ಶನಿವಾರ, ಮಾರ್ಚ್ 25, 2017

ಲೋಕಸಭೆಯ ಪರಿಚಯ

*ಲೋಕಸಭೆಯ_ಪರಿಚಯ*

ಲೋಕಸಭೆಯನ್ನು ಸಂಸತ್ತಿನ ಕೆಳಮನೆಯೆಂದು ಕರೆಯಲಾಗುತ್ತದೆ. ಲೋಕಸಭೆಯ ಗರಿಷ್ಠ ಸದಸ್ಯರ ಸಂಖ್ಯೆ 552 ಆಗಿರುತ್ತದೆ. ಅದಕ್ಕಿಂತ ಹೆಚ್ಚಿನ ಸಂಖ್ಯೆಯ ಸದಸ್ಯರನ್ನು ಹೊಂದಿರಬಾರದು. ಇವರಲ್ಲಿ ಈ ಕೆಳಕಂಡಂತೆ ಪ್ರತಿನಿಧಿಗಳನ್ನು ಆಯ್ಕೆಮಾಡಲಾಗುವುದು. ಆಯಾ ರಾಜ್ಯಗಳಿಂದ ಲೋಕಸಭಾ ಸ್ಥಾನಕ್ಕೆ ಆಯ್ಕೆಯಾದ ಸದಸ್ಯರನ್ನು ಹೊಂದಿರುತ್ತಾರೆ.

*ಸದಸ್ಯರ ಮಾಹಿತಿ:*

ರಾಜ್ಯಗಳಿಂದ ನೇಮಕವಾಗುವ ಸದಸ್ಯರು 530
ಕೇಂದ್ರಾಡಳಿತ ಪ್ರದೇಶದಿಂದ ನೇಮಕವಾಗುವ ಸದಸ್ಯರು 13
ಆಂಗ್ಲೋ ಇಂಡಿಯನ್ ಸಮುದಾಯದಿಂದ ನೇಮಕವಾಗುವ ಸದಸ್ಯರು 2
ಒಟ್ಟು 545

*ಲೋಕಸಭಾ ಚುನಾವಣೆ:-*

ಲೋಕಸಭೆಗೆ ಚುನಾವಣೆ ಸಾರ್ವತ್ರಿಕ ವಯಸ್ಕ ಮತದಾನದ ಮೂಲಕ ನಡೆಯುತ್ತದೆ. 18 ವರ್ಷ ಮೇಲ್ಪಟ್ಟ ಭಾರತೀಯ ಪ್ರಜೆಗಳು ಮತ ಚಲಾಯಿಸಬಹುದಾಗಿದೆ.

*ಸದಸ್ಯರಾಗಲು_ಇರಬೇಕಾದ_ಅರ್ಹತೆಗಳು:-*

# ಭಾರತೀಯ ಪ್ರಜೆಯಾಗಿರಬೇಕು.

# ಕನಿಷ್ಠ 25 ವರ್ಷ ವಯಸ್ಸಾಗಿರಬೇಕು.

# ಸರ್ಕಾರದಲ್ಲಿ ಲಾಭದಾಯಕ ಹುದ್ದೆ ಹೊಂದಿರಬಾರದು.

# ಕೋರ್ಟ್ ನಿಂದ ಶಿಕ್ಷೆಗೆ ಒಳಗಾಗಿರಬಾರದು.

# ದಿವಾಳಿಕೋರನಾಗಿರಬಾರದು.

# ಮತಿಭ್ರಮಣೆಗೊಂಡಿರಬಾರದು.

# ಚುನಾವಣಾ ಆಯೋಗದ ನಿಷೇಧಕ್ಕೆ ಒಳಗಾಗಿರಬಾರದು.

*ಅಧಿಕಾರವಧಿ_ಮತ್ತು_ಪ್ರಮಾಣವಚನ:-*

ಲೋಕಸಭೆಯ ಸದಸ್ಯರ ಅವಧಿ ಐದು ವರ್ಷ, ಸತತವಾಗಿ ಅಧಿವೇಶನಕ್ಕೆ 60 ದಿನಗಳು ಗೈರುಹಾಜರಿದ್ದರೆ ಅವರ ಸದಸ್ಯತ್ವ ರದ್ದಾಗುವುದು.

99 ನೇ ಅನುಚ್ಛೇದದ ಮೇರೆಗೆ ಸದನದ ಪ್ರತಿಯೊಬ್ಬ ಸದಸ್ಯನು ಸಂವಿಧಾನವನ್ನು ಗೌರವಿಸಿ, ಪ್ರತಿಜ್ಞೆ ಸ್ವೀಕರಿಸಬೇಕು. ಪ್ರತಿಜ್ಞಾವಿಧಿ ಸ್ವೀಕರಿಸದ ಸದಸ್ಯನು ಸದನದಲ್ಲಿ ಹಾಜರಾದರೆ ಹಾಗೂ ಚಲಾಯಿಸದರೆ 104 ನೇ ಅನುಚ್ಛೇದದ ಪ್ರಕಾರ ಪ್ರತಿದಿನ 500 ರೂಪಾಯಿಯ ದಂಡ ತೆರಬೇಕಾಗುತ್ತದೆ.

*ಲೋಕಸಭೆಯ_ಅಧ್ಯಕ್ಷರು:-*

☀️ಲೋಕಸಭೆಯ ಕಾರ್ಯಕಲಾಪಗಳನ್ನು ಸುಗಮವಾಗಿ ನಡೆಸಿಕೊಂಡು ಹೋಗುವ ಮುಖ್ಯಸ್ಥನಿಗೆ ಸಭಾಪತಿ (Speaker) ಎನ್ನುವರು. ಎಲ್ಲ ರಾಜಕೀಯ ಪಕ್ಷಗಳನ್ನು ಒಂದೇ ತೆರನಾಗಿ ನೋಡಿಕೊಂಡು ಹೋಗುವ ಜವಾಬ್ದಾರಿಯು ಇವರದಾಗಿರುತ್ತದೆ. ಸಭಾಪತಿಯನ್ನು ಲೋಕಸಭಾ ಸದಸ್ಯರು ಅವಿರೋಧವಾಗಿ ಇಲ್ಲವೇ ಚುನಾವಣೆಯ ಮೂಲಕ ಆಯ್ಕೆ ಮಾಡುತ್ತಾರೆ. ಪ್ರತಿ ಹೊಸ ಲೋಕಸಭೆಯು ತನ್ನ ಸಭಾಪತಿಯನ್ನು ಆಯ್ಕೆ ಮಾಡುತ್ತದೆ.

☀️ಸದನದಲ್ಲಿ ಹಾಜರಿದ್ದ ಸದಸ್ಯರ ಬಹುಮತದಿಂದ ಗೊತ್ತುವಳಿಯನ್ನು ಅಂಗೀಕರಿಸಿ 14 ದಿವಸ ಮುಂಚಿತವಾಗಿ ಅವರಿಗೆ ನೋಟಿಸನ್ನು ಜಾರಿಗೊಳಿಸಿ, ಸಭಾಧ್ಯಕ್ಷರನ್ನು ಹಾಗೂ ಉಪಸಭಾಧ್ಯಕ್ಷರನ್ನು ಅಧಿಕಾರದಿಂದ ಪದಚ್ಯುತಗೊಳಿಸಬಹುದು.

☀️ಸಭಾಪತಿ ಹಾಗೂ ಉಪಸಭಾಪತಿ ಸದನದಲ್ಲಿ ಗೈರುಹಾಜರಾದರೆ ಸದನದ ಕಾರ್ಯಕಲಾಪಗಳನ್ನು ಸುಸೂತ್ರವಾಗಿ ನಿರ್ವಹಿಸಲು ಆರು ಜನರ ಪಟ್ಟಿಯನ್ನು ಸಭಾಪತಿಗಳೇ ರಚಿಸುತ್ತಾರೆ. ಅವರು ಕ್ರಮವಾಗಿ ನಿರ್ವಹಿಸುತ್ತಾರೆ. ಈ ಪಟ್ಟಿಯಲ್ಲಿ ವಿರೋಧ ಪಕ್ಷದ ಸದಸ್ಯರಿಗೂ ಅವಕಾಶ ಕಲ್ಪಿಸಿ ಕೊಡಲಾಗುತ್ತದೆ.

*ಸಭಾಪತಿಯ_ಅಧಿಕಾರ_ಮತ್ತು_ಕಾರ್ಯಗಳು:-*

# ಲೋಕಸಭೆಯ ಕಾರ್ಯಕಲಾಪಗಳ ಮುಖ್ಯಸ್ಥನಾಗಿ ಕಾರ್ಯನಿರ್ವಹಿಸುವುದು.

# ಸಭೆಯಲ್ಲಿ ಯಾರು ಪ್ರಶ್ನೆ ಮೊದಲು ಕೇಳಬೇಕು, ಯಾವ ಭಾಷೆ ಬಳಸಬೇಕು ಎಂಬುದನ್ನು ನಿರ್ಧರಿಸುತ್ತದೆ.

# ಸಭೆಯಲ್ಲಿ ಅನುಚಿತವಾಗಿ ವರ್ತನೆ ತೋರಿಸಿದ ಸದಸ್ಯರನ್ನು ಸದನದಿಂದ ಹೂರಗೆ ಹಾಕುವ ಅಧಿಕಾರವಿದೆ.

# ಲೋಕಸಭೆಯಲ್ಲಿ ಮಂಡನೆಯಾಗುವ ಮಸೂದೆಗಳು ಹಣಕಾಸಿನ ಮಸೂದೆಯೋ ಅಥವಾ ಸಾಮಾನ್ಯ ಮಸೂದೆಯೋ ಎಂಬುದನ್ನು ನಿರ್ಧರಿಸುತ್ತಾನೆ.

# ಜಂಟಿ ಅಧೀವೇಷನದ ಅಧ್ಯಕ್ಷ ಸ್ಥಾನವನ್ನು ವಹಿಸುವರು.

# ಲೋಕಸಭೆಯ ಸದಸ್ಯರ ನಾಯಕನಾಗಿ ಅವರ ಹಕ್ಕುಗಳನ್ನು ರಕ್ಷಿಸುವ ಕಾರ್ಯ ಮಾಡುತ್ತಾರೆ.

# ಸಭಾಪತಿಯ ಅನುಮತಿ ಇಲ್ಲದೆ ಸದನದ ಆವರಣದಲ್ಲಿ ಯಾವ ವ್ಯಕ್ತಿಯನ್ನು ಬಂಧಿಸುವಂತಿಲ್ಲ.

# ಸಭಾಪತಿ ಭಾರತೀಯ ಸಂಸದಿಕ ತಂಡದ ಪದನಿಮಿತ್ತ ಅಧ್ಯಕ್ಷರಾಗಿ ಕಾರ್ಯನಿರ್ವಹಿಸುತ್ತಾರೆ.

# ಸದಸ್ಯನ ಅಕ್ರಮ ನಡುವಳಿಕೆಗಾಗಿ ಆತನನ್ನು ಸದನದಿಂದ ಒಂದು ದಿನಕ್ಕಾಗಿ ಅಥವಾ ಸ್ವಲ್ಪ ಅವಧಿಗಾಗಿ ಹೊರ ಕಳುಹಿಸುವ ಅಧಿಕಾರವನ್ನು ಸಭಾಪತಿಯವರು ಹೊಂದಿರುತ್ತಾರೆ.

# ಪಕ್ಷಾಂತರಕ್ಕೆ ಸಂಬಂಧಿಸಿದಂತೆ ಸಭಾಪತಿ ಸದಸ್ಯನೊಬ್ಬನನ್ನು ಅನರ್ಹಗೊಳಿಸುವ ಅಂತಿಮ ಅಧಿಕಾರ ಹೊಂದಿರುತ್ತಾರೆ.

# ಭಾರತದ ಪ್ರಪ್ರಥಮ ಸಭಾಪತಿ = ಜಿ.ವಿ ಮಾವಳಂಕರ್

# ಭಾರತದ ಪ್ರಥಮ ಕನ್ನಡಿಗ ಸಭಾಪತಿ = ಕೆ.ಎಸ್ ಹೆಗಡೆ

# ಭಾರತದ ಉಪಸಭಾಪತಿಯಾದ ಮೊದಲ ಕನ್ನಡಿಗ = ಎಸ್. ಮಲ್ಲಿಕಾರ್ಜುನಯ್ಯ

# ಸಭಾಪತಿಯನ್ನು ಬಹುಮತದ ಮೂಲಕ ವಜಾ ಮಾಡಬಹುದಾಗಿದೆ.

# ಪ್ರಸ್ತುತ ಲೋಕಸಭೆಯ ಸಭಾಪತಿ = ಸುಮಿತ್ರಾ ಮಹಾಜನ್ (2014 ರಿಂದ).

*ಉಪ_ಸಭಾಪತಿ:-*

# ಸಭಾಪತಿಯ ಅನುಪಸ್ಥಿತಿಯಲ್ಲಿ ಇವರು ಕಾರ್ಯನಿರ್ವಹಿಸುತ್ತಾರೆ.

# ಇವರು ಬಜೆಟ್ ಸಮಿತಿಯ ಅಧ್ಯಕ್ಷರಾಗಿರುತ್ತಾರೆ.

# ಇವರು ಸದನದ ಚರ್ಚೆಯಲ್ಲಿ ಭಾಗವಹಿಸಿ, ಒಬ್ಬ ಸದಸ್ಯನಾಗಿ ಮತ ಚಲಾಯಿಸಬಹುದು. ಆದರೆ ಸಭಾಧ್ಯಕ್ಷನಾಗಿ ಕಾರ್ಯ ನಿರ್ವಹಿಸುತ್ತಿರುವಾಗ ಇದಕ್ಕೆ ಅವಕಾಶವಿಲ್ಲ.

ಕಾಮೆಂಟ್‌ಗಳಿಲ್ಲ:

ಕಾಮೆಂಟ್‌‌ ಪೋಸ್ಟ್‌ ಮಾಡಿ