ಮಂಗಳವಾರ, ಮಾರ್ಚ್ 21, 2017

ಸಾಮಾನ್ಯ ವಿಜ್ಞಾನ

ಮಿಷನ್ ಕೆ.ಎ.ಎಸ್ -೨೦೧೭:
ಸಾಮಾನ್ಯ ವಿಜ್ಞಾನ:

ಜೀವಕೋಶ

♦ ಜೀವಕೋಶವು ಜೀವಿಯ ರಚನಾತ್ಮಕ ಹಾಗೂ ಕಾರ್ಯ ನಿರ್ವಾಹಕ ಘಟಕವಾಗಿರುತ್ತದೆ.

♦ ಜೀವಕೋಶದ ಮೂಲ ಘಟಕಕ್ಕೆ ಜೀವಕೋಶವೆಂದು ಹೆಸರಿಸಿದವರು 'ರಾಬರ್ಟ್ ಹುಕ್'

♦ ಜೀವಕೋಶದಲ್ಲಿ ಮೂರು ಪ್ರಮುಖ ಭಾಗಗಳು ಇವೆ, ಅವುಗಳೆಂದರೆ :

ಕೋಶಪೊರೆ
ಕೋಶದ್ರವ್ಯ
ಕೋಶಬೀಜ

♦ ಕೋಶಪೊರೆ :  ಜೀವಕೋಶವನ್ನು ರಕ್ಷಿಸಿ ಕೋಶದೊಳಗೆ ಹೋಗುವ ಮತ್ತು ಬರುವ ವಸ್ತುಗಳ ಚಲನೆಯನ್ನು ನಿಯಂತ್ರಿಸುವುದೇ ಕೋಶಪೊರೆ. ಕೋಶಪೊರೆ ಅತ್ಯಂತ ಸೂಕ್ಷ್ಮವಾದ ಪೊರೆಯಾಗಿದ್ದು ಜೀವಕೋಶವನ್ನು ಕೋಟೆಯಂತೆ ಆವರಿಸುತ್ತದೆ ಹಾಗೆಯೇ ಜೀವಕೋಶಕ್ಕೆ ನಿರ್ದಿಷ್ಟ ಆಕಾರ ನೀಡುತ್ತದೆ.

♦ ಕೋಶದ್ರವ್ಯ : ಇದು ಕೋಶಪೊರೆ ಮತ್ತು ಕೋಶಬೀಜದ ನಡುವೆ ಇರುವ ದ್ರವವಾಗಿದೆ.

♦ ಕೋಶಕೇಂದ್ರ (ಕೋಶಬೀಜ) : ಇದು ಜೀವಕೋಶದ ಮಧ್ಯೆ ಇರುವಂತಹ ಕಾಯ. ಇದು ನಾಲ್ಕು ಮುಖ್ಯ ಭಾಗಗಳನ್ನು ಹೊಂದಿದ್ದು 'ವರ್ಣಜಾಲ' ಎಂಬ ದಾರದಂತಹ ರಚನೆ ಪ್ರಮುಖವಾದುದು. ಇದು ಕೋಶ ವಿಭಜನೆಯ ಸಮಯದಲ್ಲಿ ಸಣ್ಣ ತಂತುಗಳಾಗಿ ಮಾರ್ಪಡುತ್ತದೆ. ಕೋಶ ಬೀಜವು ಕಿರುಕೋಶಬೀಜಗಳನ್ನು ಸಹ ಒಳಗೊಂಡಿರುತ್ತದೆ. ಕೋಶಕೇಂದ್ರ ದ್ರವ್ಯದಲ್ಲಿ ಕಾಣುವ ದಾರದ ಎಳೆಗಳಂತಹ ರಚನೆಗಳನ್ನು 'ಕ್ರೊಮ್ಯಾಟಿನ್' ಎಂದು ಕರೆಯುತ್ತಾರೆ.

♦ ನ್ಯೂಕ್ಲಿಯರ್ ಪೊರೆ : ಕೋಶಕೇಂದ್ರವನ್ನು ಆವರಿಸಿರುವ ಪೊರೆಯಾಗಿದೆ. ಇದರಲ್ಲಿ ಸಣ್ಣ ಸಣ್ಣ ರಂಧ್ರಗಳಿದ್ದು ಅವುಗಳ ಮೂಲಕ ಕೋಶಕೇಂದ್ರದ ಒಳಗೆ ಹಾಗೂ ಹೊರಗೆ ರಾಸಾಯನಿಕ ವಸ್ತುಗಳ ಸಾಗಾಣಿಕೆಯನ್ನು ನಿಯಂತ್ರಿಸುತ್ತದೆ.

♦ ಕಿರುಕೋಶ ಬೀಜ : ಕಿರುಕೋಶ ಬೀಜವು ರೈಬೋಸ್ ನ್ಯೂಕ್ಲಿಕ್ ಆಮ್ಲ ಮತ್ತು ಸಸಾರಜನಕದಿಂದ ಆಗಿರುತ್ತದೆ.

ಜೀವಕೋಶದ ವಿವಿಧ ಕಣದಂಗಗಳು ಮತ್ತು ಅವುಗಳ ಕ್ರಿಯೆಗಳು :

♦ ಮೈಟೋಕಾಂಡ್ರಿಯಾ (ಶಕ್ತಿ ಉತ್ಪಾದನಾ ಕೇಂದ್ರ) : ಮೈಟೋಕಾಂಡ್ರಿಯಾ ಕಣದಂಗಗಳನ್ನು ವಿಜ್ಞಾನಿ 'ಕೊಲ್ಲಿಕರ್' ಕಂಡುಹಿಡಿದರು. ಇದು ಕೋಶದ ಉಸಿರಾಟ ಕೇಂದ್ರವಾಗಿದೆ. ಇಲ್ಲಿ ಶಕ್ತಿ ಬಿಡುಗಡೆಯಾಗುವುದರಿಂದ ಇದನ್ನು ಜೀವ ಕೋಶದ ಶಕ್ತಿ ಕೇಂದ್ರ ಎನ್ನುವರು.

♦ ರೈಬೋಸೋಮ (ಪ್ರೋಟೀನ್ ಕಾರ್ಖಾನೆ) :1955ರಲ್ಲಿ 'ಫ್ಯಾರಡೆ' ರೈಬೋಸೋಮ್ ಕಣದಂಗಗಳನ್ನು ಕಂಡುಹಿಡಿದರು. ಇದು ಸಸಾರಜನಕ ತಯಾರಿಸುವುದರೊಂದಿಗೆ ರೈಬೋಸೋಮುಗಳು ಪ್ರೋಟೀನ್ ಉತ್ಪಾದನೆಯಲ್ಲಿ ಸಹಾಯ ಮಾಡುತ್ತದೆ.

♦ ಗಾಲ್ಗಿ ಸಂಕೀರ್ಣ : ಇದರ ಮುಖ್ಯ ಕಾರ್ಯ ಪ್ರೋಟೀನುಗಳನ್ನು ಸಂಗ್ರಹಿಸಿ ಜೀವಕೋಶಕ್ಕೆ ಬೇಕಾದ ಕಿಣ್ವಗಳನ್ನು ಉತ್ಪಾದಿಸುತ್ತದೆ. ಲೈಸೋಸೋಮ್ ಗಳನ್ನು ಉತ್ಪತ್ತಿ ಮಾಡಲು ಇದು ನೆರವಾಗುತ್ತದೆ.

♦ ಕೋಶರಸಾಂತರ ಜಾಲ :  ಇದು ಕೋಶಪೊರೆಯಿಂದ ಕೋಶ ಬೀಜದವರೆಗೆ ಹರಡಿರುವ ನಳಿಕೆಗಳ ಜಾಲವಾಗಿದೆ.

ಜೀವಕೋಶದ ವಿವಿಧ ಕಣದಂಗಗಳು ಮತ್ತು ಅವುಗಳ ಕ್ರಿಯೆಗಳು :

♦ ಸೆಂಟ್ರಿಯೋಲ್ : ಕೋಶಕೇಂದ್ರದ ಸಮೀಪದಲ್ಲಿ ಇರುವ ಕಣದಂಗವಾಗಿದ್ದು ಕೋಶ ವಿಭಜನೆಯ ಸಂದರ್ಭದಲ್ಲಿ ಕದಿರಿನ ಎಳೆಗಳನ್ನು ಉತ್ಪತ್ತಿ ಮಾಡುತ್ತದೆ.

♦ ವರ್ಣಜಾಲ (ಕ್ರೋಮ್ಯಾಟಿನ್) :ಅನುವಂಶಿಕ ಲಕ್ಷಣಗಳನ್ನು ಪೀಳಿಗೆಯಿಂದ ಪೀಳಿಗೆಗೆ ವರ್ಗಾಯಿಸುತ್ತದೆ. ಇದು ಡಿ.ಎನ್.ಎ ಮತ್ತು ಪ್ರೋಟೀನ್ ಗಳಿಂದ ಮಾಡಲ್ಪಟ್ಟಿವೆ.

♦ ಲೈಸೋಜೋಮ್ : ಅನುಪಯುಕ್ತ ವಸ್ತು ಮತ್ತು ಮುದಿ ಕೋಶಗಳ ನಾಶಕ್ಕೆ ಕಾರಣವಾಗುತ್ತದೆ. ಆದ್ದರಿಂದ ಇದನ್ನು 'ಆತ್ಮಹತ್ಯಾ ಸಂಚಿ' ಎಂದು ಕರೆಯುತ್ತಾರೆ. ಲೈಸೋಸೋಮ್ ಕಣದಂಗಗಳನ್ನು ಕಂಡುಹಿಡಿದ ವಿಜ್ಞಾನಿ ಕ್ರಿಶ್ಚಿಯನ್-ಡಿ-ಡು.

♦ ಕಿರುಕೋಶಬೀಜ ಕೇಂದ್ರ : ಇದು ದೇಹದಲ್ಲಿ ಸಸಾರಜನಕ ತಯಾರಿಸಲು ಬೇಕಾದ ವಸ್ತುಗಳನ್ನು ಸಜ್ಜುಗೊಳಿಸುತ್ತದೆ.

♦ ಸಮರೂಪಿ ವರ್ಣತಂತುಗಳು : ಕೋಶಗಳಲ್ಲಿ ಜೋಡಿಯಾಗಿರುವ ವರ್ಣತಂತುಗಳಿಗೆ ಸಮರೂಪಿ ವರ್ಣತಂತುಗಳು ಎನ್ನುವರು. ಇವುಗಳಲ್ಲಿ ಒಂದು ವರ್ಣತಂತುವು ಎರಡು ಸಮಾನಾಂತರ ಎಳೆಗಳಿಂದ ಕೂಡಿರುತ್ತದೆ. ಇವುಗಳನ್ನು ಬಂಧಿಸುವ ಬಿಂದುವನ್ನು 'ಸೆಂಟ್ರಿಯೋಮಿಯರ್' ಎನ್ನುವರು.

♦ ಕ್ಲೋರೋಪ್ಲಾಸ್ಪ್ (ಹರಿತ್ತು) : ಸಸ್ಯಕೋಶಗಳಲ್ಲಿ ಕಂಡುಬರುವ ಹಸಿರಾದ ಮತ್ತು ದ್ಯುತಿಸಂಶ್ಲೇಷಣೆ ಕ್ರಿಯೆ ನಡೆಯುವ ಕೇಂದ್ರ ಮತ್ತು ಸೌರಶಕ್ತಿಯನ್ನು ರಾಸಾಯನಿಕ ಶಕ್ತಿಯನ್ನಾಗಿ ಪರಿವರ್ತಿಸುವುದು.

♦ ಎಂಡೋಪ್ಲಾಸ್ಮಿಕ್ ರೆಟಿಕ್ಯೂಲಮ್ ಕೋಶಕ್ಕೆ ಆಂತರಿಕವಾಗಿ ಆಧಾರ ನೀಡುವುದು ಮತ್ತು ಪ್ರೋಟಿನನ್ನು ಸಾಗಿಸುತ್ತದೆ.

ಜೀವಕೋಶದ ಆಧಾರದ ಮೇಲೆ ಜೀವಿಗಳ ವಿಂಗಡನೆ :

♦ ಏಕಕೋಶ ಜೀವಿಗಳು : ಇವು ಒಂದೇ ಜೀವಕೋಶವನ್ನು ಹೊಂದಿದ್ದು ಆ ಜೀವಕೋಶವು ಎಲ್ಲ ಕ್ರಿಯೆಗಳನ್ನು ಕೈಗೊಳ್ಳುತ್ತದೆ.

♦ ಬಹುಕೋಶೀಯ ಜೀವಿಗಳು : ಇವು ಒಂದಕ್ಕಿಂತ ಹೆಚ್ಚು ಜೀವಕೋಶಗಳನ್ನು ಹೊಂದಿದ್ದು, ವಿಶಿಷ್ಟ ಅಂಗಾಂಶ, ಅಂಗ ಮತ್ತು ಅಂಗವ್ಯೂಹ ಹೊಂದಿದ ಜೀವಿಗಳನ್ನು ಬಹುಕೋಶಿಯ ಜೀವಿಗಳು ಎಂದು ಕರೆಯುತ್ತಾರೆ.

ಕೋಶ ವಿಭಜನೆ :

ಒಂದು ಜೀವಕೋಶ ಪ್ರೌಢಾವಸ್ಥೆ ತಲುಪಿದಾಗ ವಿಭಜನೆ ಹೊಂದಿ ಎರಡು ಮರಿಕೋಶಗಳಾಗುವ ಕ್ರಿಯೆಗೆ ಕೋಶ ವಿಭಜನೆ ಎನ್ನುವರು. ಏಕಕೋಶ ಜೀವಿಗಳಲ್ಲಿ ಈ ವಿಭಜನೆ ಆ ಜೀವಿಗಳ ಸಂಖ್ಯೆಯನ್ನು ಹೆಚ್ಚಿಸುತ್ತದೆ, ಆದರೆ ಬಹುಕೋಶ ಜೀವಿಗಳಲ್ಲಿ ಬೆಳವಣಿಗೆ, ಸವೆದ ಭಾಗಗಳ ದುರಸ್ತಿ, ಪ್ರಜನನ ಕ್ರಿಯೆಗಳು ನಡೆಯುತ್ತದೆ. ಕೋಶ ವಿಭಜನೆಯಲ್ಲಿ ಎರಡು ವಿಧಗಳಿವೆ. ಅವು

1. ಮೈಟೋಸಿಸ್

2. ಮಿಯಾಸಿಸ್

1. ಮೈಟೋಸಿಸ್ : ಇದು ಮೇಲ್ವರ್ಗದ ಸಸ್ಯ ಹಾಗೂ ಪ್ರಾಣಿಗಳ ವರ್ಧನ ಕೋಶಗಳಲ್ಲಿ ಸಾಮಾನ್ಯವಾಗಿರುತ್ತದೆ. ಪ್ರೌಢಕೋಶವು ಎರಡು ಮರಿಕೋಶಗಳಾಗಿ ವಿಭಜಿಸುತ್ತದೆ. ಈ ವಿಭಜಿತ ಕೋಶಗಳಲ್ಲೂ ಪ್ರೌಢಕೋಶದಲ್ಲಿದ್ದಷ್ಟೆ ವರ್ಣರೇಖೆಗಳು ಇರುತ್ತವೆ.

2. ಮಿಯಾಸಿಸ್ : ವರ್ಣರೇಖೆಗಳನ್ನು ದ್ವಿಗುಣಿತ ಸ್ಥಿತಿಯಿಂದ ಏಕಸ್ಥಿತಿಗೆ ಇಳಿಸುವ ಕೋಶ ವಿಭಜನೆಯಲ್ಲಿ ಮೊದಲು ಸಂಖ್ಯಾಕ್ಷೀಣ ವಿಭಜನೆಯಾಗಿ ನಂತರ ಸಮಭಾಜಕ ವಿಭಜನೆಯಾಗುತ್ತದೆ.

ಕಾಮೆಂಟ್‌ಗಳಿಲ್ಲ:

ಕಾಮೆಂಟ್‌‌ ಪೋಸ್ಟ್‌ ಮಾಡಿ