ವಿಶ್ವದ ಅತ್ಯಂತ ವೇಗವಾಗಿ ಬೆಳೆಯುತ್ತಿರುವ ಧರ್ಮ ಇಸ್ಲಾಮ್
ವಾಶಿಂಗ್ಟನ್, ಮಾ. 20: ಇಸ್ಲಾಮ್ ಜಗತ್ತಿನ ಅತ್ಯಂತ ವೇಗವಾಗಿ ಬೆಳೆಯುತ್ತಿರುವ ಧರ್ಮವಾಗಿದೆ; ಮುಸ್ಲಿಮ್ ಬಾಹುಳ್ಯದ ದೇಶಗಳಲ್ಲಿ ಮಾತ್ರವಲ್ಲದೆ, 2050ರ ವೇಳೆಗೆ 10 ಶೇಕಡ ಯುರೋಪಿಯನ್ನರು ಇಸ್ಲಾಂನ ಅನುಯಾಯಿಗಳಾಗಿರುತ್ತಾರೆ ಎಂದು ಇತ್ತೀಚಿನ ಪಿವ್ ರಿಸರ್ಚ್ ಸೆಂಟರ್‌ನ ಸಂಶೋಧನೆಯೊಂದು ತಿಳಿಸಿದೆ.
2010 ಮತ್ತು 2050ರ ನಡುವಿನ ಅವಧಿಯಲ್ಲಿ, ಮುಸ್ಲಿಮರ ಸಂಖ್ಯೆ ಜಗತ್ತಿನಾದ್ಯಂತ 73 ಶೇಕಡದಷ್ಟು ಹೆಚ್ಚಲಿದೆ ಎಣದಯ ಸಂಶೋಧನಾ ವರದಿ ಹೇಳಿದೆ. ನಂತರದ ಸ್ಥಾನದಲ್ಲಿ ಕ್ರೈಸ್ತ ಧರ್ಮವಿದ್ದು, ಇದೇ ಅವಧಿಯಲ್ಲಿ ಅವರ ಸಂಖ್ಯೆ 35 ಶೇಕಡದಷ್ಟು ಹೆಚ್ಚಲಿದೆ ಹಾಗೂ ಹಿಂದೂಗಳ ಸಂಖ್ಯೆ 34 ಶೇಕಡದಷ್ಟು ಹೆಚ್ಚಲಿದೆ ಎಂದು ವರದಿ ಹೇಳಿದೆ.
ಅಂದರೆ, ಈಗ ಜಗತ್ತಿನ ಎರಡನೆ ಅತಿ ದೊಡ್ಡ ಧರ್ಮವಾಗಿರುವ ಇಸ್ಲಾಮ್, ಶತಮಾನದ ಕೊನೆಯ ಹೊತ್ತಿಗೆ ಜಗತ್ತಿನ ಕ್ರೈಸ್ತ ಧರ್ಮವನ್ನು ಹಿಂದಿಕ್ಕಿ ಜಗತ್ತಿನ ಅತಿ ದೊಡ್ಡ ಧರ್ಮವಾಗಲಿದೆ ಎಂದು ಸಂಶೋಧನೆ ಹೇಳುತ್ತದೆ.
ಮುಸ್ಲಿಮ್ ಮಹಿಳೆಯರು ಹೆಚ್ಚು ಮಕ್ಕಳನ್ನು ಹೊಂದುತ್ತಿರುವುದು ಇದಕ್ಕೆ ಕಾರಣವಾಗಿದೆ. ಇತರ ಎಲ್ಲ ಧಾರ್ಮಿಕ ಗುಂಪುಗಳನ್ನು ಒಗ್ಗೂಡಿಸಿದರೆ, ಈ ಧರ್ಮಗಳ ಮಹಿಳೆಯರು ಸರಾಸರಿ 2.3 ಮಕ್ಕಳನ್ನು ಹೊಂದಿದರೆ, ಮುಸ್ಲಿಮ್ ಮಹಿಳೆಯರು ಸರಾಸರಿ 3.1 ಮಕ್ಕಳನ್ನು ಹೊಂದುತ್ತಾರೆ ಎಂದು ಪಿವ್ ಅಭಿಪ್ರಾಯಪಟ್ಟಿದೆ. ಅದೂ ಅಲ್ಲದೆ, ಇಸ್ಲಾಮ್ ಧರ್ಮದ ಅನುಯಾಯಿಗಳು ಮುಸ್ಲಿಮೇತರರಿಗಿಂತ ಸರಾಸರಿ 7 ವರ್ಷಗಳಷ್ಟು ಕಿರಿಯವರಾಗಿರುತ್ತಾರೆ.
ಕಾಮೆಂಟ್‌ಗಳಿಲ್ಲ:
ಕಾಮೆಂಟ್ ಪೋಸ್ಟ್ ಮಾಡಿ