ತರಂಗಗಳು ದ್ರವ್ಯ ಮತ್ತು ಜಾಗದಲ್ಲಿ, ಕಾಲಕ್ಕನುಗುಣವಾಗಿ ಶಕ್ತಿಯ ಸಮ್ಮೋಹನದೊಂದಿಗೆ ಹರಡುವ ತುಮುಲಗಳು. ತರಂಗ ಚಲನೆಯು ಒಂದು ಕಡೆಯಿಂದ ಇನ್ನೊಂದು ಕಡೆಗೆ ಶಕ್ತಿಯನ್ನು ವರ್ಗಾಯಿಸುತ್ತದೆ. ಸಾಮಾನ್ಯವಾಗಿ ಈ ಕ್ರಿಯೆಯಲ್ಲಿ ಅತಿ ಕಡಿಮೆ ಅಥವಾ ಶೂನ್ಯ ದ್ರವ್ಯ ಸ್ಥಳಾಂತರ ನೆಡೆಯುತ್ತದೆ. ಉದಾಹರಣೆಗೆ ಶಾಂತವಾದ ನೀರಿನಲ್ಲಿ ಒಂದು ಸಣ್ಣ ಕಲ್ಲು ಎಸೆದಾಗ ಕಲ್ಲಿನ ಶಕ್ತಿ ನೀರಿನ ಮೇಲ್ಭಾಗದಲ್ಲಿ ತರಂಗಗಳನ್ನು ಉಂಟುಮಾಡುತ್ತದೆ. ತರಂಗ ಚಲನೆಯನ್ನು ಸಮೀಕರಣಗಳ ಮೂಲಕ ವಿಷ್ಲೇಶಿಸುತ್ತಾರೆ. ಈ ಸಮೀಕರಣದ ಗಣಿತ ನಮೂನೆಯು ತರಂಗದ ವಿಧದ ಆಧಾರದ ಮೇಲೆ, ಆ ತರಂಗ ಹೇಗೆ ಕಾಲಕ್ರಮೇಣ ಚಲಿಸುವುದು ಎಂಬುದನ್ನು ವಿವರಿಸುತ್ತದೆ.
ತರಂಗಗಳಲ್ಲಿ ಮುಖ್ಯವಾಗಿ ಎರಡು ವಿಧಗಳಿವೆ. ಮೊದಲನೆಯದು ಯಾಂತ್ರಿಕ ತರಂಗಗಳು. ಇವು ಚಲನೆಗೆ ಮಾಧ್ಯಮವನ್ನು ಆಧರಿಸಿವೆ. ಉದಾಹರಣೆಗೆ ಶಬ್ದ ತರಂಗ. ಯಾಂತ್ರಿಕ ತರಂಗಗಳು ಪ್ರವಹಿಸುವಾಗ ಮಾಧ್ಯಮವು ವಿರೂಪಗಳ್ಳುತ್ತದೆ. ಆ ಕ್ಷಣದಲ್ಲಿ ಪನಃಸ್ಥಾಪಿತ ಬಲಗಳು ಮಾಧ್ಯಮವನ್ನು ಮೊದಲಿನ ಸ್ಥಿತಿಗೆ ತರುತ್ತವೆ. ಎರಡನೆಯದು ವಿದ್ಯುತ್ ಕಾಂತೀಯ ತರಂಗಗಳು. ಇವುಗಳ ಚಲನೆಗೆ ಮಾಧ್ಯಮಗಳ ಅವಶ್ಯಕತೆಯಿಲ್ಲ. ಇವು ವಿದ್ಯುದಂಶಪೂರಿತ ಕಣಗಳಿಂದ ಸೃಷ್ಟಿಯಾದ ವಿದ್ಯುತ್ ಹಾಗು ಕಾಂತಕ್ಷೇತ್ರದ ಆವರ್ತಕ ಆಂದೋಲನಗಳನ್ನು ಒಳಗೊಂಡಿರುತ್ತವೆ. ಆದ್ದರಿಂದಲೇ ಇವು ನಿರ್ವಾತದಲ್ಲೂ ಚಲಿಸುವ ಶಕ್ತಿಯನ್ನು ಹೊಂದಿವೆ. ಉದಾಹರಣೆಗೆ ರೇಡಿಯೋ ತರಂಗಗಳು, ಸೂಕ್ಷ್ಮ ತರಂಗಗಳು, ರಕ್ತಾತೀತ ತರಂಗಗಳು, ದೃಶ್ಯ ತರಂಗಗಳು, ನೇರಳಾತೀತ ತರಂಗಗಳು, ಕ್ಷ ತರಂಗಗಳು, ಗ್ಯಾಮ ತರಂಗಗಳು. ಈ ತರಂಗಗಳು ತರಂಗಾಂತರದಲ್ಲಿ ಒಂದಕ್ಕಿಂತ ಒಂದು ಭಿನ್ನವಾಗಿವೆ

ಕಾಮೆಂಟ್‌ಗಳಿಲ್ಲ:
ಕಾಮೆಂಟ್ ಪೋಸ್ಟ್ ಮಾಡಿ