ಪಕ್ಷಗಳ ಮುಖ್ಯವಾಗಿ ಆಚರಿಸುವ ಸಂಭ್ರಮದ ಸಾರ್ವಜನಿಕ ಉತ್ಸವ ದಿನ (ಲೇಬರ ಡೇ). ಮೇ ದಿನ ಅಥವಾ ‘ಅಂತರರಾಷ್ಟ್ರೀಯ ಕಾರ್ಮಿಕರ ದಿನಾಚರಣೆಯನ್ನು ಪ್ರತಿ ವರ್ಷದ ಮೇ ೧ನೇ ತಾರೀಖಿನಂದು ಪ್ರಪಂಚದ ಹಲವು ದೇಶಗಳಲ್ಲಿ ಆಚರಿಸಲಾಗುತ್ತದೆ. ಈ ದಿನದಂದು ಕಾರ್ಮಿಕ ಆಂದೋಲನದ ಸಾಮಾಜಿಕ ಮತ್ತು ಆರ್ಥಿಕ ಸಾಧನೆಗಳನ್ನು ಆಚರಿಸಲಾಗುತ್ತದೆ.[೧][೨]

ಕಾರ್ಮಿಕರ ಮೆರೆವಣಿಗೆ, ಪ್ರದರ್ಶನ, ಸಭೆ-ಇವು ಆ ದಿನದ ವಿಶೇಷಗಳು.

ಹಿನ್ನೆಲೆ ಮತ್ತು ಇತಿಹಾಸ

1886ರ ವರ್ಷದ ಮೇ 4ರಂದು ಚಿಕಾಗೋದ, ಇಲಿನಾಯ್ಸ್ ಪ್ರದೇಶದ ಹೇ ಮಾರ್ಕೆಟ್ ಎಂಬಲ್ಲಿ ಕಾರ್ಮಿಕರ ಮೇಲೆ ನಡೆದ ದಮನಕಾರಿ ಘಟನೆಯನ್ನು ಈ ಆಚರಣೆ ಹಿನ್ನೆಲೆಯಾಗಿ ಇಟ್ಟುಕೊಂಡಿವೆ.

ಕಾರ್ಮಿಕ ಪ್ರಭುತ್ವದ ಶುಭಯುಗದ ಉದಯದ ಕುರುಹಾಗಿ ಮೇ 1ರಂದು ಉತ್ಸವಾಚರಣೆ ಮಾಡಬೇಕೆಂದು ರಾಬರ್ಟ್ ಓವೆನ್ ಸೂಚಿಸಿದ್ದ. ಆದರೆ ವಾಸ್ತವವಾಗಿ 1889ಕ್ಕಿಂತ ಮುಂಚೆ ಮೇ ದಿನಾಚರಣೆ ಮಾಡಿದ್ದಕ್ಕೆ ಆಧಾರಗಳು ದೊರಕುವುದಿಲ್ಲ. ಆ ವರ್ಷ ಪ್ಯಾರಿಸಿನಲ್ಲಿ ಸಮಾವೇಶ ಗೊಂಡಿದ್ದ ಸಮಾಜವಾದಿ ಅಂತರರಾಷ್ಟ್ರೀಯದ ಪ್ರಥಮ ಅಧಿವೇಶನದಲ್ಲಿ ಮೇ 1ನೆಯ ದಿನಾಂಕವನ್ನು (ಅದು ವಾರದ ಯಾವ ದಿನವೇ ಬರಲಿ) ವಾರ್ಷಿಕ ಅಂತರ ರಾಷ್ಟ್ರೀಯ ಉತ್ಸವದಿನವೆಂದು ಆಚರಿಸಬೇಕೆಂದು ನಿರ್ಧರಿಸಲಾಯಿತು. ಮೇ 1ರಂದು ಸಾರ್ವಜನಿಕ ರಜಾದಿನವೆಂದು ಘೋಷಿಸಬೇಕೆಂದು ಒತ್ತಾಯಪಡಿಸಲು ನೇರ ಕ್ರಮ ಕೈಗೊಳ್ಳಬೇಕೆಂದೂ ನಿರ್ಣಯಿಸಲಾಯಿತು.

ದೇಶವಿದೇಶಗಳಲ್ಲಿ ಆಚರಣೆ

ಬಹುತೇಕ ರಾಷ್ಟ್ರಗಳಲ್ಲಿ ಕಾರ್ಮಿಕ ದಿನವನ್ನು ಮೇ ತಿಂಗಳ ಮೊದಲ ದಿನದಂದು ಆಚರಿಸಲಾಗುತ್ತದೆ. ಅಮೆರಿಕ ಸಂಯುಕ್ತಸಂಸ್ಥಾನ ಮತ್ತು ಕೆನಡಗಳಲ್ಲಿ ಅಂದು ಈ ದಿನವನ್ನಾಚರಿಸುವುದಿಲ್ಲ. ಇಟಲಿಯಲ್ಲಿ ಮೇ ದಿನಾಚರಣೆಯನ್ನು ನಿಷೇಧಿಸಲಾಗಿತ್ತಲ್ಲದೆ, ಅದರ ಬದಲು ರೋಮಿನ ಸ್ಥಾಪನೆಯ ದಿನವನ್ನಾಚರಿಸುವ ಏರ್ಪಾಡು ಮಾಡಲಾಗಿತ್ತು. ಸೋವಿಯತ್ ದೇಶದಲ್ಲಿ ಮೇ 1 ಸಾರ್ವಜನಿಕ ರಜಾ ದಿನ. 1890ರ ದಶಕದಿಂದ ಯೂರೋಪಿನ ಅನೇಕ ರಾಷ್ಟ್ರಗಳಲ್ಲಿ ಮೇ ತಿಂಗಳ 1ರಂದು ಕಾರ್ಮಿಕ ದಿನವನ್ನಾಚರಿಸಲಾಗುತ್ತಿದೆ. ಅಂದು ಸಾಮಾನ್ಯವಾಗಿ ಕಾರ್ಮಿಕ ರಜಾದಿನ, ಸೋವಿಯತ್ ದೇಶವೇ ಮುಂತಾದ ಕಮ್ಯೂನಿಸ್ಟ್ ರಾಷ್ಟ್ರಗಳಲ್ಲಿ ಈ ದಿನಾಚರಣೆ ವಿಶಿಷ್ಟವಾದ್ದು. ಮಾಸ್ಕೋದಲ್ಲಿ ನಡೆಯುವ ಮೇ ದಿನದ ಉತ್ಸವ-ಕವಾಯಿತು ವಿಶ್ವವಿಖ್ಯಾತವಾದ್ದು. ಬ್ರಿಟನಿನಲ್ಲಿ ಕಾರ್ಮಿಕ ದಿನವನ್ನು ಮೇ ದಿನದ ಅನಂತರದ ಪ್ರಥಮ ಭಾನುವಾರದಂದು ಆಚರಿಸುವುದು ಸಾಮಾನ್ಯ. ಲಂಡನಿನಲ್ಲಿ ಹೈಡ್ ಪಾರ್ಕಿನಲ್ಲಿ ಉತ್ಸವಸಭೆ ಸೇರುವುದು ಹಿಂದಿನಿಂದ ಬಂದಿರುವ ಸಂಪ್ರದಾಯ. ಬ್ರಿಟನಿನಲ್ಲಿ ಕಾರ್ಮಿಕ ದಿನವನ್ನು ಪ್ರಥಮ ಬಾರಿಗೆ ಆಚರಿಸಿದ್ದು 1892ರಲ್ಲಿ.

ಪ್ರಪಂಚದ ಹಲವೆಡೆ ಮೇ ೧ರಂದು ಸರ್ಕಾರಿ ರಜೆಯನ್ನು ಘೋಷಿಸಲಾಗಿದೆ. ಇದರಲ್ಲಿ ಪ್ರಮುಖ ದೇಶಗಳೆಂದರೆ

ಅಲ್ಬೇನಿಯ,


ಅರ್ಜೆಂಟೀನಾ,


ಅರೂಬ,


ಆಸ್ಟ್ರಿಯ,


ಬಾಂಗ್ಲಾದೇಶ,


ಬೆಲಾರುಸ್,


ಬೆಲ್ಜಿಯಂ,


ಬೊಲಿವಿಯ,


ಬೋಸ್ನಿಯ ಮತ್ತು ಹೆರ್ಝೆಗೋವಿನ,


ಬ್ರೆಜಿಲ್,


ಬಲ್ಗೇರಿಯ,


ಕ್ಯಾಮರೂನ್,


ಚಿಲಿ,


ಕೊಲಂಬಿಯ,


ಕೋಸ್ಟ ರಿಕ,


ಚೀನ,


ಕ್ರೊಯೇಷಿಯ,


ಕ್ಯೂಬ,


ಸಿಪ್ರಸ್,


ಚೆಕ್ ಗಣರಾಜ್ಯ,


ಡೆನ್ಮಾರ್ಕ್,


ಡೊಮಿನಿಕ ಗಣರಾಜ್ಯ,


ಈಕ್ವೆಡಾರ್,


ಈಜಿಪ್ಟ್,


ಫಿನ್ಲ್ಯಾಂಡ್,


ಫ್ರಾನ್ಸ್,


ಜರ್ಮನಿ,


ಗ್ರೀಸ್,


ಗ್ವಾಟೆಮಾಲ,


ಹೈತಿ,


ಹೊಂಡುರಾಸ್,


ಹಾಂಗ್ ಕಾಂಗ್,


ಹಂಗರಿ,


ಐಸ್ಲೆಂಡ್,


ಭಾರತ,


ಇಂಡೋನೇಷ್ಯ,


ಇಟಲಿ,


ಜೋರ್ಡನ್,


ಕೀನ್ಯ,


ಲ್ಯಾಟ್ವಿಯ,


ಲಿಥುವೇನಿಯ,


ಲೆಬನಾನ್,


ಮೆಸಿಡೋನಿಯ,


ಮಲೇಶಿಯ,


ಮಾಲ್ಟ,


ಮಾರಿಷಸ್,


ಮೆಕ್ಸಿಕೋ,


ಮೊರಾಕೊ,


ಮಯನ್ಮಾರ್,


ನೈಜೀರಿಯ,


ಉತ್ತರ ಕೊರಿಯ,


ನಾರ್ವೆ,


ಪಾಕಿಸ್ತಾನ,


ಪೆರಗ್ವೆ,


ಪೆರು,


ಪೋಲೆಂಡ್,


ಫಿಲಿಫೀನ್ಸ್


ಪೋರ್ಚುಗಲ್,


ರೊಮೇನಿಯ,


ರಷ್ಯ,


ಸಿಂಗಾಪುರ,


ಸ್ಲೊವಾಕಿಯ,


ಸ್ಲೊವೇನಿಯ,


ದಕ್ಷಿಣ ಕೊರಿಯ,


ದಕ್ಷಿಣ ಆಫ್ರಿಕ,


ಸ್ಪೇನ್,


ಶ್ರೀ ಲಂಕ,


ಸರ್ಬಿಯ,


ಸ್ವೀಡನ್,


ಸಿರಿಯ,


ಥೈಲ್ಯಾಂಡ್,


ಟರ್ಕಿ,


ಉಕ್ರೇನ್,


ಉರುಗ್ವೆ,


ವೆನಿಜುವೆಲಾ,


ವಿಯೆಟ್ನಾಂ,


ಜಾಂಬಿಯ,


ಜಿಂಬಾಬ್ವೆ.


ಭಾರತದಲ್ಲಿ

ಭಾರತದಲ್ಲಿ ಮೇ ದಿನವೇ ಕಾರ್ಮಿಕ ದಿನ. 20ನೆಯ ಶತಮಾನದ ಎರಡನೆಯ ದಶಕದ ದ್ವಿತೀಯಾರ್ಧದಲ್ಲಿ-ಕಾರ್ಮಿಕ ಸಂಘ ಚಳವಳಿಯ ಪ್ರಭಾವ ಹೆಚ್ಚಿದಾಗಿನಿಂದ-ಇದರ ಆಚರಣೆ ಆರಂಭವಾಯಿತು. ಮೇ ದಿನಾಚರಣೆಯಲ್ಲಿ ಭಾಗವಹಿಸಿದ ಮೊಟ್ಟಮೊದಲಿನ ಭಾರತೀಯ ಕಾರ್ಮಿಕರು ಇಂಗ್ಲೆಂಡಿನಲ್ಲಿದ್ದ ಭಾರತೀಯ ನಾವಿಕರು. ಭಾರತಕ್ಕೆ ಸ್ವಾತಂತ್ರ್ಯ ನೀಡಬೇಕೆಂಬ ಘೋಷಣೆಯನ್ನೊಳಗೊಂಡ ಪ್ರದರ್ಶನಚಿತ್ರಗಳನ್ನು ಹಿಡಿದು ಮೆರವಣಿಗೆಯಲ್ಲಿ ಅವರು ಹೈಡ್ ಪಾರ್ಕಿನ ಮೇ ದಿನದ ಉತ್ಸವಸಭೆಗೆ ಹೋದರು (1925). ಭಾರತದಲ್ಲಿ 1927 ರಿಂದೀಚೆಗೆ ಪ್ರತಿವರ್ಷವೂ ಕಾರ್ಮಿಕರು ಈ ದಿನವನ್ನಾಚರಿಸುತ್ತಿದ್ದಾರೆ. ಭಾರತದಲ್ಲಿ ಈ ಉತ್ಸವದಲ್ಲಿ ಭಾಗವಹಿಸುವವರು ಕಾರ್ಮಿಕ ಸಂಘಗಳವರು, ಸಮಾಜವಾದಿಗಳು ಮತ್ತು ಕೆಲವು ಬುದ್ಧಿ ಜೀವಿಗಳು ಮಾತ್ರ. 1927ರಲ್ಲಿ ಮುಂಬಯಿಯಲ್ಲಿ ನಡೆದ ಉತ್ಸವದಲ್ಲಿ ಅನೇಕ ಕಾರ್ಮಿಕ ಮುಖಂಡರು ಭಾಗವಹಿಸಿದ್ದರು. ಅದೇ ವರ್ಷ ಕಲ್ಕತ್ತದಲ್ಲಿ ಬಂಗಾಳ ಪ್ರದೇಶ ಕಾರ್ಮಿಕ ಸಂಘ ಕಾಂಗ್ರೆಸ್ ಮೇ ದಿನವನ್ನಾಚರಿಸಿದಾಗ ಪೋಲೀಸರು ಅನೇಕ ನಿರ್ಬಂಧಕಾಜ್ಞೆಗಳನ್ನು ವಿಧಿಸಿದರೆಂದು ತಿಳಿದು ಬರುತ್ತದೆ. 1928 ರಿಂದ 1934ರ ವರೆಗೆ ಆ ಉತ್ಸವಾಚರಣೆಯ ದಿನದಂದು ದಿನಾಚರಣೆಯ ಕಾರ್ಮಿಕರ ಅನೇಕ ಮುಷ್ಕರಗಳು ನಡೆದುವು. ಎರಡನೆಯ ಮಹಾಯುದ್ಧಾನಂತರ ಆ ದಿನವನ್ನು ಹೆಚ್ಚು ವ್ಯಾಪಕವಾಗಿ ಆಚರಿಸಲು ಪ್ರಾರಂಭವಾಯಿತು. ಕಾರ್ಮಿಕರೂ ಕಾರ್ಮಿಕ ಸಂಘಗಳೂ ಅಧಿಕ ಸಂಖ್ಯೆಯಲ್ಲಿ ಭಾಗವಹಿಸತೊಡಗಿದವು. 1969ರಲ್ಲಿ ಭಾರತ ರಾಷ್ಟ್ರೀಯ ಕಾರ್ಮಿಕ ಸಂಘಗಳ ಕಾಂಗ್ರೆಸ್ ಒಂದನ್ನು ಬಿಟ್ಟು ಉಳಿದೆಲ್ಲ ಕಾರ್ಮಿಕ ಸಂಘಗಳೂ ಒಟ್ಟಾಗಿ, ತಮ್ಮ ಹಕ್ಕುಗಳನ್ನು ಸಾಧಿಸಲು ಭಾರಿ ಮೆರವಣಿಗೆಯಲ್ಲಿ ಪಾರ್ಲಿಮೆಂಟ್ ಭವನದ ಬಳಿಗೆ ಮೆರವಣಿಗೆಯಲ್ಲಿ ಹೋಗಿ ಪ್ರದರ್ಶನ ನಡೆಸಿದುವು.

ಭಾರತದಲ್ಲಿ ಅಂತರರಾಷ್ಟ್ರೀಯ ಕಾರ್ಮಿಕರ ದಿನಾಚರಣೆಯನ್ನು ಪ್ರತಿ ವರ್ಷದ ಮೇ ೧ನೇ ತಾರೀಖಿನಂದು ಆಚರಿಸಲಾಗುತ್ತದೆ.


ಅಮೇರಿಕದಲ್ಲಿ

ಅಮೆರಿಕ ಸಂಯುಕ್ತಸಂಸ್ಥಾನದಲ್ಲಿ ಸೆಪ್ಟೆಂಬರ್ ಮೊದಲನೆಯ ಸೋಮವಾರದಂದು ಕಾರ್ಮಿಕ ದಿನವನ್ನಾಚರಿಸಲಾಗುತ್ತದೆ. ಆ ದಿನವನ್ನಾಚರಿಸಬೇಕೆಂಬ ಚಳವಳಿಯನ್ನು ಅಲ್ಲಿ ಪ್ರಾರಂಭಿಸಿದವರು ನೈಟ್ಸ್ ಆಫ್ ಲೇಬರ್ ಎಂಬ ಕಾರ್ಮಿಕ ಸಂಘಗಳವರು. 1882, 1883 ಮತ್ತು 1884ರಲ್ಲಿ ಅವರು ಕಾರ್ಮಿಕ ದಿನದಂದು ನ್ಯೂಯಾರ್ಕ್ ನಗರದಲ್ಲಿ ಪ್ರದರ್ಶನ ನಡೆಸಿದರು. ಕಾರ್ಮಿಕ ದಿನದ ಆಚರಣೆಯ ಮೂಲ ಇರುವುದು ಅಮೆರಿಕಾದಲ್ಲಿ, 19ನೇ ಶತಮಾನದಲ್ಲಿ ನಡೆದ ಕಾರ್ಮಿಕ ಚಳವಳಿಗಳಲ್ಲಿ. ಕೆಲಸದ ಅವಧಿಯನ್ನು ದಿನಕ್ಕೆ 8 ಗಂಟೆ ನಿಗದಿ ಪಡಿಸಲು, ದುಡಿಯುವ ಪರಿಸರದಲ್ಲಿ ಮೂಲಸೌಕರ್ಯ ಒದಗಿಸಲು ಮತ್ತು ಕಾರ್ಮಿಕರ ಹಿತರಕ್ಷಣೆ ಕಾನೂನುಗಳನ್ನು ರೂಪಿಸಲು ಪಟ್ಟುಹಿಡಿದ ಕಾರ್ಮಿಕ ಒಕ್ಕೂಟದ ಸದಸ್ಯರು, ಸಮಾಜವಾದಿಗಳು ಮತ್ತು ಕಮ್ಯೂನಿಸ್ಟರು ಧರಣಿ ಹೂಡಿದ್ದರು. ದಿನದ 24 ಗಂಟೆಗಳಲ್ಲಿ 8 ಗಂಟೆ ಕೆಲಸಕ್ಕೆ, 8 ಗಂಟೆ ಮನೋಲ್ಲಾಸಕ್ಕೆ ಮತ್ತು 8 ಗಂಟೆ ವಿಶ್ರಾಂತಿಗೆ ಮೀಸಲಿಡಬೇಕು ಎಂಬುದು ಪ್ರತಿಭಟನಾಕಾರರ ಒತ್ತಾಯವಾಗಿತ್ತು [೩]ಅಮೆರಿಕಾದಲ್ಲಿ, ಪ್ರತಿವರ್ಷದ ಸೆಪ್ಟೆಂಬರ್ ಮೊದಲನೆಯ ಸೋಮವಾರವನ್ನು ಕಾರ್ಮಿಕ ದಿನವೆಂದು ಪರಿಗಣಿಸಬೇಕೆಂದೂ ಅಂದು ರಜಾ ಘೋಷಿಸಬೇಕೆಂದೂ ಅವರು 1884ರಲ್ಲಿ ನಿರ್ಣಯ ಮಾಡಿದರು. ಈ ಚಳವಳಿಗೆ ರಾಷ್ಟ್ರದ ಎಲ್ಲ ಕಾರ್ಮಿಕ ಸಂಘಗಳು ಬೆಂಬಲ ದೊರಕಿತು. ಮೊಟ್ಟಮೊದಲು ಕಾಲೊರಾಡೂ ರಾಜ್ಯ ಆ ದಿನವನ್ನು ಕಾರ್ಮಿಕ ದಿನವೆಂದು ಮಾನ್ಯ ಮಾಡಲು 1887ರ ಮಾರ್ಚಿ 15ರಂದು ಕಾಯಿದೆಯೊಂದನ್ನು ಅನುಮೋದಿಸಿತು. ಇದೇ ಕ್ರಮವನ್ನು ಇತರ ಕೆಲವು ರಾಜ್ಯಗಳೂ ಅನುಸರಿಸಿದುವು (ನ್ಯೂಯಾರ್ಕ್, ನ್ಯೂ ಜರ್ಸಿ, ಮಸಚುಸೆಟ್ಸ್). ಅಮೆರಿಕಾದ್ಯಂತ ಅಂದು ರಜಾ ದಿನವೆಂದು ಘೋಷಿಸುವ ವಿಧೇಯಕಕ್ಕೆ ಅಮೆರಿಕದ ಕಾಂಗ್ರೆಸ್ 1894ರ ಜೂನ್ 28ರಂದು ಒಪ್ಪಿಗೆ ನೀಡಿತು. ಇದನ್ನು ಕಾರ್ಯರೂಪಕ್ಕೆ ತರಲು ಎಲ್ಲ ರಾಜ್ಯಗಳೂ ಸಮ್ಮತಿಸಿ, ಆ ಪ್ರಕಾರ ಅಗತ್ಯವಾದ ಕಾಯಿದೆ ಮಾಡಿದುವು. ಕೆನಡದಲ್ಲಿ ಬಹುತೇಕ ಪ್ರಾಂತ್ಯಗಳಲ್ಲಿ ಕಾರ್ಮಿಕ ದಿನಾಚರಣೆಗೆ ಕಾನೂನು ರಚಿಸಲಾಗಿದೆ. ಕಾನೂನಿಲ್ಲದ ಪ್ರಾಂತ್ಯಗಳಲ್ಲಿ ಆಯಾ ಗವರ್ನರುಗಳು ಆ ಬಗ್ಗೆ ಘೋಷಣೆ ನೀಡುತ್ತಾರೆ. ಅಮೆರಿಕ ಕೆನಡಗಳಲ್ಲಿ ಎಲ್ಲ ವರ್ಗಗಳ ಜನರೂ ಅದನ್ನು ಆಚರಿಸುತ್ತಾರೆ. ಅಂದು ಬಹುತೇಕ ಎಲ್ಲ ವಾಣಿಜ್ಯ ಮತ್ತು ಕೈಗಾರಿಕಾ ಸಂಸ್ಥೆಯನ್ನೂ ಮುಚ್ಚಲಾಗುತ್ತದೆ. ಸಭೆ, ವನಭೋಜನ, ಪ್ರದರ್ಶನ, ಮೆರವಣಿಗೆ, ಭಾಷಣ, ಕ್ರೀಡೆಗಳು- ಇವು ಅಂದು ಸಾಮಾನ್ಯ

ವಿಶ್ವ ಮಾತೃ ಭಾಷೆ ದಿವಸ

ಫೆಬ್ರವರಿ ೨೧ನ್ನು ಪ್ರಪಂಚಾದ್ಯಂತ ವಿಶ್ವ ಮಾತೃ ಭಾಷೆ ದಿವಸವಾಗಿ ಆಚರಿಸಲಾಗುತ್ತಿದೆ. ಬಹುಭಾಷೆ ಮತ್ತು ಬಹುಸಂಸ್ಕೃತಿಯನ್ನು ಪ್ರತಿಬಿಂಬಿಸಲು ಮತ್ತು ಪ್ರೋತ್ಸಾಹಿಸಿ ಉಳಿಸಲು ಈ ಆಚರಣೆಯನ್ನು ಮಾಡಲಾಗುತ್ತಿದೆ. ೧೯೯೯ರಲ್ಲಿ ಮೊದಲ ಬಾರಿಗೆ ಇದನ್ನು ಯುನೆಸ್ಕೋ ಘೋಷಿಸಿತು[೧]. ಇದರ ಮುಂದುವರೆದ ಭಾಗವಾಗಿ ವಿಶ್ವಸಂಸ್ಥೆಯು ೨೦೦೮ನ್ನು ವಿಶ್ವ ಭಾಷೆಗಳ ವರ್ಷ ಎಂದು ಆಚರಿಸಿತು[೨][೩]. ೨೦೦೦ನೆಯ ಇಸವಿಯಿಂದ ಪ್ರತಿ ವರ್ಷ ವಿಶ್ವ ಮಾತೃ ಭಾಷೆ ದಿವಸವನ್ನು ಆಚರಿಸಲಾಗುತ್ತಿದೆ. ೧೯೫೨ನೆಯ ಇಸವಿಯಲ್ಲಿ ಅಂದಿನ ಪಾಕಿಸ್ತಾನದ ಭಾಗವಾಗಿದ್ದ ಇಂದಿನ ಬಾಂಗ್ಲಾದೇಶದಲ್ಲಿ ಬಾಂಗ್ಲಾ ಭಾಷೆಯನ್ನು ಅಧಿಕೃತ ಭಾಷೆಯಾಗಿ ಗುರುತಿಸಿ ಘೋಷಿಸಬೇಕು ಎಂದು ಹೋರಾಡಿ ವಿದ್ಯಾರ್ಥಿಗಳು ಸತ್ತದಿನದ ನೆನಪಿಗೆ ಈ ಆಚರಣೆಯನ್ನು ಮಾಡಲಾಗುತ್ತಿದೆ.


ವಿಶ್ವ ಮಾತೃ ಭಾಷೆ ದಿವಸದ ಹಿನ್ನೆಲೆ

೧೯೪೭ ರಲ್ಲಿ ಭಾರತದಿಂದ ಪಾಕಿಸ್ತಾನ ವಿಭಜನೆಗೊಂಡಾಗ ಅಲ್ಲಿ ಪೂರ್ವ ಪಾಕಿಸ್ತಾನ, ಪಶ್ಚಿಮ ಪಾಕಿಸ್ತಾನ ಎಂಬ ಎರಡು ಭೂ ಪ್ರದೇಶಗಳು ರಚನೆಯಾದುವು. ಪೂರ್ವ ಪಾಕಿಸ್ತಾನವೆಂದರೆ ಇಂದಿನ ಬಾಂಗ್ಲಾದೇಶ, ಪಶ್ಚಿಮ ಪಾಕಿಸ್ತಾನವೆಂದರೆ ಈಗಿರುವ ಪಾಕಿಸ್ತಾನ. ಪೂರ್ವ ಪಾಕಿಸ್ತಾನದ ಮಾತೃಭಾಷೆ ಬಂಗಾಳಿಯಾಗಿತ್ತು. ಪಶ್ಚಿಮ ಪಾಕಿಸ್ತಾನದ ಮಾತೃಭಾಷೆ ಉರ್ದು ಆಗಿತ್ತು. ೧೯೪೮ ರಲ್ಲಿ ಪಶ್ಚಿಮ ಪಾಕಿಸ್ತಾನ ಮಾತೃಭಾಷೆ ಉರ್ದುವನ್ನು' ರಾಷ್ಟ್ರಭಾಷೆ'ಯೆಂದು ಘೋಷಿಸಿತು.


ಇದರಿಂದ ಪೂರ್ವ ಪಾಕಿಸ್ತಾನದ ಬಂಗಾಳಿ ಭಾಷೆಯನ್ನು ಮಾತಾನಾಡುತ್ತಿದ್ದವರು ತುಂಬ ಅಸಮಾಧಾನಗೊಂಡರು. ಉರ್ದುವನ್ನು ರಾಷ್ಟ್ರಭಾಷೆ ಮಾಡಿದ್ದನ್ನು ವಿರೋಧಿಸಿ ಪ್ರತಿಭಟನೆ ಮಾಡತೊಡಗಿದರು. ಆಗ ಪಾಕ್ ಇವರ ಪ್ರತಿಭಟನೆಯನ್ನು ಹತ್ತಿಕ್ಕುವ ಪ್ರಯತ್ನ ಮಾಡಿತು. ಪಾಕ್ ಸರ್ಕಾರದ ನಿಷೇಧವನ್ನು ಮೀರಿ ೨೧-೦೨-೧೯೫೨ ರಂದು ಢಾಕಾ ವಿಶ್ವವಿದ್ಯಾನಿಲಯದ ವಿದ್ಯಾರ್ಥಿಗಳು ಬೀದಿಗಿಳಿದು ಹೋರಾಟ ಮಾಡತೊಡಗಿದರು.


ಪ್ರತಿಭಟನೆ ತೀವ್ರ ಸ್ವರೂಪ ಪಡೆದಾಗ, ಪಾಕ್ ಸರ್ಕಾರದ ಆದೇಶದಂತೆ ಪೋಲಿಸರು ಪ್ರತಿಭಟನಾಕಾರರ ಮೇಲೆ ಗುಂಡು ಹಾರಿಸಿದಾಗ ಢಾಕಾ ವಿಶ್ವವಿದ್ಯಾನಿಲಯದ ಕೆಲವು ವಿದ್ಯಾರ್ಥಿಗಳು ಅಸುನೀಗಿದರು. ಬಾಂಗ್ಲಾದೇಶದ ಮಾತೃಭಾಷೆ ಬಂಗಾಳಿಯನ್ನು ಆಡಳಿತ ಭಾಷೆಯನ್ನಾಗಿ ಮಾಡಬೇಕೆಂದು ಪ್ರಾಣತೆತ್ತ ವಿದ್ಯಾರ್ಥಿಗಳ ನೆನಪಿಗಾಗಿ ಆ ದಿನವನ್ನು ವಿಶ್ವಸಂಸ್ಥೆಯ ಯುನೆಸ್ಕೊವು "ವಿಶ್ವ ಮಾತೃ ಭಾಷೆ ದಿವಸ"ವನ್ನಾಗಿ ಆಚರಿಸುವಂತೆ ಘೋಷಿಸಿತು.


ಅನಂತರದ ಘಟನೆಗಳು

ಢಾಕಾ ವಿಶ್ವವಿದ್ಯಾನಿಲಯದ ಕೆಲವು ವಿದ್ಯಾರ್ಥಿಗಳ ನಿರಂತರ ಹೋರಾಟದ ಫಲವಾಗಿ ಪಾಕಿಸ್ತಾನ ೨೯-೦೨-೧೯೫೬ ರಲ್ಲಿ ಬಂಗಾಳಿಭಾಷೆಯನ್ನು ಅಧಿಕೃತಭಾಷೆಯಾಗಿ ಘೋಷಿಸಿತು. ಬಾಂಗ್ಲಾದೇಶದಲ್ಲಿ ಫೆಬ್ರವರಿ ೨೧ ರಂದು 'ಶಹೀದ್ ಡೇ' (ಹುತಾತ್ಮರ ಸ್ಮಾರಕಕ್ಕೆ)ಗೆ ಹೂಗುಚ್ಛವನ್ನಿಟ್ಟು ಗೌರವಿಸಲಾಗುತ್ತದೆ. ವಿಶ್ವದ ಅನೇಕ ಕಡೆ ವಿಶ್ವ ಮಾತೃ ಭಾಷೆ ದಿವಸವನ್ನು ಆಚರಿಸಲಾಗುತ್ತಿದೆ.


ಇಂಗ್ಲಿಷ್ ಪ್ರಭಾವ

ಜಾಗತೀಕರಣ ನೇರ ಪ್ರಭಾವ ಸ್ಥಳೀಯ ಭಾಷೆಗಳ ಮೇಲೆ ಆಗುತ್ತಿದೆ. ಇಂಗ್ಲಿಷ್ ಭಾಷೆಯ ಪ್ರಭಾವ ಎರಡು ರೀತಿಯಲ್ಲಿ ಆಗುತ್ತಿದೆ.


ವಿಜ್ಞಾನ/ತಂತ್ರಜ್ಞಾನ ಜ್ಞಾನಭಂಡಾರವು ಬಹುಮಟ್ಟಿಗೆ ಇಂಗ್ಲಿಷ್ ಭಾಷೆಯಲ್ಲಿ ಶೇಖರವಾಗಿದೆ. ಹೊಸ ಸಂಶೋಧನಾ ಪ್ರಬಂಧಗಳು ಇಂಗ್ಲಿಷ್ ಭಾಷೆಯಲ್ಲೇ ಪ್ರಕಟವಾಗುತ್ತಿವೆ. ಹೀಗಾಗಿ ಔದ್ಯೋಗಿಕ ಶಿಕ್ಷಣ ಬಹುಮಟ್ಟಿಗೆ ಇಂಗ್ಲಿಷ್ ಭಾಷೆಯಲ್ಲಿ ನಡೆಯುತ್ತಿದೆ. ಉದ್ಯೋಗಕ್ಕಾಗಿ ಇಂಗ್ಲಿಷ್ ಜ್ಞಾನ ಬೇಕೆಂಬ ಪರಿಕಲ್ಪನೆ ಹುಟ್ಟಿಕೊಂಡಿದೆ. ಹೀಗಾಗಿ ಜನ ಇಂಗ್ಲಿಷ್ ಕಲಿಯಲು ಉತ್ಸುಕರಾಗಿದ್ದಾರೆ.


ಇಂಗ್ಲಿಷ್ ಭಾಷೆಯಿಂದ ನೇರವಾಗಿ ಅನುವಾದ ಮಾಡುವಾಗಲೂ ಸ್ಥಳೀಯ ಭಾಷೆಗಳಿಗೆ ಪೆಟ್ಟು ಬೀಳುತ್ತಿದೆ. ಸ್ಥಳೀಯ ಭಾಷೆಯಲ್ಲಿ ಸಹಜವಾಗಿ ಹೇಳಬಹುದಾದ್ದನ್ನು ಇಂಗ್ಲಿಷ್ ಪದಶಃ ಭಾಷಾಂತರದ ಮೂಲಕ ಕೃತಕವಾಗಿ ಹೇಳುವ ಪರಿಪಾಠ ಪ್ರಾರಂಭವಾಗಿದೆ


ವಿಶ್ವ ಗುಬ್ಬಚ್ಚಿಗಳ ದಿನ

ವಿಶ್ವ ಗುಬ್ಬಚ್ಚಿಗಳ ದಿನ




ಮನೆಯಂಗಣದಲ್ಲಿನ ಗುಬ್ಬಚ್ಚಿಗಳು ಹಾಗೂ ಇನ್ನಿತರ ಪಕ್ಷಿಗಳ ಬಗೆಗೆ ಜನ ಜಾಗೃತಿ ಉಂಟುಮಾಡಿ ಅವುಗಳ ಸಂಕುಲಕ್ಕೆ ಉಂಟಾಗುತ್ತಿರುವ ಭೀತಿಯನ್ನು ತಡೆಗಟ್ಟುವ ಪ್ರಯತ್ನವಾಗಿ ಮಾರ್ಚ್ 20 ದಿನವನ್ನು ವಿಶ್ವ ಗುಬ್ಬಚ್ಚಿಗಳ ದಿನವಾಗಿ ಆಚರಿಸಲಾಗುತ್ತಿದೆ. ಭಾರತದ ನೇಚರ್ ಫಾರೆವರ್ ಸೊಸೈಟಿಯ[೧] ಪ್ರಮುಖ ಆಸಕ್ತಿಯ ಮೇರೆಗೆ ಪ್ರಾರಂಭಗೊಂಡಿರುವ ಈ ಆಚರಣೆಗೆ, ಫ್ರಾನ್ಸಿನ ಇಕೋ-ಸಿಸ್ ಆಕ್ಷನ್ ಫೌಂಡೆಶನ್ ಮತ್ತು ವಿಶ್ವದ ಅನೇಕ ಸಂಸ್ಥೆಗಳು ಸಹಯೋಗ ನೀಡಿವೆ.ಸಂಸ್ಥೆಯ ನಿರ್ಮಾತೃ ಮೊಹಮ್ಮದ್ ದಿಲ್ವಾರ್ ಅವರು 2010ರಲ್ಲಿ ಗುಬ್ಬಚ್ಚಿಗಳ ದಿನವನ್ನು ಜಗತ್ತಿಗೆ ಪರಿಚಯಿಸಿದರು.

ಪ್ರಪಂಚದಾದ್ಯಂತ

ಪ್ರತಿವರ್ಷ ಎನ್‌ಎಫ್‌ಎಸ್‌ಐ ವಿಶ್ವ ಗುಬ್ಬಚ್ಚಿಗಳ ದಿನವನ್ನು ಪ್ರಪಂಚದಾದ್ಯಂತ ಒಟ್ಟು 50 ರಾಷ್ಟ್ರಗಳಲ್ಲಿ ಆಚರಿಸುತ್ತಿದೆ

ಗುಬ್ಬಚ್ಚಿಗಳ ಅವಸಾನಕ್ಕೆ ಕಾರಣ

ಪ್ರಕೃತಿ ಸೌಂದರ್ಯವನ್ನು ಮೂಲೆಗುಂಪು ಮಾಡಿ ತಾಂತ್ರಿಕ ಬದುಕಿಗೆ ಜೋತುಬಿದ್ದಿರುವದು.


ಕೃಷಿಯಲ್ಲಿ ಕೀಟನಾಶಕಗಳ ಬಳಕೆ.


ಪ್ಯಾಕೇಟ್ ಆಹಾರ.


ಬದಲಾದ ಜೀವನಶೈಲಿ.ಇವೆಲ್ಲವೂ ಗುಬ್ಬಚ್ಚಿಗಳಿಗೆ ಆಹಾರದ ಕೊರತೆ ಎದುರಾಗುವಂತೆ ಮಾಡಿದ್ದಲ್ಲದೇ ಅವುಗಳ ಸಾವಿಗೆ ಕಾರಣವಾಗಿದೆ .[೨]


ವಾಸದ ಕೊರತೆ

ಹಿಂದಿನ ಮನೆಗಳು ಹೆಚ್ಚಿನದಾಗಿ ಹಂಚಿನ , ಹುಲ್ಲಿನ ಮನೆಗಳು. ಇವುಗಳು ಗುಬ್ಬಚ್ಚಿಗಳಿಗೆ ಹೇಳಿ ಮಾಡಿಸಿದ ವಾಸಸ್ಥಾನವಾಗಿದ್ದವು. ಆದರೆ ಇಂದಿನ ಮನೆಗಳ ನಿರ್ಮಾಣವೂ ಸಂಪೂರ್ಣವಾಗಿ ಆಧುನಿಕರಣಕ್ಕೆ ಒಳಪಟ್ಟಿರುವದು. ಇಂತಹ ಮನೆಗಳಲ್ಲಿ ಗುಬ್ಬಚ್ಚಿಗಳು ಗೂಡಕಟ್ಟಿಕೊಳ್ಳಲು ಸಾಧ್ಯವಾಗುತ್ತಿಲ್ಲ. ಗೂಡಿಲ್ಲದೇ ಗುಬ್ಬಚ್ಚಿಗಳು ಬಿಸಿಲು, ಮಳೆ , ಗಾಳಿಗೆ ತತ್ತರಿಸುತ್ತಿದ್ದು ಅಳಿವಿನಂಚಿಗೆ ಸಾಗುತ್ತಿವೆ.

ಎನ್‌ಎಫ್‌ಎಸ್‌ಐನ ಜಾಗೃತಿ ಅಭಿಯಾನ

ಎನ್‌ಎಫ್‌ಎಸ್‌ಐ ಇದು ಸ್ಥಾಪನೆಯಾಗಿದ್ದು 2005ರಲ್ಲಿ. ಗುಬ್ಬಚ್ಚಿಗಳು ಅವಸಾನಕ್ಕೆ ಹೋಗುತ್ತಿರುವುದನ್ನರಿತ ಎನ್‌ಎಫ್‌ಎಸ್‌ಐ ಇವುಗಳ ಬಗ್ಗೆ ಅರಿವು ಮೂಡಿಸಲು ಹಾಗೂ ವಾಸಸ್ಥಾನದ ಸಮಸ್ಯೆ ನಿವಾರಿಸಲು ಗೂಡುಗಳನ್ನು ಹಂಚಿಕೆ ಮಾಡುತ್ತಿದೆ

ಚೌಧರಿ ಜನ್ಮದಿನವೇ ರೈತರ ದಿನಾಚರಣೆ’

ಚೌಧರಿ ಜನ್ಮದಿನವೇ ರೈತರ ದಿನಾಚರಣೆ’

'‘ರೈತಪರ ಚಿಂತಕರಾಗಿ, ರೈತರ ಹಿತಾಸಕ್ತಿಗಾಗಿ ಹಂಬಲಿಸುತ್ತಿದ್ದ ಚೌಧರಿ ಚರಣ್‌ಸಿಂಗ್‌ ಅವರ ಜನ್ಮದಿನವನ್ನೇ ರಾಷ್ಟ್ರದಾದ್ಯಂತ ರೈತ ದಿನವನ್ನಾಗಿ ಆಚರಿಸಲಾಗುತ್ತಿದೆ’'  

                                  ‘1979ರಲ್ಲಿ ಭಾರತದ 6ನೇ ಪ್ರಧಾನಿಯಾಗಿದ್ದ ಚೌಧರಿ ಚರಣ್‌ಸಿಂಗ್‌ ಅವರು ಪ್ರಧಾನಿ ಹುದ್ದೆಯಲ್ಲಿ ಕೇವಲ 6 ತಿಂಗಳಿದ್ದರು. ಅವರು ಇದ್ದಷ್ಟೂ ಕಾಲಾವಧಿಯಲ್ಲಿ ರೈತಪರ ಚಿಂತನೆಯನ್ನು ಹೊಂದಿದ್ದರು. ಅವರು ತೆಗೆದುಕೊಂಡ ಪ್ರಮುಖ ನಿರ್ಧಾರಗಳೆಲ್ಲವೂ ರೈತರ ಪರವಾಗಿರುತ್ತಿದ್ದವು, ಜೊತೆಗೆ ಅವರು ಹೊರಡಿಸಿದ ‘ಕೃಷಿಗೆ ಬೆಂಬಲ ಬೆಲೆ’ ಆದೇಶವು ಭಾರತದ ಕೃಷಿಕರ ಹೃದಯದಲ್ಲಿ ಅವರನ್ನು ಅಜರಾಮರನ್ನಾಗಿಸಿದೆ’

                         ಭಾರತದಲ್ಲಿ ರಾಷ್ಟ್ರೀಯ ಕೃಷಿಕ ದಿನವನ್ನು ಹಿಂದಿ ಭಾಷೆಯಲ್ಲಿ ಕಿಶನ್ ದಿವಾಸ್ ಎಂದು ಕರೆಯಲಾಗುತ್ತದೆ [1] ಫಾರ್ಮರ್ ಡೇ ಡಿಸೆಂಬರ್ 23 ರಂದು ಪ್ರತಿ ವರ್ಷ ಆಚರಿಸಲಾಗುತ್ತದೆ [5] , 5 ನೇ ಹುಟ್ಟುಹಬ್ಬದಂದು ಭಾರತದ ಪ್ರಧಾನ ಮಂತ್ರಿ , ಚೌಧರಿ ಚರಣ ಸಿಂಗ್ಭಾರತೀಯ ರೈತರ ಜೀವನ ಸುಧಾರಿಸಲು ಅನೇಕ ನೀತಿಗಳನ್ನು ಪರಿಚಯಿಸಿದ, ಸಹ ರೈತರು ಮುಖಂಡ,. [6]ವಿವಿಧ ಕಾರ್ಯಕ್ರಮಗಳು, ಚರ್ಚೆಗಳು, ವಿಚಾರಗೋಷ್ಠಿಗಳು, ರಸಪ್ರಶ್ನೆ ಸ್ಪರ್ಧೆಗಳು, ಚರ್ಚೆಗಳು, ಕಾರ್ಯಾಗಾರಗಳು, ಪ್ರದರ್ಶನಗಳು, ಪ್ರಬಂಧಗಳು ಬರೆಯುವ ಸ್ಪರ್ಧೆಗಳು ಮತ್ತು ಕಾರ್ಯಗಳನ್ನು ಆಯೋಜಿಸುವ ಮೂಲಕ ಇದನ್ನು ಆಚರಿಸಲಾಗುತ್ತದೆ. [1]


ಅಮೆರಿಕಸಂಪಾದಿಸಿ

ಅಮೇರಿಕದಲ್ಲಿ, ಇದನ್ನು ಪ್ರತಿ ವರ್ಷ ಅಕ್ಟೋಬರ್ 12 ರಂದು ಆಚರಿಸಲಾಗುತ್ತದೆ. ಅಮೆರಿಕಾದ ಇತಿಹಾಸದುದ್ದಕ್ಕೂ ಎಲ್ಲಾ ರೈತರಿಗೆ ಗೌರವ ಸಲ್ಲಿಸಲು ಇದನ್ನು ಆಚರಿಸಲಾಗುತ್ತದೆ .


ರೈತ ಹುತಾತ್ಮ ದಿನ


ಜೂನ್ ೨೧- ಈ ದಿನವನ್ನು ಕರ್ನಾಟಕದಲ್ಲಿದಲ್ಲಿ ರೈತ ಹುತಾತ್ಮ ದಿನವೆಂದು ಆಚರಿಸಲಾಗುತ್ತದೆ.


ಮಲಪ್ರಭಾ ಅಚ್ಚುಕಟ್ಟು ಪ್ರದೇಶದಲ್ಲಿ ೧೯೭೪ರಿಂದ ೧೯೮೦ರವರೆಗೆ ಸತತ ೬ ವರ್ಷದ ಬರಗಾಲ ಬಿದ್ದಾಗಲೂ ಸಹ ಸರಕಾರವು ರೈತರಿಂದ ನೀರಾವರಿ ಕರ, ಬೆಟರಮೆಂಟ್ ಲೆವಿ ಹಾಗು ಸುಸ್ತಿ ಬಡ್ಡಿ ವಸೂಲಿಗೆ ಕಠಿಣ ಕ್ರಮಗಳನ್ನು ತೆಗೆದುಕೊಂಡಿತು. ಅಧಿಕಾರಿಗಳು ರೈತರ ಮನೆಮನೆಗೆ ನುಗ್ಗಿ ಅಲ್ಲಿಯ ಪಾತ್ರೆ- ಪಗಡೆ,ರಂಟೆ- ಕುಂಟಿಗಳನ್ನು ಜಪ್ತ ಮಾಡತೊಡಗಿದರು. ಇದರ ವಿರುದ್ಧ ನವಲಗುಂದನರಗುಂದ,ಸವದತ್ತಿ,ರಾಮದುರ್ಗ ತಾಲೂಕುಗಳ ರೈತರು ೧೯೮೦ ಮಾರ್ಚ್ ೧ ರಂದು ನವಲಗುಂದ ತಾಲೂಕಿನ ಅಳಗವಾಡಿ ಎನ್ನುವ ಹಳ್ಳಿಯಲ್ಲಿ ಬೃಹತ್ ಸಮಾವೇಶ ನಡೆಸಿದರು. ಈ ಸಭೆಯಲ್ಲಿ ಮಲಪ್ರಭಾ ಪ್ರದೇಶ ರೈತ ಸಮನ್ವಯ ಸಮಿತಿಯನ್ನು ರಚಿಸಲಾಯಿತು. ಶ್ರೀಯುತರಾದ ಬಿ.ಆರ್.ಯಾವಗಲ್, ಬಿ.ಸಿ.ಬ್ಯಾಳಿ, ರಾಜಶೇಖರಪ್ಪ ಹೊಸಕೇರಿ, ವಿ.ಎನ್.ಹಳಕಟ್ಟಿ, ಬಿ.ಜಿ.ಸಾಲೂಟಗಿ, ಎಸ್.ಎಮ್.ಬಾಳಿಕಾಯಿ ಈ ಸಮಿತಿಯ ಸಂಚಾಲಕರು. ಮನವಿ, ಧರಣಿ, ಸತ್ಯಾಗ್ರಹ ಯಾವದಕ್ಕೂ ಸರಕಾರ ಕಿವಿಗೊಡಲಿಲ್ಲ.

ಆ ಸಮಯದಲ್ಲಿ ಜಿಲ್ಲಾಧಿಕಾರಿಯಾಗಿದ್ದ ರೇಣುಕಾ ವಿಶ್ವನಾಥನ್ ಮನವಿಕಾರ ರೈತರನ್ನು ಭೇಟಿಯಾಗುವ ಸೌಜನ್ಯವನ್ನೂ ತೋರಲಿಲ್ಲ. ವಿಶೇಷ ಜಿಲ್ಲಾಧಿಕಾರಿ ಗೋವಿಂದರಾಜ ರೈತರನ್ನು ಬೈದು ಕಳುಹಿಸಿದರು. ಇದೆಲ್ಲದರ ಪರಿಣಾಮವಾಗಿ ಜುಲೈ ೨೧ರಂದು ನವಲಗುಂದನರಗುಂದಸವದತ್ತಿ ಹಾಗು ರಾಮದುರ್ಗತಾಲೂಕುಗಳಲ್ಲಿ ಬಂದ್ ಆಚರಿಸಲಾಯಿತು. ಜಿಲ್ಲಾಧಿಕಾರಿಯವರ ಆದೇಶದ ಮೇರೆಗೆ, ನರಗುಂದ ತಹಶೀಲದಾರರು ಪ್ರತಿಭಟಿಸುತ್ತಿದ್ದ ರೈತರನ್ನು ತುಳಿದುಕೊಂಡೇ ಕಚೇರಿಯ ಒಳಗೆ ನಡೆದರು. ಅದೆ ವೇಳೆಗೆ ಪಿ.ಎಸ್.ಐ. ರೈತರ ಮೇಲೆ ಗುಂಡು ಹಾರಿಸಿದರು. ರೊಚ್ಚಿಗೆದ್ದ ಜನ ಕಚೇರಿಯನ್ನು ಧ್ವಂಸ ಮಾಡಿ ಪೋಲೀಸರ ಮೇಲೆ ಪ್ರತಿ ದಾಳಿ ಮಾಡಿದರು. ಈ ಗಲಭೆಯಲ್ಲಿ ಮೂವರು ಪೊಲೀಸರು ಬಲಿಯಾದರೆ, ಪೋಲೀಸ ಗುಂಡೇಟಿಗೆ ಈರಪ್ಪ ಕಡ್ಲಿಕೊಪ್ಪ ಎನ್ನುವ ರೈತ ಬಲಿಯಾದ. ಇದೇ ವೇಳೆ ನವಲಗುಂದದಲ್ಲಿ ನೀರಾವರಿ ಕಚೇರಿಗೆ ಮುತ್ತಿಗೆ ಹಾಕಿದ ರೈತರ ಮೇಲೆ ಗೋಳೀಬಾರ್ ನಡೆಯಿತು. ರೈತ ಬಸಪ್ಪ ಲಕ್ಕುಂಡಿ ಆಹುತಿಯಾದರು. ಸಿಟ್ಟಿಗೆದ್ದ ಜನ ನೀರಾವರಿ ಕಚೇರಿಗೆ ಬೆಂಕಿ ಹಚ್ಚಿ ಕಂಡ ಕಂಡ ಅಧಿಕಾರಿಗಳನ್ನು ಬೆನ್ನಟ್ಟಿ ಥಳಿಸಿದರು.

ಮರುದಿನ ಪ್ರಾರಂಭವಾದದ್ದು ಸರಕಾರದ ಪ್ರತೀಕಾರ ಕಾಂಡ. ನವಲಗುಂದ, ನರಗುಂದದಲ್ಲಿ ಹತ್ತಿದ ಬೆಂಕಿ ಇಡೀ ರ್ನಾಟಕವನ್ನೇ ವ್ಯಾಪಿಸಿತು. ರಾಜ್ಯದಾದ್ಯಂತ ನಡೆದ ಪ್ರತಿಭಟನೆ ಹಾಗು ಪ್ರತಿಯಾಗಿ ನಡೆದ ಗೋಳೀಬಾರುಗಳಲ್ಲಿ ೧೩೯ ರೈತರು ಬಲಿಯಾದರು.ರಾಜ್ಯಾದ್ಯಂತ ರೈತ ಸಂಘಟನೆ ರೂಪುಗೊಂಡಿತು. ಇದರ ಫಲವಾಗಿ ಮುಂದಿನ ವಿಧಾನಸಭಾ ಚುನಾವಣೆಯಲ್ಲಿ ಗುಂಡೂರಾವ್ ನೇತೃತ್ವದ ಕಾಂಗ್ರೆಸ್ ಪಕ್ಷ ಪರಾಭವಗೊಂಡು, ರಾಮಕೃಷ್ಣ ಹೆಗಡೆ ಸರಕಾರ ಅಸ್ತಿತ್ವಕ್ಕೆ ಬಂದಿತು.

ಆ ಕಾರಣದಿಂದ ಜೂನ್ ೨೧ನ್ನು ರೈತ ಹುತಾತ್ಮ ದಿನವಾಗಿ  ಆಚರಿಸಲಾಗುತ್ತಿದೆ. 



ಅಂತರಾಷ್ಟ್ರೀಯ ಮಹಿಳೆಯರ ದಿನ -

ಅಂತರಾಷ್ಟ್ರೀಯ ಮಹಿಳೆಯರ ದಿನ - ಹಿನ್ನೋಟ


ಪ್ರತಿ ವರ್ಷ ಮಾರ್ಚಿ ೮ ರಂದು ವಿಶ್ವದೆಲ್ಲೆಡೆ ಆಚರಿಸಲಾಗುತ್ತದೆ.


ಪೀಠಿಕೆ

ವಿಶ್ವದಾದ್ಯಂತ ಅನೇಕ ದೇಶಗಳಲ್ಲಿ "ಅಂತರಾಷ್ಟ್ರೀಯ ಮಹಿಳೆಯರ ದಿನ" ವನ್ನ ಆಚರಿಸುತ್ತಾರೆ. ಮಹಿಳೆಯರು ಒಂದೇ ಕ್ಷೇತ್ರಕ್ಕೆ ಮಿಸಲಿರದೇ , ಅದು ರಾಷ್ತ್ಟ್ರೀಯ, ಜನಾಂಗೀಯ, ಭಾಷಾವಾರು, ಸಾಂಸ್ಕ್ರತಿಕ, ಆರ್ಥಿಕ ಅಥವಾ ರಾಜಕೀಯ ಕ್ಷೇತ್ರವಾಗಲಿ, ಎಲ್ಲಾದರಲ್ಲು ತಮ್ಮದೆ ಆದ ಛಾಪನ್ನ ಮೂಡಿಸಿದ್ದಾರೆ. ಮಹಿಳೆಯರ ಈ ಪ್ರಗತಿಯನ್ನ ಗುರುತಿಸಿ ಈ ದಿನವನ್ನು ಅವರಿಗೆ ಅರ್ಪಿಸಲಾಗಿದೆ. ೧೯೭೫ರ "ಅಂತರಾಷ್ಟ್ರೀಯ ಮಹಿಳೆಯರ ದಿನ"ದ ಸಮಯದಲ್ಲಿ, ಮಾರ್ಚ್ ೮ ರಂದು ಸಂಯುಕ್ತ ರಾಷ್ಟ್ರಗಳು ಮಹಿಳಾ ದಿನವನ್ನ ಆಚರಿಸಲು ಆರಂಭಿಸಿದವು.


ಎರಡು ವರ್ಷದ ನಂತರ,೧೯೭೭ ರಲ್ಲಿ, "ದಿ ಜನರಲ್ ಅಸ್ಸೆಂಬ್ಲಿ" ಮಹಿಳೆಯರ ಹಕ್ಕು ಮತ್ತು ಶಾಂತಿ ಸ್ಥಾಪನೆಯನ್ನು ಆಯಾ ದೇಶದ ಸದಸ್ಯರು ಗಮನಿಸಿ ತಮ್ಮ ದೇಶದ ಐತಿಹಾಸಿಕ ಮತ್ತು ರಾಷ್ಟ್ರೀಯ ಸಂಪ್ರದಾಯಕ್ಕೆ ತಕ್ಕಂತೆ ಅಳವಡಿಸಿಕೊಳ್ಳುವಂತೆ ಕರೆ ನೀಡಿತು. ಹೀಗೆ ಕರೆನೀಡುವಾಗ ಮಹಿಳೆಯ ಪಾತ್ರ ಹಾಗು ಅವರ ಮೇಲೆ ನಡೆಯುತ್ತಿರುವ ಪಕ್ಷಪಾತವನ್ನು ಗಮನಿಸಿ ಅವರಿಗೆ ಸ್ಪರ್ಧಿಸುವ ಪೂರ್ತಿ ಅವಕಾಶವನ್ನು ನೀಡುವಂತೆ ಘೋಷಿಸಿತು.


ಇತಿಹಾಸಸಂಪಾದಿಸಿ

"ಅಂತರಾಷ್ಟ್ರೀಯ ಮಹಿಳೆಯರ ದಿನ" ಮೊದಲ ಬಾರಿಗೆ ಹೊರಹೊಮ್ಮಿದ್ದು ಕೂಲಿ ಚಳುವಳಿ(ಲೇಬರ್ ಮೊವ್ಮೆಂಟ್ಸ್) ಚಟುವಟಿಕೆ ಉತ್ತರ ಅಮೆರಿಕಮತ್ತು ಯೂರೋಪ್ ಪ್ರದೇಶಗಳಲ್ಲಿ ನಡೆದಾಗ. ೧೯೦೯: ಸಂಯುಕ್ತ ಸಂಸ್ಥಾನಗಳಲ್ಲಿ ಮೊದಲ "ಅಂತ ರಾಷ್ಟ್ರೀಯ ಮಹಿಳೆಯರ ದಿನ"ಫೆಬ್ರವರಿ ೨೮ ರಂದು ಕಂಡು ಬಂತು.


ಅಮೇರಿಕಾದ ಸಾಮಾಜವಾದಿ ಪಕ್ಷ ಈ ದಿನವನ್ನ ಕೆಲಸದ ಪರಿಸ್ಥಿತಿಯನ್ನ ವಿರೋಧಿಸಿ ನ್ಯುಯಾರ್ಕ್ ನಗರದಲ್ಲಿ ನಡೆದ "ಸರ್ಕಾರಿ ಕಾರ್ಮಿಕರ ಚಳುವಳಿ" ಯಲ್ಲಿ ಪ್ರತಿಭಟಿಸಿದ ಮಹಿಳೆಯರಿಗೆ ಅರ್ಪಿಸಲಾರಿತು. ೧೯೧೦: ಅಂತರಾಷ್ಟ್ರೀಯ ಸಮಾಜವಾದಿ ಕೊಪೆಂಹಗೆನ್ ನಲ್ಲಿ ನಡೆದ ಚರ್ಚೆಯಲ್ಲಿ ಅದಿಷ್ಟಿತಗೊಳಿಸಲಾಯಿತು. ಈ ಪ್ರಸ್ಥಾಪವನ್ನು ಅವಿರೋಧವಾಗಿ ೧೦೦ ಮಹಿಳೆಯರು ೧೭ ದೇಶಗಳಿಂದ ಸಹಕರಿಸಿದರು, ಇದು ಫಿನ್ನಿಷ್ ಪಾರ್ಲಿಮೆಂಟ್ ಗೆ ಆಯ್ಕೆಯಾದ ಮೊದಲ ಮೂವರು ಮಹಿಳೆಯರನ್ನೂ ಸಹ ಒಳಗೊಂಡಿತ್ತು.


೧೯೧೧: ಕೊಪೆಂಹಗೆನ್ ನ ಮೊದಲ ಹೆಜ್ಜೆಯ ಫಲಿತಾಂಶವಾಗಿ, ಅಂತರಾಷ್ಟ್ರೀಯ ಮಹಿಳೆಯರ ದಿನವನ್ನ ಮೊದಲ ಬಾರಿಗೆ ಮಾರ್ಚ್ ೧೯ ರಂದು ಆಸ್ಟ್ರೇಲಿಯ,ಡೆನ್ಮಾರ್ಕ್ಜರ್ಮನಿ ಮತ್ತು ಸ್ವಿಡ್ಜರ್ಲ್ಯಾಂಡ್ ದೇಶಗಳು ಗುರುತಿಸಿದವು. ಅಂದು ಒಂದು ಮಿಲಿಯನ್ ಗಿಂತಲು ಹೆಚ್ಹು ಮಹಿಳೆಯರು ಹಾಗು ಪುರುಷರು ಈ ಚಳುವಳಿಯಲ್ಲಿ ಭಾಗವಹಿಸಿದರು.


ಇದಲ್ಲದೇ ಮತಚಲಾಯಿಸುವ ಹಕ್ಕು, ಸಾರ್ವಜನಿಕ ಕಛೇರಿ, ಮಹಿಳೆಯರಿಗೆ ಕೆಲಸ ಮಾಡುವ ಹಕ್ಕು ಹಾಗು ಉದ್ಯೋಗ ತರಬೇತಿಯನ್ನ ಜಾರಿಗೆ ತರಲು ಬೇಡಿಕೆಯಿಟ್ಟಿದ್ದಲ್ಲದೇ ಕೆಲಸದಲ್ಲಿನ ತಾರತಮ್ಯವನ್ನ ವಿರೋಧಿಸಿ ಪ್ರತಿಭಟಿಸಿದರು. ೧೯೧೩-೧೯೧೪ :ಅಂತರಾಷ್ಟ್ರೀಯ ಮಹಿಳೆಯರ ದಿನದ ಆಚರಣೆ "೧ನೇ ವಿಶ್ವ ಯುದ್ಧ"ವನ್ನ ತಡೆಗಟ್ಟುವ ಯಾಂತ್ರಿಕ ಕೌಶಲ್ಯವಾಗಿ ಮಾರ್ಪಟ್ಟಿತು.


ಇದೇ ವೇಳೆಯಲ್ಲಿ ಶಾಂತಿ ಚಳುವಳಿಯ ಅಂಗವಾಗಿ ರಷ್ಯಾದ ಮಹಿಳೆಯರು ಫೆಬ್ರವರಿಯ ಕೊನೆಯವಾರದಲ್ಲಿ ವಿಶ್ವ ಮಹಿಳಾ ದಿನವನ್ನ ಆಚರಿಸಿ ಗಮನಸೆಳೆದರು. ಅತ್ತ ಯುರೋಪಿನಲ್ಲಿ ಅದೇ ಸಾಲಿನ ಮಾರ್ಚಿ ೮ ರಂದು ಮಹಿಳೆಯರು ಯುದ್ಧನೀತಿಯನ್ನ ವಿರೋಧಿಸಿ, ಐಕ್ಯಮತ ವನ್ನ ಸಹಕರಿಸಿ ಬ್ರುಹತ್ ಚಳುವಳಿ ನಡೆಸಿದರು.


೧೯೧೭: ಮತ್ತೆ ಯುದ್ಧ ನೀತಿಯನ್ನ ವಿರೋಧಿಸಿ ರಷ್ಯಾದ ಮಹಿಳೆಯರು ಊಟ ಮತ್ತು ಶಾಂತಿಚಳುವಳಿಯನ್ನ ಫೆಬ್ರವರಿ ತಿಂಗಳ ಕೊನೆಯಭಾನುವಾರದಲ್ಲಿಇದು ಗ್ರೆಗೊರಿಯನ್ಕ್ಯಾಲೆಂಡರಿನ ಪ್ರಕಾರ ಮಾರ್ಚಿ ೮) ನಡೆಸಿದರು.


ನಾಲ್ಕು ವಾರಗಳ ನಂತರ ರಾಜ ಮನೆತನದ ಆಳ್ವಿಕೆಯನ್ನು ನಿಲ್ಲಿಸಿ ಮತಚಲಾಯಿಸುವ ಅಧಿಕಾರವನ್ನ ಸರ್ಕಾರ ನೀಡಿತು. ಅಂದಿನ ದಿನಗಳಲ್ಲಿ ಮಹಿಳಾ ದಿನಾಚರಣೆ ಮುಂದುವರೆದ ಮತ್ತು ಮುಂದುವರೆಯುತ್ತಿರುವ ದೇಶಗಳಲ್ಲಿ ಹೊಸ ಆಯಮವನ್ನ ಪಡೆಯಿತು.

ಬೆಳೆಯುತ್ತಿದ್ದ ಅಂತರಾಷ್ಟ್ರೀಯ ಮಹಿಳಾ ಚಳುವಳಿ, ಅವುಗಳ ಸಾಮರ್ಥ್ಯವನ್ನ ಹೆಚ್ಹಿಸಿದ ನಾಲ್ಕು "ಜಾಗತಿಕ ಸಂಯುಕ್ತ ರಾಷ್ಟ್ರೀಯ ಮಹಿಳಾ ಸಮಾಲೋಚನೆ", ಮಹಿಳಾ ಹಕ್ಕು, ರಾಜಕೀಯ ಹಾಗು ಆರ್ಥಿಕ ಕ್ಷೆತ್ರಗಳಲ್ಲಿ ಭಾಗವಹಿಸುವ ಹಕ್ಕನ್ನ ಪಡೆಯಲು ಪೋಷಿಸಿದವು. ದಿನಕಳೆದಂತೆ ಅಂತರಾಷ್ಟ್ರೀಯ ಮಹಿಳೆಯರ ದಿನ ಬೆಳವಣಿಗೆಯ ಪ್ರತಿಬಿಂಬದ ಜೊತೆಗೆ ಸಾಧರಣ ಮಹಿಳೆಯ ಧೀರತನ ಮತ್ತು ಧೃಡತೆ ದೇಶ ಹಾಗು ಸಮುದಾಯದ ಇತಿಹಾಸದಲ್ಲಿ ವಹಿಸಿದ ಅಸಾಧಾರಣ ಪಾತ್ರವನ್ನ ಬಿಂಬಿಸುತ್ತಾ ಬದಲಾವಣೆಯ ಕರೆಯನ್ನ ನೀಡುತ್ತದೆ.


ಸಂಯುಕ್ತ ರಾಷ್ರಗಳು ಮತ್ತು ಲಿಂಗ ಸಮಾನತೆಸಂಪಾದಿಸಿ

೧೯೪೫ ರಲ್ಲಿ ಸಹಿ ಮಾಡಿದ ಸಂಯುಕ್ತ ರಾಷ್ಟ್ರಗಳ ಅಂತರಾಷ್ಟ್ರೀಯ "ಲಿಂಗ ಸಮಾನತಾ ತತ್ವ" ಅಂಗೀಕಾರಕ್ಕೆ ಬಂತು.ಅಲ್ಲಿಯ ನಂತರ ವಿಶ್ವವ್ಯಾಪ್ಯ ಒಪ್ಪಂದ ನೀತಿ, ನಿರ್ದಿಷ್ಟಮಾನ, ಮಹಿಳಾಭಿವ್ರುದ್ದಿ ಕಾರ್ಯಕ್ರಮ ಹಾಗು ಯೋಜನೆಗಳು ಕಾರ್ಯರೂಪಕ್ಕೆ ಬಂದವು. ಕೆಲವರ್ಷಗಳ ನಂತರ ಸಂಯುಕ್ತ ರಾಷ್ರಗಳು ಮತ್ತು ಅದರ ತಾಂತ್ರಿಕ ಏಜೆನ್ಸ್ಸಿಗಳು ಮಾನವ ಹಕ್ಕುಗಳನ್ನ ಅಬಿನಂಧಿಸಿ ಮಹಿಳೆಯರು ಭಾಗವಹಿಸುವುದನ್ನ ಪ್ರೋತ್ಸಾಹಿಸಿದವು. ಮಹಿಳೆಯರನ್ನ ಪ್ರಭಲಗೊಳಿಸುವ ಸಂಯುಕ್ತ ರಾಷ್ರಗಳ ಕಾರ್ಯ ವಿಶ್ವದಾದ್ಯಂತ ಮುಂದುವರೆಯಿತು