ಬಜೆಟ್ ಸಿದ್ಧವಾಗುವುದು ಹೇಗೆ?
ಪ್ರತಿ ವರ್ಷ ಫೆಬ್ರವರಿ-ಮಾರ್ಚ್ ತಿಂಗಳಲ್ಲಿ ಬಜೆಟ್ ಮಂಡನೆ ಮಾಡಲಾಗುತ್ತದೆ. ಒಂದು ದೇಶದ ವಾರ್ಷಿಕ ಆದಾಯ-ವ್ಯಯ ಲೆಕ್ಕಾಚಾರವೇ ಬಜೆಟ್. ಭಾರತದಂತಹ ಬೃಹತ್ ರಾಷ್ಟ್ರದಲ್ಲಿ ವಾರ್ಷಿಕ ಆದಾಯ-ವ್ಯಯ ಸಿದ್ಧಪಡಿಸುವುದು ಸವಾಲಿನ ಕೆಲಸವೇ ಸರಿ. ಅಷ್ಟಕ್ಕೂ ಬಜೆಟನ್ನು ಹೇಗೆ ಸಿದ್ಧಪಡಿಸಲಾಗುತ್ತದೆ ಎಂಬ ಬಗ್ಗೆ ಮಾಹಿತಿ ಕೆಳಗಿನಂತಿವೆ.
ಪ್ಲಾನಿಂಗ್ ಕಮೀಟಿ
ಸಂಪನ್ಮೂಲ ಸಂಗ್ರಹಸಂಪಾದಿಸಿ
೧. ಸರ್ಕಾರಿ ಸ್ವಾಮ್ಯದ ಕಂಪನಿಗಳ ಗಳಿಕೆ ಅಂದಾಜು ಹಾಕಲು ಸರ್ಕಾರ ಆ ಕಂಪನಿಗಳ ಮುಖ್ಯಸ್ಥರು ಹಾಗೂ ವ್ಯವಸ್ಥಾಪಕರು ನಿರ್ದೇಶಕರು(ಸಿಎಂಡಿ) ಅಥವಾ ಹಣಕಾಸು ನಿರ್ದೇಶಕರನ್ನು ದಿಲ್ಲಿಯ ಉತ್ತರ ಬ್ಲಾಕ್ ಅಲ್ಲಿರುವ ಹಣಕಾಸು ಸಚಿವಾಲಯದ ಕಛೇರಿಗೆ ಕರೆಸಿಕೋಳ್ಳುತ್ತದೆ. ಜಂಟಿ ಕಾರ್ಯದರ್ಶಿ ಮಟ್ಟದ ಹಣಕಾಸು ಇಲಾಖೆಯ ಕಾರ್ಯದರ್ಶಿ ಪ್ರತಿಯೊಬ್ಬ ಅಧ್ಯಕ್ಷರ ಜೊತೆಗೂ ಮಾತುಕತೆ ನಡೆಸಿ, ಆದಾಯದ ಅಂದಾಜು ಪಡೆಯುತ್ತಾರೆ. ಆ ವಿವರವನ್ನು ವೆಚ್ಚ ಇಲಾಖೆಯ ಕಾರ್ಯದರ್ಶಿಗೆ ರವಾನಿಸುತ್ತಾರೆ. ಅಲ್ಲಿಂದ ಹಣಕಾಸು ಇಲಾಖೆಗೆ ಮಾಹಿತಿ ಹೋಗುತ್ತದೆ.
೨. ಸಾಮಾನ್ಯವಾಗಿ ಸರ್ಕಾರಿ ಸ್ವಾಮ್ಯದ ಕಂಪನಿಗಳು ಸ್ವಂತ ಸಂಪನ್ಮೂಲದಿಂದಲೇ ಕಾರ್ಯನಿರ್ವಹಿಸಬೇಕು ಎಂಬುದು ಸರ್ಕಾರದ ಬಯಕೆ. ಆದರೆ, ಕೆಲವು ರಕ್ಷಣಾ ಹಾಗೂ ಆರ್ಥಿಕವಾಗಿ ಮುಖ್ಯವಿರುವ ವಲಯಗಳಿಗೆ ಯೋಜನಾ ಆಯೋಗದ ಶಿಫಾರಸ್ಸಿನನ್ವಯ ವಿತ್ತಿಯ ನೆರವು ನೀಡಲಾಗುತ್ತದೆ.
೩. ತೆರಿಗೆ ಸಂಗ್ರಹ ಹೊರೆತುಪಡಿಸಿದರೆ ಬಜೆಟಗೆ ಸಂಪನ್ಮೂಲ ಸಿಗುವುದು ಸರ್ಕಾರಿ ಸ್ವಾಮ್ಯದ ಕಂಪನಿಗಳು ಪಾವತಿಸುವ ಡಿವಿಡೆಂಡ್, ಸರ್ಕಾರಿ ಕಂಪನಿಗಳ ಶೇರು ವಿಕ್ರಯದಿಂದ ಸಿಗುವ ಹಣದಿಂದ. ಇದರ ಜತೆಗೆ ವಿಶ್ವಬ್ಯಾಂಕ್, ಎಡಿಬಿ ಮತ್ತಿತ್ತರ ಅಂತರರಾಷ್ಟ್ರೀಯ ಸಂಸ್ಥೆಗಳಿಂದ ಬರುವ ಸಾಲದ ಲೆಕ್ಕವನ್ನೂ ತೆಗೆದುಕೊಳ್ಳಲಾಗುತ್ತದೆ. ಸರ್ಕಾರಿ ಸ್ವಾಮ್ಯದ ಕಂಪನಿಗಳಲ್ಲಿರುವ ಹೆಚ್ಚುವರಿ ಹಣ, ಅವುಗಳ ಸಾಲವನ್ನೂ ಪರಿಗಣಿಸಲಾಗುತ್ತದೆ.
೪. ಆದಾಯ ಇಲಾಖೆ ಹಾಗೂ ಹಣಕಾಸು ಸಚಿವಾಲಯದಲ್ಲಿ ಎರಡು ಮಂಡಳಿಗಳಿವೆ. ಒಂದು ಕೇಂದ್ರೀಯ ನೇರ ತೆರಿಗೆ ಮಂಡಳಿ. ತೆರಿಗೆ ಸಂಗ್ರಹದ ಮೊತ್ತವನ್ನು ಇವೆರಡೂ ಇಲಾಖೆಗಳು ನೀಡುತ್ತವೆ. ಮುಂದೆ ಆಗಬಹುದಾದ ತೆರಿಗೆ ಸಂಗ್ರಹದ ಅಂದಾಜನ್ನೂ ಕೊಡುತ್ತವೆ.
೫. ಪ್ರತಿಯೊಂದು ಇಲಾಖೆಯದಲ್ಲೂ ಒಬ್ಬೊಬ್ಬ ಹಣಕಾಸು ಸಲಹೆಗಾರರಿದ್ದಾರೆ. ಅವರನ್ನು ಹಣಕಾಸು ಸಚಿವಾಲಯ ಕರೆದು ನಿಮ್ಮ ಇಲಾಖೆ ನಿಗದಿಪಡಿಸಿದ್ದ ಅನುದಾನದಲ್ಲಿ ಎಷ್ಟು ಖರ್ಚು ಮಾಡಿದ್ದೀರಿ ಎಂಬ ವಿವರ ಪಡೆಯುತ್ತದೆ. ಕೆಲವು ಸಚಿವಾಲಯಗಳು ನಿಗದಿಪಡಿಸಿರುವ ಅನುದಾನವನ್ನು ಪೂರ್ಣ ಬಳಕೆ ಮಾಡಿಕೊಂಡಿರುವುದಿಲ್ಲ. ಮತ್ತೆ ಕೆಲವು ಸಚಿವಾಲಯಗಳು ಭಾರಿ ಪ್ರಮಾಣದಲ್ಲಿ ಖರ್ಚು ಮಾಡಿರುತ್ತವೆ. ಈ ವಿವರ ಸಂಗ್ರಹಿಸುವ ಅಧಿಕಾರಿಗಳು ಪರಿಷ್ಕೃತ ಅಂದಾಜು ಸಿದ್ಧಪಡಿಸುತ್ತಾರೆ. ಅಂದರೆ ಯಾವ ಸಚಿವಾಲಯಕ್ಕೆ ಬೇಕಿರುವ ಹಣ ಎಷ್ಟು ಎಂಬ ಪಟ್ಟಿ ಮಾಡುತ್ತಾರೆ.
ಖರ್ಚು ವೆಚ್ಚದ ಅಂದಾಜು ಲೆಕ್ಕಾಚಾರಸಂಪಾದಿಸಿ
೧. ಸಂಪನ್ಮೂಲ ಸಂಗ್ರಹ ಲೆಕ್ಕಾಚಾರ ನಡೆಯುತ್ತಿರುವಾಗಲ್ಲೇ ಇತ್ತ ಯೋಜನಾ ಆಯೋಗ ಪ್ರತಿಯೊಂದು ಸಚಿವಾಲಯಗಳನ್ನು ಭೇಟಿ ಮಾಡಿಕೊಂಡು ಬರುತ್ತದೆ. ಹಾಲಿ ನಡೆಯುತ್ತಿರುವ ಯೋಜನೆಗಳನ್ನು, ಅದಕ್ಕೆ ಅನುದಾನ ಮುಂದುವರೆಯಬೇಕೇ? ಎಂಬ ಬಗ್ಗೆ ಚರ್ಚೆ ನಡೆಸುತ್ತದೆ. ನಡೆಯುತ್ತಿರುವ ಯೋಜನೆಗಳನ್ನು ನಿಲ್ಲಿಸುವಂತೆ ಅಥವಾ ಎರಡು ಯೋಜನೆಗಳನ್ನು ಒಟ್ಟಿಗೆ ಸೇರಿಸುವಂತೆ ಕೆಲವೊಮ್ಮೆ ಆಯೋಗ ಸಲಹೆ ಮಾಡುತ್ತದೆ. ಮುಂದಿನ ಹಣಕಾಸು ವರ್ಷ ಈಗ ಜಾರಿಯಾಗಿರುವ ಯೋಜನೆಗಳನ್ನು ಮುಂದುವರಿಸಲು ಇಷ್ಟು ಹಣ ಬೇಕಾಗುತ್ತದೆ ಎಂಬ ವಿವರವನ್ನು ಹಣಕಾಸು ಸಚಿವಾಲಯಕ್ಕೆ ನೀಡುತ್ತದೆ. ಅನಂತರ ಹಣಕಾಸು ಸಚಿವರು ಹಾಗೂ ಯೋಜನಾ ಆಯೋಗದ ಉಪಾಧ್ಯಕ್ಷರ ನಡುವೆ ಚರ್ಚೆ ನಡೆಯುತ್ತದೆ. ಈ ಸಲದ ಬಜೆಟ್‌ನಲ್ಲಿ ಎಷ್ಟು ಹಣ ಬೇಕು ಎಂಬ ಯೋಜನೆಯನ್ನು ವಿವಿಧ ಸಚಿವಾಲಯಗಳಿಂದ ತರಿಸಿಕೊಳ್ಳಲಾಗುತ್ತದೆ. ಈ ಮೂಲಕ ಬಜೆಟಗಳ ಅಂದಾಜು ಹಾಕಲಾಗುತ್ತದೆ.
೨. ಈ ಪ್ರಕ್ರಿಯೆ ಜತೆ ಜತೆಗೇ ಆರ್ಥಿಕ ವ್ಯವಹಾರಗಳ ಇಲಾಖೆ ಕಾರ್ಮಿಕ ಸಂಘಟನೆಗಳು, ಕೈಗಾರಿಕಾ ಒಕ್ಕೂಟಗಳು, ಆರ್ಥಿಕ ತಜ್ಞರು ಹಾಗೂ ಇಲಾಖೆ ಗುಂಪುಗಳ ಜತೆ ಮಾತುಕತೆ ನಡೆಸಿ ಸಲಹೆಗಳನ್ನು ಸ್ವೀಕರಿಸುತ್ತದೆ.
ಹಣಕಾಸು ಸಚಿವರದ್ದೇ ನಿರ್ಧಾರಸಂಪಾದಿಸಿ
ಈ ಎಲ್ಲಾ ಪ್ರಕ್ರಿಯೆ ಮುಗಿಯುವ ಹೊತ್ತಿಗೆ ತೆರಿಗೆ ಸಂಗ್ರಹದಿಂದ ಎಷ್ಟು ಹಣ ಸಿಗಲಿದೆ ಹಾಗೂ ಮುಂಬರುವ ಹಣಕಾಸು ವರ್ಷದಲ್ಲಿ ಎಷ್ಟು ಖರ್ಚು ಮಾಡಬೇಕಾಗುತ್ತದೆ ಎಂಬ ಅಂದಾಜು ಹಣಕಾಸು ಸಚಿವರಿಗೆ ಸಿಕ್ಕಿರುತ್ತದೆ. ಇದರ ಜತೆಗೆ ವಿತ್ತೀಯ ಕೊರತೆ ಕಡಿತಗೊಳಿಸಬೇಕಾದ ಹೊಣೆ ಕೂಡ ಇರುತ್ತದೆ. ಎಲ್ಲವನ್ನು ಅಳೆದು ತೂಗಿ, ಹೊಸ ತೆರಿಗೆ ಹೇರಬೇಕೋ ಅಥವಾ ಮತ್ತಷ್ಟು ಆದಾಯ ಸಂಗ್ರಹಿಸಲು ಸಾಲ ವಿಸ್ತರಿಸಬೇಕೋ ಎಂಬ ಬಗ್ಗೆ ಹಣಕಾಸು ಸಚಿವರ ತಂಡ ನಿರ್ಧಾರ ಕೈಗೊಳ್ಳುತ್ತದೆ.
ಬಜೆಟ್ ಮಂಡನೆ ಮಾಡುವ ಸ್ಥಳ
ಬಜೆಟ್ ಭಾಷಣದ ಸಿದ್ಧತೆಸಂಪಾದಿಸಿ
ಬಜೆಟ್ ದಾಖಲೆಗಳೆಲ್ಲಾ ಸಿದ್ಧವಾದ ಬಳಿಕ ಬಜೆಟ್ ಭಾಷಣ ರಚಿಸುವ ಕಾರ್ಯ ಶುರುವಾಗುತ್ತದೆ. ಬಜೆಟ್ ಮಂಡನೆಗೆ ಇನ್ನು ೧೦ ರಿಂದ ೧೨ ದಿನ ಇವೆ ಅನ್ನುವಾಗ ಬಜೆಟ್ ಪ್ರತಿಗಳ ಮುದ್ರಣ ಕಾರ್ಯ ಸಚಿವಾಲಯ ಇರುವ ನಾರ್ತ್ ಬ್ಲಾಕಿನಲ್ಲೇ ನಡೆಯುತ್ತದೆ. ಆಗ ಅಲ್ಲಿಗೆ ಯಾರಿಗೂ ಪ್ರವೇಶವಿರುವುದಿಲ್ಲ.
ಮನೆಗೂ ಹೋಗುವಂತಿಲ್ಲಸಂಪಾದಿಸಿ
ಬಜೆಟ್ ಮಂಡನೆಯಾಗುವ ವಾರ ಮುನ್ನದಿಂದ ಹಿಡಿದು ಬಜೆಟ್ ಮಂಡನೆಯಾಗುವವರೆಗೂ ಬಜೆಟ್ ಪ್ರತಿಗಳನ್ನು ಮುದ್ರಿಸುವ ಸಿಬ್ಬಂದಿ ಮನೆಗೂ ಹೋಗುವಂತಿಲ್ಲ. ಬಾಹ್ಯ ಜಗತ್ತಿನ ಜತೆ ಸಂಪರ್ಕವನ್ನೂ ಇಟ್ಟುಕೊಳ್ಳುವಂತಿಲ್ಲ. ಅವರೆಲ್ಲ ಹಣಕಾಸು ಸಚಿವಾಲಯದಲ್ಲೇ ಇರಬೇಕು.
ಮುಖ್ಯ ವಿಷಯಗಳುಸಂಪಾದಿಸಿ
೧. ಭಾರತದ ಮೊದಲ ಬಜೆಟ್ ಮಂಡಿಸಿದವರು ಆರ್.ಕೆ.ಷಣ್ಮುಗಂ ಚೆಟ್ಟಿ.
೨. ಅತಿ ಹೆಚ್ಚು ಬಾರಿ ಬಜೆಟ್ ಮಂಡಿಸಿದವರು ಮೊರಾರ್ಜಿ ದೇಸಾಯಿ(೮), ನೆಹರು ಪ್ರಧಾನಿಯಾಗಿದ್ದಾಗ ದೇಸಾಯಿ ೩ ವರ್ಷ ಹಣಕಾಸು ಸಚಿವರಾಗಿದ್ದರು.
೩. ತಮ್ಮ ಜನ್ಮದಿನದಂದೇ ಬಜೆಟ್ ಮಂಡಿಸಿದ ಹೆಗ್ಗಳಿಕೆ ಕೂಡ ಮೊರಾರ್ಜಿ ದೇಸಾಯಿ ಅವರದ್ದು, ನಾಲ್ಕು ವರ್ಷಕೊಮ್ಮೆ ಬರುವ ಫೆ.೨೯ ಮೊರಾರ್ಜಿ ಹುಟ್ಟಿದ ದಿನ. ಅವರು ೧೯೬೪ ಹಾಗೂ ೧೯೬೮ನೇ ಇಸ್ವಿಯ ಫೆ.೨೯ರಂದು ಬಜೆಟ್ ಮಂಡಿಸಿದ್ದರು.
೪. ರಿಸರ್ವ್ ಬ್ಯಾಂಕ್ ಗವರ್ನರ್ ಕೂಡ ಈ ಹಿಂದೆ ಬಜೆಟ್ ಮಂಡಿಸಿದ್ದಾರೆ. ೧೯೫೧-೫೨ನೇ ಸಾಲಿನ ಬಜೆಟನ್ನು ಅಂದಿನ ಗವರ್ನರ್ ಸಿ.ಡಿ.ದೇಶ್ ಮುಖ್ ಮಂಡಿಸಿದ್ದರು.
೫. ಜಸ್ವಂತ್ ಸಿಂಗ್ ಕೇವಲ ೧೩ದಿನಗಳ ಹಣಕಾಸು ಸಚಿವರಾಗಿದ್ದರು.
೬. ಆರಂಭದಲ್ಲಿ ಬಜೆಟಿನ ಪ್ರತಿಗಳನ್ನು ರಾಷ್ಟ್ರಪತಿ ಭವನದಲ್ಲೇ ಮುದ್ರಣ ಮಾಡಲಾಗುತ್ತಿತ್ತು. ೧೯೫೦ರಲ್ಲಿ ಬಜೆಟ್ ಪ್ರತಿಗಳು ಸೋರಿಕೆಯಾದವು ನಂತರ ಬಜೆಟ್ ಪ್ರತಿಗಳ ಮುದ್ರಣ ಸ್ಥಳವನ್ನು ಮಿಂಟೋ ರಸ್ತೆಯಲ್ಲಿರುವ ಸೆಕ್ಯುರಿಟಿ ಪ್ರೆಸ್‌ಗೆ ವರ್ಗಾಯಿಸಲಾಯಿತು. ಸದ್ಯ ನಾರ್ತ್ ಬ್ಲಾಕಿನ ಮುದ್ರಣಾಲಯದಲ್ಲಿ ಮುದ್ರಣ ನಡೆಯುತ್ತದೆ. ೧೯೮೦ರಲ್ಲಿ ನಾರ್ತ್ ಬ್ಲಾಕಿನಲ್ಲೂ ಪ್ರತಿಗಳು ಸೋರಿಕೆಯಾದ್ದವು.
೭. ಆದಾಯ ಕೊರತೆ (ರೆವೆನ್ಯೂ ಡೆಫಿಸಿಟ್) ಎಂದರೆ ಆದಾಯ ಸ್ವೀಕೃತಿಗಿಂತ ಹೆಚ್ಚಾಗಿ ಮಾಡುವ ವೆಚ್ಚ.
೮. ಪಂಚವಾರ್ಷಿಕ ಯೋಜನೆಯ ಉದ್ದೇಶಗಳನ್ನು ಈಡೇರಿಸಲು ಬಜೆಟಿನಲ್ಲಿ ನಿಗದಿ ಮಾಡುವ ಅನುದಾನವೇ ಯೋಜನಾ ವೆಚ್ಚ.
೯. ಸರ್ಕಾರ ವರ್ಷಕ್ಕೆ ಮೂರರಿಂದ ನಾಲ್ಕು ಷೇರು ಪೇಟೆಯಿಂದ ಸಾಲ ಎತ್ತುತ್ತದೆ.
೧೦. ೧೯೯೧-೯೨ನೇ ಸಾಲಿನಲ್ಲಿ ಪೂರ್ವ ಹಾಗೂ ಮಧ್ಯಂತರ ಬಜೆಟ್ ಅನ್ನು ಎರಡು ರಾಜಕೀಯ ಪಕ್ಷಗಳ ಹಣಕಾಸು ಸಚಿವರು ಮಂಡಿಸಿದರು.ಯಶ್ವಂತ ಸಿನ್ಹಾ ಮಧ್ಯಂತರ ಬಜೆಟ್ ಮಂಡಿಸಿದ್ದಾರೆ. ಮನಮೋಹನ ಸಿಂಗ್ ಪೂರ್ಣ ಬಜೆಟ್ ಮಂಡನೆ ಮಾಡಿದರು.
೧೧. ಕಪ್ಪು ಹಣವನ್ನು ಘೋಷಿಸಿಕೊಳ್ಳುವ ಯೋಜನೆ ಮೊದಲ ಬಾರಿಗೆ ಘೋಷಣೆಯಾಗಿದ್ದು ೧೯೬೫-೬೬ ರಲ್ಲಿ.
೧೨. ಬಜೆಟ್ ಮಂಡಿಸಿದ ಬಳಿಕ ರಾಷ್ಟ್ರಪತಿಯಾದ ಏಕೈಕ ವ್ಯಕ್ತಿ ಆರ್.ವೆಂಕಟರಾಮನ್.
೧೩. ಮೊಟ್ಟಮೊದಲ ಬಾರಿ ಬಜೆಟ್ ಮಂಡಿಸಿದ ಪ್ರಧಾನಿ ಜವಾಹರಲಾಲ್ ನೆಹರೂ. ೧೯೫೮-೫೯ರಲ್ಲಿ ಹಣಕಾಸು ಖಾತೆ ಅವರ ಬಳಿಯೇ ಇತ್ತು.
೧೪. ೧೯೯೦ ರ ದಶಕದಲ್ಲಿ ಮೂರು ಬಾರಿ ಮಧ್ಯಂತರ ಬಜೆಟ್ ಮಂಡನೆಯಾದವು.೧೯೯೧-೯೧, ೧೯೯೮-೯೯ರಲ್ಲಿ ಯಶವಂತ ಸಿನ್ಹಾ ೧೯೯೬-೯೭ರಲ್ಲಿ ಮನಮೋಹನ ಸಿಂಗ್ ಮಧ್ಯಂತರ ಬಜೆಟ್ ಮಂಡಿಸಿದ್ದರು.
೧೫. ಬಜೆಟ್ ಭಾಷಣ ಸಂಜೆ ೫ ಕ್ಕೆ ಆರಂಭವಾಗುವ ಸಂಪ್ರದಾಯವನ್ನು ಜಾರಿಗೆ ತಂದವರು ಸರ್ ಬೇಸಿಲ್ ಬ್ಲಾಕೆಟ್. ೧೯೨೪ರಲ್ಲಿ ರಾತ್ರಿಯಿಡಿದುಡಿದ ಅಧಿಕಾರಿಗಳಿಗೆ ವಿಶ್ರಾಂತಿ ಕೊಡಲು ಹಾಗೂ ದಿನದ ವ್ಯವಹಾರ ಮುಗಿಸಿದ ವ್ಯಾಪಾರಿಗಳಿಗೆ ಬಜೆಟ್ ಅಧ್ಯಯನ ನಡೆಸಲು ಈ ಸಮಯ ನಿಗದಿ ಮಾಡಿದರು. ಈಗ ಬೆಳಗ್ಗೆ ೧೧ ಗಂಟೆಗೆ ಬಜೆಟ್ ಮಂಡನೆ ಮಾಡುವ ಸಂಪ್ರದಾಯ ಶುರುವಾಗಿದೆ.
ಆದಾಯ ವೆಚ್ಚಸಂಪಾದಿಸಿ
ಪ್ರತಿ ವರ್ಷ ಮಂಡನೆಯಾಗುವ ಬಜೆಟಿನಲ್ಲಿ ಎರಡು ಭಾಗಗಳಿರುತ್ತವೆ. ಒಂದು ಆದಾಯ, ಮತ್ತೊಂದು ವೆಚ್ಚ. ವಿವಿಧ ಕೇಂದ್ರಿಯ ತೆರಿಗೆಗಳಿಂದ ಬರುವ ಆದಾಯವನ್ನು ಲೆಕ್ಕ ಹಾಕುವುದು ಆದಾಯ ಇಲಾಖೆಯ ಮುಖ್ಯ ಕೆಲಸ. ಈ ವರ್ಷ ಹಾಗೂ ಬರುವ ವರ್ಷಕ್ಕೆ ಮಾಡಬೇಕಿರುವ ವಿವಿಧ ವೆಚ್ಚಗಳನ್ನು ಸಿದ್ಧಪಡಿಸಬೇಕಿರುವುದು ವೆಚ್ಚ ಇಲಾಖೆಯ ಜವಾಬ್ದಾರಿ. ಇದೇ ಇಲಾಖೆ ಸರ್ಕಾರಿ ಸ್ವಾಮ್ಯದ (ಪಿ.ಎಸ್.ಯು) ಕಂಪನಿಗಳಲ್ಲಿರುವ ಸಂಪನ್ಮೂಲದ ಬಗ್ಗೆಯೂ ಕಣ್ಣಾಡಿಸುತ್ತದೆ. ಹಣಕಾಸು ಕಾರ್ಯದರ್ಶಿಗಳು ಬಜೆಟ್ ತಯಾರಿಸಿ ಪ್ರಕ್ರಿಯೆಯ ಸಮನ್ವಯಕಾರರಾಗಿರುತ್ತಾರೆ. ಕಾಲಕಾಲಕ್ಕೆ ಹಣಕಾಸು ಸಚಿವರಿಗೆ ಮಾಹಿತಿ ನೀಡಲಾಗಿತ್ತದೆ. ಅವರಿಂದ ಸಲಹೆಯನ್ನೂ ಪಡೆಯಲಾಗುತ್ತವೆ. ಬಜೆಟ್ ತಯಾರಿ ಕ್ರಿಯೆಯಲ್ಲಿ ಮುಖ್ಯ ಆರ್ಥಿಕ ಸಲಹಗಾರರು ಸಂಬಂಧಪಟ್ಟು ಅಧಿಕಾರಿಗಳಿಗೆ ಮಾರ್ಗದರ್ಶನ ಮಾಡುತ್ತಾರೆ.
ಬಜೆಟ್ ೨೦೧೪-೨೦೧೫ ರ ಪ್ರಮುಖ ಲಕ್ಷಣಗಳುಸಂಪಾದಿಸಿ
೧. ಪ್ರಸ್ತುತ ಆರ್ಥಿಕ ಪರಿಸ್ಥಿತಿಯಲ್ಲಿ ಸವಾಲುಗಳು.
೨. ಕೊರತೆ ಮತ್ತು ಹಣದುಬ್ಬರ.
೩. ಆಡಳಿತಾತ್ಮಕ ಉಪಕ್ರಮಗಳು.
೪. ಆರ್ಥಿಕ ಯೋಜನೆಗಳು.
೫. ಶಿಕ್ಷಣ.
೬. ಮಾಹಿತಿ ತಂತ್ರಜ್ಞಾನ.
೭. ನಗರಾಭಿವೃದ್ಧಿ.
೮. ವಸತಿ.
೯. ಅಲ್ಪಸಂಖ್ಯಾತರ.
೧೦. ಕೃಷಿ.
೧೧. ಕಾರ್ಖಾನೆ.
೧೨. ಮೂಲಭೂತ ಸೌಕರ್ಯ.
೧೩. ಆರ್ಥಿಕ ವಲಯದ.
೧೪. ಬ್ಯಾಂಕಿಂಗ್ ಮತ್ತು ವಿಮಾ ಕ್ಷೇತ್ರದಲ್ಲಿ.
೧೫. ರಕ್ಷಣಾ ಮತ್ತು ಆಂತರಿಕ ಭದ್ರತೆ.
೧೬. ಸಂಸ್ಕೃತಿ ಮತ್ತು ಪ್ರವಾಸೋದ್ಯಮ.
೧೭. ಬಜೆಟ್ ಅಂದಾಜು.
೧೮. ತೆರಿಗೆ ಪ್ರಸ್ತಾಪಗಳು.
೧೯. ನೇರ ತೆರಿಗೆ ಪ್ರಸ್ತಾಪಗಳು.
೨೦. ಪರೋಕ್ಷ ತೆರಿಗೆ ಪ್ರಸ್ತಾಪಗಳು.
ಕಾಮೆಂಟ್‌ಗಳಿಲ್ಲ:
ಕಾಮೆಂಟ್ ಪೋಸ್ಟ್ ಮಾಡಿ