ಜಡತ್ವ ವು ಪ್ರತಿಯೊಂದು ದ್ರವ್ಯ (Matter)ದ ಒಂದು ಗುಣವಾಗಿದೆ. ಪ್ರತಿ ವಸ್ತುವೂ ಚಲನೆಯಲ್ಲಿದ್ದಾಗ ಚಲಿಸುತ್ತಲೇ ಇರುವ ಹಾಗೂ ನಿಶ್ಚಲವಾಗಿರುವಾಗ ನಿಶ್ಚಲತೆಯಲ್ಲಿರುವ ಗುಣವನ್ನು ಜಡತ್ವ ಎನ್ನುತ್ತಾರೆ.ಈ ಸ್ಥಿತಿಯನ್ನು ಬದಲಾಯಿಸಲು ಬಲವನ್ನು ಉಪಯೋಗಿಸಬೇಕಾಗುತ್ತದೆ. ಈ ಬಲವು ವಸ್ತುವಿನ ದ್ರವ್ಯರಾಶಿಅವಲಂಬಿಸಿರುತ್ತದೆ.ದ್ರವ್ಯರಾಶಿ ಹೆಚ್ಚಿದ್ದಾಗ ಅದರ ಸ್ಥಿತಿಯನ್ನು ಬದಲಾಯಿಸಲು,ಚಲನೆಯ ದಿಕ್ಕನ್ನು ಬದಲಾಯಿಸಲು,ಜವ(speed)ನ್ನು ಬದಲಾಯಿಸಲು ಹೆಚ್ಚಿನ ಬಲವನ್ನು ಪ್ರಯೋಗಿಸಬೇಕಾಗುತ್ತದೆ
ಕಾಮೆಂಟ್‌ಗಳಿಲ್ಲ:
ಕಾಮೆಂಟ್ ಪೋಸ್ಟ್ ಮಾಡಿ