🌺 ತೌಲನಿಕ ಸಾಹಿತ್ಯ ಅಧ್ಯಯನ 🌺
1) ಠಾಗೂರರ ಗೀತಾಂಂಜಲಿ ಎಂಬ ಕೃತಿಯಿಂದ ಪ್ರಭಾವ ಪಡೆದ ಮುಕ್ತ ಛಂದಸ್ಸಿನ ಕೃತಿಗಳು ಯಾವವು ?
👉(1) ಬೇಂದ್ರೆಯವರ - ಕರುಳಿನ ವಚನಗಳು
👉(2) ರಂ.ರಾ.ದಿವಾಕರರ - ಅಂತರಾತ್ಮವಿದೆ.
👉(3) ಗೋಕಾಕರ - ಸಮುದ್ರಗೀತೆಗಳು
2) "ಕದಿಯದ ಕವಿಯಿಲ್ಲ ಕದಿಯದ ವರ್ತಕನಿಲ್ಲ ಯಾರು ಬಚ್ಚಿಡಲು ಬಲ್ಲನೋ ಅವನು ಮಾತಿಗೆ ಸಿಕ್ಕದೆ ಬಾಳುತ್ತಾನೆ" ಎಂದು ಅನುಕರಣೆಯ ಕುರಿತು ಹೇಳಿದವರು ಯಾರು ?
👉 ರಾಜಶೇಖರ
3) ರಕ್ತಾಕ್ಷಿ ಇದು ಯಾರು ರಚಿಸಿದ ನಾಟಕವಾಗಿದೆ ?
👉 ಕುವೆಂಪು
4) ರಕ್ತಾಕ್ಷಿ ನಾಟಕವು ಯಾವ ನಾಟಕದಿಂದ ಪ್ರಭಾವಗೊಂಡಿದೆ ?
👉 ಶೇಕ್ಸಪೀಯರನ - ಹೆಮ್ಲೆಟ್ ನಾಟಕ.
5) ರಕ್ತಕ್ಷಿ ನಾಟಕದ ಕಥಾ ವಸ್ತು ಏನು ?
👉 ಚಂಚಲತೆ ಮತ್ತು ಸೇಡು
6) ಬಿರುಗಾಳಿ ನಾಟಕದ ಕತುೃ ಯಾರು ?
👉 ಕುವೆಂಪು
7) ಬಿರುಗಾಳಿ ನಾಟಕವು ಯಾವ ನಾಟಕದಿಂದ ಪ್ರಭಾವಗೊಂಡಿದೆ ?
👉 ಶೇಕ್ಸಪೀಯರನ ಟೆಂಪೆಸ್ಟ್ ನಾಟಕ
8) ಬಿರುಗಾಳಿ ನಾಟಕದಲ್ಲಿ ಯಾರ ಉದಾರ ಚರಿತ್ರೆಯನ್ನು ನೋಡಬಹುದು ?
👉 ಭೈರವನಾಯಕ
9) ಮೊಟ್ಟಮೊದಲ ದುರಂತ ನಾಟಕ ಯಾವುದು ?
👉 ಬಿ. ಎಂ. ಶ್ರೀ.ಯವರ ಅಶ್ವತ್ಥಾಮನ್ ನಾಟಕ (ರುದ್ರನಾಟಕ)
10) ಅಶ್ವತ್ಥಾಮನ್ ನಾಟಕವು ಯಾವ ನಾಟಕದಿಂದ ಪ್ರಭಾವ ಪಡೆದಿದೆ ?
👉 ಸೊಪೋಕ್ಲಿಸ್ ನ - ಏಜಕ್ಸ್
11) ಸ್ಪೀಕಿಂಗ್ ಆಪ್ ಶಿವಾ ಕೃತಿಯ ಕತುೃ ಯಾರು ?
👉 ಎ.ಕೆ. ರಾಮಾನುಜನ್
12) ಶರಣರ ನೂರೊಂದು ವಚನಗಳು ಇದು ಯಾರ ಕೃತಿ ?
👉 ಡಾ.ಪ್ರಭುಶಂಕರ
13) ಮಿತ್ರಾವಿಂದ ಗೋವಿಂದ (ಹಳೆಗನ್ನಡ ಕೃತಿ) ಇದು ಯಾವ ನಾಟಕದ ಭಾಷಾಂತರವಾಗಿದೆ ?
👉 ಶ್ರೀ .ಹರ್ಷನ ರತ್ನಾವಳಿ ನಾಟಕ
14) ಏಜಾಕ್ಸ ಅಥವಾ ಅಯಾಸ್ ರುದ್ರನಾಟಕದ ಕತುೃ ಯಾರು ?
👉 ಸೋಪೋಕ್ಲಿಸ್
15) ಮೀಡಿಯಾ ಎಂಬ ರುದ್ರನಾಟಕದ ಕತುೃ ಯಾರು ?
👉 ಯೂರಿಪಿಡೀಸ್
16) ಮ್ಯಾಕ್ಸಿಂ ಗಾರ್ಕಿಯವರ ಪ್ರಸಿದ್ಧ ಕಾದಂಬರಿ ?
👉 ತಾಯಿ
17) ಪಿ.ಲಂಕೇಶರಂದ ಕನ್ನಡಕ್ಕೇ ಅನುವಾದವಾಗಿರುವ ನಾಟಕ ಯಾವುದು ?
👉 ದೊರೆ ಇಡಿಪಸ್ (ಸೊಪೋಕ್ಲಿಸ್ ನ ನಾಟಕ)
18) ಕುಮಾರವ್ಯಾಸನು ಭಾರತ ಕಥಾಮಂಜರಿಯನ್ನು ಯಾವ ಷಟ್ಪದಿಯಲ್ಲಿ ರಚಿಸಿದ್ದಾನೆ ?
👉 ಭಾಮಿನಿ ಷಟ್ಪದಿ
19) ತೆಲಗು ಭಾಷೆಯಲ್ಲಿ ಬಸವ ಪುರಾಣವನ್ನು ಬರೆದವರು ಯಾರು ?
👉 ಪಾಲ್ಕುರಿಕೆ ಸೋಮನಾಥ
20) ಅರವಿಂದರ ಕೃತಿಗಳು ಯಾವವು ?
👉 (1) ಸಾವಿತ್ರಿ (ಮಹಾಕಾವ್ಯ)
(2) ಬಿಡಿ ಕವಿತೆಗಳು
(3) ಲೈಫ್ ಡಿವೈನ್ (ಆತ್ಮಗೀತೆ - ಉಚ್ಚ ಮಟ್ಟದ್ದು)
21) ಶಿಶುನಾಳ ಶರೀಪರ ಮೊದಲ ಹಸರು ?
👉 ಮಹಮ್ಮದ ಶರೀಫ
22) ಮೀರಾಬಾಯಿಯ ಕೃತಿಗಳು ಯಾವವು ?
👉 (1) ಗೀತಗೋವಿಂದ
(2) ರಾಗ ಗೋವಿಂದ
(3) ರಾಗ ಸೋರಕೆಪದ
23) ಮಧುರಚೆನ್ನರ ಕೃತಿಗಳು ಯಾವವು ?
👉 (1) ಪೂರ್ವರಂಗ
(2) ಕಾಳ ರಾತ್ರಿ
24) ಸೊಹ್ರಾಬ್ ರುಸ್ತುಂ ಫಿರ್ದೂಸಿ ಬರೆದ ಮಹಾಕಾವ್ಯ ಯಾವುದು ?
👉 ಷಹನಾಮ
25) ಲವಕುಶರ - ರಾಮರ ಪ್ರಸಂಗವನ್ನು ಚಿತ್ರಿಸುವ ಸಂಸ್ಕೃತ ನಾಟಕ ಯಾವುದು ?
👉 ಉತ್ತರ ರಾಮಾಯಣ (ಭವಭೂತಿಯ)
ಕಾಮೆಂಟ್‌ಗಳಿಲ್ಲ:
ಕಾಮೆಂಟ್ ಪೋಸ್ಟ್ ಮಾಡಿ