ಕ್ಯಾನ್ಸರ್ (/ˈkænsə(r)/ ( listen)ವೈದ್ಯಕೀಯ ಪದಗಳಲ್ಲಿ:ಮಾಲಿಗಂಟ್ (ಕೇಡು ತರುವ)ನಿಯೊಪ್ಲಾಸ್ಮ್ (ಊತದ ಗೆಡ್ಡ),ಇದನ್ನು ಅರ್ಬುದ ರೋಗ ಎಂದು ಕರೆಯುತ್ತಾರೆ.ಇದರಲ್ಲಿ ಕೋಶಗಳ ಒಂದು ಸಮೂಹವು ಅನಿಯಂತ್ರಿತ ಬೆಳವಣಿಗೆ ಯನ್ನು ತೋರಿಸುತ್ತವೆ.ಅಂದರೆ ಸಾಮಾನ್ಯಕ್ಕಿಂತಲೂ ಮಿತಿಮೀರಿದ ಕೋಶಗಳ ವಿಭಜನೆ),ಅಂಗಾಂಶಗಳ ಮೇಲೆ ದುರಾಕ್ರಮಣ (ಶರೀರದ ಒಂದು ಭಾಗದಲ್ಲಿ ಇದು ಕಾಣಿಸಿಕೊಂಡರೆ ಅಕ್ಕಪಕ್ಕದ ಕೋಶಗಳನ್ನು ನಾಶಪಡಿಸುತ್ತದೆ).ಇದು ಹಲವು ಬಾರಿ ದೇಹದ ಇತರ ಭಾಗಗಳಿಗೆ ವೇಗವಾಗಿ ಪಸರಿಸು ತ್ತದೆ.(ರಕ್ತ ಅಥವಾ ಕೀವುಗಳಂತಹ ಮಲಿನ ದ್ರವಗಳ ಮೂಲಕ ದೇಹದ ಎಲ್ಲೆಡೆಯೂ ಹಬ್ಬಿಕೊಳ್ಳುತ್ತದೆ.) ಕ್ಯಾನ್ಸರ್ ನ ಹಾನಿಕಾರಕ ಲಕ್ಷಣಗಳು ಇತರೆ ಸಾಮಾನ್ಯ ಗೆಡ್ಡೆಗಳು,ಅಂದರೆ ತಾವೇ ತಾವಾಗಿ ಹುಟ್ಟಿಕೊಂಡವುಗಳು ಸ್ವಯಂ ಮಿತಿಗೊಳಪಟ್ಟವುಗಳು ಇತರ ಅಂಗಾಂಶಗಳ ಮೇಲೆ ಆಕ್ರಮಣ ಅಥವಾ ನಾಶಮಡುವ ಪ್ರವೃತ್ತಿಯು ಕ್ಯಾನ್ಸರ್ ಗಿಂತ ಭಿನ್ನವಾಗಿದೆ. ಲುಕೆಮಿಯಾ ಕೂಡಾ ನಾಲ್ಕು ಕ್ಯಾನ್ಸರ್ ಗಳಲ್ಲಿ ಒಂದಾದರೂ ಇದು ಊತದ ಗೆಡ್ದೆಯ ಲಕ್ಷಣ ಹೊಂದಿರುವದಿಲ್ಲ. ವೈದ್ಯಕೀಯ ವಿಜ್ಞಾನದಲ್ಲಿ ಇದರ ಅಧ್ಯಯನ,ರೋಗ ನಿದಾನ ಪತ್ತೆ,ಚಿಕಿತ್ಸೆ ಮತ್ತು ಕ್ಯಾನ್ಸರ್ ನಿರ್ಮೂಲನೆಯ ಅಂಶಗಳನ್ನು ಹೊಂದಿರುವ ವೈದ್ಯಕೀಯ ಶಾಖೆಯನ್ನು ಆಂಕಾಲಜಿ ಎಂದು ಕರೆಯುತ್ತಾರೆ.
ಕ್ಯಾನ್ಸರ್ ಎಲ್ಲಾ ವಯೋಮಾನದವರಿಗೆ ಗಂಡಾಂತರಕಾರಿ ರೋಗವೆನಿಸಿದೆ,ಇದು ವಯಸ್ಸು ಹೆಚ್ಚಾದಂತೆ ಕಾಡುವ [೧]ಕಾಯಿಲೆಯಾಗಿದೆ. ವಿಶ್ವಾದ್ಯಂತ 2007ರಲ್ಲಿ ಒಟ್ಟು ಮಾನವ ಸಾವಿನಲ್ಲಿ 13%ರಷ್ಟು [೨]ಕ್ಯಾನ್ಸರ್ ನಿಂದ [೩]ಉಂಟಾಗಿವೆ.(7.6 ದಶಲಕ್ಷ)
ವಂಶವಾಹಿನಿಯಲ್ಲಿನ ಅಂಗಾಂಶ ಕೋಶಗಳಲ್ಲಿನ ಪರಿವರ್ತನವು ಅಸ್ವಾಭಾವಿಕತೆಯನ್ನು ತೋರಿಸುತ್ತವೆ.ಕ್ಯಾನ್ಸರ್ ರೋಗಕ್ಕೆ ಇದುಕಾರಣವಾಗಿದೆ. ಇಂತಹ ಅಸ್ವಾಭಾವಿಕ ವೈಪರಿತ್ಯಗಳು ಕ್ಯಾನ್ಸರ್ ಕಾರಕವೆನಿಸಿವೆ.ಉದಾಹರಣೆಗೆ ತಂಬಾಕು ಮತ್ತು ಧೂಮಪಾನ ,ವಿಕಿರಣತೆ,ರಸಾಯನಿಕಗಳು,ಅಥವಾ ಸೋಂಕಿನ ಮೂಲಗಳು ಇಂತಹ ಮಾರಕ ಕಾಯಿಲೆಗೆ ಕಾರಣವಾಗಬಹುದು. ಇನ್ನೂ ಕೆಲವು ವಂಶವಾಹಿನಿಯ ವೈಪರಿತ್ಯಗಳು DNA ದ ಪ್ರತಿಕೃತಿಗಳು,ಅಥವಾ ವಂಶಪಾರಂಪರಿಕವಾಗಿ ಇಡೀ ಜೀವಕೋಶಗಳಲ್ಲಿ ಹುಟ್ಟಿನಿಂದಲೇ ಬರುವ ಸಾಧ್ಯತೆಯು ಈ ಕ್ಯಾನ್ಸರ್ ಗೆ ಮೂಲಕಾರಣವೆನ್ನಬಹುದು. ಅನುವಂಶೀಯ ಕ್ಯಾನ್ಸರ್ ಗಳು ಕ್ಯಾನ್ಸರ್ ಕಾರಕಗಳು ಮತ್ತು ಅವುಗಳಿಗೆ ಆಶ್ರಯ ನೀಡಿದ ಜೀನ್ ಗಳ ನಡುವಿನ ಪರಸ್ಪರ ಪ್ರತಿಕ್ರಿಯೆಗಳನ್ನು ಅವಲಂಬಿಸಿದೆ.
ವಂಶವಾನಿಯ ವೈಪರಿತ್ಯಗಳು ಕ್ಯಾನ್ಸರ್ ಪೀಡಿತ ಜೀನ್ ಗಳ ಎರಡು ಸಾಮಾನ್ಯವರ್ಗಕ್ಕೆ ಸೇರಿವೆ. ಕ್ಯಾನ್ಸರ್ ಹೆಚ್ಚಿಸುವ ಗ್ರಂಥಿಕ ವಾಹಿನಿಗಳು ಮುಖ್ಯವಾಗಿ ಕ್ಯಾನ್ಸರ್ ಕೋಶಗಳಲ್ಲಿ ಕ್ರಿಯಾಶೀಲವಾಗಿರುತ್ತವೆ.ಇವುಗಳು ಗ್ರಂಥಿಕ ವಾಹಿನಿಯಲ್ಲಿ ಹೊಸ ರೋಗಕಾರಕ ಲಕ್ಷಣಗಳಿಗೆ ನಾಂದಿಯಾಗುತ್ತವೆ.ಅತ್ಯಧಿಕ ಬೆಳವಣಿಗೆ ಮತ್ತು ವಿಭಜನೆ,ಯೋಜಿತ ಅವಸಾನದತ್ತ ಸಾಗಿರುವ ಕೋಶಗಳ ರಕ್ಷಣೆ, ಅಂಗಾಂಶಗಳ ಸಾಮಾನ್ಯ ಎಲ್ಲೆಗೆ ಹಾನಿ,ಹೀಗೆ ಕ್ಯಾನ್ಸರ್ ಕಾರಕಗಳು ವಿಭಿನ್ನ ಏಕಾಂಶಗಳ ಪರಿಸರದಲ್ಲಿ ತನ್ನನ್ನು ತಾನು ಪ್ರತಿಷ್ಟಾಪಿಸುವುದು ಪ್ರಮುಖ ಲಕ್ಷಣವಾಗಿದೆ. ಗೆಡ್ದೆ ತಡೆಯುವ ವಂಶವಾಹಿನಿಗಳು ನಂತರ ಕ್ಯಾನ್ಸರ್ ಕೋಶಗಳಲ್ಲಿ ನಿಷ್ಕ್ರಿಯಗೊಳಿಸುತ್ತವೆ.ಇದರಿಂದಾಗಿ ಸಹಜ ಕಾರ್ಯ ನಿರ್ವಹಿಸುವ ಆ ಕೋಶಗಳ ಕಾರ್ಯಕ್ಕೆ ಹಾನಿಸಂಭವಿಸುತ್ತದೆ.ಅವೆಂದರೆ ನಿಖರDNA ಪ್ರತಿಕೃತಿ,ಕೋಶದ ಆವರ್ತನದ ಮೇಲಿನ ನಿಯಂತ್ರಣ,ಅಂಗಾಂಶಗಳಲ್ಲಿ ಅವುಗಳ ಹುಟ್ಟು ಮತ್ತು ಅಲ್ಲಿಯೇ ಅಂಟಿಕೊಳ್ಳುವ ಅವುಗಳ ಗುಣಗಳು,ಅದೂ ಅಲ್ಲದೇ ರೋಗ ನಿರೋಧಕ ಸುರಕ್ಷತಾ ಕೋಶಗಳ ರೋಗಪ್ರತಿರೋಧಕ ವಿಧಾನದ ಕ್ರಿಯೆ ಇವುಗಳೊಂದಿಗೆ ಅಂಗಾಂಶಗಳಲ್ಲೇ ಮುಖಾಮುಖಿ ನಡೆಯುತ್ತಿದೆ.
ಅಂಗಾಂಶದ ಸಮಗ್ರ ವಿಭಜನೆಯ ಹಿಂದಿನ ಗತಕಾಲಿಕದ ಸಂಪೂರ್ಣ ಮಾದರಿಯೊಂದರ ಚಿಕೆತ್ಸೆ ನಂತರ ಇದರ ನಿಖರ ಹಾನಿಕಾರಕ ವಿಷಯ ಲಕ್ಷಣ ಹಾಗು ವೈಪರಿತ್ಯಗಳ ವಿಕಿರಣಗಳ ಛಾಯೆಯನ್ನು ಇಲ್ಲಿ ಗಮನಿಸಿ ಕ್ಯಾನ್ಸರ್ ನ ವಿವಿಧ ಹಾನಿಯ ಬಗ್ಗೆ ಅಂದಾಜಿಸಬಹುದಾಗಿದೆ. ಹಲವು ಬಗೆಯ ಕ್ಯಾನ್ಸರ್ ಗಳನ್ನು ಚಿಕಿತ್ಸೆಯ ಮೂಲಕ ಹರಡುವಿಕೆಯನ್ನು ತಡೆಯಬಹುದು ಅಲ್ಲದೇ ಉತ್ತಮ ರೀತಿಯಲ್ಲಿ ಗುಣಮುಖರನ್ನಾಗಿಯೂ ಮಾಡಬಹುದಾಗಿದೆ.ಇದರ ಫಲಿತಾಂಶವು ಕ್ಯಾನ್ಸರ್ ಯಾವ ರೀತಿಯದ್ದು,ಯಾವ ಭಾಗದಲ್ಲಿದೆ ಮತ್ತು ಯಾವ ಹಂತದಲ್ಲಿದೆ ಎಂಬುದರ ಮೇಲೆ ಅದರ ಗುಣಮುಖದ ರೀತಿ ಅವಲಂಬಿಸಿದೆ. ಒಮ್ಮೆ ಕ್ಯಾನ್ಸರ್ ಇದೆ ಎಂಬುದು ಖಚಿತವಾದರೆ ಅದನ್ನು ಶಸ್ತ್ರ ಚಿಕಿತ್ಸೆ,ಕೆಮೊಥೆರಪಿ ಮತ್ತು ರೇಡಿಯೊ ಥೆರಪಿ ಮೂಲಕ ಉತ್ತಮ ಚಿಕಿತ್ಸೆ ನೀಡಲು ಸಾಧ್ಯವಾಗುತ್ತದೆ. ಸಂಶೋಧನೆಯ ವಲಯ ಅಭಿವೃದ್ಧಿಯಾದಂತೆ ವಿವಿಧ ರೀತಿಯ ಕ್ಯಾನ್ಸರ್ ಗಳಿಗೆ ಅದರದೇ ಆದ ವಿಶೇಷ ಚಿಕಿತ್ಸೆಗಳು ಲಭ್ಯವಾಗುತ್ತಿವೆ. ಸದ್ಯ ನಿರ್ದಿಷ್ಟ ಔಷಧೋಪಚಾರದ ಬಗೆಗಿನ ಸಂಶೋಧನೆಗಳು ಪ್ರಗತಿಯಲ್ಲಿರುವದರಿಂದ ಅಂಗಾಂಶಗಳ ಮೇಲೆ ಖಚಿತವಾಗಿ ಪರಿಣಾಮ ಬೀರುವ ಆವಿಷ್ಕಾರಗಳು ಜೀವಕೋಶಗಳಲ್ಲಿನ ಅಸಹಜ ಬೆಳವಣಿಗೆ ಮತ್ತು ಇತರೆ ಜೀವಕೋಶಗಳ ವಿನಾಶವನ್ನು ತಡೆಯಬಹುದಾಗಿದೆ.ಕ್ಯಾನ್ಸರ್ ಗೆಡ್ಡೆಯಲ್ಲಿನ ನಿರ್ಧಿಷ್ಟ ಕೋಶಗಳನ್ನು ಗುರುತಿಸಿ ನಿಶ್ಚಿತ ಔಷಧೋಪಚಾರ ಮಾಡಬಹುದಾಗಿದೆ. ಕ್ಯಾನ್ಸರ್ ರೋಗಿಗಳ ಮುನ್ಸೂಚನೆ ಲಕ್ಷಣ ಕಾಣಿಸಿದ ನಂತರ ಬಹುತೇಕ ರೋಗಿಗಳು ಕಾಯಿಲೆ ಯಾವ ಹಂತದಲ್ಲಿದೆ,ಇದರ ಮುಂಬರುವ ದುಷ್ಪರಿಣಾಮಗಳ ಬಗ್ಗೆ ಪೂರ್ವದಲ್ಲೇ ಗ್ರಹಿಸಿ ಸೂಕ್ತ ಚಿಕಿತ್ಸೆ ಮಾಡುವುದು ಈಗಿನ ಹೊಸ ಸಂಶೋಧನೆಯಾಗಿದೆ. ಇನ್ನೂ ಹೆಚ್ಚೆಂದರೆ ಕಾಯಿಲೆಯ ಹಿನ್ನೆಲೆ,ಅಲ್ಪಕಾಲೀನವೆ ಅಥವಾ ದೀರ್ಘಕಾಲೀನವೆ ಎಂಬ ಇದರ ವರ್ಗೀಕರಣ ನಡೆಯುತ್ತದೆ.ಜೀವಕೋಶಗಳ ಪರೀಕ್ಷೆಯ ನಂತರ ಅದನ್ನು ಸರಿಯಾಗಿ ರೋಗ ನಿದಾನದ ಕ್ರಮಕ್ಕೊಳಪಡಿಸಿ ಆಯಾ ವ್ಯಕ್ತಿಗೆ ಆಯಾ ಕಾಯಿಲೆಯ ಗುಣಲಕ್ಷಣದ ಮೇಲೆ ಔಷಧೋಪಚಾರ ನಡೆಸಲು ಸಾಧ್ಯವಿದೆ.

ಕಾಮೆಂಟ್‌ಗಳಿಲ್ಲ:
ಕಾಮೆಂಟ್ ಪೋಸ್ಟ್ ಮಾಡಿ