ಗುರುವಾರ, ಮಾರ್ಚ್ 30, 2017

ಸಚಿವ ಸ್ಥಾನದಲ್ಲಿ ಇದ್ದರೂ ನಾಟಕಕ್ಕೆ ಬಣ್ಣ ಹಚ್ಚಿದ ಉಮಾಶ್ರೀ

ಬಣ್ಣ ಹಚ್ಚಿದ ಉಮಾಶ್ರೀ: ನಾಟಕ ನೋಡಿದ ಸಿ.ಎಂ.

ಬೆಂಗಳೂರು: ಮುಖ್ಯಮಂತ್ರಿ ಸಿದ್ಧರಾಮಯ್ಯ ಯುಗಾದಿ ಹಬ್ಬದ ದಿನ ನಗರದ ರವೀಂದ್ರ ಕಲಾಕ್ಷೇತ್ರದಲ್ಲಿ ನಾಟಕ ವೀಕ್ಷಿಸಿದ್ದಾರೆ.

ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆ ಸಚಿವರಾದ ಖ್ಯಾತ ನಟಿ ಉಮಾಶ್ರೀ ಮತ್ತೆ ಬಣ್ಣ ಹಚ್ಚಿದ್ದಾರೆ. ಸಚಿವರಾದ ಬಳಿಕ ಇದೇ ಮೊದಲ ಬಾರಿಗೆ ಅವರು ಅಭಿನಯಿಸಿದ್ದ ನಾಟಕವನ್ನು ಮುಖ್ಯಮಂತ್ರಿ ಸಿದ್ಧರಾಮಯ್ಯ ಸೇರಿದಂತೆ ಹಲವು ಗಣ್ಯರು ವೀಕ್ಷಿಸಿದ್ದಾರೆ.

ರವೀಂದ್ರ ಕಲಾಕ್ಷೇತ್ರದಲ್ಲಿ ಸರಿಗಮ ವಿಜಿ ಅವರು ನಿರ್ದೇಶಿಸಿದ ‘ಸಂಸಾರದಲ್ಲಿ ಸರಿಗಮ’ ನಾಟಕದ 1391 ನೇ ಪ್ರದರ್ಶನ ಏರ್ಪಡಿಸಲಾಗಿತ್ತು. ಇದರಲ್ಲಿ ಉಮಾಶ್ರೀ ಸರಸ್ವತಿ ಪಾತ್ರ ನಿರ್ವಹಿಸಿದ್ದಾರೆ. ನಾಟಕ ಪ್ರದರ್ಶನ ಮುಗಿದ ಬಳಿಕ ಉಮಾಶ್ರೀ ಅವರನ್ನು ಸನ್ಮಾನಿಸಲಾಗಿದೆ.

ನಟರಾದ ವಿಜಯ್ ರಾಘವೇಂದ್ರ, ‘ನೆನಪಿರಲಿ’ ಪ್ರೇಮ್, ಸುಂದರರಾಜ್, ನಟಿಯರಾದ ಮೇಘನಾ ರಾಜ್, ಮಯೂರಿ ಮೊದಲಾದವರು ನಾಟಕ ವೀಕ್ಷಿಸಿದ್ದಾರೆ.

ಕಾಮೆಂಟ್‌ಗಳಿಲ್ಲ:

ಕಾಮೆಂಟ್‌‌ ಪೋಸ್ಟ್‌ ಮಾಡಿ