ಮಂಗಳವಾರ, ಮಾರ್ಚ್ 28, 2017

ರಸ್ತೆ ಸಾರಿಗೆಗೆ ಸಂಬಂಧಿಸಿದ ಯೋಜನೆಗಳು

ರಸ್ತೆ ಸಾರಿಗೆಗೆ ಸಂಬಂಧಿಸಿದ ಯೋಜನೆಗಳು

ನಾಗಪುರ ಯೋಜನೆವರ್ಷ: 1943ಭಾಗವಹಿಸಿದ್ದವರು:ಎಲ್ಲಾ ರಾಜ್ಯದ ಇಂಜಿನಿಯರ್‌ಗಳು ಸಭೆಯಲ್ಲಿ ಭಾಗವಹಿಸಿದ್ದರು.
ಉದ್ದೇಶ:ಹತ್ತು ವರ್ಷಗಳ ಅವಧಿಗೆ ರಸ್ತೆ ಅಭಿವೃದ್ಧಿ ಯೋಜನೆಯನ್ನ ಸಿದ್ಧಪಡಿಸುವುದು.
ಮುಖ್ಯಾಂಶಗಳು:

# ನಾಗಪುರ ಯೋಜನೆ ಪಕ್ಕ ರಸ್ತೆಗಳನ್ನು 88,000 ದಿಂದ 1,23,000ಮೈಲಿಗಳಿಗೆ ಮತ್ತು ಕಚ್ಚಾ ರಸ್ತೆಗಳನ್ನು 1,32,000 ದಿಂದ 2,08,000 ಮೈಲುಗಳಿಗೆ ಹೆಚ್ಚಿಸುವ ಗುರಿ ಹೊಂದಿತ್ತು.

# ನಾಗಪುರ ಯೋಜನೆ ರಸ್ತೆಗಳನ್ನು ನಾಲ್ಕು ವಿಧಗಳಾಗಿ ವಿಂಗಡಿಸಿತು ಅವುಗಳೆಂದರೆ,
1) ರಾಷ್ಟ್ರೀಯ ಹೆದ್ದಾರಿ,
2) ರಾಜ್ಯ ಹೆದ್ದಾರಿ,
3) ಜಿಲ್ಲಾ ರಸ್ತೆ,
4) ಗ್ರಾಮೀಣ ರಸ್ತೆ.

# ಈ ಯೋಜನೆಯನ್ನು 1948ರಲ್ಲಿ ನವೀಕರಿಸಲಾಯಿತು.

 

ಬಾಂಬೆ ಯೋಜನೆವರ್ಷ:1957ರಲ್ಲಿ
ಭಾಗವಹಿ ಸಿದ್ದವರು: ಕೇಂದ್ರ ಮತ್ತು ರಾಜ್ಯ ಸರ್ಕಾರಗಳ ಪ್ರಮುಖ ಇಂಜಿನಿಯರ್‌ಗಳು ಮುಂಬೈನಲ್ಲಿ ನಡೆದ ಸಭೆಯಲ್ಲಿ ಭಾಗವಹಿಸಿದ್ದರು.
ಗುರಿ: ಬಾಂಬೆ ಯೋಜನೆ ರಸ್ತೆ ಉದ್ದವನ್ನು 1961ರಲ್ಲಿ ಇದ್ದ 6.69ಲಕ್ಷ ಕಿ.ಮೀ.ಗಳಿಂದ 1981ರ ವೇಳೆಗೆ 10.51ಲಕ್ಷ ಕಿ.ಮೀ.ಗಳಿಗೆ ಹೆಚ್ಚಿಸುವ ಗುರಿ ಹೊಂದಿತ್ತು.

 

ಹೈದರಾಬಾದ್ ಯೋಜನೆವರ್ಷ:1959

ಭಾಗವಹಿಸಿದ್ದವರು:
ಹೈದರಾಬಾದ್‌ನಲ್ಲಿ ಐದು ರಾಜ್ಯಗಳ ಮುಖ್ಯ ಇಂಜಿನಿಯರ್‌ಗಳು ಮತ್ತು ಕೇಂದ್ರದ ಮುಖ್ಯ ಇಂಜಿನಿಯರ್‌ಗಳು ಭಾಗವಹಿಸಿದ್ದರು.

ಮುಖ್ಯಾಂಶಗಳು:

# ಸಭೆಯಲ್ಲಿ 20 ವರ್ಷಗಳ ಒಂದು ರಸ್ತೆ ಅಭಿವೃದ್ಧಿ ಯೋಜನೆಯನ್ನು ಸಿದ್ಧಪಡಿಸಿದರು.

# 1961 ರಿಂದ 81ರ ನಡುವೆ 3,79,000 ಮೈಲುಗಳಷ್ಟು ರಸ್ತೆ ಹೆಚ್ಚಳವಾಗಬೇಕೆಂದು ಉದ್ದೇಶಿಸಿತು.

 

ರೈಲು ಸಾರಿಗೆ

# ಭಾರತದಲ್ಲಿ ರೈಲುಮಾರ್ಗ ನಿರ್ಮಾಣ ಕಾರ್ಯವನ್ನು  ಗವರ್ನರ ಜನರಲ್ ಲಾರ್ಡ್ ಹಾರ್ಡಿಂಜ್ 1844 ರಲ್ಲಿ ಪ್ರಾರಂಭಿಸಿದರು.

# ಭಾರತದ ಮೊಟ್ಟ ಮೊದಲ ರೈಲು 1853ರ ಏಪ್ರಿಲ್ 16ರಂದು ಮುಂಬೈ ಬೋರಿ ಬಂದರ್‌ನಿಂದ ಠಾಣೆ ನಡುವೆ (ಮುಂಬೈ - ಠಾಣೆ) 34ಕಿ.ಮೀ. ಸಂಚಾರ ನಡೆಸಿತು. (ಪ್ರಯಾಣಿಕರನ್ನು ಹೊತ್ತು ಸಾಗಿರಲಿಲ್ಲ)

# ಭಾರತದಲ್ಲಿ ಮೊದಲ ರೈಲು ಸಾರಿಗೆ ಪ್ರಾರಂಭ ಮಾಡಿದವರು ಗವರ್ನರ್ ಜನರಲ್ 'ಡಾಲ್ ಹೌಸಿ'.

# 15 ಆಗಸ್ಟ್ 1854ರಂದು ಕೋಲ್ಕತ್ತಾದ ಹೌರ ನಿಲ್ದಾಣದಿಂದ ಹೂಗ್ಲಿಗೆ 24ಮೈಲು ಸಂಚರಿಸಿದ ಈಸ್ಟ್ ಇಂಡಿಯಾ ಕಂಪೆನಿಯ ರೈಲನ್ನು 'ಭಾರತದ ಮೊದಲ ಪ್ರಯಾಣಿಕರ ರೈಲು' ಎಂದು ಕರೆಯುತ್ತಾರೆ.

# ದಕ್ಷಿಣ ಭಾರತದಲ್ಲಿ ಮೊದಲ ಬಾರಿಗೆ 1856 ರಲ್ಲಿ ಮದ್ರಾಸ್‌ನಲ್ಲಿ ರೈಲು ಸಂಚಾರ ಆರಂಭವಾಯಿತು. ವೇಸರಪಾಂಡಿ ಯಿಂದ ಆರ್ಕಾಡ್ ನಡುವೆ 63ಮೈಲು ಸಂಚರಿಸಿತು.

# ಉತ್ತರ ಭಾರತದ ಮೊದಲ ರೈಲು 1859 ಮಾರ್ಚ್ 3 ರಂದು ಅಲಹಾಬಾದ್ - ಕಾನ್ಪುರದ ನಡುವೆ 119 ಮೈಲು ಸಂಚಾರ ಆರಂಭಿಸಿತು.

# 19 ಅಕ್ಟೋಬರ್ 1875 ರಂದು ಹಥ್ರಾಸ್ ರಸ್ತೆಯಿಂದ ಮಥುರಾ ದಂಡು ರೈಲು ನಿಲ್ದಾಣಕ್ಕೆ ಸಂಚರಿಸಿದ ರೈಲು ಪಶ್ಚಿಮ ಭಾರತದ ಮೊದಲ ರೈಲು ಎಂಬ ಹೆಗ್ಗಳಿಕೆಗೆ ಪಾತ್ರವಾಗಿದೆ.

 

ರೈಲು ಸಾರಿಗೆಗೆ ಸಂಬಂಧಿಸಿದ ಪ್ರಮುಖ ವಿಷಯಗಳು:

# ರೈಲು ಸಾರಿಗೆ ಉದ್ಯಮವು ಸಂಪೂರ್ಣವಾಗಿ ಕೇಂದ್ರ ಸರ್ಕಾರದಅಧೀನದಲ್ಲಿದೆ. 

# ಭಾರತದ ರೈಲು ಸಾರಿಗೆ ಪ್ರಪಂಚದಲ್ಲಿ4ನೇ ಸ್ಥಾನವನ್ನು ಪಡೆದಿದೆ.

# ಭಾರತೀಯ ರೈಲ್ವೆ ಇಲಾಖೆಯ 'ಮುಂಬೈನ ಛತ್ರಪತಿ ಶಿವಾಜಿ ಟರ್ಮಿನಸ್' ಹಾಗೂ 'ಮೌಂಟೇನ್ ರೈಲ್ವೇಸ್ ಆಫ್ ಇಂಡಿಯಾ’ಈ ಎರಡು ಸ್ಥಳಗಳು ಯುನೆಸ್ಕೊ ವಿಶ್ವ ಪಾರಂಪರಿಕ ತಾಣ ಪಟ್ಟಿಯಲ್ಲಿ ಸ್ಥಾನ ಪಡೆದಿವೆ.

# ದೇಶದ ವಿಭಿನ್ನ ಸ್ಥಳಗಳಲ್ಲಿರುವ ಮೂರು ಪರ್ವತ ಮಾರ್ಗಗಳು ಯುನೆಸ್ಕೊ ಮಾನ್ಯತೆ ಪಡೆದಿವೆ.

ಪಶ್ಚಿಮ ಬಂಗಾಳದ ದಾರ್ಜಿಲಿಂಗ್ ಹಿಮಾಲಯ ನ್ಯಾರೊಗೇಜ್ ರೈಲ್ವೆ (ಅಗೋನಿ ಪಾಯಿಂಟ್)ತಮಿಳುನಾಡಿನ ನೀಲಗಿರಿ ಪರ್ವತ ಶ್ರೇಣಿಯ ಮೀಟರ್ ಗೇಜ್ ರೈಲ್ವೆಹಿಮಾಚಲ ಪ್ರದೇಶದ ಕಾಲ್ಕಾ ಶಿಮ್ಲಾ ನ್ಯಾರೊ ಗೇಜ್ ರೈಲ್ವೆ.

 

ರೈಲ್ವೆ ಗೇಜುಗಳು :-

1. ಬ್ರಾಡ್ ಗೇಜ್:

1.676 ಮೀಟರ್ ಅಗಲ

2. ಮೀಟರ್ ಗೇಜ್: 

1 ಮೀಟರ್ ಅಗಲ

3. ನ್ಯಾರೋ ಗೇಜ್: 

0.762 ಮತ್ತು 0.610 ಮೀಟರ್ ಅಗಲ 

 

ರೈಲ್ವೆ ಉತ್ಪಾದನಾ ಘಟಕಗಳು

ರೈಲ್ವೆ ಬೋಗಿ ತಯಾರಿಕಾ ಕಾರ್ಖಾನೆ:

# ಪಂಜಾಬ್ ನ ಕಪುರ್ ತಾಲ್‌ನಲ್ಲಿ ರೈಲ್ವೆ ಬೋಗಿ ತಯಾರಿಕಾ ಕಾರ್ಖಾನೆ ಇದೆ. 1986 ರಲ್ಲಿ ಈ ಘಟಕವು ಸ್ಥಾಪನೆಯಾಯಿತು. ಇದು ಪ್ಯಾಸೆಂಜರ್ ಬೋಗಿಗಳನ್ನು ತಯಾರಿಸುತ್ತದೆ.

# ಉತ್ತರಪ್ರದೇಶದ ರಾಯ್ ಬರೇಲಿಯಲ್ಲಿ2012 ರಲ್ಲಿ ಸ್ಥಾಪನೆಯಾದ ರೈಲ್ವೆ ಬೋಗಿ ತಯಾರಿಕಾ ಘಟಕ ಇದೆ. ಇದು ಪ್ಯಾಸೆಂಜರ್ ಬೋಗಿಗಳನ್ನು ತಯಾರಿಸುವುದು.

 

ಇಂಟಿಗ್ರೇಲ್ ಕೋಚ್ ಫ್ಯಾಕ್ಟರಿ:

ತಮಿಳುನಾಡಿನ ಚೆನ್ನೈನಲ್ಲಿರುವ ಘಟಕವು ಪ್ಯಾಸೆಂಜರ್ ಬೋಗಿಗಳನ್ನು ತಯಾರಿಸುತ್ತದೆ. ಇದು 1952 ರಲ್ಲಿಸ್ಥಾಪನೆಯಾಯಿತು.

 

ಚಿತ್ತರಂಜನ್ ಲೋಕೋಮೋಟಿವ್ ವರ್ಕ್ಸ್:

#  1947 ರಲ್ಲಿ ಸ್ಥಾಪನೆಯಾದ ಈ ಘಟಕವು ಎಲೆಕ್ಟ್ರಿಕಲ್ ಲೋಕೋಮೋಟಿವ್ಸ್ ಗಳನ್ನು ತಯಾರಿಸುತ್ತದೆ.

# ಬೆಂಗಳೂರಿನ ಯಲಹಂಕದಲ್ಲಿ ರೈಲಿನ ಅಚ್ಚು ಮತ್ತು ಗಾಲಿಗಳು ತಯಾರಾಗುತ್ತವೆ.

 

ಡೀಸೆಲ್ ಲೋಕೋಮಾರ್ಡನೈಸೇಷನ್ ಕಾರ್ಖಾನೆ:

 1981 ರಲ್ಲಿ ಸ್ಥಾಪನೆಯಾದ ಈ ಘಟಕವು ಡೀಸೆಲ್ - ಎಲೆಕ್ಟ್ರಿಕ್ ಲೋಕೋಮೋಟಿವ್ಸ್ ತಯಾರಿಸುತ್ತದೆ. ಇದು ಪಂಜಾಬ್ ನ ಪಟಿಯಾಲಾದಲ್ಲಿದೆ.

ಕಾಮೆಂಟ್‌ಗಳಿಲ್ಲ:

ಕಾಮೆಂಟ್‌‌ ಪೋಸ್ಟ್‌ ಮಾಡಿ