ಸೋಮವಾರ, ಡಿಸೆಂಬರ್ 24, 2018

ಇತಿಹಾಸದಲ್ಲಿಯ ದಿನಾಚರಣೆಗಳು(ತಿಂಗಳುಗಳ ಪ್ರಕಾರ)

ಇತಿಹಾಸದಲ್ಲಿ ಈ ದಿನ


ಜನವರಿ:

ಗಣರಾಜ್ಯೋತ್ಸವ

ಫೆಬ್ರುವರಿ:

ಫೆಬ್ರವರಿ ೧: ಭಾರತೀಯ ಕರಾವಳಿ ಸುರಕ್ಷಾ ದಿನಾಚರಣೆ


ಫೆಬ್ರುವರಿ ೩: ಮೊಜಾಂಬಿಕ್ನಲ್ಲಿ 'ನಾಯಕರ ದಿನಾಚರಣೆ'.


ಫೆಬ್ರುವರಿ ೩: ೧೯೬೬ರಲ್ಲಿ ಸೋವಿಯೆಟ್ ಒಕ್ಕೂಟದ ಲೂನ ೯ ಚಂದ್ರನ ಮೇಲೆ ಇಳಿದ ಮೊದಲ ಗಗನನೌಕೆಯಾಯಿತು.


ಫೆಬ್ರುವರಿ ೪: ಶ್ರೀಲಂಕಾದಲ್ಲಿ ಸ್ವಾತಂತ್ರ್ಯ ದಿನಾಚರಣೆ.


ಫೆಬ್ರುವರಿ ೭: ೧೯೯೨ರಲ್ಲಿ ಯುರೋಪಿನ ಒಕ್ಕೂಟವನ್ನು ಸ್ಥಾಪಿಸಿದ ಮಾಸ್ಟ್ರಿಕ್ಟ್ ಒಪ್ಪಂದಕ್ಕೆ ಸಹಿ ಹಾಕಲಯಿತು.


ಫೆಬ್ರುವರಿ ೧೧: ಜಪಾನ್ನಲ್ಲಿ ರಾಷ್ಟ್ರದ ಸ್ಥಾಪನೆ ದಿನಾಚರಣೆ'.


ಫೆಬ್ರುವರಿ ೧೨: ಚಾರ್ಲ್ಸ್ ಡಾರ್ವಿನ್ ಮತ್ತು ಅಬ್ರಹಮ್ ಲಿಂಕನ್ (ಚಿತ್ರಿತ) ಅವರ ಜನ್ಮದಿನಾಚರಣೆಗಳು.


ಫೆಬ್ರುವರಿ ೧೪: ಪ್ರೇಮಿಗಳ ದಿನಾಚರಣೆ.


ಫೆಬ್ರವರಿ ೨೦: ಅರುಣಾಚಲ ಪ್ರದೇಶ ದಿನ


ಫೆಬ್ರುವರಿ ೨೧: ಯುನೆಸ್ಕೊ ಘೋಷಿತ ಅಂತರರಾಷ್ಟ್ರೀಯ ಮಾತೃಭಾಷೆ ದಿನಾಚರಣೆ.


ಫೆಬ್ರವರಿ ೨೮: ರಾಷ್ಟ್ರೀಯ ವಿಜ್ಞಾನ ದಿನ


ಮಾರ್ಚ್ಸಂಪಾದಿಸಿ

ಮಾರ್ಚ್:

Frauentag 1914 Heraus mit dem Frauenwahlrecht

ಮಾರ್ಚ್ ೬: ಘಾನದಲ್ಲಿಸ್ವಾತಂತ್ರ್ಯ ದಿನಾಚರಣೆ.


ಮಾರ್ಚ್ ೮: ಅಂತರರಾಷ್ಟ್ರೀಯ ಮಹಿಳಾ ದಿನಾಚರಣೆ(ಚಿತ್ರಿತ)


ಮಾರ್ಚ್ ೧೭: ಐರ್ಲೆಂಡ್ನಲ್ಲಿಸೇಂಟ್ ಪ್ಯಾಟ್ರಿಕ್ದಿನಾಚರಣೆ.


ಮಾರ್ಚ್ ೧೫: ಗ್ರಾಹಕರ ದಿನ


ಮಾರ್ಚ್ ೨೦: ವಿಶ್ವ ಅರಣ್ಯ ದಿನ, ಇರಾನ್ ದೇಶದಲ್ಲಿ ನೌರೋಜ್ ಹಬ್ಬ.


ಮಾರ್ಚ್ ೨೨: ವಿಶ್ವ ಜಲದಿನ


ಮಾರ್ಚ್ ೨೩: ವಿಶ್ವ ಖಗೋಳಶಾಸ್ತ್ರ ಅಧ್ಯಯನ ದಿನ


ಮಾರ್ಚ್ ೨೪: ವಿಶ್ವ ಕ್ಷಯ ದಿನ


ಮಾರ್ಚ್ ೨೬: ಬಾಂಗ್ಲಾದೇಶದಲ್ಲಿ ಸ್ವಾತಂತ್ರ್ಯ ದಿನಾಚರಣೆ.


ಮಾರ್ಚ್ ೩೧: ವಾರ್ಷಿಕ ಬ್ಯಾಂಕ್ ಲೆಕ್ಕಪತ್ರ ಮುಕ್ತಾಯ ದಿನ


ಏಪ್ರಿಲ್ಸಂಪಾದಿಸಿ

ಏಪ್ರಿಲ್:

ಏಪ್ರಿಲ್ ೧: ವಿಶ್ವದ ಹಲವೆಡೆ ಮೂರ್ಖರ ದಿನ, ವಾರ್ಷಿಕ ಬ್ಯಾಂಕ್ ಲೆಕ್ಕ ಪತ್ರ ಆರಂಭ ದಿನ


ಏಪ್ರಿಲ್ ೭: ವಿಶ್ವ ಆರೋಗ್ಯ ದಿನ


ಏಪ್ರಿಲ್ ೮: ಹಿಂದೂ ಧರ್ಮದಲ್ಲಿ ರಾಮ ನವಮಿ ಹಬ್ಬ ಆಚರಣೆ


ಏಪ್ರಿಲ್ ೧೨: ಕನ್ನಡ ಚಿತ್ರರಂಗದ ಮೇರುನಟ ಡಾ.ರಾಜ್‍ಕುಮಾರ್ ನಿಧನ, ವಿಶ್ವ ಆಕಾಶಯಾನ ದಿನ.


ಏಪ್ರಿಲ್ ೧೩: ಜೈನ ಧರ್ಮದಲ್ಲಿ ಮಹಾವೀರ ಜಯಂತಿ, ಜಲಿಯನ್ ವಾಲಾಬಾಗ್ ದಿನ.


ಏಪ್ರಿಲ್ ೧೪: ಭಾರತದ ಸಂವಿಧಾನದ ಪಿತಾಮಹ ಅಂಬೇಡ್ಕರ್ (ಚಿತ್ರಿತ) ಜಯಂತಿ.


ಏಪ್ರಿಲ್ ೧೮: ವಿಶ್ವ ಪರಂಪರೆಯ ದಿನ.


ಏಪ್ರಿಲ್ ೨೨: ಭೂಮಿ ದಿನ.


ಏಪ್ರಿಲ್ ೨೩: ವಿಶ್ವ ಪುಸ್ತಕ ದಿನ.


ಏಪ್ರಿಲ್ ೨೪: ಡಾ.ರಾಜ್‍ಕುಮಾರ್ ಜನ್ಮದಿನಾಚರಣೆ, ಮಾನವ ಏಕತಾ ದಿನ


ಮೇಸಂಪಾದಿಸಿ

ಮೇ:

ಮೇ ೧: ಕಾರ್ಮಿಕರ ದಿನಾಚರಣೆ.


ಮೇ ೩: ಪತ್ರಿಕಾ ಸ್ವಾತಂತ್ರ್ಯ ದಿನ


ಮೇ ೮: ಅಂತಾರಾಷ್ಟ್ರೀಯ ರೆಡ್ ಕ್ರಾಸ್ ಸಂಸ್ಥೆದಿನಾಚರಣೆ.


ಮೇ ೯: ಅ.ನ.ಕೃಷ್ಣರಾಯರ ಜನ್ಮದಿನ, ೧೯೪೫ರಲ್ಲಿಎರಡನೇ ಮಹಾಯುದ್ಧ ಕೊನೆಗೊಂಡ ದಿನ.


ಮೇ ೧೦: ಭಾರತದ ಮೊದಲನೇ ಸ್ವಾತಂತ್ರ್ಯ ಸಂಗ್ರಾಮದ ೧೫೧ನೇ ವಾರ್ಷಿಕೋತ್ಸವ.


ಮೇ ೧೨: ವಿಶ್ವದ ಹಲವೆಡೆ ತಾಯಂದಿರ ದಿನ.


ಮೇ ೧೩: ತತ್ವಜ್ಞಾನಿಗಳ ದಿನ, ರಾಷ್ಟ್ರೀಯ ಭಾವೈಕ್ಯತೆಯ ದಿನ


ಮೇ ೧೪: ಗೌತಮ ಬುದ್ಧನ (ಚಿತ್ರಿತ) ಜನ್ಮದಿನೋತ್ಸವವಾದ ಬುದ್ಧ ಪೂರ್ಣಿಮ.


ಮೇ ೧೫: ಅಂತಾರಾಷ್ಟ್ರೀಯ ಕುಟುಂಬ ದಿನ


ಮೇ ೧೭: ವಿಶ್ವ ದೂರಸಂಪರ್ಕ ದಿನ


ಮೇ ೨೧: ಭಯೋತ್ಪಾದನೆ ವಿರೋಧಿ ದಿನ


ಮೇ ೨೪: ಕಾಮನ್ ವೆಲ್ತ್ ದಿನ


ಮೇ ೨೯: ೧೯೫೩ರಲ್ಲಿ ಎಡ್ಮಂಡ್ ಹಿಲರಿ ಮತ್ತು ತೇನ್‌ಸಿಂಗ್ ನೋರ್ಗೆಯವರಿಂದ ಮೌಂಟ್ ಎವರೆಸ್ಟ್ಪರ್ವತದ ಮೊದಲ ಆರೋಹಣ - ಮೌಂಟ್ ಎವರೆಸ್ಟ್ ದಿನ


ಮೇ ೩೦: ಫ್ರಾನ್ಸ್ ದೇಶದ ನಾಯಕಿ ಜೋನ್ ಆಫ್ ಆರ್ಕ್ ದಹನದ ಆಚರಣೆ.


ಮೇ ೩೧: ವಿಶ್ವ ತಂಬಾಕುರಹಿತ ದಿನ


ಜೂನ್

ಮಧುಮೇಹದ ಯುನಿವರ್ಸಲ್ ನೀಲಿ ವಲಯ ಚಿಹ್ನೆ

ಜೂನ್ ೫: ವಿಶ್ವ ಪರಿಸರ ದಿನ


ಜೂನ್ ೧೨ : ಬಾಲ ಕಾರ್ಮಿಕರ ವಿರುದ್ಧ ವಿಶ್ವ ದಿನ.


ಜೂನ್ ೧೨: ಫಿಲಿಪ್ಪೀನ್ಸ್ ದೇಶದ ಸ್ವಾತಂತ್ರ್ಯ ದಿನಾಚರಣೆ.


ಜೂನ್ ೧೫: ಅಂತರರಾಷ್ಟ್ರೀಯ ಕ್ರಿಕೆಟ್ ಮಂಡಳಿಯ ಸ್ಥಾಪನೆಯ ವಾರ್ಷಿಕೋತ್ಸವ.


ಜೂನ್ ೧೮: ಗೋವಾ ವಿಮೋಚನೆ ದಿನ ಜೂನ್ ೧೮ ಗೋವಾ ವಿಮೋಚನೆ ದಿನ .


ಜೂನ್ ೨೦ :ವಿಶ್ವ ನಿರಾಶ್ರಿತರ ದಿನ .


ಜೂನ್ ೨೧: ಅಂತಾರಾಷ್ಟ್ರೀಯ ಯೋಗ ದಿನ


ಜೂನ್ ೨೬: ವಿಶ್ವ ಮಾದಕ ವಸ್ತು ನಿರ್ಮೂಲನಾ ದಿನ, ತುರ್ತು ಪರಿಸ್ಥಿತಿ ವಿರೋಧಿ ದಿನ


ಜೂನ್ ೨೭:(ಚಿತ್ರಿತ) ವಿಶ್ವ ಮಧುಮೇಹ ದಿನ


ಜೂನ್ ೨೮: ಬಡತನ ದಿನ



ಜುಲೈ:

ಜುಲೈ ೧: ವೈದ್ಯರ ದಿನ


ಜುಲೈ ೨: ೧೯೭೬ರಲ್ಲಿ ವಿಯೆಟ್ನಾಮ್ ದೇಶದ ಉತ್ತರ ಮತ್ತು ದಕ್ಷಿಣ ಭಾಗಗಳ ಏಕೀಕರಣ.


ಜುಲೈ ೪: ಅಮೇರಿಕ ಸಂಯುಕ್ತ ಸಂಸ್ಥಾನದಲ್ಲಿ ಸ್ವಾತಂತ್ರ್ಯ ದಿನಾಚರಣೆ.


ಜುಲೈ ೧೧:ವಿಶ್ವ ಜನಸಂಖ್ಯಾ ದಿನ


ಜುಲೈ ೧೨: ಕನ್ನಡ ಕುಲ ಪುರೋಹಿತ ಹಾಗೂ ಕನ್ನಡ ಏಕೀಕರಣದ ರೂವಾರಿ ಆಲೂರು ವೆಂಕಟರಾಯರಜನುಮ ದಿನ.


ಜುಲೈ ೧೩: ರೋಮ್ ಗಣರಾಜ್ಯದ ಅಧಿಪತಿ ಜೂಲಿಯಸ್ ಸೀಜರ್ ಹುಟ್ಟಿದ ದಿನ


ಜುಲೈ ೧೪: ಫ್ರೆಂಚ್ ಕ್ರಾಂತಿಯ ವಾರ್ಷಿಕೋತ್ಸವದ ಆಚರಣೆಯಾದ ಬ್ಯಾಸ್ಟಿಲ್ ದಿನಾಚರಣೆ.


ಜುಲೈ ೧೭: ಕನ್ನಡದ ಹೆಸರಾಂತ ನಟಿಯಾಗಿದ್ದ ದಿ॥ಕಲ್ಪನಾರ ಜನುಮ ದಿನ.


ಜುಲೈ ೧೯: ಪ್ರಮುಖವಾಗಿ ಹಿಂದುಗಳಿಗೆ ಗುರುಗಳಿಗೆ ವಂದಿಸುವ ದಿನ ಗುರು ಪೂರ್ಣಿಮಾ


ಜುಲೈ ೨೦: ಅಪೋಲೊ ೧೧ರ ಗಗನಯಾನಿಗಳು (ಚಿತ್ರಿತ) ನೀಲ್ ಆರ್ಮ್‌ಸ್ಟ್ರಾಂಗ್ ಮತ್ತು ಬಜ್ ಆಲ್ಡ್ರಿನ್ಚಂದ್ರನ ಮೇಲೆ ಕಾಲಿಟ್ಟ ಮೊದಲ ಮಾನವರಾದರು.


ಜುಲೈ ೨೪: ಎಕ್ವಡಾರ್ ಮತ್ತು ವೆನೆಜುವೆಲಾದೇಶಗಳಲ್ಲಿ ಸಿಮೋನ್ ಬೊಲಿವಾರ್ ದಿನಾಚರಣೆ.


ಜುಲೈ ೨೬: ಕಾರ್ಗಿಲ್ ವಿಜಯ ದಿನ


ಜುಲೈ ೨೮: ೧೯೧೪ರಲ್ಲಿ ಆಸ್ಟ್ರಿಯ-ಹಂಗೆರಿಯು ಸೆರ್ಬಿಯಾದ ಮೇಲೆ ಯುದ್ಧವನ್ನು ಘೋಷಿಸಿ ಮೊದಲನೇ ವಿಶ್ವಯುದ್ಧ ಪ್ರಾರಂಭವಾಯಿತು.


ಜುಲೈ ೨೯: ಆಧುನಿಕ ರಂಗಭೂಮಿಯ ಹರಿಕಾರ ಎಂದು ಪ್ರಸಿದ್ದಿಯಾಗಿದ್ದ ಟಿ.ಪಿ.ಕೈಲಾಸಂ ಜನುಮ ದಿನ.


ಜುಲೈ ೨೯: ೧೯೪೭ರಲ್ಲಿ ಪ್ರಪಂಚದ ಮೊದಲ ಸಾಮಾನ್ಯ ಬಳಕೆಯ ಗಣಕಯಂತ್ರವಾದ ಎನಿಯಾಕ್(ENIAC) ಅಮೇರಿಕ ದೇಶದಲ್ಲಿ ಚಾಲನೆಗೆ ಬಂದಿತು.


ಆಗಸ್ಟ್

ಆಗಸ್ಟ್ ೧: ೧೯೦೭ರಲ್ಲಿ ಇಂಗ್ಲೆಂಡ್ನಲ್ಲಿ ರಾಬರ್ಟ್ ಬಾಡೆನ್-ಪೊವೆಲ್ ಸ್ಕೌಟ್ ಶಿಬಿರವನ್ನು ಪ್ರಾರಂಭಿಸಿ ಸ್ಕೌಟ್ ಚಳುವಳಿಗೆ ನಾಂದಿ ಹಾಕಿದರು, ವಿಶ್ವ ಎದೆಹಾಲು ದಿನ.


ಆಗಸ್ಟ್ ೨: ಕ್ರಿ.ಪೂ. ೨೧೬ರಲ್ಲಿ ಹ್ಯಾನಿಬಾಲ್ ನೇತೃತ್ವದ ಕಾರ್ಥೇಜ್‍ನ ಸೇನೆ ಎರಡನೇ ಪ್ಯೂನಿಕ್ ಯುದ್ಧದಲ್ಲಿ ರೋಮ್ ಗಣರಾಜ್ಯವನ್ನು ಸೋಲಿಸಿತು.


ಆಗಸ್ಟ್ ೬: ೧೯೪೫ರಲ್ಲಿ ಎರಡನೇ ವಿಶ್ವಯುದ್ಧದಲ್ಲಿ ಅಮೇರಿಕ ದೇಶದ ವಾಯುಸೇನೆಯು ಜಪಾನಿನಹಿರೋಶಿಮ ನಗರದ ಮೇಲೆ ಮೊದಲ ಅಣು ಬಾಂಬ್ ಉಪಯೋಗಿಸಿತು (ಚಿತ್ರಿತ).


ಆಗಸ್ಟ್ ೮: ‎ಸ್ನೇಹ ದಿನಾಚರಣೆ


ಆಗಸ್ಟ್ ೯: ಸಂಸ್ಕೃತ ದಿನ, ನಾಗಾಸಾಕಿ ದಿನ, ಕ್ವಿಟ್ ಇಂಡಿಯಾ ದಿನ, ೧೯೭೪ರಲ್ಲಿ ಅಮೇರಿಕ ದೇಶದ ರಾಷ್ಟ್ರಪತಿಯಾಗಿದ್ದ ರಿಚರ್ಡ್ ನಿಕ್ಸನ್ ವಾಟರ್‌ಗೇಟ್ ಘಟನೆಯಿಂದ ರಾಜೀನಾಮೆ ನೀಡಿದರು.


ಆಗಸ್ಟ್ ೯: ಜ್ಞಾನಪೀಠ ಪ್ರಶಸ್ತಿ ಪುರಸ್ಕೃತ ದಿ॥ವಿನಾಯಕ ಕೃಷ್ಣ ಗೋಕಾಕ್ ರವರ ಜನ್ಮ ದಿನ.


ಆಗಸ್ಟ್ ೧೨: ವಿಶ್ವ ಆನೆಗಳ ದಿನ


ಆಗಸ್ಟ್ ೧೩: ವಿಶ್ವ ಎಡಗೈಯವರ ದಿನ


ಆಗಸ್ಟ್ ೧೫: ೧೯೪೭ರಲ್ಲಿ ಬ್ರಿಟೀಷ್ ರಾಜ್ಯ ಇಬ್ಬಾಗಗೊಂಡು ಭಾರತವು ಸ್ವಾತಂತ್ರ್ಯ ಪಡೆಯಿತು.


ಆಗಸ್ಟ್ ೧೫: ನಾಗರಪಂಚಮಿ


ಆಗಸ್ಟ್ ೧೯: ವಿಶ್ವ ಛಾಯಾಗ್ರಹಣ ದಿನ


ಆಗಸ್ಟ್ ೨೨: ೧೭೯೧ರಲ್ಲಿ ಹೈತಿಯಲ್ಲಿ ಗುಲಾಮರುದಂಗೆಯೆದ್ದು ಹೈತಿ ಕ್ರಾಂತಿಯ ಪ್ರಾರಂಭ.


ಆಗಸ್ಟ್ ೨೪: ಹಿಂದುಗಳಿಗೆ ವರಮಹಾಲಕ್ಷ್ಮಿ ವ್ರತ


ಆಗಸ್ಟ್ ೨೪: ಓಣಂ


ಆಗಸ್ಟ್ ೨೮: ನಾಗರೀಕ ಹಕ್ಕು ದಿನ


ಆಗಸ್ಟ್ ೨೯: ರಾಷ್ಟ್ರೀಯ ಕ್ರೀಡಾ ದಿನ


ಸೆಪ್ಟೆಂಬರ್:

ಸೆಪ್ಟೆಂಬರ್ ೫ : ಭಾರತದ ರಾಷ್ಟ್ರಪತಿಯಾಗಿದ್ದ ಸರ್ವಪಳ್ಳಿ ರಾಧಾಕೃಷ್ಣನ್ ಅವರ ಹುಟ್ಟು ಹಬ್ಬದ ನೆನಪಿನಲ್ಲಿ ಶಿಕ್ಷಕರ ದಿನಾಚರಣೆ.


ಸೆಪ್ಟೆಂಬರ್ ೬ : ೧೫೨೨ರಲ್ಲಿ ಫೆರ್ಡಿನೆಂಡ್ ಮೆಗಲನ್ನೇತೃತ್ವದಲ್ಲಿ ಹೊರಟಿದ್ದ ವಿಕ್ಟೋರಿಯ ಹಡಗು ೨೬೫ ದಿನಗಳ ನಂತರ ಪ್ರಪಂಚವನ್ನು ಸುತ್ತಿ ಬಂದ ಮೊದಲ ಹಡಗಾಯಿತು.


ಸೆಪ್ಟೆಂಬರ್ ೮ : ಯೇಸುಕ್ರಿಸ್ತನ ತಾಯಿ ಮರಿಯಾ ಮಾತೆಯ ಜನನೋತ್ಸವ.


ಸೆಪ್ಟೆಂಬರ್ ೮ : ಪೂರ್ಣಚಂದ್ರ ತೇಜಸ್ವಿಯವರ ಹುಟ್ಟು ಹಬ್ಬ.


ಸೆಪ್ಟೆಂಬರ್ ೧೧ : ೨೦೦೧ರಲ್ಲಿ ಅಮೇರಿಕ ದೇಶದ ನ್ಯೂ ಯಾರ್ಕ್ ನಗರದ ವರ್ಲ್ಡ್ ಟ್ರೇಡ್ ಸೆಂಟರ್ ಕಟ್ಟಗಳ ಮೇಲೆ ಭಯೋತ್ಪಾದಕರಿಂದ ಅಪಹರಿಸಲ್ಪಟ್ಟ ವಿಮಾನಗಳಿಂದ ದಾಳಿ (ಚಿತ್ರಿತ).


ಸೆಪ್ಟೆಂಬರ್ ೧೪ : ೧೯೫೯ರಲ್ಲಿ ಸೋವಿಯೆಟ್ ಒಕ್ಕೂಟಉಡಾವಣೆ ಮಾಡಿದ ಲೂನ ೨ ಗಗನನೌಕೆ ಚಂದ್ರನನ್ನುತಲುಪಿದ ಮೊದಲ ಮಾನವ ನಿರ್ಮಿತ ವಸ್ತು ಆಯಿತು.


ಸೆಪ್ಟೆಂಬರ್ ೧೫ : ಸರ್ ಎಂ.ವಿಶ್ವೇಶ್ವರಯ್ಯನವರಜನ್ಮದಿನ. ಅವರ ಹುಟ್ಟುಹಬ್ಬದ ನೆನಪಿನಲ್ಲಿ ಎಂಜಿನಿಯರುಗಳ ದಿನಾಚರಣೆ


ಸೆಪ್ಟೆಂಬರ್ ೨೩ : ವಿಶ್ವಸಂಸ್ಥೆಯ ಮಧ್ಯಸ್ಥಿಕೆಯಿಂದ ೧೯೬೫ರ ಭಾರತ ಪಾಕಿಸ್ತಾನದ ಯುದ್ಧದಲ್ಲಿ ಕದನ ವಿರಾಮ.


ಸೆಪ್ಟೆಂಬರ್ ೨೮ : ಭಾರತದ ಸ್ವಾತಂತ್ರ್ಯ ಹೋರಾಟಗಾರ ಕ್ರಾಂತಿಕಾರಿ ಭಗತ್ ಸಿಂಗ್ ಅವರ ಜನ್ಮದಿನ.


ಸೆಪ್ಟೆಂಬರ್ ೩೦ : ಯಹೂದಿ ಧರ್ಮದಲ್ಲಿ ರೋಷ್ ಹಶಾನ್ನ ಹಬ್ಬ.


ಸೆಪ್ಟೆಂಬರ್ ೩೦ : ವಿಶ್ವ ಹೃದಯ ದಿನ


ಅಕ್ಟೋಬರ್

ಶ್ರೀ ಕೋಟ ಶಿವರಾಮ ಕಾರಂತ

ಅಕ್ಟೋಬರ್ ೧: ವಿಶ್ವ ವೃದ್ಧರ ದಿನ, ವನ್ಯಜೀವಿ ಸಪ್ತಾಹ ದಿನ, ವಿಶ್ವ ಸಂಗೀತ ದಿನ, ರಾಷ್ಟ್ರೀಯ ಸ್ವಯಂಪ್ರೇರಿತ ರಕ್ತ ದಾನ ದಿನ


ಅಕ್ಟೋಬರ್ ೨ : ವಿಶ್ವ ಸಸ್ಯಾಹಾರಿಗಳ ದಿನ, ಗಾಂಧೀಜಿಯವರಜನ್ಮದಿನಾಚರಣೆ.


ಅಕ್ಟೋಬರ್ ೨ : ಲಾಲ್ ಬಹಾದ್ದೂರ್ ಶಾಸ್ತ್ರಿಯವರಜನ್ಮದಿನಾಚರಣೆ.


ಅಕ್ಟೋಬರ್ ೩ : ೧೯೯೦ರಲ್ಲಿ ಜರ್ಮನಿ ದೇಶದ ಪುನರೇಕೀಕರಣ. ವಿಶ್ವ ಪ್ರಾಕೃತಿಕ ದಿನ


ಅಕ್ಟೋಬರ್ ೪ : ೧೯೫೭ರಲ್ಲಿ ಸೋವಿಯೆಟ್ ಒಕ್ಕೂಟದ ಸ್ಪುಟ್ನಿಕ್ ೧ ಭೂಮಿಯನ್ನು ಪ್ರದಕ್ಷಣೆ ಮಾಡಿದ ಮೊದಲ ಕೃತಕ ಉಪಗ್ರಹವಾಯಿತು, ವಿಶ್ವ ಪ್ರಾಣಿದಯಾ/ಪ್ರಾಣಿ ಕ್ಷೇಮಾಭಿವೃದ್ಧಿ ದಿನ


ಅಕ್ಟೋಬರ್ ೫ : ವಿಶ್ವ ಹವ್ಯಾಸ ದಿನ


ಅಕ್ಟೋಬರ್ ೬ : ೧೯೭೩ರಲ್ಲಿ ಈಜಿಪ್ಟ್‌ನ ಸೇನೆ ಇಸ್ರೇಲ್ ದೇಶವನ್ನು ಪ್ರವೇಶಿಸಿ ಯೊಮ್ ಕಿಪ್ಪೂರ್ ಯುದ್ಧ ಪ್ರಾರಂಭವಾಯಿತು.


ಅಕ್ಟೋಬರ್ ೮ : ವಾಯುಪಡೆ ದಿನ


ಅಕ್ಟೋಬರ್ ೯ : ವಿಶ್ವ ಅಂಚೆ ದಿನ


ಅಕ್ಟೋಬರ್ ೧೦: ೧೯೦೨ರಲ್ಲಿ ಶಿವರಾಮ ಕಾರಂತರ ಜನನ. (ಚಿತ್ರಿತ), ವಿಶ್ವ ಮರಣದಂಡನೆ ವಿರೋಧಿ ದಿನ


ಅಕ್ಟೋಬರ್ ೧೨ : ೧೪೯೨ರಲ್ಲಿ ಕ್ರಿಸ್ಟೊಫರ್ ಕೊಲಂಬಸ್ ಕೆರಿಬಿಯನ್ ಪ್ರದೇಶದಲ್ಲಿ ಕಾಲಿಟ್ಟ ಮೊದಲ ಪಾಶ್ಚಾತ್ಯನಾದನು.


ಅಕ್ಟೋಬರ್ ೧೪ : ವಿಶ್ವ ಗುಣಮಟ್ಟ ದಿನ


ಅಕ್ಟೋಬರ್ ೧೬ : ವಿಶ್ವ ಆಹಾರ ದಿನ


ಅಕ್ಟೋಬರ್ ೧೮ : ೧೯೨೨ರಲ್ಲಿ ಯುನೈಟೆಡ್ ಕಿಂಗ್‌ಡಮ್‍ನಲ್ಲಿ ಬ್ರಿಟಿಶ್ ಬ್ರಾಡ್‍ಕಾಸ್ಟಿಂಗ್ ಕಾರ್ಪೊರೇಶನ್ (ಬಿಬಿಸಿ)ಯ ಸ್ಥಾಪನೆ.


ಅಕ್ಟೋಬರ್ ೧೯ :‍ ನೊಬೆಲ್ ಪ್ರಶಸ್ತಿ ವಿಜೇತ ಡಾ. ಸುಬ್ರಮಣ್ಯಂ ಚಂದ್ರಶೇಖರ್ (1910-1995) ಅವರ ಜನ್ಮದಿನ.


ಅಕ್ಟೋಬರ್ ೨೧ : ಪೋಲೀಸ್ ಹುತಾತ್ಮರ ದಿನ


ಅಕ್ಟೋಬರ್ ೨೪ : ೧೯೪೫ರಲ್ಲಿ ಸಂಯುಕ್ತ ರಾಷ್ಟ್ರ ಸಂಸ್ಥೆ(ವಿಶ್ವಸಂಸ್ಥೆ)ಯ ಸ್ಥಾಪನೆ.


ಅಕ್ಟೋಬರ್ ೨೯ : ಟರ್ಕಿ ಗಣರಾಜ್ಯವಾಗಿ ೧೯೨೩ರಲ್ಲಿಮುಸ್ತಫ ಕೆಮಲ್ ಅಟಾತುರ್ಕ್ ಅದರ ಮೊದಲ ರಾಷ್ಟ್ರಪತಿಯಾದನು.


ಅಕ್ಟೋಬರ್ ೩೦ : ವಿಶ್ವ ಉಳಿತಾಯ / ಮಿತವ್ಯಯ ದಿನ


ಅಕ್ಟೋಬರ್ ೩೧ : ೧೮೭೫ ಸರ್ದಾರ್ ವಲ್ಲಭಭಾಯ್ ಪಟೇಲ್ ಜನ್ಮದಿನ, ೧೯೮೪ರಲ್ಲಿ ಇಂದಿರಾ ಗಾಂಧಿಯಹತ್ಯೆ.


ನವೆಂಬರ್:

ಶ್ರೀ ಕನಕ ದಾಸರು

ನವೆಂಬರ್ ೧ : ೧೯೫೬ರಲ್ಲಿ ಕರ್ನಾಟಕರಾಜ್ಯದ ಸ್ಥಾಪನೆಯ ಆಚರಣೆ ಕರ್ನಾಟಕ ರಾಜ್ಯೋತ್ಸವ.


ನವೆಂಬರ್ ೩ : ೧೯೫೭ರಲ್ಲಿ ಬಾಹ್ಯಾಕಾಶ ತಲುಪಿದ ಮೊದಲ ಜೀವಿಯಾದ ಲೈಕಾನಾಯಿಯನ್ನು ಹೊತ್ತ ಸೋವಿಯೆಟ್ ಒಕ್ಕೂಟದಸ್ಪುಟ್ನಿಕ್ ೨ ಗಗನನೌಕೆಯ ಉಡಾವಣೆ.


ನವೆಂಬರ್ ೭ : ೧೯೧೭ರಲ್ಲಿ ವ್ಲಾಡಿಮಿರ್ ಲೆನಿನ್ನೇತೃತ್ವದಲ್ಲಿ ರಷ್ಯಾದ ಕ್ರಾಂತಿಯ ಪ್ರಾರಂಭ.


ನವೆಂಬರ್ ೮ : ಕಥಕ್ ಶಾಸ್ತ್ರೀಯ ನೃತ್ಯಗಾತಿ ಸಿತಾರಾದೇವಿ ಅವರ ಜನ್ಮದಿನ.


ನವೆಂಬರ್ ೯ : ಚಲಚಿತ್ರ ಮತ್ತು ರಂಗ ನಟ ಶಂಕರನಾಗ್ ಅವರ ಜನ್ಮದಿನ.


ನವೆಂಬರ್ ೧೧ : ಅನಸೂಯಾ ಸಾರಾಭಾಯಿ ಅವರ ಜನ್ಮದಿನ.


ನವೆಂಬರ್ ೧೪ : ಮಕ್ಕಳ ದಿನಾಚರಣೆ(ಜವಾಹರಲಾಲ್ ನೆಹರು ಜನ್ಮದಿನ).


ನವೆಂಬರ್ ೧೮ : ೧.ವಿಶ್ವ ಮೂರ್ಛೆ ರೋಗ ದಿನ.೨. ಭಾರತೀಯ ಚಲನಚಿತ್ರ ರಂಗದ ದಿಗ್ಗಜ ವಿ.ಶಾಂತಾರಾಂ(ಶಾಂತಾರಾಂ ರಾಜಾರಾಂ ವಂಕುದ್ರೆ) ಅವರ ಜನ್ಮದಿನ.


ನವೆಂಬರ್ ೧೯ : ವಿಶ್ವ ಶೌಚಾಲಯ/ನೈರ್ಮಲ್ಯ ದಿನ, ಪೌರದಿನ, ಅಂತಾರಾಷ್ಟ್ರೀಯ ಪುರುಷರ ದಿನ, ಇಂದಿರಾಗಾಂಧಿ ಹುಟ್ಟಿದ ದಿನ,


ನವೆಂಬರ್ ೨೧ : ೧೯೬೨ರಲ್ಲಿ ಭಾರತ-ಚೀನ ಯುದ್ಧದ ಅಂತ್ಯ.


ನವೆಂಬರ್ ೨೨ : ಕಾನೂನು ಸಾಕ್ಷರತಾ ದಿನ


ನವೆಂಬರ್ ೨೪ : ೧೮೫೯ರಲ್ಲಿ ಜೀವವಿಕಾಸವಾದವನ್ನು ಘೋಷಿಸಿದ ಚಾರ್ಲ್ಸ್ ಡಾರ್ವಿನ್ ಅವರ ದ ಆರಿಜಿನ್ ಆಫ್ ಸ್ಪೀಶೀಸ್ ಪುಸ್ತಕದ ಪ್ರಕಟಣೆ.


ನವೆಂಬರ್ ೨೫ : ೧೯೯೨ರಲ್ಲಿ ಚೆಕೊಸ್ಲೊವೇಕಿಯಾಒಡೆದು ಚೆಕ್ ಗಣರಾಜ್ಯ ಮತ್ತು ಸ್ಲೊವಾಕಿಯದೇಶಗಳಾಗಲು ನಿರ್ಧರಿಸಿತು.


ನವೆಂಬರ್ ೨೫ : ಅಂತಾರಾಷ್ಟ್ರೀಯ ಮಹಿಳಾ ದೌರ್ಜನ್ಯ ವಿರೋಧಿ ದಿನ


ನವೆಂಬರ್ ೨೬ : ಕನಕದಾಸ ಜಯಂತಿ. (ಚಿತ್ರಿತ)


ನವೆಂಬರ್ ೨೯ : ಅಂತಾರಾಷ್ಟ್ರೀಯ ಸಾಮರಸ್ಯ ದಿನ


ನವೆಂಬರ್ ೩೦ : ರಾಷ್ಟ್ರೀಯ ವಿಪತ್ತು ನಿಗ್ರಹ ದಿನ


ಡಿಸೆಂಬರ್

೧ – ೨ – ೩ – ೪ – ೫ – ೬ – ೭ – ೮ – ೯ – ೧೦ – ೧೧– ೧೨ – ೧೩ – ೧೪ – ೧೫ – ೧೬ – ೧೭ – ೧೮ – ೧೯– ೨೦ – ೨೧ – ೨೨ – ೨೩ – ೨೪ – ೨೫ – ೨೬ – ೨೭– ೨೮ – ೨೯ – ೩೦ – ೩೧ ಡಿಸೆಂಬರ್ ೨೩: ಜಪಾನ್ನಲ್ಲಿ "ಚಕ್ರವರ್ತಿಯ ಹುಟ್ಟುಹಬ್ಬ".

೧೯೨೧ - ವಿಶ್ವಭಾರತಿ ವಿಶ್ವವಿದ್ಯಾಲಯವು ರವೀಂದ್ರನಾಥ ಠಾಗೋರ್ರಿಂದ ಸ್ಥಾಪಿತವಾಯಿತು.


೧೯೪೭ - ಬೆಲ್ ಲ್ಯಾಬೊರೇಟೊರೀಸ್ನಲ್ಲಿ ಟ್ರ್ಯಾನ್ಸಿಸ್ಟರ್ (ಚಿತ್ರಿತ) ಮೊದಲ ಬಾರಿಗೆ ಪ್ರದರ್ಶಿತವಾಯಿತು.


೧೯೫೪ - ವಿಶ್ವದ ಮೊದಲ ಮೂತ್ರಜನಕಾಂಗದ ಬದಲಾವಣೆ ಬಾಸ್ಟನ್ನಲ್ಲಿ ನೆರವೇರಿಸಲಾಯಿತು.


೧೯೭೨ - ನಿಕರಾಗುವದಲ್ಲಿ ಉಂಟಾದ ಭೂಕಂಪದಲ್ಲಿ ಸುಮಾರು ೧೦,೦೦೦ ಜನರು ಬಲಿಯಾದರು.


೧೯೯೦ - ಸ್ಲೊವೇನಿಯದಲ್ಲಿ ನಡೆದ ಜನಾಭಿಪ್ರಾಯ ಮತದಲ್ಲಿ ೮೮% ಜನ ಯುಗೊಸ್ಲಾವಿಯದಿಂದ ಸ್ವಾತಂತ್ರ್ಯಕ್ಕೆ ಒಪ್ಪಿಗೆ ನೀಡಿದರು.


ಜನನಗಳು: ಅಕಿಹಿಟೊ; ಮರಣಗಳು: ಪಿ.ವಿ. ನರಸಿಂಹರಾವ್.

ಕಾಮೆಂಟ್‌ಗಳಿಲ್ಲ:

ಕಾಮೆಂಟ್‌‌ ಪೋಸ್ಟ್‌ ಮಾಡಿ