ಭಾನುವಾರ, ಮಾರ್ಚ್ 26, 2017

ಮಾನವನಲ್ಲಿ ನಿರ್ನಾಳ ಗ್ರಂಥಿಗಳ ವ್ಯೂಹ


ಮಾನವನಲ್ಲಿ ನಿರ್ನಾಳ ಗ್ರಂಥಿಗಳ ವ್ಯೂಹ

1. ಪಿಟ್ಯೂಟರಿ ಗ್ರಂಥಿ

ಪಿಟ್ಯೂಟರಿ ಗ್ರಂಥಿಯು ಮಿದುಳಿನ ತಳಭಾಗದಲ್ಲಿದೆ.

ಪಿಟ್ಯೂಟರಿ ಗ್ರಂಥಿಯಲ್ಲಿ ಮುಂಭಾಗದ ಹಾಲೆ ಮತ್ತು ಹಿಂಭಾಗದ ಹಾಲೆ ಎಂಬ ಎರಡು ಭಾಗಗಳಿವೆ.

 

ಪಿಟ್ಯೂಟರಿ ಗ್ರಂಥಿಯ ಹಾರ್ಮೋನುಗಳು :-

# ಬೆಳವಣಿಗೆಯ ಹಾರ್ಮೋನು ( ಸೊಮ್ಯಾಟೊ ಟೋಫ್ರಿಕ್ ಹಾರ್ಮೋನು -STH) : ಇದು ಭೌತಿಕ ಮತ್ತು ಮಾನಸಿಕ ಬೆಳವಣಿಗೆಯನ್ನು ನಿಯಂತ್ರಿಸುತ್ತದೆ.

# ಥೈರಾಯಿಡ್ ಅನ್ನು ಚೋದಿಸುವ ಹಾರ್ಮೋನು (TSH) : ಇದು ಥೈರಾಯಿಡ್ ಗ್ರಂಥಿಯು ಹಾರ್ಮೋನನ್ನು ಸ್ರವಿಸಲು ಚೋದಿಸುತ್ತದೆ.

# ಅಡ್ರಿನೋ ಕಾರ್ಟಿಕೋ ಟ್ರೋಪಿಕ್ ಹಾರ್ಮೋನು (ACTH) ಇದು ಆಡ್ರಿನಲ್ ಗ್ರಂಥಿಗಳ ಹಾರ್ಮೋನುಗಳ ಸ್ರವಿಕೆಯನ್ನು ನಿಯಂತ್ರಿಸುತ್ತದೆ.

# ಮೆಲನೋಸೈಟ್ ಚೋದಿಸುವ ಹಾರ್ಮೋನು (MSH) : ಇದು ಚರ್ಮದಲ್ಲಿ ಮೆಲನಿನ್ ಸಂಶ್ಲೇಷಣೆಯಾಗುವುದನ್ನು ಹತೋಟಿಯಲ್ಲಿಡುತ್ತದೆ.

# ಪಿಟ್ಯುಟರಿ ಗ್ರಂಥಿಯು ಕಡಿಮೆ ಪ್ರಮಾಣದಲ್ಲಿ ಆ್ಯಂಟಿ ಡೈಯುರೆಟಿಕ್ ಹಾರ್ಮೋನನ್ನು (ADH) ಉತ್ಪತ್ತಿ ಮಾಡಿದರೆ "ಡಯಾಬಿಟಿಸ್ ಇನ್ ಸಿಪಿಡಿಸ್"ಎಂಬ ರೋಗ ಉಂಟಾಗುತ್ತದೆ.

# ಪಿಟ್ಯುಟರಿ ಗ್ರಂಥಿಯನ್ನು " ಅಂತಃಸ್ರಾವಕ ವಾದ್ಯಮೇಳದ ನಿರ್ವಾಹಕ " ಎಂದು ಕರೆಯುತ್ತಾರೆ.

 

2. ಥೈರಾಯಿಡ್ ಗ್ರಂಥಿ

ಕುತ್ತಿಗೆಯ ಭಾಗದಲ್ಲಿ ಗಂಟಲಿನ ಕೆಳಗೆ ಶ್ವಾಸನಾಳದ ಮುಂದೆ ಕೆಂಪು ಮಿಶ್ರಿತ ಕಂದು ಬಣ್ಣದ ಒಂದು ಗ್ರಂಥಿ ಇದೆ, ಅದು ಥೈರಾಯಿಡ್ ಗ್ರಂಥಿ.

# ಥೈರಾಯಿಡ್ ಥೈರಾಕ್ಸಿನ್ ಎಂಬ ಹಾರ್ಮೋನನ್ನು ಸ್ರವಿಸುತ್ತದೆ.

# ಆಹಾರದಲ್ಲಿ ಅಯೋಡಿನ್ ನ ಕೊರತೆಯಿಂದ ಸರಳ ಗಾಯಿಟರ್ ರೋಗ ಉಂಟಾಗುತ್ತದೆ.

# ಪ್ರೌಢರಲ್ಲಿ ಥೈರಾಯಿಡ್ ಗ್ರಂಥಿಯ ಚಟುವಟಿಕೆ ಕ್ಷೀಣವಾಗುವುದರಿಂದ ಉಪಾಪಚಯ ಕ್ರಿಯೆಯ ವೇಗವು ಕೆಳಮಟ್ಟಕ್ಕೆ ಬರುತ್ತದೆ, ದೈಹಿಕ ಮತ್ತು ಮಾನಸಿಕ ಶಕ್ತಿ ಕಡಿಮೆಯಾಗುತ್ತದೆ, ದೇಹದ ತೂಕ ಹೆಚ್ಚುತ್ತದೆ ಮತ್ತು ಹೃದಯ ಬಡಿತವು ನಿಧಾನವಾಗುತ್ತದೆ ಈ ಸ್ಥಿತಿಯನ್ನು "ಮಿಕ್ಸೆಡಿಮಾ" ಎಂದು ಕರೆಯುತ್ತಾರೆ.

 

3. ಪ್ಯಾರಾಥೈರಾಯಿಡ್ ಗ್ರಂಥಿಗಳು

# ಪ್ಯಾರಾಥಾರ್ಮೋನಿನ ಕಾರ್ಯ, ರಕ್ತ ಮತ್ತು ಮೂಳೆಗಳಲ್ಲಿ ಕ್ಯಾಲ್ಸಿಯಂನ ಪ್ರಮಾಣವನ್ನು ನಿಯಂತ್ರಿಸುವುದು.

# ಈ ಹಾರ್ಮೋನಿನ ಕೊರತೆಯಿಂದ ನೋವಿನಿಂದ ಕೂಡಿದ ಸ್ನಾಯು ಸೆಡೆತ ಕಂಡು ಬರುತ್ತದೆ. ಪ್ಯಾರಾಥಾರ್ಮೋನ್ ಹೆಚ್ಚಿನ ಪ್ರಮಾಣದಲ್ಲಿ ಉತ್ಪತ್ತಿಯಾದರೆ ಮೂಳೆಗಳಲ್ಲಿ ಕ್ಯಾಲ್ಸಿಯಂ ಕಡಿಮೆಯಾಗಿ ಅವು ಮೃದುವಾಗುತ್ತವೆ.

 

4. ಲ್ಯಾಂಗರ್ ಹಾನ್ಸ್‌ನ ಕಿರು ದ್ವೀಪಗಳು

# ಈ ಗ್ರಂಥಿಗಳು ಚಿಕ್ಕದಾಗಿದ್ದು ಮೇದೋಜೀರಕದಲ್ಲಿ ಅಡಕವಾಗಿದೆ.

# ಇವು ಇನ್ಸುಲಿನ್ ಮತ್ತು ಗ್ಲುಕಗಾನ್ ಎಂಬ ಎರಡು ಹಾರ್ಮೋನುಗಳನ್ನು ಸ್ರವಿಸುತ್ತದೆ.

# ಲ್ಯಾಂಗರ್ ಹಾನ್ಸ್‌ನ ಕಿರುದ್ವೀಪಗಳು ಉತ್ಪತ್ತಿಮಾಡುವ ಹಾರ್ಮೋನ್ ಗಳ ಕೊರತೆಯಿಂದ ಡಯಾಬಿಟಿಸ್ ರೋಗ ಉಂಟಾಗುತ್ತದೆ.

# ಇನ್ಸುಲಿನ್ ಗ್ಲೂಕೋಸ್ ಅನ್ನು ಗ್ಲೈಕೊಜನ್ ಆಗಿ ಪರಿವರ್ತಿಸಲು ಸಹಾಯ ಮಾಡುತ್ತದೆ. ಗ್ಲೈಕೊಜನ್ ಯಕೃತ್ ಮತ್ತು ಸ್ನಾಯುಗಳಲ್ಲಿಸಂಗ್ರಹವಾಗಿರುತ್ತದೆ. ರಕ್ತದಲ್ಲಿ ಗ್ಲೂಕೋಸ್ನ ಪ್ರಮಾಣ ಹೆಚ್ಚಾದಾಗ ಇನ್ಸುಲಿನ್ ಹೆಚ್ಚಿನ ಪ್ರಮಾಣದಲ್ಲಿ ಉತ್ಪತ್ತಿಯಾಗುತ್ತದೆ.

# ಸಾಕಷ್ಟು ಇನ್ಸುಲಿನ್ ಉತ್ಪತ್ತಿಯಾಗದಿದ್ದರೆ ರಕ್ತದಲ್ಲಿ ಗ್ಲೂಕೋಸ್ ಪ್ರಮಾಣ ಹೆಚ್ಚಿ ಮೂತ್ರದ ಮೂಲಕ ವಿಸರ್ಜನೆಗೊಳ್ಳುತ್ತದೆ. ಸ್ಥಿತಿಯನ್ನು ಡಯಾಬಿಟಿಸ್ ಮೆಲ್ಲಿಟಸ್ ಎನ್ನುವರು.

# ಇನ್ಸುಲಿನ್ ಚುಚ್ಚುಮದ್ದಿನಿಂದ ಈ ರೋಗವನ್ನು ನಿವಾರಿಸಬಹುದು.

 

5. ಅಡ್ರಿನಲ್ ಗ್ರಂಥಿಗಳು

# ಪ್ರತಿ ಮೂತ್ರಜನಕಾಂಗದ ಮೇಲೆ ತ್ರಿಕೋನಾಕಾರದ ಟೋಪಿಯಂತೆ ಒಂದೊಂದು ಆಡ್ರಿನಲ್ ಗ್ರಂಥಿ ಇದೆ.

# ಕಾರ್ಟೆಕ್ಸ್ ಎಂಬ ಹೊರಭಾಗ ಹಾಗೂ ಮೆಡುಲ್ಲಾ ಎಂಬ ಒಳಭಾಗ ಇದೆ.

# ಕಾರ್ಟೆಕ್ಸ್ ಸ್ರವಿಸುವ ಅನೇಕ ಹಾರ್ಮೋನುಗಳಲ್ಲಿ ಕಾರ್ಟಿಸೋನ್ ಒಂದು.

# ಅಡ್ರಿನಲ್‌ " ಮೆಡುಲ್ಲಾ ಆಡ್ರಿನಲಿನ್, ಭಾರತ ಅಡ್ರಿನಲಿನ್ ಮತ್ತು ಡೊಪಮಿನ್ ಎಂಬ ಮೂರು ಹಾರ್ಮೋನುಗಳನ್ನು ಸ್ರವಿಸುತ್ತದೆ.

*****************************************

ನಿರ್ನಾಳ ಗ್ರಂಥಿಗಳ ಮೇಲೆ ಪ್ರಶ್ನೋತ್ತರಗಳು:-

1.)

ಸ್ರವಿಕೆಯ ಕಾರ್ಯವನ್ನು ಮಾಡುವ ಜೀವಕೋಶ ಸಮೂಹವನ್ನು ಏನೆಂದು ಕರೆಯುತ್ತಾರೆ?

A). ಗ್ರಂಥಿ 
B). ವೈರಸ್ 
C). ತುಕ್ಕುಜೀವಿ 
D). ಚಯಾಪಚಯ 

Correct Ans: (A) 
Description:

ಗ್ರಂಥಿ

ಸ್ರವಿಕೆಯ ಕಾರ್ಯವನ್ನು ಮಾಡುವ ಜೀವಕೋಶ ಸಮೂಹವನ್ನು ಗ್ರಂಥಿ ಎನ್ನುವರು. ಅಥವಾ ಯಾವ ಅಮಗದ ಜೀವಕೋಶಗಳು ಸ್ರವಿಕೆಯ ಕಾರ್ಯಕ್ಕಾಗಿ ವೈಶಿಷ್ಟತ್ಯೆಯನ್ನು ಪಡೆದಿದೆಯೋ ಆ ಅಂಗವನ್ನು ಗ್ರಂಥಿ ಎಂದು ಕರೆಯುತ್ತಾರೆ. ಗ್ರಂಥಿಗಳಲ್ಲಿ ಮೂರು ವಿಧಗಳಿವೆ. 1.ನಳಿಕಾ ಗ್ರಂಥಿ 2.ನಿರ್ನಾಳ ಗ್ರಂಥಿ 3.ಮಿಶ್ರ ಗ್ರಂಥಿ

2.)

ನಳಿಕಾ ಗ್ರಂಥಿಗಳಲ್ಲಿ ಅತ್ಯಂತ ದೊಡ್ಡದಾದ ಗ್ರಂಥಿ ಯಾವುದು?

A). ಕರುಳಿನ ಗ್ರಂಥಿ 
B). ಲಾಲಾರಸ ಗ್ರಂಥಿ 
C). ಪಿತ್ತಜನಕಾಂಗ 
D). ಅಶ್ರು ಗ್ರಂಥಿ 

Correct Ans: (C) 
Description:

ಪಿತ್ತಜನಕಾಂಗ

ಪಿತ್ತಜನಕಾಂಗ ಅತ್ಯಂತ ದೊಡ್ಡ ಗ್ರಂಥಿಯಾಗಿದೆ. ಇದರಿಂದ ಸ್ರವಿಕೆಯಾಗುವ ವಸ್ತುವನ್ನು ಪಿತ್ತರಸ ಅಥವಾ ಬೈಲೆ ಎಂದು ಕರೆಯುತ್ತಾರೆ. ಪಿತ್ತರಸದಲ್ಲಿ ಯಾವುದೇ ಕಿಣ್ವ ಇರುವುದಿಲ್ಲ.

3.)

ಜೀರ್ಣಕ್ರಿಯೆಗೆ ಸಹಾಯವಾಗುವ 'ಅಮೈಲೇಸ್ ಕಿಣ್ವ' ಯಾವ ಗ್ರಂಥಿಯಲ್ಲಿ ಕಂಡು ಬರುತ್ತದೆ?

A). ಅಶ್ರು ಗ್ರಂಥಿ 
B). ಲಾಲಾರಸ ಗ್ರಂಥಿ 
C). ಕರುಳಿನ ಗ್ರಂಥಿ 
D). ಪಿತ್ತಜನಕಾಂಗ 

Correct Ans: (B) 
Description:

ಲಾಲಾರಸ ಗ್ರಂಥಿ

ಲಾಲಾರಸ ಗ್ರಂಥಿ ಬಾಯಿಯ ಅಂಗಳದಲ್ಲಿ ಕಂಡುಬರುತ್ತದೆ. ಇವುಗಳ ಸಂಖ್ಯೆ 3 ಜೊತೆ. ಈ ಗ್ರಂಥಿಗಳಿಂದ ಸ್ರವಿಕೆಯಾಗುವ ವಸ್ತು ಲಾಲಾರಸ ಅಥವಾ ಸರೈವಾ. ಈ ಲಾಲಾರಸದಲ್ಲಿ ಅಮೈಲೇಸ್ ಕಿಣ್ವ ಇದ್ದು ಇದು ಜೀರ್ಣ ಕ್ರಿಯೆಗೆ ಸಹಾಯಕವಾಗಿದೆ.

4.)

ಕೆಳಗಿನ ಯಾವ ಗ್ರಂಥಿಗಳಲ್ಲಿ 'ಹೈಡ್ರೊಕ್ಲೋರಿಕ್ ಆಮ್ಲ' ಕಂಡು ಬರುತ್ತದೆ?

A). ಅಶ್ರು ಗ್ರಂಥಿ 
B). ಲಾಲಾರಸ ಗ್ರಂಥಿ 
C). ಪಿತ್ತಜನಕಾಂಗ 
D). ಜಠರ ರಸ ಗ್ರಂಥಿ 

Correct Ans: (D) 
Description:

ಜಠರ ರಸ ಗ್ರಂಥಿ

ಜಠರ ರಸ ಗ್ರಂಥಿಗಳಿಂದ ಸ್ರವಿಕೆಯಾಗುವ ವಸ್ತು ಜಠರ ರಸ. ಈ ಜಠರ ರಸದಲ್ಲಿ ಪೆಪ್ಸಿನ್ ಮತ್ತು ರೆನಿನ್ ಕಿಣ್ವಗಳು ಕಂಡು ಬರುತ್ತವೆ. ಜೊತೆಗೆ 'ಹೈಡ್ರೊಕ್ಲೋರಿಕ್' ಆಮ್ಲ ಕೂಡ ಕಂಡುಬರುತ್ತದೆ.

5.)

ಕಣ್ಣು ಗುಡ್ಡೆಯನ್ನು ತೇವದಿಂದ ಕೂಡಿರುವಂತೆ ಮಾಡುವ ಗ್ರಂಥಿ ಯಾವುದು?

A). ಕರುಳಿನ ಗ್ರಂಥಿ 
B). ಅಶ್ರು ಗ್ರಂಥಿ 
C). ಲಾಲಾರಸ ಗ್ರಂಥಿ 
D). ಜಠರ ರಸ ಗ್ರಂಥಿ 

Correct Ans: (B) 
Description:

ಅಶ್ರು ಗ್ರಂಥಿ

ಅಶ್ರು ಗ್ರಂಥಿ ಕಣ್ಣಿರನ್ನು ಸ್ರವಿಕೆ ಮಾಡುತ್ತದೆ. ಕಣ್ನೀರು ಕಣ್ಣು ಗುಡೆಯನ್ನು ತೇವದಿಂದ ಇರುವಂತೆ ನೋಡಿಕೊಳ್ಳುತ್ತದೆ. ಲಾಲಾರಸ ಮತ್ತು ಕಣ್ಣೀರಿನಲ್ಲಿ ಲೈಸೋಸೋಮ್‌ ಎಂಬ ಕಿಣ್ವಗಳಿವೆ, ಇದು ಬ್ಯಾಕ್ಟೀರಿಯಾಗಳನ್ನ ನಾಶ ಮಾಡುತ್ತದೆ.

6.)

ಯಾವ ಗ್ರಂಥಿಗಳ ವಿಧವನ್ನು 'ಅಂತಸ್ರಾವ ಗ್ರಂಥಿ' ಎಂದು ಕರೆಯುತ್ತಾರೆ?

A). ನಳಿಕಾ ಗ್ರಂಥಿ 
B). ಮಿಶ್ರ ಗ್ರಂಥಿ 
C). ನಿರ್ನಾಳ ಗ್ರಂಥಿ 
D). ಮೇಲಿನ ಯಾವುದು ಅಲ್ಲ 

Correct Ans: (C) 
Description:

ನಿರ್ನಾಳ ಗ್ರಂಥಿ

ನಿರ್ನಾಳ ಗ್ರಂಥಿಗಳಿಂಧ ಸ್ರವಿಕೆಯಾಗುವ ಹಾರ್ಮೋನುಗಳು ನೇರವಾಗಿ ರಕ್ತದೊಳಗೆ ಸ್ರವಿಕೆಯಾಗುತ್ತದೆ, ಆದ್ದರಿಂದ ನಿರ್ನಾಳ ಗ್ರಂಥಿಗಳನ್ನು 'ಅಂತಸ್ರಾವ ಗ್ರಂಥಿ' ಎಂದು ಕರೆಯುತ್ತಾರೆ.

7.)

ನಿರ್ನಾಳ ಗ್ರಂಥಿಗಳು ಸ್ರವಿಸುವ ರಾಸಾಯನಿಕ ವಸ್ತುಗಳಿಗೆ ಏನೆಂದು ಕರೆಯುತ್ತಾರೆ?

A). ಹಾರ್ಮೋನುಗಳು 
B). ಬೈಲೆ 
C). ಸಲೈವಾ 
D). ಮೇಲಿನ ಮೂರು ಸರಿ 

Correct Ans: (A) 
Description:

ಹಾರ್ಮೋನುಗಳು

ನಿರ್ನಾಳ ಗ್ರಂಥಿಗಳಿ ನಳಿಕೆಗಳನ್ನು ಹೊಂದಿರುವುದಿಲ್ಲ. ನಿರ್ನಾಳ ಗ್ರಂಥಿಗಳಿಂದ ಸ್ರವಿಕೆಯಾಗುವ ವಸ್ತುಗಳಿಗೆ 'ಹಾರ್ಮೋನುಗಳು' (ಚೋದನ) ಎಂದು ಕರೆಯುತ್ತಾರೆ. ಈ ಹಾರ್ಮೋನುಗಳು ಅಮೈನೊ ಆಮ್ಲ, ಪ್ರೊಟೀನ್ ಅಥವಾ ಸ್ಟೀರಾಯಿಲ್ಡಗಳಿಂದ ಮಾಡಲ್ಪಟ್ಟಿರುತ್ತದೆ.

8.)

'ಮಾಸ್ಟರ್ ಆಫ್ ಮಾಸ್ಟರ್ ಗ್ರಂಥಿ ಎಂದು ಯಾವ ಗ್ರಂಥಿಯನ್ನು ಕರೆಯುತ್ತಾರೆ?

A). ಹೈಪೋಥಲಾಮಸ್ ಗ್ರಂಥಿ 
B). ಪೀನಿಯಲ್ ಗ್ರಂಥಿ 
C). ಥೈರಾಯಿಡ್ ಗ್ರಂಥಿ 
D). ಪಿಟ್ಯುಟರಿ ಗ್ರಂಥಿ 

Correct Ans: (A) 
Description:

ಹೈಪೋಥಲಾಮಸ್ ಗ್ರಂಥಿ

ಹೈಪೋಥಲಾಮಸ್ ಗ್ರಂಥಿಯು ಮೆದುಳಿನ ಭಾಗದಲ್ಲಿ ಕಂಡು ಬರುತ್ತದೆ. ಪಿಟ್ಯೂಟರಿ ಗ್ರಂಥಿಯ ಚಟುವಟಿಕೆಗಳನ್ನು ಮೆದುಳಿನ ಹೈಪೋಥಲಾಮಸ್ ಭಾಗವು ನಿಯಂತ್ರಿಸುತ್ತದೆ ಆದ್ದರಿಂದ ಇದನ್ನು 'ಮಾಸ್ಟರ್ ಆಫ್ ಮಾಸ್ಟರ್ ಗ್ರಂಥಿ ಎಂದು ಕರೆಯುತ್ತಾರೆ. ಈ ಗ್ರಂಥಿಯಿಂದ ಆಕ್ಸಿಟೋಸಿನ್ ಮತ್ತು ವೆಸೋಪ್ರೆಸ್ಸಿನ್ ಹಾರ್ಮೋನ್‌ಗಳು ಸ್ರವಿಕೆಯಾಗುತ್ತದೆ.

9.)

ಮಗುವಿನ ಜನನಕ್ಕೆ ಕಾರಣವಾಗುವ ಹಾರ್ಮೋನು ಯಾವುದು?

A). ಮೆಲಟೋನಿಕ್ 
B). ಆಕ್ಸಿಟೋಸಿನ್ 
C). ವೆಸೋಪ್ರೆಸ್ಸಿನ್ 
D). ಕಾರ್ಟಿಸೋಲ್ 

Correct Ans: (B) 
Description:

ಆಕ್ಸಿಟೋಸಿನ್

ಹೈಪೋಥಲಾಮಸ್ ಗ್ರಂಥಿಯಿಂದ ಸ್ರವಿಕೆಯಾಗಗುವ ಆಕ್ಸಿಟೋಸಿನ್ ಹಾರ್ಮೋನ್ ಮಗುವಿನ ಜನನಕ್ಕೆ ಕಾರಣವಾಗಿದೆ. ಮತ್ತು ವೆಸೋಪ್ರೆಸ್ಸಿನ್ ಹಾರ್ಮೋನ್ ದೇಹದ ನೀರಿನ ಸಮತೋಲನವನ್ನು ನಿಯಂತ್ರಿಸುತ್ತದೆ.

10.)

ಮೆಲಟೋನಿನ್ ಹಾರ್ಮೋನ್‌ ಯಾವ ಗ್ರಂಥಿಯ ಸ್ರವಿಕೆಯಾಗಿದೆ?

A). ಹೈಪೋಥಲಾಮಸ್ ಗ್ರಂಥಿ 
B). ಪಿಟ್ಯುಟರಿ ಗ್ರಂಥಿ 
C). ಥೈರಾಯಿಡ್ ಗ್ರಂಥಿ 
D). ಪೀನಿಯಲ್ ಗ್ರಂಥಿ 

Correct Ans: (D) 
Description:

ಪೀನಿಯಲ್ ಗ್ರಂಥಿ

ಪೀನಿಯಲ್ ಗ್ರಂಥಿ ಎಫಿಥಲಾಮಸ್ ಭಾಗದಲ್ಲಿ ಕಂಢುಬರುತ್ತದೆ. ಪೀನಿಯಲ್ ಗ್ರಂಥಿಯಿಂದ ಸ್ರವಿಕೆಯಾಗುವ ಮೆಲಟೋನಿಕ್ ಹಾರ್ಮೋನ್ ನಿದ್ದೆ ಯನ್ನು ಉಂಟು ಮಾಡುತ್ತದೆ.

11.)

ಅತ್ಯಂತ ಚಿಕ್ಕ ಗ್ರಂಥಿ ಯಾವುದು?

A). ಪಿಟ್ಯೂಟರಿ ಗ್ರಂಥಿ 
B). ಆ್ಯಡ್ರಿನಲ್ ಗ್ರಂಥಿ 
C). ಥೈರಾಯಿಡ್ ಗ್ರಂಥಿ 
D). ಥೈಮಸ್ ಗ್ರಂಥಿ 

Correct Ans: (A) 
Description:

ಪಿಟ್ಯೂಟರಿ ಗ್ರಂಥಿ

ಅತ್ಯಂತ ಚಿಕ್ಕ ಗ್ರಂಥಿ ಪಿಟ್ಯೂಟರಿ ಗ್ರಂಥಿ. ಪಿಟ್ಯೂಟರಿ ಗ್ರಂಥಿಯು ಮಿದುಳಿನ ತಳಭಾಗದಲ್ಲಿದೆ. ಪಿಟ್ಯೂಟರಿ ಗ್ರಂಥಿಯಲ್ಲಿ ಮುಂಭಾಗದ ಹಾಲೆ ಮತ್ತು ಹಿಂಭಾಗದ ಹಾಲೆ ಎಂಬ ಎರಡು ಭಾಗಗಳಿವೆ.

12.)

ಮೆದುಳಿನ ಕೆಳಗೆ ಮತ್ತು ತಲೆಯ ಮಧ್ಯದಲ್ಲಿರುವ ಗ್ರಂಥಿ ಯಾವುದು?

A). ಹೈಪೋಥಲಾಮಸ್ ಗ್ರಂಥಿ 
B). ಪ್ಯಾರಾ ಥೈರಾಯಿಡ್ 
C). ಪಿಟ್ಯೂಟರಿ ಗ್ರಂಥಿ 
D). ಪೀನಿಯಲ್ ಗ್ರಂಥಿ 

Correct Ans: (C) 
Description:

ಪಿಟ್ಯೂಟರಿ ಗ್ರಂಥಿ

ಮೆದುಳಿನ ಕೆಳಗೆ ಮತ್ತು ತಲೆಯ ಮಧ್ಯದಲ್ಲಿರುವ ಗ್ರಂಥಿ ಪಿಟ್ಯೂಟರಿ ಗ್ರಂಥಿ. ಪಿಟ್ಯೂಟರಿ ಗ್ರಂಥಿ ಸ್ಫುರಿಸುವ ಹಾರ್ಮೋನುಗಳನ್ನು ದೇಹದ ಬೆಳವಣಿಗೆ, ಮೂತ್ರಪಿಂಡಗಳ ಕಾರ್ಯನಿರ್ವಹಣೆ ಮತ್ತು ಲೈಂಗಿಕ ಅಂಗಗಳ ಮೇಲೆ ಪ್ರಭಾವ ಹೊಂದಿದೆ.

13.)

ಯಾವ ಗ್ರಂಥಿಯನ್ನು 'ಅಂತಃಸಾವ್ರಕ ವಾದ್ಯಮೇಳದ ನಿರ್ವಾಹಕ' ಎಂದು ಕರೆಯುತ್ತಾರೆ?

A). ಪಿಟ್ಯೂಟರಿ ಗ್ರಂಥಿ 
B). ಥೈರಾಯಿಡ್ ಗ್ರಂಥಿ 
C). ಆ್ಯಡ್ರಿನಲ್ ಗ್ರಂಥಿ 
D). ಥೈಮಸ್ ಗ್ರಂಥಿ 

Correct Ans: (A) 
Description:

ಪಿಟ್ಯೂಟರಿ ಗ್ರಂಥಿ

ಪಿಟ್ಯೂಟರಿ ಗ್ರಂಥಿಯನ್ನು 'ಅಂತಃಸಾವ್ರಕ ವಾದ್ಯಮೇಳದ ನಿರ್ವಾಹಕ' ಎಂದು ಕರೆಯುತ್ತಾರೆ. ಪಿಟ್ಯುಟರಿ ಗ್ರಂಥಿಯು ಕಡಿಮೆ ಪ್ರಮಾಣದಲ್ಲಿ ಆ್ಯಂಟಿ ಡೈಯುರೆಟಿಕ್ ಹಾರ್ಮೋನನ್ನು (ADH) ಉತ್ಪತ್ತಿ ಮಾಡಿದರೆ "ಡಯಾಬಿಟಿಸ್ ಇನ್ ಸಿಪಿಡಿಸ್"ಎಂಬ ರೋಗ ಉಂಟಾಗುತ್ತದೆ.

14.)

'ಗ್ರಂಥಿಗಳ ರಾಜ' ಎಂದು ಯಾವ ಗ್ರಂಥಿಯನ್ನು ಕರೆಯುತ್ತಾರೆ?

A). ಹೈಪೋಥಲಾಮಸ್ ಗ್ರಂಥಿ 
B). ಪೀನಿಯಲ್ ಗ್ರಂಥಿ 
C). ಪ್ಯಾರಾ ಥೈರಾಯಿಡ್ 
D). ಪಿಟ್ಯೂಟರಿ ಗ್ರಂಥಿ 

Correct Ans: (D) 
Description:

ಪಿಟ್ಯೂಟರಿ ಗ್ರಂಥಿ

ಪಿಟ್ಯೂಟರಿ ಗ್ರಂಥಿಯಿಂದ ಸ್ರವಿಕೆಯಾಗುವ ಹಾರ್ಮೋನ್‌ಗಳು ಇತರ ಗ್ರಂಥಿಗಳ ಚಟುವಟಿಕೆಗಳನ್ನು ನಿಯಂತ್ರಿಸುತ್ತದೆ, ಆದ್ದರಿಂದ ಈ ಗ್ರಂಥಿಯನ್ನು 'ಗ್ರಂಥಿಗಳ ರಾಜ' ಎಂದು ಕರೆಯುತ್ತಾರೆ.

15.)

ನಿರ್ನಾಳ ಗ್ರಂಥಿಗಳಲ್ಲಿ ದೊಡ್ಡದಾದ ಗ್ರಂಥಿ ಯಾವುದು?

A). ಥೈಮಸ್ ಗ್ರಂಥಿ 
B). ಥೈರಾಯಿಡ್ ಗ್ರಂಥಿ 
C). ಹೈಪೋಥಲಾಮಸ್ ಗ್ರಂಥಿ 
D). ಪೀನಿಯಲ್ ಗ್ರಂಥಿ 

Correct Ans: (B) 
Description:

ಥೈರಾಯಿಡ್ ಗ್ರಂಥಿ

ನಿರ್ನಾಳ ಗ್ರಂಥಿಗಳಲ್ಲಿ ದೊಡ್ಡದಾದ ಗ್ರಂಥಿ ಥೈರಾಯಿಡ್ ಗ್ರಂಥಿ. ಈ ಗ್ರಂಥಿಯಿಂದ ಥೈರಾಕ್ಸಿನ್ (T4) ಮತ್ತು ಟ್ರೈಐಡೋ ಥೈರೋನಿಸ್ (T3) ಹಾರ್ಮೋನ್‌ಗಳ ಸ್ರವಿಕೆಯಾಗುತ್ತದೆ.

16.)

ಕುತ್ತಿಗೆಯ ಉಸಿರು ನಾಳದ ಮುಂದೆ ಇರುವ ಗ್ರಂಥಿ ಯಾವುದು?

A). ಪಿಟ್ಯೂಟರಿ ಗ್ರಂಥಿ 
B). ಥೈರಾಯಿಡ್ ಗ್ರಂಥಿ 
C). ಆ್ಯಡ್ರಿನಲ್ ಗ್ರಂಥಿ 
D). ಥೈಮಸ್ ಗ್ರಂಥಿ 

Correct Ans: (B) 
Description:

ಥೈರಾಯಿಡ್ ಗ್ರಂಥಿ

ಕುತ್ತಿಗೆಯ ಭಾಗದಲ್ಲಿ ಗಂಟಲಿನ ಕೆಳಗೆ ಶ್ವಾಸನಾಳದ ಮುಂದೆ ಕೆಂಪು ಮಿಶ್ರಿತ ಕಂದು ಬಣ್ಣದ ಒಂದು ಗ್ರಂಥಿ ಇದೆ, ಅದು ಥೈರಾಯಿಡ್ ಗ್ರಂಥಿ. ಥೈರಾಯಿಡ್ ಥೈರಾಕ್ಸಿನ್ ಎಂಬ ಹಾರ್ಮೋನನ್ನು ಸ್ರವಿಸುತ್ತದೆ.

17.)

ಥೈರಾಯಿಡ್ ಕೊರತೆಯಿಂದ ಬರುವ ರೋಗ ಯಾವುದು?

A). ಗಳಗಂಡ 
B). ಕಾಲಾರ 
C). ಕ್ಯಾನ್ಸರ್ 
D). ಕಾಮಾಲೆ 

Correct Ans: (A) 
Description:

ಗಳಗಂಡ

ಥೈರಾಯಿಡ್ ಕೊರತೆಯಿಂದ ಬರುವ ರೋಗ ಗಳಗಂಡ (ಗಾಯಿಟರ್). ಆಹಾರದಲ್ಲಿ ಅಯೋಡಿನ್ ನ ಕೊರತೆಯಿಂದ ಸರಳ ಗಾಯಿಟರ್ ರೋಗ ಉಂಟಾಗುತ್ತದೆ. 

18.)

ಥೈರಾಕ್ಸಿನ್ ಉತ್ಪತ್ತಿ ಕಡಿಮೆಯಾಗುವ ಸ್ಥಿತಿಯನ್ನು ಏನೆಂದು ಕರೆಯುತ್ತಾರೆ?

A). ಹೈಪರ್ ಥೈರಾಡಿಸಮ್ 
B). ನಾನ್‌ಎಪಿನೆಫ್ರಿನ್ 
C). ಹೈಪೊಥೈರಾಡಿಸಮ್ 
D). ಮೇಲಿನ ಯಾವುದು ಅಲ್ಲ 

Correct Ans: (C) 
Description:

ಹೈಪೊಥೈರಾಡಿಸಮ್

ಥೈರಾಕ್ಸಿನ್ ಉತ್ಪತ್ತಿ ಕಡಿಮೆಯಾಗುವ ಸ್ಥಿತಿಯನ್ನು ಹೈಪೊಥೈರಾಡಿಸಮ್ ಎಂದು ಕರೆಯುತ್ತಾರೆ. ಇದರಿಂದ ಗಳಗಂಡ ರೋಗ, ಮೀಕ್ಸೆಡಿಮಾ ಮತ್ತು ಕ್ರೆಟಿನಿಸಮ್ ಕಾಯಿಲೆಗಳು ಬರುತ್ತವೆ. ಥೈರಾಕ್ಸಿನ್ ಉತ್ಪತ್ತಿ ಹೆಚ್ಚಾಗುವ ಸ್ಥಿತಿಯನ್ನು ಹೈಪರ್ ಥೈರಾಡಿಸಮ್ ಎಂದು ಕರೆಯುತ್ತಾರೆ.

19.)

ಪ್ರೌಢರಲ್ಲಿ ಥೈರಾಯಿಡ್ ಗ್ರಂಥಿಯ ಚಟುವಟಿಕೆ ಕ್ಷೀಣವಾಗುವುದರಿಂದ ಉಂಟಾಗುವ ಸ್ಥಿತಿ?

A). ಗಳಗಂಡ 
B). ಮೀಕ್ಸೆಡಿಮಾ 
C). ಕ್ರೆಟಿನಿಸಮ್ 
D). ಯಾವುದು ಅಲ್ಲ 

Correct Ans: (B) 
Description:

ಮೀಕ್ಸೆಡಿಮಾ

ಪ್ರೌಢರಲ್ಲಿ ಥೈರಾಯಿಡ್ ಗ್ರಂಥಿಯ ಚಟುವಟಿಕೆ ಕ್ಷೀಣವಾಗುವುದರಿಂದ ಉಪಾಪಚಯ ಕ್ರಿಯೆಯ ವೇಗವು ಕೆಳಮಟ್ಟಕ್ಕೆ ಬರುತ್ತದೆ, ದೈಹಿಕ ಮತ್ತು ಮಾನಸಿಕ ಶಕ್ತಿ ಕಡಿಮೆಯಾಗುತ್ತದೆ, ದೇಹದ ತೂಕ ಹೆಚ್ಚುತ್ತದೆ ಮತ್ತು ಹೃದಯ ಬಡಿತವು ನಿಧಾನವಾಗುತ್ತದೆ ಈ ಸ್ಥಿತಿಯನ್ನು "ಮಿಕ್ಸೆಡಿಮಾ" ಎಂದು ಕರೆಯುತ್ತಾರೆ.

20.)

ಮೇಧೋಜೀರಕ ಗ್ರಂಥಿಯ ಅಂತಃಸ್ರಾವಕ ಕೋಶಗಳನ್ನು ಹೀಗೆನ್ನುತ್ತಾರೆ?

A). ಲ್ಯಾಂಗರ್ ಹಾನ್ಸ್‌ನ ಕಿರುದ್ವೀಪಗಳು 
B). ಆ್ಯಡ್ರಿನಲ್ ಗ್ರಂಥಿ 
C). ಥೈರಾಯಿಡ್ ಗ್ರಂಥಿ 
D). ಥೈಮಸ್ ಗ್ರಂಥಿ 

Correct Ans: (A) 
Description:

ಲ್ಯಾಂಗರ್ ಹಾನ್ಸ್‌ನ ಕಿರುದ್ವೀಪಗಳು

ಮೇಧೋಜೀರಕ ಗ್ರಂಥಿಯ ಅಂತಃಸ್ರಾವಕ ಕೋಶಗಳನ್ನು ಲ್ಯಾಂಗರ್ ಹಾನ್ಸ್‌ನ ಕಿರುದ್ವೀಪಗಳು ಎನ್ನುವರು. ·         ಇವು ಇನ್ಸುಲಿನ್ ಮತ್ತು ಗ್ಲುಕಗಾನ್ ಎಂಬ ಎರಡು ಹಾರ್ಮೋನುಗಳನ್ನು ಸ್ರವಿಸುತ್ತದೆ.

21.)

ಲ್ಯಾಂಗರ್ ಹಾನ್ಸ್‌ನ ಕಿರುದ್ವೀಪಗಳು ಉತ್ಪತ್ತಿಮಾಡುವ ಹಾರ್ಮೋನ್ ಗಳ ಕೊರತೆಯಿಂದ ಉಂಟಾಗುವ ಕಾಯಿಲೆ ಯಾವುದು?

A). ಡಯಾಬಿಟಿಸ್ 
B). ಮೀಕ್ಸೆಡಿಮಾ 
C). ಕ್ರೆಟಿನಿಸಮ್ 
D). ಮಲೇರಿಯಾ 

Correct Ans: (A) 
Description:

ಡಯಾಬಿಟಿಸ್

ಲ್ಯಾಂಗರ್ ಹಾನ್ಸ್‌ನ ಕಿರುದ್ವೀಪಗಳು ಉತ್ಪತ್ತಿಮಾಡುವ ಹಾರ್ಮೋನ್ ಗಳ ಕೊರತೆಯಿಂದ ಉಂಟಾಗುವ ಕಾಯಿಲೆ ಡಯಾಬಿಟಿಸ್. ಸಾಕಷ್ಟು ಇನ್ಸುಲಿನ್ ಉತ್ಪತ್ತಿಯಾಗದಿದ್ದರೆ ರಕ್ತದಲ್ಲಿ ಗ್ಲೂಕೋಸ್ ಪ್ರಮಾಣ ಹೆಚ್ಚಿ ಮೂತ್ರದ ಮೂಲಕ ವಿಸರ್ಜನೆಗೊಳ್ಳುತ್ತದೆ. ಸ್ಥಿತಿಯನ್ನು ಡಯಾಬಿಟಿಸ್ ಮೆಲ್ಲಿಟಸ್ ಎನ್ನುವರು.ಇನ್ಸುಲಿನ್ ಚುಚ್ಚುಮದ್ದಿನಿಂದ ಈ ರೋಗವನ್ನು ನಿವಾರಿಸಬಹುದು.

22.)

ಸುಪ್ರಾರೀನಲ್ ಗ್ರಂಥಿ ಎಂದು ಯಾವ ಗ್ರಂಥಿಯನ್ನು ಕರೆಯುತ್ತಾರೆ?

A). ಥೈಮಸ್ ಗ್ರಂಥಿ 
B). ಥೈರಾಯಿಡ್ ಗ್ರಂಥಿ 
C). ಹೈಪೋಥಲಾಮಸ್ ಗ್ರಂಥಿ 
D). ಅಡ್ರಿನಲ್ ಗ್ರಂಥಿ 

Correct Ans: (D) 
Description:

ಅಡ್ರಿನಲ್ ಗ್ರಂಥಿ

ಪ್ರತಿ ಮೂತ್ರಜನಕಾಂಗದ ಮೇಲೆ ತ್ರಿಕೋನಾಕಾರದ ಟೋಪಿಯಂತೆ ಒಂದೊಂದು ಆಡ್ರಿನಲ್ ಗ್ರಂಥಿ ಇದೆ. ಈ ರೀತಿ ಕಂಡು ಬರುವುದಕ್ಕೆ ಸುಪ್ರಾರೀನಲ್ ಗ್ರಂಥಿ ಎಂದು ಕರೆಯುವರು.

23.)

ತುರ್ತು ಪರಿಸ್ಥಿತಿ ಹಾರ್ಮೋನ್ ಎಂದು ಹೆಸರು ಪಡೆದಿರುವ ಹಾರ್ಮೋನ್ ಯಾವುದು?

A). ಥೈರಾಕ್ಸಿನ್ ಹಾರ್ಮೋನ್ 
B). ಎಪಿನೆಫ್ರಿನ್ ಹಾರ್ಮೋನ್ 
C). ಅಲ್ಡೋಸ್ಫಿರೋನ್ ಆರ್ಮೋನ್ 
D). ಕ್ಯಾಲ್ಸಿಟೋನಿನ್ ಹಾರ್ಮೋನ್ 

Correct Ans: (B) 
Description:

ಎಪಿನೆಫ್ರಿನ್ ಹಾರ್ಮೋನ್

ಎಪಿನೆಫ್ರಿನ್ ಹಾರ್ಮೋನ್ ತುರ್ತು ಪರಿಸ್ಥಿತಿಯಲ್ಲಿ ಉಸಿರಾಟ ಕ್ರಿಯೆ ಮತ್ತು ಹೃದಯದ ಬಡಿತವನ್ನು ನಿಯಂತ್ರಿಸುತ್ತದೆ. ಆದ್ದರಿಂದ ಇದನ್ನು ತುರ್ತು ಪರಿಸ್ಥಿತಿ ಹಾರ್ಮೋನ್ ಎಂದು ಕರೆಯುತ್ತಾರೆ.

24.)

ಹೃದಯದ ಪಕ್ಕದಲ್ಲಿ ಕಂಡು ಬರುವ ಗ್ರಂಥಿ ಯಾವುದು?

A). ಥೈರಾಯಿಡ್ ಗ್ರಂಥಿ 
B). ಹೈಪೋಥಲಾಮಸ್ ಗ್ರಂಥಿ 
C). ಥೈಮಸ್ ಗ್ರಂಥಿ 
D). ಅಡ್ರಿನಲ್ ಗ್ರಂಥಿ 

Correct Ans: (C) 
Description:

ಥೈಮಸ್ ಗ್ರಂಥಿ

ಹೃದಯದ ಪಕ್ಕದಲ್ಲಿ ಕಂಡು ಬರುವ ಗ್ರಂಥಿ ಥೈಮಸ್ ಗ್ರಂಥಿ. ಇದರಿಂದ ಥೈಮೋಸಿನ್ ಹಾರ್ಮೋನ್ ಮತ್ತು T-Lympocyte ಬಿಳಿ ರಕ್ತಕಣ ಉತ್ಪತ್ತಿಯಾಗುತ್ತದೆ. ಥೈಮೋಸಿನ್ ಹಾರ್ಮೋನ್ ದೇಹದ ಬೆಳವಣಿಗೆಗೆ ಕಾರಣವಾಗಿದೆ. ಮತ್ತು T-Lympocyte ಬಿಳಿ ರಕ್ತಕಣಗಳು ರೋಗ ನಿರೋಧಕ ಶಕ್ತಿಯನ್ನು ಹೆಚ್ಚಿಸುತ್ತವೆ.

25.)

ವೃಷಣಗಳಿಂದ ಸ್ರವಿಕೆಯಾಗುವ ಹಾರ್ಮೋನ್‌ಗಳಿಗೆ ಏನೆಂದು ಕರೆಯುವರು?

A). ಈಸ್ಟ್ರೋಜನ್ 
B). ಎಪಿನೆಫ್ರಿನ್ 
C). ಕ್ಯಾಲ್ಸಿಟೋನಿನ್ 
D). ಆ್ಯಂಡ್ರೋಜನ್ 

Correct Ans: (D) 
Description:

ಆ್ಯಂಡ್ರೋಜನ್

ವೃಷಣಗಳಿಂದ ಸ್ರವಿಕೆಯಾಗುವ ಹಾರ್ಮೋನ್‌ಗಳಿಗೆ ಆ್ಯಂಡ್ರೋಜನ್ ಎಂದು ಕರೆಯುವರು. ಪ್ರಮುಖವಾದ ಆ್ಯಂಡ್ರೋಜನ್ ಹಾರ್ಮೋನ್ 'ಟೆಸ್ಟೊಸ್ಮಿರಾನ್'. ಇದು ಗಂಡಿನ ಪ್ರಾಥಾಮಿಕ ಮತ್ತು ದ್ವಿತೀಯ ಲೈಂಗಿಕ ಲಕ್ಷಣಗಳಿಗೆ ಕಾರಣವಾಗಿದೆ.

26.)

ಅಂಡಾಶಯಗಳಿಂದ ಸ್ರವಿಕೆಯಾಗುವ ಹಾರ್ಮೋನುಗಳಿಗೆ ಏನೆಂದು ಕರೆಯುತ್ತಾರೆ?

A). ಎಪಿನೆಫ್ರಿನ್ 
B). ಈಸ್ಟ್ರೋಜನ್ 
C). ಆ್ಯಂಡ್ರೋಜನ್ 
D). ಮೇಲಿನ ಯಾವುದು ಸರಿ ಅಲ್ಲ 

Correct Ans: (B) 
Description:

ಈಸ್ಟ್ರೋಜನ್

ಅಂಡಾಶಯಗಳಿಂದ ಸ್ರವಿಕೆಯಾಗುವ ಹಾರ್ಮೋನುಗಳಿಗೆ ಈಸ್ಟ್ರೋಜನ್ ಕರೆಯುತ್ತಾರೆ. ಪ್ರಮುಖವಾದ ಈಸ್ಟ್ರೋಜನ್ ಹಾರ್ಮೋನ್ - 'ಈಸ್ಟ್ರಾಡಯಾಲ್' ಇದು ಹೆಣ್ಣಿನ ಪ್ರಾಥಾಮಿಕ ಮತ್ತು ದ್ವಿತೀಯ ಲೈಂಗಿಕ ಲಕ್ಷಣಗಳಿಗೆ ಕಾರಣವಾಗಿದೆ.

27.)

ಅಂಡಾಶಯಗಳಲ್ಲಿ ಉತ್ಪತ್ತಿಯಾಗುವ ಹಳದಿ ಬಣ್ಣದ ರಚನೆಗೆ _____ ಎನ್ನುವರು.

A). ಕಾರ್ಪಸ್ ಲೂಟಿಯಮ್ 
B). ಈಸ್ಟ್ರೋಜನ್ 
C). ಆ್ಯಂಡ್ರೋಜನ್ 
D). ಮೇಲಿನ ಎಲ್ಲವೂ ತಪ್ಪು 

Correct Ans: (A) 
Description:

ಕಾರ್ಪಸ್ ಲೂಟಿಯಮ್

ಅಂಡಾಶಯಗಳಲ್ಲಿ ಉತ್ಪತ್ತಿಯಾಗುವ ಹಳದಿ ಬಣ್ಣದ ರಚನೆಗೆ ಕಾರ್ಪಸ್ ಲೂಟಿಯಮ್ ಎನ್ನುವರು. ಇದು ಪ್ರೋಜೆಸ್ಟಿ ರಾನ್ ಹಾರ್ಮೊನ್‌ನ್ನು ಸ್ರವಿಕೆ ಮಾಡುತ್ತದೆ. ಇದು ಗರ್ಭಕೋಶದಲ್ಲಿ ಗರ್ಭಧಾರಣೆಗೆ ಬೇಕಾದ ಎಲ್ಲಾ ಬದಲಾವಣೆಯನ್ನು ಉಂಟು ಮಾಡುತ್ತದೆ.

1 ಕಾಮೆಂಟ್‌: