ಗುರುವಾರ, ನವೆಂಬರ್ 18, 2021

ಭಾರತದಲ್ಲಿರುವ ಈ ರೈಲ್ವೆ ನಿಲ್ದಾಣಕ್ಕೆ ಹೋಗಲು ಬೇಕು ಪಾಕಿಸ್ತಾನದ ವೀಸಾ…!

ಭಾರತದಲ್ಲಿರುವ ಈ ರೈಲ್ವೆ ನಿಲ್ದಾಣಕ್ಕೆ ಹೋಗಲು ಬೇಕು ಪಾಕಿಸ್ತಾನದ ವೀಸಾ…!

Kannada Dunia Kannada
18th November, 2021 07:39 IST

ವಿದೇಶಕ್ಕೆ ಹೋಗುವಾಗ ವೀಸಾ ಅನಿವಾರ್ಯ. ವೀಸಾ ಇಲ್ಲದೆ  ವಿದೇಶಕ್ಕೆ ಹೋಗಲು ಸಾಧ್ಯವಿಲ್ಲ. ಆದ್ರೆ ನಮ್ಮ ದೇಶದಲ್ಲಿ ಯಾವುದೇ ಪ್ರದೇಶದಲ್ಲಿ ಸುತ್ತಾಡಲು ವೀಸಾ ಬೇಕಾಗುವುದಿಲ್ಲ. ಹೀಗಂದುಕೊಂಡಿದ್ದರೆ ತಪ್ಪು. ಭಾರತದ ಒಂದು ಜಾಗಕ್ಕೆ ಹೋಗಲು ಭಾರತೀಯರಿಗೆ ವೀಸಾ ಅಗತ್ಯವಿದೆ.

ಹೌದು, ಆ ಜಾಗಕ್ಕೆ ಹೋಗಲು ಭಾರತೀಯರು, ಪಾಕಿಸ್ತಾನದ ವೀಸಾ ಹೊಂದಿರಬೇಕು. ಒಂದು ವೇಳೆ ಪಾಕಿಸ್ತಾನದ ವೀಸಾ ಇಲ್ಲದೆ ನೀವು ಆ ಜಾಗಕ್ಕೆ ಹೋದ್ರೆ, ಜೈಲು ಸೇರೋದು ನಿಶ್ಚಿತ. ಇಲ್ಲವೆ ದಂಡ ವಿಧಿಸಲಾಗುತ್ತದೆ. ಆ ಸ್ಥಳ ಬೇರೆ ಯಾವುದೋ ಅಲ್ಲ. ಪಂಜಾಬಿನ ಅಮೃತಸರದಲ್ಲಿರುವ ಅಟಾರಿ ರೈಲು ನಿಲ್ದಾಣ.

ಅಟಾರಿ ದೇಶದ ಏಕೈಕ ಅಂತರಾಷ್ಟ್ರೀಯ ಏರ್ ಕಂಡೀಷನರ್ ರೈಲು ನಿಲ್ದಾಣವಾಗಿದೆ. ಇದು ಪಾಕಿಸ್ತಾನದ ಗಡಿಯಲ್ಲಿದೆ. ಈ ನಿಲ್ದಾಣವು ದಿನದ 24 ಗಂಟೆಗಳ ಕಾಲ ಗುಪ್ತಚರ ಸಂಸ್ಥೆಗಳು ಮತ್ತು ಭದ್ರತಾ ಏಜೆನ್ಸಿಗಳಿಂದ ಸುತ್ತುವರೆದಿರುತ್ತದೆ. ಈ ಠಾಣೆಗೆ ಬರುವ ವ್ಯಕ್ತಿ ಪಾಕಿಸ್ತಾನದ ವೀಸಾ ಹೊಂದಿಲ್ಲದಿದ್ದರೆ, ವಿದೇಶಿ ಕಾಯಿದೆಯ ಸೆಕ್ಷನ್ 14 ರ ಅಡಿಯಲ್ಲಿ ಅವನ ವಿರುದ್ಧ ಪ್ರಕರಣ ದಾಖಲಿಸಲಾಗುತ್ತದೆ. ಈ ಕಾಯ್ದೆಯಡಿ ಪ್ರಕರಣ ದಾಖಲಾದ್ರೆ ಜಾಮೀನು ಪಡೆಯುವುದು ಸುಲಭವಲ್ಲ.

ದೇಶದ ಅತ್ಯಂತ ವಿಐಪಿ ರೈಲು ಸಂಜೋತಾ ಎಕ್ಸ್ ಪ್ರೆಸ್ ಪಾಕಿಸ್ತಾನಕ್ಕೆ ಹೊರಡುವುದು ಅದೇ ರೈಲು ನಿಲ್ದಾಣದಿಂದ. ರೈಲ್ವೆ ಟಿಕೆಟ್ ಖರೀದಿಸುವಾಗ, ಪ್ರಯಾಣಿಕರು ಪಾಸ್‌ಪೋರ್ಟ್ ಸಂಖ್ಯೆಯನ್ನು ನೀಡಬೇಕು.

ಕಾಮೆಂಟ್‌ಗಳಿಲ್ಲ:

ಕಾಮೆಂಟ್‌‌ ಪೋಸ್ಟ್‌ ಮಾಡಿ