ಅಧ್ಯಾಯ 13:ದಲಿತ ಚಳವಳಿ ಚಾರಿತ್ರಿಕ ಅವಲೋಕನ
ದಲಿತ ಚಳವಳಿ ಸ್ವಾತಂತ್ರ್ಯ ನಂತರದ ಅವಧಿಯಲ್ಲಿ ಭಾರತದ ಪ್ರತಿಯೊಂದು ರಾಜ್ಯದಲ್ಲೂ ಹುಟ್ಟಿಕೊಂಡು ಸಾರ್ವಜನಿಕರ, ರಾಜಕಾರಣಿಗಳ ಮತ್ತು ಮೇಧಾವಿಗಳ ಗಮನವನ್ನು ಸೆಳೆದಿದೆ. 1970ರ ದಶಕದಲ್ಲಿ ಮಧ್ಯಮ ವರ್ಗದ ದಲಿತರು ಚಳವಳಿಯನ್ನು ಪ್ರಾರಂಭಿಸಿ ತಮ್ಮ ಮೇಲಾಗುತ್ತಿರುವ ಅನ್ಯಾಯಗಳನ್ನು ಪ್ರತಿಭಟಿಸತೊಡಗಿದರು. ದಲಿತ ಚಳವಳಿಯ, ಪ್ರಜ್ಞಾಪೂರ್ವಕ ಸಾಮಾಜಿಕ ಚಳವಳಿಯಾಗಿದ್ದು ಅದು ಭಾರತದ ಸಾಮಾಜಿಕ, ಆರ್ಥಿಕ, ಧಾರ್ಮಿಕ ಮತ್ತು ರಾಜಕೀಯ ಅಸಮಾನತೆ ಮತ್ತು ವ್ಯವಸ್ಥೆಗಳ ವಿರುದ್ಧ ದಲಿತರನ್ನು ಸಂಘಟಿಸುತ್ತಿದೆ. ಶತಮಾನಗಳ ದಾರಿದ್ರ್ಯ ದಬ್ಬಾಳಿಕೆ ಮತ್ತು ಶೋಷಣೆ ದಲಿತರ ಮೂಲಭೂತ ಸಮಸ್ಯೆಗಳು. ತಮ್ಮ ಸಮಸ್ಯೆಗಳಿಗೆ ದಲಿತರು ಸಂಘಟನೆಯಲ್ಲಿ ಉತ್ತರಗಳನ್ನು ಕಂಡುಕೊಳ್ಳಲು ಪ್ರಯತ್ನಿಸುತ್ತಿದ್ದಾರೆ.
ಸ್ವಾತಂತ್ರ್ಯ ಬಂದ ಮೇಲಾದರೂ ಭಾರತೀಯ ಸಮಾಜ ತಮ್ಮನ್ನು ಮನುಷ್ಯರಂತೆ ಕಾಣುತ್ತದೆ. ತಾವು ಕೂಡ ಇನ್ನಿತರರಂತೆ ಸ್ವಾಭಿಮಾನ ಮತ್ತು ನೆಮ್ಮದಿಯ ಬದುಕನ್ನು ನಡೆಸಬಹುದು ಎಂಬುದು ದಲಿತರ ಆಶಯವಾಗಿತ್ತು. ಆದರೆ ಸ್ವಾತಂತ್ರ್ಯ ಬಂದ ನಂತರ ದಲಿತರ ಸಮಸ್ಯೆಗಳು ಕಗ್ಗಂಟಾಗಿ ಅವರನ್ನು ಕತ್ತಲೆಯ ಕೂಪಕ್ಕೆ ನೂಕಿದೆ. ದಲಿತರ ಜೀವ ಮತ್ತು ಆಸ್ತಿಗೆ ಭದ್ರತೆ ಇಲ್ಲದಾಗಿದೆ. ಪ್ರತಿ ದಿನವು ದಲಿತರ ಕೊಲೆಯಾಗದೆ ಸೂರ್ಯ ಮುಳುಗಲಾರ ಅನ್ನುವ ಪರಿಸ್ಥಿತಿ ಉದ್ಭವವಾಗಿದೆ. ಅವರ ಮೇಲಿನ ದೌರ್ಜನ್ಯಗಳನ್ನು ತಡೆಯಲು ಸಂವಿಧಾನಾತ್ಮಕ ಕಾನೂನು, ಆಡಳಿತ ಯಂತ್ರ ಹಾಗೂ ರಾಜಕೀಯ ನಾಯಕರು ಸಂಪೂರ್ಣವಾಗಿ ವಿಫಲಗೊಂಡಿದ್ದಾರೆ. ನೋವು, ಅಸಹಾಯಕತೆ, ಅವಮಾನ ಮತ್ತು ಹಸಿವಿನಿಂದ ಬಳಲುತ್ತಿರುವ ಪ್ರತಿಯೊಬ್ಬ ದಲಿತ ಈ ದೇಶದ ಕಾನೂನು, ಸಮಾಜ, ಧರ್ಮ ಮತ್ತು ರಾಜಕೀಯ ವ್ಯವಸ್ಥೆ ನಮಗೇನು ಮಾಡುತ್ತಿವೆ ಎಂದು ಬಹಳ ನೋವು ಮತ್ತು ಪ್ರಜ್ಞೆಯಿಂದ ಇಡೀ ವ್ಯವಸ್ಥೆಯನ್ನೇ ಪ್ರಶ್ನೆ ಮಾಡುತ್ತಿದ್ದಾನೆ. ಸ್ವಾಭಿಮಾನ ಮತ್ತು ಸ್ವಾವಲಂಬನೆಯ ಬದುಕಿನ ಅನ್ವೇಷಣೆಯೇ ದಲಿತ ಚಳವಳಿಯ ಮೂಲ ಆಶಯ. ನಾಯಿ ನರಿಗಳಿಗಿಂತಲೂ ಕೀಳಾಗಿ ಬದುಕುತ್ತಿರುವ ದಲಿತರಿಗೆ ದಲಿತತ್ವವನ್ನು ಹುಟ್ಟುಹಾಕಲು ದಲಿತ ಚಳವಳಿ ಮುಂದಾಗಿದೆ.
ದಲಿತ ಚಳವಳಿಯ ಸೈದ್ಧಾಂತಿಕ ನಿಲುವು
ದಲಿತ ಚಳವಳಿಯ ಸೈದ್ಧಾಂತಿಕ ನಿಲುವಿನ ಬಗೆಗೆ ಗಂಭೀರವಾದ ಚರ್ಚೆಗಳು ದೇಶಾದ್ಯಂತ ಇಂದು ನಡೆಯುತ್ತಿವೆ. ದಲಿತ ಚಳವಳಿಗೆ ಸೈದ್ಧಾಂತಿಕ ನಿಲುವುಗಳೇ ಇಲ್ಲ ಎಂದು ಅನೇಕರು ವಾದಿಸುತ್ತಿದ್ದಾರೆ. ಇನ್ನು ಕೆಲವರು ದಲಿತ ಚಳವಳಿ ಇದು ಸಾಮಾಜಿಕ ಮತ್ತು ರಾಜಕೀಯ ಚಳವಳಿಗಳ ಮಿಶ್ರಣ ಎಂದು ಗುಮಾನಿಸುತ್ತಿದ್ದಾರೆ. ಮಹಾರಾಷ್ಟ್ರದ ದಲಿತ ಫ್ಯಾಂಥರ್ಸ್ ಚಳವಳಿಯನ್ನು ನೋಡಿದವರು ದಲಿತ ಚಳವಳಿ ಕೇವಲ ಸಿಟ್ಟಿನಿಂದ ಕೂಡಿದ ಯುವಕರ ಭಾವನಾತ್ಮಕ ಚಳವಳಿಯಾಗಿದೆ ಎಂದು ಹೇಳುತ್ತಿದ್ದಾರೆ. ಸೈದ್ಧಾಂತಿಕ ನಿಲುವಿನ ಪರ ಮತ್ತು ವಿರೋಧ ಅಭಿಪ್ರಾಯಗಳು ಏನೇ ಇದ್ದರೂ ದಲಿತ ಚಳವಳಿ ಇದೊಂದು ಸಾಮಾಜಿಕ ಚಳವಳಿಯೆಂದು ನಿಖರವಾಗಿ ಹೇಳಬಹುದು. ಏಕೆಂದರೆ ಆರ್ಥಿಕ ಶೋಷಣೆಗಿಂತ ಸಾಮಾಜಿಕ ಶೋಷಣೆ ಬಹಳ ಅಮಾನವೀಯ. ಇದು ದಲಿತರ ಮೇಲೆ ಅವ್ಯಾಹತವಾಗಿ ಸಾವಿರಾರು ವರ್ಷಗಳಿಂದಲೂ ನಡೆಯುತ್ತಾ ಬಂದಿದೆ. ಭಾರತದ ಜಾತಿ ವ್ಯವಸ್ಥೆ ದಲಿತರನ್ನು ಸಂಪೂರ್ಣವಾಗಿ ನಿರಾಯುಧರನ್ನಾಗಿ ಮಾಡಿ ಅವರನ್ನು ದುರ್ಬಲಗೊಳಿಸಿದೆ. ಹಸಿವಿನಿಂದ ಕಂಗಾಲಾದ ದಲಿತ ಅಳುವ ತನ್ನ ಮಕ್ಕಳ ಆಕ್ರಂದವನ್ನು ಕೇಳಿದಾಗ ಹಾಗೂ ನಗುವ ಹೊರಜಗತ್ತನ್ನು ನೋಡಿದಾಗ, ಈ ಜಾತಿ ವ್ಯವಸ್ಥೆಯನ್ನು ಸೃಷ್ಟಿಸಿದವರಿಗೆ ಚಪ್ಪಲಿಯಿಂದ ಹೊಡೆಯಬೇಕೆನಿಸುವಷ್ಟು ಸಿಟ್ಟು ಬರುತ್ತದೆ. ಇಡೀ ವ್ಯವಸ್ಥೆಯ ವಿರುದ್ಧ ದಲಿತ ತನ್ನ ಸಿಟ್ಟನ್ನು ತೋರಿಸಿಕೊಳ್ಳುವಂತೆ ಮಾಡುವುದೇ ದಲಿತ ಚಳವಳಿಯ ಮೂಲ ಧ್ಯೇಯ.
ದಲಿತ ಚಳವಳಿ ಒಂದು ಸಾಮಾಜಿಕ ಚಳವಳಿ ಎಂದು ನಾವು ಪರಿಗಣಿಸಿದರೆ ಅದರ ಸ್ವರೂಪವನ್ನು ವಿಶ್ಲೇಷಿಸುವುದು ಬಹಳ ಮುಖ್ಯವೆನಿಸುತ್ತದೆ. ಜೋಸೆಫ್ ಗಸ್ ಫೀಲ್ಡ್ ಎನ್ನುವವರು
ಸಮಾಜದ ವ್ಯವಸ್ಥೆಗೆ ಸಂಬಂಧಪಟ್ಟ ಬದಲಾವಣೆಗೆ, ಸಮಾಜದ ಬೇಡಿಕೆಗಳನ್ನು ಮುಂದಿಡಲು ಸಾಮಾಜಿಕ ಚಳವಳಿ ಅಗತ್ಯವಿದೆ
ಎಂದು ಅಭಿಪ್ರಾಯ ಪಡುತ್ತಾರೆ. ಅದೇ ರೀತಿ ಅಮೆರಿಕದ ಖ್ಯಾತ ಸಮಾಜಶಾಸ್ತ್ರಜ್ಞ ಹೆಬರ್ಲೆ ಅವರು
ಹೊಸ ಸಾಮಾಜಿಕ ವ್ಯವಸ್ಥೆಯನ್ನು ಸೃಷ್ಟಿಸಲು ಅಥವಾ ಸಾಮಾಜಿಕ ವ್ಯವಸ್ಥೆಯಲ್ಲಿ ಸ್ವಲ್ಪ ಬದಲಾವಣೆ ಮಾಡಲು ಸಾಮಾಜಿಕ ಚಳವಳಿಗಳು ಸಾಮೂಹಿಕವಾದಂತಹ ಪ್ರಯತ್ನಗಳನ್ನು ಮಾಡುತ್ತದೆ
ಎಂದು ಅಭಿಪ್ರಾಯ ಪಡುತ್ತಾರೆ. ಟಿ.ಕೆ.ಮ್ಯಾಮನ್ ಅವರು ದಲಿತ ಚಳವಳಿಗೆ ಕಾರಣವನ್ನು ಈ ರೀತಿಯಾಗಿ ವಿವರಿಸುತ್ತಾರೆ: ದಲಿತರ ಶೋಷಣೆಗೆ ಕಾರಣಗಳೇನೆಂದರೆ; ಕೆಳಸ್ತರದ ಸಾಂಪ್ರದಾಯಿಕ ಸ್ಥಾನಮಾನಗಳು(ಸಾಮಾಜಿಕ, ಸಾಂಸ್ಕೃತಿಕ ಖಿನ್ನತೆ) ತೀವ್ರ ಬಡತನ(ಆರ್ಥಿಕ ಶೋಷಣೆ ಮತ್ತು ಅಧಿಕಾರ ರಹಿತರಾಗಿರುವುದು). ದಲಿತ ಚಳವಳಿಯನ್ನು ಅನೇಕ ಪಾಶ್ಚಿಮಾತ್ಯ ಮತ್ತು ಭಾರತೀಯ ಚಿಂತಕರು ಸಹ ಗಂಭೀರವಾಗಿ ಅಭ್ಯಸಿಸುತ್ತಿದ್ದಾರೆ. ಅವರಲ್ಲಿ ಪ್ರಮುಖರೆಂದರೆ ಇಲಿಯನಾರ್ ಝೆುೀಲಿಯೆಟ್, ಬಾರ್ಬರಾ ಜೋಷಿ, ಮೈಕಲ್ ಮಹಾರ್, ಟಿ.ಕೆ.ಮ್ಯಾಮನ್, ಘನಶಾಮ್ ಷಹಾ, ಗೋಪಾಲ್ ಗುರು, ಜಯಶ್ರೀ ಗೋಖಲೆ, ಗೇಲ್ ವ್ರೋಜೋಸೆಫ್ ಮ್ಯಾಥ್ಯೂ, ಲತಾ ಮುರುಗಕರ್, ಶರದ್ ಪಾಟೀಲ್ ಮುಂತಾದವರು. ದಲಿತ ಚಳವಳಿಯನ್ನು ಅಧ್ಯಯನ ಮಾಡಿದವರು ಹೆಚ್ಚಾಗಿ ಮಹಾರಾಷ್ಟ್ರವನ್ನು ತಮ್ಮ ಕಾರ್ಯಕ್ಷೇತ್ರವನ್ನಾಗಿ ಆಯ್ಕೆ ಮಾಡಿಕೊಂಡಿದ್ದಾರೆ. ಆದರೆ ಕರ್ನಾಟಕದ ಮೇಲೆ ಇದುವರೆವಿಗೂ ಯಾರೂ ಗಂಭೀರವಾದ ಬೆಳಕನ್ನು ಚೆಲ್ಲಲು ಪ್ರಯತ್ನಿಸಿಲ್ಲ.
ಈ ಹಿನ್ನೆಲೆಯಲ್ಲಿ ಕರ್ನಾಟಕದ ದಲಿತ ಚಳವಳಿಯನ್ನು ಪ್ರಸ್ತುತ ಪ್ರಬಂಧದಲ್ಲಿ ಚರ್ಚಿಸಲು ಪ್ರಯತ್ನಿಸಲಾಗಿದೆ. ಕರ್ನಾಟಕದ ದಲಿತ ಚಳವಳಿಯನ್ನು ಎರಡು ಘಟ್ಟಗಳಲ್ಲಿ ಚರ್ಚಿಸಬಹುದು. ಅವುಗಳೆಂದರೆ ಸ್ವಾತಂತ್ರ್ಯ ಪೂರ್ವ ಮತ್ತು ಸ್ವಾತಂತ್ರ್ಯ ನಂತರದ ಚಳವಳಿ. ಸ್ವಾತಂತ್ರ್ಯ ಪೂರ್ವದ ಚಳವಳಿಯನ್ನು ಮತ್ತೆ ಮೂರು ವಿಭಾಗಗಳಾಗಿ ವಿಂಗಡಿಸಬಹುದು. ಅವುಗಳೆಂದರೆ
1. ಬಸವೇಶ್ವರ ಮತ್ತು ದಲಿತ ಚಳವಳಿ
2. ಹಳೇ ಮೈಸೂರು ಪ್ರಾಂತ್ಯದಲ್ಲಿ ದಲಿತ ಚಳವಳಿ
3. ಮುಂಬಯಿ ಕರ್ನಾಟಕದಲ್ಲಿ ದಲಿತ ಚಳವಳಿ
1. ಬಸವೇಶ್ವರ ಮತ್ತು ದಲಿತ ಚಳವಳಿ
ಕರ್ನಾಟಕದಲ್ಲಿ 12ನೆಯ ಶತಮಾನದ ಬಸವಣ್ಣನ ಚಳವಳಿ ಇಡೀ ದಲಿತ ಮತ್ತು ಹಿಂದುಳಿದ ವರ್ಗಗಳಿಗೆ ಪ್ರೇರಣೆಯಾಗಿದೆ. ಧಾರ್ಮಿಕ ಗೊಡ್ಡು ಸಂಪ್ರದಾಯ, ಬ್ರಾಹ್ಮಣ್ಯ ಮತ್ತು ಜಾತಿ ವಿನಾಶಕ್ಕಾಗಿ ಬಸವಣ್ಣ ಈ ನೆಲದಲ್ಲಿ ಬಹುದೊಡ್ಡ ಸಾಂಸ್ಕೃತಿಕ ಚಳವಳಿಯ ಪರಂಪರೆಯನ್ನೇ ಹುಟ್ಟುಹಾಕಿದ್ದಾನೆ. ತನ್ನ ಚಳವಳಿಯಲ್ಲಿ ಬಸವಣ್ಣ ಹೆಚ್ಚಾಗಿ ಕೆಳವರ್ಗದ ಜನರನ್ನೇ ತೊಡಗಿಸಿಕೊಂಡಿದ್ದುದು ಇಡೀ ದಲಿತ ಜನಾಂಗಕ್ಕೆ ನೈತಿಕ ಸ್ಥೈರ್ಯ ಒದಗಿಸಿತು ಎಂದೇ ಹೇಳಬೇಕು. ಜಾತಿ ವಿನಾಶ ಚಳವಳಿಯಲ್ಲಿ ಕೆಳವರ್ಗದ ಶರಣರಾದ ಮಡಿವಾಳ ಮಾಚಯ್ಯ, ಅಂಬಿಗರ ಚೌಡಯ್ಯ, ಮೇದಾರ ಕೇತಯ್ಯ, ಮಾದಾರ ಚೆನ್ನಯ್ಯ ಹಾಗೂ ಸಮಗಾರ ಹರಳಯ್ಯನಂಥವರು ಇದ್ದುದು ಇಡೀ ದಲಿತ ಸಮುದಾಯವನ್ನೇ ಪ್ರತಿನಿಧಿಸಿದಂತಾಗಿದೆ. ಅದರಂತೆ ಕೆಳವರ್ಗಕ್ಕೆ ಸೇರಿದ ಮಹಿಳೆಯರು ಸಹ ಈ ಚಳವಳಿಯಲ್ಲಿ ಭಾಗವಹಿಸಿದ್ದುದು ವಿಶೇಷವಾಗಿದೆ. ಅವರುಗಳೆಂದರೆ ಕೊಟ್ಟಣದ ಸೋಮವ್ವ, ಅಮುಗೆ ರಾಯಮ್ಮ, ಅಯ್ದಕ್ಕಿ ಲಕ್ಕಮ್ಮ ಮುಂತಾದವರು. ಇಡೀ ವೈದಿಕ ಧರ್ಮದ ಪೊಳ್ಳನ್ನು ಬಸವಣ್ಣ ಹೊರಗೆಡುವುತ್ತಾ ‘‘ವೇದಕ್ಕೆ ಹೊರೆಯ ಕಟ್ಟುವೆ, ಶಾಸ್ತ್ರಕ್ಕೆ ನಿಗಳನಿಕ್ಕುವೆ’’ ಎಂದು ಟೀಕಿಸಿದ್ದಾರೆ. ಅದೇ ರೀತಿ ಬ್ರಾಹ್ಮಣರು ತಮ್ಮ ಹುಟ್ಟನ್ನೇ ಬಂಡವಾಳವಾಗಿಸಿ ಕೆಳವರ್ಗದವರನ್ನು ಶೋಷಿಸುವುದನ್ನು ಖಂಡಿಸಿದ್ದಾರೆ. ತಮ್ಮ ವಚನದಲ್ಲಿ
ಏನಯ್ಯ ವಿಪ್ರರು ನುಡಿದಂತೆ ನಡೆವರು, ತಮಗೊಂದು ಬಟ್ಟೆ, ಶಾಸ್ತ್ರಕ್ಕೊಂದು ಬಟ್ಟೆ, ಕೂಡಲ ಸಂಗಮದೇವಯ್ಯ ಹೊಲೆಯರ ಬಸುರಲ್ಲಿ ವಿಪ್ರರು ಹುಟ್ಟಿ ಗೋಮಾಂಸ ತಿಂಬುವರೆಂಬುದಕ್ಕೆ ಇದೇ ದ್ರಷ್ಟ.
ಎಂದು ಬ್ರಾಹ್ಮಣರ ದಗಲು ಬಾಜಿತನವನ್ನು ಬಯಲಿಗೆಳೆದಿದ್ದಾರೆ. ಜಾತಿ ಮನುಷ್ಯನಿಗೆ ಮುಖ್ಯವಲ್ಲ. ಆದರೆ ಆತನ ಆಚಾರ ವಿಚಾರಗಳೆಂದು ಇಡೀ ಮಾನವ ಕುಲಕ್ಕೆ ಮಾನವೀಯತೆಯ ಪಾಠವನ್ನು ಹೇಳಿಕೊಟ್ಟವರಲ್ಲಿ ಬಸವಣ್ಣ ಮೊದಲಿಗನು. ಬಸವಣ್ಣ ಅನುಭವ ಮಂಟಪ ಸ್ಥಾಪಿಸಿ ವಿಚಾರ ಕ್ರಾಂತಿಗೆ ನಾಂದಿ ಹಾಡಿ ತನ್ಮೂಲಕ ಅಂತರ್ಜಾತಿ ವಿವಾಹ ಮಾಡಿಸಿದ್ದುದು ಈ ದೇಶೊಕಂಡ ಒಂದು ದೊಡ್ಡ ಸಾಮಾಜಿಕ ಕ್ರಾಂತಿಯೆಂದೇ ಹೇಳಬೇಕು. ಅದುದರಿಂದಲೇ ಕರ್ನಾಟಕದಲ್ಲಿ ಇಂದಿಗೂ ಬಸವಣ್ಣನನ್ನು ಕೆಳವರ್ಗದ ಜನತೆ ಗೌರವಿಸುತ್ತಿದ್ದಾರೆ. ಏಕೆಂದರೆ ಬಸವಣ್ಣ ಶೋಷಿತರ ಕೊರಳ ಧ್ವನಿಯಾಗಿ ಹೊರಹೊಮ್ಮಿ ಅವರ ಕಣ್ಣಲ್ಲಿ ಅಶಾಕಿರಣವಾಗಿ ಮೂಡಿದ್ದಾನೆ.
2. ಹಳೇ ಮೈಸೂರು ಪ್ರಾಂತ್ಯದಲ್ಲಿ ದಲಿತ ಚಳವಳಿ
ಹಳೇ ಮೈಸೂರು ಪ್ರಾಂತ್ಯದಲ್ಲಿ ಮೂರು ವರ್ಗಗಳು ಶೈಕ್ಷಣಿಕವಾಗಿ ಮತ್ತು ರಾಜಕೀಯವಾಗಿ ಪ್ರಬಲವಾಗಿದ್ದವು. 1761ರಿಂದ 1799ರವರೆಗೆ ಮುಸ್ಲಿಮರು, 1799ರಿಂದ 1917ರವರೆಗೆ ಬ್ರಾಹ್ಮಣರು, ಮತ್ತು 1917ರಿಂದ ಇವತ್ತಿನವರೆಗೂ ಲಿಂಗಾಯತರು ಮತ್ತ ಒಕ್ಕಲಿಗರು ಅಧಿಕಾರ ಪಡೆದುಕೊಂಡಿದ್ದಾರೆ. ಹಳೇ ಮೈಸೂರು ಪ್ರಾಂತ್ಯದಲ್ಲಿ ಬ್ರಾಹ್ಮಣೇತರ ಚಳವಳಿ ಪ್ರಾರಂಭವಾಗಿ ಮಿಲ್ಲರ್ ಕಮಿಟಿಯ ವರದಿಗನು ಸಾರವಾಗಿ ಲಿಂಗಾಯತರು ಮತ್ತು ಒಕ್ಕಲಿಗರು ಪ್ರಮುಖ ಹುದ್ದೆಗಳನ್ನು ಶೈಕ್ಷಣಿಕ, ಆಡಳಿತ ಮತ್ತು ರಾಜಕೀಯದಲ್ಲಿ ಪಡೆದುಕೊಂಡರು. ಆದರೆ ದಲಿತರಿಗೆ ಅದು ಸಾಧ್ಯವಾಗಲಿಲ್ಲ. ಕಾರಣ ಅವರು ಶಿಕ್ಷಣದಲ್ಲಿ ತೀರ ಹಿಂದುಳಿದವರಾಗಿದ್ದರು. ಅವರ ಶೈಕ್ಷಣಿಕ ಹಿನ್ನೆಲೆಯನ್ನು ಪರಿಗಣಿಸಿ ಸ್ವಾಮಿ ವಿವೇಕಾನಂದರು ಮೈಸೂರಿನ ಮಹಾರಾಜ ಚಾಮರಾಜ ಒಡೆಯರ್ ಅವರಿಗೆ ಪತ್ರ ಬರೆದು ದಲಿತರ ಶೈಕ್ಷಣಿಕ ಪ್ರಗತಿಗಾಗಿ ಶ್ರಮಿಸ ಬೇಕೆಂದು ಕೋರಿಕೊಂಡಿದ್ದರು.
ಕಳೆದು ಹೋದ ತಮ್ಮ ವ್ಯಕ್ತಿತ್ವವನ್ನು ಮರು ರೂಪಿಸಲು ಇರುವ ಒಂದೇ ಒಂದು ಸೇವೆ ಎಂದರೆ ಕೆಳಜಾತಿಗಳಿಗೆ ಶಿಕ್ಷಣವನ್ನು ನೀಡುವುದು ಮಾತ್ರ ಎಂದು ವಿವೇಕಾನಂದರು ತೀವ್ರವಾಗಿ ಭಾವಿಸಿದ್ದರು.
ಜಾತೀಯತೆಯ ಕರಾಳ ವ್ಯವಸ್ಥೆಯಿಂದಾಗಿ ಹಳೇ ಮೈಸೂರು ಪ್ರಾಂತ್ಯದಲ್ಲಿ ಅಸ್ಪೃಶ್ಯರಿಗೆ ಸಾರ್ವಜನಿಕ ಶಾಲೆಗಳಲ್ಲಿ ಪ್ರವೇಶ ನಿರಾಕರಿಸಲಾಗುತ್ತಿತ್ತು. ಆದರೆ ಮೈಸೂರಿನ ಮಹಾರಾಜ ಶ್ರೀ ನಾಲ್ವಡಿ ಕೃಷ್ಣರಾಜ ಒಡೆಯರ್ ಅವರು ದಲಿತ ವರ್ಗದವರ ಬಗೆಗೆ ತುಂಬಾ ಅನುಕಂಪವನ್ನು ಇಟ್ಟುಕೊಂಡಿದ್ದರು. ಏಕೆಂದರೆ ಸ್ವತಃ ಮಹಾರಾಜರೇ ಹಿಂದುಳಿದ ವರ್ಗಕ್ಕೆ ಸೇರಿದವರಾಗಿದ್ದರು. ಮಹಾರಾಜ ‘‘ಯಾವ ಜಾತಿಯವರನ್ನು ಸಹ ಸಾರ್ವಜನಿಕ ಶಾಲೆಗಳಿಗೆ ಜಾತಿ ಆಧಾರದ ಮೇಲೆ ಪ್ರವೇಶ ನಿರಾಕರಿಸಬಾರದು’’ ಎಂದು ಆಜ್ಞೆ ಹೊರಡಿಸಿದ್ದುದು ಪ್ರಶಂಸನೀಯ. ಈ ಆಜ್ಞೆಯಿಂದಾಗಿ ಅನೇಕ ದಲಿತ ವಿದ್ಯಾರ್ಥಿಗಳಿಗೆ ಸಾರ್ವಜನಿಕ ಶಾಲೆ ಮತ್ತು ವಸತಿ ಗೃಹಗಳಲ್ಲಿ ಪ್ರವೇಶ ದೊರಕಿತು. ಹೀಗೆ ಹಳೇ ಮೈಸೂರು ಪ್ರಾಂತ್ಯದಲ್ಲಿ ಸ್ವಾತಂತ್ರ್ಯಪೂರ್ವದಲ್ಲಿ ದಲಿತ ಚಳವಳಿ ಸ್ವತಂತ್ರವಾಗಿ ಹೊರ ಹೊಮ್ಮದೆ ಹೋದರೆ, ಅದು ಮೈಸೂರು ಮಹಾರಾಜರ ಅನುಕಂಪ ಮತ್ತು ಹಿಂದುಳಿದ ವರ್ಗಗಳ ಚಳವಳಿಯ ಪ್ರೇರಣೆ ಅದಕ್ಕಿತ್ತೆಂದು ಹೇಳಬಹುದು.
3. ಮುಂಬಯಿ ಕರ್ನಾಟಕದಲ್ಲಿ ದಲಿತ ಚಳವಳಿ
ಮುಂಬೈ ಕರ್ನಾಟಕದಲ್ಲೂ ಸಹ ಅಸ್ಪೃಶ್ಯರ ಸಾಮಾಜಿಕ, ಆರ್ಥಿಕ, ಶೈಕ್ಷಣಿಕ ಮತ್ತು ರಾಜಕೀಯ ಸ್ಥಾನಮಾನಗಳು ಇತರೆ ಪ್ರದೇಶದ ಅಸ್ಪೃಶ್ಯರಿಗಿಂತ ಭಿನ್ನವಾಗಿರಲಿಲ್ಲ. 1881ರ ಜನಗಣತಿಯ ಪ್ರಕಾರ ಮುಂಬೈ ಕರ್ನಾಟಕದ ಅಸ್ಪೃಶ್ಯರನ್ನು ಏಳು ವರ್ಗಗಳಾಗಿ ವಿಂಗಡಿಸಲಾಗಿತ್ತು. ಅಸ್ಪೃಶ್ಯರ ಒಟ್ಟು ಸಂಖ್ಯೆ 68.000 ಅಥವಾ ಹಿಂದೂ ಜನಸಂಖ್ಯೆಯ ಶೇ.8.59ರಷ್ಟು ಇತ್ತು. ಸ್ವಾತಂತ್ರ್ಯಪೂರ್ವದಲ್ಲಿ ಮುಂಬೈ ಕರ್ನಾಟಕದ ದಲಿತರ ಸ್ಥಿತಿ ತುಂಬಾ ಶೋಚನೀಯವಾಗಿತ್ತು. ಮುಂಬೈ ಗೆಜೆಟಿಯರ್ ದಲಿತ ಸ್ಥಿತಿಯ ಕುರಿತಾಗಿ ಈ ರೀತಿ ವಿವರಿಸುತ್ತದೆ.
ಅವರು ಗ್ರಾಮ ಸೇವಕರು, ಕಾವಲುಗಾರರು, ಗಣಿ ರಚನೆಯ ಸಹಾಯಕರು, ಭಂಟರು, ಸತ್ತಪ್ರಾಣಿಗಳ ಚರ್ಮವನ್ನು ಸುಲಿಯುವವರು ಮತ್ತು ತಮಟೆ ಬಾರಿಸುವವರು…ಗುಡಿಸಲು ಹಾಗೂ ಮುರುಕಲು ಮನೆಗಳಲ್ಲಿ ವಾಸ ಮಾಡುವವರು.
ಅಸ್ಪೃಶ್ಯರು ಭಾರತೀಯ ಸಮಾಜದಲ್ಲಿ ನಡೆದಾಡುವ ಹೆಣಗಳಂತಿದ್ದರು. ತಾವು ಕೇವಲ ಬೇರೆಯವರಿಗೆ ಸುಖ-ಸಂತೋಷ ನೀಡುವುದಕ್ಕಾಗಿ ಹುಟ್ಟಿದ್ದೇವೆ ಎಂದು ತಿಳಿದುಕೊಂಡಿದ್ದರು. ಚಲವಾದಿ ಜನರು (ಹೊಲೆಯರು) ಲಿಂಗಾಯತರ ಗುಲಾಮರಂತೆ ಕೆಲಸ ಮಾಡುತ್ತಿದ್ದರು. ಅವರ ಸ್ಥಿತಿಯ ಬಗೆಗೆ ಗೆಜೆಟಿಯರ್ ಈ ರೀತಿಯ ಮಾಹಿತಿ ಒದಗಿಸುತ್ತದೆ.
ಹಬ್ಬ ಹರಿದಿನಗಳಲ್ಲಿ ಮತ್ತು ಶವಸಂಸ್ಕಾರಗಳಂತಹ ಸಂದರ್ಭಗಳಲ್ಲಿ ಹಣ ನೀಡುವಂತೆ ಲಿಂಗಾಯತರನ್ನು ಬೇಡಿಕೊಂಡು ಜೀವನ ನಡೆಸುವಂತಹ ಸ್ಥಿತಿ ಇವರದಾಗಿದೆ.
ಬಡವರಾದ ಅಶ್ಪೃಶ್ಯರಿಗೆ ತಮ್ಮ ಮಕ್ಕಳಿಗೆ ಶಿಕ್ಷಣ ಕೊಡಿಸುವುದೆಂದರೆ ಗಗನ ಕುಸುಮವೇ ಆಗಿತ್ತು. ಅಸ್ಪೃಶ್ಯ ವಿದ್ಯಾರ್ಥಿಗಳನ್ನು ಸರಕಾರಿ ಶಾಲೆಗೆ ಸೇರಿಸುವುದೆಂದರೆ ಒಂದು ಮಹಾ ಅಪರಾಧವೆಂದೇ ಶಿಕ್ಷಕರು ತಿಳಿದಿದ್ದರು. 1850-51ರಲ್ಲಿ ಧಾರವಾಡದ ಮಹಾರ್ (ಹೊಲೆಯ) ವಿದ್ಯಾರ್ಥಿಗೆ ಪ್ರವೇಶ ನಿರಾಕರಿಸಲಾಗಿತ್ತು. ಆ ವಿದ್ಯಾರ್ಥಿ ಮುಂಬೈ ಸರಕಾರಕ್ಕೆ ದೂರು ಸಲ್ಲಿಸಿದ್ದನೆಂದು ಗೊತ್ತಾಗುತ್ತದೆ. ಬಾಬಾ ಸಾಹೇಬ್ ಅಂಬೇಡ್ಕರರು ಉತ್ತರ ಕರ್ನಾಟಕದ ಜಿಲ್ಲೆಗಳಾದ ಧಾರವಾಡ ಮತ್ತು ಬೆಳಗಾಂಗೆ ಅನೇಕ ಬಾರಿ ಬಂದು ಜನರನ್ನು ಸಂಘಟಿಸುತ್ತಿದ್ದರೆಂದು ಅಂಬೇಡ್ಕರರ ಚಳವಳಿಯಲ್ಲಿ ಭಾಗವಹಿಸಿದ ಅನೇಕ ಹಿರಿಯರು ಇಂದಿಗೂ ತಮ್ಮ ಅನುಭವಗಳನ್ನು ಬಹಳ ರೋಚಕವಾಗಿ ಹೇಳುತ್ತಾರೆ.
ಅಂಬೇಡ್ಕರರು ಮುಂಬೈನ ಶಾಸಕಾಂಗ ಸಭೆಯಲ್ಲಿ ಪರಿಷತ್ ಸದಸ್ಯರಾಗಿ (ಎಂ.ಎಲ್.ಸಿ) ನೇಮಕಗೊಂಡಾಗ ಮುಂಬೈ ಸರಕಾರ ದಲಿತರ ಪ್ರಗತಿಗಾಗಿ ಹೆಚ್ಚಿನ ಹಣ ಬಿಡುಗಡೆ ಮಾಡಿ ಶಾಲೆ ಮತ್ತು ವಸತಿಗೃಹಗಳನ್ನು ಕಟ್ಟಿಸಬೇಕೆಂದು ಒತ್ತಾಯಿಸುತ್ತಿದ್ದರು. 1923ರಲ್ಲಿ ಸರಕಾರಕ್ಕೆ ಮನವಿ ಸಲ್ಲಿಸಿ ದಲಿತರ ಸ್ಥಿತಿಗತಿಗಳನ್ನು ವಿವರಿಸಿದ್ದರು ಎನ್ನುವುದಕ್ಕೆ ಈ ಕೆಳಗಿನ ಮಾಹಿತಿ ಪುಷ್ಠಿ ನೀಡುತ್ತದೆ. ಗಡಿ ಪ್ರದೇಶಗಳಾದ ನಿಪ್ಪಾಣಿ, ಚಿಕ್ಕೋಡಿ ಹಾಗೂ ಬಿಜಾಪುರ ಭಾಗಗಳಿಗೆ ಅಂಬೇಡ್ಕರ ಭೇಟಿ ನೀಡಿ ದಲಿತರಲ್ಲಿ ಜಾಗೃತಿ ಮೂಡಿಸಿದ್ದರೆಂದು ಅಂಬೇಡ್ಕರರ ಕುರಿತು ಸಂಶೋಧನೆ ಮಾಡಿದ ವಿದ್ವಾಂಸರು ಅಭಿಪ್ರಾಯಪಡುತ್ತಾರೆ.
ಮುಂಬೈ ಕರ್ನಾಟಕದಲ್ಲಿ ಅಂಬೇಡ್ಕರರ ಪ್ರಭಾವ ಎಷ್ಟಿತ್ತೆಂದರೆ ದಲಿತರೆಲ್ಲಾ ಅಂಬೇಡ್ಕರರನ್ನು ಒಬ್ಬ ಪ್ರಶ್ನಾತೀತ ಧುರೀಣರೆಂದು ಒಪ್ಪಿಕೊಂಡಿದ್ದರು. ಅಂಬೇಡ್ಕರರ ಚಳವಳಿ ಮತ್ತು ವಿಚಾರಧಾರೆಯಿಂದಾಗಿ ಬಾರಿಸ್ಟರ್ ಮಾನೆ, ದತ್ತಕಟ್ಟಿ ಹಾಗೂ ಡಾ.ವರಾಳೆ ಅಂಥ ನಾಯಕರು ಬೆಳಗಾಂ ಜಿಲ್ಲೆಯಲ್ಲಿ ದಲಿತರನ್ನು ಪೂರ್ಣ ಪ್ರಮಾಣದಲ್ಲಿ ಸಂಘಟಿಸುತ್ತಿದ್ದರು. ಅಂಬೇಡ್ಕರರೇ ಸ್ಥಾಪಿಸಿದ ರಾಜಕೀಯ ಪಕ್ಷದಿಂದ ದತ್ತಾ ಕಟ್ಟಿಯವರು ಚಿಕ್ಕೋಡಿ ಲೋಕಸಭಾ ಚುನಾವಣೆಗೆ 1957ರಲ್ಲಿ ಸ್ಪರ್ಧಿಸಿ ಸಂಸತ್ತಿಗೆ ಆರಿಸಿಹೋದರು. ದಲಿತರು ಚಿಕ್ಕೋಡಿ (ಬೆಳಗಾಂ ಜಿಲ್ಲೆ)ಯಲ್ಲಿ ಒಗ್ಗಟ್ಟಾಗಿದ್ದರು ಎನ್ನುವುದಕ್ಕೆ ಸಾಕ್ಷಿಯಾಗಿದೆ.
ಹೀಗೆ ದಲಿತ ಚಳವಳಿ ಸ್ವಾತಂತ್ರ್ಯ ಪೂರ್ವದಲ್ಲಿ ಸಮಸ್ತ ದಲಿತರನ್ನು ಸಂಘಟಿಸಲು ವಿಫಲಗೊಂಡರೂ ಸಹ ಅಂಬೇಡ್ಕರರ ವಿಚಾರಧಾರೆಯನ್ನು ಅನುಮೋದಿಸಿ ಆ ಮೂಲಕ ದಲಿತರಲ್ಲಿ ಜಾಗೃತಿ ಮತ್ತು ಐಕ್ಯತೆ ಮೂಡಿಸಲು ಪ್ರಾರಂಭಿಸಿತು. ಸ್ವತಃ ಅಂಬೇಡ್ಕರರು ದೇಶದ ಅನೇಕ ಪ್ರಾಂತಗಳಿಗೆ ಹೋಗಿ ದಲಿತರನ್ನು ಸಂಘಟಿಸಿದ್ದು ಇತಿಹಾಸ.
ಸ್ವಾತಂತ್ರ್ಯ ನಂತರದ ದಲಿತ ಚಳವಳಿ
ಸ್ವಾತಂತ್ರ್ಯಾನಂತರದ ಅವಧಿಯಲ್ಲಿ ಕರ್ನಾಟಕದಲ್ಲಿ ಎರಡು ಮಹತ್ವದ ದಲಿತ ಚಳವಳಿಗಳು ಹುಟ್ಟಿಕೊಂಡು ಬಂದಿವೆ. ಅವುಗಳೆಂದರೆ
1. ಭೀಮಸೇನಾ
2. ದಲಿತ ಸಂಘರ್ಷ ಸಮಿತಿ (ಡಿ.ಎಸ್.ಎಸ್)
ಭೀಮಸೇನಾ
1970ರಲ್ಲಿ ಬಿ.ಶಾಮಸುಂದ ಅವರು ಭೀಮಸೇನಾ ಎಂಬ ಸಂಘಟನೆಯನ್ನು ಹೈದರಾಬಾದ್ ಕರ್ನಾಟಕದಲ್ಲಿ ಹುಟ್ಟು ಹಾಕಿದರು. ಭೀಮಸೇನಾ ಸುಮಾರು 2 ಲಕ್ಷ ಸದಸ್ಯರನ್ನು ಒಳಗೊಂಡಿತ್ತು ಎಂದು ಹೇಳಲಾಗಿದೆ. ಭೀಮಸೇನಾ ತನ್ನದೇ ಆದ ಸಂವಿಧಾನದ ಧ್ವಜ ಚಿಂತಕರ ಚಾವಡಿಯನ್ನು ಹೊಂದಿತ್ತು. ದಲಿತರ ಮೇಲಾಗುವ ದೌರ್ಜನ್ಯವನ್ನು ತಪ್ಪಿಸಲು ಅವರಿಗೆ ಸ್ವರಕ್ಷಣೆಗಾಗಿ ತರಬೇತಿ ಸಹ ಕೊಡಲಾಗುತ್ತಿತ್ತು. ಪ್ರತಿ ತಿಂಗಳಿಗೊಮ್ಮೆ ತಾಲ್ಲೂಕಿನ ಪ್ರತಿ ಕಚೇರಿಗಳಲ್ಲಿ ನಾಯಕರು ಮತ್ತು ಕಾರ್ಯಕರ್ತರು ಸೇರಿ ಸಮಸ್ಯೆಗಳ ಕುರಿತಾಗಿ ಚರ್ಚಿಸುತ್ತಿದ್ದರು. ಕ್ರಾಂತಿಕಾರಕ ಮನೋಭಾವನೆ ಹೊಂದಿದ ಯುವಕರು ಹಿಂದೂ ದೇವಾಲಯಗಳನ್ನು ಸುಡಲು ಪ್ರಾರಂಭಿಸಿದರು. ಇದರಿಂದಾಗಿ ಹೈದರಾಬಾದ್ ಕರ್ನಾಟಕದಲ್ಲಿ ಈ ಸಂಘಟನೆ ಅಶಾಂತಿಗೆ ಸಹ ಕಾರಣವಾಯಿತು. ಜಾತಿಯ ಸಂಘರ್ಷಗಳು ಹೆಚ್ಚಾಗತೊಡಗಿದಾಗ ನಿಜಲಿಂಗಪ್ಪ ಮತ್ತು ವೀರೇಂದ್ರ ಪಾಟೀಲರ ಸರಕಾರ ಭೀಮಸೇನಾ ಚಟುವಟಿಕೆಗಳನ್ನು ನಿಷೇಧಿಸಿತು. ಅಲ್ಲದೆ 1975ರಲ್ಲಿ ಶಾಮಸುಂದರ ನಿಧನರಾದರು. ಹೀಗಾಗಿ ಭೀಮಸೇನರಲ್ಲಿ ಎರಡನೇ ಪಂಕ್ತಿಯ ನಾಯಕರು ರೂಪುಗೊಂಡಿರಲಿಲ್ಲ. ಆದ್ದರಿಂದ ಆ ಚಳವಳಿ ಸಂಪೂರ್ಣವಾಗಿ ಸ್ಥಗಿತಗೊಂಡಿತು.
ಬಸವಲಿಂಗಪ್ಪ ಬೂಸಾ ಪ್ರಕರಣ
ಬಿ.ಬಸವಲಿಂಗಪ್ಪ ಕರ್ನಾಟಕದ ದಲಿತ ನಾಯಕರಲ್ಲಿ ಅಗ್ರಗಣ್ಯರು. ದಲಿತರ ಸಮಸ್ಯೆಗಳಿಗೆ ಸ್ಪಂದಿಸಿ ಅವುಗಳ ನೈಜ ಪರಿಹಾರಕ್ಕೆ ಶ್ರಮಿಸಿದವರು. ದಲಿತರ ಮೇಲಾಗುವ ದೌರ್ಜನ್ಯಗಳನ್ನು ಯಾವುದೇ ವೇದಿಕೆಯಲ್ಲಿ ಖಂಡಿಸುವ ಎದೆಗಾರಿಕೆ ಹೊಂದಿದ್ದರು. ಹಿಂದೂ ಧರ್ಮ ದಲಿತರನ್ನು ಶೋಷಣೆ ಮಾಡುತ್ತಿರುವುದು ಅಮಾನವೀಯ. ಆದ್ದರಿಂದ ಆ ಧರ್ಮವನ್ನು ದಲಿತರು ಧಿಕ್ಕರಿಸಬೇಕೆಂದು ದಲಿತರಿಗೆ ಕರೆ ಕೊಡುತ್ತಿದ್ದರು.
ಮೈಸೂರು ವಿಶ್ವವಿದ್ಯಾನಿಲಯವು ದಿನಾಂಕ 7-2-1973ರಂದು ಬಸವಲಿಂಗಪ್ಪನವರು ಆಹ್ವಾನಿಸಿ ‘ಸೋಶಿಯಾಲಜಿ ಆಫ್ ರಿಲಿಜನ್’ ಕುರಿತು ಮಾತನಾಡಲು ಕೋರಿಕೊಂಡಿತ್ತು. ಬಸವಲಿಂಗಪ್ಪನವರು ದಲಿತ ಯುವಕರನ್ನು ಉದ್ದೇಶಿಸಿ ‘ನಿಮ್ಮ ಶೋಷಣೆಗೆ ಕಾರಣವಾದ ಹಿಂದು ದೇವರುಗಳ ಫೋಟೋಗಳನ್ನು ಗಟಾರಕ್ಕೆ ಎಸೆದು ಹಿಂದೂೊಧರ್ಮದ ದೌರ್ಜನ್ಯದ ವಿರುದ್ದ ಸಿಡಿದೇಳಬೇಕೆಂದು ಕರೆ ಕೊಟ್ಟಿದ್ದರು. ಇನ್ನೊಂದು ಕಾರ್ಯಕ್ರಮದಲ್ಲಿ ಅವರು ಮಾತನಾಡುತ್ತಾ ಕನ್ನಡ ಸಾಹಿತ್ಯ ಬೂಸಾ ಸಾಹಿತ್ಯವಾಗಿದೆ. ಏಕೆಂದರೆ ಅದರಲ್ಲಿ ದಲಿತರ ನೋವುಗಳನ್ನು ಕನ್ನಡ ಸಾಹಿತಿಗಳು ಪ್ರತಿಬಿಂಬಿಸುತ್ತಿಲ್ಲ. ಆದ್ದರಿಂದ ಸಾಹಿತಿಗಳು ತಮ್ಮ ಬರವಣಿಗೆಯಲ್ಲಿ ಅಪ್ರಾಮಾಣಿಕರಾಗಿದ್ದಾರೆ ಎಂದು ಟೀಕಿಸಿದ್ದರು. ಕನ್ನಡ ಸಾಹಿತ್ಯ ಮತ್ತು ಸಾಹಿತಿಗಳಿಗೆ ಬಸವಲಿಂಗಪ್ಪನವರು ಅವಮಾನಿಸಿದ್ದಾರೆ. ಆದ್ದರಿಂದ ಅವರು ರಾಜೀನಾಮೆ ಕೊಡಬೇಕೆಂದು ಕರ್ನಾಟಕಾದ್ಯಂತ ಚಳವಳಿ ಪ್ರಾರಂಭವಾಯಿತು. ನವೆಂಬರ್ 23, 1973ರಂದು ಸಾವಿರಾರು ವಿದ್ಯಾರ್ಥಿಗಳು ಬೆಂಗಳೂರಿನಲ್ಲಿ ಸೇರಿ ಕರ್ನಾಟಕದ ಆಗಿನ ಮುಖ್ಯಮಂತ್ರಿಗಳಾದ ದೇವರಾಜ ಅರಸು ಅವರಿಗೆ ಮನವಿಪತ್ರ ಸಲ್ಲಿಸಿ ಬಸವಲಿಂಗಪ್ಪ ನವರನ್ನು ಮಂತ್ರಿ ಪದವಿಯಿಂದ ಕಿತ್ತುಹಾಕಬೇಕೆಂದು ಒತ್ತಾಯಿಸಿದರು. ಕರ್ನಾಟಕದ ತುಂಬೆಲ್ಲಾ ಗಲಭೆ ಪ್ರಾರಂಭವಾಗಿ ಸವರ್ಣೀಯ ವಿದ್ಯಾರ್ಥಿಗಳು ದಲಿತ ವಿದ್ಯಾರ್ಥಿಗಳ ಮೇಲೆ ಅಮಾನುಷವಾಗಿ ಹಲ್ಲೆ ಮಾಡತೊಡಗಿದರು. ಪ್ರಥಮಬಾರಿಗೆ ಕರ್ನಾಟಕದ ಪ್ರಗತಿಪರರು, ಲೇಖಕರು, ಬಂಡಾಯ ಸಾಹಿತಿಗಳು, ದಲಿತ ನೌಕರರು, ಸಾಹಿತಿಗಳು ಮತ್ತು ವಿದ್ಯಾರ್ಥಿಗಳು ಬಸವಲಿಂಗಪ್ಪ ಅವರನ್ನು ಬೆಂಬಲಿಸತೊಡಗಿದರು. ಬಸವಲಿಂಗಪ್ಪ ಭೂಸಾ ಪ್ರಕರಣ ಕರ್ನಾಟಕದಲ್ಲಿ ದಲಿತ ಚಳವಳಿ ಹುಟ್ಟಲು ಕಾರಣವಾಗದಿದ್ದರೂ ಅದು ಪ್ರೇರಣೆಯಾಯಿತೆಂದೇ ಹೇಳಬಹುದು.
ರಾಜ್ಯ ಮಟ್ಟದ ದಲಿತ ಚಳವಳಿಯ ಪ್ರಾರಂಭ
ಬಸವಲಿಂಗಪ್ಪನವರ ಬೂಸಾ ಪ್ರಕರಣ ದಲಿತರ ಒಗ್ಗಟ್ಟಿಗೆ ಕಾರಣವಾಯಿತಲ್ಲದೆ ದಲಿತರ ಸಾಮಾಜಿಕ, ರಾಜಕೀಯ, ಆರ್ಥಿಕ ಮತ್ತು ಶೈಕ್ಷಣಿಕ ಹಕ್ಕುಗಳನ್ನು ಪಡೆದುಕೊಳ್ಳಲು ದಲಿತರೆಲ್ಲಾ ತಮ್ಮಲ್ಲಿರುವ ಭಿನ್ನಾಭಿಪ್ರಾಯಗಳನ್ನು ಮರೆತು ಒಂದಾಗಬೇಕೆಂದು ಒತ್ತಾಯ ಬರತೊಡಗಿತು. ಈ ದಿಶೆಯಲ್ಲಿ ಮೈಸೂರಿನ ದಲಿತ ಮಿತ್ರರು ದಲಿತರಲ್ಲಿ ಅನೇಕ ಸಂಘಟನೆಗಳಿವೆ. ಅವುಗಳನ್ನೆಲ್ಲಾ ಒಂದುಗೂಡಿಸಿ ರಾಜ್ಯಮಟ್ಟದ ಸಂಘಟನೆ ಕಟ್ಟಬೇಕೆಂಬ ಆಶಯ ವ್ಯಕ್ತಪಡಿಸಿದರು. ಚಳವಳಿಯ ಧ್ಯೇಯ ಧೋರಣೆಗಳನ್ನು ಚರ್ಚಿಸುವ ಸಲುವಾಗಿ ಮೈಸೂರಿನ ಅಶೋಕಪುರಂನಲ್ಲಿರುವ ಸಿದ್ಧಾರ್ಥ ವಿದ್ಯಾರ್ಥಿ ನಿಲಯದಲ್ಲಿ 1975ರ ಅಕ್ಟೋಬರ್ನಲ್ಲಿ ಸಭೆಯನ್ನು ಕರೆಯಲಾಯಿತು. ರಾಜ್ಯದ ವಿವಿಧ ದಲಿತ ಸಂಘಟನೆಗಳಿಗೆ ಸೇರಿದ ಪದಾಧಿಕಾರಿಗಳು ಈ ಸಭೆಗೆ ಹಾಜರಾದರು. ಸಭೆಗೆ ಹಾಜರಾದ ಮುಖಂಡರು ಮುಂದೆ ಹುಟ್ಟುಹಾಕಬೇಕಾದ ದಲಿತ ಚಳವಳಿಯ ಪ್ರಣಾಳಿಕೆ ರಚಿಸಲು ಒಂದು ಸಮಿತಿ ನೇಮಿಸಲು ನಿರ್ಧರಿಸಿದರು. 1976ರಲ್ಲಿ ಭದ್ರಾವತಿಯಲ್ಲಿ ದಲಿತ ಲೇಖಕ ಕಲಾವಿದರ ಒಕ್ಕೂಟ ಸ್ಥಾಪನೆ ಮಾಡಲಾಯಿತು. ಈ ಒಕ್ಕೂಟ ದಲಿತ ಚಳವಳಿಗೆ ಬುನಾದಿ ಹಾಕಿಕೊಟ್ಟಿತು. 1977ರ ಜೂನ್ನಲ್ಲಿ ರಾಜ್ಯದ ಬೇರೆ ಬೇರೆ ದಲಿತ ಸಂಘಟನೆಗಳ ಸಭೆಯನ್ನು ಕರೆಯಲಾಯಿತು. ಎಲ್ಲಾ ಸಂಘಟನೆಗಳನ್ನು ಒಗ್ಗೂಡಿಸಿ ಅದಕ್ಕೆ ಕರ್ನಾಟಕ ದಲಿತ ಸಂಘರ್ಷ ಸಮಿತಿ ಎಂಬ ಹೆಸರನ್ನು ಇಡಲಾಯಿತು. 1978ರ ಡಿಸೆಂಬರ್ ತಿಂಗಳಲ್ಲಿ ರಾಜ್ಯಮಟ್ಟದ ಡಿ.ಎಸ್.ಎಸ್. ಸಮಾವೇಶವನ್ನು ಭದ್ರಾವತಿಯಲ್ಲಿ ಏರ್ಪಡಿಸಿ ಪ್ರೊ.ಬಿ.ಕೃಷ್ಣಪ್ಪ ಅವರನ್ನು ರಾಜ್ಯ ಸಂಚಾಲಕರೆಂದು ಆಯ್ಕೆ ಮಾಡಲಾಯಿತು. 1978ರಲ್ಲಿ ಡಿ.ಎಸ್.ಎಸ್. ಹುಟ್ಟಿಕೊಂಡರೂ 1984ರವರೆಗೆ ಅದಕ್ಕೆ ತನ್ನದೇ ಆದ ಸಂವಿಧಾನವಿರಲಿಲ್ಲ. ದಿನಾಂಕ 18-11-1984 ರಂದು ಧಾರವಾಡದ ಜೈಭೀಮ ನಗರದಲ್ಲಿ ಡಿ.ಎಸ್.ಎಸ್.ಸಂಘಟನೆಯ ಹೊಸ ಸಂವಿಧಾನವನ್ನು ಬಿಡುಗಡೆ ಮಾಡಲಾಯಿತು.
ಕರ್ನಾಟಕ ದಲಿತ ಸಂಘರ್ಷ ಸಮಿತಿ
ಕರ್ನಾಟಕ ದಲಿತ ಸಂಘರ್ಷ ಸಮಿತಿ ದಲಿತರ ಪ್ರಬಲ ಸಂಘಟನೆ ಪ್ರತಿ ಜಿಲ್ಲೆ, ತಾಲೂಕು ಹೋಬಳಿ ಮತ್ತು ಗ್ರಾಮಗಳಲ್ಲಿ ಡಿ.ಎಸ್.ಎಸ್. ತನ್ನ ಶಾಖೆಗಳನ್ನು ಹೊಂದಿದೆ. ಡಿ.ಎಸ್.ಎಸ್.ಕೇಂದ್ರ ಕಚೇರಿ ಬೆಂಗಳೂರಿಲ್ಲಿ ಇದೆ. ಡಿ.ಎಸ್.ಎಸ್. ಸಂಸ್ಥೆಗಳು ಈ ಕೆಳಗಿನಂತೆ ಇವೆ.
1. ದಲಿತ ವಿದ್ಯಾರ್ಥಿ ಒಕ್ಕೂಟ (ಡಿ.ಎಸ್.ಎಸ್.)
2. ದಲಿತ ನೌಕರರ ಒಕ್ಕೂಟ
3. ದಲಿತ ಮಹಿಳಾ ಒಕ್ಕೂಟ
4. ದಲಿತ ಲೇಖಕರ ಮತ್ತು ಕಲಾವಿದರ ಒಕ್ಕೂಟ
5. ದಲಿತ ಪೌರ ಕಾರ್ಮಿಕರ ಒಕ್ಕೂಟ
ಮೇಲಿನ ಆಯಾ ಅಂಗ ಸಂಸ್ಥೆಗಳು ತಮ್ಮ ವಲಯದಲ್ಲಿ ಸಮಸ್ಯೆಗಳ ನಿವಾರಣೆಗೆ ಹೋರಾಟ ಮಾಡಿ ದಲಿತರಿಗೆ ನ್ಯಾಯ ಒದಗಿಸಿಕೊಡಲು ಪ್ರಯತ್ನಿಸುತ್ತಿವೆ. ಕಾಲಕಾಲಕ್ಕೆ ದಲಿತ ವಿದ್ಯಾರ್ಥಿ ಒಕ್ಕೂಟ, ದಲಿತ ಮಹಿಳಾ ಒಕ್ಕೂಟ, ದಲಿತ ನೌಕರರ ಒಕ್ಕೂಟ, ದಲಿತ ಲೇಖಕ ಮತ್ತು ಕಲಾವಿದರ ಒಕ್ಕೂಟ ಮತ್ತು ದಲಿತ ಪೌರಕಾರ್ಮಿಕರ ಒಕ್ಕೂಟಗಳು ಜಿಲ್ಲಾ ಮತ್ತು ರಾಜ್ಯಮಟ್ಟದಲ್ಲಿ ಸಮ್ಮೇಳನಗಳನ್ನು ಆಯೋಜಿಸಿ ತಮ್ಮ ಕುಂದುಕೊರತೆಗಳನ್ನು ಸರಕಾರಕ್ಕೆ ತಿಳಿಸಿ ಅವುಗಳ ಪರಿಹಾರಕ್ಕೆ ಒತ್ತಾಯಿಸುತ್ತಾ ಬರುತ್ತಿವೆ.
ಡಿ.ಎಸ್.ಎಸ್.ನ ಹೋರಾಟ
ಭಾರತಾದ್ಯಂತ ಪರಿಶಿಷ್ಟ ಜಾತಿ ಮತ್ತು ಪಂಗಡದವರು ಭೂಹೀನ ಶ್ರಮಿಕರಿದ್ದಾರೆ. 1982ರ ಭಾರತ ಸರಕಾರದ ವರದಿಯ ಪ್ರಕಾರ ಶೇಕಡ 52ರಷ್ಟು ದಲಿತ ಪುರುಷರು ಹಾಗೂ ಶೇಕಡ 72ರಷ್ಟು ದಲಿತ ಮಹಿಳೆಯರು ವ್ಯವಸಾಯ ಕ್ಷೇತ್ರದಲ್ಲಿ ಕೂಲಿಕಾರರಾಗಿ ದ್ದಾರೆ. ಭಾರತದ ಎಲ್ಲಾ ನಗರಗಳಲ್ಲಿ ಪರಿಶಿಷ್ಟ ಜಾತಿಗೆ ಸೇರಿದವರು ಕಡಿಮೆ ವರಮಾನ ಗುಂಪಿಗೆ ಸೇರಿದ್ದಾರೆ. 2/3ರಷ್ಟು ಪರಿಶಿಷ್ಟ ಜಾತಿಯ ಜನರು ಜೀತದಾರರಾಗಿದ್ದಾರೆ. ಕರ್ನಾಟಕದಲ್ಲೂ ಸಹ ದಲಿತರು ಆರ್ಥಿಕವಾಗಿ ತೀರಾ ಬಡವರಾಗಿದ್ದಾರೆ. ಅವರ ಜೀವನಮಟ್ಟವನ್ನು ಸುಧಾರಿಸಲು ದಲಿತರಿಗೆ ಶಿಕ್ಷಣದ ಜೊತೆಗೆ ಭೂಮಿ ಹಂಚಿಕೆಯ ಅಗತ್ಯ ಕೂಡಾ ಇದೆ. ಈ ಅಂಶವನ್ನು ಗಮನದಲ್ಲಿಟ್ಟುಕೊಂಡು ಡಿ.ಎಸ್.ಎಸ್. ಪ್ರಾರಂಭದಿಂದಲೂ ಭೂ ಹೋರಾಟ ನಡೆಸಿದೆ. ಕೆಲವುಗಳನ್ನು ಮಾತ್ರ ಈ ಪ್ರಬಂಧದಲ್ಲಿ ಚರ್ಚಿಸಲಾಗಿದೆ.
1. ಸಿದ್ಧಲಿಪುರ ಭೂ ಹೋರಾಟ
ಸಿದ್ಧಲಿಪುರವು ಶಿವಮೊಗ್ಗ ಜಿಲ್ಲೆಯ ಭದ್ರಾವತಿ ತಾಲೂಕಿಗೆ ಸೇರಿದ ಒಂದು ಪುಟ್ಟ ಗ್ರಾಮ. ಈ ಗ್ರಾಮದ ಪರಿಶಿಷ್ಟ ಜಾತಿಯವರಿಗೆ ಸರಕಾರ ನೀಡಿದ್ದ 33 ಎಕರೆ ಭೂಮಿಯನ್ನು ಆರ್.ಎಸ್.ಎಸ್. ಕಾರ್ಯಕರ್ತರು ಕಬಳಿಸಿದರು. ಇದನ್ನು ಉಳಿಸಿಕೊಳ್ಳಲು 20 ಹಳ್ಳಿಯ ದಲಿತರೆಲ್ಲ ಸೇರಿ ಸುಮಾರು ಒಂದೂವರೆ ವರ್ಷದವರೆಗೆ ಡಿ.ಎಸ್.ಎಸ್. ಸಂಘಟನೆ ನೇತೃತ್ವದಲ್ಲಿ ಹೋರಾಟ ಮಾಡಿದರು. ಕೊನೆಯಲ್ಲಿ ಸರಕಾರ ಸಿದ್ಧಲಿಪುರ ದಲಿತರಿಗೆ ಭೂಮಿಯನ್ನು ಮರಳಿ ಮಂಜೂರು ಮಾಡಿತು.
2. ಬಿದಿರೆ ಹೋರಾಟ
ಬಿದಿರೆ ಹಾಸನ ಜಿಲ್ಲೆಯ ಅರಸೀಕೆರೆ ತಾಲ್ಲೂಕಿನ ಒಂದು ಚಿಕ್ಕಹಳ್ಳಿ. ಅರಣ್ಯ ಇಲಾಖೆಗೆೆ ಸೇರಿದ 800 ಎಕರೆ ಭೂಮಿಯನ್ನು ಈ ಹಳ್ಳಿಯ ಬಡ ಹಿಂದುಳಿದ ಮತ್ತು ದಲಿತರು ವಶಪಡಿಸಿಕೊಂಡರು. ಈ ಭೂಮಿಯನ್ನು ಆ ಗ್ರಾಮದ ಜನರಿಗೆ ಮಂಜೂರು ಮಾಡಬೇಕೆಂದು ಡಿ.ಎಸ್.ಎಸ್.ಹೋರಾಟ ನಡೆಸಿತು. ಕೊನೆಗೆ ಸರಕಾರ 800 ಎಕರೆ ಭೂಮಿಯನ್ನು ಬಿದಿರೆ ಜನರಿಗೆ ಮಂಜೂರು ಮಾಡಿತು.
3. ಚಂಡುಗೂಡು ಹೋರಾಟ
ಚಂಡುಗೂಡು ಚಿಕ್ಕಮಗಳೂರು ತಾಲ್ಲೂಕು ಆಲ್ದೂರು ಹೋಬಳಿ ಒಂದು ಪುಟ್ಟ ಹಳ್ಳಿ. ಈ ಹಳ್ಳಿಗೆ ಸೇರಿದ ಸುಮಾರು 300 ಎಕರೆ ಸರಕಾರಿ ಭೂಮಿಯನ್ನು ದಲಿತರು ವಶಪಡಿಸಿಕೊಂಡಿದ್ದರು. ಈ ಭೂಮಿಯನ್ನು ದಲಿತರಿಗೆ ಕೊಡಿಸುವ ಸಲುವಾಗಿ ಡಿ.ಎಸ್.ಎಸ್. ಸುಮಾರು 70 ಹಳ್ಳಿಯ ಜನರನ್ನು ಸಂಘಟಿಸಿ ಹೋರಾಟ ನಡೆಸಿತು. ಈ ಹೋರಾಟಕ್ಕೆ ಮಣಿದು ಸರಕಾರ 300 ಎಕರೆ ಭೂಮಿಯನ್ನು 60 ದಲಿತ ಕುಟುಂಬಗಳಿಗೆ ಮಂಜೂರು ಮಾಡಿತು.
4. ಮೆದಕಿನಾಳ ಹೋರಾಟ
ಮೆದಕಿನಾಳ ರಾಯಚೂರು ಜಿಲ್ಲೆಯ ಲಿಂಗಸೂಗೂರ ತಾಲ್ಲೂಕಿನ ಒಂದು ಚಿಕ್ಕ ಹಳ್ಳಿ. 67 ಎಕರೆ ಸರಕಾರಿ ಭೂಮಿಯನ್ನು ದಲಿತರಿಗೆ ಮಂಜೂರು ಮಾಡಬೇಕೆಂದು ಡಿ.ಎಸ್.ಎಸ್. ಹೋರಾಟ ಮಾಡಿ ಮೆದಕಿನಾಳ ದಲಿತರಿಗೆ ಭೂಮಿ ಮಂಜೂರು ಮಾಡಿಸಿತು. ಈ ಹೋರಾಟದ ನೇತೃತ್ವವನ್ನು ಆರ್ ಮಾನಶಯ್ಯನವರು ವಹಿಸಿದ್ದರು.
5. ನಾಗಸಂದ್ರ ಹೋರಾಟ
ನಾಗಸಂದ್ರ ಕೋಲಾರ ಜಿಲ್ಲೆಯ ಗೌರಿಬಿದನೂರು ತಾಲ್ಲೂಕಿಗೆ ಸೇರಿದ ಒಂದು ಕುಗ್ರಾಮ. ಈ ಗ್ರಾಮಕ್ಕೆ ಸೇರಿದ ನೂರಾರು ಎಕರೆ ಭೂಮಿಯನ್ನು ದಲಿತರಿಗೆ ಕೊಡಬೇಕೆಂದು ನಾಗಸಂದ್ರ ದಲಿತರು ಡಿ.ಎಸ್.ಎಸ್.ನ ಸಂಘಟನೆಯೊಂದಿಗೆ ಆಗಸ್ಟ್ 15, 1985ರಂದು ಹೋರಾಟ ಪ್ರಾರಂಭಿಸಿತು. ಆ ಹೋರಾಟದ ಫಲವಾಗಿ ಸರಕಾರ ನಾಗಸಂದ್ರದ ದಲಿತ ಮತ್ತು ಹಿಂದುಳಿದವರಿಗೆ ಭೂಮಿ ಮಂಜೂರು ಮಾಡಿತು.
6. ಗುಳ್ಳತ್ತಿ ಹೋರಾಟ
1959ರಲ್ಲಿ ಸರಕಾರವು 800 ಎಕರೆ ಭೂಮಿಯನ್ನು ದಲಿತರು ಸಾಗುವಳಿ ಮಾಡಿಕೊಳ್ಳಲು ಮಂಜೂರು ಮಾಡಿತ್ತು. ಆದರೆ ಗುಳ್ಳತ್ತಿಯ ಸವರ್ಣಿಯರು ದಲಿತರಿಗೆ ಆ ಹಕ್ಕನ್ನು ಬಿಟ್ಟುಕೊಟ್ಟಿರಲಿಲ್ಲ. ಮೇಲ್ವರ್ಗದವರ ದೌರ್ಜನ್ಯದ ವಿರುದ್ಧ ಡಿ.ಎಸ್.ಎಸ್. ಮತ್ತು ರೈತ ಸಂಘ ಹೋರಾಟವನ್ನು ಪ್ರಾರಂಭಿಸಿದವು. ಗುಳ್ಳತ್ತಿಯ ದಲಿತ ಮತ್ತು ಹಿಂದುಳಿದವರನ್ನು ಸಂಘಟಿಸಿ ಹೋರಾಟ ಮಾಡಿ 800 ಎಕರೆ ದಲಿತರಿಗೆ ಸಿಗುವ ಹಾಗೆ ಮಾಡಿದ್ದು ಚಳವಳಿಯ ಯಶಸ್ಸು ಎಂದೇ ಹೇಳಬೇಕು.
7. ದೇವಲಾಪುರ ಹೋರಾಟ
ದೇವಲಾಪುರ ಮೈಸೂರು ಜಿಲ್ಲೆಯ ಹೆಗ್ಗಡದೇವನಕೋಟೆ ತಾಲ್ಲೂಕಿನ ಒಂದು ಚಿಕ್ಕಗ್ರಾಮ. ಸುಮಾರು 190 ದಲಿತ ಕುಟುಂಬಗಳು 300 ಎಕರೆ ಅರಣ್ಯ ಪ್ರದೇಶವನ್ನು ಆಕ್ರಮಿಸಿಕೊಂಡಿದ್ದವು. ಈ ಕಾರಣಕ್ಕಾಗಿಯೇ ಅರಣ್ಯಾಧಿಕಾರಿಗಳು ದಲಿತರ ಮೇಲೆ ಹಲ್ಲೆ ನಡೆಸಿದರು. ಇದನ್ನು ಪ್ರತಿಭಟಿಸಿ ಹಾಗೂ ದಲಿತರಿಗೆ ಭೂಮಿಯನ್ನು ಮಂಜೂರು ಮಾಡಿಸಿಕೊಡಲು ಕರ್ನಾಟಕ ದಲಿತ ಸಂಘರ್ಷ ಸಮಿತಿಯು ಹೋರಾಟವನ್ನು ನಡೆಸಿತು. ಹಾಗೂ ತನ್ನ ಹೋರಾಟದಲ್ಲಿ ಯಶಸ್ವಿ ಕೂಡ ಆಯಿತು.
ಡಿ.ಎಸ್.ಎಸ್.ನಲ್ಲಿ ಒಡಕು
ದಲಿತ ಸಂಘರ್ಷ ಸಮಿತಿ ದಲಿತರ ಸಾಮಾಜಿಕ ಆರ್ಥಿಕ ಮತ್ತು ಶೈಕ್ಷಣಿಕ ಸಮಸ್ಯೆಗಳಿಗೆ ಸ್ಪಂದಿಸಿ ಈ ಎಲ್ಲ ಕ್ಷೇತ್ರಗಳಲ್ಲಿ ದಲಿತರಿಗೆ ಆಗುತ್ತಿರುವ ಅನ್ಯಾಯದ ವಿರುದ್ಧ ತನ್ನ ಹೋರಾಟವನ್ನು ಪ್ರಾರಂಭಿಸಿತು. ಪ್ರಾರಂಭದ ದಿನಗಳಲ್ಲಿ ಅದು ಯಾವುದೇ ರಾಜಕೀಯ ಪಕ್ಷಕ್ಕೆ ತನ್ನ ಬೆಂಬಲ ವ್ಯಕ್ತಪಡಿಸದೆ ಕೇವಲ ದಲಿತರನ್ನು ಸಾಮಾಜಿಕವಾಗಿ ಸಂಘಟಿಸುವುದಷ್ಟೆ ಅದರ ಗುರಿಯಾಗಿತ್ತು. ಅದು ರಾಜಕೀಯದಿಂದ ದೂರ ಉಳಿಯಲು ಕಾರಣವೇನೆಂದರೆ ಭಾರತದ ರಾಜಕೀಯ ಪಕ್ಷಗಳು ದಲಿತರ ಏಳಿಗೆಗಾಗಿ ಶ್ರಮಿಸದೆ ಕೇವಲ ಅವರನ್ನು ರಾಜಕೀಯ ದಾಳವನ್ನಾಗಿ ಉಪಯೋಗ ಮಾಡುತ್ತಿವೆ. ಆದ್ದರಿಂದ ಚುನಾವಣಾ ರಾಜಕೀಯದಲ್ಲಿ ಆಸಕ್ತಿ ವಹಿಸದೆ ತಟಸ್ಥವಾಗಿ ಉಳಿಯಬೇಕೆಂಬ ನಿರ್ಧಾರವನ್ನು ಕೈಗೊಂಡಿತ್ತು. ಹೀಗಾಗಿ 1980, 1983 ಹಾಗೂ 1985ರ ಲೋಕಸಭಾ ಮತ್ತು ವಿಧಾನಸಭಾ ಚುನಾವಣೆಗಳನ್ನು ಬಹಿಷ್ಕರಿಸಿತು. ಆದರೆ ಸಂಘಟನೆ ಪ್ರಬಲವಾದಂತೆ ಡಿ.ಎಸ್.ಎಸ್.ನ ನಾಯಕರನ್ನು ರಾಜಕೀಯ ಪಕ್ಷಗಳ ಧುರೀಣರೇ ಕರೆದು ಮಾತನಾಡಿಸಿದಾಗ ಬಹಳ ‘ಗಣ್ಯ ವ್ಯಕ್ತಿಗಳು’ ಎಂಬ ಭಾವನೆಗಳನ್ನು ಚಳವಳಿಯಲ್ಲಿರುವ ನಾಯಕರು ಹೊಂದತೊಡಗಿದರು. ಹಾಗೂ ರಾಜಕೀಯ ಪಕ್ಷ ಮತ್ತು ನಾಯಕರೊಂದಿಗೆ ಅಪವಿತ್ರ ಸಂಬಂಧ ಬೆಳೆಸಲು ಪ್ರಾರಂಭಿಸಿದರು.
ದೇವನೂರ ಮಹಾದೇವರ ಡಿ.ಎಸ್.ಎಸ್.ನ ರಾಜ್ಯ ಸಂಚಾಲಕರಾಗಿದ್ದಾಗ ಬಹಿರಂಗ ವಾಗಿ ಜನತಾ ಪಕ್ಷಕ್ಕೆ ಡಿ.ಎಸ್.ಎಸ್.ನ ಬೆಂಬಲ ವ್ಯಕ್ತಪಡಿಸಿದರು. ದೇವನೂರ ಮಹಾದೇವರ ಈ ನಿರ್ಧಾರದಿಂದ ಚಳವಳಿಯಲ್ಲಿದ್ದ ನಾಯಕ ಮತ್ತು ಕಾರ್ಯಕರ್ತರಿಗೆ ಇರಿಸು-ಮುರುಸಾಗಿ ತಮ್ಮ ಕೋಪವನ್ನು ಬಹಿರಂಗವಾಗಿ ತೋಡಿಕೊಂಡರು. ಪ್ರೊ.ಬಿ. ಕೃಷ್ಣಪ್ಪನವರು ಮಹಾದೇವೊಅವರಿಗೆೊಪತ್ರ ಬರೆದು ತಕ್ಷಣವೇ ತಾವು ರಾಜ್ಯ ಸಂಚಾಲಕತ್ವಕ್ಕೆ ರಾಜೀನಾಮೆ ಕೊಡಬೇಕೆಂದು ಅಗ್ರಹೊಪಡಿಸಿದರು. ನಂತರ 1987 ಮತ್ತು 1989ರಲ್ಲಿ ದ.ಸಂ.ಸ ಮತ್ತೆ ಜನತಾದಳಕ್ಕೆ ತನ್ನ ಬೆಂಬಲ ವ್ಯಕ್ತಪಡಿಸಿತು. ವಿಷಾದದ ಸಂಗತಿ ಎಂದರೆ ಪ್ರೊ.ಕೃಷ್ಣಪ್ಪನವರು ಸ್ವತಃ ತಾವೇ 1991ರಲ್ಲಿ ಕೋಲಾರದ ಮೀಸಲು ಕ್ಷೇತ್ರದಿಂದ ಲೋಕಸಭಾೊಚುನಾವಣೆಗೆ ದ.ಸಂ.ಸ.ವತಿಯಿಂದಲೇ ಚುನಾವಣೆಗೆ ಸ್ಪರ್ಧಿಸಿದರು. ದ.ಸಂ.ಸ. ರಾಜಕೀಯ ಪಕ್ಷಗಳನ್ನು ಬೆಂಬಲಿಸಬೇಕೆ ಅಥವಾ ಬೇಡವೇ ಎನ್ನುವ ಬಗ್ಗೆ ಕಾರ್ಯಕರ್ತ ಮತ್ತು ನಾಯಕರಲ್ಲಿ ಭಿನ್ನಾಭಿಪ್ರಾಯ ಇಂದಿಗೂ ಇದೆ. ಅದನ್ನು ಎರಡು ವಿಧದಲ್ಲಿ ಚರ್ಚಿಸಬಹುದು.
1. ದ.ಸಂ.ಸ. ಯಾವುದೇ ರಾಜಕೀಯ ಪಕ್ಷಗಳಿಗೆ ಬೆಂಬಲ ಕೊಡದೆ ಅಥವಾ ಕಾರ್ಯ ಕರ್ತರನ್ನು ಸಕ್ರಿಯ ರಾಜಕೀಯಕ್ಕೆ ಇಳಿಸದೆ ಅದು ಕೇವಲ ಒಂದು ‘ಒತ್ತಡ ಗುಂಪಾಗಿ’ ಕೆಲಸ ಮಾಡಬೇಕು. ಸಮಾಜದಲ್ಲಿರುವ ಅಸ್ಪೃಶ್ಯತೆ, ಅನ್ಯಾಯ, ದಬ್ಬಾಳಿಕೆ ಮತ್ತು ಶೋಷಣೆಯನ್ನು ಸಂಘಟನೆ ಬಲಗೊಳಿಸುವುದರ ಮೂಲಕ ದಲಿತರಿಗೆ ಬೆಂಗಾವಲಾಗಿ ಕೆಲಸ ಮಾಡಬೇಕು. ರಾಜಕೀಯದ ಜೊತೆ ದ.ಸಂ.ಸ ಹೊಂದಾಣಿಕೆ ಮಾಡಿಕೊಂಡರೆ ಸಂಘಟನೆ ಮತ್ತೆ ಒಡೆಯಬಹುದು ಎನ್ನುವ ಭೀತಿ ಇದೆ.
2. ಭಾರತದ ಪ್ರಜಾಪ್ರಭುತ್ವ ವ್ಯವಸ್ಥೆಯಲ್ಲಿ ಯಾವುದೇ ಜಾತಿ ಅಥವಾ ಗುಂಪು ಹಾಲಿ ರಾಜಕೀಯ ವ್ಯವಸ್ಥೆಯನ್ನು ವಿರೋಧಿಸಿ ರಾಜಕೀಯದ ಹೊರಗಡೆ ನಿಂತು ಏನನ್ನು ಸಾಧಿಸಲು ಸಾಧ್ಯವಾಗುವುದಿಲ್ಲ. ಆದ್ದರಿಂದ ಪಕ್ಷ ರಾಜಕಾರಣ ಮಾಡಿ ಪ್ರಗತಿಪರ ಪಕ್ಷಗಳ ಜೊತೆಗೆ ಹೊಂದಾಣಿಕೆ ಮಾಡಿ ತಮ್ಮ ಸಮಸ್ಯೆಗಳಿಗೆ ಪರಿಹಾರ ಕಂಡುಕೊಳ್ಳುವುದು ಹಾಗೂ ದಲಿತರಲ್ಲೂ ಸಹ ರಾಜಕೀಯ ಒಲವು ಮೂಡಿಸುವುದು ತಪ್ಪಲ್ಲ ಎಂದು ಕೆಲವರ ಅಭಿಪ್ರಾಯ. ದ.ಸಂ.ಸ. ಕಾರ್ಯಕರ್ತರ ವಿರೋಧದ ಮಧ್ಯೆಯು ಕೆಲವೇ ಕೆಲವು ನಾಯಕರು ರಾಜಕೀಯ ಪಕ್ಷಗಳ ಜೊತೆಗೆ ನೇರ ಸಂಬಂಧ ಇಟ್ಟುಕೊಂಡಿದ್ದಾರೆ. ಅದರಿಂದ ಲಾಭ ಮಾಡಿಕೊಳ್ಳುತ್ತಾರೆ ಎನ್ನುವ ಗುಮಾನಿ ಇದೆ.
ದ.ಸಂ.ಸ. ಸದ್ಯದ ಒಡಕಿಗೆ ಸ್ಪಷ್ಟವಾದ ಕಾರಣಗಳು ನಮಗೆ ಗೋಚರಿಸದಿದ್ದರೂ ಒಂದು ಕಾರಣವನ್ನು ಬಹಳ ಸ್ಪಷ್ಟವಾಗಿ ಗುರುತಿಸಬಹುದು. ಅದೆಂದರೆ ಪ್ರೊ.ಬಿ. ಕೃಷ್ಣಪ್ಪನವರು ದ.ಸಂ.ಸ.ದ ಹುಟ್ಟಿಗೆ ಪ್ರಮುಖ ಕಾರಣರು. ಬಹಳ ಕಷ್ಟಪಟ್ಟು ಸಂಘಟನೆ ಬೆಳೆಸಿದವರು. ಅವರು ಭದ್ರಾವತಿಯಲ್ಲಿ ಕಾಲೇಜಿನ ಪ್ರಾಂಶುಪಾಲರಾದ ಮೇಲೆ ಕಾಲೇಜಿನ ಕೆಲಸದ ಒತ್ತಡದಿಂದ ದ.ಸಂ.ಸ.ದಿಂದ ಮಾನಸಿಕವಾಗಿ ದೂರವಾಗಿ ಏಕಾಂಗಿತನವನ್ನು ಅನುಭವಿಸತೊಡಗಿದರು.
ಅದರಂತೆ ದ.ಸಂ.ಸ.ದ ಹಾಲಿ ನಾಯಕರು ಅವರನ್ನು ಸಭೆ ಸಮಾರಂಭಗಳಿಗೆ ಕರೆಯುವುದನ್ನು ನಿಲ್ಲಿಸಿದರು. ಈ ರೀತಿಯ ಅವಮಾನ ಕೃಷ್ಣಪ್ಪನವರಲ್ಲಿ ಸೇಡಿನ ಮನೋಭಾವನೆಯನ್ನು ಮೂಡಿಸಿತು. ಹಾವು ಹೇಗೆ ತನ್ನ ಮೊಟ್ಟೆಯನ್ನು ತಾನೇ ತಿನ್ನುವುದೋ ಅದೇ ರೀತಿ ತಾನು ಹುಟ್ಟು ಹಾಕಿದ ಸಂಘಟನೆಯನ್ನು ತಾನೇ ಒಡೆಯಲು ಪ್ರಾರಂಭಿಸಿದರು ಅನ್ನುವ ಟೀಕೆ ಇದೆ. ಆದ್ದರಿಂದ ಕೃಷ್ಣಪ್ಪನವರು ತನಗೆ ಬೇಕಾದ ಕೆಲವೇ ದ.ಸಂ.ಸ. ನಾಯಕರ ಮನದಲ್ಲಿ ವಿಷಬೀಜ ಬಿತ್ತಿ ದ.ಸಂ.ಸ.ವನ್ನು ವಿಭಜಿಸುವುದರಲ್ಲಿ ಯಶಸ್ವಿಯಾದರು. ಇದಕ್ಕೆ ಕಾರಣವೇನೆಂದರೆ ಅವರು ಸಕ್ರಿಯ ರಾಜಕಾರಣ ಸೇರಿ ಕರ್ನಾಟಕ ಬಿ.ಎಸ್.ಪಿ.ಯ ಪ್ರಧಾನ ಕಾರ್ಯದರ್ಶಿಗಳಾಗಿ ಕಾರ್ಯ ನಿರ್ವಹಿಸುತ್ತಿದ್ದರು. ದ.ಸಂ.ಸ.ದ ಬೆಂಬಲವಿಲ್ಲದೆ ತಾನು ಬಿ.ಎಸ್.ಪಿ. ಕಟ್ಟುವುದು ಸಾಧ್ಯವಿಲ್ಲವೆಂಬ ಸತ್ಯ ಕೃಷ್ಣಪ್ಪನವರಿಗೆ ಗೊತ್ತಿತ್ತು. ಹೀಗಾಗಿ ಈಗಿನ ಒಡಕಿಗೆ ಕೃಷ್ಣಪ್ಪ ಕಾರಣವೆಂದು ದ.ಸಂ. ಸ.ದ ಕಾರ್ಯಕರ್ತರ ಅಭಿಪ್ರಾಯ.
ಚಳವಳಿಯ ಹೊರಗೆ ಇರುವ ದಲಿತ ಮತ್ತು ದಲಿತೇತರರು ದ.ಸಂ.ಸ. ತನ್ನ ಮೊದಲಿನ ಕಾಳಜಿ ಮತ್ತು ಪ್ರಖರತೆಯನ್ನು ಕಳೆದುಕೊಂಡಿದೆ. ಅಲ್ಲಿರುವ ನಾಯಕರು ಅವಕಾಶವಾದಿಗಳು ಹಾಗೂ ಸಂಘಟನೆಯನ್ನು ತಮ್ಮ ರಾಜಕೀಯ ಬೆಳವಣಿಗೆಗಾಗಿ ಉಪಯೋಗಿಸಿಕೊಳ್ಳುತ್ತಿದ್ದಾರೆ. ದ.ಸಂ.ಸ. ನಾಯಕರು ‘ರೋಲ್ ಕಾಲ್ ’ ಪ್ರಾರಂಭಿಸಿದ್ದಾರೆ ಅಥವಾ ಅವರ ಕಾರ್ಯ ಕೇವಲ ಸರಕಾರಿ ನೌಕರರ ‘ವರ್ಗಾವಣೆ’ ಮಾಡಿಸಿಕೊಡುವುದಕ್ಕೆ ಸೀಮಿತವಾಗಿದೆ ಎಂಬ ಟೀಕೆ ಮೂಡಿಬಂದಿದೆ.
ಟೀಕೆ ಟಿಪ್ಪಣಿಗಳು ಏನೇ ಇರಲಿ ಕಷ್ಟಪಟ್ಟು ಹುಟ್ಟುಹಾಕಿದ ಸಂಘಟನೆ ಚೂರುಚೂ ರಾದರೆ ಅದು ದಲಿತರ ಹೃದಯಗಳು ಚೂರುಚೂರಾದ ಹಾಗೆಯೇ. ಏಕೆಂದರೆ ಜಾತಿವಾದಿ ಮತ್ತು ಕೋಮುವಾದಿ ಶಕ್ತಿಗಳು ಒಂದಾಗಿ ತಮ್ಮ ಆಧಿಪತ್ಯವನ್ನು ಈ ರಾಷ್ಟ್ರದಲ್ಲಿ ಸ್ಥಾಪಿಸಿಕೊಳ್ಳುತ್ತಿವೆ. ಆದರೆ ದಲಿತರು ತಮ್ಮತಮ್ಮಲ್ಲಿರುವ ಭಿನ್ನಾಭಿಪ್ರಾಯಗಳನ್ನು ಹೆಚ್ಚಿಸಿ ಅನೈಕ್ಯತೆ ಹೊಂದುತ್ತಿರುವುದು ಒಳ್ಳೆಯ ಸಂಕೇತವಲ್ಲ. ದಲಿತರು ಕೇವಲ ದಲಿತರನ್ನು ಮಾತ್ರ ಸಂಘಟಿಸದೇ ತಮ್ಮಂತೆ ಕೆಳಸ್ತರದಲ್ಲಿ ಇರುವ ಹಿಂದುಳಿದ ಮತ್ತು ಅಲ್ಪಸಂಖ್ಯಾತರನ್ನು ಸಂಘಟಿಸಿ ಒಂದು ಪರ್ಯಾಯ ಶಕ್ತಿಯಾಗಿ ಬೆಳೆಯಬೇಕಾದ ಅನಿವಾರ್ಯತೆ ಇದೆ. ಇಲ್ಲದೇ ಹೋದರೆ ಬಾಬಾ ಸಾಹೇಬ್ ಅಂಬೇಡ್ಕರರು ಹೇಳಿದ ಹಾಗೆ ಇತಿಹಾಸವನ್ನು ಮರೆತವರು ಇತಿಹಾಸ ಸೃಷ್ಟಿಸಲಾರರು ಅನ್ನುವ ಪರಿಸ್ಥಿತಿ ನಿರ್ಮಾಣ ವಾಗಬಹುದು. ದಲಿತ ಚಳವಳಿ ಒಟ್ಟಾರೆ ಸಮಾಜದಲ್ಲಿ ಇರುವ ಕಟ್ಟಕಡೆಯ ಮನುಷ್ಯನ ನೋವಿಗೆ ಸ್ಪಂದಿಸಿ ಎಲ್ಲಾ ಜಾತಿಯ ಬಡವರನ್ನು ಒಂದುಗೂಡಿಸಿ ಶೋಷಿತರ ವಿರುದ್ಧ ಸಿಡಿದೇಳಬೇಕಾಗಿದೆ ಹಾಗೂ ಅಸಮಾನತೆಯ ನಾಡಿನಲ್ಲಿ ಸಮಾನತೆಯನ್ನು ಹುಟ್ಟುಹಾಕಬೇಕಾಗಿದೆ.
ಪರಾಮರ್ಶನ ಗ್ರಂಥಗಳು
1. ದಯಾನಂದ ಮಾನೆ, 1987. ದಿ ಪೊಲಿಟಿಕಲ್ ಎಲಿಟ್ ಅಮಂಗ್ ದಿ ಶೆಡ್ಯೂಲ್ದ್ ಕಾಸ್ಟ್ಸ್ ಇನ್ ಕರ್ನಾಟಕ ಸಿನ್ಸ್ 1956-ಆ್ಯನ್ ಅನಾಲಿಸಿಸ್, ಅಪ್ರಕಟಿತ ಪಿ.ಎಚ್.ಡಿ. ಪ್ರಬಂಧ ಧಾರವಾಡ: ಕರ್ನಾಟಕ ವಿಶ್ವವಿದ್ಯಾಲಯ.
2. ಚಂದ್ರಾ ಭಾರಿಲ್, 1971. ಸೋಷಿಯಲ್ ಅಂಡ್ ಪೊಲಿಟಿಕಲ್ ಐಡಿಯಾಸ್ ಆಫ್ ಬಿ.ಆರ್.ೊಅಂಬೇಡ್ಕರ್, ಜೈಪುರ.
3. ರಿಪೋರ್ಟ್ ಆಫ್ ಎಕ್ಸ್ಪರ್ಟ್ ಗ್ರೂಪ್ ಪ್ರೊಗ್ರಾಮ್ ಆಫ್ ಅಲಿವ್ ಯೇಷನ್ ಆಫ್ ಪಾವರ್ಟಿ, 1982. ಹೊಸ ದೆಹಲಿ: ಭಾರತ ಸರ್ಕಾರ.
4. ಅಂಬೇಡ್ಕರ್ ಬಿ.ಆರ್., 1982. ರೈಟಿಂಗ್ಸ್ ಆ್ಯಂಡ್ ಸ್ಪೀಚಸ್ ವಾಲ್ಯೂಂ, ಮುಂಬೈ: ಮಹಾರಾಷ್ಟ್ರ ಸರಕಾರದ ಪ್ರಕಟಣೆ.
blogger
delicious
digg
facebook
reddit
stumble
twitter
print
email
ಪುಸ್ತಕ: ಸಮಕಾಲೀನ ಕರ್ನಾಟಕ ಚರಿತ್ರೆಯ ವಿವಿಧ ಆಯಾಮಗಳು (ಸಂಪಾದಿತ)
ಲೇಖಕರು: ದಯಾನಂದ ಮಾನೆ
ಪ್ರಕಾಶಕರು: ಕನ್ನಡ ವಿಶ್ವವಿದ್ಯಾಲಯ, ಹಂಪಿ
ಮುಖ್ಯ ಸಂಪಾದಕರು: ಡಾ. ವಿಜಯ್ ಪೂಣಚ್ಚ ತಂಬಂಡ
ಸಂಪುಟ ಸಂಪಾದಕರು: ಡಾ. ಎನ್. ಚಿನ್ನಸ್ವಾಮಿ ಸೋಸಲೆ

ಕಾಮೆಂಟ್‌ಗಳಿಲ್ಲ:
ಕಾಮೆಂಟ್ ಪೋಸ್ಟ್ ಮಾಡಿ