ಸೋಮವಾರ, ಮಾರ್ಚ್ 27, 2017

ಮಾನವ ಅಭಿವೃದ್ದಿ ಸೂಚ್ಯಂಕ

ಮಾನವ ಅಭಿವೃದ್ಧಿ ಸೂಚ್ಯಾಂಕ (Human Development Index)

ಮೂಲಭೂತ ಅವಶ್ಯಕತೆಗಳ ಸಾಮಾಜಿಕ ಸೂಚಕವನ್ನು ಮಾಪನ ಮಾಡಲು ಅರ್ಥಶಾಸ್ತ್ರಜ್ಞರು ಹಲವಾರು ಸೂಚಕಗಳನ್ನು ಉಪಯೋಗಿಸಲು ಪ್ರಯತ್ನಿಸಿದ್ದಾರೆ. ಮಾನವ ಅಭಿವೃದ್ಧಿ ಸಂಯುಕ್ತ ಸೂಚಿಯನ್ನು ತಯಾರಿಸಲು ಒಂದು, ಎರಡು ಅಥವಾ ಇನ್ನೂ ಹೆಚ್ಚಿನ ಸೂಚಕಗಳನ್ನು ಬಳಸಿಕೊಳ್ಳಲು ಪ್ರಯತ್ನಿಸಿದ್ದಾರೆ.

ಪ್ರಸ್ತುತವಾಗಿ ನಾವು ಎಂ.ಡಿ.ಮೋರಿಸ್ಅವರ 'ಜೀವನದ ಭೌತಿಕ ಗುಣಮಟ್ಟ ಅನುಸೂಚಿ (PQLI)' ಹಾಗೂ'ವಿಶ್ವಸಂಸ್ಥೆಯ ಅಭಿವೃದ್ಧಿ ಕಾರ್ಯಕ್ರಮ (UNDP)' ಅಭಿವೃದ್ಧಿ ಪಡಿಸಿರುವ ಮಾನವ ಅಭಿವೃದ್ಧಿ ಅನುಸೂಚಿ (HDI) ಯನ್ನು ಪರಿಗಣಿಸಿದ್ದೇವೆ,

 

ಮಾನವ ಅಭಿವೃದ್ಧಿ ಸೂಚ್ಯಂಕದ ಮಾನದಂಡಗಳು

1) ಜೀವನದ ಭೌತಿಕ ಗುಣಮಟ್ಟ ಅನುಸೂಚಿ (Physical Quality of Life Index -PQLI)

# ಆರೋಗ್ಯ

# ಶಿಕ್ಷಣ

# ಕುಡಿಯುವ ನೀರು

# ಪೌಷ್ಠಿಕಾಂಶ

# ನೈರ್ಮಲ್ಯ ಇತ್ಯಾದಿ.

 

2) ಮಾನವ ಅಭಿವೃದ್ಧಿ ಅನುಸೂಚಿ (Human Development Life Index -HDI)

# ಜೀವನ ಮಟ್ಟ - ಅಡುಗೆ ಇಂಧನ, ಶೌಚಾಲಯ, ನೀರು, ವಿದ್ಯುತ್, ಕೃಷಿಯೇತರ ಕೆಲಸಗಾರರು, ತಲಾ ಆದಾಯ.

# ಶಿಕ್ಷಣ - ನೊಂದಣಿ ದರ, ಸಾಕ್ಷರತಾ ದರ

# ಆರೋಗ್ಯ - ಜನನದರ, ಮರಣದರ, ಬಾಣಂತಿಯರ ದರ, ಶಿಶು ಮರಣದರ

 

ಮಾನವ ಅಭಿವೃದ್ಧಿಯಲ್ಲಿ ಮೊದಲ ಐದು ಜಿಲ್ಲೆಗಳು ಮತ್ತು ಐದು ತಾಲ್ಲೂಕುಗಳು

  ಜಿಲ್ಲೆಗಳು

ತಾಲ್ಲೂಕುಗಳು

1) ಬೆಂಗಳೂರು ನಗರ

1) ಆನೇಕಲ್

2) ದಕ್ಷಿಣ ಕನ್ನಡ

2) ಬೆಂಗಳೂರು ಉತ್ತರ

3) ಉಡುಪಿ

3) ತುಮಕೂರು

4) ಕೊಡಗು

4) ಮಂಗಳೂರು

5) ಚಿಕ್ಕಮಗಳೂರು

5) ಬೆಂಗಳೂರು ದಕ್ಷಿಣ

 

ಮಾನವ ಅಭಿವೃದ್ಧಿಯಲ್ಲಿ ಕೊನೆಯ ಐದು ಜಿಲ್ಲೆಗಳು ಮತ್ತು ಐದು ತಾಲ್ಲೂಕುಗಳು

ಜಿಲ್ಲೆಗಳು

ತಾಲ್ಲೂಕುಗಳು

1) ರಾಯಚೂರು (30ನೇ ಸ್ಥಾನ)

1) ದೇವದುರ್ಗ (176ನೇ ಸ್ಥಾನ)

2) ಯಾದಗಿರಿ (29ನೇ ಸ್ಥಾನ)

2) ಸೋರಾಪುರ (175ನೇ ಸ್ಥಾನ)

3) ಕೊಪ್ಪಳ (28ನೇ ಸ್ಥಾನ)

3) ಸಿಂಧನೂರು (174ನೇ ಸ್ಥಾನ)

4) ವಿಜಯಪುರ (27ನೇ ಸ್ಥಾನ)

4) ಚಿಂಚೋಳಿ (173ನೇ ಸ್ಥಾನ)

5) ಗದಗ (26ನೇ ಸ್ಥಾನ)

5) ಮಾನ್ವಿ (172ನೇ ಸ್ಥಾನ)

 

ಜಿಲ್ಲಾ ಮಾನವ ಅಭಿವೃದ್ಧಿ ವರದಿ (DHDR)

ಲಿಂಗ ಸಂಬಂಧಿ ಸೂಚ್ಯಂಕ: ಶ್ರೇಣಿ 0 - ಲಿಂಗ ಸಂಬಂಧಿ ಸಮಾನತೆ, ಶ್ರೇಣಿ 1 - ಲಿಂಗ ಸಂಬಂಧಿ ಅಸಮಾನತೆ

 

ಮಾನದಂಡಗಳು:

# ಸಂತಾನೋತ್ಪತ್ತಿ

# ಆರೋಗ್ಯ

# ಸಬಲೀಕರಣ

# ಕಾರ್ಮಿಕ ಮಾರುಕಟ್ಟೆ

 

ಜಿಲ್ಲಾ ಮಾನವ ಅಭಿವೃದ್ಧಿಯ ಮೊದಲ ಐದು ಜಿಲ್ಲೆಗಳು ಮತ್ತು ತಾಲ್ಲೂಕುಗಳು (ಕನಿಷ್ಠ ಅಸಮಾನತೆ)

ಜಿಲ್ಲೆಗಳು

ತಾಲ್ಲೂಕುಗಳು

1) ಉಡುಪಿ

1) ಬೆಂಗಳೂರು ದಕ್ಷಿಣ

2) ದಕ್ಷಿಣ ಕನ್ನಡ

2) ಬೆಳ್ತಂಗಡಿ

3) ಬೆಂಗಳೂರು ನಗರ

3) ಕಡೂರು

4) ಚಿಕ್ಕಮಗಳೂರು

4) ಹಾಸನ

5) ಕೊಡಗು

5) ಮಂಗಳೂರು

 

ಜಿಲ್ಲಾ ಮಾನವ ಅಭಿವೃದ್ಧಿಯ ಕೊನೆಯ ಐದು ಜಿಲ್ಲೆಗಳು ಮತ್ತು ತಾಲ್ಲೂಕುಗಳು (ಗರಿಷ್ಠ ಅಸಮಾನತೆ)

ಜಿಲ್ಲೆಗಳು

ತಾಲ್ಲೂಕುಗಳು

1) ಕೊಪ್ಪಳ (30ನೇ ಸ್ಥಾನ)

1) ಕೂಡ್ಲಿಗಿ (176ನೇ ಸ್ಥಾನ)

2) ಬಳ್ಳಾರಿ (29ನೇ ಸ್ಥಾನ)

2) ಹರಿಹರ (175ನೇ ಸ್ಥಾನ)

3) ರಾಯಚೂರು (28ನೇ ಸ್ಥಾನ)

3) ಗದಗ (174ನೇ ಸ್ಥಾನ)

4) ಬಾಗಲಕೋಟೆ (27ನೇ ಸ್ಥಾನ)

4) ಹೊಸಪೇಟೆ (173ನೇ ಸ್ಥಾನ)

5) ಕಲ್ಬುರ್ಗಿ (26ನೇ ಸ್ಥಾನ)

5) ಸಿರಗುಪ್ಪ (172ನೇ ಸ್ಥಾನ)

 

ಇತರ ಪ್ರಮುಖ ಅಂಶಗಳು

# ಕರ್ನಾಟಕ ಮಾನವ ಅಭಿವೃದ್ಧಿ ವರದಿಯನ್ನು ಮೊದಲಿಗೆ 1999ರಲ್ಲಿ ಪ್ರಕಟಿಸಲಾಯಿತು, ಎರಡನೇ ಭಾರಿ 2005ರಲ್ಲಿ ಮತ್ತು ಮೂರನೇ ಬಾರಿಗೆ 2016ರಲ್ಲಿ ಪ್ರಕಟಿಸಲಾಯಿತು.

# ಜಿಲ್ಲಾ ಮಾನವ ಅಭಿವೃದ್ಧಿ ವರದಿಯನ್ನು ಪ್ರಾಯೋಗಿಕವಾಗಿ 2008ರಲ್ಲಿ ನಾಲ್ಕು ಜಿಲ್ಲೆಗಳ (ಕಲ್ಬುರ್ಗಿ, ಮೈಸೂರು, ಉಡಿಪಿ, ವಿಜಯಪುರ) ವರದಿ ಪ್ರಕಟಿಸಲಾಯಿತು. 2014ರಲ್ಲಿ ರಾಜ್ಯದಲ್ಲಿ ಮೊದಲ ಬಾರಿಗೆ 30 ಜಿಲ್ಲೆಗಳ ವರದಿ ತಯಾರಿಸಲಾಯಿತು.

ಪ್ರಾಥಮಿಕ ಮತ್ತು ಪ್ರೌಢ ಶಾಲಾ ಶಿಕ್ಷಕರ ನೇಮಕಾತಿ 2017ರ ಸಮಗ್ರ ಅಧ್ಯಯನ ಸಾಮಗ್ರಿ ಒದಗಿಸುವ ಒಂದು ಚಿಕ್ಕ ಪ್ರಯತ್ನ.📋

ಕಾಮೆಂಟ್‌ಗಳಿಲ್ಲ:

ಕಾಮೆಂಟ್‌‌ ಪೋಸ್ಟ್‌ ಮಾಡಿ