ರಚನಾ ಸಮಾಜ ವಿಜ್ಞಾನ 9 ವಿಮರ್ಶಾತ್ಮಕ ಶಿಕ್ಷಣ ಕ್ರಮವನ್ನು ಅಳವಡಿಸಿಕೊಳ್ಳುವ
12. ವಿಮರ್ಶಾತ್ಮಕ ಶಿಕ್ಷಣ ಕ್ರಮವನ್ನು ಅಳವಡಿಸಿಕೊಳ್ಳುವ
ಎ) ಇತಿಹಾಸ ವಿಭಾಗ: ಉದಾಹರಣೆ: 1
1. ಪಾಠದ ಹೆಸರು : ಮಧ್ಯಯುಗದ ಯೂರೋಪ್
2. ಜ್ಞಾನ ರಚನೆಗೆ ಇರುವ ಅವಕಾಶಗಳು:
> ಮಧ್ಯಯುಗದ ಯೂರೋಪಿನ ಸಮಾಜದ ಸ್ಥಿತಿಗತಿಗಳು
> ಊಳಿಗ ಮಾನ್ಯ ಪದ್ಧತಿ ಅರ್ಥ
> ಊಳಿಗ ಮಾನ್ಯ ಪದ್ಧತಿಯ ವಿವಿಧ ರೂಪಗಳು
> ಊಳಿಗ ಮಾನ್ಯ ಪದ್ಧತಿಯ ಗುಣಗಳು ಮತ್ತು ದೋಷಗಳು
> ಊಳಿಗ ಮಾನ್ಯ ಪದ್ಧತಿಯ ಅವನತಿ
> ಪ್ರಸ್ತುತ ಜನತಂತ್ರ ವ್ಯವಸ್ಥೆಯೊಂದಿಗೆ ಊಳಿಗಮಾನ್ಯ ಪದ್ಧತಿ ಹೋಲಿಕೆ
> ಭೂ ಒಡೆತನದ ಹಕ್ಕನ್ನು (ಆಸ್ತಿಯ ಹಕ್ಕು) ಪಡೆಯುವ ಬಗೆ
> ವರ್ಗ ವ್ಯವಸ್ಥೆಯಲ್ಲಿನ ವ್ಯತ್ಯಾಸಗಳ ಅರಿವು.
3. ವಿಮರ್ಶಾಯುಕ್ತ ಶಿಕ್ಷಣ ಕ್ರಮ ಅಳವಡಿಕೆಗೆ ಇರುವ ಅವಕಾಶಗಳು
ಮಧ್ಯಯುಗದ ಯೂರೋಪಿನಲ್ಲಿ ವರ್ಗ ವ್ಯವಸ್ಥೆಯಲ್ಲಿನ ತಾರತಮ್ಯವನ್ನು ವಿಮರ್ಶಾಯುಕ್ತವಾಗಿ ಅರ್ಥೈಸಿಕೊಳ್ಳುವುದು.
ಇಂದಿನ ಪ್ರಜಾತಂತ್ರ ವ್ಯವಸ್ಥೆಯೇ ಊಳಿಗಮಾನ್ಯ ಪದ್ಧತಿಗಿಂತ ಅತ್ಯಂತ ಶ್ರೇಷ್ಠವಾದುದೆಂಬ ತೀರ್ಮಾನವನ್ನು ಕಂಡುಕೊಳ್ಳುವುದು.
ಊಳಿಗಮಾನ್ಯ ಪದ್ಧತಿಯ ಅವನತಿಗೆ ಕಾರಣವಾದ ನಿರಂಕುಶ ರಾಜ ಪ್ರಭುತ್ವ, ಭಾಷೆ, ರಾಷ್ಟ್ರೀಯ ಮನೋಭಾವನೆಗಳನ್ನು ಚರ್ಚಿಸಿ ತೀರ್ಮಾನ ಕೈಗೊಳ್ಳುವುದು.
ಊಳಿಗಮಾನ್ಯ ವ್ಯವಸ್ಥೆಯೊಳಗೆ ಉನ್ನತ ವರ್ಗಗಳಿಗೆ ದೊರೆಯುತ್ತಿದ್ದ ಸವಲತ್ತುಗಳ ಬಗ್ಗೆ ಚರ್ಚಿಸಿ ಇಲ್ಲಿನ ತಾರತಮ್ಯವನ್ನು ತಿರಸ್ಕರಿಸುವುದು.
ಸಮಾಜದ ರಕ್ಷಣೆಗೆ ಊಳಿಗ ಮಾನ್ಯ ವ್ಯವಸ್ಥೆಯಲ್ಲಿ ತೆಗೆದುಕೊಳ್ಳುತ್ತಿದ್ದ ಕ್ರಮ ಹಾಗೂ ಈ ಕಾಲದ ಬಾರ್ಬೇರಿಯನ್ನರು ಅಟ್ಟಹಾಸವನ್ನು ಮಟ್ಟ ಹಾಕುವಲ್ಲಿ ವಹಿಸಿದ ಪಾತ್ರವನ್ನು ವಿಮರ್ಶಿಸುವುದು.
4. ಜ್ಞಾನದ ಪುನರ್ರಚನೆಗೆ ಇರುವ ಅವಕಾಶಗಳು
ಕ್ರೌರ್ಯ, ಹಿಂಸೆ, ಅಶಾಂತಿ, ದಬ್ಬಾಳಿಕೆ, ಆಕ್ರಮಣಕಾರಿ ಅಂಶಗಳನ್ನು ತಿರಸ್ಕರಿಸಿ, ಸಹನೆ, ದಯೆ, ಶಾಂತಿ, ಸಮಾನತೆ ಎಂಬ ಸಮಾಜಮುಖಿಯಾದ ಮಾನವೀಯ ಮೌಲ್ಯಗಳ ಅರಿವು ತನ್ನದಾಗಿಸಿಕೊಳ್ಳುವುದು.
ಉದಾ: - ಅಮೇರಿಕಾದಲ್ಲಾದ ಜನಾಂಗೀಯ ಕಲಹ
- ಭಾರತದ ಸ್ಪೃಷ್ಯ, ಅಸ್ಪೃಷ್ಯ ತಾರತಮ್ಯ
- ಆಫ್ರಿಕಾದ ವರ್ಣ ವ್ಯತ್ಯಾಸ
ಸಮಾಜ ಮತ್ತು ದೇಶದ ಕಣ್ಣು ತೆರೆಸುವಲ್ಲಿ ಸಾಹಿತ್ಯ ಮತ್ತು ಸಂಸ್ಕೃತಿಗಳು ವಹಿಸಿದ ಪಾತ್ರದ ಮಹತ್ವವನ್ನು ಸ್ವೀಕರಿಸಿ ತೀರ್ಮಾನಕ್ಕೆ ಬರುವುದು.
ಉದಾ: ಫ್ರಾನ್ಸ್, ಇಂಗ್ಲೆಂಡ್, ಜರ್ಮನಿ ಭಾಷೆ/ಸಾಹಿತ್ಯಗಳಲ್ಲಾದ ವಿಕಾಸ ವಚನಗಳು, ಕೀರ್ತನೆಗಳು/ದಾಸರ ಪದಗಳು, ಜನಪದ ಗೀತೆಗಳು, ಶಿಶುನಾಳ ಷರೀಪ ಮತ್ತು ಏಸುವಿನ ಜೀವನ ಸಂದೇಶ ಕುರಿತ ಸಾಹಿತ್ಯ ರಚನೆಗಳು.
ವರ್ಗರಹಿತ ಸಮಾಜದ ಅನಿವಾರ್ಯತೆಯನ್ನು ಅರ್ಥೈಸಿಕೊಂಡು ಭಾರತದಂತಹ ರಾಷ್ಟ್ರಗಳಲ್ಲಿನ ಸ್ವಾತಂತ್ರ್ಯ ಸಮಾನತೆ, ಸಹೋದರತೆಯಂತಹ ಭಾವನೆಯನ್ನು ಬೆಳೆಸಿಕೊಳ್ಳುವುದು.
ಉಳುವವನಿಗೆ ಭೂಮಿಯ ಒಡೆತನ ಬಂದಿರುವ ಹಿನ್ನಲೆಯಲ್ಲಿ ಊಳಿಗಮಾನ್ಯ ಪದ್ಧತಿಯಲ್ಲಿನ ಭೂ ಒಡೆತನದ ನಿಯಮವೂ ಕಾರಣವಾಗಿದೆ ಎಂಬ ನಿರ್ಣಯಕ್ಕೆ ಬರುವುದು.
5. ನಿರಂತರ ಹಾಗೂ ವ್ಯಾಪಕ ಮೌಲ್ಯ ಮಾಪನ ಅವಳಡಿಸಿಕೊಳ್ಳಲು ಇರುವ ಅವಕಾಶಗಳು
ಊಳಿಗಮಾನ್ಯ ಪದ್ಧತಿ ವ್ಯವಸ್ಥೆಗೆ ಪೂರ್ವದಲ್ಲಿ ಬರ್ಬರ ಜನಾಂಗದ ಕ್ರೂರತನದಿಂದ ಕೂಡಿದ ದಾಳಿಕೋರತನವನ್ನು ಮೂಕಾಭಿನಯ ಮೂಲಕ ಅಂದಿನ ಸಮಾಜದ ಸ್ಥಿತಿಯನ್ನು ಪ್ರದರ್ಶಿಸುವುದು.
ಸರ್ವ ಸಮಾನತೆಯನ್ನು ಬಿಂಬಿಸುವ ದೃಶ್ಯಾವಳಿಗಳನ್ನು ಒಳಗೊಂಡ ನಾಟಕಾಭಿನಯ.
ಊಳಿಗಮಾನ್ಯ ಪದ್ಧತಿಯೊಳಗಿನ ವರ್ಗ ವ್ಯವಸ್ಥೆ ಮತ್ತು ಜನತಂತ್ರ ವ್ಯವಸ್ಥೆಯಲ್ಲಿನ ವರ್ಗರಹಿತ ಸಂದರ್ಭವನ್ನು ಗುಂಪು ಚರ್ಚೆ ಮೂಲಕ ತೀರ್ಮಾನ ಕೈಗೊಳ್ಳುವುದು.
ಊಳಿಗ ಮಾನ್ಯ ಪದ್ಧತಿಯ ಗುಣದೋಷಗಳು ಮತ್ತು ಜನತಂತ್ರ ವ್ಯವಸ್ಥೆಯಲ್ಲಿನ ಗುಣ ದೋಷಗಳನ್ನು ಕುರಿತು ಚಾರ್ಟ್ ತಯಾರಿಕೆ.
ಊಳಿಗ ಮಾನ್ಯ ವ್ಯವಸ್ಥೆಯನ್ನು ಕುರಿತ ಪ್ರಬಂಧ ರಚನೆ.
ಊಳಿಗ ಮಾನ್ಯ ಪದ್ಧತಿಯ ವರ್ಗ ವ್ಯವಸ್ಥೆಯನ್ನು ಪ್ರತಿಬಿಂಬಿಸುವ ಚಿತ್ರಗಳ ರಚನೆ.
ಸಂದರ್ಭೋಚಿತ ಮೌಖಿಕ/ಲಿಖಿತ ಪ್ರಶ್ನಾವಳಿಗಳು.
ಕಲಿಕೆಯನ್ನು ಅನುಕೂಲಿಸುವ ವಿಧಾನಗಳು
1. ನಾಟಕ ಅಥವಾ ನಾಟಕಾಭಿನಯ ವಿಧಾನ
ಊಳಿಗ ಮಾನ್ಯ ವ್ಯವಸ್ಥೆಯಲ್ಲಿನ ವರ್ಗ ಪದ್ಧತಿಯ ದೃಶ್ಯಾವಳಿ
ಬರ್ಬರ ಜನಾಂಗದ ದಾಳಿಕೋರಿತನದ ದೃಶ್ಯಾವಳಿ ಕುರಿತು
2. ಕಥನ ವಿಧಾನ
ಬರ್ಬರ ಜನಾಂಗದ ಆಕ್ರಮಣಕಾರಿ ನೀತಿ ಕುರಿತು ಕಥೆ ಹೇಳುವುದು ಹಾಗೆಯೇ ಊಳಿಗಮಾನ್ಯ ಪದ್ಧತಿಯನ್ನು ಕುರಿತು ಕಥೆ ಹೇಳುವುದು.
3. ಚರ್ಚಾ ವಿಧಾನ
ಊಳಿಗಮಾನ್ಯ ವ್ಯವಸ್ಥೆಯ ಗುಣಾವಗುಣಗಳ ಗುಂಪು ಚರ್ಚೆ.
4. ಟಕ ಪದ್ಧತಿ - ಬರ್ಬರ ದಾಳಿ, ಊಳಿಗಮಾನ್ಯ ಪದ್ಧತಿಗಳು.
ಊಳಿಗ ಮಾನ್ಯ ವ್ಯವಸ್ಥೆಯಲ್ಲಿನ ಗುಣದೋಷಗಳು.
ಊಳಿಗ ಮಾನ್ಯ ವ್ಯವಸ್ಥೆಯ ಅವನತಿಗೆ ಕಾರಣ.
5. ವಿಶ್ಲೇಷಣಾ ವಿಧಾನ
ಊಳಿಗಮಾನ್ಯ ವ್ಯವಸ್ಥೆ ಮತ್ತು ಜನತಂತ್ರ ವ್ಯವಸ್ಥೆಯ ಹೋಲಿಕೆ, ವ್ಯತ್ಯಾಸವನ್ನು ವಿಶ್ಲೇಷಿಸುವುದು.
6. ಸಂಪನ್ಮೂಲಗಳ ಕ್ರೂಢೀಕರಣ
ಚಿತ್ರದಲ್ಲಿ ಚರಿತ್ರೆ
ಯೂರೋಪಿನ ಮಧ್ಯಕಾಲೀನ ಇತಿಹಾಸ ಪಾಲಕ್ಷ, ಅಕಬರಾಲಿ
ವಿಶ್ವಕೋಶ
ವೀಕಿ ಪೀಡಿಯಾ, ಎನ್ಸೈಕ್ಲೋಪೀಡಿಯಾ
ಅಂತರ್ಜಾಲ - Google ಬಳಕೆ
7. ಬಳಸಬಹುದಾದ ಬೋಧನೋಪಕರಣಗಳು
ಬರ್ಬರ ಜನಾಂಗದ ದಾಳಿ ಕುರಿತ ಚಿತ್ರಪಟ
ವರ್ಗ ವ್ಯವಸ್ಥೆಯ ಚಿತ್ರಗಳು
ಭೂಮಾಲೀಕತ್ವದ ದಾಖಲಾತಿಗಳು (ಪಹಣಿ, ಪಟ್ಟಿ)
ಯೂರೋಪ್ ಖಂಡ/ಪ್ರಪಂಚದ ಭೂಪಟ.
ಪಠ್ಯ ಪುಸ್ತಕ
8. ಮನನ ಮಾಡಿಕೊಳ್ಳಲೇಬೇಕಾದ ಅಂಶಗಳು
ಸಮಾನತೆ
ಭ್ರಾತೃತ್ವ
ಶ್ರಮ ಮತ್ತು ದುಡಿಮೆ
ದಬ್ಬಾಳಿಕೆ ಮತ್ತು ಶೋಷಣೆ ವಿರುದ್ಧದ ಹೋರಾಟ
ರಾಷ್ಟ್ರೀಯ ಪ್ರಜ್ಞೆ.
ಉದಾಹರಣೆ: 2
1) ಪಾಠದ ಹೆಸರು : ವಿಜಯನಗರ ಮತ್ತು ಬಹಮನಿರಾಜ್ಯ
2) ಜ್ಞಾನ ರಚನೆಗೆ ಇರುವ ಅವಕಾಶಗಳು:
ವಿಜಯನಗರ ಮತ್ತು ಬಹುಮನಿರಾಜ್ಯಗಳ ಉಗಮ.
ವಿಜಯನಗರ ಹಾಗೂ ಬಹಮನಿರಾಜ್ಯಗಳ ರಾಜವಂಶಗಳು.
ಕೃಷ್ಣದೇವರಾಯನ ಕೊಡುಗೆಗಳು.
ವಿಜಯನಗರ ಸಾಮ್ರಾಜ್ಯದ ಕಲೆ ವಾಸ್ತುಶಿಲ್ಪ, ಸಂಸ್ಕೃತಿಗಳ ಪರಿಚಯ.
ಬಹಮನಿ ಅರಸರ ಆಡಳಿತಾತ್ಮಕ ಕೊಡುಗೆಗಳು.
ಬಹಮನಿ ಸಾಮ್ರಾಜ್ಯದ ಕಲೆ ಮತ್ತು ವಾಸ್ತುಶಿಲ್ಪ ಸಾಹಿತ್ಯಿಕ ಕೊಡುಗೆಗಳು.
ವಿಜಯನಗರ ಸಾಮ್ರಾಜ್ಯದ ಅವನತಿ/ತಾಳಿಕೋಟೆ ಕದನ.
ಬಹಮನಿ ಸಾಮ್ರಾಜ್ಯದ ಅಂತ್ಯ.
3) ವಿಮರ್ಶಾಯುಕ್ತ ಶಿಕ್ಷಣಕ್ರಮ ಅಳವಡಿಕೆಗೆ ಇರುವ ಅವಕಾಶಗಳು
ವಿಜಯನಗರ ಸಾಮ್ರಾಜ್ಯದ ಸ್ಥಾಪನೆ ಒಂದು ಯುಗ ಪ್ರವರ್ತಕ ಟನೆ ಎಂಬುದನ್ನು ತಾರ್ಕಿಕವಾಗಿ ಚರ್ಚಿಸಿ ಕಾರಣವನ್ನು ಅರ್ಥೈಸಿಕೊಳ್ಳುವುದು.
ಸಂಗಮ, ಸಾಳುವ, ತುಳುವ ಮತ್ತು ಅರವೀಡು ರಾಜವಂಶಗಳು ವಿಜಯನಗರದ ಖ್ಯಾತಿಯನ್ನು ಜಗದ್ವಿಖ್ಯಾತಗೊಳಿಸಿದ ಸಂದರ್ಭಗಳನ್ನು ಚರ್ಚಿಸುವುದು.
ಕೃಷ್ಣದೇವರಾಯನ ಆಡಳಿತಾತ್ಮಕ ಸಾಂಸ್ಕೃತಿಕ, ಧಾರ್ಮಿಕ, ಸಾಹಿತ್ಯಿಕ ಹಾಗೂ ಸೈನಿಕ ಕೊಡುಗೆಗಳ ಮಹತ್ವವನ್ನು ವಿದೇಶೀಯರ ಬಣ್ಣಿಸಿರುವ ಹಿನ್ನಲೆಯಲ್ಲಿ ಒಪ್ಪಿಕೊಂಡು, ಪ್ರಸ್ತುತ ಕಾಲ ಸಂದರ್ಭದ ಆಧುನಿಕ ಸರ್ಕಾರಗಳ ಕಾರ್ಯ ವೈಖರಿಯ ಬಗ್ಗೆ ಹೋಲಿಸಿ, ತೀರ್ಮಾನ ಕೈಗೊಳ್ಳುವುದು.
ಒಂದು ದೇಶದ/ಸಾಮ್ರಾಜ್ಯದ ಸಾಂಸ್ಕೃತಿಕ ಹಿರೆಮೆಗೆ ಅಲ್ಲಿನ ರಾಜರ/ಸರಕಾರದ ಸಾಹಿತ್ಯದ ಪ್ರೋತ್ಸಾಹವನ್ನು ಹೇಗೆ ಅವಲಂಬಿಸಿರುತ್ತದೆ ಎಂಬುದನ್ನು ಅರ್ಥೈಸಿಕೊಳ್ಳುವರು.
ದೇಶದ ಜನರ ನೆಮ್ಮದಿ ಅಲ್ಲಿನ ರಕ್ಷಣೆಯನ್ನು ಅವಲಂಬಿಸಿರುತ್ತದೆ ಎನ್ನುವ ಹಿನ್ನಲೆಯಲ್ಲಿ ರಾಷ್ಟ್ರರಕ್ಷಣೆಗೆ ಕೃಷ್ಣದೇವರಾಯನೂ ಸೇರಿದಂತೆ ವಿಜಯನಗರದ ಅರಸರು ಹೇಗೆ ಯುವ ಶಕ್ತಿಯನ್ನು ಪ್ರೋತ್ಸಾಹಿಸುತ್ತಿದ್ದರು ಎಂಬುದನ್ನು ಸ್ಮರಿಸಿಕೊಂಡು ಇಂದಿನ ಭಾರತದಂತಹ ರಾಷ್ಟ್ರದ ರಕ್ಷಣೆಯಲ್ಲಿ ಯುವಶಕ್ತಿಯ ಮಹತ್ವವನ್ನು ಗಮನಕ್ಕೆ ತಂದುಕೊಳ್ಳುವರು.
ವಿಜಯನಗರ ಸಾಮ್ರಾಜ್ಯದಲ್ಲಿನ ಸಾಮಾಜಿಕ, ಧಾರ್ಮಿಕ, ಆಕ ಸಮಾನತೆಯು ಅಂದಿನ ಆ ಸಮಾಜದ ಏಳಿಗೆ ಕಾರಣವಾಗಿದ್ದು ಈ ಕಾಲಟ್ಟದ ಅಸಮಾನತೆಯ ಪ್ರಸ್ತುತ ಸಂದರ್ಭಕ್ಕೆ ವಿಜಯನಗರದ ಇಂತಹ ಸಂದೇಶದ ಅನುಷ್ಠಾನದ ಅನಿವಾರ್ಯತೆಯನ್ನು ತೀರ್ಮಾನಕ್ಕೆ ತಂದುಕೊಳ್ಳುವರು.
ವಿಜಯನಗರ ಸರ್ವಧರ್ಮ ಸಹಿಷ್ಣುತೆಯು ಇಂದಿನ ಸಮಾಜದ ಒಡಕುಗಳಿಗೆ ಹೇಗೆ ಮಾದರಿಯಾಗಿ ನಿಲ್ಲಬಲ್ಲದು ಮತ್ತು ಸರ್ವಧರ್ಮಗಳನ್ನು ಸಮಾನತೆಯಿಂದ ಕಾಣುವ ಮನೋಭಾವನೆ ವಿಜಯನಗರದ ಅರಸರ ಇಂತಹ ನೀತಿಗಳು ಪಾಠವಾಗಲಿ ಎಂದು ಹೆಮ್ಮೆಯೆಂದು ತಿಳಿದುಕೊಳ್ಳುವರು.
ವಿಜಯನಗರ ಸಾಮ್ರಾಜ್ಯದ ವಾಸ್ತುಶಿಲ್ಪದ ವೈವಿಧ್ಯತೆಗೆ ಸಂಬಂಧಿಸಿದಂತೆ ಆ ಕಾಲದ ಶಿಲ್ಪಗಳ ಕಲಾ ನೈಪುಣ್ಯ ಅವರ ಕುಶಲತೆ, ತಾಳ್ಮೆಯನ್ನು ಮೆಚ್ಚಿಕೊಳ್ಳುವರು.
ದ್ವೇಷದಿಂದ ದ್ವೇಷವೇ ಬೆಳೆಯುತ್ತದೆ ಎಂಬ ಸಂದೇಶದಂತೆ ರಾಮರಾಯನು ಬಹಮನಿ ಸುಲ್ತಾನರ ಮೇಲೆ ತೀರಿಸಿಕೊಂಡ ಪ್ರತೀಕಾರ ಭಾವನೆ ಹೇಗೆ ಒಂದು ಭವ್ಯ ಸಾಮ್ರಾಜ್ಯವನ್ನು ಸರ್ವನಾಶ ಮಾಡಿತು ಎಂಬ ಎಚ್ಚರವನ್ನು ತಮ್ಮದಾಗಿಸಿ ಕೊಳ್ಳುವರು.
ದ್ರಾವಿಡ ಶೈಲಿಯ ಶ್ರೇಷ್ಠ ವಿಕಸಿತ ರೂಪದಂತಿರುವ ವಿಜಯನಗರದ ಕಲೆ ಮತ್ತು ವಾಸ್ತುಶಿಲ್ಪ ಹಾಗೂ ಇಂದಿನ ಎಲ್ಲಾ ಸಂಗೀತ, ನೃತ್ಯದ ಮೂಲ ನೆಲೆಯಂತಿರುವ ವಿಜಯನಗರ ಸಾಂಸ್ಕೃತಿಕ ಹಿರಿಮೆಯ ಬಗ್ಗೆ ಮೆಚ್ಚಿಕೊಳ್ಳುವರು.
ಒಬ್ಬ ಶ್ರೇಷ್ಠ ಪ್ರಧಾನ ಮಂತ್ರಿಯಿಂದ ಅಲ್ಲಿನ ಆಳರಸರ ಅದಕ್ಷತೆ ನಡುವೆಯೂ ಒಂದು ವಿಶಾಲ ಸಾಮ್ರಾಜ್ಯದ ಸ್ಥಾಪನೆಗೊಳ್ಳಲು ಸಾಧ್ಯವಾಗುವ ಬಗೆಯನ್ನು ಬಹಮನಿ ಸುಲ್ತಾನರ ಪ್ರಧಾನಮಂತ್ರಿ ಮಹಮದ್ ಗವಾನರ ಸಾಧನೆಯ ಅಡಿಯಲ್ಲಿ ಅರ್ಥೈಸಿಕೊಳ್ಳುವರು.
ಇಂದಿನ ಸಮಾಜದೊಳಗಣ ಮತೀಯ ಗಲಬೆ ಮತ್ತು ಅಶಾಂತಿಯ ಸನ್ನಿವೇಶಗಳನ್ನು ಸರಿಪಡಿಸುವಲ್ಲಿ ಇಬ್ರಾಹಿಂ ಆದಿಲ್ ಷಾರವರ ಕಿತಾಬ್ -ಎ- ನವರಸ ಕೃತಿಯು ಎಲ್ಲಾ ಧರ್ಮೀಯರಲ್ಲಿ ಸಾಮರಸ್ಯದ ಬದುಕನ್ನು ಬಿಂಬಿಸುವಲ್ಲಿ ಕೃತಿಯೊಳಗಣ ಮತೀಯ ಉದಾರತೆಯ ಅಂಶಗಳು ಹೇಗೆ ಸಾಕ್ಷಿಯಾಗುತ್ತವೆ ಎಂಬುದನ್ನು ತಿಳಿಯುವರು.
ವಿಜಯನಗರದ ವೈಭವಯುತ ಸಾಮ್ರಾಜ್ಯದ ನಿದರ್ಶನವಾಗಿ ಮುತ್ತುರತ್ನ ಹವಳಗಳನ್ನು ಬೀದಿಗಳಲೆಲ್ಲಾ ಮಾರುತ್ತಿದ್ದು ವ್ಯವಸ್ಥೆಯೊಂದಿಗೆ ಇಂದಿನ ಚಿನ್ನ ಬೆಳ್ಳಿಯ ಬೆಲೆಯನ್ನು ಅರ್ಥೈಸಿಕೊಂಡು ಆ ಕಾಲದ ವೈಭವವನ್ನು ಕಲ್ಪಿಸಿಕೊಳ್ಳುವುದು.
ಇಂದಿನ ಕೇಂದ್ರ ಮತ್ತು ರಾಜ್ಯ ಸರಕಾರಗಳಲ್ಲಿ ಬರುವ ಜಿಲ್ಲೆ, ತಾಲ್ಲೂಕು ಮತ್ತು ಗ್ರಾಮಾಡಳಿತ ವ್ಯವಸ್ಥೆಯ ರಚನೆ ಬಹುತೇಕ, ಬಹುಮನಿ ಅರಸರ ಕಾಲದ ಪ್ರಾಂತ, ಸರ್ಕಾರ್ ಮತ್ತು ಗ್ರಾಮಗಳ ಆಡಳಿತ ವ್ಯವಸ್ಥೆಯಲ್ಲಿ ರೂಪುಗೊಂಡಿರು ವಂತಿದೆ ಎಂಬುದನ್ನು ಅಧಿಕಾರ ವಿಕೇಂದ್ರೀಕರಣದ ಪ್ರಜಾಪ್ರಭುತ್ವ ವ್ಯವಸ್ಥೆಯ ಮೂಲ ಪರಿಕಲ್ಪನೆಯನ್ನು ಸ್ವೀಕರಿಸಿಕೊಳ್ಳುವರು.
ಪ್ರಸ್ತುತ ನಮ್ಮೊಳಗಿರುವ ಕಂದಾಯ, ಸೈನ್ಯ ಮತ್ತು ನ್ಯಾಯಾಂಗ ವ್ಯವಸ್ಥೆಯು ಬಹಮನಿ ಸುಲ್ತಾನರ, ಕಂದಾಯ, ಸೈನ್ಯ ನ್ಯಾಯಾಡಳಿತದ ಮುಂದುವರೆದ ಭಾಗದಂತಿದೆ ಎಂಬುದನ್ನು ಹೋಲಿಸಿ ತೀರ್ಮಾನ ಕೈಗೊಳ್ಳುವರು.
ಬಹಮನಿ ಸುಲ್ತಾನರಲ್ಲಿ ಕೃಷಿಯೇ ಪ್ರಮುಖ ಉದ್ಯೋಗವಾಗಿದ್ದು ಇಂದಿನಂತೆಯೇ ಅನೇಕ ಕುಲ ಕಸುಬುಗಳು, ಜನರ ಜೀವನೋಪಾಯಕ್ಕೆ ಪೂರಕವಾಗಿದ್ದವು. ಹಾಗೂ ಚಿನ್ನ ಬೆಳ್ಳಿಯ ನಾಣ್ಯಗಳ ಜೊತೆಗೆ ವಿದೇಶೀ ವ್ಯಾಪಾರ ಜಾತಿಪದ್ಧತಿ, ಪಿತೃಪ್ರಧಾನ ಕುಟುಂಬ ಮತ್ತು ಸ್ತ್ರೀ ಬದುಕಿನ ಬಗ್ಗೆ ಕೆಲವು ನಿಬಂಧನೆಗಳೂ ಇದ್ದವು ಎಂಬುದನ್ನು ಅರ್ಥೈಸಿಕೊಂಡು ಪ್ರಸಕ್ತ ಸಾಮಾಜಿಕ ಜೀವನ ಐತಿಹಾಸಿಕ ಹಿನ್ನಲೆಯಿಂದಲೇ ಮುಂದುವರೆದಿದೆ ಎಂಬ ತೀರ್ಮಾನಕ್ಕೆ ಬರುವರು.
ಬಹಮನಿ ಸುಲ್ತಾನರ ಆಡಳಿತದಲ್ಲಿ ರಕ್ಷಣಕ್ಕೆ ಹೆಚ್ಚಿನ ಪ್ರೋತ್ಸಾಹವಿದ್ದು, ಮತ, ಕಾನೂನು, ಕಾವ್ಯ, ಅಲಂಕಾರಶಾಸ್ತ್ರ, ಖಗೋಳಶಾಸ್ತ್ರ, ವ್ಯಾಕರಣ, ಗಣಿತ, ತತ್ವಶಾಸ್ತ್ರ, ಇತಿಹಾಸ, ರಾಜನೀತಿ ವಿಷಯಗಳ ಅಧ್ಯಯನದ ಮೂಲಕ ಬಾಗಿನ ಕಟ್ಟಿಕೊಳ್ಳುವುದಾಗಿತ್ತು ಎಂಬುದನ್ನು ಶೈಕ್ಷಣಿಕ ಮಹತ್ವದ ಹಿನ್ನಲೆಯಲ್ಲಿ ಸ್ಮರಿಸಿಕೊಳ್ಳುವರು.
4) ಜ್ಞಾನ ಪುನರ್ರಚನೆಗಿರುವ ಅವಕಾಶಗಳು
ವಿಜಯನಗರ ಸಾಮ್ರಾಜ್ಯದ ಉದಯಕ್ಕೆ ಕಾರಣ ಉದಾ: 14ನೇ ಶತಮಾನದಲ್ಲಿ ದಕ್ಷಿಣ ಭಾರತದೊಳಗಣ ರಾಜಕೀಯ ಅಭದ್ರತೆ, ಅಸ್ಥಿರತೆ, ಕ್ಷೋಭೆ, ಭಯ ಮತ್ತು ಧಾರ್ಮಿಕ ವಿಪ್ಲವಗಳು ಹೇಗೆ ಕಾರಣವಾದವು ಎಂಬುದನ್ನು ತಿಳಿಸುವುದು.
ವಿಜಯನಗರ ಅರಸರುಗಳಲ್ಲಿ ಮುಖ್ಯರಾದಂತಹ ಹರಿಹರ, ಬುಕ್ಕರಾಯ, ಎರಡನೇ ದೇವರಾಯ ಮತ್ತು ಶ್ರೀಕೃಷ್ಣದೇವರಾಯ ಸಾಮ್ರಾಜ್ಯ ವಿಸ್ತರಣೆಯಲ್ಲಿ ಅವರು ಅನುಸರಿಸಿದ ನೀತಿ, ನಿಲವು ಮತ್ತು ಧೈರ್ಯ ಉತ್ಸಾಹಗಳನ್ನು ಮತ್ತು ರಾಜ್ಯ ರಕ್ಷಣೆಯ ಬದ್ಧತೆಯ ಜ್ಞಾನವನ್ನು ಕಟ್ಟಿಕೊಳ್ಳುವರು.
ರಾಜನಾದವನು ತನ್ನ ಸಮಕಾಲೀನ ರಾಜರನ್ನು ಹಾಗೂ ವಿದೇಶೀ ರಾಜರನ್ನು ನಡೆಸಿಕೊಳ್ಳುತ್ತಿದ್ದ ರೀತಿ ಹಾಗೂ ಸಂಬಂಧವನ್ನು ಕಟ್ಟಿಕೊಳ್ಳುತ್ತಿದ್ದ ರೀತಿಯನ್ನು ಇಂದಿನ ವಿದೇಶಾಂಗ ನೀತಿಯ ಪರಿಕಲ್ಪನೆಯೊಂದಿಗೆ ಕಲ್ಪಿಸಿಕೊಳ್ಳಲು ಶ್ರೀಕೃಷ್ಣ ದೇವರಾಯನ ಆಡಳಿತ ಪದ್ದತಿಯು ನೈಪುಣ್ಯತೆಯ ಜ್ಞಾನವನ್ನು ವಿನೂತನವಾಗಿ ಕಟ್ಟಿಕೊಳ್ಳುವರು.
ಸಮಾಜದ ಕಟ್ಟಕಡೆಯ ವ್ಯಕ್ತಿಗೂ ಆಡಳಿತದ ಸಮಲತ್ತುಗಳು ದೊರೆಯುವಂತಹ ವ್ಯವಸ್ಥೆಯ ಅಡಿಯಲ್ಲಿ ವಿಜಯನಗರ ಮತ್ತು ಬಹಮನಿ ಅರಸರ ಅಧಿಕಾರ ವಿಕೇಂದ್ರೀಕರಣದ ನೀತಿಯು ಮಾದರಿ ಆಡಳಿತದಂತೆ ಕಂಡುಬರುತ್ತಿದೆ ಎಂಬ ಜ್ಞಾನ ವಿದ್ಯಾಗಳದ್ದಾಗುವುದು.
ಜಾತಿ ವ್ಯವಸ್ಥೆಯ ಅಡಿಯಲ್ಲಿ ಬರುವ ಕುಲ ಕಸುಬುಗಳು, ಸಮಾಜದ ಶಾಂತಿಯುತ ಚಲನೆಗೆ ಸಹಾಯವಾಗುತ್ತವೆ ಎಂಬುದನ್ನು ವಿಜಯನಗರ ಮತ್ತು ಬಹಮನಿ ಅರಸರ ಕಾಲದ ಚಮ್ಮಾರ, ಬಡಗಿ, ಅಕ್ಕಸಾಲಿಗ, ನೇಕಾರ, ಕಂಚುಗಾರ, ಕಮ್ಮಾರರ, ಕಸುಬುಗಳ ಮೂಲಕ, ಆಕ ಸ್ವಾವಲಂಬನೆಯ ಮಹತ್ವಕ್ಕೆ ಉದ್ಯೋಗಗಳು ಮುಖ್ಯ ಎಂಬ ಜ್ಞಾನ ಕಟ್ಟಿಕೊಳ್ಳುವರು.
ವಿಜಯನಗರ ಮತ್ತು ಬಹಮನಿ ಅರಸರ ಆಡಳಿತ ಪದ್ಧತಿಯಲ್ಲಿ ಇದ್ದಂತಹ ತೆರಿಗೆ ವಸೂಲಾತಿ ಭೂ ಹಿಡುವಳಿ, ವಿದೇಶೀ ವ್ಯಾಪಾರ, ವ್ಯವಸ್ಥೆ ಬಗ್ಗೆ ಅರಿತುಕೊಂಡು, ಆಡಳಿತದ ಮೇಲೆ ಬೀರುವ ಪರಿಣಾಮದ ಸದುಪಯೋಗ ಜ್ಞಾನವನ್ನು ವಿದ್ಯಾಗೆ ಉದಾಹರಣೆ ಮೂಲ ವಿವರಿಸುವುದು.
ಉದಾ: ತೆರಿಗೆಯ ಹಣವನ್ನು ನೀರಾವರಿಗೆ ರಸ್ತೆ ಮುಂತಾದ ಅಭಿವೃದ್ಧಿ ಕಾರ್ಯಗಳಿಗೆ ಬಳಸಲಾಗುತ್ತಿತ್ತು.
ವಿದೇಶಿ ವ್ಯಾಪಾರ ಕೊಡು-ಕೊಳ್ಳುವ ಹಿನ್ನಲೆಯಲ್ಲಿ ನಿರಂತರವಾಗಿ ನಡೆಯುತ್ತಿದ್ದವು. ಚಿನ್ನ ಬೆಳ್ಳಿ ಸಾಂಬಾರ ಪದಾರ್ಥಗಳನ್ನು ರಪ್ತು ಮಾಡಿ ಕುದುರೆ, ಮದ್ಯ, ಸೈನಿಕರು, ಶಸ್ತ್ರಾಸ್ತ್ರಗಳನ್ನು ಆಮದು ಮಾಡಿಕೊಳ್ಳುತ್ತಿದ್ದರು.
ವಿಜಯನಗರ ಮತ್ತು ಬಹಮನಿ ಸುಲ್ತಾನರ ಸಾಂಸ್ಕೃತಿಕ ಪರಂಪರೆ ಇಂದಿಗೂ ಮಾದರಿಯಾಗಿದೆ ಹಾಗೂ ಮುಂದುವರೆಯುತ್ತಲೇ ಇದೆ.
ಉದಾ: ಶ್ರೀಕೃಷ್ಣ ದೇವರಾಯನ ಆಮುಕ್ತ ಮೌಲ್ಯದ, ಎರಡನೇ ಇಬ್ರಾಹಿಂ ಆದಿಲ್ಶಾನ ಮತೀಯ ಉದಾರತೆ ಕುರಿತು ಜ್ಞಾನ ಕಟ್ಟಿಕೊಳ್ಳಲು ಅವಕಾಶ ಕಲ್ಪಿಸುವುದು - ಸಾಂಸ್ಕೃತಿಕ ಸಾಮರಸ್ಯದ ಸಂಕೇತವಾಗಿ ಇಂದಿಗೂ ಹಂಪೆಯಲ್ಲಿ ಕಂಡುಬರುವ ಗುಡಿ, ಚರ್ಚು ಮಸೀದಿಗಳ ನಿರ್ಮಾಣ ಕುರಿತು ವೈಚಾರಿಕತೆ ಬೆಳೆಸುವುದು. 5) ನಿರಂತರ ಮತ್ತು ವ್ಯಾಪಕ ಮೌಲ್ಯಮಾಪನ ಅಳವಡಿಸಿಕೊಳ್ಳಲು ಇರುವ ಅವಕಾಶಗಳು
ವಿದ್ಯಾರಣ್ಯ ಮಹರ್ಷಿಗಳು ಹಕ್ಕ ಬುಕ್ಕರಿಗೆ ಉಪದೇಶ ಮಾಡುವುದರೊಂದಿಗೆ ವಿಜಯನಗರ ಸಾಮ್ರಾಜ್ಯ ಸ್ಥಾಪನೆ ಮಾಡಿದ ಸಂದರ್ಭವನ್ನು ನಾಟಕಾಭಿನಯದ ಮೂಲಕ ಪ್ರದರ್ಶಿಸುವಂತೆ ತಿಳಿಸುವುದು.
ಎರಡನೇ ಪ್ರೌಢದೇವರಾಯ ಮತ್ತು ಕೃಷ್ಣದೇವರಾಯನ ಸಾಧನೆಗಳನ್ನು ಕುರಿತು ಪ್ರಬಂಧ ಮಂಡನೆ ಮಾಡುವುದು.
ವಿಜಯನಗರ ಮತ್ತು ಬಹಮನಿ ಸುಲ್ತಾನರ ಆಡಳಿತಾತ್ಮಕ ಅಂಶಗಳನ್ನು ತರಗತಿಯಲ್ಲಿ ಗುಂಪುಗಳ ಮೂಲಕ ಚರ್ಚಿಸಿ, ಸಾಮ್ಯತೆ ಕಂಡುಬರುವ ಅಂಶಗಳನ್ನು ಪಟ್ಟಿಮಾಡುವುದು.
ವಿಜಯನಗರ ಮತ್ತು ಬಹಮನಿ ಅರಸರ ಕಾಲದ ಕಲೆ ವಾಸ್ತುಶಿಲ್ಪಗಳ ವ್ಯತ್ಯಾಸಗಳನ್ನು ಕಲಿಕಾ ನಿಲ್ದಾಣಗಳಲ್ಲಿ ಚರ್ಚಿಸಿ, ತೀರ್ಮಾನಗಳನ್ನು ಕೈಗೊಳ್ಳುವುದು.
ತೆರಿಗೆ ಪದ್ಧತಿ, ಭೂಹಿಡುವಳಿ ಪದ್ಧತಿ, ಅಧಿಕಾರ ವಿಕೇಂದ್ರೀಕರಣ ಕುರಿತ ಪ್ರಶ್ನಾವಳಿಗಳನ್ನು ತಯಾರಿಸುವುದು.
ರಾಮರಾಯ ಅನುಸರಿಸಿದ ಬಹಮನಿ ಸುಲ್ತಾನರ ಬಗೆಗಿನ ಪ್ರತೀಕಾರ ನೀತಿಯೇ ವಿಜಯನಗರದ ಅವನತಿಗೆ ಕಾರಣವಾಯಿತು ಎಂಬ ವಿಚಾರವಾಗಿ ಚರ್ಚಾಸ್ಪರ್ಧೆ ಏರ್ಪಡಿಸುವುದು.
ಮಹಮದ್ ಗವಾನನ ನಿಷ್ಠೆ, ಸೇವೆ ಕುರಿತು ಟಿಪ್ಪಣಿ ರಚಿಸಲು ತಿಳಿಸುವುದು.
ರಸಪ್ರಶ್ನೆ, ಪರೀಕ್ಷೆಗಳನ್ನು ನಡೆಸುವುದು.
ವಿಜಯನಗರ ಮತ್ತು ಬಹಮನಿ ಸಾಮ್ರಾಜ್ಯದ ವ್ಯಾಪ್ತಿ ಎಲ್ಲವನ್ನು ಕುರಿತು ಭೂಪಟ ರಚಿಸುವುದು.
ವಿಜಯನಗರ ಮತ್ತು ಬಹಮನಿ ರಾಜರುಗಳ ಕಾಲದ ವಿದೇಶೀ ವ್ಯಾಪಾರದ ಬಂದರುಗಳನ್ನು ಭೂಪಟದಲ್ಲಿ ಗುರುತಿಸುವುದು.
ದೇಶ ಪ್ರೇಮ ರಾಷ್ಟ್ರ ರಕ್ಷಣೆ ಹಿಂದೂ ಮುಸ್ಲಿಂ ಸಾಮರಸ್ಯವನ್ನು ತೋರಿಸುವ ಟನೆಗಳನ್ನು ಸ್ವ ಅನುಭವಿಸಿದ ವಿದ್ಯಾಗಳಿಂದ ಹೇಳಿಸುವುದು.
6) ಕಲಿಕೆಯನ್ನು ಅನುಕೂಲಿಸುವ ವಿಧಾನಗಳು
> ಘಟಕ ಪದ್ಧತಿ: ವಿಜಯನಗರ ಮತ್ತು ಬಹಮನಿ ಸಾಮ್ರಾಜ್ಯಕ್ಕೆ ಸಂಬಂಧಿಸಿದಂತೆ ಒಟ್ಟು ಪಾಠಭಾಗವನ್ನು ಟಕಗಳನ್ನಾಗಿ ವಿಭಾಗಿಸಿಕೊಂಡು ಕಲಿವನ್ನುಂಟು ಮಾಡುವುದು.
ಉದಾ : ವಿಜಯನಗರ ಸ್ಥಾಪನೆ
2ನೇ ಪ್ರೌಢದೇವರಾಯ
ಕೃಷ್ಣದೇವರಾಯ
ವಿಜಯನಗರ ಸಾಮ್ರಾಜ್ಯ ಪಥನ
ವಿಜಯನಗರದ ಕೊಡುಗೆಗಳು
ಮಹಮದ್ ಗವಾನ
ಇಬ್ರಾಹಿಂ ಆದಿಲ್ಷಾ
ಬಹಮನಿ ರಾಜ್ಯದ ಆಕ ಸಾಮಾಜಿಕ, ಧಾರ್ಮಿಕ ವ್ಯವಸ್ಥೆ.
> ವೀಕ್ಷಣಾ ವಿಧಾನ: ಬಹಮನಿ ಮತ್ತು ವಿಜಯನಗರ ಸಾಮ್ರಾಜ್ಯಕ್ಕೆ ಸಂಬಂಧಿಸಿದ ಪ್ರಮುಖ ಚಿತ್ರಪಟಗಳನ್ನು ತರಗತಿಯಲ್ಲಿ ಪ್ರದರ್ಶಿಸಿ ವೀಕ್ಷಿಸುವುದರ ಮೂಲಕ ಕಲಿವಿನ ಅವಕಾಶವನ್ನು ಕಲ್ಪಿಸುವುದು.
ಉದಾ : * ವಿರೂಪಾಕ್ಷ ದೇವಾಯಲದ ಚಿತ್ರಪಟ
ಶ್ರೀ ಕೃಷ್ಣದೇವರಾಯನ ಚಿತ್ರ
ಬಿಜಾಪುರದ ಗೋಲ್ಗುಂಬಸ್ ಚಿತ್ರ
ಬೀದರ್ ಕೋಟೆ ಮತ್ತು ಜಾಮಿಯಾ ಮಸೀದಿಗಳ ಚಿತ್ರ
> ಪ್ರವಾಸ ವಿಧಾನ: ವಿಜಯನಗರ ಮತ್ತು ಬಹಮನಿ ಅರಸರು ಆಳ್ವಿಕೆ ನಡೆಸಿದ ಸ್ಥಳಗಳಾದ ಹಂಪಿ ಮತ್ತು ಬಿಜಾಪುರ, ಬೀದರ್ಗಳಿಗೆ ಭೇಟಿ ನೀಡಿ, ಅಲ್ಲಿನ ಸ್ಮಾರಕಗಳನ್ನು ವೀಕ್ಷಿಸಿ ಕಲಿವನ್ನುಂಟು ಮಾಡುವುದು. ಈ ವಿಧಾನಗಳ ಜೊತೆಗೆ ಸಮಾಜ ವಿಜ್ಞಾನ ಕಲಿಕೆಯಲ್ಲಿ ಸಂಶೋಧನಾ ವಿಧಾನ ಮತ್ತು ಪ್ರಶ್ನೋತ್ತರ ವಿಧಾನಗಳನ್ನು ಬಳಸಿಕೊಳ್ಳಬಹುದು.
7) ಸಂಪನ್ಮೂಲಗಳ ಕ್ರೂಢೀಕರಣಗಳು
9ನೇ ತರಗತಿ ಪಠ್ಯಪುಸ್ತಕ
ದಕ್ಷಿಣ ಭಾರತದ ಇತಿಹಾಸ - ಅಕಬರಾಲಿ
ಚಿತ್ರದಲ್ಲಿ ಚರಿತ್ರೆ
ಹಂಪಿ ಮತ್ತು ಬಿಜಾಪುರ ಬೀದರ್ನಲ್ಲಿರುವ ಐತಿಹಾಸಿಕ ಸ್ಮಾರಕಗಳ ಚಿತ್ರಪಟ.
ಮೋಹನ ತರಂಗಿಣಿ - ಕನಕದಾಸರು, ಕಾ.ತ. ಚಿಕ್ಕಣ್ಣ
ಅಂತರ್ಜಾಲ. ಗೂಗಲ್.ಕಾಮ್
ಎನ್ಸೈಕ್ಲೋಪೀಡೀಯ.
8) ಬೋಧನೋಪಕರಣಗಳು
- ದಕ್ಷಿಣ ಭಾರತದ ಭೂಪಟ
- ಪ್ರಪಂಚದ ಭೂಪಟ
- ಹಂಪಿಯ ಚಿತ್ರಪಟಗಳು
- ಬಿಜಾಪುರ/ಬೀದರ್ನ ಐತಿಹಾಸಿಕ ಸ್ಮಾರಕಗಳ ಚಿತ್ರಗಳು
- ಅಧಿಕಾರ ಶ್ರೇಣೀಕೃತ (ವಿಕೇಂದ್ರೀಕರಣ) ಕುರಿತ ಚಾರ್ಟ್ಗಳು
- ಸರ್ವಧರ್ಮ ಸಮನ್ವಯದ ಚಿತ್ರಪಟಗಳು
9) ಮನನ ಮಾಡಿಕೊಳ್ಳಲೇ ಬೇಕಾದ ಅಂಶಗಳು
- ಸಾಮರಸ್ಯದ ಆಡಳಿತ ಪದ್ಧತಿ
- ವಿಕೇಂದ್ರೀಕೃತ ಆಡಳಿತ ವ್ಯವಸ್ಥೆ
- ವ್ಯಾಪಾರದ ಮಹತ್ವ
- ಕಲೆ ಮತ್ತು ವಾಸ್ತುಶಿಲ್ಪದ ಶ್ರೀಮಂತಿಕೆ
- ರಾಷ್ಟ್ರರಕ್ಷಣೆ, ದೇಶಪ್ರೇಮಗಳಲ್ಲಿ ಪ್ರಜೆಗಳ ಪಾತ್ರ.
- ಸಮಾಜಮುಖಿ ಸಾಹಿತ್ಯ ರಚನೆಯ ಮಹತ್ವ.
- ವಿಜಯನಗರ ವೈಭವದ ಪರಿಕಲ್ಪನೆ.
- ಪ್ರತೀಕಾರದ ರಾಜನೀತಿಯನ್ನು ಕೈಬಿಡುವುದು.
- ಸೋತ ಮನಸ್ಸುಗಳನ್ನು ಸಂತೈಸುವುದು.
- ಸಾಂಸ್ಕೃತಿಕ ಪರಂಪರೆಗಳನ್ನು ಪರಸ್ಪರ ಗೌರವಿಸುವುದು.
ಉದಾಹರಣೆ: 3
ಪಾಠದ ಹೆಸರು : ಆಧುನಿಕ ಯೂರೋಪ್
ಜ್ಞಾನಾರ್ಜನೆಗೆ ಇರುವ ಅವಕಾಶಗಳು:
- ಯೂರೋಪ್ ಖಂಡದ ಪರಿಕಲ್ಪನೆ
- ಪುನರುಜ್ಜೀವನಕ್ಕೆ ಅರ್ಥ
- ಪುನರಜ್ಜೀವನಕ್ಕೆ ಕಾರಣ ಮತ್ತು ಪರಿಣಾಮಗಳು
- ಪುನರುಜ್ಜೀವನದ ಲಕ್ಷಣಗಳು
- ಪುನರುಜ್ಜೀವನ ಕಾಲದ ಸಾಹಿತ್ಯ, ಕಲೆ, ವಾಸ್ತುಶಿಲ್ಪ, ವಿಜ್ಞಾನ
- ಭೌಗೋಳಿಕ ಅನ್ವೇಷಣೆ ಅರ್ಥ
- ಭೌಗೋಳಿಕ ಅನ್ವೇಷಣೆಗೆ ಕಾರಣಗಳು.
- ಭೌಗೋಳಿಕ ಅನ್ವೇಷಣೆಗಳು ಪರಿಣಾಮಗಳು
- ಮತ ಸುಧಾರಣೆ ಅರ್ಥ ಮತ್ತು ಮಾರ್ಟಿನ್ ಲೂಥರ್ಕಿಂಗ್
- ಮತ ಸುಧಾರಣೆಯ ಪರಿಣಾಮಗಳು
- ಪ್ರತಿ ಸುಧಾರಣೆ ಮತ್ತು ಇಗ್ನೇಷಿಯಸ್ ಲಯೋಲ
- ಕೈಗಾರಿಕಾ ಕ್ರಾಂತಿ, ಅರ್ಥ, ಕಾರಣಗಳು
- ಕೈಗಾರಿಕಾ ಕ್ರಾಂತಿಯ ಪರಿಣಾಮಗಳು
ವಿಮರ್ಶಾಯುಕ್ತ ಶಿಕ್ಷಣಕ್ರಮ ಅಳವಡಿಕೆಗೆ ಇರುವ ಅವಕಾಶಗಳು
- ಕಾನ್ಸ್ಟಾಂಟಿನೋಪಲ್ ಟನೆ ಹೇಗೆ ಯೂರೋಪಿನಲ್ಲಿ ಪುನರುಜ್ಜೀವನದೊಂದಿಗೆ ಭೌಗೋಳಿಕ ಅನ್ವೇಷಣೆ, ಧಾರ್ಮಿಕ ಸುಧಾರಣೆ ಮತ್ತು ಕೈಗಾರಿಕಾ ಕ್ರಾಂತಿಗೆ ಪ್ರೇರಣೆಯಾಯಿತು ಎಂಬುದನ್ನು ಅರ್ಥೈಸಿಕೊಳ್ಳವುದರೊಂದಿಗೆ ಪ್ರೇರಣೆಯಾಯಿತು ಎಂಬುದನ್ನು ಅರ್ಥೈಸಿಕೊಳ್ಳವುದರೊಂದಿಗೆ ಒಂದು ಟನೆ ಏನೆಲ್ಲಾ ಬದಲಾವಣೆಗೆ ಕಾರಣವಾಗಿರುತ್ತದೆ ಎಂಬುದನ್ನು ಕುತೂಹಲದಿಂದ ಚರ್ಚೆ ಮಾಡಿ ತಿಳಿಯುವರು.
- ಅಂದಿನ ಸಂದರ್ಭದಲ್ಲಿ ಮಾನವತಾವಾದ ಹುಟ್ಟಿಕೊಂಡ ಸಂದರ್ಭದೊಂದಿಗೆ, ಆಧುನಿಕ ಜಗತ್ತಿನ, ಗಾಂಧಿ, ಅಂಬೇಡ್ಕರ್, ನೆಲ್ಸನ್ ಮಂಡೇಲರವರು ಈ ಮಾನವತಾವಾದದ ಪರವಾಗಿ ಹೆಜ್ಜೆ ಇಡಲು ಕಾರಣವೇನೆಂಬುದನ್ನು ತಿಳಿಯುವರು.
- ಶ್ರೇಷ್ಠ ಸಂಸ್ಕೃತಿ ಎಂದರೇನು? ಎಂಬುದನ್ನು ನೈಜ ಟನಾವಳಿಗಳೊಂದಿಗೆ ಅರ್ಥೈಸಿಕೊಂಡು ಅನುಕರಣೆ ಮಾಡುವ ಸಾಮಥ್ರ್ಯವನ್ನು ಪಡೆಯುವುದು.
- ಇಟಲಿಯ ಜ್ಞಾನ ಪುನರುಜ್ಜೀವನದ ತವರೆನಿಸಿಕೊಳ್ಳಲು ಆ ಕಾಲಟ್ಟದಲ್ಲಿ ತಂಡ ತಂಡವಾಗಿ ಇಟಲಿಗೆ ವಲಸೆ ಬಂದ ಬುದ್ಧಿ ಜೀವಿಗಳು ಕಾರಣರಾದರು ಎಂಬುದನ್ನು ಅಧ್ಯಯನ ಮಾಡುವುದರೊಂದಿಗೆ ಒಂದು ಬುದ್ಧಿ ಜೀವಿ ಜನ ಸಮೂಹ ಆಯಾ ಕಾಲದ
ವರ್ತಮಾನದ ವಿಕಾಸ ನಿರಂತರವಾಗಿ ಕಾರಣವಾಗುತ್ತಲೇ ಬಂದಿದೆ ಎಂಬುದನ್ನು ಅರಿಯುವರು.
ಉದಾ: ಪೆಟ್ರಾಕ್ - ಆಫ್ರಿಕಾ
ಬಕಾಶಿಯಾ - ಡೆಕಾಮೆರಾನ್
ಡಾಂಟೆ - ಡಿವೈನ್ ಕಾಮಿಡಿ ಕೃತಿಗಳ ಮೂಲಕ ಈ ಬುದ್ಧಿ ಜೀವಿಗಳು ಪುನರುಜ್ಜೀವನದ ಕಣ್ಣು ತೆರೆಸಿದರು.
ಊಳಿಗಮಾನ್ಯ ಪದ್ಧತಿಯ ಆಡಳಿತದಿಂದ ನೊಂದಿದ್ದ ಯೂರೋಪಿನ ಸಾಮಾನ್ಯ ಜನ ಪುನರುಜ್ಜೀವನ ಸಂದರ್ಭವನ್ನು ಸ್ವೀಕರಿಸುವಲ್ಲಿ ವಹಿಸಿದ ಪಾತ್ರವನ್ನು ಒಂದು ಹೊಸ ಸ್ವತಂತ್ರ ಬೆಳವಣಿಗೆಯ ಪರಿಕಲ್ಪನೆ ಜಗತ್ತಿನ ವಿಕಾಸಕ್ಕೆ ಹೇಗೆ ಕಾರಣವಾಯಿತು ಎನ್ನುವುದನ್ನು ಪುನರುಜ್ಜೀವನದ ಕಾರಣಗಳೊಂದಿಗೆ ಚರ್ಚಾತ್ಮಕವಾಗಿ ತಿಳಿದುಕೊಳ್ಳುವರು.
ಜನರಾಡುವ ಭಾಷೆಗಳು (ಪ್ರಾದೇಶಿಕ ಭಾಷೆ) ಪ್ರಾಬಲ್ಯಕ್ಕೆ ಬಂದಾಗ ಆ ಭಾಷೆಯನ್ನಾಡುವವರು ತಮ್ಮ ಬೌದ್ಧಿಕ ವಿಕಾಸವನ್ನು ಬೆಳಸಿಕೊಳ್ಳುವುದರೊಂದಿಗೆ ಸಾಮಾಜಿಕ ಸ್ಥಿತ್ಯಂತರಗಳು ಉಂಟಾಗುವ ಬಗೆಯನ್ನು ಅರ್ಥೈಸಿಕೊಂಡು ಈ ಹಿನ್ನಲೆಯಲ್ಲಿ ಮಾತೃಭಾಷೆಯ ಮಹತ್ವವನ್ನು ಅರಿಯುವರು.
ಉದಾ: ಲ್ಯಾಟಿನ್ ಬದಲು ಪ್ರಾದೇಶಿಕ ಭಾಷೆಗಳಾದ ಇಂಗ್ಲೀಷ್, ಇಟಾಲಿಯನ್, ಫ್ರೆಂಚ್, ಜರ್ಮನ್ ಇತ್ಯಾದಿ.
ಮಾನವ ಸಹಜ ಭಾವನೆಗಳನ್ನು ಶಿಲ್ಪ ಚಿತ್ರಗಳಲ್ಲಿ ಮೂಡಿಸುವುದರೊಂದಿಗೆ, ಕಲೆಯೂ ಸಹ ಮಾನವ ನಿರ್ಮಿತ ಸಮಾಜವನ್ನು ಅರ್ಥೈಸುವಲ್ಲಿ ವಹಿಸುವ ಪಾತ್ರವನ್ನು ತಿಳಿಯುವರು.
16ನೆಯ ಶತಮಾನದಲ್ಲಿ ಬೆಳಕಿಗೆ ಬಂದ ವಿಜ್ಞಾನದ ಬೆಳವಣಿಗೆ ಪ್ರತಿಯೊಬ್ಬರಲ್ಲೂ ಏಕೆ? ಏನು? ಹೇಗೆ? ಎಂಬ ಪ್ರಶ್ನೆಗಳನ್ನು ಮೂಡಿಸಿ ಹೊಸ ಹೊಸ ಆವಿಷ್ಕಾರಗಳಿಗೆ ನಾಂದಿಯಾದ ಈ ಸಂದರ್ಭ ಪುನರುಜ್ಜೀವನ ಕಾಲದಲ್ಲಾಗಿರುವುದಕ್ಕೆ ಮೆಚ್ಚುಗೆ
ವ್ಯಕ್ತಪಡಿಸುವರು. ಹಾಗೂ ಪ್ರಸ್ತುತ ಸಂದರ್ಭದ ವಿಜ್ಞಾನದ ಮಹತ್ವವನ್ನು ಅರಿಯುವರು.
ಉದಾ: ಭೂಕೇಂದ್ರವಾದದ ಬಗ್ಗೆ ಇದ್ದಂತಹ ನಂಬಿಕೆ
ಸೂರ್ಯ ಕೇಂದ್ರವಾದ - ಕೆಪ್ಲರ್
ನ್ಯೂಟನ್ನನ - ಗುರುತ್ವಾಕರ್ಷಣೆ
ಹ್ಯಾಂಡೂವಸಾಲಯಿಸ್ನ - ಶರೀರಶಾಸ್ತ್ರ ಇತ್ಯಾದಿ.
ಪುನರುಜ್ಜೀವನವು ಸಮಾಜದಲ್ಲಿ ಮಾನವೀಯತೆಯ ಮಾರ್ಗ, ವೈಜ್ಞಾನಿಕ ಶೋಧ ತಂತ್ರಜ್ಞಾನ ಮತ್ತು ಕೈಗಾರಿಕಾ ಕ್ರಾಂತಿಗೆ ಹೊಸ ಚಿಂತನೆಗೆ ನಾಂದಿ ಹಾಡಿತಲ್ಲದೆ ಮುಂದಿನ ಧಾರ್ಮಿಕ ಸುಧಾರಣೆಗಳಿಗೂ ಕಾರಣವಾದ ಸಂದರ್ಭವನ್ನು ಹಾಗೂ ಅದರ ಪರಿಣಾಮದ ಮಹತ್ವವನ್ನು ತಿಳಿಯುವರು.
16ನೇ ಶತಮಾನ ಭೌಗೋಳಿಕ ಅನ್ವೇಷಣೆಗಳ ಯುಗವಾಗಿ ಪ್ರಪಂಚದ ಅನೇಕ ಭಾಗಗಳಿಗೆ ಹೊಸ ಜಲಮಾರ್ಗಗಳನ್ನು ಕಂಡು ಹಿಡಿದ ಹಿನ್ನಲೆಯಲ್ಲಿ ಯುರೋಪಿಯನ್ನರ ಸಾಹಸ ಗಾಥೆಯನ್ನು ಕುತೂಹಲ ಮತ್ತು ಆಸಕ್ತಿಯಿಂದ ಅರ್ಥೈಸಿಕೊಳ್ಳುವರು.
ಯೂರೋಪಿಯನ್ನರ ಭೌಗೋಳಿಕ ಅನ್ವೇಷಣೆಗಳಿಗೆ ಬಹುಮುಖ್ಯ ಕಾರಣಗಳಾದ ವ್ಯಾಪಾರ, ಧರ್ಮಪ್ರಚಾರ, ಕುತೂಹಲ ಹಾಗೂ ಅರಬ್ಬರೊಂದಿಗೆ ಪೈಪೋಟಿಗಳು ಬಹು ಮುಖ್ಯ ಅಂಶಗಳಾಗಿದ್ದು ಈ ಸಂದರ್ಭದಲ್ಲಿ ವಿಜ್ಞಾನ ಮತ್ತು ಇಲ್ಲಿನ
ಸಂಶೋಧನೆಗಳು ಹೊಸ ಜಲಮಾರ್ಗ ಕಂಡು ಹಿಡಿಯುವಲ್ಲಿ ವಹಿಸಿದ ಪಾತ್ರವನ್ನು ಟನೆಗಳ ಮೂಲಕ ಅರ್ಥೈಸಿಕೊಳ್ಳುವರು.
ಉದಾ: - ನಾವಿಕರ ದಿಕ್ಸೂಚಿ
- ಅಸ್ಪ್ರೋಲೋಬ್, ನಕ್ಷೆಗಳು, ಭೂಪಟಗಳ ಸಂಶೋಧನೆಗಳು.
- ಭೂಮಿಯ ಗೋಳಾಕೃತಿ ತಿಳಿಯಿತು.
ಭೌಗೋಳಿಕ ಅನ್ವೇಷಣೆಗಳ ಹಿನ್ನಲೆಯಲ್ಲಿ ಬೆಳಕಿಗೆ ಬಂದ ಭೂಶೋಧನೆಗಳನ್ನು ಮಕ್ಕಳು ಹೆಚ್ಚು ಕುತೂಹಲದಿಂದ ನಾವಿಕರ ಸಾಹಸಗಳನ್ನು ಮೆಚ್ಚಿಕೊಂಡು ತಾವು ಸಾಹಸ ಪ್ರವೃತ್ತಿಯನ್ನು ರೂಪಿಸಿಕೊಳ್ಳುವಲ್ಲಿ ತೊಡಿಗಿಸಿಕೊಳ್ಳುವರು.
ಭೂ ಶೋಧನೆಗಳು ಪ್ರಾರಂಭದಲ್ಲಿ ವ್ಯಾಪಾರ, ಧರ್ಮಪ್ರಚಾರ, ಪೈಪೋಟಿಯ ಹಿನ್ನಲೆಯಲ್ಲಿ ಚಲಿಸಿ, ಮುಂದೆ ಬಲಾಡ್ಯ ರಾಷ್ಟ್ರಗಳು, ಅಬಲ ರಾಷ್ಟ್ರಗಳ ಮೇಲೆ ಸಾಮ್ರಾಜ್ಯಶಾಹಿ ಮತ್ತು ವಸಾಹತು ಶಾಹಿಯ ಪ್ರಾಭಲ್ಯವನ್ನು ಬೆಳಸಿದವಲ್ಲದೆ, ಐರೋಪ್ಯ ರಾಷ್ಟ್ರಗಳಲ್ಲಿ ಕಟ್ಟುಕೊಂಡ ಕೈಗಾರಿಕಾ ಕ್ರಾಂತಿಯಿಂದ ಬಡರಾಷ್ಟ್ರಗಳು ಮಾರುಕಟ್ಟೆ ಕೇಂದ್ರಗಳಾಗಿ ಬದಲಾಗತೊಡಗಿದವು ಎಂಬುದನ್ನು ಕಾರಣಗಳ ಮೂಲಕ ಅರ್ಥೈಸಿಕೊಳ್ಳುವರು.
ಚರ್ಚಿನ ಏಕಸ್ವಾಮ್ಯವನ್ನು ಪ್ರಶ್ನಿಸಿ ನಡೆದ ಬಂಡಾಯವೇ ಮತಸುಧಾರಣೆಯಾಗಿದ್ದು ಇದು ಹೊಸಯುಗದ ಉದಯಕ್ಕೆ ಹೇಗೆ ಕಾರಣವಾಯಿತು ಎಂಬುದನ್ನು ಇಂದಿನ ಧರ್ಮ, ಜಾತಿಯಿಂದ ಬಂದೊದಗಿರುವ ಅಪಾಯಕಾರಿ ಸಮಾಜದ ಸುಸ್ಥಿತಿಗೆ ತಮ್ಮ ಪಾತ್ರವೇನು ಎಂಬುದನ್ನು ಈ ಮೂಲಕ ತಿಳಿಯಲೆತ್ನಿಸುವರು.
ಚರ್ಚ್ನ ಏಕಸ್ವಾಮ್ಯವನ್ನು ಪ್ರಶ್ನಿಸಿದ ಮಾರ್ಟಿನ್ ಲೂಥರ್ ಕ್ಯಾಥೋಲಿಕ್ಕರ ಬೋಧನೆಗಳನ್ನು ಖಂಡಿಸಿ ಚರ್ಚ್ನ ಅಧಿಕಾರಗಳನ್ನು ಅವರ ಹಣದಾಹ, ಅಧಿಕಾರದಾಹ, ಬಳಸಿಕೊಳ್ಳುತ್ತಿದ್ದ ಕ್ಷಮಾಪಣೆ ಎಂಬ ಹುನ್ನಾರವನ್ನು ದಿಕ್ಕರಿಸಿ ಚರ್ಚ್ ಯಾರೊಬ್ಬರ ಸ್ವತ್ತಲ್ಲ. ಸರ್ವರನ್ನು ಸಮಾನತೆಯಿಂದ ಕಾಣುವ ಧರ್ಮ ಪ್ರಚಾರವೇ ಶ್ರೇಷ್ಠವಾದದ್ದು, ಎಂದು ೋಶಿಸಿ ಆ ಮೂಲಕ ಪ್ರಾಟಸ್ಟೆಂಟ್ ಎಂಬ ಅನುಯಾಯಿಗಳ ತಂಡದೊಂದಿಗೆ ಚರ್ಚ್ಗೆ ಹೊಸ ಭಾಷ್ಯ ಬರೆದ ಮಾರ್ಟಿನ್ ಲೂಥರ್ ಸಾಹಸ ಮತ್ತು ಧೈರ್ಯವನ್ನು ಮನದಲ್ಲಿ ಮೆಚ್ಚಿ ಅಂತಹ ಗುಣಗಳನ್ನು ತಮ್ಮಲ್ಲಿ ಬೆಳೆಸಿಕೊಳ್ಳುವರು.
ಮತ ಸುಧಾರಣೆಯಿಂದ ಕ್ರೈಸ್ತ ಮತದ ಅಖಂಡತೆಗೆ ಭಾರೀ ಪೆಟ್ಟುಬಿದ್ದಿತು. ಈ ಹಿನ್ನಲೆಯಲ್ಲಿ ವಿಟನೆಗೊಂಡ ಕ್ಯಾಥೋಲಿಕ್ ಅರ್ಥೋಡಾಕ್ಸ್ ಮತ್ತು ಪ್ರಾಟಸ್ಟಂಟ್ ಗುಂಪುಗಳು ಬೆಳೆಯತೊಡಗಿ ರಾಜರು ಸ್ವತಂತ್ರರಾಗತೊಡಗಿ ರಾಷ್ಟ್ರೀಯ ಪ್ರಭುತ್ವಗಳು ಉದಯವಾಗತೊಡಗಿದ ಸಂದರ್ಭವನ್ನು ಇತಿಹಾಸದ ಮಹತ್ವ ವರ್ತಮಾನದ ಜೀವಂತಿಕೆಯ ಮೇಲೆ ಉಂಟು ಮಾಡುವ ಪರಿಣಾಮವನ್ನು ಆಶ್ಚರ್ಯದಿಂದ ಗ್ರಹಿಸಿಕೊಳ್ಳುವರು.
ಮತ ಸುಧಾರಣೆಯಿಂದಾದ ಪ್ರಾಟಸ್ಟಂಟರ ಪ್ರಭಾವನ್ನು ತಪ್ಪಿಸಲು ಮತ್ತೆ ಕ್ಯಾಥೋಲಿಕ್ ಗುಂಪು ಚರ್ಚ್ನಲ್ಲಿ ಆಂತರಿಕವಾದ ಸುಧಾರಣೆಗಳನ್ನು ಪರಿಹಾರಗಳನ್ನು ತರುವ ಪ್ರಯತ್ನ ಪ್ರಾರಂಭಿಸಿತು. ಈ ಸಂಬಂಧ ಇಗ್ನೇಷಿಯಸ್ ಲಯೋಲ ಎಂಬುವನು `ಜೀಸಸ್' ಎಂಬ ಸೊಸೈಟಿಯನ್ನು ಹುಟ್ಟು ಹಾಕುವುದರ ಮೂಲಕ, ಕಳೆದು ಹೋಗುತ್ತಿರುವ ಕ್ಯಾಥೋಲಿಕ್ ಚರ್ಚ್ನ ಖ್ಯಾತಿಯನ್ನು ಕಟ್ಟುವ ಪ್ರಯತ್ನದ ಮಾನವ ಸಹಜಗುಣದ ವರ್ತನೆಗಳನ್ನು ತಮ್ಮ ಸಮಾಜದ ಸುತ್ತಲ ಜನರೊಂದಿಗೆ ಹೋಲಿಸಿ ಕೊಳ್ಳುವರು.
ವಸಾಹತುಗಳ ಸ್ಥಾಪನೆಯಿಂದ ವ್ಯಾಪಾರ ಹೆಚ್ಚಿ, ಸಿದ್ಧಪಡಿಸಿದ ವಸ್ತುಗಳಿಗೆ ಬೇಡಿಕೆ ಹೆಚ್ಚಿ ಲಾಭಗಳಿಕೆಯ ಪ್ರಮಾಣವು ಹೆಚ್ಚಾಗತೊಡಗಲು ಕಾರಣ ಉತ್ಪಾದನೆಯಲ್ಲಿ ಹೊಸ ವಿಧಾನಗಳು ಸಾರಿಗೆ ಕ್ಷೇತ್ರಗಳ ಬದಲಾಣೆಗಳೇ ಇಂಗ್ಲೇಡ್ನಲ್ಲೂ ಕಂಡುಬಂದುದರಿಂದ ಕ್ರಿ.ಶ. 1760 ರಿಂದ 1830ರ ವರೆಗಿನ ಈ ಅವಧಿ ಕೈಗಾರಿಕಾ ಕ್ರಾಂತಿಯುಗವೆಂದು ಪರಿಗಣಿಸಲ್ಪಟ್ಟ ವಿಜ್ಞಾನದ ಬೆಳವಣಿಗೆ ಹಿನ್ನಲೆಯ ಸಂದರ್ಭವನ್ನು ಉದಾಹರಣೆಗಳ ಮೂಲಕ ತಿಳಿಯುವರು.
ಉದಾ: ಸ್ಯಾಮ್ಯುಯಲ್ ಕ್ರಾಮ್ಟನ್ - ಮ್ಯೂಲ್ಯಂತ್ರ
ಎಲಿವಿಟ್ನ - ಕಾಟನ್ಜಿನ್
ಜೇಮ್ಸ್ವ್ಯಾಟ್ - ಹಾವಿಯಯಂತ್ರ
ಜಾರ್ಚ್ ಸ್ಟೀವನ್ಸನ್ - ರೈಲು ಬಂಡಿ ಇತ್ಯಾದಿ.
ಕೈಗಾರಿಕಾ ಕ್ರಾಂತಿಯಿಂದ ಯಂತ್ರಗಳ ಬೇಡಿಕೆ ಹೆಚ್ಚಿ, ಆಕ ಸಾಮಾಜಿಕ ಕ್ಷೇತ್ರಗಳಲ್ಲಿ ಬದಲಾವಣೆಗಳು ಉಂಟಾದವಲ್ಲದೆ ಹೊಸ ಕೈಗಾರಿಕೆಗಳು ಹುಟ್ಟುಕೊಂಡು ಉತ್ಪಾದನಾ ವೆಚ್ಚ ಕಡಿಮೆಯಾಗಿ ಜೀವನಾವಶ್ಯಕ ವಸ್ತುಗಳು ಅಗ್ಗವಾಗಿ ದೊರೆಯತೊಡಗಿ ಗುಡಿ ಕೈಗಾರಿಕೆಗಳು ನಾಶವಾಗತೊಡಗಿ ಸಮಾಜದಲ್ಲಿ ಲಾಭಾಂಶ, ಹಣ, ಕಾರ್ಮಿಕ, ಮಾಲಿಕರ ನಡುವೆ ಸಾಮಾಜಿಕ ಮತ್ತು ಆಕ ತಾರತಮ್ಯ ಉಂಟಾಗಲು ಇಂತಹ ಕ್ರಾಂತಿಗಳು ಕಾರಣವಾಗುವ ಸಂದರ್ಭವನ್ನು ತಾರ್ಕಿಕವಾಗಿ ಅರ್ಥೈಸಿಕೊಳ್ಳುವರು.
ಜ್ಞಾನ ಪುನರ್ರಚನೆಗಿರುವ ಅವಕಾಶಗಳು
- ಕ್ರಿ.ಶ. 1453ರ ಕಾನ್ಸ್ಟಾಂಟಿನೋಪಲ್ ಪತನದಿಂದಾಗಿ ಪ್ರಪಂಚದ ಇತಿಹಾಸದ 15 ಮತ್ತು 16ನೇ ಶತಮಾನ ಯೂರೋಪಿನಲ್ಲಿ ಪುನರುಜ್ಜೀವನ, ಭೌಗೋಳಿಕ ಅನ್ವೇಷಣೆ, ಧಾರ್ಮಿಕ ಸುಧಾರಣೆ, ಕೈಗಾರಿಕಾ ಕ್ರಾಂತಿಗೆ ಕಾರಣವಾದಂತೆಯೇ ಅಂದಿನ ಊಳಿಗಮಾನ್ಯ ಪದ್ದತಿಯ ಅವನತಿಗೂ ಕಾರಣವಾದುದನ್ನು ಸಾಮ್ರಾಜ್ಯಶಾಹಿ ಧೋರಣೆ ಇಂದಿನ ಟನಾವಳಿಗಳೊಂದಿಗೆ ತೌಲನಿಕ ಜ್ಞಾನವನ್ನು ಕಟ್ಟಿಕೊಳ್ಳುವರು.
ಉದಾ: - ಇಂದಿನ ಸಾಮ್ರಾಜ್ಯಶಾಹಿ ದೊರೆಗಳಂತೆ ಕಂಡು ಬರುತ್ತಿರುವ ಬಹುರಾಷ್ಟ್ರೀಯ ಕಂಪನಿಗಳ ಸ್ಥಾಪನೆ
- ಜ್ಞಾನಸ್ಪೋಟದ ಪರಿಣಾಮಗಳು
- ಚಂದ್ರ ಮತ್ತು ಮಂಗಳ, ಗುರು ಗ್ರಹಗಳ ಕುರಿತ ಅನ್ವೇಷಣೆ ಮತ್ತು ಹುಡುಕಾಟ
- ನಗರೀಕರಣ ವ್ಯವಸ್ಥೆ
- ವಿಶ್ವಭ್ರಾತೃತ್ವದ ಪರಿಕಲ್ಪನೆಗಳು
ಯೂರೋಪಿನಲ್ಲುಂಟಾದ ಪುನರುಜ್ಜೀವನ ಸಂದರ್ಭವು ಹೆಚ್ಚಾಗಿ ಮಾನವತವಾದ, ಶ್ರೇಷ್ಠಾನುಕರಣೆಗೆ, ಜನರನ್ನು ತರಲೆತ್ನಿಸಲು ಅಂದಿನ ಸಾಹಿತ್ಯ, ಕಲೆ, ವಾಸ್ತುಶಿಲ್ಪ ಮತ್ತು ವಿಜ್ಞಾನ ಪ್ರಮುಖ ಪಾತ್ರವನ್ನು ವಹಿಸಿದ ವಿಷಯವನ್ನು ಅರ್ಥೈಸಿಕೊಳ್ಳುವಾಗ ಮಕ್ಕಳು ಈ 21ನೇ ಶತಮಾನದಲ್ಲಿ ಹಾಗೂ ಈ ಎಲ್ಲ ಬುದ್ಧಿಜೀವಿಗಳ ವಿಜ್ಞಾನ, ಸಾಹಿತ್ಯ ಕಲೆಯ ಬೆಳವಣಿಗೆಯಲ್ಲಿ ಮಾನವತಾವಾದದ ಕೊರಗುವಿಕೆಗೆ ಕಾರಣಗಳೇನೆಂಬುದನ್ನು ಪ್ರಶ್ನಿಸಿ ಉದಾಹರಣೆ ಮೂಲಕ ಕಂಡುಕೊಳ್ಳುವರು.
ಉದಾ: - ಷೇಕ್ಸ್ಪಿಯರ್ ವಿರಚಿತ ನಾಟಕಗಳ ಪ್ರಸ್ತುತತೆ
- ಲಿಯೋನಾರ್ಡೋಡ ವಿಂಚಿಯ ಐಣ ಖಣಠಿಠಿಜಡಿ ಮೊನಲಿಸಾ ಕಲಾಕೃತಿಗಳು.
- ವಿಜ್ಞಾನದ ಆವಿಷ್ಕಾರದಿಂದಾಗಿರುವ, ದಿಕ್ಸೂಚಿ, ಆಸ್ಟ್ರೋಲೋಬ್ ಈಗಿನ ಉಪಗ್ರಹ, ಬಾಂಬ್ ಬಳಕೆ, ಶಸ್ತ್ರಾಸ್ತ್ರಗಳ ತಯಾರಿ ಇತ್ಯಾದಿ.
ಜಗತ್ತಿನಲ್ಲಿ ಜ್ಞಾನವೇ ಪ್ರಬಲವಾದುದು. ಈ ಜ್ಞಾನವು ಮಾನವನ ವಿಕಾಸಕ್ಕೆ ಪೂರಕವಾಗಿರುತ್ತದೆ. ಆದ್ದರಿಂದಲೇ ಯೂರೋಪಿನಲ್ಲಿ ಜ್ಞಾನ ಪುನರುಜ್ಜೀವನ ಸಂದರ್ಭದಿಂದಾಗಿ ಇಡೀ ವಿಶ್ವದಲ್ಲಿಯೇ ವೈಜ್ಞಾನಿಕ ದೃಷ್ಟಿ ಬೆಳೆಯಿತು. ಸಾಗರ ಮಾರ್ಗಗಳ ಶೋಧನೆ, ತಂತ್ರಜ್ಞಾನ, ಕೈಗಾರಿಕಾಕ್ರಾಂತಿ ಹೊಸ ಚಿಂತನೆಗಳು, ಧಾರ್ಮಿಕ ಸುಧಾರಣೆಗಳಿಗೆ ನಾಂದಿಯಾಯಿತು ಎಂಬುದನ್ನು ತಿಳಿದುಕೊಂಡು ತಮ್ಮ ಜೀವನದಲ್ಲಿಯೂ ಜ್ಞಾನದ ಮಹತ್ವವೇನು. ಇಂತಹ ಜ್ಞಾನವನ್ನು ಕಟ್ಟಿಕೊಳ್ಳಲು ತಮ್ಮ ಪಾತ್ರವೇನು ಎಂಬುದನ್ನು ಗ್ರಹಿಸಿಕೊಳ್ಳುವರು.
ಭೂ ಅನ್ವೇಷಣೆಗಳಿಂದಾಗಿ 15 ಮತ್ತು 16ನೇ ಶತಮಾನದಲ್ಲಿ ಹೊಸ ಖಂಡಗಳಾದ ಉತ್ತರ ಅಮೇರಿಕಾ, ದಕ್ಷಿಣ ಅಮೇರಿಕಾ, ಆಸ್ಟ್ರೇಲಿಯಾ ಮುಂತಾದ ಹೊಸ ಹೊಸ ಪ್ರದೇಶಗಳ ಪರಿಚಯವಾಯಿತು. ಈ ಹಿನ್ನಲೆಯಲ್ಲಿ ಸಾಹಸಮಯ ಪ್ರವೃತ್ತಿಯಿಂದ ಮನುಷ್ಯನು ಕಂಡು ಹಿಡಿದ ಹೊಸ ಖಂಡಗಳ ಪರಿಚಯವನ್ನು ಮಕ್ಕಳು ಮಾಡಿಕೊಳ್ಳುವುದರೊಂದಿಗೆ ತಮ್ಮ ಜೀವನದಲ್ಲಿ ಸಾಹಸ ಹಾಗೂ ಸಂಶೋಧನಾತ್ಮಕ ಗುಣಗಳನ್ನು ತಮ್ಮದಾಗಿಸಿಕೊಳ್ಳುವರು.
ಭೂ ಶೋಧನೆಗಳಿಂದಾಗಿ, ವಸಾಹತುಶಾಹಿ ಮತ್ತು ಸಾಮ್ರಾಜ್ಯಶಾಹಿ ಬೆಳವಣಿಗೆಗಳು ಅಸ್ತಿತ್ವಕ್ಕೆ ಬಂದು ಮುಂದೆ ಮಾನವ ಸಹಜ ಸ್ವಾತಂತ್ರ್ಯವನ್ನು ಕಳೆದುಕೊಂಡಂತಾಗಿ ಶ್ರೀಮಂತ ಹಾಗೂ ಬಡ ರಾಷ್ಟ್ರಗಳೆಂಬ ವೈಷಮ್ಯ, ತಾರತಮ್ಯ ಉಂಟಾಗಿ ಇಂದಿನ ಜಗತ್ತಿನ ಸ್ಥಿತಿಗೆ ಕಾರಣವಾಯಿತೆಂಬುದನ್ನು ತಿಳಿದುಕೊಂಡು ಸಾಮ್ರಾಜ್ಯಶಾಹಿ ಧೋರಣೆಯನ್ನು ಖಂಡಿಸುವರು.
ಚರ್ಚ್ನ ಏಕಸ್ವಾಮ್ಯವನ್ನು ಪ್ರಶ್ನಿಸುತ್ತಾ ಹುಟ್ಟಿಕೊಂಡ ಮತಸುಧಾರಣೆ ಮಾರ್ಟಿನ್ ಲೂಥರ್ನ ನೇತೃತ್ವದಲ್ಲಿ ಧಾರ್ಮಿಕ ವಿಚಾರಗಳ ಬಗ್ಗೆ ಹೊಸಯುಗದ ಉದಯಕ್ಕೆ ಕಾರಣವಾದುದನ್ನು ತಿಳಿದುಕೊಂಡ ಮಕ್ಕಳು ತಮ್ಮ ಅಂತರಾಳದಲ್ಲಿ ವೈಜ್ಞಾನಿಕ ದೃಷ್ಟಿ ಕುತೂಹಲ ಸಮಾನತೆಯ ಅಂಶಗಳೆಂಬ ಮೌಲ್ಯಗಳನ್ನು ಗ್ರಹಿಸುವರು.
ಯೂರೋಪಿನಲ್ಲಿ ಸುಮಾರು 30 ವರ್ಷಗಳ ಕಾಲ ಕ್ಯಾಥೋಲಿಕ್ ಮತ್ತು ಪ್ರಾಟಿಸ್ಟಂಟರ ನಡುವೆ ನಡೆದ ಧಾರ್ಮಿಕ ಕಲಹ ದ್ವೇಶ, ಹೋರಾಟ, ಕಿರುಕುಳ, ಅಂಧಕಾರತ್ವಕ್ಕೆ ಕಾರಣವಾಗಿ, ಜನರಲ್ಲಿನ ಧಾರ್ಮಿಕ ಮನಸ್ಸುಗಳ ಅಶಾಂತಿಗೆ ನಾಂದಿಯಾಗಿ ಪ್ರಗತಿ ಶೂನ್ಯವಾಗುತ್ತದೆ. ಈ ರೂಪದ ಟನೆಗಳು ಬಹುಮತೀಯ ರಾಷ್ಟ್ರವಾಗಿರುವ ನಮ್ಮ ಭಾರತದಲ್ಲಿ ಬಹು ಹಿಂದಿನಿಂದಲೂ ನಡೆದುಕೊಂಡು ಬಂದಿದ್ದು ಅಂತಹ ಟನೆಗಳು ಮರುಕಳಿಸದಂತೆ ತಡೆಯಲು ತಮ್ಮ ಜವಾಬ್ದಾರಿ ಏನೆಂಬ ಜ್ಞಾನವನ್ನು ಕಟ್ಟುಕೊಳ್ಳುವರು.
ಉದಾ: ಸಿಕ್ ನರಮೇಧ
ಗೋದ್ರಾ ನರಮೇಧ, ಕ್ರೈಸ್ತರ ಚರ್ಚ್ಗಳ ಮೇಲಿನ ದಾಳಿ.
ಬಹು ಸೂಕ್ಷ್ಮವೆನಿಸಿಕೊಂಡಿರುವ ಧಾರ್ಮಿಕ ಅಪಮಾನತೆಗಳು, ಸಮಾಜದ ಏಕತೆಗೆ ಕುಂದುಂಟು ಮಾಡಿ, ಧಾರ್ಮಿಕ ಟನೆಗಳಿಗೆ ಕಾರಣವಾದ ಕ್ಯಾಥೋಲಿಕ್, ಪ್ರಾಟಿಸ್ಟಂಟ್ ಮತ್ತು ಆರ್ಥೋಡಾಕ್ಸ್ ಚರ್ಚ್ಗಳು ಹುಟ್ಟಿಕೊಂಡ ಈ ಟನೆ ಭಾರತದಂತಹ ರಾಷ್ಟ್ರಗಳಲ್ಲಿ ಇಲ್ಲಿನ ಅಖಂಡತೆಯನ್ನು ಎತ್ತಿಹಿಡಿಯುವ ಬದಲಾಗಿ ಇತ್ತೀಚೆಗೆ ಹಿಂದುಗಳೇ ಹಿಂದು ಧರ್ಮದಲ್ಲಿನ ಆಚರಣೆಗಳನ್ನು ಅನುಸರಿಸಲಾರದೆ ಮೇಲ್ಜಾತಿಯವರ ಕಪಿಮುಷ್ಟಿಯಿಂದ ಬಿಡಿಸಿಕೊಳ್ಳಲಾಗದೆ ಹಿಂದೂ ಧರ್ಮದಿಂದಲೇ ಮತಾಂತರಗೊಳ್ಳುವುದಕ್ಕೆ ಕಾರಣವೇನೆಂಬ ಜ್ಞಾನವನ್ನು ತಿಳಿದುಕೊಳ್ಳುವರು.
ಚರ್ಚಿನ ವಿಟನೆಯಿಂದ ಕ್ಯಾಥೋಲಿಕ್ ತಮ್ಮ ಪ್ರಭಾಲ್ಯವನ್ನು ಕಳೆದುಕೊಳ್ಳತೊಡಗಿದಾಗ, ಇಗ್ನೇಷಿಯಸ್ ಲಯೋಲ ಎಂಬಾತನ ನೇತೃತ್ವದಲ್ಲಿ `ಜೀಸಸ್' ಎಂಬ ಸೊಸೈಟಿ ಹುಟ್ಟಿಕೊಂಡು ಕ್ಯಾಥೋಲಿಕ್ ಚರ್ಚ್ನ ಕಳೆದು ಹೋದ ವೈಭವವನ್ನು ಮರಳಿ ಸ್ಥಾಪಿಸಲು ಯತ್ನಿಸಿದ ಸಂದರ್ಭದಿಂದ ಮಕ್ಕಳು ಮಾನವನ ಪಾರಂಪರಿಕ ಮನಸ್ಸು ತನ್ನ ಮೂಲ ನೆಲೆಯನ್ನು ಕಂಡುಕೊಳ್ಳಲು ಏನೆಲ್ಲಾ ಪ್ರಯತ್ನ/ಹೋರಾಟವನ್ನು ಇನ್ನಿಲ್ಲದಂತೆ ಮಾಡಬೇಕಾಗುತ್ತದೆ. ಹಾಗಾದ ಹೊಸದೊಂದನ್ನು ದಿಕ್ಕರಿಸಲು ಹವಣಿಸುವ ಹುನ್ನಾರದ ಮನಸ್ಥಿತಿಯನ್ನು ಅರ್ಥೈಸಿಕೊಂಡು ಪ್ರಸ್ತುತ ಸಂದರ್ಭದಲ್ಲಿಯೂ ಕೆಲವು ಧರ್ಮಗಳ ಕಠಿಣವಾದ ಆಚರಣೆಗಳೇ ಈ ರೂಪದ ವಿಟನೆಗಳಿಗೆ ಹೇಗೆ ಕಾರಣವಾಗುತ್ತಿದೆ ಎಂಬುದನ್ನು ಹೋಲಿಸುವ ಸಾಮಥ್ರ್ಯದ ಜ್ಞಾನವನ್ನು ಕಟ್ಟುಕೊಳ್ಳುವರು.
ಉದಾ: ದಯಾನಂದ ಸರಸ್ವತಿಯವರ `ವೇದಗಳಿಗೆ ಹಿಂತಿರುಗಿ' ೋಷಣೆ.
18ನೇ ಶತಮಾನದ ವಸಾಹತುಗಳ ಸ್ಥಾಪನೆ, ಕೈಗಾರಿಕಾ ಕ್ರಾಂತಿಯಂತಹ ಟನೆಗೆ ಕಾರಣವಾಗಿ ವೈಜ್ಞಾನಿಕ ಸಿದ್ಧ ವಸ್ತುಗಳ ಬೇಡಿಕೆ. ಪೂರೈಕೆಗಳಿಂದಾಗಿ ಗುಡಿ ಕೈಗಾರಿಕೆಗಳು ಅವನತಿಯ ಹಾದಿ ಹಿಡಿದ ಸಂದರ್ಭವನ್ನು ಗ್ರಹಿಸಿದ ಮಕ್ಕಳು ಗೃಹ ಕೈಗಾರಿಕೆಗಳ ವಿನಾಶವನ್ನು ಪಡೆಯುವಲ್ಲಿ ನಮ್ಮ ಮುಂದಿನ ಸವಾಲುಗಳೇನೆಂಬ ಜ್ಞಾನವನ್ನು ಕಟ್ಟುಕೊಳ್ಳುವರು.
ಇತ್ತೀಚೆಗೆ ಜಗತ್ತಿನಾದ್ಯಂತ ಸ್ಥಾಪನೆಯಾಗುತ್ತಿರುವ ಬೃಹತ್ ಕೈಗಾರಿಕೆಗಳಿಂದ ನಿರಂತರವಾಗಿ ಬಂಡವಾಳಶಾಹಿ ವರ್ಗವು ಉದಯವಾಗುತ್ತಲಿದ್ದು, ಅನೇಕ ರೀತಿಯ ವರ್ಗ ಸಂರ್ಷಗಳುಂಟಾಗುವುದಲ್ಲದೆ ಪರಿಸರ ಮಾಲಿನ್ಯ, ಜಲಮಾಲಿನ್ಯ, ಶಬ್ದಮಾಲಿನ್ಯ ಇನ್ನಿತರ ರೋಗರುಜಿನಗಳಿಗೆ ಕಾರಣವಾಗಿ ಗುಡಿಕೈಗಾರಿಕೆಗಳು ಕಳೆಗುಂದಿರುವ ಹಿನ್ನಲೆಯಲ್ಲಿ ವೈಜ್ಞಾನಿಕ ಆವಿಷ್ಕಾರದ ಯಂತ್ರಬಳಕೆಯ ಈ ಬೃಹತ್ ಕೈಗಾರಿಕೆಗಳನ್ನು ಹಾಗೂ ಅವುಗಳ ಸ್ಥಾಪನೆಯನ್ನು ಮಕ್ಕಳು ಪ್ರತಿರೋಧ ವ್ಯಕ್ತಪಡಿಸುವ ಸಾಮಥ್ರ್ಯ ಕಲ್ಪಿಸಿಕೊಳ್ಳುವರು.
ನಿರಂತರ ಮತ್ತು ವ್ಯಾಪಕ ಮೌಲ್ಯ ಮಾಪನಕ್ಕಿರುವ ಅವಕಾಶಗಳು
ಪ್ರಶ್ನಾವಳಿಗಳ ಮೂಲಕ ಪುನರುಜ್ಜೀವನ, ಭೌಗೋಳಿಕ ಅನ್ವೇಷಣೆ, ಧಾರ್ಮಿಕ ಸುಧಾರಣೆ ಹಾಗೂ ಕೈಗಾರಿಕಾ ಕ್ರಾಂತಿಗಳಿಗೆ ಕಾರಣಗಳನ್ನು ಪಟ್ಟಿ ಮಾಡುವುದು.
ಚಿತ್ರಪಟಗಳನ್ನು ಪ್ರದರ್ಶಿಸುವುದರ ಮೂಲಕ ಜ್ಞಾನವನ್ನು ಸಂಗ್ರಹಿಸುವುದು.
ಕ್ಯಾಥೋಲಿಕ್ ಮತ್ತು ಪ್ರಾಟಿಸ್ಟಂಟ್ ಚರ್ಚ್ಗಳ ಧೋರಣೆಯನ್ನು ಗುಂಪುಗಳ ಮೂಲಕ ಚರ್ಚಿಸುವುದು.
ಪುನರುಜ್ಜೀವನ ಕಾಲದ ಸಾಹಿತ್ಯ, ಕಲೆ ಮತ್ತು ವಿಜ್ಞಾನಗಳನ್ನು ಕುರಿತು ಲಿಖಿತ ಪರೀಕ್ಷೆ ಆಯೋಜಿಸುವುದು.
(ಸೂಚನೆ : ಮಕ್ಕಳಿಗೆ ಪುಸ್ತಕನೀಡಿ ಓದಲು ಸೂಚಿಸುವುದು)
ಕೈಗಾರಿಕಾ ಕ್ರಾಂತಿಗೆ ಸಂಬಂಧಿಸಿದಂತೆ ಮೌಖಿಕ ಪರೀಕ್ಷೆಯ ಪ್ರಶ್ನೆಗಳನ್ನು ಜ್ಞಾನ ಪುನರ್ರಚನೆಗೆ ಸಂಬಂಧಿಸಿದ ಪ್ರಶ್ನೆ ಕೋಠಿಯನ್ನು ತಯಾರಿಸಿಕೊಳ್ಳುವುದು.
ಉದಾ: ಬೃಹತ್ ಕೈಗಾರಿಕೆಗಳನ್ನು ಪ್ರತಿರೋಧಿಸಲು ಕಾರಣಗಳೇನೆಂಬುದನ್ನು ಮಕ್ಕಳಿಂದ ಹೇಳಿಸುವುದು.
ಮಿಂಚು ಪಟ್ಟಿಗಳ ಬಳಕೆಯ ಮೂಲಕ ಮಕ್ಕಳು ಕಟ್ಟಿಕೊಂಡ ಜ್ಞಾನವನ್ನು ಪರೀಕ್ಷಿಸುವುದು.
ಉದಾ : ಮಾರ್ಟಿನ್ ಲೂಥರ್ - ಮತಸುಧಾರಣೆ
ಇಗ್ನೇಶಿಯಸ್ ಲಯೋಲ - ಪ್ರತಿ ಸುಧಾರಣೆ
ಹೊಂದಿಸಿ ಬರೆಯುವ ವಿಧಾನ
ಉದಾ : ಲೇಖಕರ ಪಟ್ಟಿ - ಕೃತಿಗಳ ಪಟ್ಟಿ
ವೀಕ್ಷಣಾ ವಿಧಾನ
- ಮಕ್ಕಳೊಂದಿಗೆ ಚರ್ಚ್ಗಳಿಗೆ ಭೇಟಿ ನೀಡುವುದು.
ಈ ಮೂಲಕ ಪ್ರಾಟಿಸ್ಟಂಟ್ ಮತ್ತು ಕ್ಯಾಥೋಲಿಕ್ ಚರ್ಚ್ ನಡುವಿನ ವ್ಯತ್ಯಾಸ ಗ್ರಹಿಸುವುದು.
ನಕ್ಷೆ ಮತ್ತು ಭೂಪಟಗಳನ್ನು ಬಳಸಿ ಪ್ರದೇಶಗಳನ್ನು ಗುರುತಿಸುವುದು.
ಉದಾ: ಇಟಲಿ, ಇಂಗ್ಲೆಂಡ್ ಗುಡ್ಹೋಪ್ ಭೂಶಿರ, ಅರಬ್ಬೀ ಸಮುದ್ರ. ಪನಾಮ ಕಾಲುವೆ ಇತ್ಯಾದಿ.
ಪಠ್ಯಪುಸ್ತಕದ ಪೂರ್ಣ ಟಕಾವಲೋಕನ ಕ್ರಮ
ಭೌಗೋಳಿಕ ಅನ್ವೇಷಣೆಯನ್ನು ಕುರಿತ ಯೋಜನೆಯನ್ನು ತಯಾರಿಸುವುದು.
ತರಗತಿಯಲ್ಲಿ ಸರ್ವ ಧರ್ಮ ಸಮನ್ವಯ ಬಿಂಬಿಸುವಂತಹ ಕಥೆ, ನಾಟಕ, ಟನೆಗಳನ್ನು ಸಂಗ್ರಹಿಸುವುದು.
ಉದಾ: - ಸುದ್ಧಿ ಮಾಧ್ಯಮಗಳ ಮೂಲಗಳಿಂದ ಮಗು ತನ್ನ ಸುತ್ತ ನಡೆದ ಈ ತರದ ಟನೆಗಳನ್ನು ತರಗತಿಯಲ್ಲಿ ಹೇಳುವುದು.
- ಚಿತ್ರಪಟಗಳ ರಚನೆ
- ಚರ್ಚಾಸ್ಪರ್ಧೆ
- ಆಶುಭಾಷಣ ಸ್ಪರ್ಧೆ ಏರ್ಪಾಟು ಮಾಡುವುದು.
ಕಲಿಕೆಯನ್ನು ಅನುಕೂಲಿಸುವ ವಿಧಾನಗಳು
ಪ್ರಶ್ನೋತ್ತರ ವಿಧಾನ: ಮಕ್ಕಳಿಗೆ ಟಕವನ್ನು ಅವಲೋಕನ ಮಾಡಲು ಮೊದಲೇ ಸೂಚಿಸಿ ತರಗತಿಯ ಸಂದರ್ಭದಲ್ಲಿ ಪ್ರಶ್ನೆಗಳನ್ನು ಮಕ್ಕಳ ಸಾಮಥ್ರ್ಯಕ್ಕನುಗುಣವಾಗಿ ಕೇಳಿ ಉತ್ತರಗಳನ್ನು ಪಡೆದುಕೊಳ್ಳುತ್ತಾ ಟಕದ ಬಗ್ಗೆ ಕುತೂಹಲ ಮೂಡುವಂತೆ ಮಾಡುವುದು.
ಉದಾ: ಭೌಗೋಳಿಕ ಸಂಶೋಧನೆಗಳು (ಟಕ) ಪ್ರಶ್ನಿಸಿ ಅಮೇರಿಕಾ ಎಂದು ಹೆಸರು ಬರಲು ಕಾರಣವೇನು?
ಸಮಸ್ಯಾ ಪರಿಹಾರ ವಿಧಾನ: ಪ್ರಸ್ತುತ ಸಮಸ್ಯೆಗಳನ್ನು ಎತ್ತಿಹಿಡಿದು ತಾವು ಕಲಿಯುತ್ತಿರುವ ಟಕದ ಹಿನ್ನಲೆಯಲ್ಲಿ ಪರಿಹಾರ ಕಂಡುಕೊಳ್ಳುವಂತಹ ವಿಧಾನವನ್ನು ಅನುಕೂಲಿಸುವುದು.
ಉದಾ: ಟಕ (ಕೈಗಾರಿಕಾ ಕ್ರಾಂತಿ)
ಸಮಸ್ಯೆ : ಪರಿಸರ ಮಾಲಿನ್ಯ
ಪರಿಹಾರ : ಗೃಹ ಕೈಗಾರಿಕೆ ಮತ್ತು ಸಣ್ಣ ಕೈಗಾರಿಕೆಗಳಿಗೆ ಪ್ರೋತ್ಸಾಹ
ಸಮಸ್ಯೆ : ನಗರೀಕರಣ
ಪರಿಹಾರ : ಕೈಗಾರಿಕಾ ವಿಕೇಂದ್ರೀಕರಣ
ವಿಶ್ಲೇಷಣಾ ವಿಧಾನ: ಟಕಕ್ಕೆ ಸಂಬಂಧಿಸಿದಂತೆ ಹೆಚ್ಚಿನ ಜ್ಞಾನವನ್ನು ಮಕ್ಕಳಿಗೆ
ಉದಾ: ಕೆಪ್ಲರ್ ನಿಯಮ
ನ್ಯೂಟನ್ ನಿಯಮದ ಜೊತೆಗೆ
ಶರೀರ ಶಾಸ್ತ್ರ ವಿಚಾರಗಳು, ಕೊಪರ್ನಿಕಸ್,
ಟಾಲ್ಸ್ಟಾಯ್, ಥಾಮಸ್ ಅಲ್ವ ಎಡಿಸನ್ ವಿಚಾರಗಳನ್ನು ಪ್ರಸ್ತುತಪಡಿಸುವುದು.
ಚರ್ಚಾ ವಿಧಾನ: ತರಗತಿಗಳಲ್ಲಿ ಗುಂಪುಗಳನ್ನು ಮಾಡಿ ಒಂದೊಂದು ಗುಂಪಿಗೂ ಒಂದು ಅಂಶವನ್ನು ಚರ್ಚಿಸಲು ತಿಳಿಸುವುದು.
ಉದಾ: ಜ್ಞಾನ ಪುನರುಜ್ಜೀವನ
ಧಾರ್ಮಿಕ ಸುಧಾರಣೆ
ಪ್ರತಿ ಸುಧಾರಣೆ.
ಸಂಪನ್ಮೂಲಗಳ ಕ್ರೂಢೀಕರಣ
- 9ನೇ ತರಗತಿ ಪಠ್ಯ ಪುಸ್ತಕ
- ಯೂರೋಪಿನ ಇತಿಹಾಸ ಟಿ. ಪಾಲಾಕ್ಷ, ಅಕಬರಾಲಿ
- ಚಿತ್ರದಲ್ಲಿ ಚರಿತ್ರೆ
- ಅಂತರ್ಜಾಲ
- ವಿಶ್ವಕೋಶಗಳು
- ಪಿ.ಪಿ.ಟಿ. ತಯಾರಿಕೆ
- ವಿಜ್ಞಾನಿ, ಸಾಹಿತ್ಯ, ಕಲಾವಿದರುಗಳು, ಚರ್ಚ್ ಮಾದರಿ ಚಿತ್ರ ಸಂಪುಟ
- ಪ್ರಶ್ನಾವಳಿಗಳ ತಯಾರಿಕೆ ಉದಾ: ಮೌಖಿಕ ಪರೀಕ್ಷೆ
- ಸಮಸ್ಯೆಗಳನ್ನು ಗುರುತಿಸಿರುವ ಮಿಂಚುಪಟ್ಟಿ
- ತರಗತಿಯಲ್ಲಿ ಗುಂಪು ರಚನೆ
ಬೋಧನೋಪಕರಣಗಳು
- ಪ್ರಪಂಚದ ಭೂಪಟ
- ಯೂರೋಪ್ ಖಂಡದ ಭೂಪಟ
- ವಿಜ್ಞಾನಿ ಮತ್ತು ಬರಹಗಾರರ ಚಿತ್ರಪಟಗಳು
- ಪರಿಸರ ಮಾಲಿನ್ಯ ತೋರಿಸುವ ಅಂತರ್ಜಾಲ ಚಿತ್ರಗಳು
- ಮೊನಲಿಸಾ ಚಿತ್ರಪಟ
- ಮಿಂಚು ಪಟ್ಟಿಗಳು
- ಹೋಲಿಕೆ ವ್ಯತ್ಯಾಸಗಳ ಪಟ್ಟಿ
- ಗುರುತ್ವಾಕರ್ಷಣ ನಿಯಮದ ಚಿತ್ರ
- ಹಡಗಿನ ಚಿತ್ರ
- ದಿಕ್ಸೂಚಿ ಮತ್ತು ಆಸ್ಟ್ರೋಲ್ಯಾಬ್ ಮಾದರಿಗಳು
ಮನನ ಮಾಡಿಕೊಳ್ಳಲೇ ಬೇಕಾದ ಅಂಶಗಳು
- ಜ್ಞಾನ ಪುನರುಜ್ಜೀವನ ಅರ್ಥ ಮತ್ತು ಪ್ರಾಮುಖ್ಯತೆ
- ಪುನರುಜ್ಜೀವನಕ್ಕೆ ಕಾರಣವಾದ ಅಂಶಗಳು
- ಧಾರ್ಮಿಕ ಅಸಮತೋಲನದಿಂದಾಗುವ ಪರಿಣಾಮಗಳು
- ಭೌಗೋಳಿಕ ಸಂಶೋಧನೆಗೆ ಕಾರಣಗಳು
- ಭೂ ಶೋಧನೆ ಪರಿಣಾಮಗಳು
- ವಸಾಹತುಶಾಹಿ ಮತ್ತು ಸಾಮ್ರಾಜ್ಯ ಶಾಹಿ ಸ್ಥಾಪನೆಗೆ ಕಾರಣ ಪರಿಣಾಮಗಳು.
- ವೈಜ್ಞಾನಿಕ ಸಂಶೋಧನೆ ಮತ್ತು ಪರಿಣಾಮಗಳು.
- ಕೈಗಾರಿಕಾ ಕ್ರಾಂತಿ ಮತ್ತು ನಗರೀಕರಣ
- ಗುಡಿ ಕೈಗಾರಿಕೆಗಳ ಪ್ರಾಮುಖ್ಯತೆ.
- ಗುಡಿ ಕೈಗಾರಿಕೆಗಳ ವಿನಾಶಕ್ಕೆ ಕಾರಣಗಳು
- ಸಮಾಜದ ವರ್ಗ ವ್ಯವಸ್ಥೆಗೆ ಕಾರಣಗಳು
- ಚರ್ಚ್ ಏಕಸ್ವಾಮ್ಯದ ವಿರುದ್ಧದ ನಿಲವುಗಳು
- ಸಾಮ್ರಾಜ್ಯಶಾಹಿ ಧೋರಣೆಯ ವಿರುದ್ಧದ ನಿಲುವುಗಳು.
ಉದಾಹರಣೆ: 4
ಜ್ಞಾನ ರಚನೆಗೆ ಇರುವ ಅವಕಾಶಗಳು:
- ಭಾರತದ ಮತ ಪ್ರವರ್ತಕರುಗಳ ಪರಿಚಯ
- ಮತ ಪ್ರವರ್ತಕರುಗಳು ಪ್ರತಿಪಾದಿಸಿದ ತತ್ವಗಳು
- ಭಾರತದ ಮತ ಪ್ರವರ್ತಕರ ಬೋಧನೆಗಳು
- ಶಂಕರಾಚಾರ್ಯರ ಜೀವನ ಮತ್ತು ಆದರ್ಶಗಳು
- ಮಧ್ವಾಚಾರ್ಯರ ಜೀವನ ಮತ್ತು ಬೋಧನೆಗಳು
- ರಾಮಾನುಜಾಚಾರ್ಯರ ಹುಟ್ಟು ಮತ್ತು ಚಿಂತನೆಗಳು
- ಬಸವಣ್ಣನವರ ಬದುಕು, ಬರಹ, ಆಡಳಿತ ಮತ್ತು ಆಚರಣೆಗಳು.
- ಮತ ಪ್ರವರ್ತಕರು ಪ್ರತಿಪಾದಿಸಿದ ಸಿದ್ಧಾಂತಗಳು
ವಿಮರ್ಶಾಯುಕ್ತ ಶಿಕ್ಷಣ ಕ್ರಮ ಅಳವಡಿಕೆಗೆ ಇರುವ ಅವಕಾಶಗಳು:
- ಭಾರತದಲ್ಲಿ 9 ರಿಂದ 14ನೇ ಶತಮಾನದಲ್ಲಿ ಆದಂತಹ ವೈಚಾರಿಕ ಆಂದೋಲ ಸನಾತನ ಧರ್ಮದೊಳಗಿನ ಜಾತಿ, ಸಂಪ್ರದಾಯ ಮತ್ತು ದರ್ಶನಗಳನ್ನು ಅರ್ಥೈಸಿಕೊಂಡ ಹಿನ್ನಲೆಯಲ್ಲಿ ಹುಟ್ಟಿಕೊಂಡ ಭಾವನೆಗಳೇಂಬುದನ್ನು ವಿಮರ್ಶಾಯುಕ್ತವಾಗಿ ವ್ಯಾಖ್ಯಾನಿಸುವುದು.
- ಭಾರತೀಯ ಧಾರ್ಮಿಕ ಕ್ಷೇತ್ರದಲ್ಲಿನ ತತ್ವ ಸಂಪತ್ತು, ಅಭಿವ್ಯಕ್ತಿ, ಸ್ವಾತಂತ್ರ್ಯ ಹಾಗೂ ಧಾರ್ಮಿಕ ಸುಧಾರಣೆಯ ಆಂದೋಲನಗಳು ಧರ್ಮ ಸುಧಾರಕರ ವೈವಿಧ್ಯಮಯ ದೃಷ್ಟಿಕೋನಗಳಿಂದ ಹೊಸ ಪಂಥವಾದ ಭಕ್ತಿ ಚಳುವಳಿ ಉದಯವಾಗಲು ಕಾರಣವಾದ ಸನ್ನಿವೇಶಗಳನ್ನು ಅರ್ಥೈಸಿಕೊಳ್ಳುವರು.
- ಅ್ವತ ಸಿದ್ಧಾಂತವನ್ನು ಪ್ರತಿಪಾದಿಸಿದ ಶಂಕರಾಚಾರ್ಯರು `ಈ ಜಗತ್ತಿಗೆ ಬ್ರಹ್ಮನೊಬ್ಬನೇ ಸತ್ಯ, ಉಳದದ್ದು ಮಿತ್ಯ. ಜೀವನು ಮತ್ತು ಬ್ರಹ್ಮನು ಬೇರೆಯಲ್ಲ' ಎಂಬ ನಿರೂಪಣೆಯನ್ನು ತಮ್ಮ ಆಳವಾದ ಆಧ್ಯಯನದ ಮೂಲಕ ಪ್ರತಿಪಾದಿಸಿದುದನ್ನು ಜ್ಞಾನ ಮಾರ್ಗದ ಬೋಧನೆಗಳ ಅಡಿಯಲ್ಲಿ ಅರ್ಥೈಸಿಕೊಳ್ಳುವರು.
- ಜನಸಾಮಾನ್ಯರಿಗೆ ಮುಕ್ತಿ ಮಾರ್ಗವನ್ನು ತೋರಿಸುವ ಹಿನ್ನಲೆಯಲ್ಲಿ ಮುಂದೆ ಬಂದ ರಾಮಾನುಜಾಚಾರ್ಯರು ಭಕ್ತಿ ತತ್ವಕ್ಕೆ ಪ್ರಾಧಾನ್ಯತೆ ನೀಡುವುದರೊಂದಿಗೆ, ಜೀವ ಮತ್ತು ಪ್ರಕೃತಿ ಬ್ರಹ್ಮನ ಅಧೀನ, ಇದರಿಂದ ಆತ್ಮ, ಪರಮಾತ್ಮ ಏಕಕಾಲದಲ್ಲಿ ಒಂದಾಗಲು ಸಾಧ್ಯವೇ ಇಲ್ಲ ಎಂದು ಪ್ರತಿಪಾದಿಸಿ ಜಾತಿ ಪದ್ಧತಿಯನ್ನು ಖಂಡಿಸುತ್ತಾ ಭಗವಂತನಿಗೆ ಶರಣಾಗತಿಯೆ ಮೋಕ್ಷ ಪಡೆಯುವ ಮಾರ್ಗ ಎನ್ನುವ ರಾಮಾನುಜಾಚಾರ್ಯರ ವಿಶಿಷ್ಟಾ್ವತ ಸಿದ್ಧಾಂತವನ್ನು ಮುಕ್ತಿಮಾರ್ಗದ ಚೌಕಟ್ಟಿನಲ್ಲಿ ಗ್ರಹಿಸುವರು.
- ್ವತ ಸಿದ್ಧಾಂತವನ್ನು ಪ್ರತಿಪಾದನೆ ಮಾಡಿದ ಮಧ್ವಾಚಾರ್ಯರು ತಮ್ಮ ಆಳವಾದ ಧರ್ಮಶಾಸ್ತ್ರಗಳ ಅಧ್ಯಯನದ ಜ್ಞಾನದಿಂದಾಗಿ ಸ್ವತಂತ್ರ ವಿಚಾರ ಶಕ್ತಿಯನ್ನು ಬಳಸಿಕೊಂಡು, "`ಜೀವ' ಮತ್ತು `ಪರಮಾತ್ಮ' ಬೇರೆ ಬೇರೆ, ಈ ಜಗತ್ತು ಯಾವತ್ತೂ ಮಾಯೆಯಲ್ಲ ಅದು ಪರಮಾತ್ಮನಷ್ಟೆ ಸತ್ಯ. ಇಲ್ಲಿನ ಈಶ್ವರ ಮಾತ್ರ ಸ್ವತಂತ್ರ್ಯ, ಪರಮಾತ್ಮ ಹಾಗೂ ಜೀವಿಗಳ ಸಂಬಂಧ ಸ್ವಾಮಿ-ಸೇವಕ ಹಿನ್ನಲೆಯಲ್ಲಿ ಹುಟ್ಟಿಕೊಂಡವು ಎಂಬ ಹೊಸ ಸಿದ್ಧಾಂತವನ್ನು ಪ್ರತಿಪಾದಿಸಿ ನಾರಾಯಣನನ್ನು ಭಕ್ತಿಯಿಂದ ಪೂಜಿಸುವುದರಿಂದ ಮಾತ್ರ ಮುಕ್ತಿ ಸಾಧ್ಯ ಎಂಬ ಪರಿಕಲ್ಪನೆಯನ್ನು ಮಧ್ವಾಚಾರ್ಯರ ಜೀವನ ಮತ್ತು ಬೋಧನೆಗಳ ಹಿನ್ನಲೆಯಲ್ಲಿ ತಿಳಿಯುವರು.
- `ಕಾಯಕ' ತತ್ವವನ್ನು ಪ್ರತಿಪಾದಿಸಿದ ಜಗಜ್ಯೋತಿ ಬಸವಣ್ಣನವರು ಕಾಯಕವೇ ಕೈಲಾಸ ಎಂಬ ತತ್ವದ ಅಡಿಗಲ್ಲಿನ ಮೇಲೆ ಶಕ್ತಿ ವಿಶಿಷ್ಟಾ್ವತ ಸಿದ್ಧಾಂತವನ್ನು ಪ್ರತಿಪಾದಿಸಿ, ಶಿವಭಕ್ತನೇ ಶರಣ ಶರಣನಾದವನು ಜಾತಿ ಬೇಧವನ್ನು ಮಾಡಬಾರದು, ಪರಿಶುದ್ಧ ಭಕ್ತಿಯೇ ಶಿವನನ್ನು ಸೇರುವ ನಿಜವಾದ ಮಾರ್ಗ ಹಾಗೂ ಪ್ರತಿಯೊಬ್ಬರೂ ದುಡಿದು ತಿನ್ನಬೇಕು. ವೃತ್ತಿಗಳಲ್ಲಿ ಹಿರಿದು - ಕಿರಿದು ಎಂಬ ಭೇದವಿಲ್ಲ ಎನ್ನುವ ಹಿನ್ನಲೆಯಲ್ಲಿ ದುಡಿಮೆ ಸಂಸ್ಕೃತಿಯನ್ನು ಬೆಳೆಸಿದ ರೀತಿಯನ್ನು ಗ್ರಹಿಸಿಕೊಂಡು ಜಾತಿ, ಮತ, ಲಿಂಗ ಭೇದ ಎಣಿಸದೆ ಸಾಮಾಜಿಕ, ಆಕ, ಧಾರ್ಮಿಕ ಸಮಸ್ಯೆಗಳನ್ನು ಕುರಿತು ಚರ್ಚಿಸುವ ಹಾಗೂ ಸರ್ವರಿಗೂ ಸಮಾನತೆಯ ಅವಕಾಶ ಕಲ್ಪಿಸುತ್ತಿದ್ದ ಅನುಭವಮಂಟಪ ಎಂಬ ವಿಚಾರ ವೇದಿಕೆಯ ಪ್ರಾಮುಖ್ಯತೆಯನ್ನು ಮತ್ತು ಪರಿಶುದ್ಧ ಜೀವನಕ್ಕೆ ಬಸವಣ್ಣನವರ ಸಂದೇಶವೇನೆಂಬುದನ್ನು ತಿಳಿದುಕೊಳ್ಳುವರು.
ಜ್ಞಾನದ ಪುನರ್ರಚನೆಗೆ ಇರುವ ಅವಕಾಶಗಳು:
- ಭಾರತದ ಸಂದರ್ಭದಲ್ಲಿ 9 ರಿಂದ 14ನೇ ಶತಮಾನದ ಅವಧಿಯಲ್ಲಾದ ಧಾರ್ಮಿಕ ಸುಧಾರಣೆಗಳು ಪ್ರಬಲವಾಗಿ ಅನುಷ್ಠಾನಗೊಂಡರೂ, ಪ್ರಸ್ತುತ ಕಾಲಟ್ಟದಲ್ಲಿ ಇನ್ನೂ ಜಾತಿ, ಲಿಂಗ ವರ್ಗ ತಾರತಮ್ಯದ ಕರಿ ನೆರಳು ಹಾಗೆ ಇರುವುದನ್ನು ಗ್ರಹಿಸಿಕೊಂಡ ಮಕ್ಕಳು, ಧಾರ್ಮಿಕ ಕ್ಷೇತ್ರದೊಳಗಣ ತತ್ವ ಮತ್ತು ಅಭಿವ್ಯಕ್ತಿ ಸ್ವಾತಂತ್ರ್ಯವನ್ನು ಸಮಾನತೆಯ ಪರಿಕಲ್ಪನೆಯ ಸಮಾಜಮುಖಿ ಚಾಲನೆಯನ್ನು ಜನಮಾನಸದಲ್ಲಿ ತುಂಬಿಕೊಳ್ಳಲು ಮಕ್ಕಳು ತಮ್ಮ ಜವಾಬ್ದಾರಿಗಳೇನೆಂಬ ವೈಚಾರಿಕ ಜ್ಞಾನವನ್ನು ಕಟ್ಟಿಕೊಳ್ಳುವರು.
- ಮನುಷ್ಯನ ಮೋಕ್ಷ ಸಾಧನೆಗೆ ಜ್ಞಾನಮಾರ್ಗವನ್ನು ಬೋಧಿಸಿದ ಶಂಕರಾಚಾರ್ಯರ ತತ್ವನಿಷ್ಠೆಯನ್ನು ಅರ್ಥೈಸಿಕೊಂಡ ಮಕ್ಕಳು ಜಗತ್ತಿನಲ್ಲಿ ಸತ್ಯವೇ ಶ್ರೇಷ್ಠ ಈ ಸತ್ಯ ಬ್ರಹ್ಮನೊಡನೆ ನಮ್ಮೆಲ್ಲರ ಜೀವಾತ್ಮವನ್ನೂ ವಿಲೀನಗೊಳಿಸುವುದು ಹೇಗೆ? ಸತ್ಯವಲ್ಲದ ಜಗತ್ತಿನ ಅಪ್ರಸ್ತುತತೆಯ ನಿರ್ಗುಣಯುಕ್ತ ಲಕ್ಷಣಗಳನ್ನು ದೂರಮಾಡಿ. ಜೀವಾತ್ಮಕ್ಕೆ ಪ್ರತ್ಯೇಕ ಅಸ್ಥಿತ್ವವವೇ ಇಲ್ಲ. ಅದು ಸದಾ ಸತ್ಯವೆಂಬ ಬ್ರಹ್ಮನೊಡನೆ ವಿಲೀನ ಎಂಬುದನ್ನು ತಾರ್ಕಿಕವಾಗಿ ಚರ್ಚಿಸಿ, ನಾನೇ ಬ್ರಹ್ಮ, ಆಹಂಬ್ರಹ್ಮಾಸ್ಮಿ ಎಂಬ ಪ್ರತಿಪಾದನೆಯ ಮೂಲ ಸತ್ವದ ವಿಶೇಷ ಜ್ಞಾನವನ್ನು ಪಡೆದುಕೊಂಡು ಈ ಹಿನ್ನಲೆಯಲ್ಲಿಯೇ ಹುಟ್ಟಿಕೊಂಡು ಶಂಕರಾಚಾರ್ಯರ ಮಠಗಳ ಇಂದಿನ ಕಾರ್ಯಕ್ಷಮತೆ ವೈಖರಿಯನ್ನು ಹೋಲಿಸಿ ಕೊಳ್ಳುವರು.
- ಮನುಷ್ಯನು ತನ್ನ ಜೀವನದಲ್ಲಿ ಮೋಕ್ಷ ಪಡೆಯಲು ಭಕ್ತಿಯೇ ಶ್ರೇಷ್ಠಮಾರ್ಗ. ಭಗವಂತನಿಗೆ ಶರಣಾಗತಿಯೇ ನಿಜವಾದ ಭಕ್ತಿ ಎಂದು ಪ್ರತಿಪಾದಿಸಿದ ರಾಮನುಜಾಚಾರ್ಯರ ಬೋಧನೆಯನ್ನು ತಿಳಿದುಕೊಂಡು ಮಕ್ಕಳು ಧ್ಯಾನ ಮತ್ತು ಏಕಾಗ್ರತೆಯಿಂದ ಮಾತ್ರ ಭಕ್ತಿಯುಂಟಾಗಲು ಸಾಧ್ಯ. ಇದು ಎಲ್ಲರಲ್ಲೂ ಬರಲು ಸಾಧ್ಯವಿಲ್ಲ. ಏಕೆಂದರೆ ಇಂದಿನ ಕಲುಶಿತ ಸಮಾಜದೊಳಗಣ ಜಾತಿಬೇಧ, ಲಿಂಗಭೇದ, ವರ್ಣಭೇದ, ಅಧಿಕಾರ, ಮೋಸ ವಂಚನೆಗಳಿಂದಾಗಿ ಇಡೀ ಮಾನವ ಕುಲವೇ ದಾರಿ ತಪ್ಪುತ್ತಿರುವ ಈ ಹೊತ್ತಿನಲ್ಲಿ ಭಕ್ತಿ ಪಾರಮ್ಯ ಅನಿವಾರ್ಯವಾಗಿದ್ದು ಇದರಿಂದ ಪರಮಾತ್ಮನ ಅಧೀನತೆಯನ್ನು ಪ್ರತಿಯೊಬ್ಬರು ಕಂಡುಕೊಳ್ಳಬೇಕು. ಆಗ ಮಾತ್ರ ಎಲ್ಲರಿಗೂ ಮೋಕ್ಷ ಎಂಬ ನೆಮ್ಮದಿಯ ಬದುಕು ಕಟ್ಟಿಕೊಳ್ಳಲು ಸಾಧ್ಯ ಎಂಬ ಜ್ಞಾನವನ್ನು ತಿಳಿದುಕೊಳ್ಳುವುದು.
- ಜಗತ್ತು ಮಾಯೆಯಲ್ಲ ಅದು ಪರಮಾತ್ಮನಷ್ಟೆ ಸತ್ಯ ಎಂಬ ತತ್ವದಲ್ಲಿ ಜಗತ್ತಿನೊಳಗೆ ಈಶ್ವರನನ್ನು ಕಂಡುಕೊಂಡ ಮಧ್ವಾಚಾರ್ಯರ ತತ್ವಾ ಪ್ರತಿಪಾಧನೆಯನ್ನು ಅರ್ಥೈಸಿಕೊಂಡ ಮಕ್ಕಳು ಈ ಜಗತ್ತಿನಲ್ಲಿ ದೇವರು ಒಬ್ಬನೇ ಎನ್ನುವ ಎಲ್ಲಾ ಧರ್ಮಗಳ ಸಾರವನ್ನು ಹೋಲಿಸಿಕೊಂಡು ಸರ್ವೋತ್ತಮನಾದ ನಾರಾಯಣನ ಅಂದರೆ ಮೋಕ್ಷ (ನೆಮ್ಮದಿ) ಸನ್ನಿದಿ ದೊರೆಯುವಂತಾಗಲು ಪ್ರತಿಯೊಬ್ಬರು ಈ ಜಗತ್ತಿನಲ್ಲಿ ಇರುವವರೆಗೆ ಸೇವಕನಂತೆ ಎಲ್ಲಾ ಕಾರ್ಯಗಳನ್ನು ನಿರ್ವಹಿಸಬೇಕು, ಆಗ ಮಾತ್ರ ಈ ಜೀವಾತ್ಮ ಪರಮಾತ್ಮನನ್ನು ಕಾಣಲು ಸಾಧ್ಯ ಎಂಬ ವಿನೂತನ ಜ್ಞಾನವನ್ನು ಕಟ್ಟುಕೊಳ್ಳುವರು.
- `ದುಡಿಮೆಯೇ ದೇವರು' ಎಂಬ ನೂತನ ಸಂಸ್ಕೃತಿಯನ್ನು ಆವಿಷ್ಕರಿಸಿಕೊಟ್ಟ ಬಸವಣ್ಣನವರ ಕಾಯಕನಿಷ್ಠೆಯ `ಕಾಯಕವೇ ಕೈಲಾಸ' ಎಂಬ ತತ್ವವನ್ನು ಗ್ರಹಿಸಿಕೊಂಡ ಮಕ್ಕಳು, ಶರಣನಾದವನಿಗೆ ಯಾವುದರ ಭೇದವಿಲ್ಲ. ಈತನ ಪರಿಶುದ್ಧ ಜೀವನ ಸಮಾನತೆಯ ಪರಿಕಲ್ಪನೆಯಲ್ಲಿ ಬೆಳೆದು, ನಡೆ-ನುಡಿಗಳು ಒಂದಾಗಿ, ಆಚಾರ ವಿಚಾರಗಳ ಪರಧಿಯೊಳಗೆ ಪ್ರತಿಯೊಬ್ಬನೂ ಕಾಯಕದಲ್ಲಿ ಭಗವಂತ (ಮೋಕ್ಷ)ನನ್ನು ಕಂಡುಕೊಂಡು ಪರಿಶುದ್ಧ ಜೀವನಕ್ಕೆ ಭಕ್ತಿಯೇ ಉದಾತ್ತ ಮಾರ್ಗ ಎಂದು ಪ್ರದಿಪಾದಿಸಿದ ಬಸವಣ್ಣನವರ ಬದುಕಿನ ಸಂದೇಶವನ್ನು ತಮ್ಮ ಜೀವನದಲ್ಲಿ ಅಳವಡಿಸಿಕೊಳ್ಳುವರು.
ನಿರಂತರ ಮತ್ತು ವ್ಯಾಪಕ ಮೌಲ್ಯಮಾಪನಕ್ಕೆ ಇರುವ ಅವಕಾಶಗಳು
- ಮತ ಪ್ರವರ್ತಕರುಗಳ ತತ್ವ ಸಿದ್ಧಾಂತಗಳನ್ನು ಕುರಿತು ಪ್ರಬಂಧ ಮಂಡಿಸುವುದು.
ಉದಾ: * ಶಂಕರಾಚಾರ್ಯರು ಮತ್ತು ಅ್ವತ ಸಿದ್ಧಾಂತ
ವಿಶಿಷ್ಟಾ್ವತ ಮತ್ತು ರಾಮಾನುಜಾಚಾರ್ಯರು
ಶ್ರೀ ವೈಷ್ಣವ ಮಠಗಳನ್ನುಕುರಿತು ಮಾಹಿತಿ ಸಂಗ್ರಹ
ಶಂಕರಾಚಾರ್ಯರ ಗುರು ಪೀಠಗಳು
ಅಷ್ಟ ಮಠಗಳು
ಉಡುಪಿಯ ಶ್ರೀಕೃಷ್ಣ
ಬಸವಣ್ಣನವರ ಬದುಕು ಮತ್ತು ಕಾಯಕನಿಷ್ಠೆ
ಮತ ಪ್ರವರ್ತಕರ ಕೃತಿ ದರ್ಶನ
- ಮತ ಪ್ರವರ್ತಕರ ತತ್ವ ಸಿದ್ಧಾಂತಗಳನ್ನು ಕುರಿತಂತೆ ಇಲ್ಲಿನ ಸಾಮ್ಯತೆ, ವ್ಯತ್ಯಾಸ ಮತ್ತು ವೈಶಿಷ್ಟ್ಯಗಳನ್ನು ಕುರಿತಂತೆ ಮಕ್ಕಳ ಗುಂಪು ಚರ್ಚೆ.
- ದುಡಿಮೆಯೇ ದೇವರು ಎಂದು ಕಾಯಕತತ್ವದ ಪ್ರತಿಪಾದನೆಯನ್ನು ನಿರೂಪಿಸಿದ ಬಸವಣ್ಣನವರ ಶಕ್ತಿ ವಿಶಿಷ್ಟಾ್ವತ ಸಿದ್ಧಾಂತದ ಪರಿಕಲ್ಪನೆ ಸಾರ್ವಕಾಲಿಕ ಸತ್ಯ ಎನ್ನುವ ಹಿನ್ನಲೆಯಲ್ಲಿ ಭಾಷಣ ಸ್ಪರ್ಧೆಗಳು.
- ಕಲಿಕಾ ನಿಲ್ದಾಣಗಳ ಮೂಲಕ ್ವತ, ಅ್ವತ, ವಿಶಿಷ್ಟಾ್ವತ ಶಕ್ತಿ ವಿಶಿಷ್ಟಾ್ವತಗಳ ನಡುವಿನ ವ್ಯತ್ಯಾಸ ಗುರುತಿಸುವುದು.
- ಮಿಂಚು ಪಟ್ಟಿಗಳನ್ನು ಬಳಸಿ, ಮತಪ್ರವರ್ತಕರ ಜೀವನ ಚರಿತ್ರೆಯನ್ನು ವಿಶ್ಲೇಷಿಸುವುದು.
- ಪ್ರಶ್ನಾವಳಿ, ಟಕ ಪರೀಕ್ಷೆ, ಕಿರು ಪರೀಕ್ಷೆಗಳನ್ನು ನಡೆಸಿ ಕಲಿಕಾ ಸಾಮಥ್ರ್ಯವನ್ನು ನಿರ್ಣಯಿಸುವುದು.
- ಮತ ಪ್ರವರ್ತಕರುಗಳ ಚಿಂತನೆಗಳನ್ನು ಪ್ರತ್ಯೇಕ ಚಾರ್ಟ್ ಮಾಡಿ ಪ್ರದರ್ಶಿಸುವುದು.
- ಮಕ್ಕಳನ್ನೇ ಶಂಕರ, ಮಧ್ವಾ, ರಾಮಾನುಜ ಹಾಗೂ ಬಸವಣ್ಣನವರ ಪಾತ್ರಧಾರಿಗಳಾಗಿಸಿ ಪ್ರದರ್ಶನ ಏರ್ಪಡಿಸುವುದು.
- ಭಕ್ತಿ, ಧ್ಯಾನ, ಏಕಾಗ್ರತೆ ಕುರಿತು ಟಿಪ್ಪಣಿ ಬರೆಸುವುದು.
- ಬಸವಣ್ಣನವರ ಬದುಕು ಕುರಿತ ನಾಟಕಾಭಿನಯ
- ಪ್ರಸ್ತುತ ಸಂದರ್ಭದಲ್ಲಿ ಬಸವಣ್ಣ ಮತ್ತೆ ಹುಟ್ಟಿ ಬಂದರೆ ತಾನು ಸಮಾಜ ಸುಧಾರಣೆಗಳ ಬಗ್ಗೆ ಕಲ್ಪನೆಯ ಕಥೆ ಬರೆಸುವುದು.
- ಬಸವಣ್ಣನವರ ವಚನಗಳ ಸಂಗ್ರಹ.
- ವಚನಗಾಯನ ಮತ್ತು ವ್ಯಾಖ್ಯಾನ
- ಉಡುಪಿಯ ಕನಕಕಿಂಡಿ ಮಹತ್ವ ಕುರಿತು ಚಿಂತನಾ ಕಾರ್ಯಗಾರ ಏರ್ಪಡಿಸುವುದು.
ಕಲಿಕೆಯನ್ನು ಅನುಕೂಲಿಸುವ ವಿಧಾನಗಳು:
ಕಥನ ವಿಧಾನ: - ಶಂಕರಾಚಾರ್ಯರ ಜೀವನ ಚರಿತ್ರೆ ಕುರಿತು
- ರಾಮಾನುಜಾಚಾರ್ಯರ ನಡೆ ನುಡಿ ಕುರಿತು
- ಬಸವಣ್ಣನವರ ಆಚಾರ ವಿಚಾರ
ಚರ್ಚಾ ವಿಧಾನ: - ತರಗತಿಯಲ್ಲಿ ಗುಂಪುಗಳ ರಚನೆ
- ್ವತ, ಅ್ವತ, ವಿಶಿಷ್ಟಾ್ವತ, ಶಕ್ತಿ ವಿಶಿಷ್ಠಾ್ವತ ಕುರಿತು ಚರ್ಚೆ, ತೀರ್ಮಾನ
ಟಕ ವಿಧಾನ: - ಶಂಕರಾಚಾರ್ಯರ ಬೋಧನೆಗಳು
- ಮಧ್ವಾಚಾರ್ಯರ ಜೀವನ ತತ್ವಗಳು
- ರಾಮಾನುಜಾಚಾರ್ಯರು ಮತ್ತು ವಿಶಿಷ್ಟಾ್ವತ
- ಕಾಯಕವೇ ಕೈಲಾಸ
ಪ್ರವಾಸ ವಿಧಾನ: - ಕೂಡಲಸಂಗಂಕ್ಕೆ ಕಾಲಡಿ, ಉಡುಪಿ, ಸ್ಥಳಗಳಿಗೆ ಭೇಟಿ, ಜ್ಞಾನ ಸಂಗ್ರಹ.
ಪಾತ್ರಾಭಿನಯ ವಿಧಾನ: - ಮಕ್ಕಳಿಂದಲೇ ಮತ ಪ್ರವರ್ತಕರ ಪಾತ್ರಗಳನ್ನು ನಿರ್ವಹಿಸು ವಂತೆಯೂ ಹಾಗೂ ಶಿಕ್ಷಕರು ಸಕ್ರಿಯವಾಗಿ ಪಾಲ್ಗೊಳ್ಳುವುದು.
ಉದಾ: - ಶಂಕರಾಚಾರ್ಯರು
- ಬಸವಣ್ಣ
- ಮಧ್ವಾಚಾರ್ಯರು
- ರಾಮಾನುಚಾರ್ಯರು
ಅವಲೋಕನ ವಿಧಾನ: - ಪಠ್ಯಪುಸ್ತಕದಲ್ಲಿನ ಸಂಬಂಧಿಸಿದ ಟಕಕ್ಕೆ ಪೂರಕ ಅಂಶಗಳನ್ನು ಅವಲೋಕನ ಮಾಡುವುದು.
ಉದಾ: - ಧರ್ಮಸುಧಾರಣೆ
- ಸ್ಪೃಷ್ಯ, ಅಸ್ಪೃಷ್ಯ
- ವರ್ಗ ತಾರತಮ್ಯ
- ಜಾತಿ ಭೇದ
- ಕಾಯಕದ ಮಹತ್ವವನ್ನು ಕುರಿತಂತೆ
ಪಠ್ಯ ಪುಸ್ತಕದ ಜ್ಞಾನವನ್ನು ಗ್ರಹಿಸುವುದು.
ಸಂಪನ್ಮೂಲಗಳ ಕ್ರೂಢೀಕರಣ:
- 9ನೇ ತರಗತಿ ಪಠ್ಯ ಪುಸ್ತಕ
- ಮಧ್ಯಕಾಲಿನ ಭಾರತದ ಇತಿಹಾಸ, ಪಾಲಕ್ಷ, ಅಕಬರಾಲಿ
- ಶಂಕರ, ರಾಮಾನುಜ, ಬಸವಣ್ಣ ಮಧ್ವರನ್ನು ಕುರಿತ ಜೀವನ ಚರಿತ್ರೆ ಕೃತಿಗಳ ಸಂಗ್ರಹ.
- ಬಸವಣ್ಣನವರ ವಚನಗಳ ಸಂಗ್ರಹ
- ಭಾವ ಚಿತ್ರಗಳು
- ಭಾರತದ ಭೂಪಟ
- ಉಡುಪಿಯ ಐತಿಹಾಸಿಕ ಹಿನ್ನಲೆ ಕುರಿತ ಮಾಹಿತಿ ಸಂಗ್ರಹ
- ಕೂಡಲ ಸಂಗಮದ ಚರಿತ್ರೆಯ ಮಹತ್ವ ಸಂಗ್ರಹ
- ಚಿತ್ರದಲ್ಲಿ ಚರಿತ್ರೆ
- ಅಂತರ್ಜಾಲ
- ವಿಶ್ವಕೋಶ ಬಳಕೆ
- ಮತ ಪ್ರವರ್ತಕರ ಚಾರ್ಟ್ ಸಂಗ್ರಹ
ಬೋಧನೋಪಕರಣಗಳು:
- ಕರ್ನಾಟಕ ಮತ್ತು ಭಾರತದ ಭೂಪಟ
- ಮಧ್ವ, ಬಸವ, ರಾಮಾನುಜ, ಶಂಕರರ ಭಾವ ಚಿತ್ರಗಳು, ಮಿಂಚು ಪಟ್ಟಿಗಳು
- ಚರ್ಚಾಂಶಗಳ ಪಟ್ಟಿ
- ಆಯಾ ಮತಪ್ರವರ್ತಕರ ನಂತರ ಬೆಳಕಿಗೆ ಬಂದ ಮಠಗಳ ಪಟ್ಟಿ
- ವಚನಕಾರರ ಹೆಸರುಗಳ ಸಂಗ್ರಹ
- ವಚನಗಳ ಸಂಗ್ರಹ
- ಬುದ್ಧ, ಬಸವ, ಗಾಂಧಿ, ಅಂಬೇಡ್ಕರ್, ಅಬ್ದುಲ್ ಕಲಾಂ ಇವರುಗಳ ನಡುವೆ ಸಾಮ್ಯತೆ ಕುರಿತು ನಾಟಕ ರಚನೆ ಮತ್ತು ಅಭಿನಯ.
ಮನನ ಮಾಡಿಕೊಳ್ಳಲೇ ಬೇಕಾದ ಅಂಶಗಳು
- ಧಾರ್ಮಿಕ ಸುಧಾರಣೆ ಎಂದರೆ ಅಭಿವ್ಯಕ್ತಿ ಸ್ವಾತಂತ್ರ್ಯ ಭಕ್ತಿ, ಧ್ಯಾನ, ಏಕಾಗ್ರತೆಗಳ ಮಹತ್ವ.
- ಜಗತ್ತಿನಲ್ಲಿ ಅಮೂಲ್ಯವಾದುದು ಸತ್ಯ
- ಬದುಕಿನಲ್ಲಿ ಜ್ಞಾನಮಾರ್ಗವೇ ಶ್ರೇಷ್ಟವಾದುದು
- ಆತ್ಮೋದ್ಧಾರ ಭಕ್ತಿಯಿಂದ ಮಾತ್ರ ಸಾಧ್ಯ.
- ಕಾಯಕವೇ ಕೈಲಾಸ
- ಸಮಾನತೆ ಕಲ್ಪನೆಯ ಸರಳ ಜೀವನ ಶೈಲಿ
- ಕೆಲಸ ನಿರ್ವಹಿಸುವಲ್ಲಿನ ಸೇವಕತ್ವ
- ಸರ್ವರ ಅಭಿಪ್ರಾಯಗಳಿಗೂ ಮನ್ನಣೆ ದೊರೆಯಬೇಕು
- ದೇವರು ಒಬ್ಬನೇ
- ಮನುಜಮತ ವಿಶ್ವಪಥದ ಪರಿಕಲ್ಪನೆ.