ಬಿಎಸ್‌ಎಫ್ ತುಕಡಿಗೆ ಮೊದಲ ಮಹಿಳಾ ಅಧಿಕಾರಿ
ಗ್ವಾಲಿಯರ್: ತನ್ನ 51 ವರ್ಷಗಳ ಇತಿಹಾಸದಲ್ಲಿ ಗಡಿ ಭದ್ರತಾ ಪಡೆ (ಬಿಎಸ್‌ಎಫ್) ಇದೇ ಮೊದಲ ಬಾರಿಗೆ ಮಹಿಳೆಯೊಬ್ಬರನ್ನು ತುಕಡಿಯೊಂದರ ಮುಖ್ಯಸ್ಥರನ್ನಾಗಿ ನಿಯೋಜನೆ ಮಾಡಲಿದೆ.
25 ವರ್ಷದ ವಯಸ್ಸಿನ ತನುಶ್ರೀ ಪರೀಕ್ ತುಕಡಿಯ ನೇತೃತ್ವ ವಹಿಸಲಿರುವವರು. ಇವರು ರಾಜಸ್ತಾನದ ಬಿಕಾನೇರ್‌ನವರು.
ಇಲ್ಲಿನ ತೆಕಾನ್‌ಪುರದಲ್ಲಿ ಶನಿವಾರ ನಡೆದ ನಿರ್ಗಮನ ಪಥಸಂಚಲನದಲ್ಲಿ 67 ತರಬೇತಿ ಅಧಿಕಾರಿಗಳ ನೇತೃತ್ವನ್ನು ತನುಶ್ರೀ ಅವರು ವಹಿಸಿದ್ದಾರೆ. ಕೇಂದ್ರ ಗೃಹ ಸಚಿವ ರಾಜನಾಥ್ ಸಿಂಗ್ ಅವರ ಹಾಜರಿಯಲ್ಲಿ ಈ ಪಥಸಂಚಲನೆ ನಡೆದಿತ್ತು.
ಕೇಂದ್ರ ಲೋಕಸೇವಾ ಆಯೋಗ 2014ರಲ್ಲಿ ನಡೆಸಿದ್ದ ಪರೀಕ್ಷೆಯಲ್ಲಿ ಪರೀಕ್ ಆಯ್ಕೆಯಾಗಿದ್ದು, ಅಧಿಕಾರಿ ಶ್ರೇಣಿಯೊಂದಿಗೆ ಬಿಎಸ್‌ಎಫ್‌ಗೆ ಸೇರ್ಪಡೆಯಾಗಿದ್ದರು. ಬಿಎಸ್‌ಎಫ್ 2013ರಿಂದ ಮಹಿಳಾ ಅಧಿಕಾರಿಗಳನ್ನೂ ನಿಯೋಜನೆ ಮಾಡುತ್ತಿದೆ.
ಕಾಮೆಂಟ್‌ಗಳಿಲ್ಲ:
ಕಾಮೆಂಟ್ ಪೋಸ್ಟ್ ಮಾಡಿ