ಬುಧವಾರ, ಜೂನ್ 17, 2015

ಕನ್ನಡ ಇಂಗ್ಲಿಷ್ ವ್ಯಾಕರಣ 1


ಇಂಗ್ಲಿಷ್ ವ್ಯಾಕರಣ
ಸಂಪಾದಿಸಿ

ಈ ಪುಟವನ್ನು ವೀಕ್ಷಿಸಿ


This page has some issues 1.REDIRECT Template:English grammar
ಇಂಗ್ಲಿಷ್ ವ್ಯಾಕರಣ ವು ಭಾಷಾ ನಿಯಮಗಳ ಸಂಗ್ರಹವಾಗಿದ್ದು, ಇಂಗ್ಲಿಷ್ ಭಾಷೆಯ ಗುಣ ಲಕ್ಷಣಗಳನ್ನು ಅದು ವಿವರಿಸುತ್ತದೆ. ಕೆಲವು ನಿರ್ದಿಷ್ಟ ಮಾದರಿಗಳಿಗೆ ಅನುಸಾರವಾಗಿ ಅದರ ಅಂಶಗಳನ್ನು ಸಂಯೋಜಿಸುವುದೇ ಭಾಷೆ. ಈ ಲೇಖನವು ಕೆಳಗೆ ನಮೂದಿಸಿದ ವಿಚಾರಗಳಿಗೆ ಸಂಬಂಧಿಸಿದೆ. (ಹಾಗೂ ಸೀಮಿತವಾಗಿದೆ): ಭಾಷೆಯ ರಚನಾ ಘಟಕಗಳಾದ ಶಬ್ದರೂಪ ರಚನಾ ಶಾಸ್ತ್ರ, morpheme (ರೂಪಾಕೃತಿ)ಗಳು ಮತ್ತು word (ಪದ)ಗಳ ಬಳಸಿದ ಅರ್ಥಪೂರ್ಣ phrase (ಪದಗುಚ್ಛ)ಗಳು, clause (ವಾಕ್ಯಾಂಶ)ಗಳು, ಮತ್ತು sentence (ವಾಕ್ಯ)ಗಳ ರಚನೆಗೆ ಸಂಬಂಧಿತ ನಿಯಮಗಳು. ಯಾವುದೇ ಭಾಷೆಯ ವ್ಯಾಕರಣವನ್ನು ಸಾಮಾನ್ಯವಾಗಿ ಎರಡು ವಿಭಿನ್ನ ರೀತಿಗಳಲ್ಲಿ ಪ್ರಸ್ತಾಪಿಸಬಹುದು: ವಿವರಣಾತ್ಮಕ - ಇದು ಸಾಮಾನ್ಯವಾಗಿ ವಿಶಾಲ ಭಾಷಾ ಪ್ರಯೋಗ ಸಂಗ್ರಹದ ವ್ಯವಸ್ಥಿತ ವಿಶ್ಲೇಷಣೆ; ಹಾಗೂ, ವಿಧಾಯಕ -(ಭಾಷಾ ಬಳಕೆ ಕಟ್ಟಳೆ) ಇದು ಮಾತನಾಡುವವರ ಭಾಷಿಕ ಪ್ರವೃತ್ತಿಗೆ ಅನ್ವಯಿಸಲೆಂದು ಭಾಷಾ ಸೂತ್ರಗಳನ್ನು ಗುರುತಿಸಿ ಬಳಸುವುದಾಗಿದೆ; (ಇದನ್ನು ನೋಡಿ: ಭಾಷಾಧ್ಯಯನದ ಅನುಶಾಸನ, ಹಾಗೂ, ವಿವರಣಾತ್ಮಕ ಭಾಷಾಧ್ಯಯನ). ವಿಧಾಯಕ ವ್ಯಾಕರಣವು ಇಂಗ್ಲಿಷ್‌ ವ್ಯಾಕರಣದಲ್ಲಿನ ಹಲವು ಮುಕ್ತ ಚರ್ಚಾಸ್ಪದ ವಿಚಾರಗಳಿಗೆ ಸಂಬಂಧಿಸಿದೆ. ಇದು ಕಾಲಾನಂತರದ,ಭಾಷಾ ಬಳಕೆಯಲ್ಲಿನ ಬದಲಾವಣೆಗಳನ್ನು ಪ್ರತಿನಿಧಿಸಿ ಆಗಾಗ್ಗೆ ನಿರೂಪಿಸುತ್ತದೆ. ಇಂಗ್ಲಿಷ್ ಭಾಷೆಯಲ್ಲಿ ಬಹಳಷ್ಟು ಚಾರಿತ್ರಿಕ, ಸಾಮಾಜಿಕ ಮತ್ತು ಪ್ರಾದೇಶಿಕ ವ್ಯತ್ಯಾಸ ಮತ್ತು ಏರಿಳಿತಗಳಿವೆ. ಉದಾಹರಣೆಗೆ, ಬ್ರಿಟೀಷ್ ಇಂಗ್ಲೀಷ್ ಮತ್ತು ಅಮೆರಿಕನ್ ಇಂಗ್ಲಿಷ್‌ ಭಾಷೆಗಳಲ್ಲಿ ಹಲವಾರು ಶಬ್ದಕೋಶೀಯ(ಶಬ್ದಾರ್ಥ ನಿಘಂಟಿನ) ಭಿನ್ನತೆಗಳಿವೆ; ಆದಾಗ್ಯೂ, ವ್ಯಾಕರಣ ಭೇದಗಳು ಎದ್ದು ಕಾಣುವಷ್ಟು ಗಮನಾರ್ಹವಾಗಿಲ್ಲ, ಸೂಕ್ತವೆನಿಸಿದಲ್ಲಿ ಮಾತ್ರ ಇವುಗಳನ್ನು ಚರ್ಚೆಗೊಳಪಡಿಸಲಾಗುವುದು. ಇನ್ನೂ ಹೆಚ್ಚಿಗೆ, ಇಂಗ್ಲಿಷ್‌ ಭಾಷೆಯ ಭಾಷಾಪ್ರಭೇದಗಳು ಇಲ್ಲಿ ವಿವರಿಸಿದ ವ್ಯಾಕರಣಕ್ಕಿಂತಲೂ ವಿಭಿನ್ನ ದಿಕ್ಕಿನಲ್ಲಿ ಚದುರಿವೆ; ಅವುಗಳನ್ನು ಸುಲಭವಾಗಿ ಮತ್ತು ಸುಲಲಿತವಾಗಿ ತಿಳಿಸಲಾಗಿದೆ. ಈ ಲೇಖನವು ಸರ್ವೆಸಾಮಾನ್ಯವೆನಿಸಿದ ಪ್ರಸಕ್ತ ಪ್ರಮಾಣಿತ ಗುಣಮಟ್ಟದ ಇಂಗ್ಲಿಷ್‌ ಭಾಷೆಯನ್ನು ವಿವರಿಸುತ್ತದೆ. ಪ್ರಸಾರ, ಶಿಕ್ಷಣ, ಮನರಂಜನೆ, ಸರ್ಕಾರ ಮತ್ತು ವಾರ್ತಾ ಸುದ್ದಿ ವರದಿಗಳಂತಹ ಸಾರ್ವಜನಿಕ ಭಾಷಣ,ಪ್ರವಚನ ಇತರೆಡೆಗಳಲ್ಲಿ ಬಳಸಿದ ಭಾಷಾಶೈಲಿಗಳನ್ನು ವಿವರಿಸುತ್ತದೆ. ಪ್ರಮಾಣಿತ ಇಂಗ್ಲಿಷ್‌ ಭಾಷೆಯು ಔಪಚಾರಿಕ ಮತ್ತು ಅನೌಪಚಾರಿಕ ಉಕ್ತಿಗಳೆರಡನ್ನೂ ಒಳಗೊಂಡಿದೆ.


Word classes and phrase classes (ಪದದ ವರ್ಗಗಳು ಮತ್ತು ಪದಗುಚ್ಛದ ವರ್ಗಗಳು)ಸಂಪಾದಿಸಿ
ಏಳು ಪ್ರಮುಖ ಪದ ವರ್ಗಗಳನ್ನು ಇಲ್ಲಿ ವಿವರಿಸಲಾಗಿದೆ. ಅವುಗಳೆಂದರೆ: noun (ನಾಮಪದ), verb (ಕ್ರಿಯಾಪದ), adjective (ವಿಶೇಷಣ), adverb (ಕ್ರಿಯಾವಿಶೇಷಣ), preposition (ಉಪಸರ್ಗ), conjunction (ಸಂಬಂಧಾವ್ಯಯ) ಮತ್ತು determiner (ಸ್ವರೂಪ ನಿರ್ಣಾಯಕ). ಇವುಗಳಲ್ಲಿ ಮೊದಲ ಆರನ್ನು ಸಾಂಪ್ರದಾಯಿಕವಾಗಿ 'parts of speech (ಭಾಷಾಖಂಡಗಳು ಅಥವಾ ಪದವಾಚಕಗಳು)' ಎಂದು ಉಲ್ಲೇಖಿಸಲಾಗಿದೆ. ಪದ ವರ್ಗಗಳಲ್ಲಿ ಕೆಲವು ಸಣ್ಣ, ಅಲ್ಪಸಂಖ್ಯಾತ ಗುಂಪುಗಳೂ ಸಹ ಇವೆ, ಉದಾಹರಣೆಗೆ interjections (ಭಾವಸೂಚಕಾವ್ಯಯ)ಗಳು. ಆದರೆ ಇವು ಇಂಗ್ಲಿಷ್‌ ಭಾಷೆಯ ವಾಕ್ಯಾಂಗ ಮತ್ತು ವಾಕ್ಯರಚನೆಯೊಳಗೆ ಹೊಂದಿಕೊಳ್ಳುವುದಿಲ್ಲ.[೧];Open and closed classes (ಮುಕ್ತ ಮತ್ತು ವ್ಯಂಜನಾಂತ್ಯದ ವರ್ಗಗಳು)ಮುಕ್ತ ಪದ ವರ್ಗಗಳು ಹೊಸ ಪದಗಳಿಗೆ ಅವಕಾಶ ನೀಡುತ್ತವೆ; ಸಂಕುಚಿತ ಪದ ವರ್ಗಗಳು ಅವಕಾಶ ನೀಡುವುದು ಬಹಳ ವಿರಳ.[4] ನಾಮಪದಗಳಲ್ಲಿ ಉದಾಹರಣೆಗೆ 'celebutante' (ಸೆಲೆಬ್ಯುಟೆಂಟ್)'('ಫ್ಯಾಷನ್‌ ಔತಣಗಳಿಗೆ ಭೇಟಿ ನೀಡುವ ಖ್ಯಾತನಾಮರು) ಮತ್ತು 'mentee' (ಮೆಂಟೀ) (ಆಪ್ತ ಸಲಹೆಗಾರರಿಂದದ ಸಲಹೆ ಪಡೆದ ವ್ಯಕ್ತಿ) ಮತ್ತು ಕ್ರಿಯಾವಿಶೇಷಣವಾದ '24/7' (ಅರ್ಥಾತ್‌ - ದಿನದ ಇಪ್ಪತ್ತನಾಲ್ಕೂ ಗಂಟೆಗಳು, ವಾರದಲ್ಲಿ ಏಳೂ ದಿನಗಳ ಸಂಕೇತ-ಸೂಚಕ) ("I am working on it 24/7" (ಅರ್ಥ: ನಾನು ಇದನ್ನು ಸರಿಪಡಿಸಲು ಇಡೀ ದಿನ, ಇಡೀ ವಾರ ಯತ್ನಿಸುತ್ತಿರುವೆ)) ಈ ತೆರನಾದ ಹೊಸ ಪದಗಳು, ಇದಕ್ಕಾಗಿ ನಾಮಪದಗಳು ಮತ್ತು ಕ್ರಿಯಾವಿಶೇಷಣಗಳ ಹಿನ್ನಲೆಯಲ್ಲಿ ಇವುಗಳನ್ನು [೧]ಮುಕ್ತ ವರ್ಗಗಳೆಂದು ಪರಿಗಣಿಸಬಹುದು.[೧] ಆದರೂ, ಸರ್ವನಾಮ 'his' ಅಥವಾ 'her' ಬದಲಿಗೆ 'their' ಎಂಬ ಲಿಂಗ-ತಟಸ್ಥ ಏಕವಚನವನ್ನು ಬಳಸುವುದು 40 ವರ್ಷಗಳಿಂದಲೂ ಸ್ವೀಕರಿಸಲಾಗಿಲ್ಲ. (ಉದಾಹರಣೆಗೆ: "Each new arrival should check in their luggage.") (ಅರ್ಥ: ಇಲ್ಲಿ ಆಗಮಿಸುವ ಪ್ರತಿಯೊಬ್ಬರೂ ತಮ್ಮ ಸಾಮಗ್ರಿ-ಸರಂಜಾಮನ್ನು ದಾಖಲಿಸಿಕೊಳ್ಳಬೇಕು) ಹಾಗಾಗಿ, ಸರ್ವನಾಮಗಳು ಸಂಕುಚಿತ ವರ್ಗಕ್ಕೆ ಸೇರುತ್ತವೆ.[೧]  ;Word classes and grammatical forms (ಪದ ವರ್ಗಗಳು ಮತ್ತು ವ್ಯಾಕರಣ ವಾಕ್ಯ ರಚನಾ ರೂಪಗಳು)ಕೆಲವೊಮ್ಮೆ ಒಂದೇ ಪದವು ಹಲವು ಪದ ವರ್ಗಗಳಿಗೆ ಸೇರಬಹುದು. ಪದದ ವರ್ಗ ಆವೃತ್ತಿಗೆ 'lexeme (ಪದದ ಮೂಲಾಂಶ)' ಎನ್ನಲಾಗಿದೆ.[೨] ಉದಾಹರಣೆಗೆ, 'run' (ರನ್‌) (ಓಟ) ಎಂಬ ಪದವು ಸಾಮಾನ್ಯವಾಗಿ ಕ್ರಿಯಾಪದವಾಗಿರುತ್ತದೆ, ಆದರೆ ಅದು ನಾಮಪದವೂ ಆಗಬಹುದು ("It is a ten mile run to Tipperary.") (ಅರ್ಥ:ಇಲ್ಲಿಂದ ಟಿಪೆರರಿಗೆ ಇದು ಹತ್ತು ಮೈಲುಗಳ ಓಟವಾಗಿದೆ); ಹಾಗಾಗಿ ಇವೆರಡೂ ವಿವಿಧ ಪದ ಘಟಕಗಳಾಗಬಹುದು.[೨] ಇನ್ನೂ ಹೆಚ್ಚಿಗೆ, ಇದೇ ಭಾಷಾಪದಘಟಕ ಹಲವು ವ್ಯಾಕರಣದ ರೂಪಗಳನ್ನು ಹೊಂದಬಹುದು. ಉದಾಹರಣೆಗೆ, ಕ್ರಿಯಾಪದದ (ಅಂಗ) ಘಟಕವಾಗಿ 'run (ರನ್‌)' ಹಲವು ಎಲ್ಲೆಯುಳ್ಳ ರೂಪಗಳನ್ನು ಹೊಂದಿವೆ: 'runs (ರನ್ಸ್‌),' 'ran (ರಾನ್‌)' and 'ರನಿಂಗ್‌ (ರನಿಂಗ್‌).'[೨] ಒಂದು ವರ್ಗದಲ್ಲಿನ ಪದಗಳು ಕೆಲವೊಮ್ಮೆ ಇನ್ನೊಂದು ವರ್ಗದಲ್ಲಿರುವ ಪದಗಳಿಂದ ಪಡೆದ ಉಪ ಉತ್ಪನ್ನಗಳಾಗಿ ಹೊಸ ಪದಗಳ ಸೃಷ್ಟಿಗೆ ದಾರಿಯಾಗಬಹುದು. ಉದಾಹರಣೆಗೆ, 'aerobics (ಏರೊಬಿಕ್ಸ್‌)' ಎಂಬ ನಾಮಪದವು ಇತ್ತೀಚೆಗೆ 'aerobicised (ಏರೊಬಿಕೈಸ್ಡ್‌)' ಎಂಬ ಹಲವು ವಿಶೇಷಣಗಳ ಸೃಷ್ಟಿಗೆ ಕಾರಣವಾಗಿದೆ ("the aerobicised bodies of Beverly Hills celebutantes." [೨]).;Phrase classes (ಪದಗುಚ್ಛದ ವರ್ಗಗಳು) ಪದಗಳ ಒಟ್ಟುಗೂಡುವಿಕೆಯಿಂದಾದ ಸಮೂಹವೇ phrase (ಪದಗುಚ್ಛ)ಗಳಾಗುತ್ತವೆ. ಇವು ಸ್ವತಃ ಪದ ವರ್ಗದ ಗುಣ-ಲಕ್ಷಣ ಹೊಂದುತ್ತವೆ. ಈ ವರ್ಗಗಳನ್ನು phrase classes (ಪದಗುಚ್ಛದ ವರ್ಗಗಳು) ಎನ್ನಲಾಗುತ್ತದೆ.[೨] The ancient pulse of germ and birth ಎಂಬ ಪದಗುಚ್ಛವು 'The ancient pulse of germ and birth was shrunken hard and dry' ಎಂಬ ವಾಕ್ಯದಲ್ಲಿ noun (ನಾಮಪದ)ವಾಗಿ ವರ್ತಿಸುತ್ತದೆ. (ಥಾಮಸ್‌ ಹಾರ್ಡಿ, The Darkling Thrush ) ಹಾಗಾಗಿ ಅದು ಒಂದು noun phrase (ನಾಮಪದ ಪದಗುಚ್ಛ) ಆಗಿದೆ. ಇತರೆ phrase classes (ಪದಗುಚ್ಛ ವರ್ಗಗಳು) ಹೀಗಿವೆ: verb phrases (ಕ್ರಿಯಾಪದ ಪದಗುಚ್ಛಗಳು), adjective phrases (ವಿಶೇಷಣ ಪದಗುಚ್ಛಗಳು), adverb phrases (ಕ್ರಿಯಾವಿಶೇಷಣ ಪದಗುಚ್ಛಗಳು), prepositional phrases (ಪದದ ಹಿಂದೆ ಸೇರಿಸಿದ ಅಥವಾ ಪೂರ್ವ ಪ್ರತ್ಯಯಗಳು,ಉಪಸರ್ಗದ ಪದಗುಚ್ಛಗಳು) ಮತ್ತು determiner phrases (ಸ್ವರೂಪ ನಿರ್ಣಾಯಕ ಪದಗುಚ್ಛಗಳು).[೨](ಸ್ವತಂತ್ರ ವಾಕ್ಯದ ಪ್ರಧಾನ ಕ್ರಿಯಾಪದವಿಲ್ಲದ ಶಬ್ದ ಸಮೂಹ)
Nouns and determiners (ನಾಮಪದಗಳು ಮತ್ತು ಸ್ವರೂಪ ನಿರ್ಣಾಯಕಗಳು)ಸಂಪಾದಿಸಿ
Nouns (ನಾಮಪದಗಳು) ಅತಿದೊಡ್ಡ ಪದ ವರ್ಗವನ್ನು ಸೃಷ್ಟಿಸುತ್ತವೆ. ಕಾರ್ಟರ್‌ ಮತ್ತು ಮೆಕಾರ್ಥಿ ಪ್ರಕಾರ, ನಾಮಪದಗಳು 'ಜನರು, ಪ್ರಾಣಿಗಳು, ನಿರ್ಜೀವ ವಸ್ತುಗಳು, ಸ್ಥಳಗಳು, ಘಟನೆಗಳು, ಲಕ್ಷಣಗಳು ಮತ್ತು ಸ್ಥಿತಿಗಳು ಸೇರಿದಂತೆ ವಿಶ್ವದಲ್ಲಿ ವಿವಿಧ ಅಂಶಗಳು ಮತ್ತು ವರ್ಗಗಳನ್ನು' ಸೂಚಿಸುತ್ತವೆ.[೨] ಇದರ ಫಲವಾಗಿ, 'Mandela,' 'jaguar,' 'mansion,' 'volcano,' 'Timbuktoo,' 'blockade,' 'mercy,' ಮತ್ತು 'liquid' ಇವೆಲ್ಲವೂ ಸಹ ನಾಮಪದಗಳು (nouns). ನಾಮಪದಗಳನ್ನು ಸಾಮಾನ್ಯವಾಗಿ ಅವುಗಳ ರೂಪಗಳಿಂದ ಗುರುತಿಸಲಾಗುವುದಿಲ್ಲ. ಆದರೂ, '-age' ('shrinkage'), '-hood' ('sisterhood'), '-ism' ('journalism'), '-ist' ('lyricist'), '-ment' ('adornment'), '-ship' ('companionship'), '-tude' ('latitude'), ಮುಂತಾದ ಕೆಲವು ಸಾಮಾನ್ಯ suffixes (ಪದದ ಕೊನೆ ಭಾಗಕ್ಕಿರುವ ಪ್ರತ್ಯಯಗಳು) ನಾಮಪದಗಳ identifiers (ಗುರುತುಕಾರಕಗಳು,ಸೂಚಕಗಳು) ಆಗಿರುತ್ತವೆ.[೨] ಆದರೂ, ಕೆಲವು ಅಪವಾದಗಳಿವೆ: 'assuage' ಮತ್ತು 'disparage' ಕ್ರಿಯಾಪದಗಳಾಗಿವೆ (verbs); 'augment' ಕ್ರಿಯಾಪದವಾಗಿದೆ, 'lament' ಸಹ ಕ್ರಿಯಾಪದವಾಗಬಹುದು ಮತ್ತು 'worship' ಕ್ರಿಯಾಪದವಾಗಿದೆ. ಕ್ರಿಯಾಪದ ಮತ್ತು ಗುಣವಾಚಕ,ವಿಶೇಷಣಗಳನ್ನು ಪರಿವರ್ತಿಸಿ ನಾಮಪದಗಳ ಸೃಷ್ಟಿಸಬಹುದು. 'a boring talk,' 'a five-week run,' 'the long caress,' 'the utter disdain,' ಮುಂತಾದ ಉದಾಹರಣೆಗಳಲ್ಲಿ ನಾಮಪದಗಳಿವೆ.;ಸಂಖ್ಯೆ, ಲಿಂಗ, ಮಾದರಿ, ನಮೂನೆ ಮತ್ತು ವಾಕ್ಯರಚನೆಯ ಲಕ್ಷಣಗಳು. ನಾಮಪದಗಳು singular (ಏಕವಚನ) ಮತ್ತು plural (ಬಹುವಚನ) ರೂಪಗಳನ್ನು ಹೊಂದಿವೆ.[೩] ಹಲವು ಬಹುವಚನ ರೂಪಗಳು -s ಅಥವಾ -es ಅಕ್ಷರಗಳೊಂದಿಗೆ ಕೊನೆಗೊಳ್ಳುತ್ತವೆ (dog/dogs, referee/referees, bush/bushes) ಆದರೆ ಎಲ್ಲವೂ ಇದೇ ರೀತಿಯಲ್ಲಿರುವುದಿಲ್ಲ (woman/women, axis/axes, medium/media). ಕೆಲವು ಇತರೆ ಭಾಷೆಗಳಿಗಿಂತಲೂ ಭಿನ್ನವಾಗಿ, ವಾಕ್ಯದಲ್ಲಿ ಕ್ರಿಯಾಪದದ ರೂಪವನ್ನು ಪ್ರಭಾವಿಸುವ ವ್ಯಾಕರಣದ ಲಿಂಗವನ್ನು ನಾಮಪದಗಳು ಹೊಂದಿರುವುದಿಲ್ಲ.[೩] ಆದರೂ, ಜೀವಂತ (ಪುಲ್ಲಿಂಗ ಅಥವಾ ಸ್ತ್ರೀಲಿಂಗ)ಗಳಿಗೆ ಹಲವು ನಾಮಪದಗಳನ್ನು ಉಲ್ಲೇಖಿಸಬಹುದು (mother/father, tiger/tigress, alumnus/alumna, male/female).[೩] ಅರ್ಥಕ್ಕೆ ಸಂಬಂಧಿಸಿದಂತೆ, ನಾಮಪದಗಳನ್ನು ಅವುಗಳ ಸೂಚ್ಯಾರ್ಥ ಇಲ್ಲವೆ ಶಬ್ದಾರ್ಥಗಳ ಪ್ರಕಾರ ವರ್ಗೀಕರಿಸಬಹುದು: common nouns (ರೂಢನಾಮಗಳು) ('sugar,' 'maple,' 'syrup,' 'wood'), proper nouns (ಅಂಕಿತನಾಮಗಳು), ("Cyrus," "China"), concrete nouns () ("book," "laptop") ಮತ್ತು abstract nouns (ಅನ್ವರ್ಥನಾಮಗಳು) ("heat," "prejudice").[೩] ಪರ್ಯಾಯವಾಗಿ, ಅವುಗಳನ್ನು ವ್ಯಾಕರಣದ ಪ್ರಕಾರ ಗುರುತಿಸಬಹುದು: count nouns (ಎಣಿಸಬಹುದಾದ ನಾಮಪದಗಳು) ('clock,' 'city,' 'colour') ಮತ್ತು non-count nouns (ಎಣಿಸಲಾಗದ ನಾಮಪದಗಳು) ('milk,' 'decor,' 'foliage').[೪] ನಾಮಪದಗಳ ಗುರುತಿಸಲು ಸಹಾಯಕವಾಗುವ ಹಲವಾರು ವಾಕ್ಯರಚನೆಯ ನಿಯಮದ ಲಕ್ಷಣಗಳನ್ನು ಅನುಸರಿಸಲಾಗುತ್ತದೆ.[೪] ನಾಮಪದಗಳು (ಉದಾಹರಣೆಗೆ: ರೂಢನಾಮ 'cat') ಕೆಳಕಂಡಂತಿವೆ:
1.ವಿಶೇಷಣಗಳಿಂದ ಬದಲಾವಣೆಯಾಗಿರಬಹುದು ('the beautiful Angora cat'),
2.ಸ್ವರೂಪ ನಿರ್ಣಾಯಕವು ಇದಕ್ಕೆ ಮುಂಚೆ ಬರಬಹುದು ('the beautiful Angora cat'), ಅಥವಾ
3.ಇತರೆ ನಾಮಪದಗಳಿಂದ ಮುಂಚಿತವಾಗಿಯೇ ಪರಿವರ್ತಿತವಾಗಬಹುದು ('the beautiful Angora cat').[೪]
Noun phrases (ನಾಮಪದದ ಪದಗುಚ್ಛಗಳು)ಸಂಪಾದಿಸಿ
ನಾಮಪದ ಪದಗುಚ್ಛಗಳು (noun phrases) ವಾಕ್ಯಗಳೊಳಗೇ ವ್ಯಾಕರಣದ ಪ್ರಕಾರ ನಾಮಪದಗಳಾಗಿ ಕಾರ್ಯನಿರ್ವಹಿಸುವ ಪದಗುಚ್ಛಗಳಾಗಿವೆ. ಜೊತೆಗೆ, ನಾಮಪದಗಳು 'heads' ಅಥವಾ ನಾಮಪದ ಪದಗುಚ್ಛಗಳ ಮುಖ್ಯ ಪದಗಳಂತೆ ವರ್ತಿಸುತ್ತವೆ. [೪] ಉದಾಹರಣೆಗೆ (ಮುಖ್ಯಪದಗಳು ಎದ್ದುಕಾಣುವ ಅಕ್ಷರಗಳಲ್ಲಿ ನಮೂದಿಸಲಾಗಿವೆ):
1."The burnt-out ends of smoky days."[೫]
2."The real raw-knuckle boys who know what fighting means, ..."[೬]
3."The idle spear and shield ..."[೭]
ಪ್ರಧಾನ ಪದವು ಪರಿವರ್ತಕಗಳು (modifiers) , ಅಥವಾ ಕ್ರಿಯಾರ್ಥದ ಪರಿಪೂರಕಗಳು (complement) ಅಥವಾ ಎರಡನ್ನೂ ಸಹ ಹೊಂದಬಹುದು. ಪರಿವರ್ತಕಗಳು ಪ್ರಧಾನ ಪದದ ಮುಂಚೆ ಸಂಭವಿಸಬಹುದು ("The real raw-knuckle boys ...," ಅಥವಾ "The burnt-out ends ...") ಇವುಗಳನ್ನು pre-modifiers ಎನ್ನಲಾಗಿದೆ; ಅಥವಾ, ಮುಖ್ಯಪದದ ನಂತರ ಸಂಭವಿಸಬಹುದು ("who know what fighting means ...") ಇವುಗಳನ್ನು post-modifiers ಎನ್ನಲಾಗಿದೆ.[೪] ಉದಾಹರಣೆಗೆ: "The rough, seamy-faced, raw-boned College Servitor ..."[೮] ಉದಾಹರಣೆಗೆ, ಪರಿವರ್ತನಾ-ಪೂರ್ವ ಪದಗುಚ್ಛವು ('The') ಎಂಬ ಸ್ವರೂಪ ನಿರ್ಣಾಯಕಗಳನ್ನು, ('rough,' 'seamy-faced,' ...) ಎಂಬ ವಿಶೇಷಣಗಳು ಮತ್ತು ('College') ಇತರೆ ನಾಮಪದಗಳನ್ನು ಹೊಂದಿದೆ. ಪರಿಪೂರಕಗಳು (Complements) ಮುಖ್ಯಪದಗಳ ನಂತರವೂ ಸಹ ಸಂಭವಿಸುತ್ತದೆ. ಆದರೂ, ನಾಮಪದ ಪದಗುಚ್ಛದ ಅರ್ಥವನ್ನು ಪೂರ್ಣಗೊಳಿಸಲು ಅವುಗಳ ಅಗತ್ಯವಿದೆ (post-modifiers ಅಷ್ಟು ಅಲ್ಲ).[೯] ಉದಾಹರಣೆಗೆ (ಪರಿಪೂರಕಗಳನ್ನು ವಾಲಿದ ಅಕ್ಷರಗಳಲ್ಲಿ ನಮೂದಿಸಲಾಗಿದೆ; ಪ್ರಮುಖಪದಗಳನ್ನು ಎದ್ದುಕಾಣುವ ಅಕ್ಷರಗಳಲ್ಲಿ ನಮೂದಿಸಲಾಗಿದೆ):
1."The burnt-out ends of smoky days ."[೧೦]
2."The suggestion that Mr. Touchett should invite me appeared to have come from Miss Stackpole."[೧೧]
3."The ancient pulse of germ and birth was shrunken hard and dry."[೧೨]
ವಾಕ್ಯದೊಳಗಿನ, ನಾಮಪದದ ಪದಗುಚ್ಛವು ವ್ಯಾಕರಣ ವಿಷಯದ ಕರ್ತೃ, ಕರ್ಮ ಅಥವಾ ಪರಿಪೂರಕದ ಅಂಗವಾಗಿರಬಹುದು. ಉದಾಹರಣೆಗಳು (ನಾಮಪದ ಪದಗುಚ್ಛಗಳನ್ನು ವಾಲಿದ ಅಕ್ಷರಗಳಲ್ಲಿ ನಮೂದಿಸಲಾಗಿದೆ; ಪ್ರಮುಖ ಪದಗಳನ್ನು ಸ್ಥೂಲ ಅಕ್ಷರಗಳಲ್ಲಿ ನಮೂದಿಸಲಾಗಿದೆ):[೯]
1.ವ್ಯಾಕರಣದ ಕರ್ತೃ: "Some mute inglorious Milton here may rest."[೧೩]
2.ಕರ್ಮಪದ: "Dr. Pavlov ... delivered many long propaganda harangues ..."[೧೪]).
3.ಪರಿಪೂರಕ: "'All they see is some frumpy, wrinkled-up person passing by in a carriage waving at a crowd ."[೧೫]
Verbs (ಕ್ರಿಯಾಪದಗಳು)ಸಂಪಾದಿಸಿ
ನಾಮಪದಗಳ ನಂತರ ಕ್ರಿಯಾಪದಗಳದ್ದು ಎರಡನೆಯ ಅತಿ ದೊಡ್ಡ ಪದಸಮೂಹದ ವರ್ಗವಾಗಿದೆ. ಕಾರ್ಟರ್‌ ಮತ್ತು ಮೆಕಾರ್ಥಿ ಪ್ರಕಾರ, ಕ್ರಿಯಾಪದಗಳು (verbs) 'ಕ್ರಿಯೆಗಳು, ಘಟನೆಗಳು, ಪ್ರಕ್ರಿಯೆಗಳು ಮತ್ತು ವಸ್ತುಸ್ಥಿತಿಗಳನ್ನು' ಸೂಚಿಸುತ್ತವೆ.[೧೬] ಹಾಗಾಗಿ, 'smile,' 'stab,' 'climb,' 'confront,' 'liquefy,' 'wake,' 'reflect' - ಇವೆಲ್ಲವೂ ಸಕರ್ಮಕ ಕ್ರಿಯಾಪದಗಳು (verbs). ಕೆಲವು ಅಂತ್ಯಪ್ರತ್ಯಯಗಳನ್ನು ಅಗಾಗ್ಗೆ ಕ್ರಿಯಾಪದಗಳೊಂದಿಗೆ ಜೋಡಿಸಲಾಗುತ್ತದೆ. ಉದಾಹರಣೆಗಳು: '-ate' ('formulate'), '-iate' ('inebriate'), '-ify' ('electrify') and '-ise' ('sermonise').[೧೬] ಇದರಲ್ಲಿ ಅಪವಾದಗಳಿವೆ: 'chocolate' ಎಂಬುದು ನಾಮಪದ, 'immediate' ವಿಶೇಷಣ, 'prize' ನಾಮಪದವಾಗಬಹುದು ಮತ್ತು 'maize' ಸಹ ನಾಮಪದವಾಗಿದೆ. ಹೊಸ ಕ್ರಿಯಾಪದಗಳ ಸೃಷ್ಟಿಗೆ ಪೂರ್ವಪ್ರತ್ಯಯಗಳನ್ನು (Prefixes) ಬಳಸಬಹುದು. ಉದಾಹರಣೆಗೆ: 'un-' ('unmask'), 'out-' ('outlast'), 'over-' ('overtake') ಮತ್ತು 'under-' ('undervalue').[೧೬](ಅಂದರೆ ವರ್ತಮಾನದ ಪ್ರಥಮ ಪುರುಷ ಪ್ರತ್ಯಯ ಬಳಕೆ ಮಾಡಲಾಗಿದೆ). ಹೀಗೆ ಪರಿವರ್ತನೆಯ ಮೂಲಕ ಕ್ರಿಯಾಪದಗಳಿಂದ ನಾಮಪದಗಳ ಸೃಷ್ಟಿ ಸಾಧ್ಯವೋ, ಇದರ ವಿರುದ್ಧಕ್ರಮವೂ ಸಹ ಸಾಧ್ಯ:[೧೬]
◾"so are the sons of men snared in an evil time"[೧೭]
◾"[a national convention] nosed parliament in the very seat of its authority"[೧೮]
ವಿಶೇಷಣಗಳಿಂದ ಕ್ರಿಯಾಪದಗಳನ್ನು ರಚಿಸಬಹುದು:[೧೬]
◾"To dry the old oak's sap and cherish springs."[೧೯]
◾"Time's glory is to calm contending kings"[೨೦];Regular and irregular verbs (ಕ್ರಮಬದ್ಧ ಮತ್ತು ಕ್ರಮಬದ್ಧತೆ ಇಲ್ಲದ ಕ್ರಿಯಾಪದಗಳು)ಕ್ರಿಯಾಪದವೊಂದಕ್ಕೆ ವಿಭಕ್ತಿಯ ನಿಷ್ಪನ್ನ ರೂಪಗಳ ಸೇರಿಸಿ ಹೊಸ ರೂಪಗಳನ್ನು ರಚಿಸಿದಾಗ ತನ್ನ ಮೂಲ ಸ್ವರೂಪ ಬದಲಾಗದ ಕ್ರಿಯಾಪದವೇ ಕ್ರಮಬದ್ಧ ಕ್ರಿಯಾಪದ. [೨೧] ಉದಾಹರಣೆಗೆ: ತಳಪಾಯ ಅಥವಾ ಮೂಲ ರೂಪ (base form): climb; ವರ್ತಮಾನ ರೂಪ (present form): climb; -s ರೂಪ: climbs ; -ing ರೂಪ: climbing ; ಭೂತಕಾಲ ರೂಪ (past form): climbed ; -ed ಕೃದಂತ (participle): climbed .[೨೧]
ಮೂಲರೂಪ ಬದಲಾವಣೆಗೊಳ್ಳುವ ಕ್ರಿಯಾಪದಗಳು ಕ್ರಮಬದ್ಧವಲ್ಲದ ಕ್ರಿಯಾಪದಗಳಾಗಿರುತ್ತವೆ. ಪ್ರತಿಯೊಂದು ರೂಪಕ್ಕೂ ಹೊಂದುವಂತಹ ಅಂತ್ಯಗಳು ಯಾವಾಗಲೂ ಏಕರೂಪದ್ದಾಗಿರುವದಿಲ್ಲ.[೨೧] ಉದಾಹರಣೆಗಳು:
◾ಮೂಲ ರೂಪ: catch; ವರ್ತಮಾನ ರೂಪ: catch; -s ರೂಪ: catches; -ing ರೂಪ: catching; ಭೂತಕಾಲ ರೂಪ: caught; -ed ಕೃದಂತ: caught.
◾ಮೂಲ ರೂಪ: choose; ವರ್ತಮಾನ ರೂಪ: choose; -s ರೂಪ: chooses; -ing ರೂಪ: choosing; ಭೂತಕಾಲ ರೂಪ: chose; -ed ಕೃದಂತ: chosen.
ವ್ಯಾಕರಣ ರೂಪಗಳ ಪ್ರತಿಯೊಂದು ವರ್ಗಕ್ಕೂ ವಿಭಿನ್ನ ರೂಪನಿಷ್ಪತ್ತಿ(ವಿಭಕ್ತಿ ಅಥವಾ ಆಖ್ಯಾತ) ಹೊಂದಿರುವ ಏಕೈಕ ಇಂಗ್ಲಿಷ್‌ ಕ್ರಿಯಾಪದ 'be'. ಮೂಲ ರೂಪ: be; ವರ್ತಮಾನ ರೂಪ: am, are; -s ರೂಪ: is; -ing ರೂಪ: being; ಭೂತಕಾಲ ರೂಪ: was, were; -ed ಕೃದಂತ: been.[೨೧] ;Type and characteristics (ವಿಧಗಳು ಮತ್ತು ವೈಶಿಷ್ಟ್ಯಗಳು)ಕ್ರಿಯಾಪದಗಳು (Verbs) ಮೂರು ವ್ಯಾಕರಣ ರೀತಿಗಳಲ್ಲಿ ಬರುತ್ತವೆ: lexical (ಶಬ್ದಕೋಶೀಯ), auxiliary (ಸಹಾಯಕ) ಮತ್ತು inflectional (ರೀತಿಸೂಚಕ/ಕ್ರಿಯಾ ಭಾವನಿರ್ದೇಶಕ).[೨೨] ಶಬ್ದಕೋಶೀಯ ಕ್ರಿಯಾಪದಗಳು ಮುಕ್ತ ವರ್ಗದ ಅಂಗವಾಗಿದ್ದು, ಬಹಳಷ್ಟು ಕ್ರಿಯಾಪದಗಳನ್ನು (ಸ್ಥಿತಿ, ಕ್ರಿಯೆ, ಪ್ರಕ್ರಿಯೆ ಮತ್ತು ಘಟನೆಗಳು) ಒಳಗೊಂಡಿರುತ್ತವೆ. ಉದಾಹರಣೆಗೆ, 'dive,' 'soar,' 'swoon,' 'revive,' 'breathe,' 'choke,' 'lament,' 'celebrate,' 'consider,' 'ignore' ಇವೆಲ್ಲವೂ ಶಬ್ದಕೋಶೀಯ ಕ್ರಿಯಾಪದಗಳು.[೨೨] ಸಹಾಯಕ ಕ್ರಿಯಾಪದಗಳು ಸಂಕುಚಿತ ವರ್ಗದ ಅಂಗವಾಗಿದ್ದು, ಕೇವಲ ಮೂರು ಶಬ್ದಗಳನ್ನು ಹೊಂದಿರುತ್ತವೆ: be, do, ಮತ್ತು have.[೨೨] ಸಹಾಯಕ ಕ್ರಿಯಾಪದಗಳು ಶಬ್ದಕೋಶೀಯ ಕ್ರಿಯಾಪದಗಳಾಗಿದ್ದರೂ ಸಹ, ಇತರೆ ಕ್ರಿಯಾಪದಗಳಿಗೆ ಹೆಚ್ಚಿನ ಮಾಹಿತಿ ಸೇರಿಸುವುದು ಅವುಗಳ ಮುಖ್ಯ ಕ್ರಿಯೆಯಾಗಿದೆ. ಈ ಮಾಹಿತಿಯು (a) aspect (progressive, perfect) (ಸ್ಥಿತಿ ಗತಿಸೂಚಕ, ಪೂರ್ಣವಾಚಕ), (b) passive voice (ಕರ್ಮಣಿ ಪ್ರಯೋಗ) ಮತ್ತು (c) clause type (interrogative, negative) (ವಾಕ್ಯಾಂಶ ವಿಧ) (ಪ್ರಶ್ನಾತ್ಮಕ, ನಕಾರಾತ್ಮಕ)) ಸೂಚಿಸುತ್ತದೆ.[೨೨] ಕೆಳಗಿನ ಉದಾಹರಣೆಗಳಲ್ಲಿ, ಸಹಾಯಕ ಕ್ರಿಯಾಪದವು ಎದ್ದುಕಾಣುವ ಅಕ್ಷರಗಳಲ್ಲಿ ಹಾಗೂ ಶಬ್ದಕೋಶೀಯ ಕ್ರಿಯಾಪದವು ವಾಲಿದ ಅಕ್ಷರಗಳಲ್ಲಿದೆ.
1.aspect (progressive): "'She is breathing Granny; we've got to make her keep it up, that's all—just keep her breathing."[೨೩]
2.aspect (perfect): "'Yes, I want a coach,' said Maurice and bade the coachman draw up to the stone where the poor man who had swooned was sitting."[೨೪]
3.passive voice: "When she was admitted into the house Beautiful, care was taken to inquire into the religious knowledge of her children."[೨೫]
4.clause type (interrogative): (Old joke) Boy: "Excuse me sir, How do I get to Carnegie Hall?" Man on street: "Practice, Practice, Practice."
5.clause type (negative): Wasn't she monstrously surprised ?"[೨೬]ಭಾವಸೂಚಕ/ಭಾವನಿರ್ದೇಶಕ ಕ್ರಿಯಾಪದಗಳು ಸಹ ಸಂಕುಚಿತ ವರ್ಗದ ಅಂಗವಾಗುತ್ತದೆ. ಈ ವರ್ಗವು ಮೂಲಾಧಾರ ರೀತಿಸೂಚಕಗಳು ('can,' 'could,' 'shall,' 'should,' 'will,' 'would,' 'may,' 'might,' 'must'), ಅರೆ-ಭಾವರೀತಿಸೂಚಕಗಳು ('dare,' 'need,' 'ought to,' 'used to') ಮತ್ತು ರೀತಿಸೂಚಕ ವಾಕ್ಯಖಂಡಗಳು ('be able to,' 'have to') ಹೊಂದಿರುತ್ತವೆ.[೨೨] ರೀತಿಸೂಚಕಗಳು ಖಚಿತತೆ ಮತ್ತು ಅಗತ್ಯವನ್ನಾಧರಿಸಿ ಶಬ್ದಕೋಶೀಯ ಕ್ರಿಯಾಪದಗಳಿಗೆ ಮಾಹಿತಿಯನ್ನು ಸೇರಿಸುತ್ತವೆ.[೨೨] ಉದಾಹರಣೆಗಳು:
◾less certain: "Before the snow could melt for good, an ice storm covered the lowcountry and we learned the deeper treachery of ice."[೨೭]
◾more certain: "Eat your eggs in Lent and the snow will melt . That's what I say to our people when they get noisy over their cups at San Gallo ..."[೨೮]* expressing necessity: "But I should think there must be some stream somewhere about. The snow must melt ; besides, these great herds of deer must drink somewhere."[೨೯]
ಭಾವಸೂಚಕ ಕ್ರಿಯಾಪದಗಳು (Modal verbs) ವ್ಯಕ್ತಿ, ಸಂಖ್ಯೆ ಮತ್ತು ಕಾಲರೂಪಗಳಿಗೆ (tense) ರೂಪನಿಷ್ಪತ್ತಿ (inflect) ಮಾಡುವುದಿಲ್ಲ.[೨೨] ಉದಾಹರಣೆಗಳು:
◾person: "I/you/she might consider it."
◾number: "I/We/She/They might consider it"
◾tense: "They might have considered/be considering/have been considering it."
ಕ್ರಿಯಾಪದಗಳೂ ಸಹ ಅವುಗಳನ್ನು ಗುರುತಿಸಲು ನೆರವಾಗುವ ಲಕ್ಷಣಗಳನ್ನು ಹೊಂದಿವೆ:
1.ವ್ಯಾಕರಣದ ಕರ್ತೃ ನಾಮಪದ ಪದಗುಚ್ಛವನ್ನು (subject noun phrase) (ವಾಲಿದ ಅಕ್ಷರಗಳಲ್ಲಿ ನೀಡಲಾಗಿದೆ) ಅನುಸರಿಸುತ್ತದೆ: "The real raw-knuckle boys who know what fighting means enter the arena without fanfare."
2.ಸಂಖ್ಯಾರೂಪದಲ್ಲಿರುವ subject noun phraseನೊಂದಿಗೆ ಹೊಂದಿಕೊಳ್ಳುತ್ತವೆ: "The real raw-knuckle boy/boys who knows/know what fighting means enters/enter the arena without fanfare.
3.ವ್ಯಕ್ತಿರೂಪದಲ್ಲಿರುವ subject noun phraseನೊಂದಿಗೆ ಹೊಂದಿಕೊಳ್ಳುತ್ತವೆ: "I/He, the real raw-knuckle boy who knows what fighting means, enter/enters the arena without fanfare", ಹಾಗೂ
4.ರೀತಿಸೂಚಕ ಕ್ರಿಯಾಪದಗಳನ್ನು ಹೊರತುಪಡಿಸಿ, ಅವುಗಳು ಕಾಲರೂಪವನ್ನು ಸೂಚಿಸಬಹುದು: "The boys ... had been entering the arena without fanfare."
Verb phrases (ಕ್ರಿಯಾಪದದ ಪದಗುಚ್ಛಗಳು)ಸಂಪಾದಿಸಿ
ಪ್ರಭೇದಗಳುಸಂಪಾದಿಸಿ
ಕ್ರಿಯಾಪದದ ಪದಗುಚ್ಛಗಳು ಸಂಪೂರ್ಣ ಕ್ರಿಯಾಪದಗಳಿಂದ ಕೂಡಿರುತ್ತವೆ. ಇವು ಶಬ್ದಕೋಶೀಯ, ಸಹಾಯಕ ಮತ್ತು ಭಾವಸೂಚಕ ಕ್ರಿಯಾಪದಗಳಾಗಬಹುದು. ಮುಖ್ಯಪದವು ಕ್ರಿಯಾಪದ ಪದಗುಚ್ಛದಲ್ಲಿನ ಮೊದಲ ಕ್ರಿಯಾಪದವಾಗಿದೆ.[೩೦] ಉದಾಹರಣೆ:
◾"I didn't notice Rowen around tonight," remarked Don, as they began to prepare for bed. "Might have been sulking in his tent," grinned Terry."[೩೧] ಇಲ್ಲಿ, "might have been sulking" ಎಂಬ ಕ್ರಿಯಾಪದ ಪದಗುಚ್ಛವು "ಭಾವ ಸೂಚಕ-ಸಹಾಯಕ-ಸಹಾಯಕ-ಪದಕೋಶೀಯ (modal-auxiliary-auxiliary-lexical)" ರೂಪವನ್ನು ಹೊಂದಿದೆ.
ಕ್ರಿಯಾಪದದ ಪದಗುಚ್ಛದಲ್ಲಿ ಭಾವಾರ್ಥ ಸೂಚಕವು ಮೊದಲು ಬರುತ್ತದೆ, ನಂತರ ಒಂದು ಅಥವಾ ಹಲವು ಸಹಾಯಕ ಕ್ರಿಯಾಪದಗಳು, ಆಂತ್ಯದಲ್ಲಿ ಪದಕೋಶೀಯ (ಮುಖ್ಯ) ಕ್ರಿಯಾಪದವು ಬರುತ್ತದೆ.[೩೦] ಕ್ರಿಯಾಪದ ಪದಗುಚ್ಛವು ರೀತಿಸೂಚಕ ಮತ್ತು ಸಹಾಯಕ ಕ್ರಿಯಾಪದಗಳ ಸಂಯುಕ್ತವನ್ನು ಹೊಂದಿದ್ದಲ್ಲಿ, ಇದು ಸಾಮಾನ್ಯವಾಗಿ ಈ ಕ್ರಮದಲ್ಲಿ ಜೋಡಣೆಯಾಗಿರುತ್ತದೆ: modal verb (ಭಾವ ಸೂಚಕ ಕ್ರಿಯಾಪದ) >> perfect (ಪೂರ್ಣವಾಚಕ) have >> progressive (ಗತಿಸೂಚಕ) be >> passive (ಕರ್ಮಣೀಪ್ರಯೋಗ) be >> Lexical verb (ಪದಕೋಶೀಯ ಕ್ರಿಯಾಪದ).[೩೦] ಉದಾಹರಣೆಗಳು:
◾"He might have been being used by the CIA as part of their debriefing procedure, but he might just as easily have been part of the Russians' plans to use Oswald in America."[೩೨] ಇಲ್ಲಿ, ಕ್ರಿಯಾಪದ ಪದಗುಚ್ಛವು ಹೀಗಿದೆ: might (modal (ರೀತಿಸೂಚಕ)) have (perfect (ಪೂರ್ಣವಾಚಕ)) been (progressive (ಗತಿಸೂಚಕ)) being (passive (ಕರ್ಮಣೀ ಪ್ರಯೋಗ)) used (lexical (ಪದಕೋಶೀಯ)).
◾"be able to" ಎಂಬ ರೀತಿಸೂಚಕವು ಇದಕ್ಕೆ ಅಪವಾದವಾಗಿದೆ: "It is best to know that she has (perfect (ಪೂರ್ಣವಾಚಕ)) been (progressive (ಗತಿಸೂಚಕ)) able to (modal expression (ರೀತಿಸೂಚಕ)) balance (lexical verb (ಪದಕೋಶೀಯ ಕ್ರಿಯಾಪದ)) these qualities and quantities with a grace which has not fallen short of greatness ...."[೩೩]
Tense (ಧಾತುವಿನ ಕಾಲರೂಪ)ಸಂಪಾದಿಸಿ

ಕಾಮೆಂಟ್‌ಗಳಿಲ್ಲ:

ಕಾಮೆಂಟ್‌‌ ಪೋಸ್ಟ್‌ ಮಾಡಿ