ಸೋಮವಾರ, ಫೆಬ್ರವರಿ 13, 2017

ಸೌರವ್ಯೂಹದ ಗ್ರಹಗಳ ಮಾಹಿತಿ

*📚ಸೌರವ್ಯೂಹದಲ್ಲಿರುವ 8 ಗ್ರಹಗಳ ವಿವರಣಾತ್ಮಕ ಮಾಹಿತಿ 📚*

*೧. ಬುಧ ಗ್ರಹ :*
ಈ ಗ್ರಹ ಸೂರ್ಯನಿಗೆ ಅತ್ಯಂತ ಸಮೀಪದಲಿರುವಂತಹ ಗ್ರಹ.
ಇದು ಸೂರ್ಯನಿಂದ ೫೭.೬ ಮಿಲಿಯನ್ ಕಿ. ಮೀ. ದೂರದಲ್ಲಿರುತ್ತದೆ.
ಇದು ಸೌರಮಂಡಲದಲ್ಲಿ ಅತ್ಯಂತ ಸಣ್ಣದಾಗಿರುವಂತಹ ಗ್ರಹ.
ಈ ಗ್ರಹವು ಸೂರ್ಯನ ಸುತ್ತುವುದಕ್ಕೆ ತೆಗೆದುಕೊಳ್ಳುವ ಸಮಯ ೮೮ ದಿನಗಳು.
ಇದರ ಗಾತ್ರ ಬಂದು ಭೂಮಿಯ ಅರ್ಧದಷ್ಟು ಇರುತ್ತದೆ.
ಭಾರತದಲ್ಲಿ ಈ ಗ್ರಹಕ್ಕೆ ಚಂದ್ರನ ಮಗನಾದ ಬುಧನ ಹೆಸರನ್ನು ಇಡಲಾಗಿದೆ.
ಇದರಲ್ಲಿ ಯಾವುದೇ ಉಪಗ್ರಹಗಳು ಇಲ್ಲ.

*೨. ಶುಕ್ರ ಗ್ರಹ :*
ಇದು ಸೂರ್ಯನಿಂದ ಎರಡನೇ ಅತಿ ಸಮೀಪದಲ್ಲಿರುವಂತಹ ಗ್ರಹ.
ಇದು ಸೂರ್ಯನಿಂದ ೧೦೭.೫೨ ಮಿಲಿಯನ್ ಕಿ. ಮೀ. ದೂರದಲ್ಲಿರುತ್ತದೆ.
ಇದು ಭೂಮಿಯಿಂದ ೨.೬ ಕೋಟಿ ಮೈಲುಗಳಷ್ಟು ದೂರದಲ್ಲಿರುತ್ತದೆ.
ಇದು ಸೂರ್ಯನ ಒಂದು ಸುತ್ತುಹಾಕಲು ತೆಗೆದುಕೊಳ್ಳುವ ಅವಧಿ ೨೨೫ ದಿನಗಳು.
ಇದರ ಗಾತ್ರ ಬಂದು ಭೂಮಿಯಷ್ಟು.
ಇದರಲ್ಲಿ ಉಪಗ್ರಹ ಗಳು ಇಲ್ಲ.

*೩. ಭೂಮಿ :*
ಇದು ಸೂರ್ಯನಿಂದ ಮೂರನೇ ಅತಿ ಸಮೀಪದಲ್ಲಿರುವಂತಹ ಗ್ರಹ.
ಇದು ಸೌರಮಂಡಲದಲ್ಲಿ ೫ನೇ ಅತಿ ದೊಡ್ಡ ಗ್ರಹ.
ಸೂರ್ಯನಿಂದ ೧೪೮.೮ ಮಿಲಿಯನ್ ಕಿ.ಮೀ.
ಸೂರ್ಯನನ್ನು ಸುತ್ತು ಹಾಕಲು ಇದು ತೆಗೆದುಕೊಳ್ಳುವ ಅವಧಿ ೩೬೫ ದಿನಗಳು.
ಇದು ಸ್ವಯಂ ಪರಿಬ್ರಮಣೆಗೆ ತೆಗೆದುಕೊಳ್ಳುವ ಅವಧಿ ೨೩ ತಾಸು, ೫೬ ನಿಮಿಷ, ೪.೦೫ ಸೆಕೆಂಡು. ಇದರಲ್ಲಿ ಉಪಗ್ರಹ ಗಳು.
ಇದರ ಉಪಗ್ರಹಗಳು – 01

*೪. ಮಂಗಳ ಗ್ರಹ :*
ಸೂರ್ಯನ ಗ್ರಹಮಂಡಲದಲ್ಲಿ ಇದು ನಾಲ್ಕನೇ ಸ್ಥಾನವನ್ನು ಹೊಂದಿದೆ.
ಇದರ ಗಾತ್ರ ಬಂದು ಭೂಮಿಯ ಅರ್ಧದಷ್ಟು ಇದೆ.
ಇದು ಸೂರ್ಯನಿಂದ ೨೨೫.೬ ಮಿಲಿಯನ್ ಕಿ.ಮೀ. ದೂರದಲ್ಲಿದೆ.
ಇದು ಸೂರ್ಯನನ್ನು ಸುತ್ತು ಹಾಕಲು ತೆಗೆದುಕೊಳ್ಳುವ ಅವಧಿ ೬೮೭ ದಿನಗಳು.
ಇದು ಭೂಮಿಯಿಂದ ೩.೫ ಕೋಟಿ ಮೈಲು ದೂರದಲ್ಲಿರುತ್ತದೆ.
ಇಲ್ಲಿನ ವಾತಾವರಣ ಬಂದು ಆಮ್ಲಜನಕ ಸಾಂಧ್ರತೆ ಕಡಿಮೆ, ನೀರಿನ ಅಂಶ ಕೂಡ ಅಲ್ಪ, ಧ್ರುವ ಪ್ರದೇಶಗಳಲ್ಲಿ ಮಂಜುಗಡ್ಡೆಯ ಹೊಂದಿದೆ.
ಇದರ ಉಪಗ್ರಹಗಳು – 02.

*೫. ಗುರು ಗ್ರಹ :*
ಇದು ಸೂರ್ಯನಿಂದ ೫ನೇ ಗ್ರಹ ಮತ್ತು ಸೌರ ಮಂಡಲದಲ್ಲೇ ಅತಿ ದೊಡ್ಡ ಗ್ರಹ ಎನ್ನಲಾಗಿದೆ.
ಇದು ಸೂರ್ಯನಿಂದ ೭೭೨.೮ ಮಿಲಿಯನ್ ಕಿ. ಮೀ. ದೂರದಲ್ಲಿದೆ.
ಇದು ಸೂರ್ಯನನ್ನು ಸುತ್ತು ಹಾಕಲು ತೆಗೆದುಕೊಳ್ಳುವ ಅವಧಿ ೧೧.೯ ವರ್ಷಗಳಷ್ಟು.
ಇದು ಭೂಮಿಯಿಂದ ೩೬.೯ ಕೋಟಿ ಮೈಲುಗಳಷ್ಟು ದೂರದಲ್ಲಿದೆ.
ಇದರ ಗಾತ್ರ ಬಂದು ಭೂಮಿಯ ೧.೩೦೦ ರಷ್ಟು.
ಇದರ ಉಪಗ್ರಹಗಳು – 16.

*೬. ಶನಿ ಗ್ರಹ :*
ಇದು ಸೂರ್ಯನಿಂದ ೧೪೧೭.೬ ಮಿಲಿಯನ್ ಕಿ.ಮೀ. ದೂರದಲ್ಲಿರುತ್ತದೆ.
ಇದು ಸೂರ್ಯನ ಒಂದು ಸುತ್ತುಹಾಕಲು ತೆಗೆದುಕೊಳ್ಳುವ ಅವಧಿ ೨೯.೫ ವರ್ಷಗಳು.
ಇದು ಭೂಮಿಯಿಂದ ೭೪.೪ ಕೋಟಿ ಮೈಲು ಅಷ್ಟು ದೂರದಲ್ಲಿರುತ್ತದೆ.
ಇಲ್ಲಿನ ವಾತಾವರಣವು ದಟ್ಟ ವಾಯುಮಂಡಲದಿಂದ ಕೂಡಿದೆ., ಅಮೋನಿಯ, ಮೀಥೇನ್, ಜಲಜನಕ, ಹಿರಿಯಂ, ಅನಿಲಗಳಿವೆ.
ಇದರ ಉಪಗ್ರಹಗಳು – 20 ಅಥವಾ ಹೆಚ್ಚು.

*೭. ಯುರೇನಸ್ ಗ್ರಹ :*
ಇದು ಸೂರ್ಯನಿಂದ ಏಳನೇ ಗ್ರಹ ಎನ್ನಲಾಗುತ್ತದೆ.
ಇದು ಸೂರ್ಯನಿಂದ ೨,೮೫೨.೩ ಮಿಲಿಯನ್ ಕಿ.ಮೀ. ನಷ್ಟು ದೂರದಲ್ಲಿರುತ್ತದೆ.
ಇದು ಸೂರ್ಯನನ್ನು ಒಂದು ಸುತ್ತು ಹಾಕಲು ತೆಗೆದುಕೊಳ್ಳುವ ಅವಧಿ ೪೮ ವರ್ಷಗಳು.
ಇದರ ಉಪಗ್ರಹಗಳು – 15

*೮. ನೆಪ್ಚೂನ್ ಗ್ರಹ :*
ಇದು ಸೌರಮಂಡಲದ ಎಂಟನೆಯ ಗ್ರಹ ಎನ್ನಲಾಗುತದೆ.
ಇದು ಸೂರ್ಯನಿಂದ ೪೪೯೭ ಮಿಲಿಯನ್ ಕಿ.ಮೀ. ರಷ್ಟು ದೂರದಲ್ಲಿರುತ್ತದೆ.
ಇದು ಸೂರ್ಯನನ್ನು ಒಂದು ಸುತ್ತು ಹಾಕಲು ತೆಗೆದುಕೊಳ್ಳುವ ಅವಧಿ ೧೬೫ ದಿನಗಳು ಮಾತ್ರ.
ಇದರ ಉಪಗ್ರಹಗಳು – 08.

*🌹ಧನ್ಯವಾದಗಳೊಂದಿಗೆ🌹*
         *ರವಿ ಕೆರೆಗೊಂಡ*

7 ಕಾಮೆಂಟ್‌ಗಳು:

  1. ನನ್ನ ಹೆಸರು ಗಣೇಶ್ ಎಂದು, ಬಾಹ್ಯಾಕಾಶ ವಿಜ್ಞಾನ ಕ್ಕೆ ಸಂಬಂಧಿಸಿದ ಹಲವು ಮಾಹಿತಿಗಳು ನನಗೆ ಸಿಗುತ್ತಿವೆ , ನಾನು ವಿಜ್ಞಾನಿಯಲ್ಲ ಧ್ಯಾನದ ಮೂಲಕ ನನಗೆ ವಿಚಿತ್ರಮಾಹಿತಿ ದೊರೆಯುತ್ತಿವೆ , ಅದು ಸತ್ಯ ವೆಂದುಸಾಭೀತುಪಡಿಸಲು ನನಗೆ ಯಾವ ಮಾರ್ಗವೂ ಕಾಣುತ್ತಿಲ್ಲ, ಸೂರ್ಯನ ಸುತ್ತ ಮೊನ್ನೆ ಮೊನ್ನೆ ಯಷ್ಟೆ ಅಮೇರಿಕಾ ದಲ್ಲಿ ಒಂದು ಪುಟ್ಟಸೂರ್ಯ ಸುತ್ತಿದ್ದು ನಾವು ಕಂಡಿದ್ದೇವೆ ಅದು ಅಸ್ತಿತ್ವಕ್ಕೆ ಸಂಭದಿಸಿದಂತೆ ಉಪಸೂರ್ಯ ಎಂದು ಮಾಹಿತಿ ಬಂದಿದೆ , ಅದರ ಸುತ್ತ ಹಲವು ಗ್ರಹಗಳು ಹುಟ್ಟಿವೆ , ಹಾಗೆ ಈ ಎಲ್ಲಗ್ರಹಗಳಲ್ಲಿ ಹಲವು ಗ್ರಹದಲ್ಲಿ ಮನುಷ್ಯ ವಾಸಿಸಲು ಯೋಗ್ಯವಾದ ಕೆಲ ಗ್ರಹಗಳು ಉದ್ಬವವಾಗುತ್ತಿವೆ ಎಂದು ಮಾಹಿತಿ ದೊರೆತಿದೆ , ಅದಷ್ಟೆ ಅಲ್ಲ ಮುಂದಿನ ಕೇವಲ ೯೦೦೦ ವರ್ಷಗಳ ನಂತರ ಮನುಷ್ಯ ಭೂಮಿಯಿಂದ ಮಂಗಳಗ್ರಹಕ್ಕೆ , ನಂತರ ಗುರುಗ್ರಹಕ್ಕೆ , ಹೀಗೆ ಎಲ್ಲ ಗ್ರಹದಲ್ಲೂ ಜೀವಿಸಬಲ್ಲ ಎಂಬ ಮಾಹಿತಿ ದೊರೆತಿದೆ , ಆದರೆ ನೆಪ್ಚೂನ್ ಮತ್ತು ಬುಧ ಗ್ರಹವನ್ನು ಬಿಟ್ಟು, ಶುಕ್ರ ಗ್ರಹ ದಲ್ಲಿ ವಾಸಮಾಡಲಾರ , ಆದರೆ ನಿರಂತರ ಸಂಪರ್ಕದಲ್ಲಿ ಇರುತ್ತಾನೆ ಎಂದು, ಇದು ಸತ್ಯ ಎಂದು ನನ್ನ ಅಭಿಪ್ರಾಯ, ಆದರೆ ನಾನು ಸಾಬೀತುಪಡಿಸಲು ಯಾವ ಮಾರ್ಗವೂ ನನ್ನಲ್ಲಿಲ್ಲ,,

    ಪ್ರತ್ಯುತ್ತರಅಳಿಸಿ