ಹಣದುಬ್ಬರವಿಳಿತದ ಸುರುಳಿಸಂಪಾದಿಸಿ
ಹಣದುಬ್ಬರವಿಳಿತದ ಸುರುಳಿ ಎಂಬುದೊಂದು ಸನ್ನಿವೇಶವಾಗಿದ್ದು, ಬೆಲೆಯಲ್ಲಿನ ಇಳಿಕೆಯು ಕಡಿಮೆ ಪ್ರಮಾಣದ ಉತ್ಪಾದನೆಗೆ ಕಾರಣವಾಗುವುದನ್ನು, ಅದು ಪ್ರತಿಯಾಗಿ ಕಡಿಮೆ ಮಜೂರಿಗಳು ಹಾಗೂ ಬೇಡಿಕೆಗೆ ಕಾರಣವಾಗುವುದನ್ನು, ಅದು ಪ್ರತಿಯಾಗಿ ಬೆಲೆಯಲ್ಲಿ ಮತ್ತಷ್ಟು ಇಳಿಕೆಗೆ ಕಾರಣವಾಗುವುದನ್ನು ಒಳಗೊಂಡಿರುತ್ತದೆ.[೭] ಸಾರ್ವತ್ರಿಕ ಬೆಲೆಯ ಮಟ್ಟದಲ್ಲಿನ ಇಳಿಕೆಗಳು ಹಣದುಬ್ಬರವಿಳಿತ ಎಂದು ಕರೆಯಲ್ಪಡುವುದರಿಂದ, ಒಂದು ಸಮಸ್ಯೆಯು ಅದರ ಸ್ವಂತ ಕಾರಣವನ್ನೇ ಉಲ್ಬಣಗೊಳಿಸುವುದನ್ನು ಒಳಗೊಂಡಿರುವ ಒಂದು ವಿಷವರ್ತುಲಕ್ಕೆ ಬೆಲೆಯಲ್ಲಿನ ಇಳಿಕೆಗಳು ಕೊಂಡೊಯ್ದಾಗ ಅದನ್ನು ಒಂದು ಹಣದುಬ್ಬರವಿಳಿತದ ಸುರುಳಿ ಎಂದು ಕರೆಯಲಾಗುತ್ತದೆ. ಮಹಾನ್ ಆರ್ಥಿಕ ಮತ್ತು ಕೈಗಾರಿಕಾ ಕುಸಿತವು ಒಂದು ಹಣದುಬ್ಬರವಿಳಿತದ ಸುರುಳಿ ಎಂದು ಅನೇಕರಿಂದ ಕರೆಯಲ್ಪಟ್ಟಿತ್ತು. ಹಣದುಬ್ಬರವಿಳಿತದ ಸುರುಳಿಗಳು ವಾಸ್ತವವಾಗಿ ಸಂಭವಿಸುತ್ತವೆಯೇ ಎಂಬುದು ಒಂದು ವಿವಾದಾಸ್ಪದ ವಿಷಯವಾಗಿದೆ.
ಒಂದು ಹಣದುಬ್ಬರವಿಳಿತದ ಸುರುಳಿಯು 19ನೇ ಶತಮಾನದ ಸಾರ್ವತ್ರಿಕ ಅತಿಪೂರೈಕಾ ವಿವಾದದ ಒಂದು ಆಧುನಿಕ ಮಹದಾರ್ಥಿಕ ರೂಪವಾಗಿದೆ. ಇರ್ವಿಂಗ್ ಫಿಶರ್‌ನ ಸಿದ್ಧಾಂತವು ಇದಕ್ಕೆ ಸಂಬಂಧಿಸಿದ ಮತ್ತೊಂದು ಪರಿಕಲ್ಪನೆಯಾಗಿದ್ದು, ಹೆಚ್ಚುವರಿ ಪ್ರಮಾಣದ ಋಣಭಾರವು ಒಂದು ನಿರಂತರವಾದ ಹಣದುಬ್ಬರವಿಳಿತವನ್ನು ಉಂಟುಮಾಡಬಲ್ಲದು ಎಂಬುದನ್ನು ಅದು ಪ್ರತಿಪಾದಿಸುತ್ತದೆ.
ಅತಿ-ಹಣದುಬ್ಬರಕ್ಕೆ ಪ್ರತಿಕ್ರಿಯೆಸಂಪಾದಿಸಿ
ಅತಿ-ಹಣದುಬ್ಬರವು ಒಂದು ಚಲಾವಣಾ ಹಣವನ್ನು ನಾಶಪಡಿಸುತ್ತಿರುವಾಗ, ಇತರ ಚಲಾವಣಾ ಹಣಗಳಲ್ಲಿ ತಮ್ಮ ಉಳಿತಾಯದ ಹಣವನ್ನು ಸಾಗಿಸಲು ಜನರು ಮುನ್ನುಗ್ಗಿ ಹೋಗುತ್ತಾರೆ. ಇದರಿಂದಾಗಿ ಆ ಇತರ ಚಲಾವಣಾ ಹಣಗಳಲ್ಲಿ ಹಣದುಬ್ಬರವಿಳಿತವು ಕಂಡುಬರಬಹುದು. ಇದಕ್ಕೆ ಪರ್ಯಾಯವಾಗಿ, ಒಂದು ವೇಳೆ ಅತಿ-ಹಣದುಬ್ಬರವನ್ನು ಉಂಟುಮಾಡುತ್ತಿರುವ ಕಾರ್ಯನೀತಿಗಳು ಇದ್ದಕ್ಕಿದ್ದಂತೆ ಬದಲಾಯಿಸಲ್ಪಟ್ಟರೆ, ಚಲಾವಣಾ ಹಣದಲ್ಲಿ ಜನರು ದೃಢವಿಶ್ವಾಸವನ್ನು ಮತ್ತೆ ಗಳಿಸುವುದರಿಂದ, ಆಗ ಒಂದು ಸಂಕ್ಷಿಪ್ತವಾದ ಹಣದುಬ್ಬರವಿಳಿತವು ಸಂಭವಿಸಬಹುದು.
ಹಣದುಬ್ಬರವಿಳಿತದ ಕಾರಣಗಳುಸಂಪಾದಿಸಿ
ಮುಖ್ಯವಾಹಿನಿ ಅರ್ಥಶಾಸ್ತ್ರದಲ್ಲಿ, ಸರಕುಗಳಿಗಾಗಿರುವ ಪೂರೈಕೆ ಮತ್ತು ಬೇಡಿಕೆ ಹಾಗೂ ಹಣಕ್ಕಾಗಿರುವ ಪೂರೈಕೆ ಮತ್ತು ಬೇಡಿಕೆಯ ಒಂದು ಸಂಯೋಜನೆಯಿಂದ ಹಣದುಬ್ಬರವಿಳಿತವು ಕಂಡುಬರಬಹುದು. ಸ್ಪಷ್ಟವಾಗಿ ಹೇಳುವುದಾದರೆ, ಇದರಲ್ಲಿ ಹಣದ ಪೂರೈಕೆಯು ಕೆಳಗೆ ಹೋಗುತ್ತಿರುತ್ತದೆ ಮತ್ತು ಸರಕುಗಳ ಪೂರೈಕೆಯು ಮೇಲೆ ಹೋಗುತ್ತಿರುತ್ತದೆ. ಹಣದ ಪೂರೈಕೆಯಲ್ಲಿ ಒಂದು ಏರಿಕೆಯಿಲ್ಲದೆಯೇ ಸರಕುಗಳ ಪೂರೈಕೆಯು ಮೇಲೆಕ್ಕೆ ಹೋಗುವುದರೊಂದಿಗೆ (ಹೆಚ್ಚಳಗೊಂಡ ಉತ್ಪಾದಕತೆಯ ಕಾರಣದಿಂದಾಗಿ) ಅಥವಾ (ಮಹಾನ್ ಆರ್ಥಿಕ ಮತ್ತು ಕೈಗಾರಿಕಾ ಕುಸಿತದೊಂದಿಗೆ ಇದ್ದಂತೆ ಹಾಗೂ 1990ರ ದಶಕದ ಆರಂಭದಲ್ಲಿ ಜಪಾನ್‌ನಲ್ಲಿ ಕಂಡುಬಂದಂತೆ) ಹಣ ಪೂರೈಕೆಯಲ್ಲಿನ ಒಂದು ಇಳಿಕೆಯೊಂದಿಗೆ ಸಂಯೋಜಿತಗೊಂಡಿರುವ ಸರಕುಗಳಿಗಾಗಿರುವ ಬೇಡಿಕೆಯು ಕುಸಿಯುತ್ತಿರುವುದರೊಂದಿಗೆ ಹಣದುಬ್ಬರವಿಳಿತದ ಐತಿಹಾಸಿಕ ಪ್ರಸಂಗಗಳು ಅನೇಕ ವೇಳೆ ಸಂಬಂಧವನ್ನು ಹೊಂದಿರುತ್ತವೆ. ಬೆನ್ ಬೆರ್ನಾಂಕೆಯಿಂದ ಕೈಗೊಳ್ಳಲ್ಪಟ್ಟ, ಮಹಾನ್ ಆರ್ಥಿಕ ಹಾಗೂ ಕೈಗಾರಿಕಾ ಕುಸಿತದ ಅಧ್ಯಯನಗಳು ಸೂಚಿಸಿರುವ ಪ್ರಕಾರ, ಇಳಿಕೆಯಾದ ಬೇಡಿಕೆಗೆ ಪ್ರತಿಯಾಗಿ ಆ ಸಮಯದ ಫೆಡರಲ್ ರಿಸರ್ವ್ ವ್ಯವಸ್ಥೆಯು ಹಣ ಪೂರೈಕೆಯನ್ನು ತಗ್ಗಿಸಿದ್ದರಿಂದಾಗಿ ಅದು ಹಣದುಬ್ಬರವಿಳಿತಕ್ಕೆ ತನ್ನದೇ ಆದ ಕೊಡುಗೆಯನ್ನು ನೀಡಿತು.
ಹಣದುಬ್ಬರವಿಳಿತದ ಮೂಲಭೂತ ವಿಧಗಳುಸಂಪಾದಿಸಿ
ಹಣದುಬ್ಬರವಿಳಿತವನ್ನು ನಾಲ್ಕು ವಿಧಗಳಾಗಿ ವಿಂಗಡಿಸಬಹುದು. ಇವುಗಳ ಪೈಕಿ ಎರಡು ಬೇಡಿಕೆಯ ಪಕ್ಷದಲ್ಲಿದ್ದರೆ, ಮತ್ತೆರಡು ಪೂರೈಕೆಯ ಪಕ್ಷದಲ್ಲಿವೆ:
◾ಬೆಳವಣಿಗೆಯ ಹಣದುಬ್ಬರವಿಳಿತ. (ಸರಕುಗಳ ಪೂರೈಕೆಯಲ್ಲಿನ ಏರಿಕೆ. CPIನಲ್ಲಿನ ಇಳಿಕೆ).
◾ನಗದು ನಿರ್ಮಿಸುವ (ಹಣ ಸಂಗ್ರಹಣೆ) ಹಣದುಬ್ಬರವಿಳಿತ (ನಗದಿನ ಹೆಚ್ಚು ಉಳಿತಾಯಗಳು. ಹಣದ ವೇಗದಲ್ಲಿನ ಇಳಿಕೆ. ಹಣಕ್ಕಾಗಿರುವ ಬೇಡಿಕೆಯಲ್ಲಿನ ಏರಿಕೆ)
◾ಬ್ಯಾಂಕಿನ ಖಾತೆಯಲ್ಲಿರುವ ಹಣದ ಹಣದುಬ್ಬರವಿಳಿತ. (ದಿವಾಳಿತನ ಅಥವಾ ಕೇಂದ್ರ ಬ್ಯಾಂಕಿನಿಂದ ಬರುವ ಹಣ ಪೂರೈಕೆಯಲ್ಲಿನ ಕುಗ್ಗುವಿಕೆಯಿಂದಾಗಿ ಬ್ಯಾಂಕಿನ ಖಾತೆಯಲ್ಲಿರುವ ಹಣದ ಪೂರೈಕೆಯಲ್ಲಿನ ಇಳಿತ)
◾ಜಫ್ತಿ ಮಾಡಬಲ್ಲ ಹಣದುಬ್ಬರವಿಳಿತ. (ಬ್ಯಾಂಕಿನ ಠೇವಣಿಗಳ ಜಫ್ತಿ ಅಥವಾ ತಡೆಹಿಡಿತಗೊಳಿಸುವಿಕೆ. ಹಣ ಪೂರೈಕೆಯ ಇಳಿಕೆ)
ಹಣ ಪೂರೈಕೆ ಪಕ್ಷದ ಬಗೆಯ ಹಣದುಬ್ಬರವಿಳಿತಸಂಪಾದಿಸಿ
ಒಂದು ಹಣ-ನಿಯಂತ್ರಣವಾದಿ ದೃಷ್ಟಿಕೋನದಿಂದ ಹೇಳುವುದಾದರೆ, ಹಣದ ವೇಗ ಮತ್ತು/ಅಥವಾ ತಲಾವ್ಯಕ್ತಿಗೆ ಹಣ ಪೂರೈಕೆಯ ಮೊತ್ತದಲ್ಲಿನ ಒಂದು ಇಳಿಕೆಯಿಂದಾಗಿ ಹಣದುಬ್ಬರವಿಳಿತವು ಮುಖ್ಯವಾಗಿ ಕಂಡುಬರುತ್ತದೆ.[ಸೂಕ್ತ ಉಲ್ಲೇಖನ ಬೇಕು]
ಸಾಲದ ಹಣದುಬ್ಬರವಿಳಿತಸಂಪಾದಿಸಿ
ಆಧುನಿಕ ಸಾಲ-ಆಧರಿತ ಆರ್ಥಿಕತೆಗಳಲ್ಲಿ, (ಕೇಂದ್ರ ಬ್ಯಾಂಕು) ಹೆಚ್ಚಿನ ಬಡ್ಡಿದರಗಳನ್ನು (ಅಂದರೆ, ಹಣದುಬ್ಬರವನ್ನು 'ನಿಯಂತ್ರಿಸಲು') ಆರಂಭಿಸುವುದರಿಂದ ಒಂದು ಹಣದುಬ್ಬರವಿಳಿತದ ಸುರುಳಿಯು ಉಂಟಾಗಬಹುದು. ಇದರಿಂದಾಗಿ ಒಂದು ಸ್ವತ್ತಿನ ನಿರಾಧಾರವಾದ ಪ್ರಯತ್ನವನ್ನು ಒತ್ತೆಯಿಡುವ ಅಥವಾ ವಾಸ್ತವವಾಗಿ ತಾನು ಬೆಂಬಲಿಸಬಹುದಾದುದಕ್ಕಿಂತ ಒಂದು ಉತ್ಪಾದನೆಯ ಹೆಚ್ಚಿನ ಮಟ್ಟದಲ್ಲಿ ನಡೆಯುತ್ತಿದ್ದ ನಿಯಂತ್ರಣದ ಆರ್ಥಿಕತೆಯೊಂದರ ಕುಸಿತದ ಸಾಧ್ಯತೆ ಉಂಟಾಗುತ್ತದೆ. ಸಾಲ-ಆಧರಿತ ಆರ್ಥಿಕತೆಯೊಂದರಲ್ಲಿ, ಹಣ ಪೂರೈಕೆಯಲ್ಲಿನ ಒಂದು ಕುಸಿತವು ಗಮನಾರ್ಹವಾಗಿ ಕಡಿಮೆಯಾದ ಸಾಲನೀಡಿಕೆಗೆ ಕಾರಣವಾಗುತ್ತದೆ. ಹಣ ಪೂರೈಕೆಯಲ್ಲಿ ಮತ್ತಷ್ಟು ತೀಕ್ಷ್ಣವಾದ ಕುಸಿತ ಕಂಡುಬಂದರೆ, ತತ್ಪರಿಣಾಮವಾಗಿ ಸರಕುಗಳಿಗಾಗಿರುವ ಬೇಡಿಕೆಯಲ್ಲಿನ ಒಂದು ತೀಕ್ಷ್ಣವಾದ ಕುಸಿತವು ಸಂಭವಿಸುತ್ತದೆ. ಬೇಡಿಕೆ ಕುಸಿಯುತ್ತದೆ, ಮತ್ತು ಬೇಡಿಕೆಯ ಕುಸಿತದೊಂದಿಗೆ ಪೂರೈಕೆಯ ಮಿತಿಮೀರಿಕೆ ಬೆಳೆದಂತೆ ಬೆಳೆಗಳಲ್ಲಿನ ಒಂದು ಕುಸಿತ ಕಂಡುಬರುತ್ತದೆ. ಹಣಕಾಸು ನೆರವಿನ ಉತ್ಪಾದನೆಯ ವೆಚ್ಚಗಳಿಗಿಂತ ಕೆಳಗೆ ಬೆಲೆಗಳು ಕುಸಿದಾಗ ಇದು ಒಂದು ಹಣದುಬ್ಬರವಿಳಿತದ ಸುರುಳಿಯಾಗಿ ಪರಿಣಮಿಸುತ್ತದೆ. ತಾವು ಎಷ್ಟು ಕಡಿಮೆ ಮಟ್ಟದಲ್ಲಿ ಬೆಲೆಗಳನ್ನು ನಿಗದಿಪಡಿಸಿವೆ ಎಂಬುವಂತಿದ್ದರೂ ಸಾಕಷ್ಟು ಲಾಭವನ್ನು ಮಾಡಲು ಅಸಮರ್ಥವಾಗುವ ವ್ಯವಹಾರಗಳು ಆಗ ಮುಚ್ಚಿಹೋಗುತ್ತವೆ. (ಅಡಮಾನದ) ಸಾಲವನ್ನು ಮಾಡಿದಾಗಿನಿಂದ ಮೌಲ್ಯದಲ್ಲಿ ನಾಟಕೀಯವಾಗಿ ಕುಸಿತಕಂಡಿರುವ ಸ್ವತ್ತುಗಳನ್ನು ಬ್ಯಾಂಕುಗಳು ಪಡೆಯುತ್ತವೆ, ಮತ್ತು ಒಂದು ವೇಳೆ ಆ ಸ್ವತ್ತುಗಳನ್ನು ಅವು ಮಾರಿದರೆ ಅವು ಪೂರೈಕೆಯನ್ನು ಮತ್ತಷ್ಟು ಮಿತಿಮೀರಿಸುವುದರ ಜೊತೆಗೆ ಸನ್ನಿವೇಶವು ಉಲ್ಬಣಗೊಳ್ಳುವುದಕ್ಕೆ ಕಾರಣವಾಗುತ್ತವೆ. ಹಣದುಬ್ಬರವಿಳಿತದ ಸುರುಳಿಯನ್ನು ನಿಧಾನಗೊಳಿಸಲು ಅಥವಾ ಸ್ವಲ್ಪ ನಿಲ್ಲಿಸಲು, ಬ್ಯಾಂಕುಗಳು ಕೆಲವೊಮ್ಮೆ ಕಳಪೆ ಮರುಪಾವತಿಯ ಸಾಲಗಳ ವಸೂಲಾತಿ ಕಾರ್ಯವನ್ನು (ತೀರಾ ಇತ್ತೀಚೆಗೆ ಜಪಾನ್‌ನಲ್ಲಿ ಆದಂತೆ) ತಡೆಹಿಡಿಯುತ್ತವೆ. ಹಲವು ವೇಳೆ ಇದು ತತ್ಕಾಲದ ಅವಶ್ಯಕತೆಯನ್ನು ಪೂರೈಸುವ ಒಂದು ವಿಧಾನಕ್ಕಿಂತ ಹೆಚ್ಚೇನೂ ಆಗಿರುವುದಿಲ್ಲ. ಏಕೆಂದರೆ ಸಾಲವನ್ನು ನೀಡಲು ಅವುಗಳ ಬಳಿಯಲ್ಲಿ ಹಣವಿರುವುದಿಲ್ಲವಾದ್ದರಿಂದ ಆಗ ಅವು ಸಾಲದ ನೀಡಿಕೆಗೆ ನಿರ್ಬಂಧ ವಿಧಿಸಬೇಕಾಗುತ್ತದೆ. ಇದು ಬೇಡಿಕೆಯನ್ನು ಮತ್ತಷ್ಟು ತಗ್ಗಿಸುತ್ತದೆ, ಹಾಗೂ ಅದೇ ರೀತಿಯಲ್ಲಿ ಮುಂದುವರಿಯುತ್ತದೆ.
'ಅಧಿಕೃತ' ಹಣದ ಕೊರತೆಯ ಪರಿಣಾಮಗಳುಸಂಪಾದಿಸಿ
ಅಸ್ಥಿರ ಚಲಾವಣಾ ಹಣದ ಆರ್ಥಿಕತೆಗಳಲ್ಲಿ, ಪದಾರ್ಥ ವಿನಿಮಯ ಹಾಗೂ ಡಾಲರೀಕರಣದಂಥ ಇತರ ಪರ್ಯಾಯ ಚಲಾವಣಾ ಹಣದ ವ್ಯವಸ್ಥೆಗಳು ಸಾಮಾನ್ಯವಾಗಿವೆ. ಆದ್ದರಿಂದ ’ಅಧಿಕೃತ’ ಹಣದ ಕೊರತೆ ಕಂಡುಬಂದಾಗ (ಅಥವಾ ವಾಡಿಕೆಯಂತೆ ನೆಚ್ಚಲಾಗದ ಸ್ಥಿತಿಗೆ ಮುಟ್ಟಿದಾಗ), ವ್ಯವಹಾರವು ಇನ್ನೂ ಮುಂದುವರಿಯಬಲ್ಲದು (ತೀರಾ ಇತ್ತೀಚೆಗೆ ರಷ್ಯಾ ಮತ್ತು ಅರ್ಜೆಂಟೈನಾದಲ್ಲಿ ತಲೆದೋರಿದ ಸನ್ನಿವೇಶ ಇದಕ್ಕೆ ಉದಾಹರಣೆ).[ಸೂಕ್ತ ಉಲ್ಲೇಖನ ಬೇಕು] ಇಂಥ ಆರ್ಥಿಕತೆಗಳಲ್ಲಿ ಕೇಂದ್ರ ಸರ್ಕಾರವು ಅನೇಕ ಬಾರಿ ಅಸಮರ್ಥವಾಗಿರುತ್ತದೆಯಾದ್ದರಿಂದ, ಒಂದು ವೇಳೆ ಅದರ ಒಪ್ಪಿಗೆಯಿದ್ದರೂ, ಆಂತರಿಕ ಆರ್ಥಿಕತೆಯನ್ನು ಸಮರ್ಪಕವಾಗಿ ನಿಯಂತ್ರಿಸಲು, ಆಮದು ಸರಕುಗಳಿಗಾಗಿ ಪಾವತಿಸಬೇಕಾಗಿ ಬರುವುದನ್ನು ಹೊರತುಪಡಿಸಿ ಅಧಿಕೃತ ಚಲಾವಣಾ ಹಣವನ್ನು ಹೊಂದಬೇಕಾಗುವ ಬಲವಂತದ ಅಗತ್ಯವು ವ್ಯಕ್ತಿಗಳಿಗೆ ಎದುರಾಗುವುದಿಲ್ಲ. ವಾಸ್ತವವಾಗಿ, ಇಂಥ ಆರ್ಥಿಕತೆಗಳಲ್ಲಿ ಪದಾರ್ಥ ವಿನಿಮಯವು ಒಂದು ರಕ್ಷಣಾತ್ಮಕ ದರಪಟ್ಟಿಯಾಗಿ ಪಾತ್ರವಹಿಸುವುದರ ಜೊತೆಗೆ, ಸ್ಥಳೀಯ ಉತ್ಪಾದನೆಯ ಸ್ಥಳೀಯ ಬಳಕೆಯನ್ನು ಪ್ರೋತ್ಸಾಹಿಸುತ್ತದೆ.[ಸೂಕ್ತ ಉಲ್ಲೇಖನ ಬೇಕು] ಗಣಿಗಾರಿಕೆ ಮತ್ತು ಪರಿಶೋಧನೆಗೆ ಒಂದು ಪ್ರೇರಣೆಯಾಗಿಯೂ ಇದು ಪಾತ್ರವಹಿಸುತ್ತದೆ. ಏಕೆಂದರೆ ಇಂಥ ಒಂದು ಆರ್ಥಿಕತೆಯಲ್ಲಿ ಹಣವನ್ನು ಮಾಡಲು ಇರುವ ಒಂದು ಸುಲಭ ವಿಧಾನವೆಂದರೆ, ಅದನ್ನು ನೆಲದಿಂದ ಹೊರಗೆ ಅಗೆದು ತೆಗೆಯುವುದೇ ಆಗಿದೆ.
ವಿಶೇಷ ವ್ಯವಸ್ಥೆಗಳು (?)ಸಂಪಾದಿಸಿ
ಕೇಂದ್ರ ಬ್ಯಾಂಕು ಅತ್ಯಲ್ಪ ಮೊತ್ತದ ಬಡ್ಡಿದರಗಳನ್ನು ಪೂರ್ತಿಯಾಗಿ ಶೂನ್ಯಕ್ಕೆ ಇಳಿಸಿದಾಗ, ಬಡ್ಡಿ ದರಗಳನ್ನು ತಗ್ಗಿಸುವುದರಿಂದ ಬೇಡಿಕೆಯನ್ನು ಮತ್ತಷ್ಟು ಪ್ರಚೋದಿಸಲು ಅದಕ್ಕೆ ಸಾಧ್ಯವಾಗುವುದಿಲ್ಲ. ಇದೇ ದ್ರವ್ಯತೆಯ ಜಾಲ ಎಂಬ ಹೆಸರಿನಿಂದ ಪ್ರಸಿದ್ಧವಾಗಿದೆ. ಹಣದುಬ್ಬರವಿಳಿತವು ನಿಯಂತ್ರಣವನ್ನು ಕೈಗೆತ್ತಿಕೊಂಡಾಗ, ಒಂದು ಶೂನ್ಯ ಅತ್ಯಲ್ಪ ಬಡ್ಡಿದರದಲ್ಲಿ (ಋಣಾತ್ಮಕ ಹಣದುಬ್ಬರ ದರದ ಕಾರಣದಿಂದಾಗಿ, ಇದು ಇನ್ನೂ ಅತಿ ಹೆಚ್ಚಿನ ಒಂದು ವಾಸ್ತವಿಕ ಬಡ್ಡಿದರವಾಗಿರಲು ಸಾಧ್ಯವಿದೆ) ಹಣವನ್ನು "ಸಾಲ ನೀಡಲು" ಅದಕ್ಕೆ "ವಿಶೇಷ ವ್ಯವಸ್ಥೆಗಳ" ಅಗತ್ಯ ಕಂಡುಬರುತ್ತದೆ. ಹಣದ ಪೂರೈಕೆಯನ್ನು (ಕೃತಕವಾಗಿ) ಏರಿಸಲು ಇದು ಅಗತ್ಯವಾಗಿರುತ್ತದೆ.
ಸಾಲದ ಹಣ ಹಣದುಬ್ಬರವಿಳಿತದ ಉದಾಹರಣೆಗಳುಸಂಪಾದಿಸಿ
ಮಹಾನ್ ಆರ್ಥಿಕ ಕುಸಿತದ ಅವಧಿಯಲ್ಲಿನ ವಿಸ್ತೃತ ಪ್ರಮಾಣಕ್ಕೆ ಸಂಬಂಧಿಸಿದಂತೆ ಈ ಚಕ್ರವನ್ನು ಪತ್ತೆಹಚ್ಚಲಾಗಿದೆ. ತೀಕ್ಷ್ಣವಾಗಿ ಕುಸಿದ ಅಂತರರಾಷ್ಟ್ರೀಯ ವ್ಯಾಪಾರವು, ಸರಕುಗಳಿಗಾಗಿರುವ ಬೇಡಿಕೆಯು ತೀವ್ರವಾಗಿ ಕುಸಿಯಲು ಕಾರಣವಾಯಿತು. ತನ್ಮೂಲಕ ಅದು ಸಾಮರ್ಥ್ಯದ ಒಂದು ಮಹಾನ್ ಪ್ರಮಾಣವನ್ನು ನಿರರ್ಥಕಗೊಳಿಸಿ, ಬ್ಯಾಂಕಿನ ವೈಫಲ್ಯತೆಯ ಒಂದು ಸರಣಿಯನ್ನೇ ಪ್ರಾರಂಭಿಸಿತು. 1990ರ ದಶಕದ ಆರಂಭದಲ್ಲಿ ಷೇರು ಮಾರುಕಟ್ಟೆ ಮತ್ತು ಸ್ಥಿರಾಸ್ತಿ ಮಾರುಕಟ್ಟೆಗಳು ಕುಸಿಯುವುದರೊಂದಿಗೆ ಪ್ರಾರಂಭಗೊಂಡು, ಜಪಾನ್‌ನಲ್ಲಿ ಇದೇ ತೆರನಾದ ಸನ್ನಿವೇಶ ಉದ್ಭವಗೊಂಡಿತ್ತು. ಆದರೆ ಬಹುತೇಕ ಬ್ಯಾಂಕುಗಳ ಕುಸಿಯುವಿಕೆಯನ್ನು ತಡೆಯುವ ಮೂಲಕ ಹಾಗೂ ತೀರಾ ಹದಗೆಟ್ಟ ಸ್ಥಿತಿಯಲ್ಲಿದ್ದ ಹಲವಾರು ಬ್ಯಾಂಕುಗಳನ್ನು ತನ್ನ ನೇರ ನಿಯಂತ್ರಣಕ್ಕೆ ತೆಗೆದುಕೊಳ್ಳುವ ಮೂಲಕ ಜಪಾನ್ ಸರ್ಕಾರವು ಈ ಸನ್ನಿವೇಶಕ್ಕೆ ತಡೆಯೊಡ್ಡಿತು. ಈ ಸಂಗತಿಗಳು ಒಂದು ತೀವ್ರ ಸ್ವರೂಪದ ಚರ್ಚಾವಿಷಯಗಳಾಗಿ ಪರಿಣಮಿಸಿವೆ.
2000ರ ಹಿಂಜರಿತದ ನಂತರದ ಅವಧಿಯಲ್ಲಿನ ತೀವ್ರ ಹಣದುಬ್ಬರವಿಳಿತ ಅಪಾಯಸಂಪಾದಿಸಿ
ಕೆಲವೊಂದು ಅರ್ಥಶಾಸ್ತ್ರಜ್ಞರು ವಾದಿಸುವ ಪ್ರಕಾರ, 2000 ಹಿಂಜರಿತದ ನಂತರದ ಸನ್ನಿವೇಶವು US ತೀವ್ರ ಹಣದುಬ್ಬರವಿಳಿತದ ಅಪಾಯದಲ್ಲಿ ಸಿಲುಕಿಕೊಂಡಿದ್ದ ಅವಧಿಯನ್ನು ಒಳಗೊಂಡಿತ್ತು, ಮತ್ತು ಈ ಕಾರಣದಿಂದಾಗಿಯೇ ಫೆಡರಲ್ ರಿಸರ್ವ್ ಕೇಂದ್ರ ಬ್ಯಾಂಕು 2001ರಿಂದ ಪ್ರಾರಂಭಿಸಿ ಒಂದು "ಹೊಂದಾಣಿಕೆಯ" ದೃಷ್ಟಿಕೋನದಲ್ಲಿ ಬಡ್ಡಿದರಗಳನ್ನು ತನ್ನ ಹಿಡಿತದಲ್ಲಿಟ್ಟುಕೊಂಡಿದ್ದು ಸಮರ್ಥನೀಯವಾಗಿತ್ತು.
ಹಣದುಬ್ಬರವಿಳಿತವನ್ನು ನಿವಾರಿಸುವಿಕೆಸಂಪಾದಿಸಿ
Unbalanced scales.svg
1930ರ ದಶಕದವರೆಗೆ, ಅರ್ಥಶಾಸ್ತ್ರಜ್ಞರು ಸಾಮಾನ್ಯವಾಗಿ ನಂಬಿಕೊಂಡಿದ್ದ ಪ್ರಕಾರ, ಹಣದುಬ್ಬರವಿಳಿತವು ತನಗೆ ತಾನೇ ಸರಿಯಾಗುತ್ತದೆ ಎಂಬುದೇ ಆಗಿತ್ತು. ಬೆಲೆಗಳು ಇಳಿದಂತೆ, ಬೇಡಿಕೆಯು ಸ್ವಾಭಾವಿಕವಾಗಿ ಏರುತ್ತದೆ ಮತ್ತು ಬಾಹ್ಯ ಹಸ್ತಕ್ಷೇಪವಿಲ್ಲದೆಯೇ ಆರ್ಥಿಕ ವ್ಯವಸ್ಥೆಯು ತನಗೆ ತಾನೇ ಸರಿಹೋಗುತ್ತದೆ ಎಂಬುದು ಅವರ ನಂಬಿಕೆಯಾಗಿತ್ತು.
ಮಹಾನ್ ಆರ್ಥಿಕ ಕುಸಿತದ ಅವಧಿಯಲ್ಲಿನ 1930ರ ದಶಕದಲ್ಲಿ ಈ ದೃಷ್ಟಿಕೋನವು ನಿರಾಕರಣೆಗೆ ಒಳಗಾಯಿತು. ಕೇನ್ಸ್ ಪಂಥೀಯ ಅರ್ಥಶಾಸ್ತ್ರಜ್ಞರು ತಮ್ಮ ವಾದವನ್ನು ಮಂಡಿಸುತ್ತಾ, ಹಣದುಬ್ಬರವಿಳಿತಕ್ಕೆ ಸಂಬಂಧಿಸಿದಂತೆ ಆರ್ಥಿಕ ವ್ಯವಸ್ಥೆಯು ಸ್ವಯಂ-ತಿದ್ದಿಕೊಳ್ಳುವಂಥದ್ದಾಗಿಲ್ಲ ಮತ್ತು ಸರ್ಕಾರಗಳು ಹಾಗೂ ಕೇಂದ್ರ ಬ್ಯಾಂಕುಗಳು ತೆರಿಗೆಯ ಕಡಿತ ಅಥವಾ ಸರ್ಕಾರಿ ವೆಚ್ಚಗಳಲ್ಲಿನ ಏರಿಕೆಗಳ ಮೂಲಕ ಬೇಡಿಕೆಯನ್ನು ಏರಿಸಲು ಸಕ್ರಿಯವಾದ ಕ್ರಮಗಳನ್ನು ತೆಗೆದುಕೊಳ್ಳಬೇಕಾಗುತ್ತದೆ ಎಂದು ಸಮರ್ಥಿಸಿದರು. ಕೇಂದ್ರ ಬ್ಯಾಂಕಿನಿಂದ ನಿಗದಿಪಡಿಸಲಾಗಿದ್ದ ಮೀಸಲು ಅಗತ್ಯತೆಗಳು ಹೆಚ್ಚಿನದಾಗಿದ್ದವು ಮತ್ತು ಈ ಮೀಸಲು ಅಗತ್ಯತೆಗಳನ್ನು ಹಾಗೆಯೇ ತಗ್ಗಿಸುವ ಮೂಲಕ ಹಾಗೂ ಸಾಲದ ಪ್ರಮಾಣದಲ್ಲಿನ (ಸಾಲವು ಹಣದ ಒಂದು ಸ್ವರೂಪವಾಗಿದೆ) ಕುಸಿತದ ಕಾರಣದಿಂದಾಗಿ ಖಾಸಗಿ ವಲಯಗಳಲ್ಲಿನ ಹಣ ಪೂರೈಕೆಯ ಕಡಿತವನ್ನು ಸರಿದೂಗಿಸಲು "ಮುಕ್ತ" ಮಾರುಕಟ್ಟೆಯ ಕಾರ್ಯಾಚರಣೆಗಳ (ಉದಾಹರಣೆಗೆ, ನಗದಿಗೆ ಪ್ರತಿಯಾಗಿ ಬೊಕ್ಕಸದ ಬಾಂಡ್‌ಗಳನ್ನು ಖರೀದಿಸುವುದು) ಮೂಲಕ ಹಣ ಪೂರೈಕೆಯನ್ನು ಕೇಂದ್ರ ಬ್ಯಾಂಕು ಆಗ ಪರಿಣಾಮಕಾರಿಯಾಗಿ ಏರಿಸಬಹುದಿತ್ತು ಎಂಬುದು ಅವರ ಸಮರ್ಥನೆಯಾಗಿತ್ತು.
ಹಣ-ನಿಯಂತ್ರಣವಾದಿ ಪರಿಕಲ್ಪನೆಗಳು ಹುಟ್ಟಿಕೊಳ್ಳುವುದರೊಂದಿಗೆ, ಹಣದುಬ್ಬರವಿಳಿತವನ್ನು ಎದುರಿಸುವೆಡೆಗಿನ ಗಮನವು ಬಡ್ಡಿದರಗಳನ್ನು ಕಡಿಮೆ ಮಾಡುವ (ಅಂದರೆ, ಹಣದ "ವೆಚ್ಚ"ವನ್ನು ತಗ್ಗಿಸುವ) ಮೂಲಕ ಬೇಡಿಕೆಯನ್ನು ವಿಸ್ತರಿಸುವ ಕಡೆಗೆ ಪ್ರಯೋಗಿಸಲ್ಪಟ್ಟಿತು. 1990ರ ದಶಕದ ಆರಂಭದಲ್ಲಿ ಹಾಗೂ 2000–2002ರಲ್ಲಿ ಸ್ಟಾಕ್ ಮಾರುಕಟ್ಟೆಯ ಆಘಾತಗಳು ಆದಾಗ, ಬೇಡಿಕೆಯನ್ನು ಉತ್ತೇಜಿಸಲು ಜಪಾನ್ ಮತ್ತು USಗಳೆರಡರಲ್ಲೂ ಕ್ರಮವಾಗಿ ಕೈಗೊಳ್ಳಲಾದ ಹೊಂದಾಣಿಕೆಯ ಕಾರ್ಯನೀತಿಗಳು ವಿಫಲಗೊಂಡುದನ್ನು ಲೆಕ್ಕಕ್ಕೆ ತೆಗೆದುಕೊಂಡ ಹಿನ್ನೆಲೆಯಲ್ಲಿ ಈ ದೃಷ್ಟಿಕೋನಕ್ಕೆ ಒಂದು ಹಿನ್ನಡೆ ದೊರೆತಿದೆ. ಸ್ವತ್ತಿನ ಬೆಲೆಗಳ ಮೇಲೆ ಹಣಕಾಸಿನ ಕಾರ್ಯನೀತಿಗಳ (ಹಣದುಬ್ಬರದ) ಪ್ರಭಾವದ ಕುರಿತು ಅರ್ಥಶಾಸ್ತ್ರಜ್ಞರು ಈಗ ಚಿಂತಿತರಾಗಿದ್ದಾರೆ. ಹೆಚ್ಚಿನ ಮಟ್ಟದ ಸ್ವತ್ತು ಬೆಲೆಗಳು ಹಾಗೂ ಹೆಚ್ಚುವರಿ ಸಾಲದ ಸಂಗ್ರಹಣೆಗೆ ಸಮರ್ಥಿಸಲಾದ ಕಡಿಮೆ ವಾಸ್ತವಿಕ ಬೆಲೆಗಳು ನೇರ ಕಾರಣವಾಗಬಲ್ಲುದಾಗಿವೆ. ಆದರಿಂದ ದರಗಳನ್ನು ತಗ್ಗಿಸುವುದು ಕೇವಲ ಒಂದು ತಾತ್ಕಾಲಿಕ ಉಪಶಮನವಾಗಿ ಪರಿಣಮಿಸಿ, ಅದು ಅಂತಿಮವಾಗಿ ಭವಿಷ್ಯದ ಸಾಲದ ಒಂದು ಹಣದುಬ್ಬರವಿಳಿತದ ಬಿಕ್ಕಟ್ಟಿನ ಉಲ್ಬಣಕ್ಕೆ ಕಾರಣವಾಗುತ್ತದೆ.

ಕಾಮೆಂಟ್‌ಗಳಿಲ್ಲ:
ಕಾಮೆಂಟ್ ಪೋಸ್ಟ್ ಮಾಡಿ