ಶನಿವಾರ, ಆಗಸ್ಟ್ 26, 2017

ಭಾರತ-ನೇಪಾಳ ಜಂಟಿ ಮಾತುಕತೆ, ಎಂಟು ಒಪ್ಪಂದಗಳಿಗೆ ಸಹಿ

ಭಾರತ-ನೇಪಾಳ ಜಂಟಿ ಮಾತುಕತೆ, ಎಂಟು ಒಪ್ಪಂದಗಳಿಗೆ ಸಹಿ

ನವದೆಹಲಿ: ಮಾದಕವಸ್ತು ಕಳ್ಳಸಾಗಣೆಗೆ ವಿರುದ್ದ ಕ್ರಮಕ್ಕೆ ಸಹಕಾರ ಸೇರಿದಂತೆ ಎಂಟು ಒಪ್ಪಂದಗಳಿಗೆ ಭಾರತ ಮತ್ತು ನೇಪಾಳ ಇಂದು ಸಹಿ ಹಾಕಿವೆ.

ದ್ವಿಪಕ್ಷೀಯ ಕಾರ್ಯತಂತ್ರ ಮತ್ತು ಪ್ರಾದೇಶಿಕ ಸಮಸ್ಯೆಗಳ ಕುರಿತು ಪ್ರಧಾನ ಮಂತ್ರಿ ನರೇಂದ್ರ ಮೋದಿ ಮತ್ತು ನೇಪಾಳದ ಮುಖಂಡ ಶೇರ್ ಬಹದ್ದೂರ್ ದೇವುಬಾ ನಡುವಿನ ಸಮಗ್ರ ಮಾತುಕತೆಗಳ ನಂತರ ಒಪ್ಪಂದಕ್ಕೆ ಸಹಿ ಹಾಕಲಾಯಿತು.

"ನಮ್ಮ ದ್ವಿಪಕ್ಷೀಯ ಸಹಭಾಗಿತ್ವವನ್ನು ಇನ್ನಷ್ಟು ಉತ್ತಮಗೊಳಿಸುವ ಸಕಾರಾತ್ಮಕ ನಿರ್ಧಾರಕ್ಕೆ ಬಂದಿದ್ದೇವೆ," ಎಂದು ಮೋದಿ ಮತ್ತು ದೇವುಬಾ ಜಂಟಿ ಪತ್ರಿಕಾಗೋಷ್ಠಿಯಲ್ಲಿ ಹೇಳಿದರು. ನೇಪಾಳ ದೇಶದ ಒಟ್ಟಾರೆ ಬೆಳವಣಿಗೆ ಮತ್ತು ಅಭಿವೃದ್ಧಿಗೆ ಭಾರತ ಬದ್ದವಾಗಿದೆ ಎಂದು ಭರವಸೆ ನೀಡಿದರು.

ನೇಪಾಳ "ತನ್ನ ನೆಲದಲ್ಲಿ ಭಾರತ ವಿರೋಧಿ ಚಟುವಟಿಕೆಗಳನ್ನು ಯಾವತ್ತೂ ಉತ್ತೇಜಿಸುವುದಿಲ್ಲ" ಎಂದು ದೇವುಬಾ ಹೇಳಿದರು.

ಕಟೈಯಾ ಕುಸಾಹ ಮತ್ತು ರಾಕ್ಸಲ್-ಪರ್ವಾನಿಪುರ ಗಡಿ ವಿದ್ಯುತ್ ಪ್ರಸರಣ ಮಾರ್ಗವನ್ನು ಇಬ್ಬರು ನಾಯಕರು ಜಂಟಿಯಾಗಿ ಉದ್ಘಾಟಿಸಿದರು.

ರಕ್ಷಣೆ ಮತ್ತು ಭದ್ರತೆಯು ದ್ವಿಪಕ್ಷೀಯ ಸಂಬಂಧಗಳ ಪ್ರಮುಖ ಅಂಶವೆಂದು ಮೋದಿ ಗುರುತಿಸಿದರು..

ಇದಕ್ಕೂ ಮುನ್ನ, ರಾಷ್ಟ್ರಪತಿ ಭವನದಲ್ಲಿ ದೇವುಬಾ ಗೆ ಔಪಚಾರಿಕ ಸ್ವಾಗತ ನೀಡಲಾಗಿತ್ತು, ಅಲ್ಲಿ ಅವರು ದೇಶದ ಗಣ್ಯ ಅತಿಥಿಯಾಗಿ ಉಳಿದಿದ್ದರು.

ನಾಲ್ಕು ದಿನಗಳ ಭಾರತ ಭೇಟಿಗಾಗಿ ನಿನ್ನೆ ದೇವುಬಾ ಇಲ್ಲಿಗೆ ಆಗಮಿಸಿದ್ದರು

ಕಾಮೆಂಟ್‌ಗಳಿಲ್ಲ:

ಕಾಮೆಂಟ್‌‌ ಪೋಸ್ಟ್‌ ಮಾಡಿ