ಆಟಗಾರರಿಗಾಗಿ 'ಸುರಕ್ಷಾ' ಯೋಜನೆ
ಬೆಂಗಳೂರು: ದೇಶದಲ್ಲಿ ಮೊದಲ ಬಾರಿಗೆ ಆಟಗಾರರಿಗೆ ಪಿಂಚಣಿ ಯೋಜನೆ ಜಾರಿ ಮಾಡಿದ ಏಕೈಕ ಸಂಸ್ಥೆ ಎಂಬ ಹೆಗ್ಗಳಿಕೆ ಹೊಂದಿರುವ ಕರ್ನಾಟಕ ರಾಜ್ಯ ಕ್ರಿಕೆಟ್ ಸಂಸ್ಥೆ (ಕೆಎಸ್‌ಸಿಎ) ಶನಿವಾರ ರಾಜ್ಯದ ಕ್ರಿಕೆಟಿಗರಿಗೆ ಮತ್ತೊಂದು ವಿಶಿಷ್ಠ ಕೊಡುಗೆ ನೀಡಿದೆ.
ಆಟಗಾರರ ಹಿತ ಕಾಯಲು ಮುಂದಾಗಿರುವ ಕೆಎಸ್‌ಸಿಎ ಎಲ್ಲರಿಗೂ ಜೀವ ವಿಮೆ ಮಾಡಿಸಲು ಮುಂದಾಗಿದ್ದು ಇದಕ್ಕಾಗಿ ‘ಕೆಎಸ್‌ಸಿಎ ಸುರಕ್ಷಾ’ ಯೋಜ ನೆ ಯನ್ನು ಜಾರಿಗೆ ತರಲು ನಿರ್ಧರಿಸಿದೆ.
ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ ಶನಿವಾರ ನಡೆದ ವಾರ್ಷಿಕ ಪ್ರಶಸ್ತಿ ಪ್ರದಾನ ಸಮಾರಂಭದ ವೇಳೆ ಹೊಸ ಯೋಜನೆ ಯನ್ನು ಘೋಷಿಸಲಾಗಿದ್ದು ಇದು ಏಪ್ರಿಲ್ 1ರಿಂದ ಜಾರಿ ಯಾಗಲಿದೆ. ಕೆಎಸ್‌ಸಿಎ ಮತ್ತು ನ್ಯಾಷನಲ್ ಇನ್ಸುರೆನ್ಸ್ ಕಂಪೆನಿ ಲಿಮಿಟೆಡ್ ಸಹಭಾಗಿತ್ವದಲ್ಲಿ ಜಾರಿಗೆ ತಂದಿರುವ ಈ ಯೋಜನೆಯು ರಾಷ್ಟ್ರೀಯ ತಂಡದಲ್ಲಿ ಆಡುವ ರಾಜ್ಯದ ಆಟಗಾರರಿಗೆ ಅನ್ವಯ ವಾಗುವುದಿಲ್ಲ.
‘ಆಟಗಾರರ ಹಿತ ದೃಷ್ಟಿಯನ್ನು ಗಮನದಲ್ಲಿಟ್ಟುಕೊಂಡು ಕೆಎಸ್‌ಸಿಎ ಹೊಸ ಯೋಜನೆ ಜಾರಿಗೆ ತಂದಿದೆ. ದೇಶದಲ್ಲೇ ಇದು ಹೊಸ ಬಗೆಯ ಪ್ರಯೋಗವಾಗಿದ್ದು ಅಂದಾಜು 5000 ಕ್ರಿಕೆಟಿಗರು ಇದರ ಫಲಾನುಭವಿಗಳಾಗಲಿ ದ್ದಾರೆ ’ ಎಂದು ಕೆಎಸ್‌ಸಿಎ ವಕ್ತಾರ ವಿನಯ್ ಮೃತ್ಯುಂಜಯ ತಿಳಿಸಿದರು.
ಹೊಸ ಯೋಜನೆಯ ಅನುಸಾರ ಪ್ರತಿಯೊಬ್ಬ ಆಟಗಾರನ ಹೆಸರಿಗೂ ₹ 1 ಲಕ್ಷ ಮೊತ್ತದ ವಿಮೆ ಮಾಡಿಸಲಾಗುತ್ತದೆ. ಆಟಗಾರ ಅಪಘಾತದಲ್ಲಿ ಮೃತಪಟ್ಟರೆ, ಅಥವಾ ಅಂಗವೈಕಲ್ಯಕ್ಕೆ ಒಳಗಾದರೆ ಅವರ ಕುಟುಂಬಕ್ಕೆ ಈ ಮೊತ್ತ ಸಿಗಲಿದೆ.
ಕಾಮೆಂಟ್‌ಗಳಿಲ್ಲ:
ಕಾಮೆಂಟ್ ಪೋಸ್ಟ್ ಮಾಡಿ