ಫೆಸ್ಬುಕ್ನಲ್ಲಿ ಫೇಕ್ ನ್ಯೂಸ್ ಹಾಕಿದರೆ ಭಾರಿ ದಂಡ!!
ಫೆಸ್ಬುಕ್, ವಾಟ್ಸ್‌ಆಪ್ ಸೇರಿದಂತೆ ಸಾಮಾಜಿಕ ಜಾಲತಾಣಗಳು ಪ್ರತಿಯೊಬ್ಬ ಜನಸಾಮಾನ್ಯನಿಗೂ ವೇದಿಕೆಯಾಗಿದ್ದೇನೋ ನಿಜ. ಆದರೆ, ಇದೇ ವೇದಿಕೆಯಿಂದ ಹಲವು ಸಮಸ್ಯೆಗಳು ಸಹ ಹೆಚ್ಚಾಗುತ್ತಿವೆ.!! ಹೌದು, ಆನ್ಲೈನ್ ಪ್ರಪಂಚದಲ್ಲಿ ಸುಳ್ಳು ಸುದ್ದಿಗಳನ್ನು ಪ್ರಕಟಿಸಿ ಜನರನ್ನು ದಾರಿತಪ್ಪಿಸುವ ಘಟನೆಗಳು ಇಂದು ಸಾಮಾಜಿಕ ಜಾಲತಾಣಗಳಲ್ಲಿ ಸಾಮಾನ್ಯವಾಗಿದೆ.!!
ಕಿಡಿಗೇಡಿಗಳು ಸುಳ್ಳು ಸುದ್ದಿಗಳನ್ನು ಪ್ರಕಟಿಸಿ ಜನರನ್ನು ದಾರಿತಪ್ಪಿಸಲು ಮತ್ತು ಬೇರೆಯವರನ್ನು ನಿಂದನೆ ಮಾಡಲು ಸಾಮಾಜಿಕ ಜಾಲತಾಣಗಳನ್ನು ಬಳಸಿಕೊಳ್ಳುತ್ತಿದ್ದಾರೆ. ಇದರಿಂದ ಸಮಾಜಕ್ಕೆ ತಪ್ಪು ಸಂದೇಶ ತಲುಪುತ್ತಿರುವುದು ಗೊತ್ತಿದ್ದರೂ ಸಹ ಸರ್ಕಾರ ಏನು ಮಾಡದ ಸ್ಥಿತಿಯಲ್ಲಿದೆ.ಕೆಲವೊಂದು ಚಿಕ್ಕ ಪ್ರಕರಣಗಳು ಮಾತ್ರ ಹೊರಬರುತ್ತವೆ.!!
ಇಲ್ಲಿ ಹೀಗಿದ್ದರೆ, ಫೆಸ್ಬುಕ್ ಸೇರಿದಂತೆ ಸಾಮಾಜಿಕ ಜಾಲತಾಣಗಳಲ್ಲಿ ಫೇಕ್ನ್ಯೂಸ್, ಪರನಿಂದನೆ ಪೋಸ್ಟ್ ಮಾಡಿದರೆ ಹೆಚ್ಚು ದಂಡ ವಿಧಿಸುವ ಬಗ್ಗೆ ಜರ್ಮನಿಯಲ್ಲಿ ಚರ್ಚೆಯಾಗುತ್ತಿದೆ.
ಈ ಬಗ್ಗೆ ಜರ್ಮನಿಯ ನ್ಯಾಯಾಂಗ ಇಲಾಖೆ ಸಚಿವ ಹೈಕೊ ಮಾಸ್ ಸುಳಿವು ನೀಡಿದ್ದು, ಇಂತಹ ಪೋಸ್ಟ್ ಮಾಡುವವರಿಗೆ ಭಾರಿ ಮೊತ್ತದ ದಂಡ ವಿಧಿಸುವ ಕರಡನ್ನು ಅವರು ಪ್ರಸ್ತಾಪಿಸಿದ್ದಾರೆ.!!
ಇತ್ತೀಚಿಗೆ ಜರ್ಮನ್ಗೆ ಬರುತ್ತಿರುವ ವಲಸಿಗರ ಸಂಖ್ಯೆ ಹೆಚ್ಚಾಗಿದ್ದು, ಇವರ ವಿರುದ್ದ ದೇಶದಲ್ಲಿ ಸುಳ್ಳುಸುದ್ದಿಗಳನ್ನು ಹರಡುತ್ತಿದ್ದರು. ಇದರಿಂದ ದೇಶದ ಸಾಮರಸ್ಯ ಹಾಳಾಗಿತ್ತು. ಹಾಗಾಗಿ, ಇದನ್ನು ತಡೆಯಲು ಜರ್ಮನ್ ಸರ್ಕಾರ ಈ ಕಾನೂನನ್ನು ಜಾರಿಗೆ ತರುತ್ತಿದೆ ಎನ್ನಲಾಗಿದೆ.
ಕಾಮೆಂಟ್‌ಗಳಿಲ್ಲ:
ಕಾಮೆಂಟ್ ಪೋಸ್ಟ್ ಮಾಡಿ