ಗುರುವಾರ, ಮಾರ್ಚ್ 30, 2017

ಕುಲದೀಪ್ ನಯ್ಯರ್ ಪ್ರಶಸ್ತಿ- ರವೀಶ್ ಕುಮಾರ್

ರವೀಶ್‌ಕುಮಾರ್‌ಗೆ ಪ್ರಪ್ರಥಮ ಕುಲದೀಪ್ ನಯ್ಯರ್ ಪತ್ರಿಕೋದ್ಯಮ ಪ್ರಶಸ್ತಿ

ಹೊಸದಿಲ್ಲಿ,ಮಾ.20: ಎನ್‌ಡಿಟಿವಿ ಇಂಡಿಯಾದ ಹಿರಿಯ ಕಾರ್ಯನಿರ್ವಾಹಕ ಸಂಪಾದಕ ರವೀಶ್ ಕುಮಾರ್ ಅವರು ಪ್ರಪ್ರಥಮ ಕುಲದೀಪ್ ನಯ್ಯರ್ ಪತ್ರಿಕೋದ್ಯಮ ಪ್ರಶಸ್ತಿಗೆ ಪಾತ್ರರಾಗಿದ್ದಾರೆ. ರವಿವಾರ ದಿಲ್ಲಿಯ ಇಂಡಿಯಾ ಇಂಟರ್‌ನ್ಯಾಷನಲ್ ಸೆಂಟರ್‌ನಲ್ಲಿ ನಡೆದ ಸಮಾರಂಭದಲ್ಲಿ ಅವರಿಗೆ ಈ ಪ್ರಶಸ್ತಿಯನ್ನು ಪ್ರದಾನಿಸಲಾಯಿತು. ಹಿರಿಯ ಪತ್ರಕರ್ತ ಕುಲದೀಪ್ ನಯ್ಯರ್ ಮತ್ತು ಗಾಂಧಿ ಶಾಂತಿ ಪ್ರತಿಷ್ಠಾನ ಜಂಟಿಯಾಗಿ ಸ್ಥಾಪಿಸಿರುವ ಈ ಪ್ರಶಸ್ತಿಯನ್ನು ತಮ್ಮ ಕಾರ್ಯಗಳಿಂದ ಸ್ವತಂತ್ರ ಚಿಂತನೆ, ಪ್ರಜಾಸತ್ತಾತ್ಮಕ ವೌಲ್ಯಗಳು ಮತ್ತು ನಾಗರಿಕ ಹಕ್ಕುಗಳನ್ನು ಉತ್ತೇಜಿಸುವ ಭಾರತೀಯ ಭಾಷಾ ಪತ್ರಕರ್ತರಿಗೆ ಪ್ರತಿ ವರ್ಷ ನೀಡಲಾಗುತ್ತದೆ.

ಪ್ರಶಸ್ತಿಯನ್ನು ಸ್ವೀಕರಿಸಿ ಮಾತನಾಡಿದ ರವೀಶ್ ಕುಮಾರ್ ಅವರು ದೇಶದಲ್ಲಿಯ ಸದ್ಯದ ಭೀತಿ ಮತ್ತು ಬೆದರಿಕೆಯ ವಾತಾವರಣದ ಬಗ್ಗೆ ತನ್ನ ಅಭಿಪ್ರಾಯ ವ್ಯಕ್ತಪಡಿಸಿದರು.
ಸ್ಮಶಾನದಲ್ಲಿ ಸುಡುವುದು ಅಥವಾ ಖಬರಿಸ್ತಾನ್‌ದಲ್ಲಿ ದಫನ್ ಮಾಡುವುದು ಮಾತ್ರ ಸಾವಲ್ಲ. ಮಾತನಾಡದಂತೆ, ಬರೆಯದಂತೆ, ಕೇಳದಂತೆ ಬೆದರಿಕೆ ಯಿಂದ ಭೀತಿ ಪಡುವದೂ ಸಾವೇ ಆಗಿದೆ ಎಂದು ಅವರು ಹೇಳಿದರು.

‘ಕಾವಲುನಾಯಿ’ಗಳಂತೆ ವರ್ತಿಸುವ ಮತ್ತು ಸಾಯಂಕಾಲಗಳನ್ನು ‘ಲಾಕಪ್’ ಆಗಿ ಪರಿವರ್ತಿಸಿರುವ ಸುದ್ದಿ ವಾಹಿನಿಗಳ ನಿರೂಪಕರ ವಿರುದ್ಧವೂ ಅವರು ಎಚ್ಚರಿಕೆ ನೀಡಿದರು.

ಕಾಮೆಂಟ್‌ಗಳಿಲ್ಲ:

ಕಾಮೆಂಟ್‌‌ ಪೋಸ್ಟ್‌ ಮಾಡಿ