ಮಲೆಗಳಲ್ಲಿ ಮಧುಮಗಳ ಪ್ರಪಂಚ
ಮಲೆಗಳಲ್ಲಿ ಮದುಮಗಳು
ಲೇಖಕ
ಕುವೆಂಪು
ದೇಶ
ಭಾರತ
ಭಾಷೆ
ಕನ್ನಡ
ಶೈಲಿ (ಗಳು)
ಕಾದಂಬರಿ
ಪ್ರಕಾಶಕ
ಉದಯರವಿ ಪ್ರಕಾಶನ ವಾಣಿವಿಲಾಸ ಪುರಂ, ಮೈಸೂರು (Kannada)
ಪ್ರಕಾಶನ ದಿನಾಂಕ
೧೯೬೭
ಪುಟಗಳು
೭೧೨
'’ಏನು ಕಾಫಿಗೆ ಬರುವುದಿಲ್ಲವೆ?’'
'’ತಾಳು ತಾಳು ಚಿನ್ನಮ್ಮ ತಪ್ಪಿಸಿಕೊಂಡು ಹೋಗಬೇಕು ಹಂಡೆ ಸದ್ದಾಗುತ್ತಿದೆ’.'
'’ಚಿನ್ನಮ್ಮಗೆ ಏನೂ ತೊಂದರೆಯಿಲ್ಲ. ತಪ್ಪಿಸಿಕೊಂಡು ಹೋಗುವಳು ನೀವು ಬಂದು ಕಾಫಿ ಕುಡಿದು ಹೋಗಿ’.'
ಅರ್ಧ ಗಂಟೆಯ ನಂತರ ಕಾಪಿ ಕುಡಿಯುತ್ತಾ, ’'ಚಿನ್ನಮ್ಮ ತಪ್ಪಿಸಿಕೊಂಡು ಹೋದಳೆ?’
'’ಹ್ಞೂ ಅವಳು ಕ್ಷೇಮವಾಗಿ ಹುಲಿಕಲ್ಲು ನೆತ್ತಿ ಹತ್ತಿದಳು’.'
ಈ ಸಂಭಾಷಣೆ ಕುವೆಂಪು ದಂಪತಿಗಳದ್ದು. ಮಲೆಗಳಲ್ಲಿ ಮದುಮಗಳು ಕಾದಂಬರಿ ರಚನೆಯಾಗುತ್ತಿದ್ದ ಕಾಲದ ಒಂದು ದಿನ ಸಂಜೆ ಕಾಫಿಯ ಸಮಯದಲ್ಲಿ ನಡೆದದ್ದು. ಇದನ್ನು ಸೊಗಸಾಗಿ ತಾರಿಣಿಯವರು ’ಮಗಳು ಕಂಡು ಕುವೆಂಪು’ ಕೃತಿಯಲ್ಲಿ ದಾಖಲಿಸಿದ್ದಾರೆ.
ವೊದಲು ಪ್ರಾರಂಭವಾಗಿ, ಒಂದೆರಡು ಅಧ್ಯಾಯಗಳನ್ನು ಬರೆದು ಮುಗಿಸಿದ ಮೇಲೆ, ನಂತರ ಸುಮಾರು ೩೦ ವರ್ಷಗಳಾದ ಮೇಲೆ ಮೂರು ವರ್ಷಗಳ ಕಾಲ ಬರೆಯಿಸಿಕೊಂಡು ಕಾದಂಬರಿ ಇದು! ಅದು ಹೇಗೆ ಸಾಧ್ಯವಾಯಿತು? ಇದಕ್ಕೂ ಉತ್ತರ ತಾರಿಣಿಯವರ ಕೃತಿಯಲ್ಲಿ ಸಿಗುತ್ತದೆ.
ಕುವೆಂಪು ನಿವೃತ್ತರಾದ ಮೇಲೆ ಮನೆಯಲ್ಲಿ ಆರಾಮವಾಗಿದ್ದಾಗ ಒಂದು ದಿನ ಪುಸ್ತಕದ ಬೀರುವಿನಲ್ಲಿ ಏನನ್ನೋ ಹುಡುಕುತ್ತಿರುತ್ತಾರೆ. ತಾರಿಣಿ ’ಏನು?’ ಎಂದು ಕೇಳಿದಾಗ, ’ಅಕ್ಕಾ ಎಲ್ಲಾದರೂ ನನ್ನ ಪುಸ್ತಕಗಳ ಬೀರುವಿನಲ್ಲಿ ಆ ಕಾದಂಬರಿಯ ಮ್ಯಾಪ್ ಇದೆಯೇ ನೋಡುವೆಯಾ? ನಿನಗೆ ಸಮಯವಾದಾಗ ಹುಡುಕು’ ಎನ್ನುತ್ತಾರೆ. ’ಅದು ಹೇಗಿದೆ ಅಣ್ಣಾ?’ ಎನ್ನುವ ಪ್ರಶ್ನೆಗೆ, ಒಂದು ಫುಲ್ ಸ್ಕೇಪ್ ಬಿಳಿ ಹಾಳೆ, ಅದರಲ್ಲಿ ಎಲ್ಲಾ ಬರೆದಿರುವೆ’ ಎಂಬ ಉತ್ತರ ದೊರೆಯುತ್ತದೆ.
ಕೆಲ ದಿನಗಳ ನಂತರ, ಕುವೆಂಪು ತಮ್ಮ ಹಸ್ತಪ್ರತಿಗಳನ್ನು ಒಂದೊಂದೇ ತೆಗೆದು ನೋಡುತ್ತಿದ್ದಾಗ ಆ ಹಾಳೆ ಸಿಗುತ್ತದೆ. ಅವರು ಸಂತೋಷದಿಂದ ಅಲ್ಲಿಯೇ ಇದ್ದ ತಾರಿಣಿಗೆ ’ಅಕ್ಕಾ ಇಲ್ಲಿ ನೋಡು, ಅಂತೂ ಈ ಕಾದಂಬರಿ ಮ್ಯಾಪ್ ಸಿಕ್ಕಿತು’ ಎಂದು ಹರ್ಷದಿಂದ ಹೇಳುತ್ತಾರೆ.
(ತಾರಿಣಿಯವರ ಮಾತಿನಲ್ಲೇ ಹೇಳುವುದಾದರೆ) ಬಹಳ ಹಳೆಯದಾದ ಒಂದು ಕಾಗದದ ಹಾಳೆ. ಆ ಕಾಗದದ ಬಣ್ಣ ಮಾಸಿತ್ತು. ಬಿಳಿ ಬಣ್ಣ ಹೋಗಿ ಮಾಸಲು ಕೆಂಪು ಬಣ್ಣ ಬಂದಿತ್ತು. ಮಡಿಕೆಯಾದ ಜಾಗದಲ್ಲಿ ಸ್ವಲ್ಪ ಹರಿದಿತ್ತು. ಕಾಗದದಲ್ಲಿ ತಲೆಬರಹ ದೊಡ್ಡದಾಗಿ ಮಲೆಗಳಲ್ಲಿ ಮದುಮಗಳು ಎಂದು ಬರೆದಿತ್ತು. ಆ ಕಾಗದದ ತುಂಬ ಏನೇನೋ ಅತ್ತ ಇತ್ತ ಗೀರು, ಗೀರಿನ ಕೆಳಗೆ, ಮಧ್ಯೆ, ಪಕ್ಕ, ಕಾದಂಬರಿ ಪಾತ್ರಗಳ ಹೆಸರು, ಸ್ಥಳಗಳ ಹೆಸರು, ಊರಿನ ಹೆಸರು, ಬಾಣದ ಗುರುತುಗಳು, ಅಡ್ಡಗೀರು, ಉದ್ದಗೀರು, ತ್ರಿಕೋಣಗೆರೆಗಳು ಹೀಗೆ ಎಲ್ಲಾ ಕಡೆ ಚಿತ್ತಾರವಾಗಿ ನೋಡಿದವರಿಗೆ ಏನೂ ಅರ್ಥವಾಗುತ್ತಿರಲಿಲ್ಲ!
ಅದನ್ನು ನೋಡಿದ ತಾರಿಣಿಯವರು '’ಇದೇನಣ್ಣಾ ಈ ಮ್ಯಾಪ್ ಹೀಗಿದೆ? ನಾನು ಏನೋ ಬೇರೆಯೇ ತರವೇ ಊಹಿಸಿದ್ದೆ. ನನ್ನಿಂದ ಈ ಮ್ಯಾಪ್ ಹುಡುಕಲು ಆಗುತ್ತಿರಲಿಲ್ಲ’' ಎನ್ನುತ್ತಾರೆ.
'ಮತ್ತಿನ್ನೇನು? ಭೂಗೋಳ ಮ್ಯಾಪ್ ಹಾಗೆ ಇದರಲ್ಲಿ ಚಿತ್ರ ಬರೆದಿರುವೆ ಎಂದು ತಿಳಿದೆಯಾ? ಇಡೀ ಕಾದಂಬರಿ ಹೇಗೆ ಚಿತ್ರಿತವಾಗುವುದು ಎಂದು ಸ್ಥೂಲವಾಗಿ ಗುರುತು ಹಾಕಿದ್ದೆ. ಸಿಕ್ಕಿದ್ದು ಒಳ್ಳೆಯದಾಯಿತು. ಮತ್ತೆ ಬರೆಯಲು ಪ್ರಾರಂಭಿಸುವೆ. ಅಂತೂ ಸದ್ಯ ಬೇಗ ಸಿಕ್ಕಿತಲ್ಲಾ. ಮೂವತ್ತು ವರ್ಷಗಳ ಹಿಂದೆ ಬರೆದಿಟ್ಟಿದ್ದು. ಹಾಳಾಗದೇ ಉಳಿದದ್ದೇ ಆಶ್ಚರ್ಯ'’ ಎನ್ನುತ್ತಾರೆ.
ಆ ಕಾದಂಬರಿ ಮ್ಯಾಪ್ ಸಿಗದಿದ್ದರೆ...!?
ಮಲೆಗಳಲ್ಲಿ ಮದುಮಗಳು ಎಂಬ ಮಹಾ ಕಾದಂಬರಿ ಸೃಷ್ಟಿಯಾಗುತ್ತಿರಲೇ ಇಲ್ಲವೇನೋ! ಆದರೆ ಶ್ರೇಷ್ಠ ಸಾಹಿತ್ಯ ಕೃತಿಯೊಂದು ಜನ್ಮ ತಳೆಯುವುದು ಆ ಭುವನದ ಭಾಗ್ಯವಲ್ಲವೆ!
ತಾರಿಣಿಯವರ ಪುಸ್ತಕದಲ್ಲಿ ಈ ಘಟನೆಯನ್ನು ಓದಿದ ಮೇಲೆ, ಇಷ್ಟೊಂದು ಸಂಕೀರ್ಣ ಸಂರಚನೆಯುಳ್ಳ ಕಾದಂಬರಿ ವೊದಲ ಬಾರಿಗೆ ಓದುಗನನ್ನು ಬೆಕ್ಕಸ ಬೆರಗುಗೊಳಿಸುವ ಈ ಕಾದಂಬರಿಯ ಬಗ್ಗೆ ನನಗೆ ಸಾಧ್ಯವಾದ ಹಾಗೆ ಒಂದು ಮ್ಯಾಪ್ ರಚಿಸಬೇಕೆಂದು ಕೊಂಡೆ, ವರ್ಷಗಳ ಹಿಂದೆಯೇ! ಆದರೆ ಅದನ್ನು ಮರು ಓದಿಗೆ ಒಳಪಡಿಸಿದ್ದು ತೀರಾ ಇತ್ತೀಚಿಗೆ. ಒಂದು ವಾರಗಳ ಕಾಲ ಓದುತ್ತಾ ವ್ಯಕ್ತಿನಾಮ, ಸ್ಥಳನಾಮ, ಪರಸ್ಪರ ಸಂಬಂಧಗಳನ್ನು ಗುರುತಿಸಿಕೊಳ್ಳುತ್ತಾ ಹೋದ ಹಾಗೆ ತೆರೆದುಕೊಂಡಿದ್ದೇ ಒಂದು ದೊಡ್ಡ ಪ್ರಪಂಚ! ಒಂದು ಮಹಾ ಕಾದಂಬರಿ ಹೇಗೆ ಇರುತ್ತದೆ. ವರ್ತಮಾನದಲ್ಲಿದ್ದುಕೊಂಡೇ ಭೂತಕಾಲದಲ್ಲಿಯೂ ವಿಹರಿಸುತ್ತಾ ಭವಿಷ್ಯದತ್ತ ಸಾಗುವ ಅಚ್ಚರಿ! ವೊದಲ ಸುಮಾರು ೨೦೦ ಪುಟಗಳ ಕಥೆ ಕೇವಲ ಒಂದು ದಿನದಲ್ಲಿ ನಡೆಯುವ ಘಟನೆಗಳು. ಇಡೀ ಕಾದಂಬರಿ ಸುಮಾರು ಒಂದು ಮಳೆಗಾಲ ಪ್ರಾರಂಭವಾಗಿ ಮುಗಿಯುವ ವೊದಲೇ ಮುಗಿದು ಹೋಗುತ್ತದೆ. ಎಂಟನೂರಕ್ಕೂ ಅಧಿಕ ಪುಟಗಳಲ್ಲಿ ಕಾಲ ದೇಶಗಳನ್ನು ಮೀರಿ ನಡೆಯುವ ಘಟನೆಗಳು ಕಿಕ್ಕಿರಿದಿವೆ. ನೂರಾರು ಪ್ರಾಣಿ ಪಕ್ಷಿಗಳ ಹೆಸರುಗಳು ದಟ್ಟೈಸಿವೆ. ಮರಗಿಡಗಳ ಪ್ರಸ್ತಾಪವಾಗುತ್ತದೆ. ಮೇಲಿನವುಗಳಲ್ಲದೆ ಅಸಂಖ್ಯಾತ ಅನಾಮಿಕ ಪಾತ್ರಗಳು, ಜಾಗಗಳು ಪ್ರಸ್ತಾಪವಾಗುತ್ತವೆ. ಇಷ್ಟೊಂದು ಪಾತ್ರಗಳು ಅವುಗಳ ಮನೋಭಾವ, ಕಾರ್ಯವಿಧಾನ, ವೃತ್ತಿ, ಸಂಬಂಧಗಳು ಎಲ್ಲವನ್ನೂ ಕವಿ ನಿಭಾಯಿಸಿರುವುದು ಅದ್ಭುತ!
ಎಲ್ಲಿಯಾದರೂ ಸರಿ, ಹೇಗಾದರೂ ಸರಿ ಒಂದಿಷ್ಟೂ ಗೊಂದಲ ಕಾದಂಬರಿಕಾರನಿಗೆ ಬಂದಿರಬಹುದಲ್ಲ ಎನ್ನುವ ಸಹಜ(ಕೆಟ್ಟ)ಕುತೂಹಲ ಉತ್ತರವಾಗಿ ಸಿಕ್ಕಿದ್ದು ಎರಡು ಸನ್ನಿವೇಶಗಳು. ಅದರಲ್ಲೂ ಒಂದು ಸನ್ನಿವೇಶ ಕಾದಂಬರಿಕಾರನ ಉದ್ದೇಶಪೂರ್ವಕ ನಡೆ ಎಂದು ಸ್ಪಷ್ಟವಾಗಿ ಗೊತ್ತಾಗುತ್ತದೆ. ಮತ್ತೊಂದು ಇಬ್ಬರು ವ್ಯಕ್ತಿಗಳ ಹೆಸರು ಮತ್ತು ವೃತ್ತಿಯ ಅದಲು ಬದಲು ಅಷ್ಟೆ!
ಈ ಕೆಳಗೆ ನಾನು ಪಟ್ಟಿ ಮಾಡಿರುವ ಸ್ಥಳಗಳು, ಪಾತ್ರಗಳು, ಅವುಗಳ ಪರಸ್ಪರ ಸಂಬಂಧಗಳನ್ನು ಗಮನಿಸಿದರೆ ಮಹಾಕಾದಂಬರಿಯೊಂದರ ಹರಹು ಹೇಗಿರುತ್ತದೆ ಹಾಗೂ ಹೇಗಿರಬೇಕು ಎಂದು ತಿಳಿಯುತ್ತದೆ. ಮಲೆಗಳಲ್ಲಿ ಮದುಮಗಳು ಓದುವುದಕ್ಕೆ ಪೂರ್ವಭಾವಿಯಾಗಿ ಈ ಸಿದ್ಧ ಟಿಪ್ಪಣಿ ಒಳ್ಳೆಯ ಪ್ರವೇಶವಾಗಬಹುದು.
ಓದುಗರಿಗೆ ಕುವೆಂಪುರವರು ರಚಿಸಿರುವ ಸಾಲುಗಳು ತುಂಬಾ ಅರ್ಥಗರ್ಭಿತವಾಗಿದೆ
ಇಲ್ಲಿ
ಯಾರೂ ಮುಖ್ಯರಲ್ಲ;
ಯಾರೂ ಅಮುಖ್ಯರಲ್ಲ;
ಯಾವುದೂ ಯಃಕಶ್ಚಿತವಲ್ಲ!
ಇಲ್ಲಿ
ಯಾವುದಕ್ಕೂ ಮೊದಲಿಲ್ಲ;
ಯಾವುದೂ ತುದಿಯಿಲ್ಲ;
ಯಾವುದೂ ಎಲ್ಲಿಯೂ ನಿಲ್ಲುವುದು ಇಲ್ಲ;
ಕೊನೆಮುಟ್ಟುವುದೂ ಇಲ್ಲ!
ಇಲ್ಲಿ
ಅವಸರವೂ ಸಾವಧಾನದ ಬೆನ್ನೇರಿದೆ!
ಇಲ್ಲಿ
ಎಲ್ಲಕ್ಕೂ ಇದೆ ಅರ್ಥ;
ಯಾವುದೂ ಅಲ್ಲ ವ್ಯರ್ಥ;
ನೀರೆಲ್ಲ ಊ ತೀರ್ಥ!
ಕಾದಂಬರಿಯ ಬಿಚ್ಚಿಕೊಳ್ಳುವ ಪ್ರಮುಖ ಸ್ಥಳಗಳು
1.ಸಿಂಬಾವಿ (ಭರಮೈ ಹೆಗ್ಗಡೆಯ ಮನೆ)
2.ಸೀತೂರುಗುಡ್ಡ (ಸಿಂಬಾವಿ-ಲಕ್ಕೂಂದದ ನಡುವಿನ ಒಂದು ಗುಡ್ಡ)
3.ಲಕ್ಕುಂದ (ಹಳೇಪೈಕದವರ ಹಟ್ಟಿ. ಸಿಂಬಾವಿಯಿಂದ ಮೂರ‍್ನಾಲ್ಕು ಮೈಲಿ)
4.ಮೇಗರವಳ್ಳಿ (ತೀರ್ಥಹಳ್ಳಿ ಆಗುಂಬೆ ರಸ್ತೆಯಲ್ಲಿನ ಊರು. ಲಕ್ಕೂಮದದಿಂದ ಎರಡು ಮೈಲಿ)
5.ಬೆತ್ತದಸರ
6.ಹುಲಿಕಲ್ಲು
7.ಹಳೆಮನೆ (ಮೇಗರವಳ್ಳಿಯಿಂದ ಒಂದು ಹರಿದಾರಿ)
8.ಅರೆಕಲ್ಲು (ಹಳೆಮನೆಯಿಂದ ಬೆಟ್ಟಳ್ಳಿಗೆ ಹೋಗುವ ದಾರಿಯಲ್ಲಿ ಬೆಟ್ಟಳ್ಳಿಯ ಹೊಲಗೇರಿಗೆ ದಾರಿ ಕವಲೊಡೆಯುವ ಜಾಗ)
9.ಬೆಟ್ಟಳ್ಳಿ
10.ಬೆಟ್ಟಳ್ಳಿ ಹಕ್ಕಲು (ಬಿಸೇಕಲ್ ಸವಾರಿ ನಡೆದ ಜಾಗ)
11.ಬೆಟ್ಟಳ್ಳಿ ಹೊಲಗೇರಿ
12.ಅರೆಕಲ್ಲು ಕಾರೇಮೆಟ್ಟು (ಹೊಲಗೇರಿಯ ಹತ್ತಿರದ್ದು. ಗುತ್ತಿ ತಿಮ್ಮಿಗಾಗಿ ಕಾಯುತ್ತಾ ಕುಳಿತಿದ್ದ ಜಾಗ)
13.ಕಮ್ಮಾರಸಾಲೆ (ಕೋಣೂರಿಗೂ ಬೆಟ್ಟಳ್ಳಿಗೂ ಮಧ್ಯೆ, ಮೇಗರವಳ್ಳಿ ಹೂವಳ್ಳಿ ಹಳೆಮನೆಗಳಿಗೂ ಸಮದೂರದಲ್ಲಿದ್ದ ಜಾಗ. ಕಳ್ಳಂಗಡಿ, ಮೂರ‍್ನಾಲ್ಕು ಜೋಪಡಿಗಳಿದ್ದ ಜಾಗ)
14.ಕೋಣೂರು
15.ಭೂತದವನ (ಕೋಣೂರು ಮನೆಗೆ ಸೇರಿದ್ದು)
16.ಹಾಡ್ಯದ ಮಾರಮ್ಮನ ಗುಡಿ
17.ಹಳೆಪೈಕದ ಯೆಂಕಯ ಮನೆ
18.ಹೂವಳ್ಳಿ
ಗುತ್ತಿ ಓಡಾಡಿದ ಮಾರ್ಗ
1.ಸಿಂಬಾವಿ
2.ಸೀತೂರುಗುಡ್ಡ
3.ಲಕ್ಕುಂದ
4.ಮೇಗರವಳ್ಳಿ
5.ಬೆತ್ತದಸರ
6.ಹುಲಿಕಲ್ಲು
7.ಹಳೆಮನೆ
8.ಅರೆಕಲ್ಲು
9.ಬೆಟ್ಟಳ್ಳಿ
10.ಬೆಟ್ಟಳ್ಳಿ ಹಕ್ಕಲು
11.ಬೆಟ್ಟಳ್ಳಿ ಹೊಲಗೇರಿ
12.ಅರೆಕಲ್ಲು ಕಾರೇಮೆಟ್ಟು
13.ಕಮ್ಮಾರಸಾಲೆ
14.ಕೋಣೂರು ದಾರಿ
15.ಹುಲಿಕಲ್ಲು
16.ಬೆತ್ತದ ಸರ
17.ಲಕ್ಕುಂದ
18.ಸೀತೂರುಗುಡ್ಡ
19.ಸಿಂಬಾವಿ ಹೊಲಗೇರಿ
20.ಸಿಂಬಾವಿ
21.ಮೇಗರವಳ್ಳಿ ತೀರ್ಥಹಳ್ಳಿ ರಸ್ತೆ
22.ಕಾಗಿನಹಳ್ಳಿ
23.ಹಳೆಮನೆ ಶ್ಮಶಾನ
24.ಹಳೆಮನೆ ಹೊಲಗೇರಿ
25.ಹಳೆಮನೆ ಶಂಕರ ಹೆಗ್ಗಡೆ ಮನೆ
26.ಹುಲಿಕಲ್ಲು
27.ಕೋಣೂರು ಮನೆ
28.ಕೋಣೂರು ಐತನ ಬಿಡಾರ
29.ಹುಲಿಕಲ್ಲು
30.ಹೂವಳ್ಳಿ ಮನೆಯ ಹತ್ತಿರದವರೆಗೆ
31.ಹುಲಿಕಲ್ಲು
32.ತೀರ್ಥಹಳ್ಳಿ
33.ತುಂಗಾನದಿ ದೋಣಿ ಗಿಂಡಿ
34.ಕಾನೂರು
ಇತರೆ ಸ್ಥಳಗಳು
1.ದೇವಂಗಿ
2.ತೀರ್ಥಹಳ್ಳಿ ದೋಣಿಗಿಂಡಿ
3.ಮಂಡಗದ್ದೆ
4.ತೂದೂರು
5.ಸಿದ್ಧರಮಠ
6.ಸಿಂಧುವಳ್ಳಿ
ಕಾದಂಬರಿಯ ಹೊರ ವ್ಯಾಪ್ತಿಯಲ್ಲಿ ಪ್ರಸ್ತಾಪವಾಗುವ ಊರು/ನಗರ/ದೇಶಗಳು
1.ಮೈಸೂರು
2.ನಗರ
3.ಕೆಳದಿ
4.ಇಕ್ಕೇರಿ
5.ಕೌಲೇದುರ್ಗ
6.ತೀರ್ಥಹಳ್ಳಿ
7.ಶಿವವೊಗ್ಗ
8.ಹೊನ್ನಾಳಿ
9.ಉಡುಪಿ
10.ಧರ್ಮಸ್ಥಳ
11.ಶೃಂಗೇರಿ
12.ಅಮೆರಿಕಾ
13.ಚಿಕಾಗೋ
14.ಕಲ್ಕತ್ತಾ
15.ವರಾಹನಗರ
16.ಕಾಶೀಪುರ
17.ಸ್ವಾಮಿವಿವೇಕಾನಂದರು ಭಾಗವಹಿಸಿದ್ದ ಸರ್ವಧರ್ಮ ಸಮ್ಮೇಳನ ೧೧-೯-೧೮೯೩
ಕಾದಂಬರಿಯಲ್ಲಿ ಪ್ರಸ್ತಾಪವಾಗುವ ಜಾತಿ/ಪಂಗಡಗಳು
1.ಗೌಡರು
2.ಹಸಲರು
3.ಬಿಲ್ಲವರು
4.ಸೆಟ್ಟರು
5.ಕರಾದಿಗರು
6.ಬೇಲರು
7.ಹೊಲೆಯರು
8.ದೀವರು
9.ಗೋಸಾಯಿಗಳು
10.ಹಳೆಪೈಕದವರು
ಕಾದಂಬರಿಯ ಮುಖ್ಯ ಪಾತ್ರಗಳಲ್ಲದೆ ಪ್ರಸ್ತಾಪವಾಗುವ ಜನಸಮೂಹ
1.ತೀರ್ಥಹಳ್ಳಿ ಆಗುಂಬೆ ಮುಖಾಂತರ ಓಡಾಡುವ ವ್ಯಾಪಾರಿಗಳು
2.ಸೇರೆಗಾರರು
3.ಕೂಲಿಯಾಳುಗಳು
4.ಗಂಧದ ಮರ ಕಡಿದು ಮಾರುವ ಗುಪ್ತ ದಳ್ಳಾಳಿಗಳು.
ಮುಖ್ಯ ಊರುಗಳು ಹಾಗೂ ವ್ಯಕ್ತಿಗಳು
ಸಿಂಬಾವಿ
1.ಭರಮೈ ಹೆಗ್ಗಡೆ : ಸಿಂಬಾವಿ ಮನೆಯ ಯಜಮಾನ
2.ದುಗ್ಗಣ್ಣಹೆಗ್ಗಡೆ : ಭರಮೈ ಹೆಗ್ಗಡೆಯ ದಿವಂಗತ ತಂದೆ
3.ಜಟ್ಟಮ್ಮ : ಭರಮೈ ಹೆಗ್ಗಡೆಯ ಹೆಂಡತಿ, ಹಳೇಮನೆ ಸುಬ್ಬಣ್ಣಹೆಗ್ಗಡೆಯವರ ದಿವಂಗತ ಅಣ್ಣ ದುಗ್ಗಣ್ಣ ಹೆಗ್ಗಡೆಯ ಮಗಳು, ಶಂಕರಹೆಗ್ಗಡೆಯವರ ತಂಗಿ
4.ಲಕ್ಕಮ್ಮ : ಭರಮೈ ಹೆಗ್ಗಡೆಯವರ ತಂಗಿ. ಮದುವೆಯಾಗ ಬೇಕಾಗಿದೆ. ಹಳೇಮನೆ ದೊಡ್ಡಹೆಗ್ಗಡೆಯವರ ಕಿರಿಯಮಗ ತಿಮ್ಮಪ್ಪಹೆಗ್ಗಡೆಗೆ ಕೊಡುವ ಮಾತಿದೆ
5.ಮರಾಟಿ ಮಂಜ : ಅಡುಗೆಯವನು
6.ದೊಳ್ಳ : ಮನೆಗೆಲಸದವನು
7.ಬುಲ್ಡ : ಹಳೆಪೈಕರವನು. ಭರಮೈಹೆಗ್ಗಡೆಗೆ ಹೆಂಡ ತಂದುಕೊಡುವವನು
8.ಗುತ್ತಿ : ಭರಮೈ ಹೆಗ್ಗಡೆಯ ನೆಚ್ಚಿನ ಆಳು. ಹೊಲೆಯರವನು
9.ಹುಲಿಯ : ಗುತ್ತಿಯ ನಾಯಿ
10.ಕರಿಸಿದ್ಧ : ಗುತ್ತಿಯ ಅಪ್ಪ
11.ಗಿಡ್ಡಿ : ಗುತ್ತಿಯ ಅವ್ವ, ಬೆಟ್ಟಳ್ಳಿ ದೊಡ್ಡಬೀರನ ತಂಗಿ.
12. ? : ಹೊಲೇರ ಕುರುದೆ (ಹುಡುಗಿ)
13. ? : ಹೊಲೇರ ಕುರುದೆ (ಹುಡುಗಿಯ ಅಣ್ಣ)
ಲಕ್ಕುಂದ ಹಳೇಪೈಕರ ಹಟ್ಟಿ
1.ಸೇಸನಾಯ್ಕ : ಲಕ್ಕುಂದದ ಹಿರಿಯ, ಸೀತೂರು ತಿಮ್ಮನಾಯ್ಕರ ನೆಂಟಭಾವ
2.ಹಮೀರನಾಯ್ಕ : ಸೇಸನಾಯ್ಕನ ಮಗ
3.ಪುಟ್ಟನಾಯ್ಕ : ಸೇಸನಾಯ್ಕನ ತಮ್ಮ
4.ಕಾಡಿ : ಪುಟ್ಟನಾಯ್ಕನ ಅತ್ತೆ (ಮಗಳು ಸತ್ತರೂ ಅಳಿಯನ ಮನೆಯಲ್ಲೇ ಉಳಿದಿದ್ದಾಳೆ. ಆಗ ಬಸುರಾಗಿ, ಬಸಿರು ಇಳಿಸಿಕೊಂಡ ಅಪವಾದ ಇದೆ)
5.ರಂಗ : ಪುಟ್ಟನಾಯ್ಕನ ನೆರೆಮನೆಯವ
6.ಚೌಡಿ : ರಂಗನ ಹೆಂಡತಿ
7. ? : ರಂಗನ ತಾಯಿ
ಸೀತೂರು
1.ತಿಮ್ಮನಾಯ್ಕ : ಸೀತೂರು ಸೀಮೆಯ ಹಳೇಪೈಕರ ಮುಖಂಡ, ಲಕ್ಕುಂದದ ಸೇಸನಾಯ್ಕನ ನೆಂಟಭಾವ
2. ? : ತಿಮ್ಮನಾಯ್ಕರ ಮಗಳು
ಮೇಗರವಳ್ಳಿ
1.ಕಣ್ಣಾಪಂಡಿತ : ಮಲೆಯಾಳಿ ನಾಟಿ ವೈದ್ಯ,
2.ಅಂತಕ್ಕ : ಸೆಟ್ಟಿಗಿತ್ತಿ, ಘಟ್ಟದ ಕೆಳಗಿನಿಂದ ಬಂದು ನೆಲೆ ನಿಂತವಳು
3.ಸುಬ್ಬಯ್ಯಸೆಟ್ಟಿ : ಅಂತಕಸೆಟ್ಟಿಗಿತ್ತಿಯ ದಿವಂಗತ ಪತಿ. ಹಳೆಮನೆಯ ಒಕ್ಕಲಾಗಿದ್ದವನು
4.ಕಾವೇರಿ : ಅಂತಕ್ಕನ ಮಗಳು
5.ಕೊರಗಹುಡುಗ : ಅಂತಕಸೆಟ್ಟಿಯ ಮನೆಯ ಆಳು
6.ಕಿಟ್ಟಯ್ಯ : ಅಂತಕ್ಕನ ಅಳಿಯನಾಗಲು ಬಂದವನು
7.ಕಾಮತರು : ಮೇಗರವಳ್ಳಿಯ ಕೆಳಪೇಟೆಯಲ್ಲಿ ದಿನಸಿಮಳಿಗೆಯಿಟ್ಟುಕೊಂಡಿದ್ದವರು
8.ಭಟ್ಟರು : ಮೇಗರವಳ್ಳಿಯ ಕೆಳಬೀದಿಯಲ್ಲಿ ಜವಳಿ ಅಂಗಡಿಯಿಟ್ಟುಕೊಂಡಿದ್ದವರು
9.ಕರಿಮೀನು ಸಾಬಿ : ಮಾಪಿಳ್ಳೆ. ಮೂಲ ಹೆಸರು ಕರೀಂಸಾಬಿ. ಮೇಗರವಳ್ಳಿಯಲ್ಲಿ ಅಂಗಡಿ ಇಟ್ಟುಕೊಂಡಿದ್ದಾನೆ.
10.ಪುಡಿಸಾಬಿ : ಕರಿಮೀನು ಸಾಬಿಯ ತಮ್ಮ
11.ಅಜ್ಜಿಸಾಬು : ಅಜೀಜ್ ಮೂಲ ಹೆಸರು. ಚರ್ಮದ ವ್ಯಾಪಾರಿ, ಕರ‍್ಮೀನು ಸಾಬರ ಕಡೆಯವನು. ಹೊನ್ನಾಳಿ ಹೊಡ್ತ ಹೊಡೆಯುವವನು
12.ಲುಂಗೀಸಾಬು : ಮೂಲ ಹೆಸರು ಬುಡನ್, ಹೊನ್ನಾಳಿ ಹೊಡ್ತ ಹೊಡೆಯುವವನು
13.ಇಜಾರದಸಾಬು : ಹೊನ್ನಾಳಿ ಹೊಡ್ತ ಹೊಡೆಯುವವನು
ಹಳೆಮನೆ
1.ಸುಬ್ಬಣ್ಣ ಹೆಗ್ಗಡೆ : ಹಳೆಮನೆಯ ಯಜಮಾನ, ಮನೆಗೆ ಸೋಗೆ ಹೊದೆಸಿರುವುದರಿಂದ ಸೋಗೆಮನೆಯವರು ಎನ್ನುತ್ತಾರೆ
2. ? : ಸುಬ್ಬಣ್ಣಹೆಗ್ಗಡೆಯವರ ದಿವಂಗತ ಹೆಂಡತಿ
3.ತಿಮ್ಮಪ್ಪಹೆಗ್ಗಡೆ : ಸುಬ್ಬಣ್ಣ ಹೆಗ್ಗಡೆಯ ಕಿರಿಮಗ
4.ಮಂಜಮ್ಮ : ಬುಚ್ಚಿ ಎಂಬುದು ಅವಳ ಇನ್ನೊಂದು ಹೆಸರು. ಸುಬ್ಬಣ್ಣ ಹೆಗ್ಗಡೆಯ ಮಗಳು (ಸಿಂಬಾವಿ ಭರಮೈಹೆಗ್ಗಡೆಯವರಿಗೆ ಎರಡನೇ ಹೆಂಡತಿಯಾಗಿ ಮದುವೆಯಾಗುವ ಪ್ರಸ್ತಾಪವಿದೆ)
5.ದೊಡ್ಡಣ್ಣಹೆಗ್ಗಡೆ : ಸುಬ್ಬಣ್ಣಹೆಗ್ಗಡೆಯವರ ಹಿರಿಯಮಗ (ತಿರುಪತಿಗೆ ಹೋದವರು ತಿರುಗಿಬಂದಿಲ್ಲ)
6.ರಂಗಮ್ಮ : ದೊಡ್ಡಣ್ಣಹೆಗ್ಗಡೆಯ ಹೆಂಡತಿ, ಕೋಣೂರು ಮನೆಯ ಕಾಗಿನಹಳ್ಳಿ ಅಮ್ಮನ ವೊದಲನೇ ಮಗಳು, ರಂಗಪ್ಪಗೌಡರ ತಂಗಿ, ಮುಕುಂದಯ್ಯನ ಅಕ್ಕ (ಗಂಡ ಕಾಣೆಯಾಗಿರುವುದರಿಂದ ಮಾನಸಿಕವಾಗಿ ನೊಂದಿದ್ದಾಳೆ. ಜನ ಅವಳನ್ನು ಹುಚ್ಚುಹೆಗ್ಗಡತಿ ಎಂದೂ ಕರೆಯುತ್ತಾರೆ)
7.ಧರ‍್ಮು : ದೊಡ್ಡಣ್ಣಹೆಗ್ಗಡೆ ಮತ್ತು ರಂಗಮ್ಮನ ಮಗ. ಕೋಣೂರಿನ ಮಾವನ ಮನೆಯಲ್ಲಿರುವ ಐಗಳ ಶಾಲೆಯಲ್ಲಿ ಕಲಿಯುತ್ತಿದ್ದಾನೆ
8.ಹಳೇಪೈಕದ ಹೂವಿ : ಸುಬ್ಬಣ್ಣಹೆಗ್ಗಡೆಯ ಮನೆಗೆಲಸದವಳು
9.ದುಗ್ಗಣ್ಣಹೆಗ್ಗಡೆ : ಸುಬ್ಬಣ್ಣಹೆಗ್ಗಡೆಯವರ ದಿವಂಗತ ಅಣ್ಣ
10.ಶಂಕರಹೆಗ್ಗಡೆ : ಸುಬ್ಬಣ್ಣಹೆಗ್ಗಡೆಯವರ ದಿವಂಗತ ಅಣ್ಣ ದುಗ್ಗಣ್ಣಹೆಗ್ಗಡೆಯ ಮಗ, ಆಸ್ತಿ ಪಾಲಾಗಿ ಬೇರೆ ಇದ್ದಾನೆ. ಮನೆಗೆ ಹೆಂಚು ಹಾಕಿಸಿದ್ದರಿಂದ ಹೆಂಚಿನಮನೆಯವರು ಎನ್ನುತ್ತಾರೆ
11.ಸೀತಮ್ಮ : ಶಂಕರಹೆಗ್ಗಡೆಯ ಹೆಂಡತಿ
12.ರಾಮು : ಶಂಕರಹೆಗ್ಗಡೆಯ ಆರುವರ್ಷದ ಮಗ
13. ? : ಶಂಕರಹೆಗ್ಗಡೆಯ ಮಗಳು ತೊಟ್ಟಿಲ ಕೂಸು
14.ಕೆಂಪಿ : ಬಾಲೆಯಾಡಿಸುವವಳು, ಶಂಕರಹೆಗ್ಗಡೆಯ ಮನೆಯಲ್ಲಿರುತ್ತಾಳೆ
ಹಳೆಮನೆ ಹೊಲಗೇರಿ
ಹಳೆಮನೆ ಪಾಲಾದ ಮೇಲೆ ಸುಬ್ಬಣ್ಣಹೆಗ್ಗಡೆಯವರ ಕಡೆಗೆ ಬಂದ ಆಳುಗಳು
1.ಮಂಜ
2.ಸಿದ್ದಿ : ಮಂಜನ ಹೆಂಡತಿ
3.ತಿಮ್ಮ
4.ಗಿಡ್ಡಿ : ತಿಮ್ಮನ ಹೆಂಡತಿ
5.ಸಣ್ಣ : ಹೊಲಗೇರಿಯ ಮುಖಂಡ, ಕುಳವಾಡಿ
6.ಪುಟ್ಟಿ : ಸಣ್ಣನ ಮಗಳು. ಮೈನೆರೆದು ನಾಲ್ಕು ವರ್ಷವಾದರೂ ಮದುವೆಯಾಗಿಲ್ಲ
7.ಗಂಗ : ಸಣ್ಣನ ರೋಗಿಷ್ಠ ಮಗ
8.ಬೈರ : ಹಳೆಮನೆ ದನಕಾಯುವ ಆಳು
9. ? : ಭೈರನ ದಿವಂಗತ ಹೆಂಡತಿ
10.ಮಂಜ
11.ಸಿದ್ದ
12.ಕರಿಸಿದ್ದ
13.ಸಣ್ಣತಿಮ್ಮ
ಶಂಕರಹೆಗ್ಗಡೆಯವರ ಪಾಲಿಗೆ ಬಂದ ಆಳುಗಳು
1.ಬಚ್ಚ
1.ಪುಟ್ಟ
ಬೆಟ್ಟಳ್ಳಿ
1.ಕಲ್ಲಯ್ಯಗೌಡರು : ಬೆಟ್ಟಳ್ಳಿ ಮನೆಯ ಯಜಮಾನ
2.ದೊಡ್ಡಮ್ಮ ಹೆಗ್ಗಡತಿ : ಕಲ್ಲಯ್ಯಗೌಡರ ಹೆಂಡತಿ
3.ದೇವಯ್ಯಗೌಡ : ಕಲ್ಲಯ್ಯಗೌಡರ ಹಿರಿಯ ಮಗ. ಕೋಣೂರು ಮನೆಯ ಅಳಿಯ. ಕಾಗಿನಹಳ್ಳಿ ಅಮ್ಮನವರ ಎರಡನೇ ಮಗಳ ಗಂಡ. ಕೋಣೂರು ರಂಗಪ್ಪಗೌಡರು ಮತ್ತು ಮುಕುಂದಯ್ಯನ ಭಾವ
4. ? : ದೇವಯ್ಯಗೌಡರ ಹೆಂಡತಿ, ಕೋಣೂರಿನ ಕಾಗಿನಹಳ್ಳಿ ಅಮ್ಮನವರ ಎರಡನೇ ಮಗಳು
5.ಕಾಡು : ಕಲ್ಲಯ್ಯಗೌಡರ ಕಿರಿಯ ಮಗ. ಕೋಣೂರಿನ ಮನೆಯ ಐಗಳ ಶಾಲೆಯಲ್ಲಿ ಓದುತ್ತಿದ್ದಾನೆ
6.ಸುಬ್ಬಣ್ಣಸೆಟ್ಟಿ : ಬೆಟ್ಟಳ್ಳಿ ಮನೆಯ ಸೇರೆಗಾರ
7.ಚೆಲುವಯ್ಯ : ದೇವಯ್ಯಗೌಡರ ಮಗ. ತೊಟ್ಟಲ ಕೂಸು
8.ಸೆಟ್ಟಿಯಾಳು : ಬೆಟ್ಟಳ್ಳಿ ಮನೆಗೆಲಸದವನು
9. ? : ಬಾಲೆಯಾಡಿಸುವ ಹುಡುಗಿ
ಬೆಟ್ಟಳ್ಳಿ ಹೊಲಗೇರಿ
1.ದೊಡ್ಡಬೀರ : ಬೆಟ್ಟಳ್ಳಿ ಹೊಲಗೇರಿಯ ಹಿರಿಯ, ತಳವಾರ.
2.ಸೇಸಿ : ದೊಡ್ಡಬೀರನ ಹೆಂಡತಿ. ಗುತ್ತಿಯ ತಂದೆ ಕರಿಸಿದ್ದನ ತಂಗಿ, ಗುತ್ತಿಯ ಸೋದರತ್ತೆ
3.ತಿಮ್ಮಿ : ದೊಡ್ಡಬೀರ ಮತ್ತು ಸೇಸಿಯ ಮಗಳು. ಆದರೆ ಕಲ್ಲಯ್ಯಗೌಡರು ತಮ್ಮ ಹಟ್ಟಿಯ ಆಳು ಬಚ್ಚನನ್ನೇ ಮದುವೆಯಾಗಬೇಕೆಂದು ಆಜ್ಞಾಪಿಸಿದ್ದಾರೆ. ಗುತ್ತಿಯ ಮೇಲೆ ಪ್ರೀತಿ. ಕೊನೆಗೆ ಗುತ್ತಿಯ ಜೊತೆಯಲ್ಲಿ ಓಡಿ ಹೋಗುತ್ತಾಳೆ.
4.ಸಣ್ಣಬೀರ : ದೊಡ್ಡಬೀರನ ಹಿರಿಯ ಮಗ
5.ಲಕ್ಕಿ : ಸಣ್ಣಬೀರನ ಹೆಂಡತಿ
6.ಪುಟ್ಟಬೀರ : ದೊಡ್ಡಬೀರನ ಎರಡನೇ ಮಗ
7.ಚಿಕ್ಕಪುಟ್ಟಿ : ಪುಟ್ಟಬೀರನ ಹೆಂಡತಿ
8.ಬಚ್ಚ : ಕಲ್ಲಯ್ಯಗೌಡ ಮತ್ತು ದೇವಯ್ಯಗೌಡರ ಬಂಟ. ಹೊಲೆಯನಾದರೂ ಎತ್ತಿನಗಾಡಿ ಹೊಡೆಯುವ ಅವಕಾಶವಿರುತ್ತದೆ.
9. ? : ಕನ್ನಡ ಜಿಲ್ಲೆಯ ಆಳು. ಸೆಟ್ಟರವನು.
ಕೋಣೂರು
1.ಕಾಗಿನಹಳ್ಳಿ ಅಮ್ಮ : ಮನೆಯ ಹಿರಿಯರು
2.ರಂಗಪ್ಪಗೌಡ : ಕಾಗಿನಹಳ್ಳಿ ಅಮ್ಮನ ಹಿರಿಯ ಮಗ. ಮನೆಯ ಯಜಮಾನ
3. ? : ರಂಗಪ್ಪಗೌಡರ ಹೆಂಡತಿ, ಹಳೆಮನೆ ಸುಬ್ಬಣ್ಣಹೆಗ್ಗಡೆಯ ಹಿರಿಯ ಮಗಳು
4.ಮುಕುಂದಯ್ಯ : ರಂಗಪ್ಪಗೌಡರ ತಮ್ಮ. ಹೂವಳ್ಳಿ ಚಿನ್ನಮ್ಮನ ಮೇಲೆ ಪ್ರೀತಿ
5.ತಿಮ್ಮು : ರಂಗಪ್ಪಗೌಡರ ಮಗ. ಐಗಳ ಶಾಲೆಯಲ್ಲಿ ಓದುತ್ತಿದ್ದಾನೆ
6.ಅನಂತಯ್ಯ : ಐಗಳು. ಘಟ್ಟದ ಕೆಳಗಿನವರು
7.ಹಳೇಪೈಕದ ಮುದುಕಿ : ಸೂಲಗಿತ್ತಿ
8. ???? : ಐಗಳ ಶಾಲೆಯಲ್ಲಿದ್ದ ಇನ್ನೂ ನಾಲ್ಕು ಮಕ್ಕಳು
9.ಕುದುಕ : ಹಸಲೋರ ಆಳು
10. ? : ಹಸಲೋರ ಆಳು
11. ? : ಕುದುಕನ ಹೆಂಡತಿ
ಕೋಣೂರು ಮನೆಗೆ ಸೇರಿದ್ದ ಘಟ್ಟದ ಕೆಳಗಿನ ಬಿಲ್ಲವರ ಆಳುಗಳು
1.ಚೀಂಕ್ರ : ಸೇರೆಗಾರನೆಂದು ಕರೆದುಕೊಳ್ಳುವ ವ್ಯಕ್ತಿ
2.ದೇಯಿ : ಚೀಂಕ್ರನ ಹೆಂಡತಿ
3. ??? : ಚೀಂಕ್ರ-ದೇಯಿಯ ಮೂರು ಮಕ್ಕಳು
4.ಪಿಜಣ
5.ಅಕ್ಕಣಿ : ಪಿಜಣನ ಹೆಂಡತಿ
6.ಐತ
7.ಪೀಂಚಲು : ಐತನ ಹೆಂಡತಿ
8.ವೊಡಂಕಿಲ
9.ಬಾಗಿ : ಮೊಡಂಕಿಲನ ಹೆಂಡತಿ
10.ಚಿಕ್ಕಿ
ಹೂವಳ್ಳಿ
1.ವೆಂಕಟಣ್ಣ : ವೆಂಕಟಪ್ಪನಾಯಕ ಮೂಲ ಹೆಸರು. ಹಳೆಮನೆ ಸುಬ್ಬಣ್ಣಹೆಗ್ಗಡೆಯವರ ಒಕ್ಕಲು. ಈತನ ಅಜ್ಜನೋ ಮುತ್ತಜ್ಜನೋ ದುರ್ಗದ ಪಾಳೆಗಾರಿಕೆಯ ಕಾಲದಲ್ಲಿ ದಂಡನಾಯಕನಾಗಿದ್ದನು.
2. ? : ವೆಂಕಟಣ್ಣನ ದಿವಂಗತ ಹೆಂಡತಿ
3.ಚಿನ್ನಮ್ಮ : ವೆಂಕಟಣ್ಣನ ಮಗಳು. ಮುಕುಂದಯ್ಯನ ಬಗ್ಗೆ ಪ್ರೀತಿ.
4. ? : ಚಿನ್ನಮ್ಮನನ್ನು ನೋಡಿಕೊಳ್ಳುತ್ತಿರುವ ಅಜ್ಜಿ. ಚಿನ್ನಮ್ಮನ ದಿವಂಗತ ತಾಯಿಯ ತಾಯಿ. ವೆಂಕಟಣ್ಣನ ಅತ್ತೆ.
5.ಸುಬ್ಬಿ : ಮನೆಯ ಆಳು
6.ಭೈರ : ಮನೆ ಆಳು
7.ಬೀರಿ : ಚಿನ್ನಮ್ಮನ ಸಾಕುಬೆಕ್ಕು
ಕಮ್ಮಾರಸಾಲೆ
1.ಪುಟ್ಟಾಚಾರಿ : ಕಮ್ಮಾರ
ಕಲ್ಲೂರು
1.ಮಂಜಭಟ್ಟ : ಜೋಯಿಸ, ಸಾಹುಕಾರ
2.ಕಿಟೈತಾಳ : ಕರಣಿಕ
3.ನಾರಾಯಣ ಭಟ್ಟ : ಮಂಜಭಟ್ಟನ ಮಗ
4. ? : ಕಿಟ್ಟೈತಾಳನ ಹೆಂಡತಿ
5. ? : ನಾರಾಯಣ ಭಟ್ಟನ ಹೆಂಡತಿ
6. ? : ಬೋಳು ಮಡಿ ಹೆಂಗಸು
7. ? : ಅರ್ಚಕರು
8.ಗಡ್ಡದಯ್ಯ
ಬಾವಿಕೊಪ್ಪ
1. ? : ಸಿಂಬಾವಿ ಭರಮೈಹೆಗ್ಗಡೆಯ ದಿವಂಗತ ಆಳು. ನಾಗತ್ತೆ ಎನ್ನುವವಳಿಗೆ ಎರಡನೇ ಗಂಡ
2.ನಾಗತ್ತೆ : ಸಿಂಬಾವಿ ಹೆಗ್ಗಡೆಯ ದಿವಂಗತ ಆಳಿನ ನಾಲ್ಕನೇ ಹೆಂಡತಿ
3.ನಾಗಣ್ಣ : ನಾಗತ್ತೆಯ ದಿವಂಗತ ಮಗ
4.ನಾಗಕ್ಕ : ನಾಗತ್ತೆಯ ಸೊಸೆ
ಹೊಸಕೇರಿ
1.ಬಸಪ್ಪನಾಯಕರು : ಸಾಹುಕಾರರು. ಚಿನ್ನಮ್ಮನ ತಾಯಿ ವೆಂಕಟಪ್ಪನನ್ನು ಮದುವೆಯಾಗುವ ವೊದಲು ಬಸಪ್ಪನಾಯಕರು ತಮ್ಮ ಮಗನಿಗೆ ತಂದುಕೊಳ್ಳಲು ಕೇಳಿದ್ದವರು. ಹಳೆಮನೆ ಸುಬ್ಬಣ್ಣ ಹೆಗ್ಗಡೆಯವರ ಹೆಂಡತಿಯ ಮಾತ್ಸ ರ್ಯದಿಂದಾಗಿ ಅದು ತಪ್ಪಿ ಕೊನೆಗೆ ವೆಂಕಟಣ್ಣನನ್ನು ಮದುವೆಯಾಗ ಬೇಕಾಯಿತು.
ತೀರ್ಥಹಳ್ಳಿ
1.ದಾಸಯ್ಯ : ತೀರ್ಥಹಳ್ಳಿಯವನು. ಹಳೇಮನೆ ದೊಡ್ಡಣ್ಣ ಹೆಗ್ಗಡೆಯವರ ಜೊತೆ ತಿರುಪತಿ ಯಾತ್ರೆಗೆ ಹೋಗಿದ್ದವನು
2.ಅಣ್ಣಪ್ಪಯ್ಯ : ತೀರ್ಥಹಳ್ಳಿಯಲ್ಲಿ ಕಾಫಿ ಹೋಟೆಲ್ ಇಟ್ಟುಕೊಂಡಿದ್ದವನು
3.ಜೀವರತ್ನಯ್ಯ : ಕಿಲಸ್ತರ ಪಾದ್ರಿ. ಶಿವವೊಗ್ಗದಲ್ಲಿ ನೆಲೆಸಿರುತ್ತಾನೆ
4.ಜ್ಯೋತಿರ್ಮಣಿಯಮ್ಮ : ಜೀವರತ್ನಯ್ಯನ ಮಗಳು
5.ಮಾನನಾಯಕ : ದಫೇದಾರ
6.ಮಯಿಂದಪ್ಪ : ಪೋಲೀಸು
7.ತಮ್ಮಯ್ಯಣ್ಣ : ಅಂಬಿಗ
8.ಪೋಲೀಸರು
9.ಜಮಾದಾರ
10.ಅಮುಲ್ದಾರರು
11.ಡಾಕ್ಟರ್
12.ಹಾರುವರು
13.ಹೊಳೆ ದಾಟಲು ಬಂದವರು
ಕಾಗಿನಹಳ್ಳಿ
1. ? : ಕಾಗಿನಹಳ್ಳಿ ಗೌಡರು, ಕೋಣೂರು ದಾನಮ್ಮನವರ ತಮ್ಮ
2. ? : ಹಳೆಪೈಕದವನು
ಶಿವವೊಗ್ಗ
1.ರೆವರೆಂಡ್ ಲೇಕ್‌ಹಿಲ್ : ಹಿರಿಯ ಪಾದ್ರಿ. ಯುರೋಪೇನ್ ಬಿಳಿದೊರೆ
ಮಂಡಗದ್ದೆ
1.ಮಿಸ್ ಕ್ಯಾಂಬೆಲ್ : ಮಿಷನ್ ಆಸ್ಪತ್ರೆಯ ಲೇಡಿ ಡಾಕ್ಟರ್
ಮಾಕಿಮನೆ
1.ಈರಣ್ಣ : ಕೊಲೆಯಾಗಿ ಹೋಗಿರುವ ವ್ಯಕ್ತಿ
ಸೀತೆಮನೆ
1.ಸಿಂಗಪ್ಪಗೌಡರು : ಸೀತೆಮನೆ ಯಜಮಾನರು, ಮುಂದೆ ಕಾನೂರು ಹೆಗ್ಗಡತಿ ಕಾದಂಬರಿಯಲ್ಲಿ ಬರುವ ಪಾತ್ರ
ಮತ್ತೂರು
1.ಶಾಮಯ್ಯಗೌಡರು : ಮತ್ತೂರು ಮನೆಯ ಯಜಮಾನರು, ಮುಂದೆ ಕಾನೂರು ಹೆಗ್ಗಡತಿ ಕಾದಂಬರಿಯಲ್ಲಿ ಬರುವ ಪಾತ್ರ. ಕಾನೂರು ಹೆಗ್ಗಡತಿಯಲ್ಲಿ ಮುತ್ತಳ್ಳಿ ಎಂದಾಗಿದೆ.
ಕಾನೂರು
1.ಚಂದ್ರಯ್ಯಗೌಡರು : ಕಾನೂರು ಮನೆಯ ಯಜಮಾನರು, ಮುಂದೆ ಕಾನೂರು ಹೆಗ್ಗಡತಿ ಕಾದಂಬರಿಯಲ್ಲಿ ಬರುವ ಮುಖ್ಯಪಾತ್ರ
ಕಾಮೆಂಟ್‌ಗಳಿಲ್ಲ:
ಕಾಮೆಂಟ್ ಪೋಸ್ಟ್ ಮಾಡಿ