ಬುಧವಾರ, ಜೂನ್ 17, 2015

ಶಾತವಾಹನರು

ಶಾತವಾಹನರು


ಶಾತವಾಹನರು
ಕರ್ನಾಟಕವನ್ನಾಳಿದ ಮೊದಲ ಹಿರಿಯ ಐತಿಹಾಸಿಕ ಸಾಮ್ರಾಜ್ಯ - ಶಾತವಾಹನರು .
ಆರಂಭದಲ್ಲಿ ಶಾತವಾಹನರು ಇವರ ಸಾಮಂತರಾಗಿದ್ದರು - ಮೌರ್ಯರು .
ಶಾತವಾಹನರ ರಾಜಧಾನಿ - ಪೈಥಾನ್ ಅಥವಾ ಪ್ರತಿಷ್ಠಾನ್.
ಶಾತವಾಹನರು ಸುಮಾರು - 460 ವರ್ಷ ಸಾಮ್ರಾಜ್ಯ ಆಳಿದರು .
ಶಾತವಾಹನರು ಈ ಮೂಲದವರು - ಆಂಧ್ರ ಮೂಲದವರು .
ಪ್ರಸ್ತುತ ಪೈಥಾನ್ ಈ ಪ್ರದೇಶದಲ್ಲಿದೆ - ಮಹಾರಾಷ್ಟ್ರ ಜೌರಂಗಬಾದ್ ಜಿಲ್ಲೆಯಲ್ಲಿದೆ .
ರಾಜಕೀಯ ಇತಿಹಾಸ
ಶಾತವಾಹನ ವಂಶದ ಸ್ಥಾಪಕ ದೊರೆ - ಸಿಮುಖ .
ಸಿಮುಖನ ರಾಜಧಾನಿ - ಪೈಥಾನ್ .
ಸಿಮುಖ ಮೌರ್ಯ ದೊರೆ ನಿಶಿರ್ಮನನ್ನು ಕೊಂದು ಸ್ವತಂತ್ರನಾದ.
ಸಿಮುಖನನ್ನು “ ರಾಜ ಸಿಮುಖ ಶಾತವಾಹನ “ ಎಂದು ವರ್ಣಿಸಿರುವ ಶಾಸನ - ನಾನಾ ಘಾಟ್ ಶಾಸನ .
ಸಿಮುಖನಿಗೆ “ ಶಾತವಾಹನ “ ಎಂಬ ಹೆಸರನ್ನು ಕೊಟ್ಟಿರುವ ಗ್ರಂಥ - ಜೈನ ಗ್ರಂಥ .
ಸಿಮುಖನ ನಂತರ ಅಧಿಕಾರಕ್ಕೆ ಬಂದವರು - ಇವನ ತಮ್ಮ ಕೃಷ್ಣ .
ಒಂದನೇ ಶಾತಕರ್ಣಿ ಈತ - ಸಿಮುಖನ ಮಗ .
ನಾನಾ ಘಾಟ್ ಶಾಸನದ ಕರ್ತೃ - ನಾಗನೀಕ .
“ ದಕ್ಷಿಣ ಪಥ ಸಾರ್ವಬೌಮ “ ಹಾಗೂ ಅಪ್ರತ್ರಿಹಿತ ಎಂಬ ಬಿರುದುಳ್ಳ ಅರಸ - ಒಂದನೇ ಶಾತಕರ್ಣಿ .
ಶಾತವಾಹನರ ಏಳನೇ ದೊರೆ - ಹಾಲ .
ಪ್ರಾಕೃತದ ಶೃಂಗಾರ ಕಾವ್ಯದ ಹೆಸರು - ಗಥಾಸಪ್ತಸತಿ .
ಗಥಾಸಪ್ತಸತಿ ಕೃತಿಯ ಕರ್ತೃ - ಹಾಲ
“ ಬೃಹತ್ ಕಥಾ ಅಥವಾ ವಡ್ಡ ಕಥಾ “ ಕೃತಿಯ ಕರ್ತೃ - ಗುಣಾಡ್ಯ .
ಹಾಲನ ಪತ್ನಿಯ ಹೆಸರು - ಲೀಲಾವತಿ .
ಹಾಲನ ರಾಜ್ಯ ಭಾಷೆ - ಪ್ರಾಕೃತ,
ಶಾತವಾಹನರ ಪ್ರಸಿದ್ಧ ದೊರೆ - ಗೌತಮೀಪುತ್ರ ಶಾತಕರ್ಣಿ
ಗೌತಮೀಪುತ್ರ ಶಾತಕರ್ಣಿಯ ತಾಯಿಯ ಹೆಸರು - ಗೌತಮೀ ಬಾಲಾಶ್ರೀ
ಗುಹಾಂತರ ನಾಸಿಕ್ ಶಾಸನದ ಕರ್ತೃ -ಗೌತಮೀ ಬಾಲಾಶ್ರೀ
ತ್ರೈ ಸಮುದ್ರ ತೋಯಾ ಪಿತಾವಾಹನ ಹಾಗೂ ಶಾತವಾಹನ ಕುಲ ಪ್ರತಿಷ್ಠಾಪಿತ ಎಂಬ ಬಿರುದುಳ್ಳ ಅರಸ -ಗೌತಮೀಪುತ್ರ ಶಾತಕರ್ಣಿ
ದಕ್ಷಿಣ ಪಥೇಶ್ವರ ಎಂಬ ಬಿರುದನ್ನು ಹೊಂದಿದ್ದ ಶಾತವಾಹನ ದೊರೆ -ಪುಲುಮಾವಿ
ಶಾತವಾಹನರ ಸಾಂಸ್ಕೃತಿಕ ಕೊಡುಗೆಗಳು
ಆಡಳಿತ:-
ಶಾತವಾಹನರ ಆಡಳಿತದ ಮುಖ್ಯಸ್ಥ -ರಾಜ
ಪ್ರಾಂತ್ಯದ ರಾಜ್ಯಪಾಲ - ಅಮಾತ್ಯ
ರಾಜನ ಆಪ್ತ ಸಲಹೆಗಾರ ಹಾಗೂ ಸಹಾಯಕ -ರಾಜಮಾತ್ಯ
ಮುಖ್ಯಕಾರ್ಯದ ನಿರ್ವಾಹಕ ಅಧಿಕಾರಿ -ಮಹಾಮಾತ್ಯ
ಸರಕು ಸರಂಜಾಮುಗಳ ಮೇಲ್ವಚಾರಕ -ಬಂಡಾರಿಕ
ಕೋಶಾಧ್ಯಕ್ಷ - ಹೆರಾಣಿಕ
ವಿದೇಶಾಂಗ ವ್ಯವಹಾರದ ರಾಯಭಾರಿ -ಮಹಾಸಂಧಿ ವಿಗ್ರಾಹಿತ
ರಾಜನ ಆಜ್ಞೆಗಳನ್ನು ಬರೆಯುವವನು - ಲೇಖಕ
ಸಾಮ್ರಾಜ್ಯವನ್ನು ಅಹರ ,ವಿಷಯ,ನಿಗಮ ಮತ್ತು ಗ್ರಾಮಗಳಾಗಿ ವಿಂಗಡಿಸಲಾಗಿತ್ತು
ಅಹರದ ಮುಖ್ಯಸ್ಥ -ಅಮಾತ್ಯ
ಪಟ್ಟಣಗಳ ಆಡಳಿತ ವ್ಯವಸ್ಥೆ -ನಿಗಮದ ಅಧೀನದಲ್ಲಿ
ಗ್ರಾಮದ ಮೇಲ್ವಿಚಾರಕ -ಗ್ರಾಮೀಣಿ
ಸಾಮಾಜಿಕ ಸ್ಥಿತಿಗತಿ
ಸಮಾಜದಲ್ಲಿದ್ದ ಕುಟುಂಬದ ಪದ್ದತಿ -ಅವಿಭಕ್ತ ಕುಟುಂಬ ಪದ್ದತಿ
ಸಮಾಜದಲ್ಲಿ ಮಹಿಳೆಯರು ಪಡೆಯುತ್ತಿದ್ದ ಬಿರುದುಗಳು - ಮಹಾಭೋಜ, ಮಹಾರತಿ,ಸೇನಾಪತಿ,
ಶಾತವಾಹನರ ರಾಜವಂಶ -ಮಾತೃ ಪ್ರಧಾನ
ಸಮಾಜದ ವಿಭಾಗಗಳು -ಮಹಾರತಿ ,ಮಹಾಭೋಜಕ , ಸೇನಾಪತಿ ,ಹಾಗೂ ಸಾಮಾನ್ಯ ವರ್ಗ
ಆರ್ಥಿಕ ಸ್ಥಿತಿಗತಿ
ಶಾತವಾಹನರ ಮುಖ್ಯ ಕಸುಬು -ಕೃಷಿ
ರಾಜ್ಯದ ಆದಾಯದ ಮೂಲ - ಭೂಕಂದಾಯ
ಜನತೆ ರಾಜ್ಯಕ್ಕೆ ಕೊಡಬೇಕಾದ ಭಾಗ - 1/6
ಈ ದೇಶಗಳೊಂದಿಗೆ ವ್ಯಾಪಾರ ಸಂಬಂಧವನ್ನು ಹೊಂದಿದ್ದರು, - ಯುರೋಪ್ ಹಾಗೂ ರೋಮ್
ಇವರ ಕಾಲದ ವೃತ್ತಿ ಸಂಘಗಳನ್ನು ಈ ಹೆಸರಿನಿಂದ ಕರೆಯಲಾಗಿದೆ. - ಶ್ರೇಣಿ .
ವೃತ್ತಿ ಸಂಘದ ಮುಖ್ಯಸ್ಥನನ್ನ ಈ ಹೆಸರಿನಿಂದ ಕರೆಯಲಾಗಿದೆ - ಶೇಠಿ .
ಶಾತವಾಹನರ ಪ್ರಮುಖ ನಾಣ್ಯಗಳು - ದಿನಾರ , ಸುವರ್ಣ ( ಚಿನ್ನ ) ಕುಷಣ ( ಬೆಳ್ಳಿ ) ಹಾಗೂ ಕರ್ಪಣ , ದ್ರಮ್ಮ , ಪಣ ಗದ್ಯಾಣ .
ಹಾಲನ ಗಾಥಸಪ್ತ ಸತಿಯು ಈ ದೇವರ ಸ್ತುತಿಯೊಂದಿಗೆ ಪ್ರಾರಂಭವಾಗುತ್ತದೆ - ಶಿವ .
ಶಾತವಾಹನರ ಪೋಷಣಿಯಲ್ಲಿದ್ದ ಭಾಷೆ - ಪ್ರಾಕೃತ ಮತ್ತು ಸಂಸ್ಕೃತ .
ಶಾತವಾಹನರ ಆಡಳಿತ ಭಾಷೆ - ಪ್ರಾಕೃತ .
ಪ್ರಭೂತಸಾರ , ರಾಯನಸಾರ , ಸಮಯಸಾರ , ಪ್ರವಚನಸಾರ ಮತ್ತು ದ್ವಾದಶನು ಪ್ರೇಕ್ಷ ಕೃತಿಗಳ ಕರ್ತೃ - ಜೈನ ಪಂಡಿತ ಕಂದಾಚಾರ್ಯ .
“ ಕವಿ ಪುಂಗವ “ ಎಂಬ ಬಿರುದು ಪಡೆದ ದೊರೆ - ಹಾಲ .
ಹಾಲನ ಸಿಲೋನ್ ದಂಡೆ ಯಾತ್ರೆಗಳನ್ನು ತಿಳಿಸುವ ಕೃತಿ - ಲೀಲಾವತಿ .
ಗುಣಾಡ್ಯನ ಬೃಹತ್ ಕಥಾ ಈ ಭಾಷೆಯಲ್ಲಿದೆ - ಪೈಶಾಚ .
“ ಮಾಧ್ಯಮಿಕ ಸೂತ್ರ “ ಕೃತಿಯ ಕರ್ತೃ - ನಾಗಾರ್ಜುನ .
“ಕಾತಂತ್ರ ಸಂಸಕೃತದ “ ವ್ಯಾಕರಣ ಕೃತಿಯ ಕರ್ತೃ - ಸರ್ವವರ್ಮ.
“ ಅಮರಾವತಿಯ ಸ್ಥೂಪ “ ಇವರ ಕಾಲಕ್ಕೆ ಸೇರಿದ್ದು - ಶಾತವಾಹನರು .
ಶಾತವಾಹನರ ನಿರ್ಮಿಸಿದ ಸ್ಥೂಪಗಳಲ್ಲಿ ಅತ್ಯಂತ ದೊಡ್ಡದ್ದು - ಅಮರಾವತಿ ಸ್ಥೂಪ .
ಅಜಂತಾ ಗುಹಾಂತರ ದೇವಾಲಯ ಇವರ ಕಾಲದಿಂದ ಆರಂಭಗೊಂಡಿತು - ಶಾತವಾಹನರು .
Extra Tips :-
ಶಾತವಾಹನರನ್ನು “ ಕುಂತಲ ದೊರೆ “ ಎಂದು ಸಂಭೋದಿಸಿದ ಕೃತಿಯ ಹೆಸರೇನು - ರಾಜ ಶೇಖರ ಕವಿಯ “ಕಾವ್ಯ ಮಿಮಾಂಸೆ “ .
ಹಾಲ ದೊರೆಯ ಇನ್ನೊಂದು ಹೆಸರು - ಹಾಲಾಯುಧ .
ಬನವಾಸಿಯ ಪ್ರಾಚೀನ ಹೆಸರು - ವೈಜಯಂತಿ ಪುರ ( ವಿಜಯ ಪಕಾಕೆಪುರ ) .
ಪುಲುಮಾಯಿಯ ರಾಜಧಾನಿ - ಬನವಾಸಿ .
ಶಾತವಾಹನರ ರಾಜ್ಯದ ವಿಭಾಗಳಳು - ಜನಪದ ( ಡಿವಿಷನ್ ) ವಿಷಯ ( ಜಿಲ್ಲೆ ) ಸೀಮೆ ( ತಾಲ್ಲೂಕ್ ).
ಶಾತವಾಹನರ ಸಾಗರೋತ್ತರ ವ್ಯಾಪಾರದ ಕುರಿತು ಬೆಳಕು ಚೆಲ್ಲುವ ಗ್ರೀಕ್ ಕೃತಿ - ಅನಾಮದೇಯ - Periples of the Erithriyan Sea .
ಗುಪ್ತರು ಮತ್ತು ಚೋಳರ ಕಾಲದ “ ಬೃಹತ್ ಭಾರತದ “ ಸಾಧನೆಗೆ ನಾಂದಿ ಹಾಡಿದವರು - ಶಾತವಾಹನರು .
“ ಬಾರತದ ಪ್ರಪ್ರಥಮ ಶಿವದೇವಾಲಯ “ ಎಂದು ಪ್ರಸಿದ್ದಿಯನ್ನು ಪಡೆದ ದೇವಾಲಯ - ತಾಳಗುಂದದ ಏಕ ಮಂಟಪದ ಶಿವ ದೇವಾಲಯ “ .
- ತಾಳಗುಂದದ ಏಕ ಮಂಟಪದ ಶಿವ ದೇವಾಲಯ ಇವರ ಕಾಲಕ್ಕೆ ಸೇರಿದೆ - ಶಾತವಾಹನರು .
ಶಾತವಾಹನರ ವರ್ತಕರನ್ನು ಈ ಹೆಸರಿನಿಂದ ಕರೆಯಲಾಗಿದೆ - ನೈಗಾಮ .
ಆಂದ್ರ ಭೃತೃಗಳು ಎಂದು ಕರೆಯಲ್ಪಟ್ಟವರು - ಶಾತವಾಹನರು .
ಶಾತವಾಹನ ಶಕೆಯ ಆರಂಭ - ಕ್ರಿ.ಶ.78.
ಶಾತವಾಹನ ಶಕೆಯನ್ನು ಆರಂಭಿಸಿದವರು - ಶಾತವಾಹನರು ( ಹಾಲ ) .
ತ್ರೈಸಮುದ್ರತೋಯ ಪೀತವಾಹನದ ಅರ್ಥ - ಮೂರು ಸಮುದ್ರಗಳ ನೀರನ್ನು ಕುಡಿದು ಕುದುರೆಯನ್ನು ವಾಹನವಾಗಿ ಪಡೆದವ .
ಶಾತವಾಹನರ ಪ್ರಸಿದ್ದ ಕಲಾ ಕೇಂದ್ರಗಳು - ಕರ್ಲೆ , ಅಜಂತ . ಅಮರಾವತಿ , ನಾಗರ್ಜುನ ಕೊಂಡ , ಘಂಟಸಾಲಾ ,ನಾಸಿಕ್ , ಪೈಟಾನ್ .
ಮೌರ್ಯರ ಪತನಾ ನಂತರ ದಖನ್ ಪ್ರಸ್ಥಭೂಮಿಯಲ್ಲಿ ಪ್ರಪ್ರಥಮ ಐತಿಹಾಸಿಕ ಹಿರಿಯ ಸಾಮ್ರಾಜ್ಯ ವನ್ನು ಸ್ಥಾಪಿಸಿದವರು - ಶಾತವಾಹನರು .
ಮೂರು ಸಾಗರಗಳ ಒಡೆಯರು ಎಂದು ಕರೆಯಲ್ಪಟ್ಟವರು - ಶಾತವಾಹನರು .
ಶಾತವಾಹನರು ಪ್ರಾರಂಭದಲ್ಲಿ - ಮೌರ್ಯರ ಸಾಮಂತರಾಗಿದ್ದರು .
ಎಲ್.ಡಿ.ಬಾರ್ನೆಟ್ ಪ್ರಕಾರ ಶಾತವಾಹನರ ಮೊದಲ ರಾಜಧಾನಿ ಶೀ ಕಾಕುಲು ಹಾಗೂ ನಂರದ ರಾಜಧಾನಿ - ಧನ್ಯ ಕಟಕ .
ಶಾತವಾಹನರ ಲಾಂಛನ - ಕುದುರೆ .
ಶಾತವಾಹನರ ಏಳಿಗೆಗೆ ಕಾರಣ :-
ಮೌರ್ಯರ ಸಾಮ್ರಾಜ್ಯದ ಪತನ
ದಖನ್ನ್ ನಲ್ಲಿ ಉಂಟಾದ ಆರ್ಥಿಕ ಸಾಮಾಜಿಕ ಬದಲಾವಣಿ .
ಮೌರ್ಯರ ಸಂಬಂಧದಿಂದಾಗಿ ಉಂಟಾದ ಕಬ್ಬಿಣದ ಬಳಕೆ ಹಾಗೂ ಅದರ ಪರಿಚಯ .
ದಕ್ಷಿಣ ಭಾರತದಲ್ಲಿ ಹೆಚ್ಚಾದ ಕೃಷಿ ವಿಸ್ತರಣಿ .
ಶಾತವಾಹನ ಎಂಬ ಪದವು “ ಆಸ್ಟ್ರೋ ಏಷ್ಯಾಟಿಕ್ “ ಭಾಷೆಯ ಪದವೆಂದೂ ಪರ್ಶಿಯ ಅಥವಾ ಸಾತ ಎಂದರೆ ಕುದುರೆ ಎಂದು ಹಾಗೂ ್ದರಿಂದ ಅವರು ವಾಹನವಾಗುಳ್ಳವರೆಂದು ಅಭಿಪ್ರಾಯ ಪಡಲಾಗಿದೆ .
ಶಾತವಾಹನರ ಮೂಲ ನೆಲೆ - ಸಾತ ನಿಹಾರ ವಾಗಿತ್ತು ಎಂದು ತಿಳಿಸುವ ಶಾಸನಗಳು ಮಾಯಾಕಮೋನಿ ಮತ್ತು ಹಿರೇಹಡಗಲಿ ಶಾಸನ .
ಪುರಾಣಗಳಲ್ಲಿ ಸಿಮುಖನನ್ನು ಈ ಹೆಸರಿನಿಂದ ಕರೆಯಲಾಗಿದೆ - ವೃಷಲ .
ಸಿಮುಖನ್ನ “ಏಕ ಬ್ರಾಹ್ಮಣ “ ಎಂದು ಕರೆದ ಶಾಸನ - ನಾಸಿಕ್ ಶಾಸನ .
ಗೌತಮಿ ಪುತ್ರ ಶಾತಕರ್ಣಿಯ ಕಾಲಾವಧಿ - ಕ್ರಿ.ಪೂ.202 ಗಿಂದ 186 ರವರೆಗೆ .
ದಕ್ಷಿಣ ಪಥೇಶ್ವರ ಎಂಬ ಬಿರುದ್ದನ್ನು ತನ್ನ ಪ್ರಭುತ್ವದ ಸಂಕೇತವಾಗಿ ಧರಿಸಿದ್ದ ಶಾತವಾಹನ ದೊರೆ - ಗೌತಮಿಪುತ್ರ ಶಾತಕರ್ಣಿ .
ಹಾಲನ ದಂಡ ನಾಯಕನ ಹೆಸರು - ವಿಜಯಾನಂದ .
ತಾನೋಬ್ಬನೆ ಬ್ರಾಹ್ಮಣ ಎಂದು ಹೇಳಿಕೊಂಡ ಶಾತವಾಹನ ಅರಸ - ಗೌತಮಿ ಪುತ್ರ ಶಾತಕರ್ಣಿ .
ಗೋವರ್ದನ ಜಿಲ್ಲೆಯಲ್ಲಿ “ ಬೆನಕಟಕ “ ಎಂಬ ಪಟ್ಟಣಕ್ಕೆ ತಳಹದಿಯನ್ನು ಹಾಕಿದವರು - ಗೌತಮಿ ಪುತ್ರ ಶಾತಕರ್ಣಿ .
“ ನವನಗರ “ ಎಂಬ ಪಟ್ಟವನ್ನು ನಿರ್ಮಿಸಿದವರು - ಎರಡೆನೇ ಪುರುಮಾಯಿ .
‘ ನವನಗರ ಸ್ವಾಮಿ “ ಎಂದು ಬಿರುದನ್ನು ಪಡೆದವನು - 2 ನೇ ಪುಲುಮಾಯಿ .
ಶಾತವಾಹನರ ಪತನಕ್ಕೆ ಕಾರಣಗಳು :-
ಶಕರ ದಾಳಿ
ಬುಡಕಟ್ಟಿನವರಿಂದ ಶಾತವಾಹನ ಪ್ರದೇಶಗಳ ಮೇಲೆ ಆಕ್ರಮಣ.
ನಾಗಾಗಳ ದಾಳಿ
ಪಲ್ಲವರು ಮತ್ತು ವಾಕಾಟಕರ ಪ್ರಬಲತೆ .
ಶಾತವಾಹನರ ಕಾಲದ ಅತ್ಯಂತ ಕಿರು ಆಡಳಿತದ ಘಟಕ - ಗ್ರಾಮ
ಶಾತವಾಹನರ ಕಾಲದಲ್ಲಿ ಹೆಚ್ಚು ಪ್ರಚಲಿತದಲ್ಲಿದ್ದ ಸೇನಾ ನಿಯಂತ್ರಣ ವ್ಯವಸ್ಥೆ - ಗೌಲವೆಯಾ .
ಶಾತವಾಹನರ ಪ್ರಮುಖ ತೆರಿಗೆಗಳು - ದೆಯ , ಮೆಯ , ಭಾಗ , ಕರ
ರಾಜನನನ್ನು ತಾಯಿಯ ಹೆಸರಿನಿಂದ ಕರೆಯುವ ವಾಡಿಕೆಯನ್ನು ಇಟ್ಟು ಕೊಂಡಿದ್ದ ಅರಸರು - ಶಾತವಾಹನರು .
ಗ್ರೀಕರು ಹಾಗೂ ಶಕರಿಂದ ಪ್ರಭಾವಿತವಾದ ಶಾತವಾಹನರು ಟಂಕಿಸಿದ ಬೆಳ್ಳಿಯ ನಾಣ್ಯದ ಹೆಸರು - ಕಾರ್ಪಣ
ಶಾತವಾಹನರ ರಾಜಕುಮಾರ ಗುರುವಾಗಿದ್ದ ಜೈನರು - ಕಂದಕಂದಚಾರ್ಯ .
“ ಚತ್ಸುಸ್ಸಮಯ ಸಮುದ್ದರಣ “ ಎಂಬ ಕೀರ್ತಿಗೆ ಪಾತ್ರರಾದ ಅರಸರು - ಶಾತವಾಹನರು .
ತಾಳಗುಂದ ಅಗ್ರಹಾರದ ನಿರ್ಮಾತೃಗಳು - ಶಾತವಾಹನರು .
ಶಾತವಾಹನರ ಕಾಲದಲ್ಲಿ ಪ್ರಸಿದ್ದಿಯಲ್ಲಿದ್ದ ಲಿಪಿ - ಬ್ರಾಹ್ಮಿಲಿಪಿ .
ಜನಪ್ರಿಯತೆಯಲ್ಲಿ ರಾಮಯಾಣ ಮತ್ತು ಮಹಾ ಭಾರತಗಳಿಗೆ ಸರಿಸಮಾನವಾಗಿ ನಿಲ್ಲ ಬಲ್ಲ ಶಾತವಾಹನರ ಕಾಲದ ಕೃತಿ - ಬೃಹತ್ ಕಥಾ .
“ಕಾತಂತ್ರ “ ವ್ಯಾಕರಣ ಗ್ರಂಥದ ಕರ್ತೃ - ಸರ್ವಧರ್ಮ
ಶಾತವಾಹನರ ಕಾಲದ ಚೈತ್ಯಗಳು ವಿಹಾರಗಳು ಹಾಗೂ ಸ್ಥೂಪಗಳನ್ನು “ಶಿಲಾವಾಸ್ತುಶಿಲ್ಪ “ ಎಂದು ಕರೆದ ಯಾಂತ್ರಿಕ - ಪೆರ್ಸಿ ಬ್ರೌನ್ .
ಚೈತ್ಯ ಎಂದರೆ - ಪ್ರಾರ್ಥನಾ ಗೃಹ .
ಶಾತವಾಹನರ ಕಾಲದಲ್ಲಿ ಉಗಮವಾದ ಚಿತ್ರಕಲಾ ಶೈಲಿ - ಅಜಾಂತ ಚಿತ್ರ ಕಲಾ ಶೈಲಿ .
ವಿಹಾರ ಎಂದರೆ - ಬೌದ್ಧ ಬಿಕ್ಷುಗಳ ನಿವಾಸ .
ಸ್ಥೂಪ ಎಂದರೆ - ಬುದ್ಧನ ಯಾವುದಾದರೊಂದು ಅವಶೇಷಗಳ ಮೇಲೆ ನಿರ್ಮಾಣವಾದ ವೃತ್ತಾಕಾರದ ನಿರ್ಮಾಣ .
ಸಿಮುಖನು ಯಾವ ಸಂತತಿಯ ದೊರೆ, ಯಾರನ್ನು ಸೋಲಿಸಿ ಸಾಮ್ರಾಜ್ಯ ಸ್ಥಾಪಿಸಿದ -ಕಣ್ವ ಸಂತತಿಯ ಕೊನೆಯ ಅರಸ , ಸುಶರ್ಮ
ಶಾತವಾಹನರು ಈ ಜಾತಿಗೆ ಸೇರಿದವರು - ಬ್ರಾಹ್ಮಣ
ಶಾತವಾಹನರ ಮೂಲದ ಕುರಿತು ಮಾಹಿತಿ ನೀಡಿರುವ ಪುರಾಣಗಳು - ಮತ್ಸ್ಯ ಪುರಾಣ ವಿಷ್ಣು ಪುರಾಣ
ಶಾತವಾಹನರ ಕೊನೆಯ ಪ್ರಮುಖ ದೊರೆ - ಯಜ್ಞಶ್ರೀ ಶಾತಕರ್ಣಿ
ಶಾತವಾಹನರ ಕೊನೆಯ ದೊರೆ - ಎರಡನೇ ಪುಲಿಮಾಯಿ
ಸಿಮುಖನ ಆರಂಭದ ರಾಜಧಾನಿ - ಶ್ರೀ ಕಾಕುಲಂ
ಡಾ, ಭಂಡಾರ್ಕರ್ ರವರ ಪ್ರಕಾರ ಆಂಧ್ರದಲ್ಲಿನ ಶಾತವಾಹನರ ರಾಜಧಾನಿ - ಧಾನ್ಯಕಟಿಕಾ /ಧರಣಿಕೋಟೆ
ಶಾತವಾಹನರ ಸಾಹಿತಿ ದೊರೆ - ಹಾಲ
ದಖ್ಖನ್ ಭಾರತದಲ್ಲಿ ಮೊದಲು ನಾಣ್ಯಗಳನ್ನು ಟಂಕಿಸಿದ ಮನೆತನ - ಶಾತವಾಹನ
ಪ್ರೇಷ ಎಂಬ ಕೃತಿಯ ಕರ್ತೃ - ದ್ವಾದಸನ
ದಿ ಜಿಯೋಗ್ರಫಿ ಕೃತಿಯ ಕರ್ತೃ - ಟಾಲೆಮಿ
ಶಾತವಾಹನರ ಕುಲ ,ಯಶಸ್ಸು ಪ್ತತಿಷ್ಠಾಪನಾಕಾರ ಎಂಬ ಬಿರುದನ್ನು ಹೊಂದಿದ್ದ ದೊರೆ,- ಗೌತಮೀಪುತ್ರಶಾತಕರ್ಣಿ
ದಕ್ಷಿಣ ಪತಾಪತಿ ಎಂಬ ಬಿರುದನ್ನು ಹೊಂದಿದ್ದ ದೊರೆ - 1ನೇ ಶಾತಕರ್ಣಿ
ಇವರ ಮೊದಲ ಆಡಳಿತ ವಿಭಾಗ - ಆಹಾರ /ಪ್ರಾಂತ್ಯ
ಆಹಾರವನ್ನು ನೋಡಿಕೊಳ್ಳುತ್ತಿದ್ದವರು - ಅಮಾತ್ಯ
ಶಾತವಾಹನರ ಅತ್ಯಂತ ಕಿರಿಯ ಆಡಳಿತ ಘಟಕ - ಗ್ರಾಮ
ಇವರ ಕಾಲದ ಮುಖ್ಯ ಬಂದರುಗಳು - ಕಲ್ಯಾಣ, ಸೋಪಾರ, ಬಲಿಗಜ ,ಠಣಕ,
ವಿಹಾರವನ್ನು ಈ ಹೆಸರಿನಿಂದ ಕೆರೆಯುತ್ತಿದ್ದರು - ಸಂಘಾರಾಮ
ಕಾರ್ಲೇಯ ಚೈತ್ಯದ ನಿರ್ಮಾತೃ - ಭೂತಪಾಲಶೆಟ್ಟಿ
ಆಂಧ್ರದ ನಾಗಾರ್ಜುನಕೊಂಡದ ಪ್ರಸ್ತುತ ಹೆಸರು - ವಿಜಯಪುರಿ
ಶಾತವಾಹನ ಸಾಮ್ರಾಜ್ಯದ ಸ್ಥಾಪನೆಯಾದ ವರ್ಷ - ಕ್ರಿ.ಪೂ. 235
ಶಾತವಾಹನರ ನಂತರ ದ.ಭಾರತದಲ್ಲಿ ಪ್ರಸಿದ್ಧರಾದವರು - ಕದಂಬರು
ಇವರು ಈ ಧರ್ಮವನ್ನು ಅನುಸರಿಸಿದರು - ವೈದಿಕ ಧರ್ಮ
ಈ ಕಾಲದ ರಾಜ್ಯಗಳು ಇವರ ಆಡಳಿತದಲ್ಲಿತ್ತು - ಅಮಾತ್ಯ
ಮೊದಲ ಶಾತಕರ್ಣಿಯ ಪತ್ನಿಯ ಹೆಸರು - ನಾಗವಿಕ
ಮೊದಲ ಶಾತಕರ್ಣಿಯೊಂದಿಗೆ ಯುದ್ಧ ಮಾಡಿದ ಕಳಿಂಗ ಅರಸ - ಖಾರವೇಲ
ಗೌತಮೀಪುತ್ರ ಶಾತಕರ್ಣಿ ಶಾತವಾಹನರ - 23 ನೇ ಅರಸ
ಏಕಬ್ರಾಹ್ಮಣ , ಆಗಮನಿಲಯ ,ಏಕಶೂರ ,ಏಕಧನುರಾರ್ಧ ಎಂಬ ಬಿರುದನ್ನು ಹೊಂದಿದ ಶಾತವಾಹನ ದೊರೆ.- ಗೌತಮೀಪುತ್ರ ಶಾತಕರ್ಣಿ
ಕಾಂಬೋಜ ರಾಜ್ಯವನ್ನು ಸ್ಥಾಪಿಸಿದ ದೊರೆ - ಕೌಂಡಿನ್ಯ
ಮೌಕದಾನಿ ಶಾಸನದ ಕರ್ತೃ - ಮೂರನೇ ಪುಲುಮಾರು
ಇವರ ಕಾಲದಲ್ಲಿ ಚಿನ್ನದ ನಾಣ್ಯವನ್ನು ಈ ಹೆಸರಿನಿಂದ ಕರೆಯುತ್ತಿದ್ದರು - ಸುವರ್ಣ
ಕಾಮಸೂತ್ರದ ಕರ್ತೃ - ವಾತ್ಸಾಯನ ( ಸಂಸ್ಕೃತ ಕವಿ)
ಪ್ರಾಕೃತ ಭಾಷಾ ಇತಿಹಾಸದಲ್ಲಿ ಇವರ ಕಾಲ ಸುವರ್ಣಯುಗವಾಗಿದೆ. - ಶಾತವಾಹನರ
ಇವರ ಕಾಲದ ಸೇನಾ ಶಿಬಿರಗಳನ್ನು ಈ ಹೆಸರಿನಿಂದ ಕರೆಯಲಾಗಿದೆ. - ಕಟಕ
ಇವರ ಕಾಲದ ಪ್ರಮುಖ ಪ್ರಯಾಣಸಾಧನ - ಎತ್ತಿನಗಾಡಿ
ಕಾಲದಲ್ಲಿ ರಾಜ್ಯಾಡಳಿತದಲ್ಲಿ ಭಾಗವಹಿಸಿದ ಮಹಿಳೆಯರು -ಗೌತಮೀಬಾಲಶ್ರೀ, ನಾಗನಿಕ
‘The Guide to Geography’ ಕೃತಿಯ ಕರ್ತೃ - ಟಾಲೆಮಿ
ಭಾರತದಲ್ಲಿ ಮೊಟ್ಟ ಮೊದಲ ಬಾರಿಗೆ ಭೂಮಿಯನ್ನು ದಾನವಾಗಿ ನೀಡಿದ ವಂಶ -ಶಾತವಾಹನರು
ಶಕಯವನ ಪಲ್ಲವ ನಿಸೂಧನ ಎಂಬ ಬಿರುದನ್ನು ಹೊಂದಿದವರು - ಗೌತಮೀಪುತ್ರ ಶಾತಕರ್ಣಿ
ಅಶೋಕನ ಈ ಶಾಸನದಲ್ಲಿ ಶಾತವಾಹನರು ಆಂಧ್ರ ಭೃತ್ಯರು ಎಂದು ಕರೆದಿದೆ. – 12 ನೇ ಶಾತವಾಹನ
ಅಶೋಕನ ಸಮಕಾಲೀನ ಶಾತವಾಹನ ದೊರೆ. - ಕೃಷಣ
ಇವರ ಕಾಲದ ಗ್ರಾಮಾಧಿಕಾರಿಗಳನ್ನು ಈ ಹೆಸರಿನಿಂದ ಕೆರಯುತ್ತಿದ್ದರು - ಮಹಾ ಆರ್ಯಕರು
ಶಾತವಾಹನ ಕಾಲದ ಉಗ್ರಾಣಾಧಿಕಾರಿಗಳು -ಭಂಡಾರಕರು
ಇವರ ಕಾಲದ ಹಣಕಾಸಿನ ಆಡಳಿತಾದಿಕಾರಿಗಳು - ಹಿರಣ್ಯಕರು
ಭೂ ದಾಖಲಾತಿ ಅಧಿಕಾರಿಗಳು -ನಿಬಂಧಕರು
ಇವರ ಸಮಾಜದಲ್ಲಿ ವಿಜೋತ್ತಮರೆಂದು ಕರೆಯಲ್ಪಡುತ್ತಿದ್ದವರು - ಬ್ರಾಹ್ಮಣರು .
ವರ್ಣ ಸಂತರ ಎಂದರೆ - ಶೂದ್ರರ ನಡುವಿನ ವಿವಾಹ ಸಂಬಧ ಶಾತವಾಹನರ ಚಿತ್ರಕಲೆಗೆ ಬೆಳಕು ಚೆಲ್ಲುವ ಕೃತಿ - ಕುಲ್ಲವಗ

ಕಾಮೆಂಟ್‌ಗಳಿಲ್ಲ:

ಕಾಮೆಂಟ್‌‌ ಪೋಸ್ಟ್‌ ಮಾಡಿ