ರಾಷ್ಟ್ರೀಯ ವೀಕ್ಷಕರಾಗಿ 12 ಒಲಿಂಪಿಯನ್ಗಳ ನೇಮಕ
ನವದೆಹಲಿ: ದೇಶದ ಕ್ರೀಡಾ ಕ್ಷೇತ್ರದ ಸುಧಾರಣೆಗಾಗಿ ಸುದೀರ್ಘ ಅವಧಿಯ ಯೋಜನೆ ರೂಪಿಸಲು ಮತ್ತು ಅನುಷ್ಠಾನಗೊಳಿಸಲು 12 ಮಂದಿ ಮಾಜಿ ಒಲಿಂಪಿಯನ್ ಕ್ರೀಡಾಪಟುಗಳನ್ನು ರಾಷ್ಟ್ರೀಯ ವೀಕ್ಷಕರನ್ನಾಗಿ ಕೇಂದ್ರ ಸರ್ಕಾರವು ನೇಮಕ ಮಾಡಿದೆ.
ಬೀಜಿಂಗ್ ಒಲಿಂಪಿಕ್ಸ್‌ನ ಶೂಟಿಂಗ್‌ನಲ್ಲಿ ಚಿನ್ನದ ಪದಕ ಗೆದ್ದಿದ್ದ ಅಭಿನವ್ ಬಿಂದ್ರಾ, ಅಥ್ಲೀಟ್‌ಗಳಾದ ಪಿ.ಟಿ. ಉಷಾ, ಅಂಜು ಬಾಬಿ ಜಾರ್ಜ್, ಆರ್ಚರಿಪಟು ಸಂಜೀವಕುಮಾರ್ ಸಿಂಗ್, ಬ್ಯಾಡ್ಮಿಂಟನ್ ಆಟಗಾರ್ತಿ ಅಪರ್ಣಾ ಪೋಪಟ್, ಬಾಕ್ಸರ್ ಎಂ.ಸಿ. ಮೇರಿ ಕೋಮ್, ಅಖಿಲ್ ಕುಮಾರ್, ಹಾಕಿ ಪಟು ಜಗಬೀರ್ ಸಿಂಗ್, ಟೆನಿಸ್ ಪಟು ಸೋಮದೇವ ದೇವವರ್ಮನ್, ವೇಟ್‌ಲಿಫ್ಟರ್ ಕರ್ಣಂ ಮಲ್ಲೇಶ್ವರಿ, ಕುಸ್ತಿಪಟು ಸುಶೀಲ್ ಕುಮಾರ್, ಫುಟ್ ಬಾಲ್ ಆಟಗಾರ ಐ.ಎಂ. ವಿಜಯನ್ , ಈಜುಪಟು ಖಜಾನ್ ಸಿಂಗ್ ಮತ್ತು ಟೇಬಲ್ ಟೆನಿಸ್ ಆಟಗಾರ ಕಮಲೇಶ್ ಮೆಹ್ತಾ ಅವರನ್ನು ನೇಮಕ ಮಾಡಲಾಗಿದೆ.
'ರಾಷ್ಟ್ರೀಯ ವೀಕ್ಷಕರು ದೇಶದಲ್ಲಿ ಕ್ರೀಡೆಯ ಅಭಿವೃದ್ಧಿಗಾಗಿ ರೂಪುರೇಷೆ ರಚಿಸುವಲ್ಲಿ ಕೇಂದ್ರ ಸರ್ಕಾರ, ಭಾರತೀ ಯ ಕ್ರೀಡಾ ಪ್ರಾಧಿಕಾರ (ಸಾಯ್), ರಾಷ್ಟ್ರೀಯ ಕ್ರೀಡಾ ಫೆಡ ರೇಷನ್‌ಗಳು , ಮತ್ತು ಭಾರತೀಯ ಒಲಿಂಪಿಕ್ಸ್ ಸಂಸ್ಥೆ (ಐಒಎ) ಗಳಿಗೆ ನೆರವು ನೀಡಲಿದ್ದಾರೆ’ ಎಂದು ಕೇಂದ್ರ ಕ್ರೀಡಾ ಸಚಿವಾಲಯದ ಪ್ರಕಟಣೆಯಲ್ಲಿ ತಿಳಿಸಲಾಗಿದೆ.
‘ತಂಡಗಳ ಆಯ್ಕೆ, ರಾಷ್ಟ್ರೀಯ ತರಬೇತಿ ಶಿಬಿರಗಳ ಆಯೋಜನೆ, ಅಥ್ಲೀಟ್‌ಗಳ ಕೌಶಲ್ಯ ಅಭಿವೃದ್ಧಿಗಾಗಿ ದೀರ್ಘ ಮಾದರಿಯ ಯೋಜನೆ, ತರಬೇತುದಾರರು, ತಾಂತ್ರಿಕ ಅಧಿಕಾರಿಗಳಿಗೆ ತರಬೇತಿ ಮತ್ತು ನಿರ್ವಹಣೆ, ಅಥ್ಲೀಟ್‌ಗಳ ಸಾಧನೆ ಗಳ ಮೌಲ್ಯ ಮಾಪನದಂತಹ ಕಾರ್ಯಗಳನ್ನೂ ವೀಕ್ಷಕರು ನಿರ್ವಹಿಸಲಿದ್ದಾರೆ’ ಎಂದು ಪ್ರಕಟಣೆ ಯಲ್ಲಿ ತಿಳಿಸಲಾಗಿದೆ. 2020, 2024 ಮತ್ತು 2028ರ ಒಲಿಂಪಿಕ್ಸ್ ಕೂಟಗಳಿಗೆ ಈಗಿನಿಂದಲೇ ಸಿದ್ಧತೆ ಆರಂಭಿಸಲು ವೀಕ್ಷಕರು ಯೋಜನೆ ರೂಪಿಸಲಿದ್ದಾರೆ.
ಕಾಮೆಂಟ್‌ಗಳಿಲ್ಲ:
ಕಾಮೆಂಟ್ ಪೋಸ್ಟ್ ಮಾಡಿ