ಭಾನುವಾರ, ಆಗಸ್ಟ್ 14, 2016

ಇ - ಆಡಳಿತ (ಭಾಗ ೩) ಮಾಹಿತಿ ಹಕ್ಕು ಕಾಯ್ದೆ ೨೦೦೫

ಮಾಹಿತಿ ಹಕ್ಕು ಕಾಯಿದೆ ೨೦೦೫

ಮಾಹಿತಿಗಾಗಿ ಕೋರಿಕೆ 
ಮಾಹಿತಿ ಹಕ್ಕು ಕಾಯಿದೆ- 2005ರಡಿಯಲ್ಲಿ ಯಾವುದೇ ಸಾರ್ವಜನಿಕ ಪ್ರಾಧಿಕಾರದಿಂದ ನೀವು ಮಾಹಿತಿಯನ್ನು ಕೇಳಲು (ಸರ್ಕಾರಿ ಸಂಸ್ಥೆ ಅಥವಾ ಸರ್ಕಾರಿ ಅನುದಾನಿತ ಸಂಸ್ಥೆ) ಸಾಧ್ಯ
೧ ನೇ ಮನವಿ ಅರ್ಜಿ 
ಮಾಹಿತಿ ಹಕ್ಕು ಕಾಯಿದೆ 2005ರಡಿಯಲ್ಲಿ 1ನೇ ಮನವಿ ಅರ್ಜಿಯನ್ನು ಸಲ್ಲಿಸಲು ಸೂಚನೆಗಳು
೨ ನೇ ಮೇಲ್ಮನಮಿ ಅರ್ಜಿ 
ಮಾಹಿತಿ ಹಕ್ಕು ಕಾಯಿದೆ 2005ರಡಿಯಲ್ಲಿ 2ನೇ ಮೇಲ್ಮನಮಿ ಅರ್ಜಿಯನ್ನು ಸಲ್ಲಿಸಲು ಸೂಚನೆಗಳು
೨೦೦೫ ಮಾಹಿತಿ ಹಾಕು ಕಾಯ್ದೆ 
ಕರ್ನಾಟಕ ಮಾಹಿತಿ ಆಯೋಗ- ವಾರ್ಷಿಕ ವರದಿ ೨೦೦೫-೨೦೦೬
ಪದೇ ಪದೇ ಕೇಳಲಾಗುವ ಪ್ರಶ್ನೆಗಳು 
ಮಾಹಿತಿಗಾಗಿ ಹೇಗೆ ಅರ್ಜಿ ಸಲ್ಲಿಸಬೇಕು ಎಂಬುದಕ್ಕೆ ಸಂಬಂಧಿಸಿ ಪದೇ ಪದೇ ಕೇಳಲಾಗುವ ಪ್ರಶ್ನೆಗಳು
ಮಾಹಿತಿ ಹಕ್ಕು ಕಾಯಿದೆ ಬಳಕೆ 
ಮಾಹಿತಿ ಹಕ್ಕು ಕಾಯಿದೆ ಬಳಸುವುದು ಹೇಗೆ ಕುರಿತು ಇಲ್ಲಿ ತಿಳಿಸಲಾಗಿದೆ


ಮಾಹಿತಿಗಾಗಿ ಕೋರಿಕೆ

  1. ಮಾಹಿತಿ ಹಕ್ಕು ಕಾಯಿದೆ- 2005ರಡಿಯಲ್ಲಿ ಯಾವುದೇ ಸಾರ್ವಜನಿಕ ಪ್ರಾಧಿಕಾರದಿಂದ ನೀವು ಮಾಹಿತಿಯನ್ನು ಕೇಳಲು (ಸರ್ಕಾರಿ ಸಂಸ್ಥೆ ಅಥವಾ ಸರ್ಕಾರಿ ಅನುದಾನಿತ ಸಂಸ್ಥೆ) ಸಾಧ್ಯ
  2. ಅರ್ಜಿಯನ್ನು ಇಂಗ್ಲಿಷ್, ಹಿಂದಿ ಅಥವಾ ಯಾವುದೇ ರಾಜ್ಯ ಭಾಷೆಗಳಲ್ಲಿ ಸಲ್ಲಿಸ ಬೇಕು.
  3. ಕೆಳಗಿನ ಮಾಹಿತಿಯನ್ನು ನಿಮ್ಮ ಅರ್ಜಿಯಲ್ಲಿ ಒದಗಿಸಿ:
    • ಸಹಾಯಕ ಸಾರ್ವಜನಿಕ ಮಾಹಿತಿ ಅಧಿಕಾರಿ (APIO)/ ಸಾರ್ವಜನಿಕ ಮಾಹಿತಿ ಅಧಿಕಾರಿಯ (PIO) ಹೆಸರು ಮತ್ತು ಕಚೇರಿಯ ವಿಳಾಸ
    • ವಿಷಯ: ಮಾಹಿತಿ ಹಕ್ಕು ಕಾಯಿದೆ- 2005ರ ಕಲಮು 6(1) ರಡಿಯಲ್ಲಿ ಅರ್ಜಿ
    • ಸಾರ್ವಜನಿಕ ಪ್ರಾಧಿಕಾರದಿಂದ ನಿಮಗೆ ಬೇಕಾದ ನಿರ್ದಿಷ್ಟ ಮಾಹಿತಿ
    • ಅರ್ಜಿದಾರನ ಹೆಸರು
    • ತಂದೆಯ/ಗಂಡನ ಹೆಸರು
    • ವರ್ಗ- ಪ.ಜಾ, /ಪವ/ಇ.ಹಿಂ
    • ಅರ್ಜಿಯ ಶುಲ್ಕ
    • ನೀವು ಬಡತನ ರೇಖೆಗಿಂತ ಕೆಳಗಿನ ಕುಟುಂಬಕ್ಕೆ ಸೇರುವಿರಾ - ಹೌದು/ಇಲ್ಲ,
    • ಅಂಚೆಯ ವಿಳಾಸದೊಂದಿಗೆ ಮೊಬೈಲ್ ಸಂಖ್ಯೆ ಮತ್ತು ಇ-ಮೇಲ್ ಐಡಿ (ಮೊಬೈಲ್ ಸಂಖ್ಯೆ ಮತ್ತು ಇ-ಮೇಲ್ ಐಡಿ ಕಡ್ಡಾಯವಲ್ಲ)
    • ದಿನಾಂಕ ಮತ್ತು ಸ್ಥಳ
    • ಅರ್ಜಿದಾರನ ಸಹಿ
    • ದಾಖಲೆ/ಅಡಕಗಳ ಪಟ್ಟಿ
  4. ಅರ್ಜಿ ಸಲಿಸುವ ಮುನ್ನ ಸಹಾಯಕ ಸಾರ್ವಜನಿಕ ಮಾಹಿತಿ ಅಧಿಕಾರಿ/ ಸಾರ್ವಜನಿಕ ಮಾಹಿತಿ ಅಧಿಕಾರಿಯ ಹೆಸರು, ನಿಗದಿತ ಶುಲ್ಕ ಮತ್ತು ಶುಲ್ಕ ಪಾವತಿಸಿದ ವಿಧಾನವನ್ನು ಪರೀಕ್ಷಿಸಿ
  5. ಮಾಹಿತಿ ಹಕ್ಕು ಕಾಯಿದೆ ಅಡಿಯಲ್ಲಿ ಮಾಹಿತಿಯನ್ನು ಪಡೆಯಲು ಅರ್ಜಿ ಶುಲ್ಕದ ನಿಬಂಧನೆ ಇದೆ, ಆದರೆ ಪ. ಜಾ/ ಪ. ವರ್ಗ ಮತ್ತು ಬಡತನ ರೇಖೆಗಿಂತ ಕೆಳಗೆ (BPL) ಇರುವ ಕುಟುಂಬಕ್ಕೆ ಸೇರಿದ ವ್ಯಕ್ತಿಯು ಈ ನಿಬಂಧನೆಯಿಂದ ಹೊರತಾಗಿದ್ದಾನೆ.
  6. ಶುಲ್ಕದಿಂದ ವಿನಾಯಿತಿ ಬಯಸುವವರು, ಪ.ಜಾ, /ಪ.ವ/ಬಿ.ಪಿ ಎಲ್ ದೃಢೀಕರಣ ಪತ್ರದ ಜೆರಾಕ್ಸ್ ಪ್ರತಿಯನ್ನು ಸಲ್ಲಿಸಬೇಕಾಗುತ್ತದೆ.
  7. ಅರ್ಜಿಯನ್ನು ನೇರವಾಗಿ ಅಥವಾ ಅಂಚೆಯ ಮೂಲಕ ಅಥವಾ ಇ-ಮೇಲ್ ಮೂಲಕ ಸಲ್ಲಿಸಬೇಕು. ನೀವು ಅಂಚೆ ಮೂಲಕ ಕಳುಸುವುದಾದರೆ ಯಾವಾಗಲೂ ನೋಂದಾಯಿತ ಅಂಚೆ ಸೇವೆಯನ್ನು ಮಾತ್ರ ಬಳಸಿ. ಯಾವಾಗಲೂ ಕೊರಿಯರ್ ಸೇವೆಯ ಮೂಲಕ ಕಳುಹಿಸುವುದನ್ನು ತಪ್ಪಿಸಿ.
  8. ನಿಮ್ಮ ಹೆಚ್ಚಿನ ಉಪಯೋಗಕ್ಕಾಗಿ ಅರ್ಜಿಯನ್ನು ಎರಡು (2) ಜೆರಾಕ್ಸ್ ಕಾಪಿಯನ್ನು ಮಾಡಿ (ಮುಖ್ಯ ಅರ್ಜಿ, ಶುಲ್ಕ ಪಾವತಿಯ ಪುರಾವೆ, ನೇರವಾಗಿ ಅಥವಾ ಅಂಚೆ ಮೂಲಕ ಅರ್ಜಿ ಸಲ್ಲಿಸಿದ ಪುರಾವೆ) ಮತ್ತು ಅವುಗಳನ್ನು ಸುರಕ್ಷಿತವಾಗಿ ಇಡಿ.
  9. ನೀವು ನಿಮ್ಮ ಅರ್ಜಿಯನ್ನು ನೇರವಾಗಿ ಸಲ್ಲಿಸುವುದಾದರೆ, ಕಚೇರಿಯಿಂದ ಸ್ಪಷ್ಟವಾಗಿ ದಿನಾಂಕ ಮತ್ತು ಸೀಲು ಹೊಂದಿದ ರಸೀದಿಯನ್ನು ಪಡೆಯಿರಿ. ಅರ್ಜಿಯನ್ನು ಅಂಚೆ ಮೂಲಕ ಕಳುಹಿಸಿದರೆ, ಆಗ ಅದನ್ನು ನೋಂದಾಯಿತ ಅಂಚೆ ಮೂಲಕ ಕಳುಹಿಸಿ ಮತ್ತು ಅಂಚೆ ರಸೀದಿಯನ್ನು ಸುರಕ್ಷಿತವಾಗಿ ಇಟ್ಟುಕೊಳ್ಳಿ.
  10. ಸಾರ್ವಜನಿಕ ಮಾಹಿತಿ ಅಧಿಕಾರಿಯಿಂದ ಅರ್ಜಿ ಸ್ವೀಕೃತವಾದ ದಿನಾಂಕದಿಂದ ಮಾಹಿತಿಯ ವಿತರಣೆಯ ಸಮಯವನ್ನು ಪರಿಗಣಿಸಲಾಗುತ್ತದೆ.

ನೀವು ಕೆಳಗಿನವುಗಳನ್ನು ಸಹ ನೆನಪಿನಲ್ಲಿಡ ಬೇಕು


ಕ್ರ.ಸಂ

ಸಂದರ್ಭn
ಮಾಹಿತಿಯನ್ನು ವರ್ಗಾಯಿಸಲು ಕಾಲಾವಧಿ
1ಸಹಜ ಪರಿಸ್ಥಿತಿಯಲ್ಲಿ ಮಾಹಿತಿಯ ಪೂರೈಕೆ30 ದಿನಗಳು
2ಒಬ್ಬ ವ್ಯಕ್ತಿಯ ಜೀವ ಮತ್ತು ಸ್ವಾತಂತ್ರ್ಯಕ್ಕೆ ಸಂಬಂಧ ಪಟ್ಟ ಮಾಹಿತಿಯ ಪೂರೈಕೆ48 ಘಂಟೆಗಳು
3ಸಹಾಯಕ ಸಾರ್ವಜನಿಕ ಮಾಹಿತಿ ಅಧಿಕಾರಿಯ (APIO) ಮೂಲಕ ಅರ್ಜಿಯನ್ನು ಪಡೆದಲ್ಲಿ ಮಾಹಿತಿಯ ಪೂರೈಕೆಮೇಲಿನ ಎರಡು ಸಂದರ್ಭದಲ್ಲಿ ಕಾಲಾವಧಿಗೆ 5 ದಿನಗಳನ್ನು ಸೇರಿಸಬೇಕು.

ಮಾಹಿತಿಗಾಗಿ ಕೋರಿಕೆ ಮನವಿ ಅರ್ಜಿ



  

ಕಾಮೆಂಟ್‌ಗಳಿಲ್ಲ:

ಕಾಮೆಂಟ್‌‌ ಪೋಸ್ಟ್‌ ಮಾಡಿ