ಝಾಕಿರ್ ನಾಯ್ಕ ಸ್ಥಾಪಿಸಿದ್ದ ಸಂಸ್ಥೆಯ 18 ಕೋಟಿ ರೂ. ಮೊತ್ತದ ಆಸ್ತಿ ಮುಟ್ಟುಗೋಲು
ಹೊಸದಿಲ್ಲಿ, ಮಾ.20: ವಿದ್ವಾಂಸ ಝಾಕಿರ್ ನಾಯ್ಕಾ ಸ್ಥಾಪಿಸಿರುವ ಇಸ್ಲಾಮಿಕ್ ರಿಸರ್ಚ್ ಫೌಂಡೇಶನ್‌ಗೆ ಸೇರಿದ, ದಕ್ಷಿಣ ಮುಂಬೈಯ ಡೊಂಗ್ರಿಯಲ್ಲಿರುವ 18.37 ಕೋಟಿ ರೂ. ಮೊತ್ತದ ಆಸ್ತಿಯನ್ನು ಜಾರಿ ನಿರ್ದೇಶನಾಲಯ (ಇ.ಡಿ.) ಮುಟ್ಟುಗೋಲು ಹಾಕಿಕೊಂಡಿದೆ. ಝಾಕಿರ್ ವಿರುದ್ಧದ ಅಕ್ರಮ ಹಣ ಚಲುವೆ (ಕಪ್ಪು ಹಣ ಬಿಳುಪು ಮಾಡುವ ಪ್ರಕ್ರಿಯೆ) ಪ್ರಕರಣದ ಅಂಗವಾಗಿ ಈ ಕ್ರಮ ಕೈಗೊಳ್ಳಲಾಗಿದೆ. ಅಲ್ಲದೆ ಝಾಕಿರ್ ನಾಯ್ಕಿ ವಿರುದ್ಧ ರಾಷ್ಟ್ರೀಯ ತನಿಖಾ ಸಂಸ್ಥೆ (ಎನ್‌ಐಎ) ಹೊಸ ಸಮನ್ಸ್ ಜಾರಿಗೊಳಿಸಿದ್ದು ಮಾ.30ರಂದು ಹೊಸದಿಲ್ಲಿಯಲ್ಲಿರುವ ಕೇಂದ್ರ ಕಚೇರಿಯೆದುರು ಹಾಜರಾಗುವಂತೆ ಸೂಚಿಸಿದೆ. ಬಾಂಗ್ಲಾದೇಶದ ಢಾಕಾದ ಕೆಫೆಯೊಂದರ ಮೇಲೆ ಕಳೆದ ವರ್ಷ ಭಯೋತ್ಪಾದಕರು ನಡೆಸಿದ ದಾಳಿಗೆ ಸಂಬಂಧಿಸಿ, ಈ ಉಗ್ರರಲ್ಲಿ ಹಲವರು ಝಾಕಿರ್ ನಾಯ್ಕಾ ಬೋಧನೆ ಯಿಂದ ಪ್ರಭಾವಿತರಾಗಿ ಈ ಕಾರ್ಯ ನಡೆಸಿದ್ದರು ಎಂಬ ವರದಿಯ ಹಿನ್ನೆಲೆಯಲ್ಲಿ, ಉಗ್ರವಾದ ವಿರೋಧಿ ಕಾನೂನಿನಡಿ ನಾಯ್ಕೆಗೆ ಮಾ.14ರಂದು ಹಾಜರಾಗುವಂತೆ ಮೊದಲ ಸಮನ್ಸ್ ಜಾರಿಗೊಳಿಸಲಾಗಿತ್ತು.
ಎನ್‌ಐಎ ಕಳೆದ ನವೆಂಬರ್‌ನಲ್ಲಿ ಝಾಕಿರ್ ನಾಯ್ಕ್ ಮತ್ತವರ ಸಹಚರರ ವಿರುದ್ಧ ಎಫ್‌ಐಆರ್ ದಾಖಲಿಸಿತ್ತು. ಮುಂಬೈಯಲ್ಲಿರುವ ಝಾಕಿರ್ ನಿವಾಸಕ್ಕೆ ನೋಟಿಸ್ ಕಳುಹಿಸಲಾಗಿದೆ. ಬಂಧನದಿಂದ ತಪ್ಪಿಸಿಕೊಳ್ಳಲು ಝಾಕಿರ್ ಇದೀಗ ಸೌದಿ ಅರೇಬಿಯಾದಲ್ಲಿ ನೆಲೆಸಿದ್ದಾರೆ ಎನ್ನಲಾಗಿದೆ.
ಕಾಮೆಂಟ್‌ಗಳಿಲ್ಲ:
ಕಾಮೆಂಟ್ ಪೋಸ್ಟ್ ಮಾಡಿ