ಗುರುವಾರ, ಮಾರ್ಚ್ 30, 2017

ಜಿ,ಎಸ್,ಟಿ, ಮಸೂದೆ ಜುಲೈ 1 ರಿಂದ ಜಾರಿ

ಕೊನೆಗೂ ಜಿಎಸ್ ಟಿ ಕರಡು ಮಸೂದೆಗೆ ಒಪ್ಪಿಗೆ: ಜುಲೈ 1ರಿಂದ ಅನುಷ್ಠಾನ ಸಾಧ್ಯತೆ
ನವದೆಹಲಿ: ಸರಕು ಮತ್ತು ಸೇವಾ ತೆರಿಗೆ(ಜಿಎಸ್ ಟಿ) ಯನ್ನು ಜುಲೈ 1 ರಿಂದ ಜಾರಿಗೆ ತರುವ ಹಾದಿ ಸುಗಮವಾಗುತ್ತಿದೆ. ಮಾರ್ಚ್ 9 ರಿಂದ ನಡೆಯುವ ಬಜೆಟ್ ಅಧಿವೇಶನದಲ್ಲಿ ಮಸೂದೆಗೆ ಶಾಸನಾತ್ಮಕ ಒಪ್ಪಿಗೆ ಪಡೆಯುವ ವಿಶ್ವಾಸವಿದೆ ಎಂದು ಕೇಂದ್ರ ಹಣಕಾಸು ಸಚಿವ ಅರುಣ್ ಜೇಟ್ಲಿ ತಿಳಿಸಿದ್ದಾರೆ.

ಜಿಎಸ್ ಟಿ ಮಂಡಳಿಯ ಸಭೆ ಬಳಿಕ ಮಾತನಾಡಿದ ಅವರು ಕೇಂದ್ರದ ಜಿಎಸ್ ಟಿ ಮತ್ತು ಅಂತರ ರಾಜ್ಯ ವಹಿವಾಟಿಗೆ ಸಂಬಂಧಿಸಿದ ಸಮಗ್ರ ಕರಡು ಮಸೂದೆಗೆ ಜಿಎಸ್ ಟಿ ಮಂಡಳಿ ಒಪ್ಪಿಗೆ ನೀಡಿದೆ. ಆದರೆ ರಾಜ್ಯಗಳಿಗೆ ಸಂಬಂಧಿಸಿದ ಯುಟಿ-ಜಿಎಸ್ ಟಿ ಮತ್ತು ಕೇಂದ್ರಾಡಳಿತ ಮಸೂದೆಗಳಿಗೆ ಮಾರ್ಚ್ 16 ರಂದು ನಡೆಯಲಿರುವ ಸಭೆಯಲ್ಲಿ ಒಪ್ಪಿಗೆ ಪಡೆಯಲಾಗುವುದು ಎಂದು ಹೇಳಿದ್ದಾರೆ.

ಗರಿಷ್ಠ ಶೇ. 40 ರ ವರೆಗೂ ತೆರಿಗೆ ವಿಧಿಸಲು (ಶೇ.20 ರಷ್ಟು ಕೇಂದ್ರ ಮತ್ತು ಶೇ.20 ರಷ್ಟು ರಾಜ್ಯಗಳು) ಜಿಎಸ್ ಟಿ ಮಸೂದೆಯಲ್ಲಿ ಅವಕಾಶವಿದೆ.
ಆದರೆ ತೆರಿಗೆ ದರವನ್ನು ಈ ಹಿಂದೆ ಮಂಜಳಿಯು ಒಪ್ಪಿಗೆ ನೀಡಿರುವ ಹಂತಗಳಲ್ಲಿಯೇ (ಶೇ.5, ಶೇ.12, ಶೇ.18 ಮತ್ತು ಶೇ. 28) ಇಡಲಾಗುವುದು ಎಂದು ಅವರು ವಿವರಿಸಿದ್ದಾರೆ.

ಕಾಮೆಂಟ್‌ಗಳಿಲ್ಲ:

ಕಾಮೆಂಟ್‌‌ ಪೋಸ್ಟ್‌ ಮಾಡಿ