ಸೋಮವಾರ, ಮಾರ್ಚ್ 27, 2017

ಕರ್ನಾಟಕದ ಜನಸಂಖ್ಯೆ

ಜನಸಂಖ್ಯೆ
ಕರ್ನಾಟಕದ ಜನಸಂಖ್ಯೆ

*ಒಂದು ನಿರ್ದಿಷ್ಟವಾದ ಭೂ ಪ್ರದೇಶದಲ್ಲಿ ವಾಸಿಸುವ ಜನರ ಒಟ್ಟು ಸಮೂಹವನ್ನು’ಜನಸಂಖ್ಯೆ’ ಎನ್ನುವರು.*

*# 2011 ರ ಜನಗಣತಿಯ ಪ್ರಕಾರ ಕರ್ನಾಟಕವು 6,11,30,704 ಜನಸಂಖ್ಯೆಯನ್ನು ಹೊಂದಿದೆ.*

*# ಇದರಲ್ಲಿ ಪುರುಷರ ಸಂಖ್ಯೆ - 3,10,57,742 ಆಗಿದೆ. ಮತ್ತು ಮಹಿಳೆಯರ ಸಂಖ್ಯೆ - 3,00,72,662 ಆಗಿದೆ.*

*# ಬೆಂಗಳೂರು ನಗರ ಜಿಲ್ಲೆಯು ರಾಜ್ಯದಲ್ಲಿಯೇ ಅತಿ ಹೆಚ್ಚು ಜನಸಂಖ್ಯೆಯನ್ನು ಹೊಂದಿದ ಜಿಲ್ಲೆಯಾಗಿದ್ದು, ಕೊಡಗು ಕಡೆಯ ಸ್ಥಾನದಲ್ಲಿದೆ.*

*ಜನಸಾಂದ್ರತೆ :-*

# 2011 ರ ಜನಗಣತಿಯ ಪ್ರಕಾರ ನಮ್ಮ ರಾಜ್ಯದ ಜನಸಾಂದ್ರತೆ 319 ಆಗಿದೆ.

# ಬೆಂಗಳೂರು ನಗರ ಜಿಲ್ಲೆಯು ಅಧಿಕ ಜನಸಾಂದ್ರತೆ ಹೊಂದಿದ್ದು ರಾಜ್ಯದಲ್ಲಿಯೇ ಮೊದಲ ಸ್ಥಾನದಲ್ಲಿದೆ.

# ಕೊಡಗು ಜಿಲ್ಲೆಯು(135) ಅತಿ ಕಡಿಮೆ ಜನಸಾಂದ್ರತೆಯನ್ನು ಹೊಂದಿದೆ.

*ಲಿಂಗಾನುಪಾತ :-*

# 2011 ರ ಜನಗಣತಿಯ ಪ್ರಕಾರ ರಾಜ್ಯದ ಲಿಂಗಾನುಪಾತ 973 ಆಗಿದೆ.

# ಉಡುಪಿ, ಕೊಡಗು, ದ.ಕನ್ನಡ, ಹಾಸನ ಜಿಲ್ಲೆಗಳಲ್ಲಿ ಪುರಷರಿಗಿಂತ ಹೆಚ್ಚು ಮಹಿಳೆಯರು ಕಂಡುಬರುತ್ತಾರೆ.

# ಉಡುಪಿ ಜಿಲ್ಲೆಯಲ್ಲಿ ಪ್ರತಿ ಸಾವಿರ ಪುರುಷರಿಗೆ 1093 ಸ್ತ್ರೀಯರಿದ್ದು ರಾಜ್ಯದಲ್ಲೇ ಅತಿ ಹೆಚ್ಚು ಸ್ತ್ರೀಯರ ಪ್ರಮಾಣವುಳ್ಳ ಜಿಲ್ಲೆಯಾಗಿದೆ.

# ಬೆಂಗಳೂರು ನಗರ ಜಿಲ್ಲೆಯು ಪ್ರತಿ ಸಾವಿರ ಪುರಷರಿಗೆ 908 ಮಹಿಳೆಯರನ್ನು ಹೊಂದಿದ್ದು ರಾಜ್ಯದ ಕಡೆಯ ಸ್ಥಾನದಲ್ಲಿದೆ.

*ಸಾಕ್ಷರತೆಯ ಪ್ರಮಾಣ :-*

# 2011 ರ ಜನಗಣತಿಯ ಪ್ರಕಾರ ರಾಜ್ಯದ ಸರಾಸರಿ ಸಾಕ್ಷರತೆಯ ಪ್ರಮಾಣ ಶೇ. 75.6 ಆಗಿದೆ.

# ದಕ್ಷಿಣ ಕನ್ನಡ ಜಿಲ್ಲೆಯು ಶೇ. 88.6% ರಷ್ಟು ಸಾಕ್ಷರತೆ ಹೊಂದಿದ್ದು ರಾಜ್ಯದಲ್ಲಿಯೇ ಮೊದಲ ಸ್ಥಾನದಲ್ಲಿದೆ.

# ನಂತರ ಬೆಂಗಳೂರು ನಗರ ಜಿಲ್ಲೆಯು (88.5%) ರಷ್ಟು ಹೊಂದಿದ್ದು ಎರಡನೆಯ ಸ್ಥಾನದಲ್ಲಿದೆ. ಮತ್ತು ಉಡುಪಿ ಮೂರನೆಯ ಸ್ಥಾನದಲ್ಲಿದೆ.

# ಯಾದಗಿರಿ ಜಿಲ್ಲೆಯು (52.4%) ಅತಿ ಕಡಿಮೆ ಸಾಕ್ಷರತಯುಳ್ಳ ಜಿಲ್ಲೆಯಾಗಿದೆ.

# ಪುರಷರ ಸಾಕ್ಷರತೆಯ ಪ್ರಮಾಣವು ಶೇ. 82.9% ರಷ್ಟಿದ್ದು, ಮಹಿಳೆಯರ ಸಾಕ್ಷರತೆಯ ಪ್ರಮಾಣವು ಶೇ. 68.2% ರಷ್ಟಿರುತ್ತದೆ.

ಕಾಮೆಂಟ್‌ಗಳಿಲ್ಲ:

ಕಾಮೆಂಟ್‌‌ ಪೋಸ್ಟ್‌ ಮಾಡಿ