ಗುರುವಾರ, ಸೆಪ್ಟೆಂಬರ್ 19, 2019

ಬೆಂಗಳೂರಿನಲ್ಲಿ ವಿಶ್ವ ಚುನಾವಣಾ ಸಂಸ್ಥೆಗಳ ಸಂಘಟನೆಯ ಕಾರ್ಯಕಾರಿ ಮಂಡಳಿಯ ವಿಶೇಷ ಅಧಿವೇಶನ

ಬೆಂಗಳೂರಿನಲ್ಲಿ ವಿಶ್ವ ಚುನಾವಣಾ ಸಂಸ್ಥೆಗಳ ಸಂಘಟನೆಯ ಕಾರ್ಯಕಾರಿ ಮಂಡಳಿಯ ವಿಶೇಷ ಅಧಿವೇಶನ


Posted Date:- Sep 03, 2019

ಬೆಂಗಳೂರಿನಲ್ಲಿ   ವಿಶ್ವ ಚುನಾವಣಾ ಸಂಸ್ಥೆಗಳ ಸಂಘಟನೆಯ ಕಾರ್ಯಕಾರಿ ಮಂಡಳಿಯ ವಿಶೇಷ ಅಧಿವೇಶನ  


 

ಭಾರತದ ಮುಖ್ಯ  ಚುನಾವಣಾ ಆಯುಕ್ತರಾದ ಶ್ರೀ ಸುನಿಲ್ ಅರೋರಾ ಅವರಿಂದು ಬೆಂಗಳೂರಿನಲ್ಲಿ ನಡೆದ ವಿಶ್ವ ಚುನಾವಣಾ ಸಂಸ್ಥೆಗಳ ಸಂಘಟನೆಯ ಕಾರ್ಯಕಾರಿ ಮಂಡಳಿಯ ವಿಶೇಷ ಅಧಿವೇಶನದಲ್ಲಿ ಪಾಲ್ಗೊಂಡು ಮಾತನಾಡಿದರು.ಭಾರತದ ಚುನಾವಣಾ ಆಯೋಗವು 2011-12ರಲ್ಲಿ  ಈ ಸಂಘಟನೆಯನ್ನು  ಸ್ಥಾಪಿಸುವ ಪ್ರಕ್ರಿಯೆಯಲ್ಲಿ ಮುಖ್ಯವಾದ ಪಾತ್ರವನ್ನು ವಹಿಸಿತ್ತು ಮತ್ತು 2013ರ ಅಕ್ಟೊಬರ್ ತಿಂಗಳಲ್ಲಿ  ಎ.ಡಬ್ಲ್ಯು.ಇ.ಬಿ.ಯ ಸ್ಥಾಪಕ ಸದಸ್ಯರಲ್ಲಿ ಒಂದಾಯಿತು ಎಂಬುದನ್ನು ನೆನಪಿಸಿಕೊಂಡರು. 2013ರಿಂದ ಭಾರತವು ವಿಶ್ವ  ಚುನಾವಣಾ ಸಂಸ್ಥೆಗಳ ಕಾರ್ಯಕಾರಿ ಮಂಡಳಿಯಲ್ಲಿ ಸದಸ್ಯನಾಗಿದ್ದು, 2017ರಿಂದ ಉಪಾಧ್ಯಕ್ಷತೆಯನ್ನು ವಹಿಸಿಕೊಂಡಿದೆ. ವಿಶ್ವ ಚುನಾವಣಾ ಸಂಸ್ಥೆಗಳ ಸಂಘಟನೆಯ ಕಾರ್ಯಕ್ರಮವಾದ ಚುನಾವಣಾ ಆಡಳಿತ ಸಂಸ್ಥೆಗಳ ನಡುವಣ ಸಹಭಾಗಿತ್ವ ಉತ್ತೇಜನಕ್ಕೆ ಭಾರತವು ಸಂಪೂರ್ಣ ಬೆಂಬಲ ನೀಡುತ್ತದೆ .

ವಿಶ್ವ  ಚುನಾವಣಾ ಸಂಸ್ಥೆಗಳ ಘಟಕಗಳಾಗಿ ವಿವಿಧ ದೇಶಗಳ ಚುನಾವಣಾ ಆಡಳಿತ ಮಂಡಳಿಗಳು (ಇ.ಎಮ್.ಬಿ.ಗಳು) ಇದ್ದು ಒಟ್ಟಾಗಿ ಕೆಲಸ ಮಾಡುವುದಲ್ಲದೆ ಅನುಭವದ ಆಧಾರದಲ್ಲಿ ವಿನಿಮಯ ಮತ್ತು ಪರಸ್ಪರ ಉತ್ತಮ ಪದ್ಧತಿಗಳನ್ನು ಅಳವಡಿಸಿಕೊಳ್ಳುವಂತಹ ರಚನೆಯನ್ನು ಹೊಂದಿವೆ ಎಂದೂ ಅರೋರಾ ಹೇಳಿದರು. 109 ದೇಶಗಳ 115 ಇ.ಎಂ.ಬಿ.ಗಳು ಇದರ ಸದಸ್ಯರಾಗಿದ್ದು, 20 ಅಂತಾರಾಷ್ಟ್ರೀಯ ಸಂಘಟನೆಗಳು ಸಹ ಸದಸ್ಯರಾಗಿವೆ. ವಿಶ್ವ ಚುನಾವಣಾ ಸಂಸ್ಥೆಗಳ ಸಂಘಟನೆ (ಎ-ವೆಬ್) ಯಾವುದೇ ಒಳಪ್ರವೇಶ ನಡೆಸದೆ ಚುನಾವಣಾ ಆಡಳಿತವನ್ನು ಬಲಪಡಿಸಲು ಇರುವ ಜಾಗತಿಕ ಸಂಘಟನೆಯಾಗಿ ಮೂಡಿ ಬಂದಿದೆ.

ಚುನಾವಣಾ ವೈಫಲ್ಯವು ಪ್ರಜಾಸತ್ತಾತ್ಮಕ ಸಂಸ್ಥೆಗಳ ಬಗ್ಗೆ ಅಪನಂಬಿಕೆಯನ್ನು ಬೆಳೆಸುವ ಅಪಾಯವಿದೆ ಎಂಬುದರ ಬಗ್ಗೆ ಎಚ್ಚರಿಸಿದ ಅವರು ಇಂತಹ ಸಂಕೀರ್ಣ ಸಂದರ್ಭಗಳಲ್ಲಿ ಬಹುಪಕ್ಷೀಯ ಸಂಘಟನೆಯಾದ ಎ-ವೆಬ್ ಪ್ರಮುಖ ಪಾತ್ರ ವಹಿಸಬಲ್ಲದು ಎಂದೂ ಹೇಳಿದರು.ಪ್ರಜಾಪ್ರಭುತ್ವ ಎನ್ನುವುದು ಅತ್ಯಂತ ಶ್ರೇಷ್ಟ ಚಿಂತನೆ. ಅದು ದೇಶಪ್ರೆಮಿಗಳು, ಸುಧಾರಣಾವಾದಿಗಳ ತಲೆಮಾರುಗಳನ್ನು ಪ್ರಭಾವಿಸಿದೆ.ಆದರೆ ಇದು ಬಹಳ ಕಲ್ಪನೆ ಮತ್ತು ವೃತ್ತಿಪರತೆಯನ್ನು ಅನುಷ್ಟಾನ ಹಂತದಲ್ಲಿ ಬೇಡುತ್ತದೆ ಎಂದೂ ಅರೋರಾ ಹೇಳಿದರು. ಭಾರತದ ಸಂವಿಧಾನ ನಿರ್ಮಾತೃಗಳು ಅತ್ಯಂತ ಮುನ್ನೋಟ ಉಳ್ಳವರಾಗಿದ್ದರು, ಅವರು 1950 ರ ಜನವರಿ 25 ಕ್ಕೆ ಚುನಾವಣಾ ಆಯೋಗವೆಂಬ ಸಂಸ್ಥೆಯನ್ನು ಸ್ಥಾಪಿಸಿದರು.ನಮ್ಮ ಸಂವಿಧಾನವನ್ನು ಸ್ವೀಕರಿಸಿದ ದಿನವಾದ ಆಗಸ್ಟ್ 26 ಕ್ಕೆ ಒಂದು ದಿನ ಮುಂಚಿತವಾಗಿ ಇದನ್ನು ಸ್ಥಾಪಿಸಲಾಯಿತು. ಭಾರತದ ಚುನಾವಣಾ ಆಯೋಗವು ಇದುವರೆಗೆ 17 ರಾಷ್ಟ್ರೀಯ ಚುನಾವಣೆಗಳನ್ನು ನಡೆಸಿದೆ ಜೊತೆಗೆ 388 ರಾಜ್ಯ ಚುನಾವಣೆಗಳನ್ನು ಯಶಸ್ವಿಯಾಗಿ ನಡೆಸಿಕೊಟ್ಟಿದೆ, ಆ ಮೂಲಕ ಚುನಾವಣಾ ಪ್ರಜಾಪ್ರಭುತ್ವದಲ್ಲಿ ರಾಷ್ಟ್ರದ ನಿಷ್ಟೆಯನ್ನು ಬಲಗೊಳಿಸಿದೆ ಎಂದೂ ಅರೋರಾ ನುಡಿದರು.

 

ಎ-ವೆಬ್ ನ ಈಗಿನ ಮಹಾ ಕಾರ್ಯದರ್ಶಿ ಯೋಂಗ್ ಹಿ ಕಿಮ್ ಅವರನ್ನು ಮತ್ತು ಸಚಿವಾಲಯದ ಅವರ ಸಿಬ್ಬಂದಿಗಳನ್ನು ವಿವಿಧ ತರಬೇತಿ ಮತು ವಿಚಾರ ಸಂಕಿರಣ ಕಾರ್ಯಕ್ರಮಗಳನ್ನು ಆಯೋಜಿಸುತ್ತಿರುವುದಕ್ಕಾಗಿ  ಶ್ರೀ ಅರೋರಾ  ಅವರು ಅಭಿನಂದಿಸಿದರು

ಕಾಮೆಂಟ್‌ಗಳಿಲ್ಲ:

ಕಾಮೆಂಟ್‌‌ ಪೋಸ್ಟ್‌ ಮಾಡಿ