ಗುರುವಾರ, ಏಪ್ರಿಲ್ 6, 2017

ಏಷ್ಯನ್ ಬಿಲಿಯರ್ಡ್ಸ್ ತಂಡದಲ್ಲಿ ಪಂಕಜ್

ಏಷ್ಯನ್ ಬಿಲಿಯರ್ಡ್ಸ್ ತಂಡದಲ್ಲಿ ಪಂಕಜ್

ಚೆನ್ನೈ: ಕರ್ನಾಟಕದ ಪಂಕಜ್ ಅಡ್ವಾಣಿ ಬುಧವಾರ ಭಾರತ ಬಿಲಿಯರ್ಡ್ಸ್‌ ಮತ್ತು ಸ್ನೂಕರ್ ಸಂಸ್ಥೆ  (ಬಿಎಸ್‌ಎಫ್‌ಐ) ಪ್ರಕಟಿಸಿದ ಏಷ್ಯನ್‌ ಬಿಲಿಯರ್ಡ್ಸ್ ಚಾಂಪಿಯನ್‌ಷಿಪ್ ತಂಡದಲ್ಲಿ ಸ್ಥಾನ ಪಡೆದಿದ್ದಾರೆ. ಬಿಎಸ್‌ಎಫ್‌ಐ ಮೂರು ಟೂರ್ನಿಗಳಿಗೆ ಒಟ್ಟು 24 ಸ್ಪರ್ಧಿಗಳ ತಂಡವನ್ನು ಅಂತಿಮಗೊಳಿಸಿದೆ.

ಏಷ್ಯನ್ ಬಿಲಿಯರ್ಡ್ಸ್‌ ಚಾಂಪಿಯನ್‌ಷಿಪ್ ತಂಡದಲ್ಲಿ ಪಂಕಜ್ ಅಡ್ವಾಣಿ, ರೂಪೇಶ್ ಷಾ, ಸೌರವ್ ಕೊಠಾರಿ, ಬ್ರಿಜೇಷ್ ದಮಾನಿ, ಧ್ರುವ್ ಸಿತ್ವಾಲ, ಧ್ವಜ್‌ ಹರಿಯಾ, ಸಿದ್ದಾರ್ಥ್‌ ಪಾರಿಖ್‌, ಬಿ. ಭಾಸ್ಕರ್‌ ಇದ್ದಾರೆ.

ಏಷ್ಯನ್ ಬಿಲಿಯರ್ಡ್ಸ್‌ಗೆ ಆಯ್ಕೆಯಾದ ಮಹಿಳೆಯರ ತಂಡದಲ್ಲಿ ಆಮೀ ಕರಮಿ, ಅರಂತಾ ಸಂಚಿತ್‌, ವರ್ಷಾ ಸಂಜೀವ್‌, ವಿದ್ಯಾ ಪಿಳ್ಳೈ, ಎಮ್‌.ಚಿತ್ರಾ, ಕೀರತ್ ಭಂಡಾಲ್‌, ಮೀನಲ್ ಠಾಕೂರ್‌ ಮತ್ತು ಸುನಿತಿ ದಾಮಿನಿ ಸೇರಿದ್ದಾರೆ.

ರಷ್ಯಾದ ಈಜುಪಟು ನತಾಲಿಯಾ ಇಶ್ಚೆಂ ಕೋ ನಿವೃತ್ತಿ

ಇಶ್ಚೆಂಕೊ ನಿವೃತ್ತಿ

ಮಾಸ್ಕೊ: ಒಲಿಂಪಿಕ್ಸ್‌ ನಲ್ಲಿ ಐದು ಚಿನ್ನ ಗೆದ್ದ ಹೆಗ್ಗಳಿಕೆಯ ರಷ್ಯಾದ ಈಜುಪಟು ನತಾಲಿಯಾ ಇಶ್ಚೆಂ ಕೊ ಬುಧವಾರ ನಿವೃತ್ತಿ ಪ್ರಕಟಿಸಿದ್ದಾರೆ.

ಸಿಂಕ್ರನೈಸ್ಡ್‌ ವಿಭಾಗದಲ್ಲಿ ನೈಪುಣ್ಯತೆ ಸಾಧಿಸಿದ್ದ  30 ವರ್ಷ ವಯಸ್ಸಿನ ಇವರು ವಿಶ್ವ ಈಜು ಚಾಂಪಿಯನ್‌ಷಿಪ್‌ನಲ್ಲಿ 19 ಚಿನ್ನ ಗೆದ್ದಿದ್ದರಲ್ಲದೆ,  ಯುರೋಪಿಯನ್ ಚಾಂಪಿಯನ್‌ಷಿಪ್‌ನಲ್ಲಿ 12 ಚಿನ್ನ ಗಳಿಸಿ ದ್ದರು. ಸಿಂಕ್ರನೈಸ್ಡ್‌ ವಿಭಾಗದಲ್ಲಿ ಈ  ಸಾಧನೆ ಮಾಡಿದ ಯೂರೊಪ್‌ನ ಮೊದಲ ಈಜುಗಾರ್ತಿ  ಇವರಾಗಿದ್ದಾರೆ.

ಗಿಲ್ಗಿಟ್- ಬಲಟಿಸ್ತಾನ್ ಸೇರಿದಂತೆ ಇಡೀ ಕಾಶ್ಮೀರ ನಮ್ಮದು ಪಾಕ್ಗೆ ಸುಷ್ಮಾ ಎಚ್ಚರಿಕೆ

ಗಿಲ್ಗಿಟ್-ಬಲ್ಟಿಸ್ತಾನ್ ಸೇರಿದಂತೆ ಇಡೀ ಕಾಶ್ಮೀರ ನಮ್ಮದು: ಪಾಕ್ ಗೆ ಸುಷ್ಮಾ ಎಚ್ಚರಿಕೆ

ನವದೆಹಲಿ: ಗಿಲ್ಗಿಟ್-ಬಲ್ಟಿಸ್ತಾನ್ ತನ್ನ ಐದನೇ ಪ್ರಾಂತ್ಯವನ್ನಾಗಿ ಘೋಷಿಸಲು ಮುಂದಾಗಿರುವ ಪಾಕಿಸ್ತಾನವನ್ನು ತೀವ್ರ ತರಾಟೆಗೆ ತೆಗೆದುಕೊಂಡ ವಿದೇಶಾಂಗ ಸಚಿವೆ ಸುಷ್ಮಾ ಸ್ವರಾಜ್ ಅವರು, ಪಾಕಿಸ್ತಾನ ಆಕ್ರಮಿತ ಪ್ರದೇಶ ಸೇರಿದಂತೆ ಇಡೀ ಜಮ್ಮು ಮತ್ತು ಕಾಶ್ಮೀರ ಭಾರತಕ್ಕೆ ಸೇರಿದ್ದು ಎಂದು ಬುಧವಾರ ಹೇಳಿದ್ದಾರೆ.

ಇಂದು ಲೋಕಸಭೆಯಲ್ಲಿ ಶೂನ್ಯ ವೇಳೆಯಲ್ಲಿ ಬಿಜು ಜನತಾ ದಳ ಸಂಸದ ಭರ್ತೃಹರಿ ಮೆಹ್ತಾಬ್ ಅವರ ಪ್ರಶ್ನೆಯೊಂದಕ್ಕೆ ಉತ್ತರಿಸಿದ ಸುಷ್ಮಾ ಸ್ವರಾಜ್, ಜಮ್ಮು ಮತ್ತು ಕಾಶ್ಮೀರ ಭಾರತದ ಅವಿಭಾಜ್ಯ ಅಂಗವೆಂಬುದರ ಬಗ್ಗೆ ಯಾವುದೇ ಅನುಮಾನ ಬೇಡ. ಗಿಲ್ಗಿಟ್-ಬಲ್ಟಿಸ್ತಾನ್ ಸೇರಿದಂತೆ ಇಡೀ ಕಾಶ್ಮೀರ ನಮ್ಮದು ಎಂದು ಹೇಳಿದರು.

ಗಿಲ್ಗಿಟ್-ಬಲ್ಟಿಸ್ತಾನ್ ಪಾಕಿಸ್ತಾನದ ಐದನೇ ಪ್ರಾಂತ್ಯ ಎಂದು ಘೋಷಿಸಲು ಪಾಕಿಸ್ತಾನ ನಿರ್ಧರಿಸಿದೆ.
ಆದರೆ ಪಾಕಿಸ್ತಾನದ ಈ ನಿರ್ಧಾರವನ್ನು ಖಂಡಿಸಿ ಲೋಕಸಭೆ ಮತ್ತು ರಾಜ್ಯಸಭೆ ನಿರ್ಣಯ ಅಂಗೀಕರಿಸಬೇಕು ಎಂದು ಮೆಹ್ತಾಬ್ ಅವರು ಒತ್ತಾಯಿಸಿದರು.

ಬುಧವಾರ, ಏಪ್ರಿಲ್ 5, 2017

ಮಹಿಳಾ ವಿಶ್ವ ಹಾಕಿ ಲೀಗ್: ಭಾರತಕ್ಕೆ ಸತತ 2ನೇಯ ಜಯ

ಮಹಿಳಾ ವಿಶ್ವ ಹಾಕಿ ಲೀಗ್; ಭಾರತಕ್ಕೆ ಸತತ 2ನೇ ಜಯ: ಸೆಮಿಫೈನಲ್ ಪ್ರವೇಶ

ವೆಸ್ಟ್ ವಾಂಕೊವರ್: ಮಹಿಳೆಯರ ವಿಶ್ವ ಹಾಕಿ ಲೀಗ್'ನಲ್ಲಿ ಭಾರತೀಯ ವನಿತೆಯರ ತಂಡ ಸೋಮವಾರ ಸತತ ಎರಡನೇ ಗೆಲುವು ದಾಖಲಿಸುವ ಮೂಲಕ ಸೆಮಿಫೈನಲ್ ಪ್ರವೇಶಿಸಿದೆ.

ಇಂದು ನಡೆದ ರೌಂಡ್-2 ಪಂದ್ಯದಲ್ಲಿ ವಂದನಾ ಕಟಾರಿಯಾ ಅವರ ಗೋಲಿನ ಸಹಾಯದಿಂದ ಭಾರತ ಮಹಿಳಾ ಹಾಕಿ ತಂಡ 1-0 ಗೋಲಿನಿಂದ ಬೆಲಾರಸ್ ಮಹಿಳೆಯರನ್ನು ಮಣಿಸಿತು. ಎ ಗುಂಪಿನ ಈ ಪಂದ್ಯದಲ್ಲಿ ವಂದನಾ 26ನೇ ನಿಮಿಷದಲ್ಲಿ ಗೋಲು ಗಳಿಸಿದರು.

ಬೆಲಾರಸ್ ವನಿತೆಯರು ತೀವ್ರ ಪೈಪೋಟಿ ನೀಡಿದರಾದರೂ, ಭಾರತೀಯರು ಇಡೀ ಪಂದ್ಯದಲ್ಲಿ ಹಿಡಿತ ಸಾಧಿಸಿದ್ದರು. ಮೂರ್ನಾಲ್ಕು ಪೆನಾಲ್ಟಿ ಕಾರ್ನರ್ ಅವಕಾಶಗಳೂ ಭಾರತಕ್ಕೆ ಸಿಕ್ಕಿದ್ದವು. ಭಾರತದ ಗೋಲ್'ಕೀಪರ್ ಸವಿತಾ ಅವರ ಪ್ರದರ್ಶನವೂ ಭಾರತದ ಗೆಲುವಿನಲ್ಲಿ ಪ್ರಮುಖ ಪಾತ್ರ ವಹಿಸಿತು.

ಶನಿವಾರ ನಡೆದ ತನ್ನ ಮೊದಲ ಪಂದ್ಯದಲ್ಲಿ ಭಾರತ ತಂಡ ಉರುಗ್ವೆ ವಿರುದ್ಧ ಶೂಟೌಟ್‌'ನಲ್ಲಿ 4-2 ಗೋಲುಗಳ ಅಂತರದಲ್ಲಿ ಗೆಲುವು ದಾಖಲಿಸಿತ್ತು.
ಉಭಯ ತಂಡಗಳು ನಿಗದಿತ ಸಮಯದಲ್ಲಿ 2-2ರಿಂದ ಸಮಬಲ ಸಾಧಿಸಿದ್ದವು. ಹೀಗಾಗಿ ಪೆನಾಲ್ಟಿ ಶೂಟೌಟ್ ಅನ್ನು ನೀಡಲಾಯಿತು. ಪೆನಾಲ್ಟಿ ಶೂಟೌಟ್ ನಲ್ಲಿ ನಾಯಕಿ ರಾಣಿ, ಮೋನಿಕಾ, ದೀಪಿಕಾ ಹಾಗೂ ನವಜೋತ್ ಕೌರ್ ತಲಾ ಒಂದು ಗೋಲು ಬಾರಿಸುವ ಮೂಲಕ 4-2ರಿಂದ ಉರುಗ್ವೆ ತಂಡವನ್ನು ಸೋಲಿಸುವಲ್ಲಿ ಯಶಸ್ವಿಯಾದರು.

ಸತತ ಎರಡು ಗೆಲುವುಗಳ ಮೂಲಕ ನಾಕೌಟ್ ಹಂತ ಪ್ರವೇಶಿಸಿರುವ ಭಾರತ ತಂಡ ಏಪ್ರಿಲ್ 8ರಂದು ಸೆಮಿಫೈನಲ್ ಪಂದ್ಯವಾಡಲಿದೆ.

ಜಸ್ವೀರ್ ಸಿಂಗ್ ಗೆ "ಆರ್ಡರ್ ಆಫ್ ದ ಬ್ರೀಟಿಶ್ ಎಂಪಯರ್" ಪ್ರಶಸ್ತಿ

ಜಸ್ವೀರ್ ಸಿಂಗ್‌ಗೆ 'ಆರ್ಡರ್ ಆಫ್ ದ ಬ್ರಿಟಿಶ್ ಎಂಪಯರ್' ಪ್ರಶಸ್ತಿ

ಲಂಡನ್, ಎ. 3: ಲಂಡನ್ ಬ್ಯಾರಿಸ್ಟರ್ ಜಸ್ವೀರ್ ಸಿಂಗ್ ‘ಆರ್ಡರ್ ಆಫ್ ದ ಬ್ರಿಟಿಶ್ ಎಂಪಯರ್ (ಒಬಿಇ)’ ಪ್ರಶಸ್ತಿ ಪಡೆದ ಜಗತ್ತಿನ ಅತ್ಯಂತ ಕಿರಿಯ ಸಿಖ್ ಆಗಿದ್ದಾರೆ.

ಜಸ್ವೀರ್ ಸಿಂಗ್ ಲಂಡನ್‌ನಲ್ಲೇ ಹುಟ್ಟಿ ಬೆಳೆದವರು. ಅವರ ಕುಟುಂಬಿಕರು ಪಂಜಾಬ್‌ನ ಡೊವೊಬ ಎಂಬ ಗ್ರಾಮದವರು.

‘‘ಆರ್ಡರ್ ಆಫ್ ದ ಬ್ರಿಟಿಶ್ ಎಂಪಯರ್ ಪ್ರಶಸ್ತಿ ಪಡೆದಿರುವುದಕ್ಕೆ ನನಗೆ ಹೆಮ್ಮೆಯೆನಿಸುತ್ತಿದೆ. ಇದು ನನಗೆ ಅಚ್ಚರಿಯ ವಿಷಯವಾಗಿದೆ. ಕಳೆದ ಏಳು ವರ್ಷಗಳ ಅವಧಿಯಲ್ಲಿ ಸಾಮಾಜಿಕ ಏಕತೆಗಾಗಿ ನಾನು ನಡೆಸಿದ ಪ್ರಯತ್ನಗಳು ಈ ರೀತಿಯಲ್ಲಿ ಫಲ ನೀಡಿರುವುದಕ್ಕೆ ಸಂತೋಷವಾಗಿದೆ’’ ಎಂದು ಅವರು ಪ್ರತಿಕ್ರಿಯಿಸಿದ್ದಾರೆ.

ಸಿಂಗ್ ‘ಸಿಟಿ ಸಿಖ್ಸ್’ ಎಂಬ ಸಂಘಟನೆಯ ಸ್ಥಾಪಕ ಅಧ್ಯಕ್ಷ ಹಾಗೂ ‘ಫೇತ್ಸ್ ಫೋರಂ ಫಾರ್ ಲಂಡನ್’ನ ಅಧ್ಯಕ್ಷರಾಗಿದ್ದಾರೆ.
ಈ ಸಂಘಟನೆಗಳು ಲಂಡನ್‌ನಲ್ಲಿರುವ ಕ್ರೈಸ್ತ, ಮುಸ್ಲಿಮ್, ಯಹೂದಿ, ಹಿಂದೂ, ಸಿಖ್, ಬೌದ್ಧ, ಜೈನ್, ರೊರಾಸ್ಟ್ರಿಯನ್ ಮತ್ತು ಬಹಾಯಿ ಎಂಬ ಏಳು ಪ್ರಮುಖ ಧರ್ಮಗಳ ಅನುಯಾಯಿಗಳ ಹಿತಾಸಕ್ತಿಗಳನ್ನು ಕಾಯ್ದುಕೊಂಡು ಬರುತ್ತಿವೆ.

‘‘ನಮ್ಮಲ್ಲಿ ಹಲವಾರು ರಾಷ್ಟ್ರವ್ಯಾಪಿ ಯೋಜನೆಗಳಿವೆ. ಅವುಗಳ ಪೈಕಿ ಒಂದು ವಿಭಜನೆ ಪೂರ್ವ ಭಾರತ, ವಿಭಜನೆ ಅವಧಿಯ ಭಾರತ ಮತ್ತು ಈಗಿನ ಬ್ರಿಟನ್‌ನಲ್ಲಿರುವ ಹಿಂದೂ, ಸಿಖ್ ಮತ್ತು ಮುಸ್ಲಿಮ್ ಸಮುದಾಯಗಳ ನಡುವಿನ ಸಂಬಂಧಗಳ ಬಗ್ಗೆ ಅಧ್ಯಯನ ಮಾಡುತ್ತಿದೆ’’ ಎಂದು ಸಿಂಗ್ ಹೇಳುತ್ತಾರೆ.

ಬೆಂಗಳೂರಿನ ಭಾರತೀಯ ವಿಜ್ಞಾನ ಸಂಸ್ಥೆ ದೇಶದ ನಂ.1 ಉನ್ನತ ಶಿಕ್ಷಣ ಸಂಸ್ಥೆ

ಬೆಂಗಳೂರಿನ ಭಾರತೀಯ ವಿಜ್ಞಾನ ಸಂಸ್ಥೆ (ಐಐಎಸ್‌ಸಿ) ದೇಶದ ನಂ.1 ಉನ್ನತ ಶಿಕ್ಷಣ ಸಂಸ್ಥೆ

ನವದೆಹಲಿ: ದೇಶದ ಟಾಪ್ 10 ಉನ್ನತ ಶಿಕ್ಷಣ ಸಂಸ್ಥೆಗಳ ಪೈಕಿ ಬೆಂಗಳೂರಿನಲ್ಲಿರುವ ಭಾರತೀಯ ವಿಜ್ಞಾನ ಸಂಸ್ಥೆ (ಐಐಎಸ್‌ಸಿ) ಮೊದಲ ಸ್ಥಾನ ಪಡೆದಿದ್ದು, ಪ್ರಬಂಧಕ ಸಂಸ್ಥೆಗಳ ಪೈಕಿ ಗುಜರಾತ್ ನ ಅಹಮದಾಬಾದ್ ಮೊದಲ ಸ್ಥಾನ ಪಡೆದಿದೆ.

ಕೇಂದ್ರ ಮಾನವ ಸಂಪನ್ಮೂಲ ಅಭಿವೃದ್ಧಿ ಸಚಿವ ಪ್ರಕಾಶ್ ಜಾವಡೆಕರ್ ಅವರು ಬಿಡುಗಡೆ ಮಾಡಿರುವ ಟಾಪ್ 10 ಶಿಕ್ಷಣ ಸಂಸ್ಥೆಗಳ ಪಟ್ಟಿಯಲ್ಲಿ ಏಳು ಐಐಟಿಗಳು ಸ್ಥಾನ ಪಡೆದಿದ್ದು, ಆ ಪೈಕಿ ಭಾರತೀಯ ವಿಜ್ಞಾನ ಸಂಸ್ಥೆ ಮೊದಲ ಸ್ಥಾನದಲ್ಲಿದೆ. ಇನ್ನು ಶ್ರೆಷ್ಠ ಕಾಲೇಜುಗಳ ಪಟ್ಟಿಯಲ್ಲಿ ದೆಹಲಿಯ ಮಿರಂದಾ ಹೌಸ್ ಮೊದಲ ಸ್ಥಾನ ಪಡೆದಿದೆ.

ಜಾವಡೆಕರ್ ಬಿಡುಗಡೆ ಮಾಡಿರುವ ಅತ್ಯುತ್ತಮ ವಿಶ್ವವಿದ್ಯಾಲಯ ಮತ್ತು ಕಾಲೇಜುಗಳ ರ‍್ಯಾಂಕಿಂಗ್‌ ಪಟ್ಟಿಯಲ್ಲಿ ರಾಷ್ಟ್ರೀಯತೆ ಚರ್ಚೆ ಹಾಗೂ ಪ್ರತಿಭಟನೆಗಳ ಮೂಲಕ ದೇಶದ ಗಮನ ಸೆಳೆದಿದ್ದ ಜವಾಹರಲಾಲ್ ನೆಹರೂ ವಿಶ್ವವಿದ್ಯಾಲಯ (ಜೆಎನ್‌ಯು)ಎರಡನೇ ಸ್ಥಾನದಲ್ಲಿದೆ.

ಅತ್ಯುತ್ತಮ ವಿಶ್ವವಿದ್ಯಾಲಯಗಳು

1) ಐಐಎಸ್‌ಸಿ, ಬೆಂಗಳೂರು

2) ಜೆಎನ್‌ಯು, ನವದೆಹಲಿ

3) ಬಿಎಚ್‌ಯು, ವಾರಣಾಸಿ

ಅತ್ಯುತ್ತಮ ಕಾಲೇಜುಗಳು

1) ಮಿರಂದಾ ಹೌಸ್‌, ನವದೆಹಲಿ

2) ಲಾಯಲ್ ಕಾಲೇಜ್, ಚೆನ್ನೈ

3) ಶ್ರೀರಾಮ್ ಕಾಲೇಜ್ ಆಫ್ ಕಾಮರ್ಸ್‌, ನವದೆಹಲಿ

ಕಡಲಾಮೆಗಳು ಮೊಟ್ಟೆಯಿಡುವ ಸಮಯ: ಫುವೈರಿತ್ ಕಡಲ ಕಿನಾರೆಗಳಲ್ಲಿ ಪ್ರವಾಸಿಗರಿಗೆ ಪ್ರವೇಶ ನಿಷೇಧ

ಕಡಲಾಮೆಗಳು ಮೊಟ್ಟೆಡುವ ಸಮಯ: ಫುವೈರಿತ್ ಕಡಲ ಕಿನಾರೆಗಳಲ್ಲಿ ಪ್ರವಾಸಿಗರಿಗೆ ಪ್ರವೇಶ ನಿಷೇಧ

ದೋಹಾ: ವಂಶ ನಾಶ ಭೀತಿಯಲ್ಲಿರುವ ಕಡಲಾಮೆಗಳು ಮೊಟ್ಟೆಯಿಡುವ ಸಮಯವಾಗಿರುವುದರಿಂದ ಫುವೈರಿತ್ ಕಡಲಕಿನಾರೆಗಳಿಗೆ ಪ್ರವಾಸಿಗರು ಭೇಟಿ ನೀಡುವುದನ್ನು ನಿರ್ಬಂಧಿಸಲಾಗಿದೆ.

ಕತಾರ್‍‍ನ ಉತ್ತರಭಾಗದಲ್ಲಿರುವ ಫುವೈರತ್ ಕಡಲ ಕಿನಾರೆಯಲ್ಲಿ  ಹಾಕ್ಸ್ ಬಿಲ್ ಎಂಬ ಜಾತಿಗೆ ಸೇರಿದ ಕಡಲಾಮೆಗಳು ಏಪ್ರಿಲ್ ನಿಂದ ಜುಲೈ ತಿಂಗಳವರೆಗೆ ಮೊಟ್ಟೆಯಿಡುವುದಕ್ಕಾಗಿ ದಡ ಸೇರುತ್ತವೆ.

ಹಾಗಾಗಿ, ಆ ತಿಂಗಳುಗಳಲ್ಲಿ ಪ್ರವಾಸಿಗರು ಫುವೈರಿತ್  ಬೀಚ್‍ಗೆ ಭೇಟಿ ನೀಡಬಾರದೆಂದು ಪರಿಸರ ಸಚಿವಾಲಯ ಹೇಳಿದೆ. ಆಗಸ್ಟ್  ತಿಂಗಳ ನಂತರವೇ ಈ ನಿರ್ಬಂಧವನ್ನು ತೆಗೆಯಲಾಗುವುದು.

ಕಡಲು ತೀರ ಪ್ರದೇಶಗಳಲ್ಲಿ ವಾಹನ ಸಂಚಾರ, ಬಲೆ ಬೀಸಿ ಮೀನು ಹಿಡಿಯುವುದು ಸೇರಿದಂತೆ ಈ ಪ್ರದೇಶಗಳನ್ನು ಮಾಲಿನ್ಯ ಮುಕ್ತಗೊಳಿಸುವಂತೆ ಸಚಿವಾಲಯ ಇಲ್ಲಿನ ನಾಗರಿಕರಿಗೆ ಹೇಳಿದೆ.

ಫುವೈರಿತ್, ಅಲ್ ಖಾರಿಯಾ, ರಾಸ್ ಲಫಾನ್, ಅಲ್ ಮರೂಣ  ಮೊದಲಾದ ಕಡಲ ಕಿನಾರೆಗಳಲ್ಲಿಯೂ ಹಲೂರ್, ಶರೀವು, ರಾಸ್ ರಖೇಲ್, ಉಂತೇಯಿಸ್ ಮೊದಲಾದ ದ್ವೀಪಗಳಲ್ಲಿ ಕಡಲಾಮೆಗಳ ಸಂಖ್ಯೆ ಜಾಸ್ತಿ ಇದೆ. ಪ್ರತಿ ಋತುಗಳಲ್ಲಿ ಗುಂಪಾಗಿ ಕಡಲ ತೀರಕ್ಕೆ ಆಗಮಿಸುವ ಈ ಆಮೆಗಳು 70 ರಿಂದ 95 ಮೊಟ್ಟೆಗಳನ್ನಿರಿಸುತ್ತವೆ. 52 ರಿಂದ 62 ದಿನಗಳಲ್ಲಿ ಈ ಮೊಟ್ಟೆಯಿಂದ ಮರಿ ಹೊರಬರುತ್ತದೆ.

ಮಂಜುನಾಥ್ ಸಾಗರ್ ಗೆ ಗುಲ್ವಾಡಿ ಪ್ರಶಸ್ತಿ

ಸಾಧಕ ಮಂಜುನಾಥ್ ಸಾಗರ್ ಗೆ ಗುಲ್ವಾಡಿ ಪ್ರಶಸ್ತಿ

ಕುಂದಾಪುರ, ಏಪ್ರಿಲ್ 3: ಕನ್ನಡ ಭಾಷೆ, ಸಂಸ್ಕೃತಿ, ಸಾಹಿತ್ಯ, ಮಾಧ್ಯಮ ಸೇರಿದಂತೆ ವಿವಿಧ ರಂಗಗಳಲ್ಲಿ ಸಾಧನೆಗೈದವರಿಗೆ ನೀಡಲಾಗುವ 2016 ನೇ ಸಾಲಿನ ಸಂತೋಷ್ ಕುಮಾರ್ ಗುಲ್ವಾಡಿ ಗೌರವ ಪುರಸ್ಕಾರಕ್ಕೆ ಕೆ.ಪಿ.ಮಂಜುನಾಥ್ ಸಾಗರ್ ಆಯ್ಕೆಯಾಗಿದ್ದಾರೆ.

ವಿಶ್ವ ಕನ್ನಡ ಸಂಸ್ಕೃತಿ ಸಮ್ಮೇಳನಗಳ ಮೂಲಕ ಕನ್ನಡ ಭಾಷೆಗೆ, ಸಂಸ್ಕೃತಿಗೆ ತಮ್ಮದೇ ಆದ ಕೊಡುಗೆ ನೀಡಿದ ಮಂಜುನಾಥ್ ಸಾಗರ್ ಅವರಿಗೆ ಕುಂದಾಪುರ ತಾಲೂಕಿನ ಗುಲ್ವಾಡಿ ಗ್ರಾಮದ ತೋಟದ ಮನೆಯಲ್ಲಿ ಏಪ್ರಿಲ್ 9 ರ ಸಂಜೆ ಪ್ರಶಸ್ತಿ ಪ್ರದಾನ ಮಾಡಲಾಗುವುದು ಎಂದು ಗುಲ್ವಾಡಿ ಸಾಂಸ್ಕೃತಿಕ ಪ್ರತಿಷ್ಠಾನ ತಿಳಿಸಿದೆ.[ಅಂತರಂಗ ಬಹಿರಂಗ ಖ್ಯಾತಿ ಗುಲ್ವಾಡಿ ಇನ್ನಿಲ್ಲ]

ಹತ್ತು ಸಾವಿರ ರೂ. ನಗದು ಮತ್ತು ಸ್ಮರಣಿಕೆಯನ್ನು ಹೊಂದಿರುವ ಈ ಪ್ರಶಸ್ತಿಯನ್ನು ಕನ್ನಡ ಅಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷ ಎಸ್.ಜಿ.ಸಿದ್ದರಾಮಯ್ಯ ಪ್ರದಾನ ಮಾಡಲಿದ್ದಾರೆ.
ಇದೇ ಸಂದರ್ಭದಲ್ಲಿ ಗುಲ್ವಾಡಿ ಟಾಕೀಸ್ ನಿರ್ಮಾಣದ ಕಲಾತ್ಮಕ ಚಿತ್ರ 'ರಿಸರ್ವೇಶನ್' ನ ಟ್ರೈಲರ್ ಮತ್ತು ಪೋಸ್ಟರ್ ಬಿಡುಗಡೆಗೊಳ್ಳಲಿವೆ. ವಿವಿಧ ಸಾಂಸ್ಕೃತಿಕ ಕಾರ್ಯಕ್ರಮಗಳೂ ನಡೆಯಲಿವೆ.

ಗುಲ್ವಾಡಿ ಪ್ರತಿಷ್ಠಾನವು ಕನ್ನಡ ಭಾಷೆ, ಸಂಸ್ಕೃತಿ, ಸಾಹಿತ್ಯ, ಕಲೆ, ಮಾಧ್ಯಮ, ಸಿನೆಮಾ ಸೇರಿದಂತೆ ಬೇರೆ ಬೇರೆ ಕ್ಷೇತ್ರಗಳಲ್ಲಿ ಸಾಧನೆ ಮಾಡಿದ ಸಾಧಕರಿಗೆ ಕಳೆದ ನಾಲ್ಕು ವರ್ಷಗಳಿಂದ ಈ ಪ್ರಶಸ್ತಿ ನೀಡುತ್ತಿದೆ.

ಕನ್ನಡ ಪತ್ರಿಕೋದ್ಯಮದಲ್ಲಿ ಮಹತ್ತರ ಸಾಧನೆ ಮಾಡಿದ ಸಂತೋಷ್ ಕುಮಾರ್ ಗುಲ್ವಾಡಿ ಅವರ ಸ್ಮರಣೆಗಾಗಿ ಪ್ರತಿಷ್ಠಾನ ಈ ಪ್ರಶಸ್ತಿ ಪ್ರದಾನ ಮಾಡುತ್ತಿದೆ ಎಂದು ಗುಲ್ವಾಡಿ ಸಾಂಸ್ಕೃತಿಕ ಪ್ರತಿಷ್ಠಾನದ ಪ್ರಧಾನ ಕಾರ್ಯದರ್ಶಿ ಯಾಕೂಬ್ ಖಾದರ್ ಗುಲ್ವಾಡಿ ಹೇಳಿದ್ದಾರೆ.

ಸಾಕ್ಷಿಮಲಿಕ್ - ಸತ್ಯವರ್ತ ಮದುವೆಯಾಗಿದ್ದು

ಹೊಸ ಬಾಳಿಗೆ ಅಡಿಯಿಟ್ಟ ಸಾಕ್ಷಿ ಮಲಿಕ್ - ಸತ್ಯವರ್ತ್

ನವದೆಹಲಿ: 2016 ರಿಯೊ ಒಲಿಂಪಿಕ್ಸ್ ಕುಸ್ತಿ ಪಂದ್ಯದಲ್ಲಿ ಕಂಚಿನ ಪದಕ ಗೆದ್ದ ಸಾಕ್ಷಿ ಮಲಿಕ್ ಮತ್ತು ಅಂತರರಾಷ್ಟ್ರೀಯ ಕುಸ್ತಿ ಪಟು ಸತ್ಯವರ್ತ್ ಕಾದಿಯಾನ್ ದಾಂಪತ್ಯ ಜೀವನಕ್ಕೆ ಕಾಲಿಟ್ಟಿದ್ದಾರೆ.

ರೋಹ್ಟಕ್‌ನಲ್ಲಿ ಭಾನುವಾರ ನಡೆದ ವಿವಾಹ ಮಹೋತ್ಸವದಲ್ಲಿ ಸಾಕ್ಷಿ ಅವರನ್ನು ಸತ್ಯವರ್ತ್‌ ವರಿಸಿದ್ದಾರೆ. ತಮಗಿಂತ ಎರಡು ವರ್ಷ ಕಿರಿಯರಾದ ಸತ್ಯವರ್ತ್‌ ಅವರನ್ನು ವಿವಾಹವಾಗುವುದಾಗಿ ಸಾಕ್ಷಿ ಕಳೆದ ವರ್ಷದ ಸೆಪ್ಟೆಂಬರ್‌ನಲ್ಲಿ ಘೋಷಿಸಿದ್ದರು.

    Time to get colored with Mehendi for the big day #excited pic.twitter.com/BjcBpIyrx3
    — Sakshi Malik (@SakshiMalik) April 1, 2017

ಸತ್ಯವರ್ತ್‌ 2010ರಲ್ಲಿ ನಡೆದ ಯೂತ್ ಒಲಿಂಪಿಕ್ಸ್‌ ನಲ್ಲಿ ಕಂಚು ಗೆದ್ದಿದ್ದಾರೆ. 2013ರ ವಿಶ್ವ ಯುವ ಕುಸ್ತಿ ಪಂದ್ಯದಲ್ಲಿ ಟರ್ಕಿಯ ಕುಸ್ತಿಪಟುವನ್ನು ಸೋಲಿಸಿ ಕಂಚು ಗೆದ್ದಿದ್ದಾರೆ. ಅಷ್ಟೇ ಇಲ್ಲದೆ 2014 ಏಷ್ಯನ್ ಕುಸ್ತಿ ಚಾಂಪಿಯನ್‍ಶಿಪ್, 2014 ಕಾಮನ್‍ವೆಲ್ತ್ ಗೇಮ್ಸ್, ಏಷ್ಯನ್ ಗೇಮ್ಸ್‌ನಲ್ಲಿ ಕಂಚಿನ ಪದಕಗಳನ್ನು ತಮ್ಮದಾಗಿಸಿಕೊಂಡಿದ್ದಾರೆ.

ಹರಿಯಾಣದ ರೋಹ್ಟಕ್‍ನವರೇ ಆಗಿರುವ ಸತ್ಯವರ್ತ್ ಮತ್ತು ಸಾಕ್ಷಿ ಮಲಿಕ್ ಕುಸ್ತಿ ತರಬೇತಿ ಕೇಂದ್ರದಲ್ಲಿ ಸಹಪಾಠಿಗಳಾಗಿದ್ದರು. ಒಲಿಂಪಿಕ್ಸ್ ಪಂದ್ಯದ ನಂತರ ಮದುವೆಯಾಗುವುದಾಗಿ ತೀರ್ಮಾನಿಸಿದ್ದರು.

ಸಾಕ್ಷಿ– ಸತ್ಯವರ್ತ್‌ ಅವರ ವಿವಾಹ ಸಮಾರಂಭದಲ್ಲಿ ಪ್ರಮುಖ ಕ್ರೀಡಾ ಪಟುಗಳು, ಆಪ್ತ ಸ್ನೇಹಿತರು ಹಾಗೂ ಕುಟುಂಬ ಸದಸ್ಯರು ಪಾಲ್ಗೊಂಡಿದ್ದರು.

ನಳಂದಾ ಮಾದರಿಯಲ್ಲಿ ವಿಕ್ರಮಶಿಲಾ ವಿವಿ

ನಳಂದಾ ಮಾದರಿಯಲ್ಲೇ ವಿಕ್ರಮಶಿಲಾ ವಿವಿ ಪುನಾರಂಭ: ಪ್ರಧಾನಿಯೊಂದಿಗೆ ಮಾತನಾಡುತ್ತೇನೆಂದ ರಾಷ್ಟ್ರಪತಿ

ಭಗಲ್ ಪುರ: ನಳದಂಬಾ ಮಾದರಿಯಲ್ಲೇ ವಿಶ್ವದ ಪುರಾತನ ವಿಶ್ವವಿದ್ಯಾನಿಲಯಗಳಲ್ಲಿ ಒಂದಾದ ವಿಕ್ರಮಶಿಲಾ ವಿಶ್ವವಿದ್ಯಾನಿಲಯವನ್ನೂ ಪುನಾರಂಭ ಮಾಡುವ ಬಗ್ಗೆ ಪ್ರಧಾನಿ ನರೇಂದ್ರ ಮೋದಿ ಅವರೊಂದಿಗೆ ಮಾತನಾಡುವುದಾಗಿ ರಾಷ್ಟ್ರಪತಿ ಪ್ರಣಬ್ ಮುಖರ್ಜಿ ಹೇಳಿದ್ದಾರೆ.

ವಿಕ್ರಮಶಿಲಾ ವಿಶ್ವವಿದ್ಯಾನಿಲಯವಿದ್ದ ಭಗಲ್ ಪುರಕ್ಕೆ ಭೇಟಿ ನೀಡಿ ಮಾತನಾಡಿರುವ ರಾಷ್ಟ್ರಪತಿ ಪ್ರಣಬ್ ಮುಖರ್ಜಿ ವಿಕ್ರಮಶಿಲಾ ವಿಶ್ವವಿದ್ಯಾನಿಲಯ ಅತ್ಯಂತ ಪುರಾತ, ವಿಶ್ವ ಪ್ರಸಿದ್ಧ ವಿಶ್ವವಿದ್ಯಾನಿಲಯವಾಗಿದ್ದು, ದೇಶಕ್ಕೆ ಮಾರ್ಗದರ್ಶನ ನೀಡುವುದಷ್ಟೇ ಅಲ್ಲದೇ ಸಂಶೋಧನೆಗೂ ಉತ್ತೇಜನಕಾರಿ ವಿಶ್ವವಿದ್ಯಾನಿಲಯವಾಗಿತ್ತು. ಅದನ್ನು ಪುನಾರಂಭ ಮಾಡುವುದಕ್ಕೆ ಪ್ರಧಾನಿ ನರೇಂದ್ರ ಮೋದಿ ಅವರೊಂದಿಗೆ ಮಾತನಾಡುತ್ತೇನೆ ಎಂದು ಹೇಳಿದ್ದಾರೆ.

ನಳಂದ, ತಕ್ಷಶಿಲಾ, ವಿಕ್ರಮಶಿಲಾದಂತಹ ಪುರಾತನ ವಿಶ್ವವಿದ್ಯಾನಿಲಯಗಳು ಸಂಶೋಧನೆಯಲ್ಲಿ ಪ್ರಮುಖ ಪಾತ್ರ ವಹಿಸಿದ್ದವು.
ಇಂತಹ ಪುರಾತನ ವಿಶ್ವವಿದ್ಯಾನಿಲಯಗಳೆಡೆಗೆ ಕಾಲೇಜು ದಿನಗಳಿಂದಲೂ ಆಕರ್ಷಿತನಾಗಿದ್ದು ವಿಕ್ರಮಶಿಲಾ ವಿಶ್ವವಿದ್ಯಾನಿಲಯದ ಪುನಾರಂಭಕ್ಕಾಗಿ ಜನರ ಉತ್ಸಾಹವನ್ನು ಕಂಡು ಅಪಾರ ಸಂತೋಷ ಉಂಟಾಗಿದೆ ಎಂದು ರಾಷ್ಟ್ರಪತಿ ಪ್ರಣಬ್ ಮುಖರ್ಜಿ ಹೇಳಿದ್ದಾರೆ. 

SASEC ಗೆ ಮಾಯಾನ್ಮಾರಗ ಸೇರ್ಪಡೆ

ಎಸ್‌ಎಎಸ್‌ಇಸಿ ಗೆ ಮಾಯನ್ಮಾರ್ ಹೊಸ ಸೇರ್ಪಡೆ: ಅರುಣ್ ಜೇಟ್ಲಿಯಿಂದ ಸ್ವಾಗತ

ನವದೆಹಲಿ: ದಕ್ಷಿಣ ಏಷ್ಯಾದ ಉಪ ಪ್ರಾಂತೀಯ ಆರ್ಥಿಕ ಸಹಕಾರ ಸಂಘಟನೆ(ಎಸ್ಎಎಸ್ಇಸಿ)ಗೆ ಮಾಯನ್ಮಾರ್ ಹೊಸ ಸದಸ್ಯ ರಾಷ್ಟ್ರವಾಗಿ ಸೇರ್ಪಡೆಯಾಗಿದ್ದು, ಕೇಂದ್ರ ಹಣಕಾಸು ಸಚಿವ ಅರುಣ್ ಜೇಟ್ಲಿ ಹೊಸ ಸದಸ್ಯ ರಾಷ್ಟ್ರವನ್ನು ಸ್ವಾಗತಿಸಿದ್ದಾರೆ.

ಎಸ್ಎಎಸ್ಇಸಿ ರಾಷ್ಟ್ರಗಳ ಹಣಕಾಸು ಸಚಿವರ ಸಭೆಯಲ್ಲಿ ಭಾಗವಹಿಸಿ ಮಾತನಾಡಿದ ಅರುಣ್ ಜೇಟ್ಲಿ, ಮಾಯನ್ಮಾರ್ ಸೇರ್ಪಡೆ ದಕ್ಷಿಣ ಏಷ್ಯಾವನ್ನು ಪೂರ್ವ ಏಷ್ಯಾ ಹಾಗೂ ಆಗ್ನೇಯ ಏಷ್ಯಾದೊಂದಿಗೆ ಬೆಸೆಯಲು ಸಹಕಾರಿ ಎಂದು ಅಭಿಪ್ರಾಯಪಟ್ಟಿದ್ದಾರೆ.

ಏಷ್ಯನ್ ಡೆವಲಪ್ ಮೆಂಟ್ ಬ್ಯಾಂಕ್ ದಕ್ಷಿಣ ಏಷ್ಯಾದ ಉಪ ಪ್ರಾಂತೀಯ ಆರ್ಥಿಕ ಸಹಕಾರದ ಭಾಗವಾಗಿದ್ದು, ಮಾಯನ್ಮಾರ್ ಸೇರ್ಪಡೆಯಿಂದ ಈಶಾನ್ಯ ಪ್ರದೇಶಕ್ಕೂ ಎಸ್ಎಎಸ್ಇಸಿ ವಿಸ್ತರಣೆಯಾಗಿದೆ. ಬಾಂಗ್ಲಾದೇಶ, ಭೂತಾನ್, ಭಾರತ, ಮಾಲ್ಡೀವ್ಸ್, ನೇಪಾಳ, ಶ್ರೀಲಂಕಾ ರಾಷ್ಟ್ರಗಳೊಂದಿಗೆ ಈಗ ಹೊಸದಾಗಿ ಮಾಯನ್ಮಾರ್ ಸೇರ್ಪಡೆಯಾಗಿದ್ದು, ಎಸ್ಎಎಸ್ಇಸಿ ಸದಸ್ಯ ರಾಷ್ಟ್ರಗಳ ಸಂಖ್ಯೆ 7 ಕ್ಕೆ ಏರಿಕೆಯಾಗಿದೆ.

ಸಾಮೂಹಿಕ ದೂರದೃಷ್ಟಿ ಉಪ ಪ್ರಾಂತೀಯ ಅಭಿವೃದ್ಧಿಗೆ ನೆರವಾಗಲಿದ್ದು, ಸುಧಾರಿತ ಸಂಪರ್ಕ, ಮೂಲಸೌಕರ್ಯ ಅಭಿವೃದ್ಧಿಗೆ ಸಹಕಾರಿಯಾಗಲಿದೆ ಎಂದು ಸಭೆಯಲ್ಲಿ ಭಾಗವಹಿಸಿದ್ದ ಅರುಣ್ ಜೇಟ್ಲಿ ವಿಶ್ವಾಸ ವ್ಯಕ್ತಪಡಿಸಿದ್ದಾರೆ. 

ಅರ್ಥಶಾಸ್ತ್ರಕ್ಕೆ ಸಂಭಂದಿಸಿದ ಪ್ರಶ್ನೋತ್ತರಗಳು

*🌕 ಅರ್ಥಶಾಸ್ತ್ರ 🌕*

1) "ಯುಟಿಲ್" ಎಂಬ ಪದವನ್ನು ತುಷ್ಟಿಗುಣದ ಅಳತೆಗಾಗಿ ಬಳಸಿದವರು ಯಾರು?
* ಪ್ರೊ.ಫೀಷರ್.

2) ಜನರ ಬಯಕೆಗಳನ್ನು ತೃಪ್ತಿಪಡಿಸಬಲ್ಲ ಚಟುವಟಿಕೆಗಳೇ —-----.
* ಸೇವೆಗಳು.

3) —--- ಒಂದು ಸರಕು ಅಥವಾ ಸೇವೆಯ ಮೌಲ್ಯವನ್ನು ಹಣದ ರೂಪದಲ್ಲಿ ಸೂಚಿಸುತ್ತದೆ.
* ಬೆಲೆ.

4) ಒಂದು ದೇಶ ಸರಕು ಮತ್ತು ಸೇವೆಗಳನ್ನು ವಿದೇಶಗಳಿಂದ ಖರೀದಿಸುವುದೇ —---.
* ಆಮದುಗಳು.

5) ದೇಶಿಯ ಸರಕು-ಸೇವೆಗಳನ್ನು ವಿದೇಶಗಳಿಗೆ ಮಾರಾಟ ಮಾಡುವುದೇ —------.
* ರಪ್ತುಗಳು.

6) ವಿದೇಶಿ ಹಣದೆದುರು ದೇಶದ ಹಣದ ಮೌಲ್ಯವನ್ನು ಉದ್ದೇಶಪೂರ್ವಕವಾಗಿ ಕಡಿಮೆ ಮಾಡುವುದನ್ನು —---- ಎನ್ನುವರು.
* ಅಪಮೌಲ್ಯ.

7) ಉತ್ಪನ್ನದ ಪ್ರತೀ ಘಟಕದ ವೆಚ್ಚವೇ —-----.
* ಸರಾಸರಿ ವೆಚ್ಚ.

8) ಭಾರತದ ಕೇಂದ್ರ ಬ್ಯಾಂಕ್ ಅಂದರೆ —------.
* ಭಾರತೀಯ ರಿಸರ್ವ್ ಬ್ಯಾಂಕ್.

9) "ಕೊಳ್ಳುವ ಶಕ್ತಿ ಸಮತೆಯ ಸಿದ್ದಾಂತ"ವನ್ನು ಅಭಿವೃದ್ಧಿಪಡಿಸಿದವರು ಯಾರು?
* ಗಸ್ಟೋ ಕ್ಯಾಸಲ್.

10) ಯಾವ ಹಣದ ನಿರ್ವಹಣೆಯನ್ನು ಯೂರೋಪಿನ ಕೇಂದ್ರ ಬ್ಯಾಂಕ್ ಮಾಡುತ್ತದೆ?
* ಯುರೋ.

11) ಅಮೇರಿಕಾದ ನಾಣ್ಯ ಯಾವುದು?
* ಡಾಲರ್.

12) ಜಪಾನಿನ ನಾಣ್ಯ ಯಾವುದು?
* ಯೆನ್.

13) ಸಂದಾಯ ಬಾಕಿಯಲ್ಲಿ ಎಷ್ಟು ಮುಖ್ಯ ಖಾತೆಗಳಿರುತ್ತವೆ?
* ಮೂರು.

14) ಇಬ್ಬರು ವ್ಯಕ್ತಿಗಳು ಅಥವಾ ಎರಡು ದೇಶಗಳ ನಡುವಿನ ಸರಕು ಮತ್ತು ಸೇವೆಗಳ ವಿನಿಮಯವೇ —-----.
* ವ್ಯಾಪಾರ.

15) ಜಗತ್ತಿನ ಯಾವುದೇ ದೇಶಗಳ ಅರ್ಥವ್ಯವಸ್ಥೆಯೊಂದಿಗೆ ಸಂಪರ್ಕವಿಲ್ಲದ ಅರ್ಥವ್ಯವಸ್ಥೆಯನ್ನು —---- ಎನ್ನುವರು?
* ಮುಚ್ಚಿದ ಅರ್ಥವ್ಯವಸ್ಥೆ.

16) ಮುಂಗಡ ಪತ್ರದಲ್ಲಿ ಸರ್ಕಾರದ ಕಂದಾಯ ವೆಚ್ಚ ಅದರ ಕಂದಾಯ ಸ್ವೀಕೃತಿಗಳಿಗಿಂತ ಅಧಿಕವಾಗಿದ್ದರೆ ಅದನ್ನು —--- ಎನ್ನುತ್ತೇವೆ?
* ಕಂದಾಯ ಕೊರತೆ.

17) ಜನರ ಆರ್ಥಿಕ ಮತ್ತು ಸಾಮಾಜಿಕ ಕಲ್ಯಾಣಕ್ಕಾಗಿ ಸರ್ಕಾರವು ಮಾಡುವ ವೆಚ್ಚವನ್ನು —------ ವೆಚ್ಚ ಎನ್ನುತ್ತೇವೆ?
* ಸಾರ್ವಜನಿಕ ವೆಚ್ಚ.

18) ಸರ್ಕಾರವು ಪ್ರಸ್ತುತ ಕಂದಾಯ ಸ್ವೀಕೃತಿಯಿಂದ ಮಾಡುವ ವೆಚ್ಚವನ್ನು —---- ಎನ್ನುತ್ತೇವೆ?
* ಕಂದಾಯ ವೆಚ್ಚ.

19) ಮೌಲ್ಯವರ್ಧಿತ ತೆರಿಗೆಯನ್ನು ಜಗತ್ತಿನಲ್ಲಿ ಮೊದಲ ಬಾರಿಗೆ ಪರಿಚಯಿಸಿದ ರಾಷ್ಟ್ರ ಯಾವುದು?
* ಫ್ರಾನ್ಸ್ (1954).

20) ಮುಂಗಡ ಪತ್ರವನ್ನು ಎಷ್ಟು ಪ್ರಕಾರಗಳಲ್ಲಿ ವರ್ಗಿಕರಿಸಬಹುದು?
* ಮೂರು.

21) ಬಜೆಟ್ ಎಂಬ ಆಂಗ್ಲ ಪದವನ್ನು —---- ಎಂಬ ಫ್ರೆಂಚ್ ಪದದಿಂದ ಪಡೆಯಲಾಗಿದೆ?
* ಬುಗಟ್.

22) ಗುಣಕ ಪರಿಕಲ್ಪನೆಯು ಆರ್ಥಿಕ ವಿಶ್ಲೇಷಣೆಗೆ ಯಾರು ನೀಡಿದ ಪ್ರಮುಖ ಕಾಣಿಕೆಯಾಗಿದೆ?
* ಕೇನ್ಸ್.

23) MEC ವಿವರಿಸಿರಿ?
* Marginal Efficiency of Capital.

24) ಭಾರತೀಯ ರಿಸರ್ವ್ ಬ್ಯಾಂಕ್ ವಾಣಿಜ್ಯ ಬ್ಯಾಂಕ್ ಗಳಿಗೆ ಒದಗಿಸುವ ಹಣಕಾಸು ಅಥವಾ ಸಾಲಗಳಿಗೆ ವಿಧಿಸುವ ಬಡ್ಡಿ ದರವೇ —---- ದರವಾಗಿದೆ?
* ಬ್ಯಾಂಕ್.

25) 2013 ರ ಅಕ್ಟೋಬರ್ 29 ರಂದು ಬ್ಯಾಂಕ್ ದರವು —--- ರಷ್ಟಿತ್ತು?
* ಶೇ.8.75 ರಷ್ಟಿತ್ತು.

26) ದೊಡ್ಡ ಪ್ರಮಾಣದ ಕೈಗಾರಿಕೆಗಳಿಗೆ ಹಣಕಾಸಿನ ಸಹಾಯ ಒದಗಿಸಲು 1964 ರಲ್ಲಿ —--- ನ್ನು ಸ್ಥಾಪಿಸಿದೆ?
* ರಾಷ್ಟ್ರೀಯ ಕೈಗಾರಿಕಾ ಸಾಲ ನಿಧಿಯನ್ನು.

27) ಭಾರತೀಯ ರಿಸರ್ವ್ ಬ್ಯಾಂಕ್ ಸರ್ಕಾರದ ಬ್ಯಾಂಕಾಗಿ, ಪ್ರತಿನಿಧಿಯಾಗಿ ಮತ್ತು ಸಲಹೆಗಾರನಾಗಿ ಕಾರ್ಯ ನಿರ್ವಹಿಸುವುದು —---— ಬ್ಯಾಂಕ್.
* ಸರಕಾರದ.

28) ಭಾರತೀಯ ರಿಸರ್ವ್ ಬ್ಯಾಂಕ್ ನ್ನು ರಾಷ್ಟ್ರೀಕರಣ ಮಾಡಿದ್ದು ಯಾವಾಗ?
* 1949, ಜನವರಿ 1 ರಂದು.

29) ಭಾರತೀಯ ರಿಸರ್ವ್ ಬ್ಯಾಂಕ್ ನ ಕೇಂದ್ರ ಕಚೇರಿ ಎಲ್ಲಿದೆ?
* ಮುಂಬೈನಲ್ಲಿದೆ.

30) —---- ದೇಶದ ಹಣಕಾಸಿನ ವ್ಯವಸ್ಥೆಯ ಉನ್ನತ ಸಂಸ್ಥೆಯಾಗಿರುತ್ತದೆ.
* ಕೇಂದ್ರ ಬ್ಯಾಂಕ್.

31) ಅಮೇರಿಕಾದ ಕೇಂದ್ರ ಬ್ಯಾಂಕ್ ಯಾವುದು?
* ಫೆಡರಲ್ ರಿಜರ್ವ್ ಸಿಸ್ಟಮ್.

32) ಇಂಗ್ಲೆಂಡ್ ನ ಕೇಂದ್ರ ಬ್ಯಾಂಕ್ ಯಾವುದು?
* ಬ್ಯಾಂಕ್ ಆಫ್ ಇಂಗ್ಲೆಂಡ್.

33) ಫ್ರಾನ್ಸ್ ನ ಕೇಂದ್ರ ಬ್ಯಾಂಕ್ ಯಾವುದು?
* ಬ್ಯಾಂಕ್ ಆಫ್ ಫ್ರಾನ್ಸ್.

34) ಸ್ವೀಡನ್ ನ ಕೇಂದ್ರ ಬ್ಯಾಂಕ್ ಯಾವುದು?
* ರಿಕ್ಸ್ ಬ್ಯಾಂಕ್.

35) ಭಾರತದ ಕೇಂದ್ರ ಬ್ಯಾಂಕ್ ಯಾವುದು?
* ರಿಸರ್ವ್ ಬ್ಯಾಂಕ್ ಆಫ್ ಇಂಡಿಯಾ.

36) ಎಟಿಎಮ್ ವಿವರಿಸಿರಿ?
* Automated Teller Machine.

37) ಭಾರತದ ವಾಣಿಜ್ಯ ಬ್ಯಾಂಕ್ ಗಳನ್ನು ಮುಖ್ಯವಾಗಿ ಎಷ್ಟು ಪ್ರಕಾರಗಳಲ್ಲಿ ವಿಂಗಡಿಸಲಾಗಿದೆ?
* ಎರಡು.

38) —— ಒಂದು ಹಣದ ವ್ಯವಹಾರ ನಡೆಸುವ ಸಂಸ್ಥೆಯಾಗಿದೆ.
* ಬ್ಯಾಂಕ್.

39) ಒಂದು ನಿರ್ದಿಷ್ಟ ಅವಧಿಯಲ್ಲಿ ರಾಷ್ಟ್ರದ ಜನರ ಬಳಿಯಿರುವ ನೋಟು ಮತ್ತು ನಾಣ್ಯಗಳ ಒಟ್ಟು ಸಂಗ್ರಹಕ್ಕೆ —---- ಎನ್ನುತ್ತೇವೆ?
* ಹಣದ ಪೊರೈಕೆ.

40) "ಹಣವು ಏನನ್ನು ಮಾಡುವುದೋ ಅದೇ ಹಣ" ಎಂದು ವ್ಯಾಖ್ಯಾನಿಸಿದವರು ಯಾರು?
* ಎಫ್.ಎ.ವಾಕರ್.

41) ಸರಕುಗಳನ್ನು ಸರಕುಗಳಿಗೆ ನೇರವಾಗಿ ವಿನಿಮಯ ಮಾಡಿಕೊಳ್ಳುವದನ್ನು —------ ಪದ್ಧತಿ ಎನ್ನುವರು?
* ಸಾಟಿ ವಿನಿಮಯ.

*🔴 Kannada GK 🔴*

ಸ್ಪರ್ಧಾತ್ಮಕ ಪರೀಕ್ಷಾ ಪುಸ್ತಕಗಳು ಒಂದೆ ಸೂರಿನಡಿಯಲ್ಲಿ

ಸ್ಪರ್ಧಾತ್ಮಕ ಪರೀಕ್ಷೆಗಳಿಗೆ ಉಚಿತ ಪುಸ್ತಕಗಳು: MODERN INDIA (ಆಧುನಿಕ ಭಾರತ) http://shashiexambooks.blogspot.com/2015/11/modern-india.html?spref=tw
ಸ್ಪರ್ಧಾತ್ಮಕ ಪರೀಕ್ಷೆಗಳಿಗೆ ಉಚಿತ ಪುಸ್ತಕಗಳು: GEOGRAPHY (ಭೂಗೋಳ) http://shashiexambooks.blogspot.com/2015/11/geography.html?spref=tw
ಸ್ಪರ್ಧಾತ್ಮಕ ಪರೀಕ್ಷೆಗಳಿಗೆ ಉಚಿತ ಪುಸ್ತಕಗಳು: PHYSICS (ಭೌತವಿಜ್ಞಾನ) http://shashiexambooks.blogspot.com/2015/11/physics.html?spref=tw
ಸ್ಪರ್ಧಾತ್ಮಕ ಪರೀಕ್ಷೆಗಳಿಗೆ ಉಚಿತ ಪುಸ್ತಕಗಳು: BIOLOGY (ಜೀವಶಾಸ್ತ್ರ) http://shashiexambooks.blogspot.com/2015/11/biology.html?spref=tw
ಸ್ಪರ್ಧಾತ್ಮಕ ಪರೀಕ್ಷೆಗಳಿಗೆ ಉಚಿತ ಪುಸ್ತಕಗಳು: CHEMISTRY (ರಸಾಯನ ಶಾಸ್ರ) http://shashiexambooks.blogspot.com/2015/11/chemistry.html?spref=tw
ಸ್ಪರ್ಧಾತ್ಮಕ ಪರೀಕ್ಷೆಗಳಿಗೆ ಉಚಿತ ಪುಸ್ತಕಗಳು: INDIAN ECONOMY http://shashiexambooks.blogspot.com/2015/11/indian-economy.html?spref=tw
ಸ್ಪರ್ಧಾತ್ಮಕ ಪರೀಕ್ಷೆಗಳಿಗೆ ಉಚಿತ ಪುಸ್ತಕಗಳು: Objective General English by R S Aggarwal PDF http://shashiexambooks.blogspot.com/2015/11/objective-english-grammar-r-s-aggarwal.html?spref=tw
ಸ್ಪರ್ಧಾತ್ಮಕ ಪರೀಕ್ಷೆಗಳಿಗೆ ಉಚಿತ ಪುಸ್ತಕಗಳು: BASIC ENGLISH GRAMMAR BOOK http://shashiexambooks.blogspot.com/2015/11/basic-english-grammar-book.html?spref=tw
ಸ್ಪರ್ಧಾತ್ಮಕ ಪರೀಕ್ಷೆಗಳಿಗೆ ಉಚಿತ ಪುಸ್ತಕಗಳು: Indian Economy for civil services examinations by ... http://shashiexambooks.blogspot.com/2015/11/indian-economy-for-civil-services.html?spref=tw
ಸ್ಪರ್ಧಾತ್ಮಕ ಪರೀಕ್ಷೆಗಳಿಗೆ ಉಚಿತ ಪುಸ್ತಕಗಳು: Indian Polity for Civil Services Examination by M ... http://shashiexambooks.blogspot.com/2015/11/indian-polity-for-civil-services.html?spref=tw
ಸ್ಪರ್ಧಾತ್ಮಕ ಪರೀಕ್ಷೆಗಳಿಗೆ ಉಚಿತ ಪುಸ್ತಕಗಳು: The Handy Geography Answer Book http://shashiexambooks.blogspot.com/2015/11/the-handy-geography-answer-book.html?spref=tw
ಸ್ಪರ್ಧಾತ್ಮಕ ಪರೀಕ್ಷೆಗಳಿಗೆ ಉಚಿತ ಪುಸ್ತಕಗಳು: World History for IAS http://shashiexambooks.blogspot.com/2015/11/world-history-for-ias.html?spref=tw

ಕನ್ನಡಿಗರ ಉತ್ತಮ ಭವಿಷ್ಯಕ್ಕಾಗಿ ಹಂಚಿಕೆ.

ಮಂಗಳವಾರ, ಏಪ್ರಿಲ್ 4, 2017

ಕರ್ನಾಟಕದ ಪ್ರಮುಖ ಯೋಜನೆಗಳು

*💐 ಕನ್ನಡ ಸಾಮಾನ್ಯ ಜ್ಞಾನ* 💐

*ಕರ್ನಾಟಕದ  ಪ್ರಮುಖ  ನೀರಾವರಿ ಯೋಜನೆಗಳು :-*

*♻   ಕೃಷ್ಣ ರಾಜಸಾಗರ :-*
ಈ ಜಲಾಶಯವನ್ನು ಮಂಡ್ಯ ಜಿಲ್ಲೆಯ, ಶೀರಂಗಪಟ್ಟಣ ತಾಲ್ಲೂಕಿನ ಕನ್ನಂಬಾಡಿ ಬಳಿ ಕಾವೇರಿ ನದಿಗೆ ಅಡ್ಡಲಾಗಿ ನಿರ್ಮಿಸಲಾಗಿದೆ.ಇದು ಮಂಡ್ಯ ಮತ್ತು ಮೈಸೂರು ಜಿಲ್ಲೆಯ ಸುಮಾರು 1.95ಲಕ್ಷ ಹೆಕ್ಟೇರ್ ಭೂಮಿಗೆ ನೀರು ಒದಗಿಸುತ್ತದೆ.

*♻ ಕೃಷ್ಣ ಮೇಲ್ದವಡೆ ಯೋಜನೆ :-*
ವಿಜಾಪುರ ಜಿಲ್ಲೆಯ ಆಲಮಟ್ಟಿ ಮತ್ತು ಯಾದಗಿರಿ ಜಿಲ್ಲೆಯ ನಾರಾಯಣಪುರದ ಕೃಷ್ಣಾನದಿಗೆ ಅಡ್ಡವಾಗಿ ನರ್ಮಿಸಲಾಗಿದೆ.ಇದು ವಿಜಾಪುರ, ಕಲಬುರ್ಗಿ, ಯಾದಗಿರಿ,ಬಾಗಲಕೋಟೆ,ಕೊಪ್ಪಳ ಮತ್ತು ರಾಯಚೂರು ಜಿಲ್ಲೆಗಳ 6.22ಲಕ್ಷ ಹೆಕ್ಟೇರ್ ಭೂಮಿಗೆ ನೀರು ಒದಗಿಸುತ್ತದೆ.

*♻ ಮಲಪ್ರಭಾ ಯೋಜನೆ :-*
ಬೆಳಗಾವಿ ಜಿಲ್ಲೆಯ, ಸವದತ್ತಿ ತಾಲ್ಲೂಕಿನ ಬಳಿ ಜಲಾಶಯವನ್ನು ನಿರ್ಮಿಸಲಾಗಿದೆ.ಈ ಯೋಜನೆಯಿಂದ 2,20,028 ಹೆಕ್ಟೇರ್ ಭೂಮಿಗೆ ನೀರು ಒದಗಿಸುತ್ತದೆ.

*♻ ಭದ್ರಾ ಜಲಾಶಯ :-*
ಈ ಜಲಾಶಯವನ್ನು ಚಿಕ್ಕಮಂಗಳೂರು ಜಿಲ್ಲೆಯ, ತರೀಕೆರೆ ತಾಲ್ಲೂಕಿನ ಲಕ್ಕವಳ್ಳಿ ಬಳಿ ನಿರ್ಮಿಸಲಾಗಿದೆ. ಶಿವಮೊಗ್ಗ, ಚಿತ್ರದುರ್ಗ, ಚಿಕ್ಕಮಗಳೂರು, ಮತ್ತು ಬಳ್ಳಾರಿ ಜಿಲ್ಲೆಗಳ 1,05,570 ಹೆಕ್ಟೇರ್ ಭೂಮಿಗೆ ನೀರಾವರಿ ಒದಗಿಸುತ್ತದೆ.

*♻ ತುಂಗಭದ್ರಾ ಜಲಾಶಯ :-*
ಈ ಜಲಾಶಯವನ್ನು ಬಳ್ಳಾರಿ ಜಿಲ್ಲೆಯ, ಹೊಸಪೇಟೆ ತಾಲ್ಲೂಕಿನ, ಮಲ್ಲಾಪುರದ ಬಳಿ ಕರ್ನಾಟಕ ಮತ್ತು ಆಂಧ್ರಪ್ರದೇಶ ರಾಜ್ಯಗಳ ಜಂಟಿ ಯೋಜನೆಯಾಗಿ ತುಂಗಭದ್ರಾನದಿಗೆ ಅಡ್ಡವಾಗಿ ನಿರ್ಮಿಸಲಾಗಿದೆ.ಈ ಯೋಜನೆಯು 1945. ರಲ್ಲಿ ಪ್ರಾರಂಭವಾಯಿತು. ಇದು ಬಳ್ಳಾರಿ ಮತ್ತು ರಾಯಚೂರು ಜಿಲ್ಲೆಗಳ ಸುಮಾರು 3,62,795 ಹೆಕ್ಟೇರ್ ಭೂಮಿಗೆ ನೀರು ಒದಗಿಸುತ್ತದೆ.

*♻ ತುಂಗಾ ಮೇಲ್ದಂಡೆ ಯೋಜನೆ :-*
ಇದು  ಈಗ ಶಿವಮೊಗ್ಗ ಬಳಿಯಿರುವ ತುಂಗಾ ಅಣೆಕಟ್ಟಿಗೆ ಹೊಸ ರೂಪ ನೀಡಿ ಶಿವಮೊಗ್ಗ, ಚಿತ್ರದುರ್ಗ, ಧಾರವಾಡ ಜಿಲ್ಲೆಗಳ ಸುಮಾರು 94,700 ಹೆಕ್ಟೇರ್ ಭೂಮಿಗೆ ನೀರೊದಗಿಸುವ ಗುರಿ ಹೊಂದಲಾಗಿದೆ.

*♻ ಹಾರಂಗಿ ಯೋಜನೆ :-*
ಕೊಡಗು ಜಿಲ್ಲೆಯ, ಸೋಮವಾರಪೇಟೆ ತಾಲ್ಲೂಕಿನ ಹುಡ್ಗೂರು ಗ್ರಾಮದ ಬಳಿ ಹಾರಂಗಿ ನದಿಗೆ ಅಡ್ಡಲಾಗಿ ಜಲಾಶಯ ನಿರ್ಮಿಸಿ ಕೊಡಗು,ಹಾಸನ ಮತ್ತು ಮೈಸೂರು ಜಿಲ್ಲೆಗಳ ಸುಮಾರು 53,591ಹೆಕ್ಟೇರ್ ಭೂಮಿಗೆ ನೀರೊದಗಿಸಲಾಗುತ್ತಿದೆ.

*♻ ಹೇಮಾವತಿ ಯೋಜನೆ :-*
ಹಾಸನ ಜಿಲ್ಲೆಯ ಗೊರೂರು ಬಳಿ ಹೇಮಾವತಿ ನದಿಗೆ ಅಡ್ಡವಾಗಿ ಜಲಾಶಯ ನಿರ್ಮಿಸಿ ಹಾಸನ,ಕೊಡಗು, ಮಂಡ್ಯ, ತುಮಕೂರು ಮತ್ತು ಮೈಸೂರು ಜಿಲ್ಲೆಗಳ ಸುಮಾರು 1,57,755 ಹೆಕ್ಟೇರ್ ಭೂಮಿಗೆ ನೀರು ಒದಗಿಸುತ್ತದೆ.

*♻  ಕಬಿನಿ(ಕಪಿಲ)  ಜಲಾಶಯ :-*
ಮೈಸೂರು ಜಿಲ್ಲೆ,ಹೆಚ್.ಡಿ.ಕೋಟೆ ತಾಲ್ಲೂಕಿನ ಬಿದರಹಳ್ಳಿ ಮತ್ತು ಬೀಚಹಳ್ಳಿಗಳ ಸಮೀಪ ಕಬಿನಿ ನದಿಗೆ ಅಡ್ಡಲಾಗಿ ನಿರ್ಮಿಸಲಾಗಿದೆ. ಇದು ಮೈಸೂರು ಮತ್ತು ಚಾಮರಾಜ ಜಿಲ್ಲೆಗಳ ಸುಮಾರು 87,900 ಹೆಕ್ಟೇರ್ ಭೂಮಿಗೆ ನೀರು ಒದಗಿಸುತ್ತದೆ.

*♻ ಬೆಣ್ಣೆತೊರ ಯೋಜನೆ :-*
ಕಲಬುರಗಿ  ಜಿಲ್ಲೆಯ,ಚಿತ್ತಾಪುರ ತಾಲ್ಲೂಕಿನ, ಹೆರೂರು ಗ್ರಾಮದ ಬಳಿ ಬೆಣ್ಣೆತೊರ ನದಿಗೆ ಅಡ್ಡವಾಗಿ ನಿರ್ಮಿಸಲಾಗಿದೆ. ಕಲಬುರಗಿ ಜಿಲ್ಲೆಯ 20,234 ಹೆಕ್ಟೇರ್ ಭೂಮಿಗೆ ನೀರು ಒದಗಿಸುತ್ತದೆ.

*♻ ಕಾರಂಜ ಯೋಜನೆ :-*
ಬೀದರ್ ಜಿಲ್ಲೆಯ, ನಾಲ್ಕು ತಾಲ್ಲೂಕಿನ ಬಳಿ ಕಾರಂಜ ನದಿಗೆ ಅಡ್ಡವಾಗಿ ನಿರ್ಮಿಸಲಾಗಿದೆ. ಈ ಯೋಜನೆಯು ಸುಮಾರು 35,614 ಹೆಕ್ಟೇರ್ ನೀರು ಒದಗಿಸುತ್ತದೆ.