ಸೋಮವಾರ, ಡಿಸೆಂಬರ್ 24, 2018

ಇತಿಹಾಸದಲ್ಲಿಯ ದಿನಾಚರಣೆಗಳು(ತಿಂಗಳುಗಳ ಪ್ರಕಾರ)

ಇತಿಹಾಸದಲ್ಲಿ ಈ ದಿನ


ಜನವರಿ:

ಗಣರಾಜ್ಯೋತ್ಸವ

ಫೆಬ್ರುವರಿ:

ಫೆಬ್ರವರಿ ೧: ಭಾರತೀಯ ಕರಾವಳಿ ಸುರಕ್ಷಾ ದಿನಾಚರಣೆ


ಫೆಬ್ರುವರಿ ೩ಮೊಜಾಂಬಿಕ್ನಲ್ಲಿ 'ನಾಯಕರ ದಿನಾಚರಣೆ'.


ಫೆಬ್ರುವರಿ ೩೧೯೬೬ರಲ್ಲಿ ಸೋವಿಯೆಟ್ ಒಕ್ಕೂಟದ ಲೂನ ೯ ಚಂದ್ರನ ಮೇಲೆ ಇಳಿದ ಮೊದಲ ಗಗನನೌಕೆಯಾಯಿತು.


ಫೆಬ್ರುವರಿ ೪ಶ್ರೀಲಂಕಾದಲ್ಲಿ ಸ್ವಾತಂತ್ರ್ಯ ದಿನಾಚರಣೆ.


ಫೆಬ್ರುವರಿ ೭೧೯೯೨ರಲ್ಲಿ ಯುರೋಪಿನ ಒಕ್ಕೂಟವನ್ನು ಸ್ಥಾಪಿಸಿದ ಮಾಸ್ಟ್ರಿಕ್ಟ್ ಒಪ್ಪಂದಕ್ಕೆ ಸಹಿ ಹಾಕಲಯಿತು.


ಫೆಬ್ರುವರಿ ೧೧ಜಪಾನ್ನಲ್ಲಿ ರಾಷ್ಟ್ರದ ಸ್ಥಾಪನೆ ದಿನಾಚರಣೆ'.


ಫೆಬ್ರುವರಿ ೧೨ಚಾರ್ಲ್ಸ್ ಡಾರ್ವಿನ್ ಮತ್ತು ಅಬ್ರಹಮ್ ಲಿಂಕನ್ (ಚಿತ್ರಿತ) ಅವರ ಜನ್ಮದಿನಾಚರಣೆಗಳು.


ಫೆಬ್ರುವರಿ ೧೪ಪ್ರೇಮಿಗಳ ದಿನಾಚರಣೆ.


ಫೆಬ್ರವರಿ ೨೦ಅರುಣಾಚಲ ಪ್ರದೇಶ ದಿನ


ಫೆಬ್ರುವರಿ ೨೧ಯುನೆಸ್ಕೊ ಘೋಷಿತ ಅಂತರರಾಷ್ಟ್ರೀಯ ಮಾತೃಭಾಷೆ ದಿನಾಚರಣೆ.


ಫೆಬ್ರವರಿ ೨೮: ರಾಷ್ಟ್ರೀಯ ವಿಜ್ಞಾನ ದಿನ


ಮಾರ್ಚ್ಸಂಪಾದಿಸಿ

ಮಾರ್ಚ್:

Frauentag 1914 Heraus mit dem Frauenwahlrecht

ಮಾರ್ಚ್ ೬ಘಾನದಲ್ಲಿಸ್ವಾತಂತ್ರ್ಯ ದಿನಾಚರಣೆ.


ಮಾರ್ಚ್ ೮ಅಂತರರಾಷ್ಟ್ರೀಯ ಮಹಿಳಾ ದಿನಾಚರಣೆ(ಚಿತ್ರಿತ)


ಮಾರ್ಚ್ ೧೭ಐರ್ಲೆಂಡ್ನಲ್ಲಿಸೇಂಟ್ ಪ್ಯಾಟ್ರಿಕ್ದಿನಾಚರಣೆ.


ಮಾರ್ಚ್ ೧೫: ಗ್ರಾಹಕರ ದಿನ


ಮಾರ್ಚ್ ೨೦: ವಿಶ್ವ ಅರಣ್ಯ ದಿನ, ಇರಾನ್ ದೇಶದಲ್ಲಿ ನೌರೋಜ್ ಹಬ್ಬ.


ಮಾರ್ಚ್ ೨೨: ವಿಶ್ವ ಜಲದಿನ


ಮಾರ್ಚ್ ೨೩: ವಿಶ್ವ ಖಗೋಳಶಾಸ್ತ್ರ ಅಧ್ಯಯನ ದಿನ


ಮಾರ್ಚ್ ೨೪: ವಿಶ್ವ ಕ್ಷಯ ದಿನ


ಮಾರ್ಚ್ ೨೬ಬಾಂಗ್ಲಾದೇಶದಲ್ಲಿ ಸ್ವಾತಂತ್ರ್ಯ ದಿನಾಚರಣೆ.


ಮಾರ್ಚ್ ೩೧: ವಾರ್ಷಿಕ ಬ್ಯಾಂಕ್ ಲೆಕ್ಕಪತ್ರ ಮುಕ್ತಾಯ ದಿನ


ಏಪ್ರಿಲ್ಸಂಪಾದಿಸಿ

ಏಪ್ರಿಲ್:

ಏಪ್ರಿಲ್ ೧: ವಿಶ್ವದ ಹಲವೆಡೆ ಮೂರ್ಖರ ದಿನ, ವಾರ್ಷಿಕ ಬ್ಯಾಂಕ್ ಲೆಕ್ಕ ಪತ್ರ ಆರಂಭ ದಿನ


ಏಪ್ರಿಲ್ ೭ವಿಶ್ವ ಆರೋಗ್ಯ ದಿನ


ಏಪ್ರಿಲ್ ೮ಹಿಂದೂ ಧರ್ಮದಲ್ಲಿ ರಾಮ ನವಮಿ ಹಬ್ಬ ಆಚರಣೆ


ಏಪ್ರಿಲ್ ೧೨ಕನ್ನಡ ಚಿತ್ರರಂಗದ ಮೇರುನಟ ಡಾ.ರಾಜ್‍ಕುಮಾರ್ ನಿಧನ, ವಿಶ್ವ ಆಕಾಶಯಾನ ದಿನ.


ಏಪ್ರಿಲ್ ೧೩ಜೈನ ಧರ್ಮದಲ್ಲಿ ಮಹಾವೀರ ಜಯಂತಿಜಲಿಯನ್ ವಾಲಾಬಾಗ್ ದಿನ.


ಏಪ್ರಿಲ್ ೧೪ಭಾರತದ ಸಂವಿಧಾನದ ಪಿತಾಮಹ ಅಂಬೇಡ್ಕರ್ (ಚಿತ್ರಿತ) ಜಯಂತಿ.


ಏಪ್ರಿಲ್ ೧೮: ವಿಶ್ವ ಪರಂಪರೆಯ ದಿನ.


ಏಪ್ರಿಲ್ ೨೨ಭೂಮಿ ದಿನ.


ಏಪ್ರಿಲ್ ೨೩ವಿಶ್ವ ಪುಸ್ತಕ ದಿನ.


ಏಪ್ರಿಲ್ ೨೪ಡಾ.ರಾಜ್‍ಕುಮಾರ್ ಜನ್ಮದಿನಾಚರಣೆ, ಮಾನವ ಏಕತಾ ದಿನ


ಮೇಸಂಪಾದಿಸಿ

ಮೇ:

ಮೇ ೧ಕಾರ್ಮಿಕರ ದಿನಾಚರಣೆ.


ಮೇ ೩: ಪತ್ರಿಕಾ ಸ್ವಾತಂತ್ರ್ಯ ದಿನ


ಮೇ ೮ಅಂತಾರಾಷ್ಟ್ರೀಯ ರೆಡ್ ಕ್ರಾಸ್ ಸಂಸ್ಥೆದಿನಾಚರಣೆ.


ಮೇ ೯ಅ.ನ.ಕೃಷ್ಣರಾಯರ ಜನ್ಮದಿನ, ೧೯೪೫ರಲ್ಲಿಎರಡನೇ ಮಹಾಯುದ್ಧ ಕೊನೆಗೊಂಡ ದಿನ.


ಮೇ ೧೦ಭಾರತದ ಮೊದಲನೇ ಸ್ವಾತಂತ್ರ್ಯ ಸಂಗ್ರಾಮದ ೧೫೧ನೇ ವಾರ್ಷಿಕೋತ್ಸವ.


ಮೇ ೧೨: ವಿಶ್ವದ ಹಲವೆಡೆ ತಾಯಂದಿರ ದಿನ.


ಮೇ ೧೩: ತತ್ವಜ್ಞಾನಿಗಳ ದಿನ, ರಾಷ್ಟ್ರೀಯ ಭಾವೈಕ್ಯತೆಯ ದಿನ


ಮೇ ೧೪ಗೌತಮ ಬುದ್ಧನ (ಚಿತ್ರಿತ) ಜನ್ಮದಿನೋತ್ಸವವಾದ ಬುದ್ಧ ಪೂರ್ಣಿಮ.


ಮೇ ೧೫: ಅಂತಾರಾಷ್ಟ್ರೀಯ ಕುಟುಂಬ ದಿನ


ಮೇ ೧೭: ವಿಶ್ವ ದೂರಸಂಪರ್ಕ ದಿನ


ಮೇ ೨೧ಭಯೋತ್ಪಾದನೆ ವಿರೋಧಿ ದಿನ


ಮೇ ೨೪ಕಾಮನ್ ವೆಲ್ತ್ ದಿನ


ಮೇ ೨೯೧೯೫೩ರಲ್ಲಿ ಎಡ್ಮಂಡ್ ಹಿಲರಿ ಮತ್ತು ತೇನ್‌ಸಿಂಗ್ ನೋರ್ಗೆಯವರಿಂದ ಮೌಂಟ್ ಎವರೆಸ್ಟ್ಪರ್ವತದ ಮೊದಲ ಆರೋಹಣ - ಮೌಂಟ್ ಎವರೆಸ್ಟ್ ದಿನ


ಮೇ ೩೦ಫ್ರಾನ್ಸ್ ದೇಶದ ನಾಯಕಿ ಜೋನ್ ಆಫ್ ಆರ್ಕ್ ದಹನದ ಆಚರಣೆ.


ಮೇ ೩೧: ವಿಶ್ವ ತಂಬಾಕುರಹಿತ ದಿನ


ಜೂನ್

ಮಧುಮೇಹದ ಯುನಿವರ್ಸಲ್ ನೀಲಿ ವಲಯ ಚಿಹ್ನೆ

ಜೂನ್ ೫ವಿಶ್ವ ಪರಿಸರ ದಿನ


ಜೂನ್ ೧೨ : ಬಾಲ ಕಾರ್ಮಿಕರ ವಿರುದ್ಧ ವಿಶ್ವ ದಿನ.


ಜೂನ್ ೧೨ಫಿಲಿಪ್ಪೀನ್ಸ್ ದೇಶದ ಸ್ವಾತಂತ್ರ್ಯ ದಿನಾಚರಣೆ.


ಜೂನ್ ೧೫ಅಂತರರಾಷ್ಟ್ರೀಯ ಕ್ರಿಕೆಟ್ ಮಂಡಳಿಯ ಸ್ಥಾಪನೆಯ ವಾರ್ಷಿಕೋತ್ಸವ.


ಜೂನ್ ೧೮ಗೋವಾ ವಿಮೋಚನೆ ದಿನ ಜೂನ್ ೧೮ ಗೋವಾ ವಿಮೋಚನೆ ದಿನ .


ಜೂನ್ ೨೦ :ವಿಶ್ವ ನಿರಾಶ್ರಿತರ ದಿನ .


ಜೂನ್ ೨೧ಅಂತಾರಾಷ್ಟ್ರೀಯ ಯೋಗ ದಿನ


ಜೂನ್ ೨೬: ವಿಶ್ವ ಮಾದಕ ವಸ್ತು ನಿರ್ಮೂಲನಾ ದಿನ, ತುರ್ತು ಪರಿಸ್ಥಿತಿ ವಿರೋಧಿ ದಿನ


ಜೂನ್ ೨೭:(ಚಿತ್ರಿತ) ವಿಶ್ವ ಮಧುಮೇಹ ದಿನ


ಜೂನ್ ೨೮: ಬಡತನ ದಿನ



ಜುಲೈ:

ಜುಲೈ ೧ವೈದ್ಯರ ದಿನ


ಜುಲೈ ೨೧೯೭೬ರಲ್ಲಿ ವಿಯೆಟ್ನಾಮ್ ದೇಶದ ಉತ್ತರ ಮತ್ತು ದಕ್ಷಿಣ ಭಾಗಗಳ ಏಕೀಕರಣ.


ಜುಲೈ ೪ಅಮೇರಿಕ ಸಂಯುಕ್ತ ಸಂಸ್ಥಾನದಲ್ಲಿ ಸ್ವಾತಂತ್ರ್ಯ ದಿನಾಚರಣೆ.


ಜುಲೈ ೧೧:ವಿಶ್ವ ಜನಸಂಖ್ಯಾ ದಿನ


ಜುಲೈ ೧೨: ಕನ್ನಡ ಕುಲ ಪುರೋಹಿತ ಹಾಗೂ ಕನ್ನಡ ಏಕೀಕರಣದ ರೂವಾರಿ ಆಲೂರು ವೆಂಕಟರಾಯರಜನುಮ ದಿನ.


ಜುಲೈ ೧೩ರೋಮ್ ಗಣರಾಜ್ಯದ ಅಧಿಪತಿ ಜೂಲಿಯಸ್ ಸೀಜರ್ ಹುಟ್ಟಿದ ದಿನ


ಜುಲೈ ೧೪ಫ್ರೆಂಚ್ ಕ್ರಾಂತಿಯ ವಾರ್ಷಿಕೋತ್ಸವದ ಆಚರಣೆಯಾದ ಬ್ಯಾಸ್ಟಿಲ್ ದಿನಾಚರಣೆ.


ಜುಲೈ ೧೭: ಕನ್ನಡದ ಹೆಸರಾಂತ ನಟಿಯಾಗಿದ್ದ ದಿ॥ಕಲ್ಪನಾರ ಜನುಮ ದಿನ.


ಜುಲೈ ೧೯: ಪ್ರಮುಖವಾಗಿ ಹಿಂದುಗಳಿಗೆ ಗುರುಗಳಿಗೆ ವಂದಿಸುವ ದಿನ ಗುರು ಪೂರ್ಣಿಮಾ


ಜುಲೈ ೨೦ಅಪೋಲೊ ೧೧ರ ಗಗನಯಾನಿಗಳು (ಚಿತ್ರಿತನೀಲ್ ಆರ್ಮ್‌ಸ್ಟ್ರಾಂಗ್ ಮತ್ತು ಬಜ್ ಆಲ್ಡ್ರಿನ್ಚಂದ್ರನ ಮೇಲೆ ಕಾಲಿಟ್ಟ ಮೊದಲ ಮಾನವರಾದರು.


ಜುಲೈ ೨೪ಎಕ್ವಡಾರ್ ಮತ್ತು ವೆನೆಜುವೆಲಾದೇಶಗಳಲ್ಲಿ ಸಿಮೋನ್ ಬೊಲಿವಾರ್ ದಿನಾಚರಣೆ.


ಜುಲೈ ೨೬ಕಾರ್ಗಿಲ್ ವಿಜಯ ದಿನ


ಜುಲೈ ೨೮೧೯೧೪ರಲ್ಲಿ ಆಸ್ಟ್ರಿಯ-ಹಂಗೆರಿಯು ಸೆರ್ಬಿಯಾದ ಮೇಲೆ ಯುದ್ಧವನ್ನು ಘೋಷಿಸಿ ಮೊದಲನೇ ವಿಶ್ವಯುದ್ಧ ಪ್ರಾರಂಭವಾಯಿತು.


ಜುಲೈ ೨೯: ಆಧುನಿಕ ರಂಗಭೂಮಿಯ ಹರಿಕಾರ ಎಂದು ಪ್ರಸಿದ್ದಿಯಾಗಿದ್ದ ಟಿ.ಪಿ.ಕೈಲಾಸಂ ಜನುಮ ದಿನ.


ಜುಲೈ ೨೯೧೯೪೭ರಲ್ಲಿ ಪ್ರಪಂಚದ ಮೊದಲ ಸಾಮಾನ್ಯ ಬಳಕೆಯ ಗಣಕಯಂತ್ರವಾದ ಎನಿಯಾಕ್(ENIAC) ಅಮೇರಿಕ ದೇಶದಲ್ಲಿ ಚಾಲನೆಗೆ ಬಂದಿತು.


ಆಗಸ್ಟ್

ಆಗಸ್ಟ್ ೧೧೯೦೭ರಲ್ಲಿ ಇಂಗ್ಲೆಂಡ್ನಲ್ಲಿ ರಾಬರ್ಟ್ ಬಾಡೆನ್-ಪೊವೆಲ್ ಸ್ಕೌಟ್ ಶಿಬಿರವನ್ನು ಪ್ರಾರಂಭಿಸಿ ಸ್ಕೌಟ್ ಚಳುವಳಿಗೆ ನಾಂದಿ ಹಾಕಿದರು, ವಿಶ್ವ ಎದೆಹಾಲು ದಿನ.


ಆಗಸ್ಟ್ ೨: ಕ್ರಿ.ಪೂ. ೨೧೬ರಲ್ಲಿ ಹ್ಯಾನಿಬಾಲ್ ನೇತೃತ್ವದ ಕಾರ್ಥೇಜ್‍ನ ಸೇನೆ ಎರಡನೇ ಪ್ಯೂನಿಕ್ ಯುದ್ಧದಲ್ಲಿ ರೋಮ್ ಗಣರಾಜ್ಯವನ್ನು ಸೋಲಿಸಿತು.


ಆಗಸ್ಟ್ ೬೧೯೪೫ರಲ್ಲಿ ಎರಡನೇ ವಿಶ್ವಯುದ್ಧದಲ್ಲಿ ಅಮೇರಿಕ ದೇಶದ ವಾಯುಸೇನೆಯು ಜಪಾನಿನಹಿರೋಶಿಮ ನಗರದ ಮೇಲೆ ಮೊದಲ ಅಣು ಬಾಂಬ್ ಉಪಯೋಗಿಸಿತು (ಚಿತ್ರಿತ).


ಆಗಸ್ಟ್ ೮‎ಸ್ನೇಹ ದಿನಾಚರಣೆ


ಆಗಸ್ಟ್ ೯: ಸಂಸ್ಕೃತ ದಿನ, ನಾಗಾಸಾಕಿ ದಿನ, ಕ್ವಿಟ್ ಇಂಡಿಯಾ ದಿನ, ೧೯೭೪ರಲ್ಲಿ ಅಮೇರಿಕ ದೇಶದ ರಾಷ್ಟ್ರಪತಿಯಾಗಿದ್ದ ರಿಚರ್ಡ್ ನಿಕ್ಸನ್ ವಾಟರ್‌ಗೇಟ್ ಘಟನೆಯಿಂದ ರಾಜೀನಾಮೆ ನೀಡಿದರು.


ಆಗಸ್ಟ್ ೯ಜ್ಞಾನಪೀಠ ಪ್ರಶಸ್ತಿ ಪುರಸ್ಕೃತ ದಿ॥ವಿನಾಯಕ ಕೃಷ್ಣ ಗೋಕಾಕ್ ರವರ ಜನ್ಮ ದಿನ.


ಆಗಸ್ಟ್ ೧೨: ವಿಶ್ವ ಆನೆಗಳ ದಿನ


ಆಗಸ್ಟ್ ೧೩: ವಿಶ್ವ ಎಡಗೈಯವರ ದಿನ


ಆಗಸ್ಟ್ ೧೫೧೯೪೭ರಲ್ಲಿ ಬ್ರಿಟೀಷ್ ರಾಜ್ಯ ಇಬ್ಬಾಗಗೊಂಡು ಭಾರತವು ಸ್ವಾತಂತ್ರ್ಯ ಪಡೆಯಿತು.


ಆಗಸ್ಟ್ ೧೫: ನಾಗರಪಂಚಮಿ


ಆಗಸ್ಟ್ ೧೯: ವಿಶ್ವ ಛಾಯಾಗ್ರಹಣ ದಿನ


ಆಗಸ್ಟ್ ೨೨೧೭೯೧ರಲ್ಲಿ ಹೈತಿಯಲ್ಲಿ ಗುಲಾಮರುದಂಗೆಯೆದ್ದು ಹೈತಿ ಕ್ರಾಂತಿಯ ಪ್ರಾರಂಭ.


ಆಗಸ್ಟ್ ೨೪: ಹಿಂದುಗಳಿಗೆ ವರಮಹಾಲಕ್ಷ್ಮಿ ವ್ರತ


ಆಗಸ್ಟ್ ೨೪ಓಣಂ


ಆಗಸ್ಟ್ ೨೮: ನಾಗರೀಕ ಹಕ್ಕು ದಿನ


ಆಗಸ್ಟ್ ೨೯ರಾಷ್ಟ್ರೀಯ ಕ್ರೀಡಾ ದಿನ


ಸೆಪ್ಟೆಂಬರ್:

ಸೆಪ್ಟೆಂಬರ್ ೫ : ಭಾರತದ ರಾಷ್ಟ್ರಪತಿಯಾಗಿದ್ದ ಸರ್ವಪಳ್ಳಿ ರಾಧಾಕೃಷ್ಣನ್ ಅವರ ಹುಟ್ಟು ಹಬ್ಬದ ನೆನಪಿನಲ್ಲಿ ಶಿಕ್ಷಕರ ದಿನಾಚರಣೆ.


ಸೆಪ್ಟೆಂಬರ್ ೬ : ೧೫೨೨ರಲ್ಲಿ ಫೆರ್ಡಿನೆಂಡ್ ಮೆಗಲನ್ನೇತೃತ್ವದಲ್ಲಿ ಹೊರಟಿದ್ದ ವಿಕ್ಟೋರಿಯ ಹಡಗು ೨೬೫ ದಿನಗಳ ನಂತರ ಪ್ರಪಂಚವನ್ನು ಸುತ್ತಿ ಬಂದ ಮೊದಲ ಹಡಗಾಯಿತು.


ಸೆಪ್ಟೆಂಬರ್ ೮ : ಯೇಸುಕ್ರಿಸ್ತನ ತಾಯಿ ಮರಿಯಾ ಮಾತೆಯ ಜನನೋತ್ಸವ.


ಸೆಪ್ಟೆಂಬರ್ ೮ : ಪೂರ್ಣಚಂದ್ರ ತೇಜಸ್ವಿಯವರ ಹುಟ್ಟು ಹಬ್ಬ.


ಸೆಪ್ಟೆಂಬರ್ ೧೧ : ೨೦೦೧ರಲ್ಲಿ ಅಮೇರಿಕ ದೇಶದ ನ್ಯೂ ಯಾರ್ಕ್ ನಗರದ ವರ್ಲ್ಡ್ ಟ್ರೇಡ್ ಸೆಂಟರ್ ಕಟ್ಟಗಳ ಮೇಲೆ ಭಯೋತ್ಪಾದಕರಿಂದ ಅಪಹರಿಸಲ್ಪಟ್ಟ ವಿಮಾನಗಳಿಂದ ದಾಳಿ (ಚಿತ್ರಿತ).


ಸೆಪ್ಟೆಂಬರ್ ೧೪ : ೧೯೫೯ರಲ್ಲಿ ಸೋವಿಯೆಟ್ ಒಕ್ಕೂಟಉಡಾವಣೆ ಮಾಡಿದ ಲೂನ ೨ ಗಗನನೌಕೆ ಚಂದ್ರನನ್ನುತಲುಪಿದ ಮೊದಲ ಮಾನವ ನಿರ್ಮಿತ ವಸ್ತು ಆಯಿತು.


ಸೆಪ್ಟೆಂಬರ್ ೧೫ : ಸರ್ ಎಂ.ವಿಶ್ವೇಶ್ವರಯ್ಯನವರಜನ್ಮದಿನ. ಅವರ ಹುಟ್ಟುಹಬ್ಬದ ನೆನಪಿನಲ್ಲಿ ಎಂಜಿನಿಯರುಗಳ ದಿನಾಚರಣೆ


ಸೆಪ್ಟೆಂಬರ್ ೨೩ : ವಿಶ್ವಸಂಸ್ಥೆಯ ಮಧ್ಯಸ್ಥಿಕೆಯಿಂದ ೧೯೬೫ರ ಭಾರತ ಪಾಕಿಸ್ತಾನದ ಯುದ್ಧದಲ್ಲಿ ಕದನ ವಿರಾಮ.


ಸೆಪ್ಟೆಂಬರ್ ೨೮ : ಭಾರತದ ಸ್ವಾತಂತ್ರ್ಯ ಹೋರಾಟಗಾರ ಕ್ರಾಂತಿಕಾರಿ ಭಗತ್ ಸಿಂಗ್ ಅವರ ಜನ್ಮದಿನ.


ಸೆಪ್ಟೆಂಬರ್ ೩೦ : ಯಹೂದಿ ಧರ್ಮದಲ್ಲಿ ರೋಷ್ ಹಶಾನ್ನ ಹಬ್ಬ.


ಸೆಪ್ಟೆಂಬರ್ ೩೦ : ವಿಶ್ವ ಹೃದಯ ದಿನ


ಅಕ್ಟೋಬರ್

ಶ್ರೀ ಕೋಟ ಶಿವರಾಮ ಕಾರಂತ

ಅಕ್ಟೋಬರ್ ೧: ವಿಶ್ವ ವೃದ್ಧರ ದಿನ, ವನ್ಯಜೀವಿ ಸಪ್ತಾಹ ದಿನ, ವಿಶ್ವ ಸಂಗೀತ ದಿನ, ರಾಷ್ಟ್ರೀಯ ಸ್ವಯಂಪ್ರೇರಿತ ರಕ್ತ ದಾನ ದಿನ


ಅಕ್ಟೋಬರ್ ೨ : ವಿಶ್ವ ಸಸ್ಯಾಹಾರಿಗಳ ದಿನ, ಗಾಂಧೀಜಿಯವರಜನ್ಮದಿನಾಚರಣೆ.


ಅಕ್ಟೋಬರ್ ೨ : ಲಾಲ್ ಬಹಾದ್ದೂರ್ ಶಾಸ್ತ್ರಿಯವರಜನ್ಮದಿನಾಚರಣೆ.


ಅಕ್ಟೋಬರ್ ೩ : ೧೯೯೦ರಲ್ಲಿ ಜರ್ಮನಿ ದೇಶದ ಪುನರೇಕೀಕರಣ. ವಿಶ್ವ ಪ್ರಾಕೃತಿಕ ದಿನ


ಅಕ್ಟೋಬರ್ ೪ : ೧೯೫೭ರಲ್ಲಿ ಸೋವಿಯೆಟ್ ಒಕ್ಕೂಟದ ಸ್ಪುಟ್ನಿಕ್ ೧ ಭೂಮಿಯನ್ನು ಪ್ರದಕ್ಷಣೆ ಮಾಡಿದ ಮೊದಲ ಕೃತಕ ಉಪಗ್ರಹವಾಯಿತು, ವಿಶ್ವ ಪ್ರಾಣಿದಯಾ/ಪ್ರಾಣಿ ಕ್ಷೇಮಾಭಿವೃದ್ಧಿ ದಿನ


ಅಕ್ಟೋಬರ್ ೫ : ವಿಶ್ವ ಹವ್ಯಾಸ ದಿನ


ಅಕ್ಟೋಬರ್ ೬ : ೧೯೭೩ರಲ್ಲಿ ಈಜಿಪ್ಟ್‌ನ ಸೇನೆ ಇಸ್ರೇಲ್ ದೇಶವನ್ನು ಪ್ರವೇಶಿಸಿ ಯೊಮ್ ಕಿಪ್ಪೂರ್ ಯುದ್ಧ ಪ್ರಾರಂಭವಾಯಿತು.


ಅಕ್ಟೋಬರ್ ೮ : ವಾಯುಪಡೆ ದಿನ


ಅಕ್ಟೋಬರ್ ೯ : ವಿಶ್ವ ಅಂಚೆ ದಿನ


ಅಕ್ಟೋಬರ್ ೧೦೧೯೦೨ರಲ್ಲಿ ಶಿವರಾಮ ಕಾರಂತರ ಜನನ. (ಚಿತ್ರಿತ), ವಿಶ್ವ ಮರಣದಂಡನೆ ವಿರೋಧಿ ದಿನ


ಅಕ್ಟೋಬರ್ ೧೨ : ೧೪೯೨ರಲ್ಲಿ ಕ್ರಿಸ್ಟೊಫರ್ ಕೊಲಂಬಸ್ ಕೆರಿಬಿಯನ್ ಪ್ರದೇಶದಲ್ಲಿ ಕಾಲಿಟ್ಟ ಮೊದಲ ಪಾಶ್ಚಾತ್ಯನಾದನು.


ಅಕ್ಟೋಬರ್ ೧೪ : ವಿಶ್ವ ಗುಣಮಟ್ಟ ದಿನ


ಅಕ್ಟೋಬರ್ ೧೬ : ವಿಶ್ವ ಆಹಾರ ದಿನ


ಅಕ್ಟೋಬರ್ ೧೮ : ೧೯೨೨ರಲ್ಲಿ ಯುನೈಟೆಡ್ ಕಿಂಗ್‌ಡಮ್‍ನಲ್ಲಿ ಬ್ರಿಟಿಶ್ ಬ್ರಾಡ್‍ಕಾಸ್ಟಿಂಗ್ ಕಾರ್ಪೊರೇಶನ್ (ಬಿಬಿಸಿ)ಯ ಸ್ಥಾಪನೆ.


ಅಕ್ಟೋಬರ್ ೧೯ :‍ ನೊಬೆಲ್ ಪ್ರಶಸ್ತಿ ವಿಜೇತ ಡಾ. ಸುಬ್ರಮಣ್ಯಂ ಚಂದ್ರಶೇಖರ್ (1910-1995) ಅವರ ಜನ್ಮದಿನ.


ಅಕ್ಟೋಬರ್ ೨೧ : ಪೋಲೀಸ್ ಹುತಾತ್ಮರ ದಿನ


ಅಕ್ಟೋಬರ್ ೨೪ : ೧೯೪೫ರಲ್ಲಿ ಸಂಯುಕ್ತ ರಾಷ್ಟ್ರ ಸಂಸ್ಥೆ(ವಿಶ್ವಸಂಸ್ಥೆ)ಯ ಸ್ಥಾಪನೆ.


ಅಕ್ಟೋಬರ್ ೨೯ : ಟರ್ಕಿ ಗಣರಾಜ್ಯವಾಗಿ ೧೯೨೩ರಲ್ಲಿಮುಸ್ತಫ ಕೆಮಲ್ ಅಟಾತುರ್ಕ್ ಅದರ ಮೊದಲ ರಾಷ್ಟ್ರಪತಿಯಾದನು.


ಅಕ್ಟೋಬರ್ ೩೦ : ವಿಶ್ವ ಉಳಿತಾಯ / ಮಿತವ್ಯಯ ದಿನ


ಅಕ್ಟೋಬರ್ ೩೧ : ೧೮೭೫ ಸರ್ದಾರ್ ವಲ್ಲಭಭಾಯ್ ಪಟೇಲ್ ಜನ್ಮದಿನ, ೧೯೮೪ರಲ್ಲಿ ಇಂದಿರಾ ಗಾಂಧಿಯಹತ್ಯೆ.


ನವೆಂಬರ್:

ಶ್ರೀ ಕನಕ ದಾಸರು

ನವೆಂಬರ್ ೧ : ೧೯೫೬ರಲ್ಲಿ ಕರ್ನಾಟಕರಾಜ್ಯದ ಸ್ಥಾಪನೆಯ ಆಚರಣೆ ಕರ್ನಾಟಕ ರಾಜ್ಯೋತ್ಸವ.


ನವೆಂಬರ್ ೩ : ೧೯೫೭ರಲ್ಲಿ ಬಾಹ್ಯಾಕಾಶ ತಲುಪಿದ ಮೊದಲ ಜೀವಿಯಾದ ಲೈಕಾನಾಯಿಯನ್ನು ಹೊತ್ತ ಸೋವಿಯೆಟ್ ಒಕ್ಕೂಟದಸ್ಪುಟ್ನಿಕ್ ೨ ಗಗನನೌಕೆಯ ಉಡಾವಣೆ.


ನವೆಂಬರ್ ೭ : ೧೯೧೭ರಲ್ಲಿ ವ್ಲಾಡಿಮಿರ್ ಲೆನಿನ್ನೇತೃತ್ವದಲ್ಲಿ ರಷ್ಯಾದ ಕ್ರಾಂತಿಯ ಪ್ರಾರಂಭ.


ನವೆಂಬರ್ ೮ : ಕಥಕ್ ಶಾಸ್ತ್ರೀಯ ನೃತ್ಯಗಾತಿ ಸಿತಾರಾದೇವಿ ಅವರ ಜನ್ಮದಿನ.


ನವೆಂಬರ್ ೯ : ಚಲಚಿತ್ರ ಮತ್ತು ರಂಗ ನಟ ಶಂಕರನಾಗ್ ಅವರ ಜನ್ಮದಿನ.


ನವೆಂಬರ್ ೧೧ : ಅನಸೂಯಾ ಸಾರಾಭಾಯಿ ಅವರ ಜನ್ಮದಿನ.


ನವೆಂಬರ್ ೧೪ : ಮಕ್ಕಳ ದಿನಾಚರಣೆ(ಜವಾಹರಲಾಲ್ ನೆಹರು ಜನ್ಮದಿನ).


ನವೆಂಬರ್ ೧೮ : ೧.ವಿಶ್ವ ಮೂರ್ಛೆ ರೋಗ ದಿನ.೨. ಭಾರತೀಯ ಚಲನಚಿತ್ರ ರಂಗದ ದಿಗ್ಗಜ ವಿ.ಶಾಂತಾರಾಂ(ಶಾಂತಾರಾಂ ರಾಜಾರಾಂ ವಂಕುದ್ರೆ) ಅವರ ಜನ್ಮದಿನ.


ನವೆಂಬರ್ ೧೯ : ವಿಶ್ವ ಶೌಚಾಲಯ/ನೈರ್ಮಲ್ಯ ದಿನ, ಪೌರದಿನ, ಅಂತಾರಾಷ್ಟ್ರೀಯ ಪುರುಷರ ದಿನಇಂದಿರಾಗಾಂಧಿ ಹುಟ್ಟಿದ ದಿನ,


ನವೆಂಬರ್ ೨೧ : ೧೯೬೨ರಲ್ಲಿ ಭಾರತ-ಚೀನ ಯುದ್ಧದ ಅಂತ್ಯ.


ನವೆಂಬರ್ ೨೨ : ಕಾನೂನು ಸಾಕ್ಷರತಾ ದಿನ


ನವೆಂಬರ್ ೨೪ : ೧೮೫೯ರಲ್ಲಿ ಜೀವವಿಕಾಸವಾದವನ್ನು ಘೋಷಿಸಿದ ಚಾರ್ಲ್ಸ್ ಡಾರ್ವಿನ್ ಅವರ ದ ಆರಿಜಿನ್ ಆಫ್ ಸ್ಪೀಶೀಸ್ ಪುಸ್ತಕದ ಪ್ರಕಟಣೆ.


ನವೆಂಬರ್ ೨೫ : ೧೯೯೨ರಲ್ಲಿ ಚೆಕೊಸ್ಲೊವೇಕಿಯಾಒಡೆದು ಚೆಕ್ ಗಣರಾಜ್ಯ ಮತ್ತು ಸ್ಲೊವಾಕಿಯದೇಶಗಳಾಗಲು ನಿರ್ಧರಿಸಿತು.


ನವೆಂಬರ್ ೨೫ : ಅಂತಾರಾಷ್ಟ್ರೀಯ ಮಹಿಳಾ ದೌರ್ಜನ್ಯ ವಿರೋಧಿ ದಿನ


ನವೆಂಬರ್ ೨೬ : ಕನಕದಾಸ ಜಯಂತಿ. (ಚಿತ್ರಿತ)


ನವೆಂಬರ್ ೨೯ : ಅಂತಾರಾಷ್ಟ್ರೀಯ ಸಾಮರಸ್ಯ ದಿನ


ನವೆಂಬರ್ ೩೦ : ರಾಷ್ಟ್ರೀಯ ವಿಪತ್ತು ನಿಗ್ರಹ ದಿನ


ಡಿಸೆಂಬರ್

 –  –  –  –  –  –  –  –  – ೧೦ – ೧೧– ೧೨ – ೧೩ – ೧೪ – ೧೫ – ೧೬ – ೧೭ – ೧೮ – ೧೯– ೨೦ – ೨೧ – ೨೨ – ೨೩ – ೨೪ – ೨೫ – ೨೬ – ೨೭– ೨೮ – ೨೯ – ೩೦ – ೩೧ ಡಿಸೆಂಬರ್ ೨೩ಜಪಾನ್ನಲ್ಲಿ "ಚಕ್ರವರ್ತಿಯ ಹುಟ್ಟುಹಬ್ಬ".

೧೯೨೧ - ವಿಶ್ವಭಾರತಿ ವಿಶ್ವವಿದ್ಯಾಲಯವು ರವೀಂದ್ರನಾಥ ಠಾಗೋರ್ರಿಂದ ಸ್ಥಾಪಿತವಾಯಿತು.


೧೯೪೭ - ಬೆಲ್ ಲ್ಯಾಬೊರೇಟೊರೀಸ್ನಲ್ಲಿ ಟ್ರ್ಯಾನ್ಸಿಸ್ಟರ್ (ಚಿತ್ರಿತ) ಮೊದಲ ಬಾರಿಗೆ ಪ್ರದರ್ಶಿತವಾಯಿತು.


೧೯೫೪ - ವಿಶ್ವದ ಮೊದಲ ಮೂತ್ರಜನಕಾಂಗದ ಬದಲಾವಣೆ ಬಾಸ್ಟನ್ನಲ್ಲಿ ನೆರವೇರಿಸಲಾಯಿತು.


೧೯೭೨ - ನಿಕರಾಗುವದಲ್ಲಿ ಉಂಟಾದ ಭೂಕಂಪದಲ್ಲಿ ಸುಮಾರು ೧೦,೦೦೦ ಜನರು ಬಲಿಯಾದರು.


೧೯೯೦ - ಸ್ಲೊವೇನಿಯದಲ್ಲಿ ನಡೆದ ಜನಾಭಿಪ್ರಾಯ ಮತದಲ್ಲಿ ೮೮% ಜನ ಯುಗೊಸ್ಲಾವಿಯದಿಂದ ಸ್ವಾತಂತ್ರ್ಯಕ್ಕೆ ಒಪ್ಪಿಗೆ ನೀಡಿದರು.


ಜನನಗಳು: ಅಕಿಹಿಟೊಮರಣಗಳು: ಪಿ.ವಿ. ನರಸಿಂಹರಾವ್.

ಪ್ರಮುಖ ರಾಷ್ಟ್ರೀಯ ಅಂತರಾಷ್ಟ್ರೀಯ ದಿನಾಚರಣೆಗಳು

ಪ್ರಮುಖ ರಾಷ್ಟ್ರೀಯ &ಅಂತರಾಷ್ಟ್ರೀಯ 
   

1ಜನವರಿ
01ವಿಶ್ವ ಶಾಂತಿ ದಿನ
2 02ವಿಶ್ವ ನಗುವಿನ ದಿನ
3 12ರಾಷ್ಟ್ರೀಯ ಯುವ ದಿನ/
ಸ್ವಾಮಿ ವಿವೇಕಾನಂದ ಜನ್ಮ ದಿನಾಚರಣೆ
4 15ಸೇನಾ ದಿನಾಚರಣೆ525ಅಂತರಾಷ್ಟ್ರೀಯ ತೆರಿಗೆ ದಿನ
6 26ಗಣರಾಜ್ಯೋತ್ಸವ ದಿನ
7 28ಸರ್ವೋಚ್ಚ ನ್ಯಾಯಾಲಯ ದಿನ
8 30ಸರ್ವೋದಯ ದಿನ/
ಹುತಾತ್ಮರ ದಿನ/
ಕುಷ್ಠರೋಗ ನಿವಾರಣಾ ದಿನ
9 ಫೆಬ್ರುವರಿ 07ವಿಶ್ವ ಆರೋಗ್ಯ ದಿನಾಚರಣೆ
10 21ವಿಶ್ವ ಮಾತೃಭಾಷಾ ದಿನ
11 22ಸ್ಕೌಟ್ & ಗೈಡ್ ದಿನ
12 23ವಿಶ್ವ ಹವಾಮಾನ ದಿನ
13 24ರಾಷ್ಟ್ರೀಯ ಸುಂಕದ ದಿನ
14 28ರಾಷ್ಟ್ರೀಯ ವಿಜ್ಞಾನ ದಿನಾಚರಣೆ
15 ಮಾರ್ಚ್ 08ಅಂತರಾಷ್ಟ್ರೀಯ ಮಹಿಳಾ ದಿನ
16 12ದಂಡಿ ಸತ್ಯಾಗ್ರಹ ದಿನ
17 15ವಿಶ್ವ ಬಳಕೆದಾರರ ದಿನ
18 16ವಿಶ್ವ ಅಂಗವಿಕಲರ ದಿನ
19 18ವಿಶ್ವ ಪರಂಪರೆ ದಿನ
20 21ವಿಶ್ವ ಅರಣ್ಯ ದಿನ
21 22ವಿಶ್ವ ಜಲ ನಿಧಿ
22 23ವಿಶ್ವ ವಾತಾವರಣ ದಿನ
23 27ವಿಶ್ವ ರಂಗಭೂಮಿ ದಿನ
24 ಏಪ್ರಿಲ್ 01ವಿಶ್ವ ಅಂಧತ್ವ ದಿನ/ಮೂರ್ಖರ ದಿನ

25 02ರಾಷ್ಟ್ರೀಯ ನಾವಿಕರ ದಿನ

26 05ರಾಷ್ಟ್ರೀಯ ಸಾಗರ ಯಾನ ದಿನ

27 07ವಿಶ್ವ ಆರೋಗ್ಯ ದಿನ

28 12ವಿಶ್ವ ಬಾಹ್ಯಾಕಾಶ ದಿನ

29 14ಡಾ.ಅಂಬೇಡ್ಕರ್ ಜಯಂತಿ/ಅಗ್ನಿಶಾಮಕ ದಿನ

30 18ವಿಶ್ವ ಪರಂಪರೆ/ಸಂಸ್ಕೃತಿ ದಿನ

31 22ವಿಶ್ವ ಭೂ ದಿನ

32 23ವಿಶ್ವ ಪುಸ್ತಕ ದಿನ

33 ಮೇ01ಕಾರ್ಮಿಕರ ದಿನ

34 02ವಿಶ್ವ ಪತ್ರಿಕಾ ಸ್ವಾತಂತ್ರ್ಯ ದಿನ

35 05ರಾಷ್ಟ್ರೀಯ ಶ್ರಮಿಕರ ದಿನ

36 08ಅಂತರಾಷ್ಟ್ರೀಯ ರೆಡ್ ಕ್ರಾಸ್ ದಿನ/ವಿಶ್ವ ಮಾತೆಯರ ದಿನ

37 11ರಾಷ್ಟ್ರೀಯ ತಂತ್ರಜ್ಞಾನ ದಿನ

38 14ವಿಶ್ವ ಮಾತೃ ದಿನ

39 15ಅಂತರಾಷ್ಟ್ರೀಯ ಕುಟುಂಬ ದಿನ

40 17ವಿಶ್ವ ದೂರಸಂಪರ್ಕ ದಿನ

41 21ಭಯೋತ್ಪಾದಕ ವಿರೋಧಿ ದಿನ

42 24ಕಾಮನ್ ವೆಲ್ತ್ ದಿನ

43 31ವಿಶ್ವ ತಂಬಾಕು ತಾಜ್ಯ ದಿನ44ಜೂನ್05ವಿಶ್ವ ಪರಿಸರ ದಿನ4512ಬಾಲ ಕಾರ್ಮಿಕ ವಿರೋಧಿ ದಿನ4614ವಿಶ್ವ ರಕ್ತ ದಾನಿಗಳ ದಿನ4718ವಿಶ್ವ ಅಪ್ಪಂದಿರ ದಿನ4821ವಿಶ್ವ ಮಕ್ಕಳ ಹಕ್ಕು ದಿನ4926ವಿಶ್ವ ಮಧುಮೇಹಿ ದಿನ/ಔಷಧ ದುರ್ಬಳಕೆ ವಿರೋಧಿ ದಿನ 

ಅಂತರಾಷ್ಟ್ರೀಯ ಮಾದಕ ವಸ್ತು ನಿಷೇಧ ದಿನ50

ಜುಲೈ01ರಾಷ್ಟ್ರೀಯ ವೈದ್ಯರ ದಿನ5111ವಿಶ್ವ ಜನಸಂಖ್ಯಾ ದಿನ52ಅಗಸ್ಟ್06ಹಿರೋಶಿಮಾ ದಿನಾಚರಣೆ
ವಿಶ್ವ ಸ್ನೇಹ ದಿನ5309ಕ್ವಿಟ್ ಇಂಡಿಯಾ ದಿನಾಚರಣೆ
ನಾಗಾಸಾಕಿ ದಿನಾಚರಣೆ5415ಸ್ವಾತಂತ್ರ್ಯ ದಿನಾಚರಣೆ5516ಮಹಿಳಾ ಸಮಾನತೆ ದಿನ5629ರಾಷ್ಟ್ರೀಯ ಕ್ರೀಡಾ ದಿನ57ಸೆಪ್ಟೆಂಬರ್05ಶಿಕ್ಷಕರ ದಿನಾಚರಣೆ5808ವಿಶ್ವ ಸಾಕ್ಷರತಾ ದಿನಾಚರಣೆ5910ಮಾನವತಾ ಹಕ್ಕುಗಳ ದಿನ6014ಹಿಂದಿ ದಿನ6115ಅಭಿಯಂತರರ ದಿನಾಚರಣೆ(ಸರ್.ಎಮ್.ವಿಶ್ವೇಶ್ವರಯ್ಯ ನವರ ಜನ್ಮ ದಿನ)6216ವಿಶ್ವ ಓಜೋನ್ ದಿನ6321ಅಂತರಾಷ್ಟ್ರೀಯ ಶಾಂತಿ ದಿನ6422ರಾಷ್ಟ್ರೀಯ ಗುಲಾಬಿ ದಿನ6525ವಿಶ್ವ ಹೃದಯ ದಿನ6627ವಿಶ್ವ ಶ್ರವಣ ಮಾಂದ್ಯರ ದಿನ
ವಿಶ್ವ ಪ್ರವಾಸೋದ್ಯಮ ದಿನ67ಅಕ್ಟೋಬರ್01ಅಂತರಾಷ್ಟ್ರಿಯ ವೃದ್ಯಾಪ್ಯರ ದಿನ6802ಗಾಂಧೀ ಜಯಂತಿ
ಲಾಲ್ ಬಹಾದ್ದೂರ್ ಶಾಸ್ತ್ರಿ ಜಯಂತಿ
ವಿಶ್ವ ವಸತಿ ದಿನ
ಅಂತರಾಷ್ಟ್ರೀಯ ಅಹಿಂಸಾ ದಿನ6903ವಿಶ್ವ ಪಕೃತಿ ದಿನ7004ವಿಶ್ವ ಪ್ರಾಣಿ ಕಲ್ಯಾಣ ದಿನ7105ವಿಶ್ವ ಶಿಕ್ಷಕರ ದಿನಾಚರಣೆ7208ವಾಯು ದಳ ದಿನಾಚರಣೆ73ಅಕ್ಟೋಬರ್09ವಿಶ್ವ ಅಂಚೆ ದಿನ7410ವಿಶ್ವ ಮಾನಸಿಕ ಆರೋಗ್ಯ ದಿನ
ಅಂಧರ ಮಾರ್ಗದರ್ಶನ ದಿನ7512ವಿಶ್ವ ಅರ್ಥರೈಟಾಸ್ ದಿನ7613ವಿಶ್ವ ಪಾಕೃತಿಕ ವಿಕೋಪ ಮುಂಜಾಗರುಕತಾ ದಿನ7717ವಿಶ್ವ ಆಹಾರ ದಿನ7824ವಿಶ್ವ ಸಂಸ್ಥೆ ಯ ದಿನಾಚರಣೆ7930ವಿಶ್ವ ಉಳಿತಾಯ ದಿನ8031ರಾಷ್ಟ್ರೀಯ ಏಕತಾ ದಿನ81ನವೆಂಬರ್01ಕನ್ನಡ ರಾಜ್ಯೋತ್ಸವ ದಿನ8209ಕಾನೂನು ಸೇವಾದಿನ8313ರಾಷ್ಟ್ರೀಯ ವಿಪತ್ತು ಕಡಿಮೆಗೊಳಿಸುವ ದಿನ8414ಮಕ್ಕಳ ದಿನಾಚರಣೆ8529ಅಂತರಾಷ್ಟ್ರೀಯ ಸಾಮರಸ್ಯ ದಿನಾಚರಣೆ86ಡಿಸೆಂಬರ್01ವಿಶ್ವ ಏಡ್ಸ್ ದಿನಾಚರಣೆ8702ರಾಷ್ಟ್ರೀಯ ಮಾಲಿನ್ಯ ನಿಯಂತ್ರಣ ದಿನಾಚರಣೆ8803ವಿಶ್ವ ಅಂಗವಿಕಲರ ದಿನ8904ನೌಕಾದಳ ಧ್ವಜ ದಿನ9007ಧ್ವಜ ದಿನಾಚರಣೆ9110ವಿಶ್ವ ಮಾನವ ಹಕ್ಕುಗಳ ದಿನಾಚರಣೆ9217ನಿವೃತ್ತಿಗರ ಹಕ್ಕುದಿನ9323ರೈತ ದಿನ




ಕಾರ್ಮಿಕರ ದಿನಾಚರಣೆ

ಕಾರ್ಮಿಕರ ದಿನಾಚರಣೆ


ಮೇ 1


ಮುಂಬೈನಲ್ಲಿ ಕಾರ್ಮಿಕ ದಿನಾಚರಣೆಯಂದು ನಡೆದ ಸಭೆ


ವಿಶ್ವದ ಬಹುತೇಕ ರಾಷ್ಟ್ರಗಳಲ್ಲಿ ಕಾರ್ಮಿಕ ಸಂಘಗಳು ಮತ್ತು ಸಮಾಜವಾದಿ ಪಕ್ಷಗಳ ಮುಖ್ಯವಾಗಿ ಆಚರಿಸುವ ಸಂಭ್ರಮದ ಸಾರ್ವಜನಿಕ ಉತ್ಸವ ದಿನ (ಲೇಬರ ಡೇ). ಮೇ ದಿನ ಅಥವಾ ‘ಅಂತರರಾಷ್ಟ್ರೀಯ ಕಾರ್ಮಿಕರ ದಿನಾಚರಣೆಯನ್ನು ಪ್ರತಿ ವರ್ಷದ ಮೇ ೧ನೇ ತಾರೀಖಿನಂದು ಪ್ರಪಂಚದ ಹಲವು ದೇಶಗಳಲ್ಲಿ ಆಚರಿಸಲಾಗುತ್ತದೆ. ಈ ದಿನದಂದು ಕಾರ್ಮಿಕ ಆಂದೋಲನದ ಸಾಮಾಜಿಕ ಮತ್ತು ಆರ್ಥಿಕ ಸಾಧನೆಗಳನ್ನು ಆಚರಿಸಲಾಗುತ್ತದೆ.[೧][೨]

ಕಾರ್ಮಿಕರ ಮೆರೆವಣಿಗೆ, ಪ್ರದರ್ಶನ, ಸಭೆ-ಇವು ಆ ದಿನದ ವಿಶೇಷಗಳು.

ಹಿನ್ನೆಲೆ ಮತ್ತು ಇತಿಹಾಸ

1886ರ ವರ್ಷದ ಮೇ 4ರಂದು ಚಿಕಾಗೋದ, ಇಲಿನಾಯ್ಸ್ ಪ್ರದೇಶದ ಹೇ ಮಾರ್ಕೆಟ್ ಎಂಬಲ್ಲಿ ಕಾರ್ಮಿಕರ ಮೇಲೆ ನಡೆದ ದಮನಕಾರಿ ಘಟನೆಯನ್ನು ಈ ಆಚರಣೆ ಹಿನ್ನೆಲೆಯಾಗಿ ಇಟ್ಟುಕೊಂಡಿವೆ.

ಕಾರ್ಮಿಕ ಪ್ರಭುತ್ವದ ಶುಭಯುಗದ ಉದಯದ ಕುರುಹಾಗಿ ಮೇ 1ರಂದು ಉತ್ಸವಾಚರಣೆ ಮಾಡಬೇಕೆಂದು ರಾಬರ್ಟ್ ಓವೆನ್ ಸೂಚಿಸಿದ್ದ. ಆದರೆ ವಾಸ್ತವವಾಗಿ 1889ಕ್ಕಿಂತ ಮುಂಚೆ ಮೇ ದಿನಾಚರಣೆ ಮಾಡಿದ್ದಕ್ಕೆ ಆಧಾರಗಳು ದೊರಕುವುದಿಲ್ಲ. ಆ ವರ್ಷ ಪ್ಯಾರಿಸಿನಲ್ಲಿ ಸಮಾವೇಶ ಗೊಂಡಿದ್ದ ಸಮಾಜವಾದಿ ಅಂತರರಾಷ್ಟ್ರೀಯದ ಪ್ರಥಮ ಅಧಿವೇಶನದಲ್ಲಿ ಮೇ 1ನೆಯ ದಿನಾಂಕವನ್ನು (ಅದು ವಾರದ ಯಾವ ದಿನವೇ ಬರಲಿ) ವಾರ್ಷಿಕ ಅಂತರ ರಾಷ್ಟ್ರೀಯ ಉತ್ಸವದಿನವೆಂದು ಆಚರಿಸಬೇಕೆಂದು ನಿರ್ಧರಿಸಲಾಯಿತು. ಮೇ 1ರಂದು ಸಾರ್ವಜನಿಕ ರಜಾದಿನವೆಂದು ಘೋಷಿಸಬೇಕೆಂದು ಒತ್ತಾಯಪಡಿಸಲು ನೇರ ಕ್ರಮ ಕೈಗೊಳ್ಳಬೇಕೆಂದೂ ನಿರ್ಣಯಿಸಲಾಯಿತು.

ದೇಶವಿದೇಶಗಳಲ್ಲಿ ಆಚರಣೆ

ಬಹುತೇಕ ರಾಷ್ಟ್ರಗಳಲ್ಲಿ ಕಾರ್ಮಿಕ ದಿನವನ್ನು ಮೇ ತಿಂಗಳ ಮೊದಲ ದಿನದಂದು ಆಚರಿಸಲಾಗುತ್ತದೆ. ಅಮೆರಿಕ ಸಂಯುಕ್ತಸಂಸ್ಥಾನ ಮತ್ತು ಕೆನಡಗಳಲ್ಲಿ ಅಂದು ಈ ದಿನವನ್ನಾಚರಿಸುವುದಿಲ್ಲ. ಇಟಲಿಯಲ್ಲಿ ಮೇ ದಿನಾಚರಣೆಯನ್ನು ನಿಷೇಧಿಸಲಾಗಿತ್ತಲ್ಲದೆ, ಅದರ ಬದಲು ರೋಮಿನ ಸ್ಥಾಪನೆಯ ದಿನವನ್ನಾಚರಿಸುವ ಏರ್ಪಾಡು ಮಾಡಲಾಗಿತ್ತು. ಸೋವಿಯತ್ ದೇಶದಲ್ಲಿ ಮೇ 1 ಸಾರ್ವಜನಿಕ ರಜಾ ದಿನ. 1890ರ ದಶಕದಿಂದ ಯೂರೋಪಿನ ಅನೇಕ ರಾಷ್ಟ್ರಗಳಲ್ಲಿ ಮೇ ತಿಂಗಳ 1ರಂದು ಕಾರ್ಮಿಕ ದಿನವನ್ನಾಚರಿಸಲಾಗುತ್ತಿದೆ. ಅಂದು ಸಾಮಾನ್ಯವಾಗಿ ಕಾರ್ಮಿಕ ರಜಾದಿನ, ಸೋವಿಯತ್ ದೇಶವೇ ಮುಂತಾದ ಕಮ್ಯೂನಿಸ್ಟ್ ರಾಷ್ಟ್ರಗಳಲ್ಲಿ ಈ ದಿನಾಚರಣೆ ವಿಶಿಷ್ಟವಾದ್ದು. ಮಾಸ್ಕೋದಲ್ಲಿ ನಡೆಯುವ ಮೇ ದಿನದ ಉತ್ಸವ-ಕವಾಯಿತು ವಿಶ್ವವಿಖ್ಯಾತವಾದ್ದು. ಬ್ರಿಟನಿನಲ್ಲಿ ಕಾರ್ಮಿಕ ದಿನವನ್ನು ಮೇ ದಿನದ ಅನಂತರದ ಪ್ರಥಮ ಭಾನುವಾರದಂದು ಆಚರಿಸುವುದು ಸಾಮಾನ್ಯ. ಲಂಡನಿನಲ್ಲಿ ಹೈಡ್ ಪಾರ್ಕಿನಲ್ಲಿ ಉತ್ಸವಸಭೆ ಸೇರುವುದು ಹಿಂದಿನಿಂದ ಬಂದಿರುವ ಸಂಪ್ರದಾಯ. ಬ್ರಿಟನಿನಲ್ಲಿ ಕಾರ್ಮಿಕ ದಿನವನ್ನು ಪ್ರಥಮ ಬಾರಿಗೆ ಆಚರಿಸಿದ್ದು 1892ರಲ್ಲಿ.

ಪ್ರಪಂಚದ ಹಲವೆಡೆ ಮೇ ೧ರಂದು ಸರ್ಕಾರಿ ರಜೆಯನ್ನು ಘೋಷಿಸಲಾಗಿದೆ. ಇದರಲ್ಲಿ ಪ್ರಮುಖ ದೇಶಗಳೆಂದರೆ

ಅಲ್ಬೇನಿಯ,


ಅರ್ಜೆಂಟೀನಾ,


ಅರೂಬ,


ಆಸ್ಟ್ರಿಯ,


ಬಾಂಗ್ಲಾದೇಶ,


ಬೆಲಾರುಸ್,


ಬೆಲ್ಜಿಯಂ,


ಬೊಲಿವಿಯ,


ಬೋಸ್ನಿಯ ಮತ್ತು ಹೆರ್ಝೆಗೋವಿನ,


ಬ್ರೆಜಿಲ್,


ಬಲ್ಗೇರಿಯ,


ಕ್ಯಾಮರೂನ್,


ಚಿಲಿ,


ಕೊಲಂಬಿಯ,


ಕೋಸ್ಟ ರಿಕ,


ಚೀನ,


ಕ್ರೊಯೇಷಿಯ,


ಕ್ಯೂಬ,


ಸಿಪ್ರಸ್,


ಚೆಕ್ ಗಣರಾಜ್ಯ,


ಡೆನ್ಮಾರ್ಕ್,


ಡೊಮಿನಿಕ ಗಣರಾಜ್ಯ,


ಈಕ್ವೆಡಾರ್,


ಈಜಿಪ್ಟ್,


ಫಿನ್ಲ್ಯಾಂಡ್,


ಫ್ರಾನ್ಸ್,


ಜರ್ಮನಿ,


ಗ್ರೀಸ್,


ಗ್ವಾಟೆಮಾಲ,


ಹೈತಿ,


ಹೊಂಡುರಾಸ್,


ಹಾಂಗ್ ಕಾಂಗ್,


ಹಂಗರಿ,


ಐಸ್ಲೆಂಡ್,


ಭಾರತ,


ಇಂಡೋನೇಷ್ಯ,


ಇಟಲಿ,


ಜೋರ್ಡನ್,


ಕೀನ್ಯ,


ಲ್ಯಾಟ್ವಿಯ,


ಲಿಥುವೇನಿಯ,


ಲೆಬನಾನ್,


ಮೆಸಿಡೋನಿಯ,


ಮಲೇಶಿಯ,


ಮಾಲ್ಟ,


ಮಾರಿಷಸ್,


ಮೆಕ್ಸಿಕೋ,


ಮೊರಾಕೊ,


ಮಯನ್ಮಾರ್,


ನೈಜೀರಿಯ,


ಉತ್ತರ ಕೊರಿಯ,


ನಾರ್ವೆ,


ಪಾಕಿಸ್ತಾನ,


ಪೆರಗ್ವೆ,


ಪೆರು,


ಪೋಲೆಂಡ್,


ಫಿಲಿಫೀನ್ಸ್


ಪೋರ್ಚುಗಲ್,


ರೊಮೇನಿಯ,


ರಷ್ಯ,


ಸಿಂಗಾಪುರ,


ಸ್ಲೊವಾಕಿಯ,


ಸ್ಲೊವೇನಿಯ,


ದಕ್ಷಿಣ ಕೊರಿಯ,


ದಕ್ಷಿಣ ಆಫ್ರಿಕ,


ಸ್ಪೇನ್,


ಶ್ರೀ ಲಂಕ,


ಸರ್ಬಿಯ,


ಸ್ವೀಡನ್,


ಸಿರಿಯ,


ಥೈಲ್ಯಾಂಡ್,


ಟರ್ಕಿ,


ಉಕ್ರೇನ್,


ಉರುಗ್ವೆ,


ವೆನಿಜುವೆಲಾ,


ವಿಯೆಟ್ನಾಂ,


ಜಾಂಬಿಯ,


ಜಿಂಬಾಬ್ವೆ.


ಭಾರತದಲ್ಲಿ

ಭಾರತದಲ್ಲಿ ಮೇ ದಿನವೇ ಕಾರ್ಮಿಕ ದಿನ. 20ನೆಯ ಶತಮಾನದ ಎರಡನೆಯ ದಶಕದ ದ್ವಿತೀಯಾರ್ಧದಲ್ಲಿ-ಕಾರ್ಮಿಕ ಸಂಘ ಚಳವಳಿಯ ಪ್ರಭಾವ ಹೆಚ್ಚಿದಾಗಿನಿಂದ-ಇದರ ಆಚರಣೆ ಆರಂಭವಾಯಿತು. ಮೇ ದಿನಾಚರಣೆಯಲ್ಲಿ ಭಾಗವಹಿಸಿದ ಮೊಟ್ಟಮೊದಲಿನ ಭಾರತೀಯ ಕಾರ್ಮಿಕರು ಇಂಗ್ಲೆಂಡಿನಲ್ಲಿದ್ದ ಭಾರತೀಯ ನಾವಿಕರು. ಭಾರತಕ್ಕೆ ಸ್ವಾತಂತ್ರ್ಯ ನೀಡಬೇಕೆಂಬ ಘೋಷಣೆಯನ್ನೊಳಗೊಂಡ ಪ್ರದರ್ಶನಚಿತ್ರಗಳನ್ನು ಹಿಡಿದು ಮೆರವಣಿಗೆಯಲ್ಲಿ ಅವರು ಹೈಡ್ ಪಾರ್ಕಿನ ಮೇ ದಿನದ ಉತ್ಸವಸಭೆಗೆ ಹೋದರು (1925). ಭಾರತದಲ್ಲಿ 1927 ರಿಂದೀಚೆಗೆ ಪ್ರತಿವರ್ಷವೂ ಕಾರ್ಮಿಕರು ಈ ದಿನವನ್ನಾಚರಿಸುತ್ತಿದ್ದಾರೆ. ಭಾರತದಲ್ಲಿ ಈ ಉತ್ಸವದಲ್ಲಿ ಭಾಗವಹಿಸುವವರು ಕಾರ್ಮಿಕ ಸಂಘಗಳವರು, ಸಮಾಜವಾದಿಗಳು ಮತ್ತು ಕೆಲವು ಬುದ್ಧಿ ಜೀವಿಗಳು ಮಾತ್ರ. 1927ರಲ್ಲಿ ಮುಂಬಯಿಯಲ್ಲಿ ನಡೆದ ಉತ್ಸವದಲ್ಲಿ ಅನೇಕ ಕಾರ್ಮಿಕ ಮುಖಂಡರು ಭಾಗವಹಿಸಿದ್ದರು. ಅದೇ ವರ್ಷ ಕಲ್ಕತ್ತದಲ್ಲಿ ಬಂಗಾಳ ಪ್ರದೇಶ ಕಾರ್ಮಿಕ ಸಂಘ ಕಾಂಗ್ರೆಸ್ ಮೇ ದಿನವನ್ನಾಚರಿಸಿದಾಗ ಪೋಲೀಸರು ಅನೇಕ ನಿರ್ಬಂಧಕಾಜ್ಞೆಗಳನ್ನು ವಿಧಿಸಿದರೆಂದು ತಿಳಿದು ಬರುತ್ತದೆ. 1928 ರಿಂದ 1934ರ ವರೆಗೆ ಆ ಉತ್ಸವಾಚರಣೆಯ ದಿನದಂದು ದಿನಾಚರಣೆಯ ಕಾರ್ಮಿಕರ ಅನೇಕ ಮುಷ್ಕರಗಳು ನಡೆದುವು. ಎರಡನೆಯ ಮಹಾಯುದ್ಧಾನಂತರ ಆ ದಿನವನ್ನು ಹೆಚ್ಚು ವ್ಯಾಪಕವಾಗಿ ಆಚರಿಸಲು ಪ್ರಾರಂಭವಾಯಿತು. ಕಾರ್ಮಿಕರೂ ಕಾರ್ಮಿಕ ಸಂಘಗಳೂ ಅಧಿಕ ಸಂಖ್ಯೆಯಲ್ಲಿ ಭಾಗವಹಿಸತೊಡಗಿದವು. 1969ರಲ್ಲಿ ಭಾರತ ರಾಷ್ಟ್ರೀಯ ಕಾರ್ಮಿಕ ಸಂಘಗಳ ಕಾಂಗ್ರೆಸ್ ಒಂದನ್ನು ಬಿಟ್ಟು ಉಳಿದೆಲ್ಲ ಕಾರ್ಮಿಕ ಸಂಘಗಳೂ ಒಟ್ಟಾಗಿ, ತಮ್ಮ ಹಕ್ಕುಗಳನ್ನು ಸಾಧಿಸಲು ಭಾರಿ ಮೆರವಣಿಗೆಯಲ್ಲಿ ಪಾರ್ಲಿಮೆಂಟ್ ಭವನದ ಬಳಿಗೆ ಮೆರವಣಿಗೆಯಲ್ಲಿ ಹೋಗಿ ಪ್ರದರ್ಶನ ನಡೆಸಿದುವು.

ಭಾರತದಲ್ಲಿ ಅಂತರರಾಷ್ಟ್ರೀಯ ಕಾರ್ಮಿಕರ ದಿನಾಚರಣೆಯನ್ನು ಪ್ರತಿ ವರ್ಷದ ಮೇ ೧ನೇ ತಾರೀಖಿನಂದು ಆಚರಿಸಲಾಗುತ್ತದೆ.


ಅಮೇರಿಕದಲ್ಲಿ

ಅಮೆರಿಕ ಸಂಯುಕ್ತಸಂಸ್ಥಾನದಲ್ಲಿ ಸೆಪ್ಟೆಂಬರ್ ಮೊದಲನೆಯ ಸೋಮವಾರದಂದು ಕಾರ್ಮಿಕ ದಿನವನ್ನಾಚರಿಸಲಾಗುತ್ತದೆ. ಆ ದಿನವನ್ನಾಚರಿಸಬೇಕೆಂಬ ಚಳವಳಿಯನ್ನು ಅಲ್ಲಿ ಪ್ರಾರಂಭಿಸಿದವರು ನೈಟ್ಸ್ ಆಫ್ ಲೇಬರ್ ಎಂಬ ಕಾರ್ಮಿಕ ಸಂಘಗಳವರು. 1882, 1883 ಮತ್ತು 1884ರಲ್ಲಿ ಅವರು ಕಾರ್ಮಿಕ ದಿನದಂದು ನ್ಯೂಯಾರ್ಕ್ ನಗರದಲ್ಲಿ ಪ್ರದರ್ಶನ ನಡೆಸಿದರು. ಕಾರ್ಮಿಕ ದಿನದ ಆಚರಣೆಯ ಮೂಲ ಇರುವುದು ಅಮೆರಿಕಾದಲ್ಲಿ, 19ನೇ ಶತಮಾನದಲ್ಲಿ ನಡೆದ ಕಾರ್ಮಿಕ ಚಳವಳಿಗಳಲ್ಲಿ. ಕೆಲಸದ ಅವಧಿಯನ್ನು ದಿನಕ್ಕೆ 8 ಗಂಟೆ ನಿಗದಿ ಪಡಿಸಲು, ದುಡಿಯುವ ಪರಿಸರದಲ್ಲಿ ಮೂಲಸೌಕರ್ಯ ಒದಗಿಸಲು ಮತ್ತು ಕಾರ್ಮಿಕರ ಹಿತರಕ್ಷಣೆ ಕಾನೂನುಗಳನ್ನು ರೂಪಿಸಲು ಪಟ್ಟುಹಿಡಿದ ಕಾರ್ಮಿಕ ಒಕ್ಕೂಟದ ಸದಸ್ಯರು, ಸಮಾಜವಾದಿಗಳು ಮತ್ತು ಕಮ್ಯೂನಿಸ್ಟರು ಧರಣಿ ಹೂಡಿದ್ದರು. ದಿನದ 24 ಗಂಟೆಗಳಲ್ಲಿ 8 ಗಂಟೆ ಕೆಲಸಕ್ಕೆ, 8 ಗಂಟೆ ಮನೋಲ್ಲಾಸಕ್ಕೆ ಮತ್ತು 8 ಗಂಟೆ ವಿಶ್ರಾಂತಿಗೆ ಮೀಸಲಿಡಬೇಕು ಎಂಬುದು ಪ್ರತಿಭಟನಾಕಾರರ ಒತ್ತಾಯವಾಗಿತ್ತು [೩]ಅಮೆರಿಕಾದಲ್ಲಿ, ಪ್ರತಿವರ್ಷದ ಸೆಪ್ಟೆಂಬರ್ ಮೊದಲನೆಯ ಸೋಮವಾರವನ್ನು ಕಾರ್ಮಿಕ ದಿನವೆಂದು ಪರಿಗಣಿಸಬೇಕೆಂದೂ ಅಂದು ರಜಾ ಘೋಷಿಸಬೇಕೆಂದೂ ಅವರು 1884ರಲ್ಲಿ ನಿರ್ಣಯ ಮಾಡಿದರು. ಈ ಚಳವಳಿಗೆ ರಾಷ್ಟ್ರದ ಎಲ್ಲ ಕಾರ್ಮಿಕ ಸಂಘಗಳು ಬೆಂಬಲ ದೊರಕಿತು. ಮೊಟ್ಟಮೊದಲು ಕಾಲೊರಾಡೂ ರಾಜ್ಯ ಆ ದಿನವನ್ನು ಕಾರ್ಮಿಕ ದಿನವೆಂದು ಮಾನ್ಯ ಮಾಡಲು 1887ರ ಮಾರ್ಚಿ 15ರಂದು ಕಾಯಿದೆಯೊಂದನ್ನು ಅನುಮೋದಿಸಿತು. ಇದೇ ಕ್ರಮವನ್ನು ಇತರ ಕೆಲವು ರಾಜ್ಯಗಳೂ ಅನುಸರಿಸಿದುವು (ನ್ಯೂಯಾರ್ಕ್, ನ್ಯೂ ಜರ್ಸಿ, ಮಸಚುಸೆಟ್ಸ್). ಅಮೆರಿಕಾದ್ಯಂತ ಅಂದು ರಜಾ ದಿನವೆಂದು ಘೋಷಿಸುವ ವಿಧೇಯಕಕ್ಕೆ ಅಮೆರಿಕದ ಕಾಂಗ್ರೆಸ್ 1894ರ ಜೂನ್ 28ರಂದು ಒಪ್ಪಿಗೆ ನೀಡಿತು. ಇದನ್ನು ಕಾರ್ಯರೂಪಕ್ಕೆ ತರಲು ಎಲ್ಲ ರಾಜ್ಯಗಳೂ ಸಮ್ಮತಿಸಿ, ಆ ಪ್ರಕಾರ ಅಗತ್ಯವಾದ ಕಾಯಿದೆ ಮಾಡಿದುವು. ಕೆನಡದಲ್ಲಿ ಬಹುತೇಕ ಪ್ರಾಂತ್ಯಗಳಲ್ಲಿ ಕಾರ್ಮಿಕ ದಿನಾಚರಣೆಗೆ ಕಾನೂನು ರಚಿಸಲಾಗಿದೆ. ಕಾನೂನಿಲ್ಲದ ಪ್ರಾಂತ್ಯಗಳಲ್ಲಿ ಆಯಾ ಗವರ್ನರುಗಳು ಆ ಬಗ್ಗೆ ಘೋಷಣೆ ನೀಡುತ್ತಾರೆ. ಅಮೆರಿಕ ಕೆನಡಗಳಲ್ಲಿ ಎಲ್ಲ ವರ್ಗಗಳ ಜನರೂ ಅದನ್ನು ಆಚರಿಸುತ್ತಾರೆ. ಅಂದು ಬಹುತೇಕ ಎಲ್ಲ ವಾಣಿಜ್ಯ ಮತ್ತು ಕೈಗಾರಿಕಾ ಸಂಸ್ಥೆಯನ್ನೂ ಮುಚ್ಚಲಾಗುತ್ತದೆ. ಸಭೆ, ವನಭೋಜನ, ಪ್ರದರ್ಶನ, ಮೆರವಣಿಗೆ, ಭಾಷಣ, ಕ್ರೀಡೆಗಳು- ಇವು ಅಂದು ಸಾಮಾನ್ಯ

ವಿಶ್ವ ಮಾತೃ ಭಾಷೆ ದಿವಸ

ಫೆಬ್ರವರಿ ೨೧ನ್ನು ಪ್ರಪಂಚಾದ್ಯಂತ ವಿಶ್ವ ಮಾತೃ ಭಾಷೆ ದಿವಸವಾಗಿ ಆಚರಿಸಲಾಗುತ್ತಿದೆ. ಬಹುಭಾಷೆ ಮತ್ತು ಬಹುಸಂಸ್ಕೃತಿಯನ್ನು ಪ್ರತಿಬಿಂಬಿಸಲು ಮತ್ತು ಪ್ರೋತ್ಸಾಹಿಸಿ ಉಳಿಸಲು ಈ ಆಚರಣೆಯನ್ನು ಮಾಡಲಾಗುತ್ತಿದೆ. ೧೯೯೯ರಲ್ಲಿ ಮೊದಲ ಬಾರಿಗೆ ಇದನ್ನು ಯುನೆಸ್ಕೋ ಘೋಷಿಸಿತು[೧]. ಇದರ ಮುಂದುವರೆದ ಭಾಗವಾಗಿ ವಿಶ್ವಸಂಸ್ಥೆಯು ೨೦೦೮ನ್ನು ವಿಶ್ವ ಭಾಷೆಗಳ ವರ್ಷ ಎಂದು ಆಚರಿಸಿತು[೨][೩]. ೨೦೦೦ನೆಯ ಇಸವಿಯಿಂದ ಪ್ರತಿ ವರ್ಷ ವಿಶ್ವ ಮಾತೃ ಭಾಷೆ ದಿವಸವನ್ನು ಆಚರಿಸಲಾಗುತ್ತಿದೆ. ೧೯೫೨ನೆಯ ಇಸವಿಯಲ್ಲಿ ಅಂದಿನ ಪಾಕಿಸ್ತಾನದ ಭಾಗವಾಗಿದ್ದ ಇಂದಿನ ಬಾಂಗ್ಲಾದೇಶದಲ್ಲಿ ಬಾಂಗ್ಲಾ ಭಾಷೆಯನ್ನು ಅಧಿಕೃತ ಭಾಷೆಯಾಗಿ ಗುರುತಿಸಿ ಘೋಷಿಸಬೇಕು ಎಂದು ಹೋರಾಡಿ ವಿದ್ಯಾರ್ಥಿಗಳು ಸತ್ತದಿನದ ನೆನಪಿಗೆ ಈ ಆಚರಣೆಯನ್ನು ಮಾಡಲಾಗುತ್ತಿದೆ.


ವಿಶ್ವ ಮಾತೃ ಭಾಷೆ ದಿವಸದ ಹಿನ್ನೆಲೆ

೧೯೪೭ ರಲ್ಲಿ ಭಾರತದಿಂದ ಪಾಕಿಸ್ತಾನ ವಿಭಜನೆಗೊಂಡಾಗ ಅಲ್ಲಿ ಪೂರ್ವ ಪಾಕಿಸ್ತಾನ, ಪಶ್ಚಿಮ ಪಾಕಿಸ್ತಾನ ಎಂಬ ಎರಡು ಭೂ ಪ್ರದೇಶಗಳು ರಚನೆಯಾದುವು. ಪೂರ್ವ ಪಾಕಿಸ್ತಾನವೆಂದರೆ ಇಂದಿನ ಬಾಂಗ್ಲಾದೇಶ, ಪಶ್ಚಿಮ ಪಾಕಿಸ್ತಾನವೆಂದರೆ ಈಗಿರುವ ಪಾಕಿಸ್ತಾನ. ಪೂರ್ವ ಪಾಕಿಸ್ತಾನದ ಮಾತೃಭಾಷೆ ಬಂಗಾಳಿಯಾಗಿತ್ತು. ಪಶ್ಚಿಮ ಪಾಕಿಸ್ತಾನದ ಮಾತೃಭಾಷೆ ಉರ್ದು ಆಗಿತ್ತು. ೧೯೪೮ ರಲ್ಲಿ ಪಶ್ಚಿಮ ಪಾಕಿಸ್ತಾನ ಮಾತೃಭಾಷೆ ಉರ್ದುವನ್ನು' ರಾಷ್ಟ್ರಭಾಷೆ'ಯೆಂದು ಘೋಷಿಸಿತು.


ಇದರಿಂದ ಪೂರ್ವ ಪಾಕಿಸ್ತಾನದ ಬಂಗಾಳಿ ಭಾಷೆಯನ್ನು ಮಾತಾನಾಡುತ್ತಿದ್ದವರು ತುಂಬ ಅಸಮಾಧಾನಗೊಂಡರು. ಉರ್ದುವನ್ನು ರಾಷ್ಟ್ರಭಾಷೆ ಮಾಡಿದ್ದನ್ನು ವಿರೋಧಿಸಿ ಪ್ರತಿಭಟನೆ ಮಾಡತೊಡಗಿದರು. ಆಗ ಪಾಕ್ ಇವರ ಪ್ರತಿಭಟನೆಯನ್ನು ಹತ್ತಿಕ್ಕುವ ಪ್ರಯತ್ನ ಮಾಡಿತು. ಪಾಕ್ ಸರ್ಕಾರದ ನಿಷೇಧವನ್ನು ಮೀರಿ ೨೧-೦೨-೧೯೫೨ ರಂದು ಢಾಕಾ ವಿಶ್ವವಿದ್ಯಾನಿಲಯದ ವಿದ್ಯಾರ್ಥಿಗಳು ಬೀದಿಗಿಳಿದು ಹೋರಾಟ ಮಾಡತೊಡಗಿದರು.


ಪ್ರತಿಭಟನೆ ತೀವ್ರ ಸ್ವರೂಪ ಪಡೆದಾಗ, ಪಾಕ್ ಸರ್ಕಾರದ ಆದೇಶದಂತೆ ಪೋಲಿಸರು ಪ್ರತಿಭಟನಾಕಾರರ ಮೇಲೆ ಗುಂಡು ಹಾರಿಸಿದಾಗ ಢಾಕಾ ವಿಶ್ವವಿದ್ಯಾನಿಲಯದ ಕೆಲವು ವಿದ್ಯಾರ್ಥಿಗಳು ಅಸುನೀಗಿದರು. ಬಾಂಗ್ಲಾದೇಶದ ಮಾತೃಭಾಷೆ ಬಂಗಾಳಿಯನ್ನು ಆಡಳಿತ ಭಾಷೆಯನ್ನಾಗಿ ಮಾಡಬೇಕೆಂದು ಪ್ರಾಣತೆತ್ತ ವಿದ್ಯಾರ್ಥಿಗಳ ನೆನಪಿಗಾಗಿ ಆ ದಿನವನ್ನು ವಿಶ್ವಸಂಸ್ಥೆಯ ಯುನೆಸ್ಕೊವು "ವಿಶ್ವ ಮಾತೃ ಭಾಷೆ ದಿವಸ"ವನ್ನಾಗಿ ಆಚರಿಸುವಂತೆ ಘೋಷಿಸಿತು.


ಅನಂತರದ ಘಟನೆಗಳು

ಢಾಕಾ ವಿಶ್ವವಿದ್ಯಾನಿಲಯದ ಕೆಲವು ವಿದ್ಯಾರ್ಥಿಗಳ ನಿರಂತರ ಹೋರಾಟದ ಫಲವಾಗಿ ಪಾಕಿಸ್ತಾನ ೨೯-೦೨-೧೯೫೬ ರಲ್ಲಿ ಬಂಗಾಳಿಭಾಷೆಯನ್ನು ಅಧಿಕೃತಭಾಷೆಯಾಗಿ ಘೋಷಿಸಿತು. ಬಾಂಗ್ಲಾದೇಶದಲ್ಲಿ ಫೆಬ್ರವರಿ ೨೧ ರಂದು 'ಶಹೀದ್ ಡೇ' (ಹುತಾತ್ಮರ ಸ್ಮಾರಕಕ್ಕೆ)ಗೆ ಹೂಗುಚ್ಛವನ್ನಿಟ್ಟು ಗೌರವಿಸಲಾಗುತ್ತದೆ. ವಿಶ್ವದ ಅನೇಕ ಕಡೆ ವಿಶ್ವ ಮಾತೃ ಭಾಷೆ ದಿವಸವನ್ನು ಆಚರಿಸಲಾಗುತ್ತಿದೆ.


ಇಂಗ್ಲಿಷ್ ಪ್ರಭಾವ

ಜಾಗತೀಕರಣ ನೇರ ಪ್ರಭಾವ ಸ್ಥಳೀಯ ಭಾಷೆಗಳ ಮೇಲೆ ಆಗುತ್ತಿದೆ. ಇಂಗ್ಲಿಷ್ ಭಾಷೆಯ ಪ್ರಭಾವ ಎರಡು ರೀತಿಯಲ್ಲಿ ಆಗುತ್ತಿದೆ.


ವಿಜ್ಞಾನ/ತಂತ್ರಜ್ಞಾನ ಜ್ಞಾನಭಂಡಾರವು ಬಹುಮಟ್ಟಿಗೆ ಇಂಗ್ಲಿಷ್ ಭಾಷೆಯಲ್ಲಿ ಶೇಖರವಾಗಿದೆ. ಹೊಸ ಸಂಶೋಧನಾ ಪ್ರಬಂಧಗಳು ಇಂಗ್ಲಿಷ್ ಭಾಷೆಯಲ್ಲೇ ಪ್ರಕಟವಾಗುತ್ತಿವೆ. ಹೀಗಾಗಿ ಔದ್ಯೋಗಿಕ ಶಿಕ್ಷಣ ಬಹುಮಟ್ಟಿಗೆ ಇಂಗ್ಲಿಷ್ ಭಾಷೆಯಲ್ಲಿ ನಡೆಯುತ್ತಿದೆ. ಉದ್ಯೋಗಕ್ಕಾಗಿ ಇಂಗ್ಲಿಷ್ ಜ್ಞಾನ ಬೇಕೆಂಬ ಪರಿಕಲ್ಪನೆ ಹುಟ್ಟಿಕೊಂಡಿದೆ. ಹೀಗಾಗಿ ಜನ ಇಂಗ್ಲಿಷ್ ಕಲಿಯಲು ಉತ್ಸುಕರಾಗಿದ್ದಾರೆ.


ಇಂಗ್ಲಿಷ್ ಭಾಷೆಯಿಂದ ನೇರವಾಗಿ ಅನುವಾದ ಮಾಡುವಾಗಲೂ ಸ್ಥಳೀಯ ಭಾಷೆಗಳಿಗೆ ಪೆಟ್ಟು ಬೀಳುತ್ತಿದೆ. ಸ್ಥಳೀಯ ಭಾಷೆಯಲ್ಲಿ ಸಹಜವಾಗಿ ಹೇಳಬಹುದಾದ್ದನ್ನು ಇಂಗ್ಲಿಷ್ ಪದಶಃ ಭಾಷಾಂತರದ ಮೂಲಕ ಕೃತಕವಾಗಿ ಹೇಳುವ ಪರಿಪಾಠ ಪ್ರಾರಂಭವಾಗಿದೆ