ಬುಧವಾರ, ಜೂನ್ 17, 2015

ಜೈನ ಧರ್ಮ

ಜೈನ ಧರ್ಮ


ಜೈನ ಧರ್ಮ
ಜೈನ ಹಾಗೂ ಬೌದ್ಧ ಮತದ ಸಂಸ್ಥಾಪಕರು - ಕ್ಷತ್ರಿಯರು
ಜೈನಧರ್ಮದ 23 ನೇ ತೀರ್ಥಂಕರ - ಪಾರ್ಶ್ವನಾಥ
ಜೈನಧರ್ಮದ 24 ನೇ ತೀರ್ಥಂಕರ - ಮಹಾವೀರ
ಪಾರ್ಶ್ವನಾಥನ ತಂದೆಯ ಹೆಸರು - ಅಶ್ವಸೇನಾ
ಜೈನ ಧರ್ಮದ ಸ್ಥಾಪಕ - ಮಹಾವೀರ
ಮಹಾವೀರ ಜನಿಸಿದ ವರ್ಷ - ಕ್ರಿ.ಪೂ. 599 ಅಥವಾ 540
ಮಹಾವೀರ ಜನಿಸಿದ ಪ್ರದೇಶ - ಪಾಟ್ನ ಸಮೀಪದ ಕುಂಡಲಿವನ ಅಥವಾ ಕುಂದಗ್ರಾಮ
ಮಹಾವೀರನ ತಂದೆಯ ಹೆಸರು - ಸಿದ್ಧಾರ್ಥ
ಸಿದ್ಧಾರ್ಥ ಈ ಜನಾಂಗದ ್ರಸ - ಜ್ಞಾತ್ರಿಕರೆಂಬ , ಕ್ಷತ್ರಿಯ ಜನಾಂಗ
ಮಹವೀರನ ತಾಯಿಯ ಹೆಸರು - ತ್ರಿಶಲಾದೇವಿ
ಮಹಾವೀರ ವಿವಾಹವಾಗಿದ್ದು - 18 ನೇ ವಯಸ್ಸಿನಲ್ಲಿ
ಮಹಾವೀರನ ಪತ್ನಿಯ ಹೆಸರು - ಯಶೋಧರೆ
ಮಹಾವೀರ ಕೈವಲ್ಯ ಜ್ಞಾನವನ್ನು ಪಡೆದ ಗ್ರಾಮದ ಹೆಸರು - ಜ್ರುಂಬಕ
ಮಹಾವೀರನು ಜೀವನದ ಅಂತ್ಯ ದಿನಗಳನ್ನು ಈ ಪ್ರದೇಶದಲ್ಲಿ ಕಳೆದನು - ಬಿಹಾರದ ಪಾವಾ ಪುರಿ ಎಂಬಲ್ಲಿ
ಮಹಾವೀರನು ನಿರ್ವಾಣ ಹೊಂದಿದ ವರ್ಷ - ಕ್ರಿ.ಪೂ.527
ಜೈನ ಧರ್ಮದ ಮುಖ್ಯ ಗುರಿ - ಆತನ ಮುಕ್ತಿ ಮತ್ತು ಲೌಕಿಕ ಸಂಬಂಧಗಳಿಂದ ಶಾಶ್ವತ ಬಿಡುಗಡೆ
ಮಹಾವೀರನ ತತ್ವಗಳು
ಅಹಿಂಸೆ
ಸತ್ಯ ಸಂಧತೆ
ಕಳ್ಳತನ ಮಾಡದಿರುವುದು
ಸಂಪತ್ತಿನ ಬಗ್ಗೆ ವ್ಯಾಮೋಹ ಕೂಡದು
ಬ್ರಹ್ಮಚಾರ್ಯ
ಮಹಾವೀರನ ರತ್ನ ತ್ರಯಗಳು
A. ಸತ್ಯದಲ್ಲಿ ನಂಬಿಕೆ - ಸಮ್ಯಕ್ ದರ್ಶನ
B. ಉತ್ತಮ ಜ್ಞಾನ - ಸಮ್ಯಕ್ ಜ್ಞಾನ
C. ಉತ್ತಮ ಚಾರಿತ್ರ್ಯ - ಸಮ್ಯಕ್ ಚಾರಿತ್ರ್ಯ
ಸತ್ಯದಲ್ಲಿ ನಂಬಿಕೆ ಎಂದರೆ - ತೀರ್ಥಂಕರರ ಅಸ್ತಿತ್ವವನ್ನು ನಂಬುವುದು
ಉತ್ತಮ ಜ್ಞಾನ ಎಂದರೆ - ಜೈನ ಧರ್ಮದ ತತ್ವಗಳನ್ನು ಪಾಲಿಸಿ ಜಯಿಸುವುದು
ಉತ್ತಮ ಚಾರಿತ್ರ್ಯ ಎಂದರೆ - ಮಾನವೀಯ ಮೌಲ್ಯಗಳನ್ನಾಧರಿಸಿ ನೀತಿಯುತ ಬಾಳ್ವೆ ನಡೆಸುವುದು
ಜೈನರು ಅನುಸರಿಸುತ್ತಿದ್ದ ಉಪವಾಸ ಪದ್ದತಿ - ಸಲ್ಲೇಖನ ವ್ರತ
ಜೈನ ಧರ್ಮ ಮೊದಲು ಆರಂಭವಾದುದು - ವೈಶಾಲಿ ಹಾಗೂ ಮಗಧ ದೇಶದಲ್ಲಿ
ಜೈನ ಧರ್ಮದ ಶಾಖೆಗಳು
ಶ್ವೇತಾಂಬರರು
ದಿಗಂಬರರು
ಶ್ವೇತಾಂಬರರು
ಇವರು ಪಾರ್ಶ್ವನಾಥನ ಅನುಯಾಯಿಗಳು
ಬಿಳಿಯ ವಸ್ತ್ರವನ್ನು ಧರಿಸುವವರು
ದಿಗಂಬರರು
a. ಇವರು ಮಹಾವೀರನ ಅನುಯಾಯಿಗಳು
b. ಇವರು ನಗ್ನರಾಗಿರುತ್ತಾರೆ
c. ಇವರಿಗೆ ದಿಕ್ಕೆ ಅಂಬರ
d. ಉಪವಾಸದ ಮೂಲಕ ದೇಹ ದಂಡಿಸುವುದು ಇವರ ಪದ್ದತಿ
ಚಂದ್ರಗುಪ್ತ ಮೌರ್ಯರೊಡನೆ ಶ್ರವಣಬೆಳಗೋಳಕ್ಕೆ ಬಂದ ಜೈನ ಮುನಿಯ ಹೆಸರು - ಭದ್ರಬಾಹು
ದಕ್ಷಿಣ ಭಾರತದಲ್ಲಿ ಜೈನ ಧರ್ಮವನ್ನು ಪ್ರಚಾರ ಮಾಡಿದ ಜೈನ ಮುನಿ - ಭದ್ರಬಾಹು
ಜೈನ ಧರ್ಮವನ್ನು ರಕ್ಷಿಸಿ ಬೆಳೆಸಿದ ರಾಜ ಮನೆತನಗಳು - ಪಲ್ಲವರು ,ಗಂಗರು ,ರಾಷ್ಟ್ರಕೂಟರು
ಜೈನಧರ್ಮದ ಗ್ರಂಥಗಳನ್ನು ಈ ಹೆಸರಿನಿಂದ ಕರೆಯುವರು - ದ್ವಾದಶ ಅಂಗಗಳು
ಜೈನ ಧರ್ಮದ ಪವಿತ್ರ ಗ್ರಂಥಗಳು
ಆಚಾರಂಗ ಮತ್ತು ಉಪಾಸಾಂಗ
ಧವಳ ಮತ್ತು ಜಯಧವಳ
Extra Tips
ಮಗಧದ ಇಂದಿನ ಹೆಸರು - ಬಿಹಾರ
ವೈಶಾಲಿ ನಗರದ ಇಂದಿನ ಹೆಸರು - ವೇಸಾಡ್
ಜೈನರ ಮೊದಲ ತೀರ್ಥಂಕರ - ಆಧಿನಾಥ ಅಥವಾ ವೃಷಭನಾಥ
ಜಿನ ಪದದ ಅರ್ಥ - ಇಂದ್ರಿಯಗಳನ್ನು ಪೂರ್ಣ ನಿಗ್ರಹಿಸಿದವನು ಅಥವಾ ಜಯಿಸಿದವನು
ಜೈನ ಧರ್ಮದ ಕೊನೆಯ ತೀರ್ಥಂಕರ - ಮಹಾವೀರ
ಕುಂಡಲಿವನದ ಇಂದಿನ ಹೆಸರು - ಬಸುಕುಂದ
ಮಹಾವೀರನ ಜನನವಾದದ್ದು - 599
ಮಹಾವೀರನು ಸನ್ಯಾಸಿಯಾದುದ್ದು - ತನ್ನ 30 ನೇ ವಯಸ್ಸಿನಲ್ಲಿ
ಮಹಾವೀರನ ಪ್ರಥಮ ಗಮಧರ ಅಥವಾ ಶಿಷ್ಯ - ಇಂದ್ರಭೂತಿ
ಜೈನ ಧರ್ಮ ಗ್ರಂಥಗಳು ಈ ಭಾಷೆಯಲ್ಲಿದೆ - ಪ್ರಾಕೃತ
ಬಿಂಬಸಾರ ಈ ವಂಶದವರು - ಹರ್ಯಾಂಕ
ಬಿಂಬಸಾರ ಇನ್ನೋಂದು ಹೆಸರು - ಶ್ರೇಣಿಕ
ಬಿಂಬಸಾರನ ಪುತ್ರನ ಹೆಸರು - ಅಜಾತಶತೃ
ಮಹಾವೀರನು ನಿರ್ವಾಣ ಹೊಂದಿದ್ದು ಈ ವಯಸ್ಸಿನಲ್ಲಿ - 72
ಮಹಾವೀರನು ನಿರ್ವಾಣ ಹೊಂದಿದ್ದ ವರ್ಷ - ಕ್ರಿ.ಪೂ.527
ಜೈನರ ಕರ್ನಾಟಕದ ಪ್ರಾಚೀನ ಕೇಂದ್ರಗಳು - ಕೊಪ್ಪಳ ಹಾಗೂ ಶ್ರವಣಬೆಳಗೋಳ
ಬಸದಿಗಳೆಂದರೆ - ಜೈನ ಸನ್ಯಾಸಿಗಳು ವಾಸಿಸುವ ವಸತಿ ಗೃಹ
ಜೈನರ ಪ್ರಮುಖ ಬಸದಿಗಳು - ಒರಿಸ್ಸಾದ ಹಾಥಿಗುಂಪಾ ,ಕರ್ನಾಟಕದ ಬಾದಾಮಿ
ಜೈನರ ಯಕ್ಷಿ ಜನಪ್ರಿಯ ದೇವತೆ - ಪದ್ಮಾವತಿ ಯಕ್ಷಿ
ತೀರ್ಥಂಕರರು ಎಂದರೇ - ಮಾರ್ಗದರ್ಶಕರು ಎಂದರ್ಥ ಅಥವಾ ಭವ ಸಾಗರವನ್ನು ದಾಟಬಲ್ಲ ಧರ್ಮಗುರು
ಮಹಾವೀರನ ಮೊದಲ ಹೆಸರು - ವರ್ದಮಾನ
ತ್ರಿಶಾಲಾದೇವಿ ಈ ವಂಶದ ರಾಜ ಕುಮಾರಿ - ವೈಶಾಲಿಯ ಲಿಚ್ಚವಿ ವಂಶ
ಮಹಾವೀರನ ಹೆಣ್ಣು ಮಗುವಿನ ಹೆಸರು - ಅನೋಜ್ಯ ಅಥವಾ ಪ್ರಿಯದರ್ಶನ
ವರ್ಧಮಾನನು ಸನ್ಯಾಸತ್ವ ಸ್ವೀಕರಿಸಿದ ಘಟನೆಯನ್ನು ಈ ಹೆಸರಿನಿಂದ ಕರೆಯುವರು - ಮಹಾ ಪರಿತ್ಯಾಗ
ಕೇವಲನ್ , ನಿರ್ಗ್ರಂಥ ಎಂದು ಕರೆಸಿಕೊಂಡವನು - ಮಹಾವೀರ
ಕೇವಲಿನ್ ಎಂದರೆ - ಮಹಾಜ್ಞಾನಿ
ನಿರ್ಗ್ರಂಥ ಎಂದರೆ - ಬಂಧಮುಕ್ತ ಎಂದರ್ಥ
ಮಹಾವೀರನ ಅನುಯಾಯಿಗಳನ್ನು ಬೌದ್ಧ ಕೃತಿಗಳಲ್ಲಿ ಈ ರೀತಿಯಾಗಿ ಸಂಭೋಧಿಸಲಾಗಿದೆ - ನಿರ್ಗ್ರಂಥರು
ಕರ್ಮ ಸಿದ್ಧಾಂತದ ಪ್ರವರ್ತಕ - ಮಹಾವೀರ
ಮಹಾವೀರನು ಲೌಕಿಕರಿಗೆ ನೀಡಿದ ಕೆಲ ರಿಯಾಯಿತಿಗಳು
ಆಕಸ್ಮಿಕ ಹಿಂಸೆ
ಔದ್ಯೋಗಿಕ ಹಿಂಸೆ
ರಕ್ಷಣಾ ಸಂಬಂಧಿ ಹಿಂಸೆ
ಉದ್ದೇಶ ಪೂರ್ವಕ ಹಿಂಸೆ
ಮೋಕ್ಷ ಸಾಧನೆಯ ಮಾರ್ಗಗಳು
ತಪಶ್ವರ್ಯ
ದೇಹದಂಡನೆ
ಪ್ರಾಯೋಪವೇಶನ ( ಸಲ್ಲೇಖನ )
ಮೊದಲನೇ ಜೈನ ಸಮ್ಮೇಳನ ನಡೆದ ವರ್ಷ - ಕ್ರಿ.ಪೂ -3 ನೇ ಶತಮಾನ
ಮೊದಲನೆ ಜೈನ ಸಮ್ಮೇಳನ ಈ ಪ್ರದೇಶದಲ್ಲಿ ನಡೆಯಿತು - ಪಾಟಲಿಪುತ್ರ
ಮೊದಲ ಜೈನ ಸಮ್ಮೇಳನದ ಅಧ್ಯಕ್ಷತೆಯನ್ನು ವಹಿಸಿದ್ದವರು - ಸ್ಥೂಲಭದ್ರ
ಕ್ರಿ.ಪೂ.5 ನೇ ಶತಮಾನದಲ್ಲಿ - ವಲ್ಲಭಿ ಸಮ್ಮೇಳನ ಗುಜರಾತ್ ನಲ್ಲಿ ದೇವರ್ದಿ ಕಶ್ಮಶರ್ಮನ ಅಧ್ಯಕ್ಷತೆಯಲ್ಲಿ ನಡೆಯಿತು
ಗಣಧರರ ಗುರು ಪರಂಪರೆಯನ್ನು ಆರಂಭಿಸಿದವರು - ಸುಧರ್ಮ
ವೃಷಭನಾಥನ ಬಗೆಗೆ ಪ್ರಸ್ತಾಪವಿರುವ ಹಿಂದೂ ಗ್ರಂಥಗಳು - ವಿಷ್ಣು ಪುರಾಣ ಹಾಗೂ ಭಗವತ್ ಪುರಾಣ
ತ್ರಿರತ್ನಗಳನ್ನು ಪ್ರಚುರಪಡಿಸಿವರು - ಮಹಾವೀರ
ಕರ್ನಾಟಕದಲ್ಲಿ ಜೈನರ ಪವಿತ್ರ ಯಾತ್ರ ಸ್ಥಳ - ಹಾಸನ ಜಿಲ್ಲೆಯ ಶ್ರವಣಬೆಳಗೋಳ
ಋಗ್ವೇದ ದಲ್ಲಿ ಈ ತೀರ್ಥಂಕರನ ಕುರಿತು ಪ್ರಸ್ತಾಪವಿದೆ - ವೃಷಭನಾಥ
ಜೈನ ತತ್ವಕ್ಕಿರುವ ಮತ್ತೋಂದು ಹೆಸರು - ಸ್ಮಾರವಾದ
23 ನೇ ತೀರ್ಥಂಕರ ಪಾರ್ಶ್ವನಾಥನು ಈ ವಂಶಕ್ಕೆ ಸೇರಿದವನು - ಕಾಶಿ
ಪಂಚವ್ರತಗಳನ್ನು ಗೃಹಸ್ಥರು ಪಾಲಿಸುವುದನ್ನು ಈ ಹೆಸರಿನಿಂದ ಕರೆಯುವರು - ಅನುವ್ರತಗಳು
ಜೈನಧರ್ಮವನ್ನು ರಾಜ್ಯ ಧರ್ಮವನ್ನಾಗಿ ಸ್ವೀಕರಿಸಿದ ಲಿಚ್ಚವಿ ರಾಜ್ಯದ ಯುವ ರಾಜನ ಹೆಸರು - ಅಭಯ
ಜೈನ ಧರ್ಮದಲ್ಲಿ ಪೋಸಧ ಎಂದರೆ - ಪೌರ್ಣಮಿಯ ದಿನದಂದು ಜೈನರು ಉಪವಾಸ ಮಾಡುವುದು
ಭದ್ರಬಾಹು ಜೈನ ವಿಹಾರಗಳಿಗೆ - 6 ನೇ ಖಲೀಫ
ಪಾರ್ಶ್ವನಾಥರು ದೈವಾಧೀನವಾದ ಪ್ರದೇಶ - ಬಂಗಾಳ
ಮಹಾವೀರನು ತಪಸ್ಸು ಮಾಡಿದ ಆಲದ ಮರ ಜೃಂಬಿಕಾ ವೃಕ್ಷ ಇರುವ ಸ್ಥಳ - ರುಜುಪಾಲಿಕ
ಜೈನ ಧರ್ಮದ ಮಹಾನ್ ಗುರು - ಸುಧಾರ್ಯ
ವೃಷಭನಾಥನ ಮಗನ ಹೆಸರು - ಭರತ
ಜೈನ ಧರ್ಮದ ಅವನತಿಗೆ ಕಾರಣಗಳು
ಜೈನರ ಅನುಯಾಯಿಗಳಲ್ಲಿ ಧರ್ಮದ ಪ್ರಚಾರದ ಆಸಕ್ತಿ ಕಡಿಮೆಯಾದುದು
ರಾಜರ ಪ್ರೋತ್ಸಹ ಕ್ರಮೇಣ ಕಡಿಮೆಯಾದುದು
ಜೈನ ಧರ್ಮದಲ್ಲಿ ಪಂಥದ ರೂಪಣಿ ಹಾಗೂ ಬಿಕ್ಕಟ್ಟು
ಜಾತಿ ಪದ್ದತಿ ಪುನಃ ತಲೆ ಎತ್ತಿದ್ದು
ಹಿಂದೂಗಳಲ್ಲಿ ಕಾಣಿಸಿಕೊಂಡ ಸುಧಾರಣಾ ಚಳುವಳಿ
ಆಚರಣಿಗೆ ನಿಲುಕದ ಮಹಾವೀರನ ಬೋಧನೆಗಳು
ಪ್ರಸಿದ್ದ ಗೊಮ್ಮಟೇಶ್ವರ ( ಶ್ರವಣಬೆಳಗೋಳ ) ನಿರ್ಮಾತೃ - ಚಾವುಂಡರಾಯ
ಜೈನರ ಚಿಹ್ನೆ - ಸ್ವಸ್ತಿಕ್ ಮತ್ತು ಅಭಯ ಹಸ್ತ
ಜಾನರ ಪ್ರಮುಖ ಪೂಜಾಸ್ಥಳ - ಬಸದಿ
ಪಾರ್ಶ್ವನಾಥನ ತಂದೆ ತಾಯಿ - ಅಶ್ವಸೇನಾ ಮತ್ತು ಪ್ರಭಾವತಿ
ತ್ರಿಶಾಲಾ ದೇವಿಯ ಅಣ್ಣನ ಹೆಸರು - ಚೇತಕ
ಜೃಂಬಿಕ ಗ್ರಾಮ ಈ ನದಿಯ ದಂಡೆಯಲ್ಲಿದೆ - ಋಜುಪಾಲಕ ನದಿ
ಪ್ರಸಿದ್ದ ಮೌಂಟ್ ಅಬು ದೇವಾಲಯದ ನಿರ್ಮಾತೃ - ಗುಜರಾತಿನ ರಾಜಕುಮಾರ ಕುಮಾರ ಪಾಲ
1000 ಕಂಬಗಳಿರುವ ಜೈನ ಬಸದಿ ಇರುವ ಕರ್ನಾಟಕ ಸ್ಥಳ - ಮೂಡಬಿದ್ರೆ
ಜೈನರ ಮೆಕ್ಕಾ ಎಂದು ಕರೆಯಲ್ಪಡುವ ಸ್ಥಳ - ಮೂಡಬಿದ್ರೆ
ಜೈನರ ಕಾಶಿ ಎಂದು ಕರೆಯಲ್ಪಡುವ ಸ್ಥಳ - ಶ್ರವಣಬೆಳಗೋಳ

ಕಾಮೆಂಟ್‌ಗಳಿಲ್ಲ:

ಕಾಮೆಂಟ್‌‌ ಪೋಸ್ಟ್‌ ಮಾಡಿ