ರಾಷ್ಟ್ರೀಯತಾವಾದದ ಬೆಳವಣಗೆಸಂಪಾದಿಸಿ
೧೯೦೦ ರ ಹೊತ್ತಿಗೆ ಕಾಂಗ್ರೆಸ್ಸು ಅಖಿಲ ಭಾರತ ಮಟ್ಟದ ಸಂಘಟನೆಯಾಗಿ ಹೊಮ್ಮಿತ್ತಾದರೂ , ಅದು ಮುಸ್ಲಿಮರನ್ನು ಆಕರ್ಷಿಸುವಲ್ಲಿನ ಸೋಲು ಅದರ ಸಾಧನೆಯನ್ನು ಕಳೆಗುಂದಿಸಿತ್ತು. ಮುಸ್ಲಿಮರು ಸರಕಾರೀ ಸೇವೆಯಲ್ಲಿ ತಮ್ಮ ಪ್ರಾತಿನಿಧ್ಯ ಸಾಕಷ್ಟಿಲ್ಲ ಎಂದು ಭಾವಿಸಿದ್ದರು. ಧಾರ್ಮಿಕ ಮತಾಂತರ , ಗೋಹತ್ಯೆ , ಅರೇಬಿಕ್ ಲಿಪಿಯಲ್ಲಿ ಉರ್ದುವನ್ನು ಉಳಿಸಿಕೊಳ್ಳುವುದು ಇವುಗಳ ವಿರುದ್ಧ ಹಿಂದೂ ಸಮಾಜ ಸುಧಾರಕರ ಪ್ರಚಾರಗಳು , ಕಾಂಗ್ರೆಸ್ಸು ಮಾತ್ರ ಭಾರತದ ಜನತೆಯನ್ನು ಪ್ರತಿನಿಧಿಸುವಂತಾದಾಗ ಅವರ ಅಲ್ಪಸಂಖ್ಯಾತ ಸ್ಥಿತಿ ಮತ್ತು ಹಕ್ಕುಗಳ ನಿರಾಕರಣೆಯ ಕುರಿತಾದ ಅವರ ಆತಂಕಗಳನ್ನು ಹೆಚ್ಚಿಸಿದವು . ಸರ್ ಸಯ್ಯದ್ ಅಹ್ಮದ್ ಖಾನ್ ಅವರು ಮುಸ್ಲಿಂ ಪುನರುಜ್ಜೀವನಕ್ಕಾಗಿ ಚಳುವಳಿಯೊಂದನ್ನು ಆರಂಬಿಸಿದರು . ಅದು ೧೮೭೫ ರಲ್ಲಿ ಉತ್ತರಪ್ರದೇಶದ ಆಲೀಗಢದಲ್ಲಿ ಮುಹಮ್ಮದನ್ ಆಂಗ್ಲೋ ಇಂಡಿಯನ್ ಕಾಲೇಜಿನ ಸ್ಥಾಪನೆಯಲ್ಲಿ ಪರ್ಯವಸಾನಗೊಂಡಿತು. (ನಂತರ ೧೯೨೧ ರಲ್ಲಿ ಅದು ಅಲೀಗಢ ಮುಸ್ಲಿಂ ವಿಶ್ವವಿದ್ಯಾಲಯ ಎಂದು ಮರುಹೆಸರು ಪಡೆಯಿತು.) ಅದರ ಉದ್ದೇಶವು ಆಧುನಿಕ ಪಾಶ್ಚಾತ್ಯ ಜ್ಞಾನದೊಂದಿಗೆ ಇಸ್ಲಾಂನ ಸಾಮರಸ್ಯಕ್ಕೆ ಒತ್ತು ಕೊಡುವ ಶಿಕ್ಷಣವನ್ನು ಶ್ರೀಮಂತ ವಿದ್ಯಾರ್ಧಿಗಳಿಗೆ ನೀಡುವದಾಗಿತ್ತು . ಆದರೆ , ಭಾರತದ ಮುಸ್ಲಿಮರಲ್ಲಿನ ವೈವಿಧ್ಯತೆಯು ಏಕಪ್ರಕಾರದ ಸಾಂಸ್ಕೃತಿಕ ಮತ್ತು ಬೌದ್ಧಿಕ ಪುನರುಜ್ಜೀವನವನ್ನು ಅಸಾಧ್ಯಗೊಳಿಸಿತು.
ವಂಗ ಭಂಗಸಂಪಾದಿಸಿ
ಮುಖ್ಯ ಲೇಖನ: ವಂಗ ಭಂಗ
೧೯೦೫ರಲ್ಲಿ, ವೈಸ್‍ರಾಯ್ ಹಾಗೂ ಗವರ್ನರ್ ಜನರಲ್ (೧೮೯೯-೧೯೦೫) ಆಗಿದ್ದ ಲಾರ್ಡ್ ಕರ್ಝನ್, ವಂಗದೇಶ ಅಥವಾ ಬಂಗಾಳ ಪ್ರಾಂತ್ಯವನ್ನು ಆಡಳಿತಾತ್ಮಕ ಸುಧಾರಣೆಗೋಸ್ಕರ ಚಿಕ್ಕ ಪ್ರದೇಶಗಳನ್ನಾಗಿ ಒಡೆಯಬೇಕೆಂದು ಆದೇಶಿಸಿದನು. ದೊಡ್ಡದಾದ ವಂಗದೇಶದಲ್ಲಿನ ಭಾರೀಜನಸಂಖ್ಯೆ, ಅಲ್ಲಿನ ಬುದ್ಧಿಜೀವಿ ಹಿಂದೂಗಳ ಪ್ರಭಾವ, ರಾಷ್ಟ್ರ ಹಾಗೂ ಪ್ರಾಂತೀಯ ರಾಜಕಾರಣದಲ್ಲಿ ಸಾಕಷ್ಟು ಪ್ರಾಬಲ್ಯ ಹೊಂದಿದ್ದುದೇ ಇದಕ್ಕೆ ಕಾರಣ. ವಂಗ ಭಂಗ ಎರಡು ಪ್ರದೇಶಗಳನ್ನು ಸೃಷ್ಟಿಸಿತು - ಢಾಕಾವನ್ನು ರಾಜಧಾನಿಯಾಗಿ ಪಡೆದ ಅಸ್ಸಾಂ ಹಾಗೂ ಪೂರ್ವ ಬಂಗಾಳ ಮತ್ತು (ಮೊದಲೇ ಆಂಗ್ಲ ಭಾರತದ ರಾಜಧಾನಿಯಾಗಿದ್ದ) ಕಲ್ಕತ್ತಾವನ್ನು ರಾಜಧಾನಿಯಾಗಿ ಪಡೆದ ಪಶ್ಚಿಮ ಬಂಗಾಳ. ಹಿಂದು-ಮುಂದು ನೋಡದೆ, ವಿಚಾರಮಾಡದೆ ಅತಿ ಬೇಗನೆ ಮಾಡಲ್ಪಟ್ಟ ವಂಗ ಭಂಗದಿಂದ ಬಂಗಾಳರು ರೊಚ್ಚಿಗೆದ್ದರು. ಸರ್ಕಾರ ಭಾರತೀಯರ ಒಪ್ಪಿಗೆಯಿರಲಿ, ಅಭಿಪ್ರಾಯವನ್ನೂ ಕೇಳಿರಲಿಲ್ಲವಾದ್ದರಿಂದ ಇದು ಎಂದಿನಂತೆ ಆಂಗ್ಲರ ಒಡೆದು ಆಳುವ ಕುತಂತ್ರವೇ ಎಂದು ಎಲ್ಲರಿಗೆ ತಿಳಿಯಿತು. ಚಳುವಳಿಗಳು ಬೀದಿಗಿಳಿದವು; ಪತ್ರಿಕೆಗಳು ಅವನ್ನು ದೇಶಕ್ಕೆಲ್ಲ ಹರಡಿದವು. ಕೊನೆಗೆ ಕಾಂಗ್ರೆಸ್ ಸ್ವದೇಶೀ ಕೂಗೆಬ್ಬಿಸಿ, ಬ್ರಿಟಿಷರ ಪದಾರ್ಥಗಳಿಗೆ ನಿರ್ಬಂಧವನ್ನು ಘೋಷಿಸಿತು. ಈ ಕಾಲದಲ್ಲಿ ಕವಿ ರವೀಂದ್ರನಾಥ ಟಾಗೋರ್ ("ಪುನೀತವದು ವಂಗದ ನೆಲ, ವಂಗದ ಜಲ...." ಎಂಬರ್ಥ ಬರುವ) ಗೀತೆಯನ್ನು ರಚಿಸಿ ಹಾಡುತ್ತಾ, ಪರಸ್ಪರ ಕೈಗಳಿಗೆ ರಾಖೀಯನ್ನು ಕಟ್ಟಿಸುತ್ತಾ ಜನರನ್ನು ಮುನ್ನಡೆಸಿದರು. ಆ ದಿನ (ಅರಂಧನ್) ವಂಗದ ಮನೆಗಳಲ್ಲಿ ಯಾರೂ ಒಲೆ ಹೊತ್ತಿಸಲಿಲ್ಲ.
ಕಾಂಗ್ರೆಸ್ ನೇತೃತ್ವದ ಬ್ರಿಟಿಷ್ ವಸ್ತುಗಳ ಬಹಿಷ್ಕಾರ ಎಷ್ಟು ಸಫಲವಾಯಿತೆಂದರೆ ಸಿಪಾಯಿದಂಗೆಯ ನಂತರ ಅತಿ ದೊಡ್ಡದೆಂಬಂಥ ಆಂಗ್ಲ ವಿರೋಧೀ ಎಲ್ಲ ಶಕ್ತಿಗಳನ್ನೂ ಒಮ್ಮೆಲೇ ಅದು ಆಂಗ್ಲರ ಮೇಲೆ ತೂರಿಬಿಟ್ಟಂತಾಯಿತು. ಮತ್ತೆ ಹಿಂಸೆ ಹಾಗೂ ದಮನದ ಚಕ್ರ ದೇಶದ ಅಲ್ಲಲ್ಲಿ ತಲೆದೋರಿತು (ನೋಡಿ:ಅಲಿಪುರದ ಸ್ಫೋಟ). ೧೯೦೯ ರಲ್ಲಿ, ಆಂಗ್ಲರು ವಿವಿಧ ಸಾಂವಿಧಾನಿಕ ಸುಧಾರಣೆಗಳ ಮೂಲಕ ತಲೆಸವರುವ ಪ್ರಯತ್ನಗಳನ್ನೆಲ್ಲಾ ಮಾಡಿದರು ಮತ್ತು ಕೆಲವು ನಿರ್ವಾಹಕರುಗಳನ್ನು ಪ್ರಾಂತೀಯ ಹಾಗೂ ಸಾರ್ವಭೌಮ ಸಭೆಗಳಿಗೆ ನಿಯೋಜಿಸಿದರು. ಮುಸ್ಲಿಮರ ಒಂದು ನಿಯೋಗ ವೈಸ್‍ರಾಯ್ ಲಾರ್ಡ್ ಮಿಂಟೋ (೧೯೦೫-೧೦) ಅನ್ನು ಭೇಟಿಯಾಗಿ, ಮುಂದಾಗಲಿರುವ ಸಾಂವಿಧಾನಿಕ ಸುಧಾರಣೆಗಳಲ್ಲಿ ಮುಸ್ಲಿಮರಿಗೆ ಕೆಲವು ಅನುಕೂಲಗಳನ್ನೂ, ಸರ್ಕಾರೀ ಸೇವೆ ಹಾಗೂ ಮತದಾರಪಟ್ಟಿಯಲ್ಲಿ ವಿಶೇಷ ಸೌಲಭ್ಯಗಳನ್ನೂ ಕೋರಿತು. ಅದೇ ವರ್ಷ, ತಾವು ಬ್ರಿಟಿಷರಿಗೆ ವಿಧೇಯರೆಂದು ತೋರಿಸಲು ಹಾಗೂ ತಮ್ಮ ರಾಜಕೀಯ ಅಧಿಕಾರವನ್ನು ಮುನ್ನುಗ್ಗಿಸಲು ಮುಸ್ಲಿಂ ಲೀಗ್ ಸ್ಥಾಪನೆಯಾಯಿತು; ಅದನ್ನು ಒಪ್ಪಿ ಬ್ರಿಟಿಷರು ಮುಸ್ಲಿಮರಿಗೆ ಹಲವು ಪ್ರಾತಿನಿಧ್ಯಗಳನ್ನು ಕಾದಿರಿಸಲು ೧೯೦೯ ರ ಭಾರತ ಪ್ರತಿನಿಧಿ ಸಭಾ ಕಾಯ್ದೆಯಡಿ ಮಂಡಿಸಿದ್ದೂ ಆಯಿತು. ಹಿಂದೂಗಳೇ ಹೆಚ್ಚಿದ್ದ ಕಾಂಗ್ರೆಸ್ ನಿಂದ ತನ್ನನ್ನು ಬೇರೆಯಾಗಿ ಗುರುತಿಸಬೇಕೆಂದೂ, ತನ್ನ ಉದ್ದೇಶ "ರಾಷ್ಟ್ರದೊಳಗಣ ರಾಷ್ಟ್ರ" ಎಂದೂ ಹೇಳತೊಡಗಿತು.
ಸಾಲದ್ದಕ್ಕೆ, ೧೯೧೧ ರಲ್ಲಿ ಸಾರ್ವಭೌಮ ದೊರೆ ಐದನೇ ಜಾರ್ಜ್ ಭಾರತಕ್ಕೆ ದರ್ಬಾರ್(ಅರಸನಿಗೆ ಪ್ರಜೆಗಳೆಲ್ಲರ ಅಧೀನತೆಯನ್ನು ತೋರ್ಪಡಿಸಲು ನಡೆಸುವ ಪರಂಪರಾನುಗತ ಒಡ್ಡೋಲಗ) ನಡೆಸಲು ಬಂದಾಗ ವಂಗ-ಭಂಗವನ್ನು ಅನೂರ್ಜಿತಗೊಳಿಸಿ, ರಾಜಧಾನಿಯನ್ನು ಕಲ್ಕತ್ತಾದಿಂದ, ಹೊಸದಾಗಿ ನಿರ್ಮಿಸಲ್ಪಡುವ ದೆಹಲಿಯ ದಕ್ಷಿಣಭಾಗದ ನಗರವೊಂದಕ್ಕೆ ಸ್ಥಳಾಂತರಿಸುವುದಾಗಿ ಘೋಷಿಸಿದ್ದು, ತಮ್ಮ ಮಹತ್ಕಾರ್ಯವೆಂದು ಬ್ರಿಟಿಷರೇ ಬೆನ್ನುತಟ್ಟಿಕೊಂಡು ಹಿಗ್ಗಿದ್ದೂ ಆಯಿತು. ಮುಂದೆ ಅದೇ ನಗರ ನವದೆಹಲಿಯಾಯಿತು.
ಮೊದಲನೇ ವಿಶ್ವಯುದ್ಧಸಂಪಾದಿಸಿ
ಮೊದಲನೇ ವಿಶ್ವಯುದ್ಧದ ಪ್ರಾರಂಭದಿಂದಲೂ ಭಾರತೀಯರು ತಮ್ಮ ಬೆಂಬಲವನ್ನು ವಸಾಹತುಶಾಹಿ ಸರ್ಕಾರಕ್ಕೆ ನೀಡಿದರು. ಈ ಸಮಯದಲ್ಲಿ ದಂಗೆಯನ್ನು ನಿರೀಕ್ಷಿಸಿದ್ದ ಬ್ರಿಟೀಶರಿಗೆ ಇದು ಆಶ್ಚರ್ಯಕರವಾಗಿತ್ತು. ಸುಮಾರು ೧.೩ ಮಿಲಿಯ ಭಾರತೀಯ ಸೈನಿಕರು ಮತ್ತು ಕೂಲಿಕಾರರು ಯೂರೋಪ್, ಆಫ್ರಿಕ ಮತ್ತು ಮಧ್ಯ ಏಷ್ಯಾಗಳಲ್ಲಿ ಸೇವೆ ಸಲ್ಲಿಸಿದರು. ಹಲವಾರ ಭಾರತದ ರಾಜರು ಹಣ, ಆಹಾರ ಮತ್ತು ಮದ್ದು-ಗುಂಡುಗಳನ್ನೂ ಪೂರೈಸಿದರು. ಆದರೆ ಏರಿದ ಯುದ್ಧ ಮೃತರ ಸಂಖ್ಯೆ, ಅತೀವ ಕರಭಾರದಿಂದ ಉಂಟಾದ ಹಣದುಬ್ಬರ, ಸಾಂಕ್ರಾಮಿಕ ಶೀತಜ್ವರದಿಂದ ಭಾರತದಲ್ಲಿ ಜೀವನ ಕಷ್ಟವಾಗುತ್ತಿತ್ತು. ಕಾಂಗ್ರೆಸ್ಸಿನ ಸೌಮ್ಯವಾದಿಗಳು ಮತ್ತು ಉಗ್ರವಾದಿಗಳು ಒಟ್ಟಾಗಿ ೧೯೧೬ರಲ್ಲಿ ಲಕ್ನೌ ಒಪ್ಪಂದಕ್ಕೆ ರಾಜಿಯಾದರು. ಇದರಡಿಯಲ್ಲಿ ಮುಸ್ಲಿಂ ಲೀಗ್ನೊಂದಿಗೆ ರಾಜಕೀಯ ಅಧಿಕಾರ ಹಂಚಿಕೆ ಹಾಗು ಭಾರತದಲ್ಲಿ ಇಸ್ಲಾಂ ಧರ್ಮದ ಸ್ಥಾನಗಳ ಬಗ್ಗೆ ತಾತ್ಕಾಲಿಕ ಒಪ್ಪಂದವೂ ಸೇರಿತ್ತು.
ಯುದ್ಧದ ಸಮಯದಲ್ಲಿ ಭಾರತವು ನೀಡಿದ ಬೆಂಬಲವನ್ನು ಗುರುತಿಸಿ ಮತ್ತು ನವೀಕರಿಸಿದ ರಾಷ್ಟ್ರೀಯ ಬೇಡಿಕೆಗಳಿಗೆ ಪ್ರತಿಕ್ರಿಯೆಯಾಗಿ ಬ್ರಿಟಿಷರು "ದಾನ ಮತ್ತು ದಂಡ" ನೀತಿಯನ್ನು ಅನುಸರಿಸಿದರು . ಅಗಸ್ಟ್ ೧೯೧೭ ರಲ್ಲಿ ಭಾರತಕ್ಕೆ ಸಂಬಂಧಪಟ್ಟ ಕಾರ್ಯದರ್ಶಿಯಾದ ( the secretary of state for India) ಎಡ್ವಿನ್ ಮಾಂಟೆಗ್ಯೂ ರವರು ಪಾರ್ಲಿಮೆಂಟಿನಲ್ಲಿ "ಬ್ರಿಟಿಷ್ ಸಾಮ್ರಾಜ್ಯದ ಅಭಿನ್ನ ಅಂಗವಾಗಿ ಜವಾಬ್ದಾರಿ ಆಡಳಿತವನ್ನು ಕ್ರಮೇಣ ಸಾಕಾರಗೊಳಿಸುವ ದೃಷ್ಟಿಯಿಂದ ಆಡಳಿತದ ಪ್ರತಿಯೊಂದು ವಿಭಾಗದಲ್ಲಿ ಭಾರತೀಯರೊಂದಿಗಿನ ಪಾಲುಗಾರಿಕೆಯನ್ನು ಹೆಚ್ಚಿಸುವದು ಮತ್ತು ಸ್ವ-ಆಡಳಿತದ ಸಂಸ್ಥೆಗಳನ್ನು ಕ್ರಮೇಣ ಅಭಿವೃದ್ಧಿಪಡಿಸುವದು ಭಾರತದಲ್ಲಿ ಬ್ರಿಟಿಷ್ ನೀತಿಯಾಗಿದೆ" ಎಂದು ಐತಿಹಾಸಿಕ ಘೋಷಣೆಯನ್ನು ಮಾಡಿದರು . ನಂತರ ೧೯೧೯ ರ ಗವರ್ನಮೆಂಟ್ ಆಫ್ ಇಂಡಿಯಾ ಆಕ್ಟ್ ಉದ್ದೇಶಿತ ಗುರಿಗಳನ್ನು ಸಾಧಿಸುವ ಕ್ರಮಗಳನ್ನು ಒಳಗೊಂಡಿತು. ಅದು ಆಡಳಿತದಲ್ಲಿ ಇಬ್ಬಗೆಯ ವಿಧಾನ ಅಥವಾ ದ್ವಿ-ಆಡಳಿತ ಪದ್ಧತಿಯನ್ನು ಪರಿಚಯಿಸಿತು. ಅದರಲ್ಲಿ ಜನರಿಂದ ಆಯ್ಕೆಯಾದ ಭಾರತೀಯ ವಿಧಾಯಕ ಸದಸ್ಯರೂ ಸರಕಾರದಿಂದ ನೇಮಿಸಲ್ಪಟ್ಟ ಬ್ರಿಟಿಷ್ ಅಧಿಕಾರಿಗಳೂ ಅಧಿಕಾರವನ್ನು ಹಂಚಿಕೊಳ್ಳಲಿದ್ದರು. ಈ ಕಾನೂನು ಕೇಂದ್ರ ಮತ್ತು ಪ್ರಾಂತೀಯ ಸಭೆಗಳನ್ನು ವಿಸ್ತರಿಸಿತು ಮತ್ತು ಹೆಚ್ಚು ಜನರಿಗೆ ಮತಾಧಿಕಾರ ನೀಡಿತು. ದ್ವಿ-ಆಡಳಿತ ಪದ್ಧತಿಯು ಪ್ರಾಂತೀಯ ಮಟ್ಟದಲ್ಲಿ ಕೆಲವು ನೈಜ ಬದಲಾವಣೆಗಳನ್ನು ಜಾರಿಗೊಳಿಸಿತು :ಕೃಷಿ , ಸ್ಥಳೀಯ ಆಡಳಿತ , ಆರೋಗ್ಯ, ಶಿಕ್ಷಣ ಮತ್ತು ಲೋಕೋಪಯೋಗಿ ಇಲಾಖೆಗಳಂತಹ ಅನೇಕ ವಿವಾದಾಸ್ಪದವಲ್ಲದ ಖಾತೆಗಳನ್ನು ಭಾರತೀಯರ ಕೈಗೊಪ್ಪಿಸಲಾಯಿತು, ಆದರೆ ಅದೇ ಸಮಯಕ್ಕೆ ಹಣಕಾಸು , ತೆರಿಗೆ ಮತ್ತು ಕಾನೂನು-ಸುವ್ಯವಸ್ಥೆಗಳಂತಹ ಸೂಕ್ಷ್ಮ ವಿಷಯಗಳನ್ನು ಪ್ರಾಂತೀಯ ಬ್ರಿಟಿಶ್ ಆಡಳಿತಗಾರರು ಉಳಿಸಿಕೊಂಡರು.
ರೌಲತ್ ಕಾಯ್ದೆ ಹಾಗೂ ನಂತರದ ಬೆಳವಣಿಗೆಸಂಪಾದಿಸಿ
ಮುಖ್ಯ ಲೇಖನ: ಅಸಹಕಾರ ಚಳುವಳಿ
ಸುಧಾರಣೆಯ ಧನಾತ್ಮಕ ಬೆಳವಣಿಗೆಯನ್ನು ೧೯೧೯ ರಲ್ಲಿ ರೌಲತ್ ಕಾಯ್ದೆ ಹದಗೆಡಿಸಿತು . "ರಾಜದ್ರೋಹಾತ್ಮಕ ಒಳಸಂಚಿ"ನ ವಿಚಾರಣೆಗೆ ನೇಮಕವಾದ ರೌಲಟ್ ಆಯೋಗವು ಹಿಂದಿನ ವರ್ಷ ಸಾಮ್ರಾಜ್ಯದ ಲೆಜಿಸ್ಲೇಟಿವ್ ಕೌನ್ಸಿಲ್ಲಿಗೆ ಮಾಡಿದ ಶಿಫಾರಸುಗಳನ್ನು ಇದು ಒಳಗೊಂಡಿದ್ದು ಅದೇ ಹೆಸರನ್ನು ಈ ಕಾಯ್ದೆಗೆ ಕೊಡಲಾಗಿತ್ತು. ಕರಾಳ ಕಾಯ್ದೆ ಎಂದೂ ಹೆಸರಾದ ಈ ಕಾಯ್ದೆಯು ರಾಜಗ್ರೋಹವನ್ನು ಬಗ್ಗು ಬಡಿಯುವದಕ್ಕಾಗಿ ಪತ್ರಿಕಾರಂಗವನ್ನು ತೆಪ್ಪಗಾಗಿಸುವದು, ರಾಜಕೀಯ ಕಾರ್ಯಕರ್ತರನ್ನು ವಿಚಾರಣೆಯಿಲ್ಲದೆ ಬಂಧನದಲ್ಲಿಡುವದು , ರಾಜದ್ರೋಹದ ಸಂಶಯಕ್ಕೊಳಗಾದ ಯಾವುದೇ ವ್ಯಕ್ತಿಯನ್ನು ವಾರಂಟಿಲ್ಲದೆ ಬಂಧಿಸುವದು ಇಂಥ ವಿಶೇಷಾಧಿಕಾರಗಳನ್ನು ವೈಸ್‍ರಾಯ್‍ಗೆ ನೀಡಿತು. ಇದನ್ನು ವಿರೋಧಿಸಿ ರಾಷ್ಟ್ರೀಯ ಹರತಾಳಕ್ಕೆ ಕರೆಕೊಡಲಾಯಿತು . ಇದು ದೇಶಾದ್ಯಂತವಲ್ಲವಾದರೂ, ಸಾಕಷ್ಟು ವ್ಯಾಪಕವಾದ ಜನರ ಅಸಹನೆಯ ಪ್ರಾರಂಭದ ಕುರುಹಾಗಿತ್ತು.
ಈ ಕಾಯ್ದೆಗಳಿಂದ ಆದ ಚಳುವಳಿಗಳು ೧೩ ಏಪ್ರಿಲ್ ೧೯೧೯ ರಂದು ಪಂಜಾಬಿನ ಅಮೃತಸರದಲ್ಲಿ ಅಮೃತಸರದ ನರಮೇಧ ( ಜಲಿಯನ್‍ವಾಲಾಬಾಗ್ ನರಮೇಧ ಎಂದೂ ಇದು ಹೆಸರಾಗಿದೆ) ದಲ್ಲಿ ಪರ್ಯವಸಾನವಾಯಿತು. ಬ್ರಿಟಿಷ್ ಸೈನ್ಯದ ಕಮಾಂಡರ್ ಆದ , ಬ್ರಿಗೇಡಿಯರ್-ಜನರಲ್ ರೆಜಿನಾಲ್ಡ್ ಡೈಯರ್ ನು ತನ್ನ ಸೈನಿಕರಿಗೆ ಸುಮಾರು ಹತ್ತು ಸಾವಿರದಷ್ಟಿದ್ದ ನಿಶ್ಶಸ್ತ್ರ ಮತ್ತು ಅಮಾಯಕ ಜನರ ಗುಂಪಿನ ಮೇಲೆ ಗುಂಡು ಹಾರಿಸಲು ಆಜ್ಞೆ ನೀಡಿದ. ಅವರು ಮಾರ್ಶಲ್ ಲಾ ಜಾರಿಯಾಗಿರುವ ಸಂಗತಿ ತಿಳಿಯದೆ, ಗೋಡೆಗಳಿಂದ ಆವೃತವಾದ ಜಾಲಿಯನ್‍ವಾಲಾ ಬಾಗ್ ಎಂಬ ತೋಟದಲ್ಲಿ ಸಿಖ್ ಹಬ್ಬವಾದ ಬೈಶಾಖಿಯನ್ನು ಆಚರಿಸಲು ಸಭೆಸೇರಿದ್ದರು. ಈ ಘಟನೆಯಲ್ಲಿ ಒಟ್ಟು ೧,೬೫೦ ಸುತ್ತು ಗುಂಡುಗಳನ್ನು ಹಾರಿಸಲಾಯಿತು; ೭೩೯ ಜನರು ಸತ್ತರು; ೧,೧೩೭ ಜನರು ಗಾಯಗೊಂಡರು. ಈ ಘಟನೆಯು ಯುದ್ಧಸಮಯದ ಸ್ವ-ಆಡಳಿತದ ಮತ್ತು ಸದ್ಭಾವನೆಯ ಆಶಯಗಳನ್ನು ಯುದ್ಧಾನಂತರದ ಉನ್ಮಾದಕರ ಪ್ರತಿಕ್ರಿಯೆಯಾಗಿ ಭಗ್ನಗೊಳಿಸಿತು.
ಗಾಂಧಿಯ ಉದಯಸಂಪಾದಿಸಿ
ಮುಖ್ಯ ಲೇಖನ: ಮಹಾತ್ಮಾ ಗಾಂಧಿ
ಭಾರತವು ಸ್ವರಾಜ್ಯ (ಸ್ವಯಂ ಆಡಳಿತ , ಕೆಲವೊಮ್ಮೆ ಹೋಂ-ರೂಲ್ ಎಂದೂ, ಸ್ವಾತಂತ್ರ್ಯ ಎಂದೂ ಅನುವಾದಿಸಲಾಗುತ್ತದೆ) ವನ್ನು ಗಳಿಸುವಲ್ಲಿ ಸಂಪೂರ್ಣವಾಗಿ ತನ್ನದೇ ಆದ ಮಾರ್ಗದ ಆಯ್ಕೆಗೆ ಬಹುಮಟ್ಟಿಗೆ ಮಹಾತ್ಮಾ ಗಾಂಧಿ ( ಮಹಾತ್ಮಾ ಎಂದರೆ ಮಹಾನ್ ಆತ್ಮವುಳ್ಳವನು ಎಂದರ್ಥ) ಯವರು ಕಾರಣ. ಗುಜರಾತಿನ ನಿವಾಸಿಯಾದ ಅವರು ಯುನೈಟೆಡ್ ಕಿಂಗ್‍ಡಂ ನಲ್ಲಿ ಶಿಕ್ಷಣ ಪಡೆದರು. ಅವರು ಕಡಿಮೆ ಕಕ್ಷಿಗಾರರನ್ನು ಹೊಂದಿದ್ದ ಹಿಂಜರಿಕೆ ಸ್ವಭಾವದ ವಕೀಲರಾಗಿದ್ದರು. ಬಹುಬೇಗನೆ ಅವರು ದಕ್ಷಿಣ ಆಫ್ರಿಕಾದಲ್ಲಿನ ಭಾರತೀಯ ಸಮಾಜದ ಪರವಾಗಿ ನ್ಯಾಯಬದ್ಧ ಕಾರಣಗಳಿಗಾಗಿ ಹೋರಾಟವನ್ನು ಕೈಗೆತ್ತಿಕೊಂಡುದರಿಂದ ಅವರ ವಕೀಲಿ ವೃತ್ತಿಯು ಅತಿ ಕಡಿಮೆ ಅವಧಿಯದ್ದಾಗಿತ್ತು. ೧೮೯೩ರಲ್ಲಿ ಗಾಂಧಿ ದಕ್ಷಿಣ ಆಫ್ರಿಕೆಯಲ್ಲಿ ಒಪ್ಪಂದಕ್ಕೊಳಪಟ್ಟು ಕೆಲಸಮಾಡುವ ಭಾರತೀಯ ಕಾರ್ಮಿಕರನ್ನು ಪ್ರತಿನಿಧಿಸಲು ಬಂದ ಆಹ್ವಾನವನ್ನು ಒಪ್ಪಿಕೊಂಡರು. ಅಲ್ಲಿ ಅವರು ಇಪ್ಪತ್ತಕ್ಕೂ ಹೆಚ್ಚು ವರ್ಷಗಳ ಕಾಲ ಜನಾಂಗೀಯ ಪಕ್ಷಪಾತ ವನ್ನು ವಿರೋಧಿಸುತ್ತ ವಾಸ ಮಾಡಿದರು. ಗಾಂಧಿಯವರ ಹೋರಾಟವು ಕೇವಲ ಮೂಲಭೂತ ಪಕ್ಷಪಾತ ಮತ್ತು ಕಾರ್ಮಿಕರ ಜತೆ ದುರ್ವ್ಯವಹಾರಗಳ ವಿರುದ್ಧ ಅಷ್ಟೇ ಆಗಿರದೆ ರೌಲತ್ ಕಾಯ್ದೆಗಳಂತಹ ದಮನಕಾರೀ ಪೋಲೀಸು ಕ್ರಮಗಳ ವಿರುದ್ಧವೂ ಆಗಿತ್ತು. ಅನೇಕ ತಿಂಗಳುಗಳ ಅಹಿಂಸಾತ್ಮಕ ಪ್ರತಿಭಟನೆ ಮತ್ತು ಸಾವಿರಾರು ಕರಾರುಕೂಲಿಗಳ ಬಂಧನದ ನಂತರ ದಕ್ಷಿಣ ಆಫ್ರಿಕೆಯ ಆಡಳಿತಗಾರನಾದ ಜನರಲ್ ಜನ್ ಸ್ಮಟ್ಸ್ ನು ಎಲ್ಲ ಕೈದಿಗಳನ್ನು ಬಿಡುಗಡೆ ಮಾಡಿ ದಮನಕಾರಿ ಕಾನೂನನ್ನು ರದ್ದು ಮಾಡಿದನು. ಇದು ಪುಕ್ಕಲುತನವನ್ನು ಒದ್ದೋಡಿಸಿ, ಧೈರ್ಯವನ್ನು ತುಂಬಿದ ಘಟನೆಯಾಗಿ ಪರಿಣಮಿಸಿ, ಈ ಯುವ ಭಾರತೀಯನಲ್ಲಿ ಕ್ರಾಂತಿಕಲೆಯ ರಕ್ತವನ್ನೂ ಮುಂದೆ ಮಹಾನ್ ಎಂದು ವಿಖ್ಯಾತವಾಗುವ ಆತ್ಮವನ್ನೂ ತುಂಬಿತು. ಈತನ ದಕ್ಷಿಣ ಆಫ್ರಿಕಾದ ಈ ವಿಜಯ, ತಾಯ್ನಾಡಿನ ಜನಗಳಲ್ಲಿ ಸಂತಸ ತುಂಬಿತು.
೧೯೧೫ರಲ್ಲಿ ಭಾರತಕ್ಕೆ ಹಿಂದಿರುಗಿದ ಈತ ಜನಕ್ಕೆ ಅಪರಿಚಿತನಾದರೂ, ದೇಶಭಕ್ತಿಯ ನವಭಾರತದ ಕನಸೊಂದನ್ನು ಕಟ್ಟಿಕೊಂಡಿದ್ದರು. ಆದರೆ, ಇಲ್ಲಿ ಗಮನಿಸತಕ್ಕ ವಿಷಯವೆಂದರೆ ಗಾಂಧಿಯವರು ಭಾರತದ ಜನತೆಯ ಸಮಸ್ಯೆಗಳಿಗೆ ಬ್ರಿಟಿಷ್ ಸಾಮ್ರಾಜ್ಯದಿಂದ ರಾಜಕೀಯ ಸ್ವಾತಂತ್ರ್ಯವೊಂದೇ ಉತ್ತರ ಎಂದು ಇನ್ನೂ ನಂಬಿರಲಿಲ್ಲ. ಹಿಂದಿರುಗಿದ ನಂತರ, ಸಾಮ್ರಾಜ್ಯದ ಪ್ರಜೆಯಾಗಿ, ಸ್ವಾತಂತ್ರ್ಯ ಹಾಗೂ ರಕ್ಷಣೆಯನ್ನು ಬಯಸುವವನು ದ್ವಿತೀಯ ವಿಶ್ವಯುದ್ಧದಲ್ಲಿ ಸಾಮ್ರಾಜ್ಯದ ರಕ್ಷಣೆಯಲ್ಲಿ ಭಾಗವಹಿಸದೆ ಇರುವುದು ಸರಿಯಲ್ಲ ಎಂದು ನೇರವಾಗಿಯೇ ಹೇಳಿದ್ದರು.
ಕಾಂಗ್ರೆಸ್ ಧುರೀಣರೂ ಹಿರಿಯ ನಾಯಕರೂ ಆಗಿದ್ದ ಗೋಪಾಲಕೃಷ್ಣ ಗೋಖಲೆಯವರು ಗಾಂಧಿಯವರ ಗುರುವಾದ ನಂತರ ಗಾಂಧಿಯವರು ವರ್ಷಗಟ್ಟಲೆ ದೇಶದ ಉದ್ದಗಲಕ್ಕೂ ಸಂಚರಿಸಿ, ಭಾರತದ ರಾಜ್ಯ-ನಗರ-ಹಳ್ಳಿಗಳೆಲ್ಲವನ್ನೂ ಸುತ್ತುತ್ತಾ ದೇಶದ ಹಾಗೂ ಜನರ ಸಂಸ್ಕೃತಿ, ರೀತಿ-ನೀತಿ, ಅವರ ಕುಂದು-ಕೊರತೆಗಳ ಬಗ್ಗೆ ತಿಳಿಯಲಾರಂಭಿಸಿದರು. ಗಾಂಧಿಯವರ ಅಹಿಂಸಾತ್ಮಕ ನಾಗರಿಕ ಅಸಹಕಾರದ ತತ್ವಾದರ್ಶಗಳು ಮೊದಮೊದಲು ಕೆಲ ಭಾರತೀಯರಿಗೆ ಹಾಗೂ ಧೀಮಂತ ಕಾಂಗ್ರೆಸ್ ನಾಯಕರಿಗೆ ಅಪ್ರಾಯೋಗಿಕವೆನಿಸಿದವು. ಗಾಂಧಿಯವರ ಮಾತಿನಲ್ಲೇ ಹೇಳುವುದಾದರೆ, "ನಾಗರಿಕ ಅಸಹಕಾರವೆಂದರೆ ಅನೈತಿಕ ಶಾಸನಾದೇಶಗಳ ಸಭ್ಯ ಖಂಡನೆ". ಆದರೆ ಅವರ ಯೋಚನೆಯಂತೆಯೇ ಅದನ್ನು ಅಹಿಂಸಾತ್ಮಕವಾಗಿ ಪಾಲಿಸಲು, ಭ್ರಷ್ಟ ಆಡಳಿತಕ್ಕೆ ಕೊಟ್ಟ ಸಹಕಾರವನ್ನು ಹಿಂಪಡೆಯಬೇಕಿತ್ತು. ಈ ನಿಟ್ಟಿನಲ್ಲಿ ಜನಜಾಗೃತಿ ಮೂಡಿಸುವಲ್ಲಿ ಗಾಂಧಿಯವರು ಸಫಲರಾಗಿದ್ದು ರೌಲತ್ ಕಾಯ್ದೆಯ ವಿರುದ್ಧ ಪಂಜಾಬಿನಲ್ಲಿ ನಡೆಸಿದ ಸತ್ಯಾಗ್ರಹ ಚಳುವಳಿಯ ಮೂಲಕ.
ಬಿಹಾರದ ಚಂಪಾರಣ್ಯದಲ್ಲಿ, ಕರಭಾರದಿಂದ ತತ್ತರಿಸುತ್ತಿದ್ದ ಕಡುಬಡವರಾದ ಬೇಸಾಯಗಾರರ, ತಿನ್ನುವ ಧಾನ್ಯವನ್ನೇ ಮಾರಿ ವಾಣಿಜ್ಯ ಬೆಳೆ ತೆಗೆಯಲು ಒತ್ತಾಯಕ್ಕೊಳಗಾದ ಭೂಮಿಯಿಲ್ಲದ ರೈತರ, ತಿನ್ನಲೂ ಸಾಲದಷ್ಟು ಸಂಬಳ ಪಡೆಯುತ್ತಿದ್ದವರ ಪರವಾಗಿ ಗಾಂಧಿ ನಿಂತರು. ಈ ಹೊತ್ತಿಗಾಗಲೇ ಭಾರತದ ಮೈಯನ್ನು ಮುಚ್ಚುತ್ತಿದ್ದ ಐರೋಪ್ಯ ಬಟ್ಟೆಗಳನ್ನವರು ಕಿತ್ತೆಸೆದು, ನಾಡು ನೇಯ್ಗೆಯ ಖಾದಿ ಧೋತ್ರಗಳನ್ನೂ ಹಾಗೂ ಮೇಲುಹೊದಿಕೆಯನ್ನೂ ಧರಿಸಲಾರಂಭಿಸಿದ್ದರು. ಈ ಅಂಕಣದ ಮೇಲ್ಭಾಗದಲ್ಲಿರುವ ಚಿತ್ರವೂ ಸೇರಿದಂತೆ ಅವರ ಪ್ರಖ್ಯಾತ ಚಿತ್ರಪಟಗಳಲ್ಲಿ ಇದನ್ನು ನಾವು ಕಾಣಬಹುದು.
ಈ ಸರಳ ಗಾಂಧಿ, ಕಣ್ಣಿಗೆ ಬೀಳುತ್ತಲೇ ಲಕ್ಷಾಂತರ ಬಡ ಶ್ರೀಸಾಮಾನ್ಯರಲ್ಲಿ ಮಿಂಚನ್ನು ಹಾಯಿಸುವಂತಾದರು. ವಿದೇಶದಲ್ಲಿ ಕಲಿತು ಹಿಂದಿರುಗಿದ ಇತರೆ ಬಿಂಕ ಕೊಂಕಿನ ದೊಡ್ಡ ಮನುಷ್ಯರಂತಾಗದೇ, ಅವರೊಳಗೊಬ್ಬರಾದರು. ಹೋದಲ್ಲೆಲ್ಲ ಗುಂಪುಗುಂಪಾಗಿ ಜನಸಾಮಾನ್ಯರನ್ನು ಸೆಳೆಯುತ್ತಿದ್ದ ಗಾಂಧಿಯವರನ್ನು ಪೋಲೀಸರು ಬಂಧಿಸಿದಾಗ, ರಾಜ್ಯದೆಲ್ಲೆಡೆ ತೀವ್ರ ಪ್ರತಿಭಟನೆಗಳು ಪ್ರಾರಂಭವಾದವು! ಅವರಿಗಿರುವ ಜನಸ್ತೋಮದ ಬೆಂಬಲಕ್ಕೆ ಬೆಬ್ಬಳಿಸಿದ ಬ್ರಿಟಿಷ್ ಆಡಳಿತ ಕಂಗೆಟ್ಟು ಅವರನ್ನು ಬಿಡುಗಡೆ ಮಾಡಲೇಬೇಕಾಯಿತು. ಅಲ್ಲದೆ, ರೈತರ ಆಯ್ಕೆಯ ಬೆಳೆಯನ್ನು ಬೆಳೆವ ಹಕ್ಕು, ಬೆಳೆದ ವಾಣೀಜ್ಯ ಬೆಳೆಗೆ ತಕ್ಕ ಬೆಲೆ ಮತ್ತು ಕ್ಷಾಮದಲ್ಲಿರುವಾಗ ಕರವಿಮುಕ್ತಿ ನೀಡಲೇಬೇಕೆಂಬ ಗಾಂಧಿಯವರ ಹಾಗೂ ಬಿಹಾರದ ರೈತರ ಬೇಡಿಕೆಗಳಿಗೆ ತಣ್ಣಗೆ ಒಪ್ಪಲೇಬೇಕಾಯಿತು. ಚಂಪಾರಣ್ಯದ ಅವರ ಗೆಲುವಿನೊಂದಿಗೆ ಗಾಂಧಿಯವರಿಗೆ ಮಹಾತ್ಮಾ ಎಂಬ ಹೆಸರು ಜನರಿಟ್ಟ ಅನ್ವರ್ಥನಾಮವಾಯಿತು. ಅದು ಪತ್ರಕರ್ತರಾಗಲೀ ರಾಜಕೀಯ ವೀಕ್ಷಕರಾಗಲೀ ಕೊಟ್ಟದ್ದಾಗಿರದೇ ಅವರು ಯಾರ ಪರ ಹೋರಾಡುತ್ತಿದ್ದರೋ ಆ ಲಕ್ಷಾಂತರ ಜನರು ಕೊಟ್ಟದ್ದಾಗಿತ್ತು.
೧೯೨೦ ರಲ್ಲಿ ಕಾಂಗ್ರೆಸ್ಸನ್ನು ಪುನರ್ ಸಂಘಟಿಸಲಾಯಿತು. ಸ್ವರಾಜ್ಯ(ಸ್ವಾತಂತ್ರ್ಯ) ವನ್ನು ಗುರಿಯಾಗಿ ಹೊಂದಿದ ಹೊಸ ಸಂವಿಧಾನವನ್ನು ರಚಿಸಲಾಯಿತು. ಸಾಂಕೇತಿಕ ಶುಲ್ಕವನ್ನು ಕೊಡಲು ಸಿದ್ಧರಿದ್ದ ಯಾರಿಗೇ ಆಗಲಿ ಸದಸ್ಯತ್ವವು ಮುಕ್ತವಾಯಿತು. ಹಂತ ಹಂತವಾದ ಸಮಿತಿಗಳನ್ನು ರಚಿಸಿ ಅವಕ್ಕೆ ಇಲ್ಲಿಯವರೆಗೆ ಬಿಡಿ-ಬಿಡಿಯಾಗಿದ ಸಣ್ಣ-ಪುಟ್ಟ ಚಳುವಳಿಗಳನ್ನು ನೀತಿ-ನಿಯಮಗಳಿಂದ ನಿಯಂತ್ರಿಸುವ ಭಾರವನ್ನು ವಹಿಸಲಾಯಿತು. ಕಾಂಗ್ರೆಸ್ ಪಾಳೆಯವು ಧೀಮಂತರ ಸಂಸ್ಥೆಯಿಂದ ದೇಶವ್ಯಾಪೀ ಜನರು ಭಾಗವಹಿಸುವ ಸಂಘಟನೆಯಾಯಿತು.
ಪ್ರತಿಭಟನೆಗಳು ಬ್ರಿಟಿಷರ ವಿರುದ್ಧವಾಗಿರದೆ ವಿದೇಶೀ ಅನ್ಯಾಯದ ಆಳ್ವಿಕೆಯ ವಿರುದ್ಧವಾಗಿರಬೇಕೆಂದು ಗಾಂಧಿಯವರು ಸದಾ ಒತ್ತಿ ಹೇಳುತ್ತಿದ್ದರು. ಬ್ರಿಟಿಷ್ ಅಧಿಕಾರಿಗಳೂ ಮನುಷ್ಯರೇ; ಬೇರೆ ಭಾರತೀಯರೋ ಅಥವಾ ಇತರ ಜನರಂತೆಯೇ ಅಸಹಿಷ್ಣುತೆ,ವರ್ಣಭೇದ ಹಾಗೂ ಕ್ರೌರ್ಯದಂತಹ ತಪ್ಪು ಮಾಡುವುದರಲ್ಲಿ ಅಚ್ಚರಿಯೇನು ಎಂಬುದು ಅವರ ವಾದ. ಅವರ ಆ ಪಾಪಗಳಿಗೆ ಶಿಕ್ಷೆ ನೀಡುವುದು ದೇವರ ಕೆಲಸವೇ ಹೊರತು ಸ್ವರಾಜ್ಯ ಚಳುವಳಿಯದಲ್ಲ ಎಂದವರು ನಂಬಿದ್ದರು. ಆದರೆ ಸಮಾಜಕಂಟಕ ರಾಜ್ಯದಾಹಿಗಳಿಂದ ೩೫ ಕೋಟಿ ಜನರನ್ನು ಮುಕ್ತಗೊಳಿಸುವುದು ಮಾತ್ರ ಚಳುವಳಿಯ ಧ್ಯೇಯವಾಗಿತ್ತು.
ಗಾಂಧಿ ತಮ್ಮ ಮೊದಲ ದೇಶದುದ್ದಗಲದ ಸತ್ಯಾಗ್ರಹದಲ್ಲಿ ಜನರನ್ನು ಬ್ರಿಟಿಷ್ ಶಿಕ್ಷಣಸಂಸ್ಥೆಗಳನ್ನು, ನ್ಯಾಯಾಲಯಗಳನ್ನು ಮತ್ತು ಉತ್ಪನ್ನಗಳನ್ನು ಬಹಿಷ್ಕರಿಸಲು, ಸರಕಾರದ ನೌಕರಿಗಳಿಗೆ ರಾಜೀನಾಮೆ ಕೊಡಲು,ತೆರಿಗೆಗಳನ್ನು ಕೊಡದಿರಲು ಮತ್ತು ಬ್ರಿಟಿಷ್ ಬಿರುದು ಮತ್ತು ಪ್ರಶಸ್ತಿಗಳನ್ನು ತ್ಯಜಿಸಲು ಒತ್ತಾಯಿಸಿದರು. ಇದು ೧೯೧೯ ರ ಹೊಸ ಗವರ್ನ್‍ಮೆಂಟ್ ಆಫ್ ಇಂಡಿಯಾ ಆಕ್ಟ್ ನ ಮೇಲೆ ಪ್ರಭಾವ ಬೀರಲು ಬಹಳ ತಡವಾಗಿತ್ತಾದರೂ ಈ ಚಳುವಳಿಯ ಫಲಸ್ವರೂಪವಾದ ಅವ್ಯವಸ್ಥೆಯು ಅಭೂತಪೂರ್ವವಾಗಿದ್ದು, ಸರಕಾರಕ್ಕೆ ಹೊಸ ಸವಾಲನ್ನು ಒಡ್ಡಿತು. ಭಾರತದ ಪ್ರತಿಯೊಂದು ಭಾಗದ ಸಾವಿರಾರು ಹಳ್ಳಿ ಪಟ್ಟಣಗಳಲ್ಲಿ ಒಂದು ಕೋಟಿಗೂ ಹೆಚ್ಚಾದ ಜನರು ಗಾಂಧಿಯವರ ನಿರ್ದೇಶನಗಳಿಗನುಸಾರವಾಗಿ ಪ್ರತಿಭಟಿಸಿದರು. ಆದರೆ ಚೌರಿ ಚೌರಾದಲ್ಲಿ ಕೆಲವು ಪ್ರತಿಭಟನೆಗಾರರ ಗುಂಪಿನಿಂದ ಪೋಲೀಸರ ಘೋರಹತ್ಯೆಯಿಂದಾಗಿ ಗಾಂಧಿ ಒಂದು ಕಠಿಣ ನಿರ್ಧಾರ ಕೈಗೊಂಡು ಚಳುವಳಿಯನ್ನು ೧೯೨೨ರಲ್ಲಿ ಹಿಂದಕ್ಕೆ ಪಡೆದರು.
ಈ ಘಟನೆಯಿಂದ ಬಲು ಖಿನ್ನರಾದ ಗಾಂಧಿಯವರು, ಮುಂದಾಗಬಹುದಾದ ಅನಾಹುತಗಳನ್ನು ಮನಗಂಡರು. ಇಲ್ಲಿಯಂತೆಯೇ ದೇಶದ ಇತರ ಭಾಗಗಳಲ್ಲಿಯೂ ಪ್ರತಿಭಟನಾಕಾರರ ಗುಂಪುಗಳ ಸಹನೆಯ ಕಟ್ಟೆಯೊಡೆದು, ರಾಷ್ಟ್ರೀಯ ಸ್ವಾತಂತ್ರ್ಯ ಸಂಗ್ರಾಮವು ಬ್ರಿಟಿಷರನ್ನು ಕಗ್ಗೊಲೆಗೈಯುವ ರಕ್ತದೋಕುಳಿಯ ದೊಂಬಿ-ಗಲಭೆಗಳ ಮಟ್ಟಕ್ಕಿಳಿದುಹೋಗಬಹುದೆಂದೂ, ಅದನ್ನು ಹತ್ತಿಕ್ಕಲು ಬ್ರಿಟಿಷರು ಅಮಾಯಕ ನಾಗರಿಕರ ಮೇಲೆ ಬಲಪ್ರಯೋಗ ಮಾಡಬಹುದೆಂದೂ ಅವರಿಗೆ ತಿಳಿದಿತ್ತು. ಭಾರತೀಯರಿಗೆ ಮತ್ತಷ್ಟು ಶಿಸ್ತು ಸಂಯಮಗಳು ಬೇಕಿದೆಯಲ್ಲದೆ, ಪ್ರತಿಭಟನೆಯ ಉದ್ದೇಶ ಬ್ರಿಟಿಷರನ್ನು ಶಿಕ್ಷಿಸುವುದಾಗಿರದೆ, ಅವರ ದಬ್ಬಾಳಿಕೆ ಹಾಗೂ ಭೇದೋಪಾಯಗಳ ಹಿಂದಿನ ಕ್ರೌರ್ಯ ಮತ್ತು ಕೆಟ್ಟತನವನ್ನು ಜಗತ್ತಿಗೆ ತೋರಿಸುವುದು ಎಂದೂ ಭಾರತೀಯರು ಅರಿಯಬೇಕಿದೆ ಎಂಬುದು ಗಾಂಧಿಯವರ ಅಭಿಪ್ರಾಯವಾಗಿತ್ತು. ಭಾರತವನ್ನು ವಿಮುಕ್ತಗೊಳಿಸುವುದರೊಡನೆ, ಬ್ರಿಟಿಷರನ್ನು ಸುಧಾರಣೆಗೊಳಪಡಿಸುವುದೂ, ಅವರನ್ನು ಸ್ನೇಹಿತರಂತೆ ಕಾಣುವುದೂ, ಜೊತೆಗೆ ಜಗತ್ತಿನೆಲ್ಲೆಡೆ ಜನಾಂಗೀಯ ಭೇದ ಮತ್ತು ಸಾಮ್ರಾಜ್ಯದಾಹವನ್ನು ಬಗ್ಗುಬಡಿಯುವುದು ಅವರ ಉದ್ದೇಶಗಳಾಗಿದ್ದವು.
ಅವರನ್ನು ೧೯೨೨ರಲ್ಲಿ ಆರು ವರ್ಷಗಳ ಬಂಧನಕ್ಕೊಳಪಡಿಸಲಾಯಿತಾದರೂ, ಎರಡು ವರ್ಷಗಳಿಗೆ ಬಿಡುಗಡೆಯಾಯಿತು. ಅನಂತರ, ಅವರು ಅಹಮದಾಬಾದ್‍ನ ಸಾಬರಮತಿ ನದೀತಟದಲ್ಲಿ ಸಾಬರಮತಿ ಆಶ್ರಮವನ್ನೂ, ಯಂಗ್ ಇಂಡಿಯಾ ಪತ್ರಿಕೆಯನ್ನೂ ಆರಂಭಿಸಿದರು. ಜೊತೆಗೆ, ಹಿಂದೂ ಸಮಾಜದ ಹಿಂದುಳಿದ ವರ್ಗಗಳಾದ ಅಸ್ಪೃಶ್ಯರು ಹಾಗೂ ಗ್ರಾಮೀಣ ಬಡವರಿಗೆ ತಲುಪುವ ಸುಧಾರಣೆಗಳ ಸರಣಿಗಳನ್ನೇ ಉದ್ಘಾಟಿಸಿದರು.
ಕಾಂಗ್ರೆಸ್ ನ ಉದಯೋನ್ಮುಖ ನಾಯಕರಾದ -- ಸಿ. ರಾಜಗೋಪಾಲಾಚಾರಿ (ರಾಜಾಜಿ), ಜವಹರಲಾಲ್ ನೆಹರು, ವಲ್ಲಭಭಾಯ್ ಪಟೇಲ್, ಮತ್ತಿತರರು -- ರಾಷ್ಟ್ರೀಯತಾವಾದವನ್ನು ರೂಪಿಸುವಲ್ಲಿ ಗಾಂಧಿಯವರ ಮುಂದಾಳುತನವನ್ನು ಎತ್ತಿಹಿಡಿದು ಬೆಂಬಲಿಸಿದರು. ೧೯೨೦ರ ದಶಕದ ಮಧ್ಯದಲ್ಲಿ ಸ್ವರಾಜ್ಯ ಪಕ್ಷ, ಹಿಂದೂ ಮಹಾಸಭಾ, ಭಾರತೀಯ ಕಮ್ಯುನಿಸ್ಟ್ ಪಕ್ಷ ಮತ್ತು ರಾಷ್ಟ್ರೀಯ ಸ್ವಯಂಸೇವಕ ಸಂಘ ದಂತಹ ಸೌಮ್ಯವಾದೀ ಹಾಗೂ ತೀವ್ರವಾದೀ ಪಕ್ಷಗಳ ಉದಯದಿಂದ ಭಾರತದ ರಾಜಕೀಯ ವ್ಯಾಪ್ತಿ ಹಿರಿದಾಯಿತು. ಪ್ರಾದೇಶಿಕ ರಾಜಕೀಯ ಸಂಸ್ಥೆಗಳೂ ಮದ್ರಾಸಿನಲ್ಲಿ ಅಬ್ರಾಹ್ಮಣರ, ಮಹಾರಾಷ್ಟ್ರದಲ್ಲಿ ಮಹರ್ ಗಳ ಹಾಗೂ ಪಂಜಾಬದಲ್ಲಿ ಸಿಖ್ಖರ ಭಾವನೆಗಳನ್ನು ಪ್ರತಿನಿಧಿಸುವುದನ್ನು ಮುಂದುವರೆಸಿದವು.
ದಂಡೀಯಾತ್ರೆ ಮತ್ತು ಅಸಹಕಾರ ಚಳುವಳಿಸಂಪಾದಿಸಿ
ಮುಖ್ಯ ಲೇಖನ: ಉಪ್ಪಿನ ಸತ್ಯಾಗ್ರಹ
ಉಪ್ಪಿನ ಸತ್ಯಾಗ್ರಹದ ದಂಡಿ ಯಾತ್ರೆಯ ಪ್ರಾರಂಭದ ಮುಂಚಿನ ಒಂದು ದೃಶ್ಯ
ಸೈಮನ್ ಆಯೋಗದ ಶಿಫಾರಸುಗಳ ತಿರಸ್ಕಾರದ ನಂತರ ಮುಂಬೈ ನಗರದಲ್ಲಿ ಮೇ ೧೯೨೮ರಲ್ಲಿ ಒಂದು ಸರ್ವ ಪಕ್ಷಗಳ ಸಭೆಯನ್ನು ಆಯೋಜಿಸಲಾಯಿತು. ಅಲ್ಲಿ ಮೋತಿಲಾಲ್ ನೆಹರೂರವರ ನೇತೃತ್ವದಲ್ಲಿ ಸಂವಿಧಾನದ ಒಂದು ಕರಡು ಪ್ರತಿಯನ್ನು ತಯಾರಿಸಲು ಸಮಿತಿಯನ್ನು ನೇಮಕ ಮಾಡಲಾಯಿತು. ನಂತರ ಕಲ್ಕತ್ತೆಯಲ್ಲಿ ನಡೆದ ಭಾರತೀಯ ರಾಷ್ಟ್ರೀಯ ಕಾಂಗ್ರೆಸ್ಸಿನ ಅಧಿವೇಶನದಲ್ಲಿ ಡಿಸೆಂಬರ್ ೧೯೨೯ರ ಒಳಗೆ ಭಾರತಕ್ಕೆ ಸ್ವಾತಂತ್ರ್ಯ ನೀಡಬೇಕೆಂದು ಆಗ್ರಹಿಸಲಾಯಿತು. ಹೀಗಾಗದಿದ್ದಲ್ಲಿ ರಾಷ್ಟ್ರೀಯ ಮಟ್ಟದಲ್ಲಿ ಸಾರ್ವಜನಿಕ ಅಸಹಕಾರ ಚಳುವಳಿ ನಡೆಸಲಾಗುವುದೆಂದು ತಿಳಿಸಲಾಯಿತು.
ಭಾರತ ರಾಷ್ಟ್ರೀಯ ಕಾಂಗ್ರೆಸ್ಸು ಡಿಸೆಂಬರ್ ೧೯೨೯ ರ ತನ್ನ ಐತಿಹಾಸಿಕ ಲಾಹೋರ್ ಅಧಿವೇಶನದಲ್ಲಿ , ಜವಾಹರಲಾಲ್ ನೆಹರು ಅವರ ಅಧ್ಯಕ್ಷತೆಯಲ್ಲಿ , ಬ್ರಿಟಿಷರಿಂದ ಸಂಪೂರ್ಣ ಸ್ವಾತಂತ್ರ್ಯ ಗಳಿಸುವ ಕುರಿತು ಗೊತ್ತುವಳಿಯೊಂದನ್ನು ಅಂಗೀಕರಿಸಿತು. ಅದು ದೇಶಾದ್ಯಂತ ನಾಗರಿಕ ಅಸಹಕಾರ ಚಳುವಳಿಯನ್ನು ಆರಂಭಿಸಲು ಕಾರ್ಯಕಾರಿ ಸಮಿತಿಗೆ ಅಧಿಕಾರ ನೀಡಿತು.೨೬ ಜನವರಿ ೧೯೩೦ ಅನ್ನು ಪೂರ್ಣ ಸ್ವರಾಜ್ಯ ದಿನ ಎಂದು ದೇಶಾದ್ಯಂತ ಆಚರಿಸಲು ನಿರ್ಧರಿಸಲಾಯಿತು. ಭಾರತದ ಅನೇಕ ವೈವಿಧ್ಯಮಯ ರಾಜಕೀಯ ಪಕ್ಷಗಳು ಮತ್ತು ಕ್ರಾಂತಿಕಾರಿಗಳು ಆ ದಿನವನ್ನು ಅಭಿಮಾನ ಗೌರವಗಳಿಂದ ಆಚರಿಸಲು ಸಿದ್ಧವಾದರು .
ದೀರ್ಘಕಾಲದ ಏಕಾಂತವನ್ನು ಮುರಿದ ಗಾಂಧಿಯವರು, ೧೯೩೦ ರ ಮಾರ್ಚ್ ೧೨ ಮತ್ತು ಏಪ್ರಿಲ್ ೬ ರ ನಡುವೆ ಅಹಮದಾಬಾದ್ ನ ತಮ್ಮ ನೆಲೆಯಿಂದ ಸುಮಾರು ೪೦೦ ಕಿ.ಮೀ ದೂರದ ದಂಡಿ ವರೆಗೆ ಗುಜರಾತ್ ನ ಕಡಲತೀರದುದ್ದಕ್ಕೆ ತಮ್ಮ ಪ್ರಸಿದ್ಧ ಪಾದಯಾತ್ರೆಯನ್ನು ಕೈಗೊಂಡರು. ಉಪ್ಪಿನ ಮೇಲಿನ ಬ್ರಿಟಿಷರ ತೆರಿಗೆಗಳನ್ನು ಪ್ರತಿಭಟಿಸಿ , ದಂಡಿಯಲ್ಲಿ ಅವರು ಮತ್ತು ಅವರ ಸಾವಿರಾರು ಅನುಯಾಯಿಗಳು ಸಮುದ್ರದ ನೀರಿನಿಂದ ತಮ್ಮದೇ ಉಪ್ಪನ್ನು ತಯಾರಿಸಿ ಕಾನೂನನ್ನು ಮುರಿದರು . ಈ ನಡಿಗೆಯು ದಂಡಿ ಯಾತ್ರೆ ಅಥವಾ 'ಉಪ್ಪಿನ ಸತ್ಯಾಗ್ರಹ' ಎಂದು ಪ್ರಸಿದ್ಧವಾಗಿದೆ.
ಏಪ್ರಿಲ್ ೧೯೩೦ ರಲ್ಲಿ ಕಲ್ಕತ್ತಾ ದಲ್ಲಿ ಪೋಲೀಸರು ಮತ್ತು ಜನರ ನಡುವೆ ಹಿಂಸಾತ್ಮಕ ಘರ್ಷಣೆಗಳು ಸಂಭವಿಸಿದವು. ೧೯೩೦-೩೧ ರ ನಾಗರಿಕ ಅಸಹಕಾರ ಆಂದೋಲನದ ಕಾಲಕ್ಕೆ ಸುಮಾರು ಒಂದು ಲಕ್ಷ ಜನರನ್ನು ಬಂಧನದಲ್ಲಿಡಲಾಯಿತು. ಪೇಷಾವರದಲ್ಲಿ ಕಿಸ್ಸಾ ಖ್ವಾನೀ ಬಝಾರ್ ಹತ್ಯಾಕಾಂಡ ದಲ್ಲಿ ನಿಶ್ಶಸ್ತ್ರ ಪ್ರದರ್ಶನಕರರ ಮೇಲೆ ಗುಂಡು ಹಾರಿಸಲಾಯಿತು. ಗಾಂಧಿಯವರು ಜೈಲಿನಲ್ಲಿದ್ದಾಗ ಲಂಡನ್ನಿನಲ್ಲಿ ೧೯೩೦ ರ ನವೆಂಬರಿನಲ್ಲಿ ಮೊದಲ ದುಂಡು ಮೇಜಿನ ಪರಿಷತ್ತು ನಡೆಯಿತು . ಅದರಲ್ಲಿ ಭಾರತ ರಾಷ್ಟ್ರೀಯ ಕಾಂಗ್ರೆಸ್ಸಿನ ಪ್ರಾತಿನಿಧ್ಯ ಇರಲಿಲ್ಲ . ಸತ್ಯಾಗ್ರಹದಿಂದುಂಟಾದ ಅರ್ಥಿಕ ಸಂಕಷ್ಟಗಳಿಂದಾಗಿ ಕಾಂಗ್ರೆಸ್ಸಿನ ಮೇಲಿನ ನಿಷೇಧವನ್ನು ತೆಗೆದುಹಾಕಲಾಯಿತು. ಗಾಂಧಿ ಮತ್ತು ಕಾಂಗ್ರೆಸ್ ಕಾರ್ಯಕಾರಿ ಸಮಿತಿಯ ಇತರ ಸದಸ್ಯರನ್ನು ಜೈಲಿನಿಂದ ೧೯೩೧ ರ ಜನವರಿಯಲ್ಲಿ ಬಿಡುಗಡೆ ಮಾಡಲಾಯಿತು.
೧೯೩೧ರ ಮಾರ್ಚಿನಲ್ಲಿ ಗಾಂಧಿ-ಇರ್ವಿನ್ ಒಪ್ಪಂದ ಕ್ಕೆ ಸಹಿಬಿದ್ದು ಸರಕಾರವು ಎಲ್ಲ ರಾಜಕೀಯ ಕೈದಿಗಳನ್ನು ಬಿಡುಗಡೆಮಾಡಲು ಒಪ್ಪಿತು. ಪ್ರತಿಯಾಗಿ ಗಾಂಧಿಯವರು ನಾಗರಿಕ ಅಸಹಕಾರ ಆಂದೋಲನವನ್ನು ಮುಂದುವರಿಸದಿರಲು ಮತ್ತು ಎರಡನೇ ದುಂಡು ಮೇಜಿನ ಪರಿಷತ್ತಿನಲ್ಲಿ ಕಾಂಗ್ರೆಸ್ಸಿನ ಏಕೈಕ ಪ್ರತಿನಿಧಿಯಾಗಿ ಭಾಗವಹಿಸಲು ಒಪ್ಪಿದರು. ಆ ಪರಿಷತ್ತು ೧೯೩೧ರ ಸೆಪ್ಟೆಂಬರಿನಲ್ಲಿ ಲಂಡನ್ನಿನಲ್ಲಿ ಸಭೆ ಸೇರಿತು. ಆದರೆ ಪರಿಷತ್ತು ೧೯೩೧ರ ಡಿಸೆಂಬರಿನಲ್ಲಿ ವಿಫಲವಾಯಿತು. ೧೯೩೨ ರ ಜನವರಿಯಲ್ಲಿ ಗಾಂಧಿಯವರು ಭಾರತಕ್ಕೆ ಮರಳಿ ನಾಗರಿಕ ಅಸಹಕಾರ ಆಂದೋಲನವನ್ನು ಮುಂದುವರೆಸಲು ನಿರ್ಧರಿಸಿದರು.
ಮುಂದಿನ ಅನೇಕ ವರ್ಷ ಕಾಲ , ೧೯೩೫ರಲ್ಲಿ ಗವರ್ನಮೆಂಟ್ ಆಫ್ ಇಂಡಿಯಾ ಅಕ್ಟ್ ಸಿದ್ಧವಾಗುವ ವರೆಗೆ, ಸರಕಾರ ಮತ್ತು ಕಾಂಗ್ರೆಸ್ ಆಗಾಗ ಮಾತುಕತೆ ಹಾಗು ಸಂಘರ್ಷಗಳಲ್ಲಿ ತೊಡಗಿದವು. ಅಷ್ಟು ಹೊತ್ತಿಗೆ ಕಾಂಗ್ರೆಸ್ ಮತ್ತು ಮುಸ್ಲಿಂ ಲೀಗುಗಳ ಮಧ್ಯದ ಕಂದರವು ಮತ್ತೆ ಸೇರಿಸಲಾಗದಷ್ಟು ಅಗಲವಾಗಿತ್ತು. ಎರಡೂ ಪಕ್ಷಗಳು ಒಂದನ್ನೊಂದು ಕಟುವಾಗಿ ಟೀಕಿಸುತ್ತಿದ್ದವು. ಭಾರತದ ಎಲ್ಲ ಜನತೆಯನ್ನು ಪ್ರತಿನಿಧಿಸುವದಾಗಿ ಕಾಂಗ್ರೆಸ್ ಹೇಳಿಕೊಳ್ಳುವದನ್ನು ಮುಸ್ಲಿಂ ಲೀಗೂ, ಭಾರತದ ಎಲ್ಲ ಮುಸ್ಲಿಂ ಜನತೆಯನ್ನು ಪ್ರತಿನಿಧಿಸುವದಾಗಿ ಮುಸ್ಲಿಂ ಲೀಗ್ ಹೇಳಿಕೊಳ್ಳುವದನ್ನು ಕಾಂಗ್ರೆಸ್ಸೂ ಪ್ರಶ್ನಿಸುತ್ತಿದ್ದವು.

ಕಾಮೆಂಟ್‌ಗಳಿಲ್ಲ:
ಕಾಮೆಂಟ್ ಪೋಸ್ಟ್ ಮಾಡಿ