ಸೋಮವಾರ, ಫೆಬ್ರವರಿ 13, 2017

ಕರ್ನಾಟಕದ ಕೆಲವು ಮಾಹಿತಿಗಳು

ಕರ್ನಾಟಕದ ಕೆಲವು ಮಾಹಿತಿಗಳು.
       🌻ರವಿ,ಕೆರೆಗೊಂಡ🌻
💢ಹಲ್ಮಿಡಿ ಶಾಸನ (ಕ್ರಿ.ಶ 450) ಕನ್ನಡದ ಅತ್ಯಂತ ಹಳೆಯ ಶಾಸನವಾಗಿದೆ.
💢ಚಾಮುಂಡಿ ಬೆಟ್ಟದ ನಂದಿ ವಿಗ್ರಹ ಕರ್ನಾಟಕದಲ್ಲಿನ ಅತಿ ಎತ್ತರದ ನಂದಿ ವಿಗ್ರಹವಾಗಿದೆ.
💢ದಕ್ಷಿಣ ಕನ್ನಡ ಜಿಲ್ಲೆ ಸಂಪೂರ್ಣ ಸಾಕ್ಷರತೆ ಸಾಧಿಸಿದ ಕರ್ನಾಟಕದ ಮೊದಲ ಜಿಲ್ಲೆಯಾಗಿದೆ.
💢ಶ್ರೀ ಕಂಠೇಶ್ವರ ದೇವಸ್ಥಾನ (ನಂಜನಗೂಡು) ಕರ್ನಾಟಕದ ಅತಿ ದೊಡ್ಡ ದೇವಾಲಯವಾಗಿದೆ.
💢ಕನ್ನಂಬಾಡಿ (1932) ಕರ್ನಾಟಕದ ಮೊದಲನೇ ಪ್ರಮುಖ ಅಣೆಕಟ್ಟಾಗಿದೆ.
💢ಸೂಪ (101 ಮೀಟರ್) ಇದು ಉತ್ತರ ಕನ್ನಡ ಜಿಲ್ಲೆಯಲ್ಲಿದೆ.
💢ಬೆಂಗಳೂರು ಭಾರತದ ಇಲೆಕ್ಟ್ರಾನಿಕ್ ರಾಜಧಾನಿಯಾಗಿದೆ.
💢ಕರ್ನಾಟಕದ ಏಕೈಕ ಭೂಗರ್ಭ ಜಲವಿದ್ಯುದಾಗರ ವರಾಹಿಯಲ್ಲಿದೆ. ವರಾಹಿ ಉಡುಪಿ ಜಿಲ್ಲೆಯಲ್ಲಿದೆ.
💢ಭಾರತದ ಮೊದಲನೆಯ ಫೆರೊ ಮ್ಯಾಂಗನೀಸ್ ಕಾರ್ಖಾನೆ ದಾಂಡೇಲಿಯಲ್ಲಿದೆ.
💢ಅಕ್ಕಮಹಾದೇವಿ ಕನ್ನಡದ ಮೊದಲ ಕವಯಿತ್ರಿ.
💢ಸಂತ ಶಿಶುನಾಳ ಷರೀಫ್ ಕನ್ನಡದ ಪ್ರಥಮ ಮಹಮದೀಯ ಕವಿ.
💢ಮಂಡ್ಯ ಜಿಲ್ಲೆಯು ಅತಿ ಹೆಚ್ಚು ಕನ್ನಡ ಮಾತನಾಡುವವರ ಜಿಲ್ಲೆಯಾಗಿದೆ.
💢ಶ್ರೀ ಜಯಚಾಮರಾಜೇಂದ್ರ ಪಾಲಿಟೆಕ್ನಿಕ್ ಇನ್ಸ್ ಟಿಟ್ಯೂಟ್, ಬೆಂಗಳೂರು ಇದು ದಕ್ಷಿಣ ಏಷ್ಯಾದ ಮೊದಲ ಪಾಲಿಟೆಕ್ನಿಕ್.
💢ಮಯೂರ ವರ್ಮ - ಕದಂಬರು ಅಚ್ಚಗನ್ನಡದ ಮೊದಲ ಕರ್ನಾಟಕ ದೊರೆ.
💢ಕವಿರಾಜ ಮಾರ್ಗ – ಲಕ್ಷ್ಮಣ ಗ್ರಂಥ, ಕ್ರಿ.ಶ. 9ನೇ ಶತಮಾನದ ಕೃತಿಯಾಗಿದ್ದು ಕನ್ನಡದ ಮೊದಲ ಕೃತಿಯಾಗಿದೆ.
💢ಪಂಪ ಕನ್ನಡದ ಆದಿ ಕವಿ.
💢ದಕ್ಷಿಣ ಕನ್ನಡ ಜಿಲ್ಲೆಯು ಅತಿ ಕಡಿಮೆ ಸಂಖ್ಯೆಯಲ್ಲಿ ಕನ್ನಡ ಮಾತೃಭಾಷೆಯಾಗಿ ಮಾತನಾಡುವವರು
💢ಕನ್ನಡದ ಮೊದಲ ವಿಜ್ಞಾನ ಪುಸ್ತಕ ಬಡ್ಡಿಯ ಪಟ್ಟಿಗಳು (1958) ಮಂಗಳೂರು (ಪುಟಗಳು 36).
💢ರಣಧೀರ ಕಂಠೀರವ ಕನ್ನಡದ ಮೊದಲ ಐತಿಹಾಸಿಕ ಚಿತ್ರವಾಗಿದೆ.
💢ಕರ್ನಾಟಕ ರಾಜ್ಯ ವಿಜ್ಞಾನ ಪರಿಷತ್ತು ವಿಜ್ಞಾನವನ್ನು ಜನಪ್ರಿಯಗೊಳಿಸುವ ಕೆಲಸಕ್ಕಾಗಿ ಮೊಟ್ಟಮೊದಲ ರಾಷ್ಟ್ರೀಯ ಪುರಸ್ಕಾರ ಪಡೆದ ಸಂಸ್ಥೆಯಾಗಿದೆ.
💢ಸರ್ ಎಂ. ವಿಶ್ವೇಶ್ವರಯ್ಯ ಮತ್ತು ಸಿ.ವಿ. ರಾಮನ್ ಮತ್ತು ಸಿ,ಎನ್,ಆರ್,ರಾವ್ ರವರು ಭಾರತ ರತ್ನ ಗಳಿಸಿರುವ ಮೂವರು ಕನ್ನಡಿಗರಾಗಿದ್ದಾರೆ.
💢ಕರುಣೆಯೇ ಕುಟುಂಬದ ಕಣ್ಣು (ಕೃಷ್ಣಮೂರ್ತಿ ಪುರಾಣಿಕರ “ಧರ್ಮದೇವತೆ” ಕಾದಂಬರಿ ಆಧಾರಿತ) ಕನ್ನಡ ಕಾದಂಬರಿ ಆಧಾರಿತ ಪ್ರಥಮ ಕನ್ನಡ ಚಿತ್ರ ಇದಾಗಿದೆ.
💢ಸಿಂಗರಾರ್ಯಾರ ಮಿತ್ರ ಗೋವಿಂದ ಕನ್ನಡ ಮೊದಲ ನಾಟಕ ಇದಾಗಿದೆ.
💢ಅಮರಶಿಲ್ಪಿ ಜಕಣಾಚಾರಿ ಕನ್ನಡದ ಮೊದಲ ವರ್ಣಚಿತ್ರ ಇದಾಗಿದೆ.
💢ದಾದಾ ಸಾಹೇಬ್ ಫಾಲ್ಕೆ ಪ್ರಶಸ್ತಿ ಪಡೆದದ್ ಮೊದಲ ಕನ್ನಡ ನಟ ಡಾII ರಾಜ್ ಕುಮಾರ
💢ಸಂಸಾರ ನೌಕೆ ದಕ್ಷಿಣ ಭಾರತದ ಮೊದಲನೇ ಸಾಮಾಜಿಕ ಚಿತ್ರ ಇದಾಗಿದೆ.
💢ಇಂದಿರಾಬಾಯಿ(ಗುಲ್ವಾಡಿ ವೆಂಕಟರಾವ್ ವಿರಚಿತ) ಕನ್ನಡದ ಮೊದಲ ಕಾದಂಬರಿ ಇದಾಗಿದೆ.
💢ವಡ್ಡಾರಾಧನೆ ಕನ್ನಡದ ಮೊದಲ ಗದ್ಯಬರಹ ಇದಾಗಿದೆ.
💢ಕೆ.ವಿ.ಸುಬ್ಬಣ್ಣ ಮ್ಯಾಗ್ಸೆಸೆ ಪ್ರಶಸ್ತಿ ಪಡೆದ ಕನ್ನಡ ರಂಗಭೂಮಿ ನಟ.
💢ವಿ. ಶಾಂತಾರಾಂ ಫಾಲ್ಕೆ ಪ್ರಶಸ್ತಿ ಪಡೆದ ಮೊದಲ ಕನ್ನಡಿಗ.
💢ಜಿ.ವಿ. ಐಯ್ಯರ್ (ಕನ್ನಡ ಚಲನಚಿತ್ರ ನಿರ್ದೇಶಕರು) ಭಾರತದಲ್ಲಿ ಪ್ರಪ್ರಥಮ ಬಾರಿಗೆ ಸಂಸ್ಕೃತದಲ್ಲಿ ಚಲನಚಿತ್ರ ತಯಾರಿಸಿದವರು.
💢ಡಾII ಶಿವಸುಬ್ರಹ್ಮಣ್ಯಂ ಅಮೆರಿಕಾದ ರಾಷ್ಟ್ರಾಧ್ಯಕ್ಷರ ಪದಕ ಪಡೆದ ವಿಜ್ಞಾನಿ ಕನ್ನಡಿಗ.
💢ಬೆಂಗಳೂರಿನ ಸಿ. ರಾಜಗೋಪಾಲ್ ಅಮೆರಿಕಾದ ಛಾಯಾಚಿತ್ರ ಸೊಸೈಟಿಯ ಗೌರವ ಫೆಲೋಷಿಪ್ ಪಡೆದ ಮೊದಲ ಪ್ರತಿಭಾವಂತರು ಇವರಾಗಿದ್ದಾರೆ.
💢ಕನ್ನಡ ಸಾಹಿತ್ಯ ಸಮ್ಮೇಳನವೊಂದರ ಅಧ್ಯಕ್ಷ ಸ್ಥಾನಕ್ಕೆ ಆಯ್ಕೆಯಾದ ಮೊದಲ ಕನ್ನಡತಿ ಜಯದೇವಿತಾಯಿ ಲಿಗಾಡೆ (1974 ಮಂಡ್ಯ)
💢ಹುಣುಸೂರು ಕೃಷ್ಣಮೂರ್ತಿ ಪುಟ್ಟಣ್ಣ ಕಣಗಾಲ್ ಪ್ರಶಸ್ತಿ ಪಡೆದುಕೊಂಡ ಮೊದಲ ನಿರ್ದೇಶಕ.
💢ಕುವೆಂಪು, ಗೋವಿಂದ ಪೈ, ಜಿ. ಎಸ್ ಶಿವರುದ್ರಪ್ಪ ಇವರು ಕನ್ನಡದ ರಾಷ್ಟ್ರಕವಿಗಳು.
💢ಗಿರೀಶ್ ಕಾರ್ನಾಡ್ ಕಮಲಾದೇವಿ ಚಟ್ಟೋಪಾಧ್ಯಾಯ ಪ್ರಶಸ್ತಿ ಪಡೆದ ಪ್ರಥಮ ಕನ್ನಡಿಗ.
💢ಡಾII ಎಂ. ಗೋಪಾಲ ಕೃಷ್ಣ ಅಡಿಗ ಕಬೀರ್ ಸಮ್ಮಾನ್ ಪ್ರಶಸ್ತಿಯನ್ನು ಪಡೆದ ಮೊದಲ ಕನ್ನಡಿಗ.
💢ಕರ್ನಾಟಕ ರತ್ನ ಪ್ರಶಸ್ತಿ ಪಡೆದ ಮೊದಲ ಕನ್ನಡಿಗ ಡಾII ಕುವೆಂಪು.
💢ಮಂಜೇಶ್ವರ ಗೋವಿಂದ ಪೈ ಕನ್ನಡದ ಮೊದಲ ರಾಷ್ಟ್ರಕವಿ.
💢ಕುವೆಂಪು ಜ್ಞಾನಪೀಠ ಪ್ರಶಸ್ತಿ ಪಡೆದ ಮೊದಲಿಗರು.
💢ಕುವೆಂಪುರವರು ಕರ್ನಾಟಕದ ನಾಡಗೀತೆ – “ಜಯಭಾರತ ಜನನಿಯ ತನುಜಾತೆ ಜಯಹೇ ಕರ್ನಾಟಕ ಮಾತೆ” ರಚಿಸಿದವರು.
💢ಕರ್ನಾಟಕದ ಮೊದಲ ಬ್ಯಾಂಕ್ ಚಿತ್ರದುರ್ಗದ ಬ್ಯಾಂಕ್ (1870)ಮಲ್ಲಿಕಾರ್ಜುನ ಮನ್ಸೂರ್ ಕಾಳಿದಾಸ ಸಮ್ಮಾನ್ ಪ್ರಶಸ್ತಿ ಮೊದಲ ಬಾರಿಗೆ ಪಡೆದ ಸಂಗೀತ ಕಲಾವಿದ.
💢ಊರ್ವಶಿ ಪ್ರಶಸ್ತಿ ಪಡೆದ ಕನ್ನಡದ ಏಕಮಾತ್ರ ನಟಿ ನಂದಿನಿ ಭಕ್ತವತ್ಸಲ (ಚಿತ್ರ: ಕಾಡು).
💢ಪಂಪ ಪ್ರಶಸ್ತಿ ಪಡೆದ ಮೊದಲ ಕವಿ ಕುವೆಂಪು.
💢ಕನಕ ಪುರಂದರ ಪ್ರಶಸ್ತಿ ಪಡೆದ ಮೊದಲ ಕನ್ನಡಿಗ ತಿಟ್ಟೆ ಕೃಷ್ಣಯ್ಯಂಗಾರ್.
💢ಜಮ್ನಾಲಾಲ್ ಬಜಾಜ್ ಪ್ರಶಸ್ತಿ ಪಡೆದ ಪ್ರಥಮ ಕನ್ನಡಿಗ ತಗಡೂರು ರಾಮಚಂದ್ರರಾವ್ಪುಷ್ಪಮಾಲರವರು ಟೆರ್ರಾಕೋಟ (ಮಟ್ಟಿನ ಶಿಲ್ಪ)ಕಲಾಪ್ರಕಾರಕ್ಕಾಗಿ ಅಂತರರಾಷ್ಟ್ರೀಯ ಪ್ರಶಸ್ತಿ ಪಡೆದ ಕರ್ನಾಟಕದ ಪ್ರಥಮ ಕಲಾವಿದರು.
💢ಮಂಗಳೂರು ಸಮಾಚಾರ ಕರ್ನಾಟಕದ ಮೊದಲ ಪತ್ರಿಕೆ.
💢ಸ್ವಪ್ನ ಬುಕ್ ಸ್ಟಾಲ್, ಬೆಂಗಳೂರು. ಇದು ಕರ್ನಾಟಕದ ದೊಡ್ಡ ಪುಸ್ತಕದ ಮಳಿಗೆ.

ಕಾಮೆಂಟ್‌ಗಳಿಲ್ಲ:

ಕಾಮೆಂಟ್‌‌ ಪೋಸ್ಟ್‌ ಮಾಡಿ